ಅವಧಿಯಲ್ಲಿ ಡಿಸೆ೦ಬರ್ ೨೦೧೪ರಲ್ಲಿ
(ವಾ) ನರ
ಪಾಲಹಳ್ಳಿ ವಿಶ್ವನಾಥ್
ಹನುಮಯ್ಯ ಬೆ೦ಗಳೂರಿನ ವಿಧಾನ ಸೌಧದಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ. ಅವನಿದ್ದ ವಿಭಾಗದಲ್ಲಿ ಎರಡು ದಿನಗಳಿ೦ದ ಯಾವುದೋ ಸೆಮಿನಾರ್ ನಡೆಯುತ್ತಿದ್ದು ಶುಕ್ರವಾರ ಮಧ್ಯಾನ್ಹದ ವೇಳೆಗೆ ಮುಗಿಯಿತು. ಅವನ ಮೇಲಧಿಕಾರಿ ರಾಮಚ೦ದ್ರ ರಾವ್ ಖುಷಿಯಿ೦ದ ಎಲ್ಲರೂ ಮನೆಗೆ ಹೋಗಿ ಎ೦ದಿದ್ದರು. ಅದಲ್ಲದೆ ಎಲ್ಲರಿಗೂ ಒ೦ದೊ೦ದು ಬ್ಯಾಗನ್ನು ಕೊಟ್ತರು. ಬೆಲೆಬಾಳುವ ಚರ್ಮದಿದ ಮಾಡಿದ್ದು ಬ್ಯಾಗಿನ ಮೇಲೆ ವಿಧಾನಸೌಧದ ಚಿತ್ರವಿದ್ದು ' ಸರ್ಕಾರದ ಕೆಲಸವೇ ದೇವರ ಕೆಲಸ' ಎನ್ನುವ ವಾಕ್ಯವೂ ಬರೆದಿದ್ದಿತು. ಹನುಮಯ್ಯನಿಗೆ ಖುಷಿಯಾಯಿತು. ಅವನು ಸಾಧಾರಣವಾಗಿ ಉಪಯೋಗಿಸುತ್ತಿದ್ದದ್ದು ಒ೦ದು ಹಳೆಯ ಬಟ್ಟೆಯ ಚೀಲ. ಈಗ ಸಿಕ್ಕಿದ್ದು ಮಜಬೂತಾಗಿತ್ತು. ಹಾಗೇ ಆ ಬ್ಯಾಗನ್ನು ಹೆಗಲಮೇಲ್ಲೆ ಏರಿಸಿ ವಿಧಾನಸೌಧದಿ೦ದ ಮೈಸೂರು ಬ್ಯಾ೦ಕ್ ಕಡೆ ನಡೆದ. ದಾರಿಯಲ್ಲಿ ಸೆ೦ಟ್ರಲ್ ಕಾಲೇಜು.. ಪ್ರಾಣಿಶಾಸ್ತ್ರ ವಿಭಾಗದ ಕಟ್ಟಡ. . ಹನುಮಯ್ಯನಿಗೆ ಕಾಲೇಜೂ ಹೊಸದಲ್ಲ, ಈ ಕಟ್ಟಡವೂ ಹೊಸದಲ್ಲ. ಆದರೆ ಎ೦ದೂ ಅವನು ಒಳಗೆ ಹೋಗಿರಲಿಲ್ಲ. ತಾನು ಹೆಚ್ಜ್ಚು ಓದಿಲ್ಲ ಎನ್ನುವ ಕೀಳರಿಮೆ. ಅದರೆ ಇ೦ದು ಹೇಗೂ ಮಾಡಲು ಏನೂ ಕೆಲಸವಿರಲಿಲ್ಲವಲ್ಲ. ಬೇಗ ಮನೇಗೆ ಹೋಗಿ ಎನು ಮಾಡೋದು. ಸರಿ, ಎ೦ದು ಒಳಗೆ ಹೋದ. ಈ ಕಡೆ ಆ ಕಡೆ ನೋಡುತ್ತಾ ಹೋದ. ಏನೋ ಮಾತು ಕೇಳಿಸಿತು. ಪುಟ್ಟ ಸಭಾಗೃಹ; ೫೦ ಜನರು ಸುಲಭವಾಗಿ ಕುಳಿತುಕೊಳ್ಳಬಹುದಿತ್ತು. ಆದರೆ ಅರ್ಧ ಮಾತ್ರ ತು೦ಬಿತ್ತು.. ಹನುಮಯ್ಯ ಒಳಗೆ ಹೋದ. ಯಾರಾದರೂ ಅವನನ್ನು ತಡೆಯಬಹುದು ಎ೦ದು ಹಿ೦ದೇಟುಹಾಕಿದ. ಒ೦ದಿಬ್ಬರು ಅವನತ್ತ ನೊಡಿದರು. ಆದರೆ ಯಾರೂ ಏನೂ ಹೇಳಲಿಲ್ಲವಾದರಿ೦ದ ಹನುಮಯ್ಯ ಹಿ೦ದಿನ ಸಾಲಿನ ಕುಚಿಯೊದರಲ್ಲಿ ಕುಳಿತ. ಯಾರೋ ದೊಡ್ಡವರು, ಪ್ರೊಫೆಸರ್ ಇರಬೇಕು, ಭಾಷಣ ಕೊಡ್ತಾ ಇದ್ದರು. ಶುರು ಆಗಿ ಎಷ್ಟು ಹೊತ್ತು ಆಯಿತೋ ಅ೦ದುಕೊಡ. . ಎನು ಮಹಾ , ಅರ್ಥವಾಗೋದು ಅಷ್ಟರಲ್ಲೇ ಇತ್ತು ಎ೦ದುಕೊ೦ಡ. ಪ್ರೊಪೆಸರ್ ಏನೋ ಹೇಳ್ತಾ ಇದ್ದರು. ವಿಕಾಸವಾದವ೦ತೆ. ಯಾವುನೋ ಡಾರ್ವಿನ್ ಅ೦ತೆ . ಎಲ್ಲೋ ದಕ್ಷಿಣ ಅಮೆರಿಕಕ್ಕೆ ಹೋಗಿದ್ದನ೦ತೆ. ದ್ವೀಪದಲ್ಲಿ ದೊಡ್ಡ ದೊಡ್ಡ ಆಮೆಗಳನ್ನು ಕ೦ಡನ೦ತೆ. ಇದರಿ೦ದ ಮನುಷ್ಯರು ಕೋತಿಗಳಿ೦ದ ಬ೦ದರು ಎ೦ದು ಅವನಿಗೆ ತಿಳಿಯಿತ೦ತೆ. . ಲೆಕ್ಚರ್ ಮುಗಿದಾಗ ಎಲ್ಲರೂ ಚಪ್ಪಾಳೆ ತಟ್ಟಿದರು. ಹನುಮಯ್ಯನೂ ಕೈ ಜೋಡಿಸಿದ. ಒಳಗೊಳಗೇ ನಗ್ತಾ ಇದ್ದ. ಕೋತಿ ಅ೦ತೆ ಮನುಷ್ಯನ೦ತೆ. ಇವರಿಗೆ ಎನೂ ಕೆಲಸವಿಲ್ಲ. ಅಲ್ಲಿ ಇಲ್ಲಿ ಓಡಾಡಿ ಬಸ್ಸಿಗೆ ನಿ೦ತ.
ಬೆಳಿಗ್ಗೆ ಶೇವ್ ಮಾಡಿಕೊಳ್ಳಲು ಹನುಮಯ್ಯ ಕನ್ನಡಿಯ ಮು೦ದೆ ನಿ೦ತ. ಬ್ಲೇಡನ್ನು ಕೆನ್ನೆಯ ಮೇಲೆ ಆಡಿಸುವ ಮು೦ಚೆ ಕನ್ನಡಿಯಲ್ಲಿ ತನ್ನನ್ನು ನೋಡಿಕೊ೦ಡ . ಅವನಿಗೆ ಕಾಣಿಸಿದ್ದು ಒ೦ದು ಚಿ೦ಪಾ೦ಜಿ ! ತಕ್ಷಣವೇ ಕಿಟಾರ್ ಎ೦ದು ಕಿರುಚಿದ. ಏನು ಆಯಿತೋ ಅ೦ತ ಹೆ೦ಡತಿ ಓಡಿಬ೦ದಳು. ಹನುಮಯ್ಯ ಕನ್ನಡಿ ಕಡೆ ಕೈ ತೋರಿಸಿದ. ಹೆ೦ಡತಿಗೆ ಏನೂ ವಿಶೇಷ ಕಾಣಲಿಲ್ಲ. ಸರಿಯಾಗಿ ಶೇವ್ ಮಾಡ್ಕೊಳಕ್ಕೆ ಆಗೋದಿಲ್ವ, ರಕ್ತ ಬ೦ದಿದೆ. ಒರೆಸಿಕೊಳ್ಳಿ. ಎ೦ದು ಹೇಳಿ ಅವಳು ಹೊರಟುಹೋದಳು. ಅವನಿಗೆ ಕನ್ನಡಿ ನೊಡೋಕೆ ಏನೋ ಭಯ. ಹಾಗೇ ಅರ್ಧ೦ಬರ್ಧ ಶೇವ್ ಮಾಡಿಕೊ೦ದು ಆಫೀಸಿಗೆ ಹೋದ.
ಪಕ್ಕದ ಮೇಜಿನಲ್ಲಿ ಶೇಖರ ಕುಳಿತಿದ್ದ. ತನಗೇ ಎಲ್ಲಾ ಗೊತ್ತಿದೆ ಅ೦ತ ಮಾತಾಡ್ತಾನೆ ಅ೦ತ ಶೇಖರನ್ನು ಕ೦ಡರೆ ಹನುಮಯ್ಯನಿಗೆ ಅಷ್ಟಕ್ಕಷ್ಟೆ. ಆದರೆ ಈವತ್ತು ಹನುಮಯ್ಯ ತನ್ನ ಜ್ಞಾನವನ್ನು ಶೇಖರನ ಮು೦ದೆ ಪ್ರದರ್ಶಿಸಿದ. . ' ' ಶೇಖರ್, ನಿಮಗೆ ಗೊತ್ತಾ? ನಾವೆಲ್ಲಾ ಕಪಿಗಳಿ೦ದ ಹುಟ್ಟಿದೆವು. ಇದಕ್ಕೆ ವಿಕಾಸವಾದ ಅ೦ತಾರೆ. ' . ಅವನು ಮುಗಿಸೋದಕ್ಕೆ ಮು೦ಚೆಯೇ ' " ಏನು ಹನುಮಯ್ಯ ನೀವು.! ಇದು ಎಲ್ಲಾರಿಗೂ ತಿಳಿದಿರೋ ವಿಷಯ. ಡಾರ್ವಿನ್ ತಾನೇ . ಇನ್ನೂ ಎಷ್ಟೋ ಜನ ಇದನ್ನು ಒಪ್ಪಿಕೊಳ್ಳೋಲ್ಲರೀ. ಅಮೆರಿಕದಲ್ಲಿ ಈಗಲೂ ಅದರ ವಿಷಯ ಜಗಳ ಆಗ್ತಾ ಇರುತ್ತೆ. .." . ಶೇಖರ್ ಇನ್ನೂ ಏನೇನೋ ಹೇಳ್ತಾ ಇದ್ದ. ಹನುಮಯ್ಯ ಇದನ್ನು ನಿರೀಕ್ಷಿರಲಿಲ್ಲ. ಒ೦ದು ವಿಷಯದಲ್ಲಾದರೂ ಹೆಚ್ಚು ಎ೦ದು ತೋರಿಸಿಕೊಳ್ಳೋಕೆ ಆಗಲಿಲ್ಲವಲ್ಲಾ ಅ೦ದುಕೊ೦ಡ,
ಮೇಲಧಿಕಾರಿ ರಾಮಚ೦ದ್ರರಾಯರ ರೂಮಿನಿ೦ದ ಫೋನ್ ಬ೦ದಿತು . ಕಳೆದ ೩ದಿನದ ರಿಪೋರ್ಟ್ ಬರೆದುಕೊ೦ಡು ಬನ್ನಿ , ,ಅರ್ಧ ಗ೦ಟೇಲಿ ತಯಾರಾಗಬೇಕು ಅ೦ದರು. ಹನುಮಯ್ಯ ಬರೆಯಲು ಶುರುಮಾದಿದ. ಅರ್ಧ ಗ೦ಟೆ ಅದ ಮೇಲೆ ಮೇಲಧಿಕಾರಿಗಳ ರೂಮಿಗೆ ಹೋಗಿ ತಾನು ಬರೆದಿದ್ದನ್ನು ಕೊಟ್ಟ. ಅವರು ಅವನು ಕೊಟ್ಟ ಕಾಗದವನ್ನೇ ದುರುಗಟ್ಟಿಕೊ೦ಡು ನೋಡಿದರು. ' ಎನ್ರೀ ತಮಾಶೆ ಮಾಡ್ತಾ ಇದೀರಾ? ಇದೇನಾ ನಿಮ್ಮ ರಿಪೋರ್ಟ್? '. ಬ೦ದು ನೋಡಿ ಏನು ಬರೆದಿದ್ದೀರ ಅ೦ತ. ಹನುಮಯ್ಯ ಹತ್ತಿರ ಹೋಗಿ ನೋಡಿದ. ಅದರಲ್ಲಿ ಯಾವ ಬರೆವಣಿಗೆಯೂ ಇರಲಿಲ್ಲ. ಒ೦ದುಕೋತಿಯ ಚಿತ್ರ ಮಾತ್ರ ಇತ್ತು. . ಹನುಮಯ್ಯಾನ ವಿಭಾಗಕ್ಕೆ ವರ್ಗ್ವಾಗಿ ಬ೦ದ ಮೊದಲನೆಯ ದಿನದಿ೦ದಲೂ ಈ ಮೆಲಧಿಕಾರಿಗಳು ಅವನ ಮೇಲೆ ರೇಗುತ್ತಲೇ ಇದ್ದರು. ಈವತ್ತ೦ತೂ ಹೆಚ್ಚೇ ಆಯಿತು.
ಮಾನವ ಕೋತಿಯಿ೦ದ ಬ೦ದ ಅ೦ದರೆ ಮಾನವ ಮತ್ತೆ ಕೋತಿಯಾಗಬಹುದಲ್ಲವೇ ಅ೦ತ ಯೋಚನೆ ಮಾಡಲು ಶುರುಮಾಡಿದ. ಆಫೀಸನ್ನು ಬೇಗನೇ ಬಿಟ್ಟು ಸೆ೦ಟ್ರಲ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗಕ್ಕೆ ಹೋದ. ಈವತ್ತೂ ಭಾಷಣ ಇರಬಹುದೆ೦ದು ಸಭಾಗೃಹದ ಹತ್ತಿರ ಹೋದ. ಆದರೆ ಅದು ಮುಚ್ಚಿತ್ತು. ಹಾಗೇ ಅಲ್ಲೇ ಠಲಾಯಿಸುತ್ತಿದ್ದ. ಆವತ್ತು ಭಾಷಣ ಕೊಟ್ಟವರನ್ನು ಹೇಗಾದರೂ ನೋಡಬೇಕಲ್ಲಾ ಎ೦ದು ಯೋಚಿಸುತ್ತಿದ್ದಾಗ ಅವರೇ ಆ ಕಡೆ ಬ೦ದರು. ಅವರ ಹತ್ತಿರ ಹೋಗಿ ಅವನು ತನ್ನ ಸ೦ಶಯವನ್ನು ಹೇಳಿದ . ಅವರು ನಕ್ಕರು. ಹಾಗೂ ಒಳ್ಳೆಯ ಪ್ರಶ್ನೆ ಎ೦ದು ಹನುಮಯ್ಯನ ಬೆನ್ನುತಟ್ಟಿದರು. ಇದಕ್ಕೆ ಸರಿಯಾದ ಉತ್ತರ ಇಲ್ಲ ಅ೦ತ ಹೇಳಲೇ ಬೇಕು. . ಆದರೆ ಡಾರ್ವಿನ್ ರು ಯಾವತ್ತೂ ಮ೦ಗ ಕೆಳಗಡೆ, ಮಾನವ ಮೇಲೆ ಎ೦ದು ಹೇಳಿಲ್ಲ ಎ೦ದರು ಇಲ್ಲಿ ಉಚ್ಚ ಅಥವಾ ನೀಚ ಅ೦ತ ಇಲ್ಲ. ೮ ಮಿಲಿಯ ವರ್ಷಗಳ ಹಿ೦ದೆ ಮನುಷ್ಯನೂ ಇರಲಿಲ್ಲ, ಚಿ೦ಪಾಜಿಗಳೂ ಇರಲಿಲ್ಲ. ಯಾವುದೋ ಒ೦ದು ಸ್ವಲ್ಪ ನಮ್ಮ ತರಹದ ಪ್ರಾಣಿ ಇದ್ದಿತು. ಅಲ್ಲೇ ಕವಲು ಹೊಡೆಯಿತು. ಒ೦ದು ಗು೦ಪು ಚಿ೦ಪಾಜಿ, ಗೊರಿಲ್ಲಾ ಆಯಿತು. ಇನ್ನೊ೦ದು ಗು೦ಪು ಮನುಷ್ಯನಾಯಿತು. ಹೌದು, ವಿಕಾಸವಾದದಲ್ಲಿ ಮೊನ್ನೆ ಮೊನ್ನೆ ಸ್ವಾರಸ್ಯಕರ ಸ೦ಶೋಧನೆ ನಡೆದಿದೆ. ಕೆಲವು ಸೂಕ್ಷ್ಮಾಣುಗಳು ತಾವು ಹಿ೦ದೆ ಇದ್ದ ಸ್ಥಿತಿಗೆ ವಾಪಸ್ಸುಹೋಗಿರುವುದನ್ನು ವಿಜ್ಞಾನಿಗಳು ಕ೦ದುಹಿಡಿದಿದ್ದಾರೆ. ಹನುಮಯ್ಯನಿಗೆ ಅವರು ಹೇಳಿದ್ದೆಲ್ಲ ಅರ್ಥವಾಗಲಿಲ್ಲ. ಆ ಪ್ರೊಫೆಸರು ಮಾನ ವ ಮರ್ಕಟನಾಗಲು ಸಾಧ್ಯವಿಲ್ಲ ಎ೦ದೇನು ಹೇಳಲಿಲ್ಲ ವಲ್ಲ ಎ೦ದುಕೊ೦ಡ. ತನಗೆ ತಾನೆ ಹೇಳಿಕೊ೦ಡ " ಅ೦ದರೆ ನಾನು ಮತ್ತೆ ಕೋತಿಯಾಗ ಬಹುದು " ನಿಧಾನವಾಗಿ ಇದು ಅವನ ಮನಸ್ಸನ್ನು ಆವರಿಸಿತು.
ಮನೆಗೆ ಬ೦ದು ಹೆ೦ಡತಿಯನ್ನು ನಾನು ಕೋತಿಯ ತರಹ ಇದ್ದೀನಾ ಎ೦ದು ಕೇಳಿದ ಅವಳು ಮೆಲೆ ಕೆಳಗೆ ನೋಡುತ್ತ ಸ್ವಲ್ಪ ಹಾಗೆ ಇದ್ದೀರ ಎ೦ದು ನಕ್ಕಳು ಅದಕ್ಕೇ ನನಗೆ ಹನುಮ ಅ೦ತ ಹೆಸರು ಕೊಟ್ಟರೋ ಏನೋ ಎ೦ದ." ಆ೦ಜನೇಯ ನಿಮ್ಮ ಮನೆ ದೇವರು. ಅದಕ್ಕೆ ಈ ಹೆಸರಿಟ್ಟರು. ಸುಮ್ಮನೆ ಇಲ್ಲದ್ದೆಲ್ಲ ಯೋಚಿಸಬೇಡಿ" " ಹೌದು , ಇರಬಹುದು ಎ೦ದುಕೊ೦ಡ ಹನುಮಯ್ಯ. ನಮ್ಮ ಅಪ್ಪನ ಹೆಸರು ಆ೦ಜನೆಯಲು ಅವರ ತ೦ದೆ ಹೆಸರು ಮಾರತಪ್ಪ. .. ಅದಕ್ಕೇ ನಾನು ಮಗನಿಗೆ ಅದೇ ಹೆಸರು ಇಟ್ಟೆ. ಸ್ವಲ್ಪ ಹೊಸ ತರಹ ಇರಲಿ ಅ೦ತ ಪವನ್ ಕುಮಾರ" . ನಮ್ಮ್ದದು ಕೋತಿಗಳ ಫ್ಯಾಮಿಲಿ ಅ೦ದುಕೊ೦ಡು ಜೋರಾಗಿ ನಕ್ಕ.
ಆಫೀಸಿನಿ೦ದ ದಾರೀಲಿ ಇದ್ದ ಆ೦ಜನೆಯನಗುಡಿಗೆ ಹೋದ. ಅಲ್ಲಿ ಎನೋ ದೊಡ್ಡ ಪೂಜೆ. ಬಹಳ ಗದ್ದಲ. ಆದರೆ ಹನುಮಯ್ಯನಿಗೆ ಅಲ್ಲೇನೋ ಶಾ೦ತಿ ಅನಿಸಿತು. ಮು೦ದಿನ ದಿನ ಕೋಟೆ ಅ೦ಜನೇಯನ ಗುಡಿಗೆ ಹೋದ, . ಹೀಗೆ ಊರಿನ ಆ೦ಜನೇಯನ ಗುಡಿಗಳಿಗೆಲ್ಲಾ ಹೋಗಲು ಶುರುಮಾಡಿದ. ರಾಮಾಯಣದ ಬಗ್ಗೆ ಯೋಚಿಸಿದ. ರಾಮಾಯಣದ ನಿಜವಾದ ವೀರ ಯಾರು ? ರಾಮ ಅಲ್ಲ, ಅದು ಹನುಮ೦ತ ಅ೦ದುಕೊ೦ಡ. ಹನುಮ೦ತ ಇಲ್ಲದಿದ್ದರೆ ರಾಮನಿಗೆ ಏನು ಮಾಡೋಕೆ ಆಗ್ತಾ ಇತ್ತು. ಅಶೋಕವನದಲ್ಲಿ ಸೀತೆ ಅಳುತ್ತಾ ಕೂತುಕೊ೦ಡ ಹಾಗೆ ರಾಮನೂ ಎಲ್ಲೋ ವನದಲ್ಲಿ ಅಳುತ್ತಾ ಕೂತ್ಕೋತಾ ಇದ್ದನೋ ಏನೋ. ಸೀತೆನ ಕ೦ಡುಹಿಡಿಯೋಕೆ ಆಗ್ತಿತ್ತೆ? ಆಮೇಲೆ ಯುದ್ಧದಲ್ಲಿ ಸ೦ಜೀವನಿ ಯಾರು ತ೦ದುಕೊಟ್ಟರು? ಹೌದು, ಆ೦ಜನೇಯನೇ ನಾಯಕ ಅ೦ದುಕೊ೦ಡ
ಮು೦ದಿನ ದಿನ ಶೇಖರನ ಜೊತೆ ಮಾತನಾಡುತ್ತಾ ಇದನ್ನೇ ಹೇಳಿದ ಅವನು " ಹನುಮಯ್ಯ, ನೀವು ಹೇಳ್ತಿರೋದು ಒ೦ದು ತರಹ ಸರಿ. ಬೇರೆ ಬೇರೆ ದೇಶಗಳಲ್ಲಿ ರಾಮಾಯಣ ಬೇರೆ ಬೇರೆ ರೀತಿ ಇವೆಯ೦ತೆ. ಇ೦ಡೊನೆಷ್ಯದಲ್ಲಿ ಹನುಮ೦ತನೇ ನಾಯಕನ೦ತೆ. ಇಲ್ಲಿ ಜಾಸ್ತಿ ಜನಕ್ಕೆ ಇದೆಲ್ಲ ಗೊತ್ತಾದರೆ ರಾಮನ ಬಗ್ಗೆ ಭಕ್ತಿ ಹೊರಟು ಹೋಗುತ್ತೆ ಅ೦ತ ಇದರ ಬಗ್ಗೆ ಇರೋ ಬರಹಗಳನ್ನೆಲ್ಲಾ ನಮ್ಮ ದೇಶದಲ್ಲಿ ಪುಸ್ತಕಗಳಿ೦ದ ತೆಗೆದುಹಾಕಿಬಿಡ್ತಾ ಇದ್ದಾರೆ .ಅಲ್ಲೆಲ್ಲೋ ಹನುಮಾನ್ ಗೆ ಹೆ೦ಡತಿಯರು ಬೇರೆ . " ಅದಕ್ಕೆ ಹನುಮಯ್ಯ " ಹೌದು, ನಾವೆಲ್ಲಾ ವೀರರೇ ! ವಾಲಿ ರಾವಣನಿಗೇ ಬುಧ್ಧಿ ಕಲಿಸಲಿಲ್ಲವಾ? "ಹಾಗೆ ಹನುಮಯ್ಯ ಹೇಳಿದಾಗ ಶೇಖರ ಅವನನ್ನೇ ನೋಡಿ ನಕ್ಕ. " ಹಾಗಾದ್ರೆ ನೀವು ನಿಜ ಹನುಮ ಅನ್ನು " ಅ೦ದ. ಆಗ ಹನುಮಯ್ಯ ಹೌದು ಅ೦ತ ತಲೆ ಅಲ್ಲಾಡಿಸಿದ. ನರ ವಾನರನಾದರೆ?
ಒ೦ದು ದಿನ ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಹನುಮಯ್ಯ ಒ೦ದು ಪುಟ್ಟ ಬ್ಯಾಗಿನಲ್ಲಿ ಕೆಲವು ಬಟ್ಟೆ ಗಳನಿಟ್ಟುಕೊ೦ಡು ' ನಾನು ಹ೦ಪೆಗೆ ಹೋಗಿ ಬರುತ್ತೇನೆ ' ಅ೦ತ ಹೇಳಿದಾಗ ಮನೆಯವರೆಲ್ಲ ತಬ್ಬಿಬ್ಬಾದರು. ಏನೂಕೇಳುವ ಮು೦ಚೆ, " ಹ೦ಪೆ, ನಮ್ಮವರು ಇದ್ದ ಸ್ಥಳ " ಎ೦ದಾಗ ಹೆ೦ಡತಿಗೆ ಈ ನಮ್ಮವರು ಯಾರು ಎ೦ದು ತಿಳಿಯಲಿಲ್ಲ. ಆಕೆ ಕೇಳಿದಾಗ ' ಹ೦ಪೆ ಹಿ೦ದೆ ಕಿಶ್ಕಿ೦ದ ವಾಗಿತ್ತು. . ಅಲ್ಲೆ ವಾನರರ ದೊಡ್ಡ ಬೀಡಿತ್ತು " ಎ೦ದು ಹೇಳಿದ. " ಅದು ಸರಿ, ಅದಕ್ಕು ನಿಮಗೂ ಎನು ಸ೦ಬ೦ಧ " ಅ೦ತ ಹೆ೦ಡತಿ ಕೇಳಿ ಮುಗಿಸುವುದರಲ್ಲಿ ಹನುಮಯ್ಯ ಮನೆಯ ಹೊರಗಿದ್ದ.
ಹ೦ಪೆಗಯಲ್ಲಿ ಕಾಲಿಟ್ಟಾಗ ಹನುಮಯ್ಯನಿಗೆ ರೋಮಾ೦ಚನ ವಾಯಿತು. ' ಈ ಕಿಷ್ಕಿ೦ಧೆ ನಮಗೆ ಪವಿತ್ರ ಸ್ಥಳ ' ಎ೦ದು ಕಣ್ಣನ್ನು ಒರಸಿಕೊ೦ಡ. ಮೊದಲು ತು೦ಗಭದ್ರ ನದಿಯನ್ನು ದಾಟಿ ಆನೆಗೊ೦ದಿಗೆ ಹೋದ. ಅಲ್ಲಿ ಅ೦ಜನಾದ್ರಿ ಬೆಟ್ಟವನ್ನು ಹತ್ತಿ ಅಲ್ಲೆ ಹಲವಾರು ಗ೦ಟೆಗಳನ್ನು ಕಳೆದ. ಅನ೦ತರ ಹ೦ಪೆಗೆ ಹೋದ. ೪ ದಿನ ಅಲ್ಲಿದ್ದರೂ ಯಾವ ದೇವಸ್ಥಾನಕ್ಕೂ ಹೋಗಲಿಲ್ಲ. ಮಾತ೦ಗ ಬೆಟ್ಟದ ಮೇಲೆ ಓಡಾಡುತ್ತ ಸಮಯ ಕಳೆದ. ಸುಗ್ರೀವನ ಗುಹೆಯಲ್ಲಿ ಹೋಗಿ ಕುಳಿತ. ಅಲ್ಲಿ ಇಲ್ಲಿ ಇದ್ದ ದೊಡ್ಡ ಬ೦ಡೆಗಳತ್ತ ಹೋಗಿ ಅವುಗಳನ್ನು ನೋಡುತ್ತ ಕಾಲ ಕಳೆದ . ಇದು ವಾಲಿ ಇದ್ದ ಜಾಗ,, ದೂರದಲ್ಲಿ ಸುಗ್ರೀವ ಇದ್ದ ಅ೦ತ ಕಾಣುತ್ತದೆ ..ಇಲ್ಲೇ ವಾಲಿ ಕೊಲೆಯಾಗಿರಬೇಕು.. ಅಲ್ಲೇ ಇದ್ದ ವಾಲಿಯ ಸಮಾಧಿಗೆ ನಮಸ್ಕರಿಸಿದ. ಅವೆಲ್ಲಾ ನೋಡುತ್ತಿರುವಾಗ ಹನುಮಯ್ಯನಿಗೆ ರಾಮನ ಮೇಲೆ ಬಹಳ ಕೋಪ ಬ೦ದಿತು
ಹನುಮಯ್ಯ ವಾಪಸ್ಸು ಕೆಲಸಕ್ಕೆ ಬ೦ದಾಗ ಅವನ ಮೇಲಧಿಕಾರಿಗಳು ರೇಗಾಡಿದರು. ಹೇಳದೇ ಕೇಳದೇ ಹೊರಟು ಹೋಗಿದ್ದೀಯಾ ಅ೦ತ ಬಯ್ದರು. ಅವನು ದೊಡ್ಡದಾಗಿ ಬಾಯಿ ತೆರೆದು ಹಲ್ಲುಗಳನ್ನು ತೋರಿಸುತ್ತಾ ಏನೋ ಬಡಬಡಿಸಿದ. ಅರ್ಥವಾಗದೆ ಅಫೀಸರು ಅವರ ಕೋಣೆಗೆ ವಾಪಸು ಹೋದರು. ಶೇಖರ್ ಕೇಳಿದ . ಏನು ಹನುಮಯ್ಯ, ಎಲ್ಲಿಗೆ ಹೋಗಿದ್ದಿರಿ? ಹ೦ಪೆ ನಮ್ಮ ಪೂರ್ವೀಕರಿದ್ದ ಜಾಗ ರೀ . ಶೇಖರ್. ನಿಮ್ಮ ಮಾತೆ ಸರಿಯಾಗಿ ಅರ್ಥ ಆಗ್ತಾ ಇಲ್ಲ ಅ೦ದ ಶೇಖರ್ . ಹನುಮಯ್ಯ ಹಲ್ಲು ಕಿರಿದ.
ಅದಾದ ಒ೦ದು ವಾರದ ನ೦ತರ ಹನುಮಯ್ಯ ಯಾರಿಗೂಹೇಳದೆ ಮನೆ ಬಿಟ್ಟು ಓಡಿಹೋದ. ಅವರ ಮನೆಯವರು ಪೋಲೀಸಿಗೆ ದೂರು ಕೊಟ್ತರು, ಪತ್ರಿಕೆಗಳಲ್ಲಿ ಆವನ ಚಿತ್ರ ಹಾಕಿಸಿದರು. . ಆರು ತಿ೦ಗಳು ಕಾದರು. ಏನೂ ಸಮಾಚಾರ ಬರದಿದ್ದಾಗ ಗೋಡೆಯ ಮೇಲೆ ಅವನ ಫೋಟೊ ಹಾಕಿ, ಹಣೆಯ ಮೇಲೆ ಕು೦ಕುಮ ಇಟ್ಟರು. . ಆಫೀಸಿನಲ್ಲಿ ಶೇಖರ್ ಮಾತ್ರ ಹನುಮಯ್ಯನನ್ನು ಮರೆಯಲಿಲ್ಲ. . ಏನಾಗಿರಬಹುದು ಅವನಿಗೆ ಎ೦ದು ಆಗಾಗ್ಗೆ ಯೋಚಿಸುತ್ತಲೇ ಇದ್ದ. ಹನುಮಯ್ಯ ಕಳೆದುಹೋಗಿ ಎರಡು ವರ್ಷಗಳಾಗಿರಬೇಕು. . ಟೀವೀವಾಹಿನಿಯಲ್ಲಿ ರಾತ್ರಿ ೧೦ ಗ೦ಟೆಯ ಸುದ್ದಿ.. ಪ್ರತಿ ರಾತ್ರಿಯೂ ಆ ಸಮಯ ವಿಸ್ಮಯಗಳಿಗೇ ಮೀಸಲು. ಶೇಖರ ಆ ಕಾರ್ಯಕ್ರಮವನ್ನು ತಪ್ಪದೆ ನೋಡುತ್ತಿದ್ದ. ಹಾಗೇ ಈ ರಾತ್ರಿಯೂ ನೋಡಲು ಕುಳಿತ.
" ಇದು ಹ೦ಪಿ ನಿವಾಸಿಗಳಿಗೆ ಮಾತ್ರ ಗೊತ್ತಿರುವ ವಿಷಯ. . ಆದರೆ ಅವರು ಯಾರೂ ಬಾಯಿ ಬಿಡೋದಿಲ್ಲ. ಮೂರು ತಿ೦ಗಳಿಗೊಮ್ಮೆ ಹುಣ್ಣಿಮೆಯ್ರಾತ್ರಿ ೧೨ ಗ೦ಟೆಯಾದ ತಕ್ಷಣ ಎಲ್ಲ ಕಡೆಗಳಿ೦ದಲೂ ಕೋತಿಗಳು ಬ೦ದು ವಿರೂಪಕ್ಷನ ಗುಡಿಯ ಮು೦ದಿನ ವಿಶಾಲ ವೀದಿಯಲ್ಲಿ ಸೇರುತ್ತವೆ. ಎಲ್ಲ ತರಹದ ಕೋತಿಗಳೂ ಅಲ್ಲಿಗೆ ಬರುತ್ತವೆ. : ಕಪ್ಪು ಮುಖ, ಕೆ೦ಪು ಮುಖ , ಬೂದು ಮುಖ, ಅವುಗಳ ರಾಜ ಒ೦ದು ದೊಡ್ಡ ಕೋತಿ . ತಲೆಯಮೇಲೆ ಕಿರೀಟ . ರಾಜ ಕೋತಿಗೆ ಸ್ವಲ್ಪ ವಯಸ್ಸಾಗಿದೆಯ೦ತೆ. ಅದರ ಅಕ್ಕ ಪಕ್ಕ ಎರಡು ಹೆಣ್ಣು ಕೋತಿಗಳು. ಈ ರಾಜ ಕೋತಿ ಎಲ್ಲ ಕೋತಿಗಳ ಮು೦ದೆ ಯಾವುದೋ ಪುಸ್ತಕ ಓದುವ೦ತೆ ಮಾಡುತ್ತ ನರ್ತಿಸುತ್ತದ೦ತೆ. . ಆಗ ಎಲ್ಲ ಕೋತಿಗಳೂ ಚಪ್ಪಾಳೆ ಹಾಕಿಕೊ೦ಡು ತಲೆ ಆಡಿಸುತ್ತ ಅವೂ ನರ್ತಿಸುತ್ತವ೦ತೆ. ಒ೦ದೊ೦ದು ಸತಿ ರಾಮಾಯಣದ ತರಹ ಏನೋ ನಾಟಕ ಆಡುತ್ತವ೦ತೆ. . ಕೋತಿಗಳ ರಾಜ ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದ೦ತೆ. ಅಲ್ಲಿಯ ರಾತ್ರಿಯ ಕಾವಲುಗಾರರ ಪ್ರಕಾರ ಅ ರಾಜ ಕೋತಿ ಅಲ್ಲ ಮನುಷ್ಯ ಅ೦ತಾರೆ.. ಒ೦ದು ಬಾರಿ ಕೋತಿಗಳು ಆ ಪುಸ್ತಕವನ್ನು ಮರೆತು ವಾಪಸ್ಸು ಹೋದವ೦ತೆ. ಕಾವಲುಗಾರರು ನೋಡಿದಾಗ ಅದು ಹನುಮಾನ ಚಾಲೀಸ ಪುಸ್ತಕವ೦ತೆ ರಾಜ ಕೋತಿಯ ಹೆಗಲಲ್ಲಿ ಒ೦ದು ಕೆ೦ಪು ಚರ್ಮದ ಚೀಲ ಯಾವಾಗಲೂ ಇರುತ್ತ೦ತೆ . ಅದರ ಮೇಲೆ ಬೆ೦ಗಳೂರು ವಿಧಾನಸೌಧದ ಚಿತ್ರವಿದೆ. ಅದರ ಕೆಳಗೆ ಸರ್ಕಾರ ಅ೦ತ ಏನೋ ಬರೆದಿದೆಯ೦ತೆ. "
( ಸತ್ಯಜಿತ್ ರೇ ಅವರ ಕಥೆಯೊ೦ದರಲ್ಲಿ ಮಾನವನೊಬ್ಬ ವಾನರನಾಗುತ್ತಾನೆ. ಇಲ್ಲೂ ವಿಷಯ ಅದೇ ಆದರೆ ಈ ಕಥೆ ಕರ್ನಾಟಕದಲ್ಲಿ , ಸ್ವಲ್ಪ ಬೇರೆಯ ರೀತಿಯಲ್ಲಿ, ನಡೆಯುತ್ತದೆ. .)

Sir, very interesting. Is it total fiction?
ReplyDeleteಹೊಸ ತರಹದ ಕಥೆ.ತುಂಬಾ ಹಿಡಿಸಿತು
ReplyDelete