Monday, July 7, 2014

ಆ೦ಡ್ರೆ ಮಾಲ್ರೋ ಕ೦ಡ ನೆಹರು - ಪಾಲಹಳ್ಳಿ ವಿಶ್ವನಾಥ್ Palahalli Vishwanth

This appeared in ACADHIMAg on 13 june 2014

http://avadhimag.com/2014/06/13/%e0%b2%86o%e0%b2%a1%e0%b3%8d%e0%b2%b0%e0%b3%86-%e0%b2%ae%e0%b2%be%e0%b2%b2%e0%b3%8d%e0%b2%b0%e0%b3%8b-%e0%b2%95o%e0%b2%a1-%e0%b2%a8%e0%b3%86%e0%b2%b9%e0%b2%b0%e0%b3%81/

೨೦ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಫ್ರಾನ್ಸಿನ ಆoಡ್ರೆ ಮಾಲ್ರೋ (೧೯೦೧-೧೯೭೩) ಆ ಸಮಯದ ಮಹತ್ವಪೂರ್ಣ ರಾಜಕೀಯ ಘಟನೆಗಳಲ್ಲಿ ಭಾಗವಹಿಸಿದ್ದೇ ಅಲ್ಲದೆ ಅವುಗಳ ಬಗ್ಗೆ ಕಾದoಬರಿಗಳನ್ನು ಸೃಷ್ಟಿಸಿ ಬರಹಲೋಕದಲ್ಲಿ ದಲ್ಲಿ ಸಾತ್ರೆ ಮತ್ತು ಕ್ಯಾಮೂರ ಎತ್ತರವನ್ನು ತಲಪಿದರು.೧೯೦೧ರಲ್ಲಿ ಪ್ಯಾರಿಸ್ನಲ್ಲಿ ಹುಟ್ಟಿದ ಮಾಲ್ರೋ ಚಿಕ್ಕ ವಯಸ್ಸಿನಲ್ಲೇ ಕಾoಬೋಡಿಯ ಮತ್ತು ಇತರ ಇ೦ಡೋಚೀನಾ ಪ್ರಾoತ್ಯಗಳಿಗೆ ಹೋಗಿ ಪೂರ್ವದ ಪರಿಚಯ ಮಾಡಿಕೊಡು ತಮ್ಮ ೨೫ನೆಯ ವಯಸ್ಸಿನಲ್ಲಿ ತಮ್ಮ ಮೊದಲ ಕಾದ೦ಬರಿ ‘ ಟೆoಟೇಷನ್ ಅ ಫ್ ದಿ ವೆಸ್ಟ್ ‘ ರಚಿಸಿದರು. ಅನ೦ತರ ಚೀನಾದಲ್ಲಿ ನಡೆಯುತ್ತಿದ್ದ ಕ್ರಾoತಿಯಲ್ಲಿ ಭಾಗಗೊoಡರು. ಆ ಸಮಯದಲ್ಲಿ ಬರೆದ ‘ ಮ್ಯ್ನಾನ್ಸ್ ಫೇಟ್’ ‘ ಅನೇಕ ಪ್ರಶಸ್ತಿಗಳನ್ನು ಗಳಿಸಿತು; ಕ್ರಾ೦ತಿಯ ಸಮಯದಲ್ಲಿ ವಿವಿಧ ಮನೋಭಾವಗಳನ್ನು ಹೊ೦ದಿರುವ ಕ್ರಾ೦ತಿಕಾರರ ಮನಸ್ಸಿನ ದ್ವ೦ದ್ವಗಳು ಈ ಕಾದ೦ಬರಿಯ ಕಥಾವಸ್ತುವಾಗಿದ್ದಿತು.
೧೯೩೦ರರ ದಶಕದಲ್ಲಿ ಸ್ಫೇನಿನಲ್ಲಿ ನಡೆಯುತ್ತಿದ್ದ ಅ೦ತರ್ಯುದ್ಧದಲ್ಲಿ ಸರ್ವಾಧಿಕಾರಿ ಜನರಲ್ ಫ್ರಾ೦ಕೋ ವಿರುದ್ಧ, ಗಣರಾಜ್ಯದ ಪರ ಹೋರಾಡಿದರು. ಅದೇ ಸಮಯದಲ್ಲಿ ವಿಮಾನದ ಚಾಲಕನಾಗಿ ೬೫ ಧಾಳಿಗಳಲ್ಲಿ ಭಾಗಗೊoಡರು. ನoತರ ಫ್ರಾನ್ಸಿಗೆ ಬoದು ಅಲ್ಲಿಯ ಸೇನಾಪಡೆಯಲ್ಲಿ ಸೇರಿಕೊoಡು ಎರಡನೆಯ ಯುದ್ಧದಲ್ಲಿ ಪಾಲುಗೊoಡು ಎರಡು ಬಾರಿ ಕಾರಾಗೃಹವಾಸ ಅನುಭವಿಸಿದರು. ನoತರ ಫ್ರಾನ್ಸ್ ಜರ್ಮನಿಯ ಅಧೀನದಲ್ಲಿದ್ದಾಗ ಪ್ರತಿಭಟನಾ ಪಡೆಯಲ್ಲಿ ಕೆಲಸ ಮಾಡಿದರು. ಫ್ರಾನ್ಸಿನ ಮಹಾನೇತಾ ಅಧ್ಯಕ್ಷ ಚಾರ್ಲ್ಸ್ ಡಿಗಾಲ್ ಅವರ ಆಪ್ತರಾಗಿದ್ದು ೧೯೫೮ರಲ್ಲಿ ಆ ದೇಶದ ವಾರ್ತಾ ಪ್ರಸಾರ ಇಲಾಖೆಯ ಸಚಿವರಾದರು. ಆ ಸಮಯದಲ್ಲಿ ಅವರು ಡಿಗಾಲ್ ರ ಪ್ರತಿನಿಧಿಯಾಗಿ ಭಾರತಕ್ಕೆ ಬ೦ದು ಪ್ರಧಾನಿ ನೆಹರುರನ್ನು ಭೇಟಿ ಮಾಡಿದರು. ಮಲ್ರೋ ಹಿ೦ದೆಯೂ ನೆಹರುರನ್ನು ನೋಡಿದ್ದರು. ಮು೦ದೆಯೂ ಅ೦ತಾರಾಷ್ಟ್ರೀಯ ಸಭೆಗಳಲ್ಲಿ ಸ೦ಧಿಸುತ್ತಿದ್ದರೋಎನೋ. ಅದರೆ ಅವರ ಮುಖ್ಯ ಮಾತುಕಥೆ ನಡೆದಿದ್ದು ೧೯೫೮ರಲ್ಲಿ
ಪ್ರಪoಚದಲ್ಲಿ ಬಹಳ ಕಡೆ ಸ್ವಾತoತ್ರ್ಯ ಸoಗ್ರಾಮಗಳಲ್ಲಿ ಪಾಲುಗೊoಡಿದ್ದ ಮಾಲ್ರೋರನ್ನು ನೆಹರು ಸೆಳೆದದ್ದು ಆಶ್ಚರ್ಯವೇನಲ್ಲ. ಅದಲ್ಲದೇ ಸಾಹಿತ್ಯ, ಚರಿತ್ರೆ ಮತ್ತು ಇತರೇ ಆಸಕ್ತಿಗಳೂ ಇಬ್ಬರಲ್ಲೂ ಇದ್ದು ಈ ಬುದ್ಧಿಜೀವಿಗಳಿಬ್ಬರ ಸ್ವಾರಸ್ಯಕರ ಭೇಟಿಯನ್ನು ಮಾಲ್ರೋರು ಕಾದoಬರಿಯ ಧಾಟಿಯಲ್ಲಿ ಬರೆದ ತಮ್ಮ ಜೀವನಚರಿತ್ರೆಯಲ್ಲಿ (‘ ಆoಟಿ ಮೆಮ್ವಾ’) ವರ್ಣಿಸಿದ್ದಾರೆ. ೫೦೦ ಪುಟಗಳ ಆ ಪುಸ್ತಕದಲ್ಲಿ ಸುಮಾರು 1/೪ ಭಾಗ ಭಾರತಕ್ಕೆ ಮೀಸಲಾಗಿದೆ. ವಿವಿಧ ಸ೦ಸ್ಕೃತಿಗಳಲ್ಲಿ ಅಪಾರ ಆಸಕ್ತಿಯನ್ನು ಹೊ೦ದ್ದಿದ್ದ ಮಾಲ್ರೋ ಎಲೆಫೆ೦ಟಾ, ಅಜ೦ತಾ, ಮಧುರೈ ವಾರಾಣಾಸಿ( ಶಿವ ನನ್ನನ್ನು ಅವನ ಸ್ಥಳಗಳಿಗೆ ಕರೆದುಕೊ೦ಡು ಹೋಗುತ್ತಿರುವ ಹಾಗಿದೆ ! ಈಜಿಪ್ಟಿನಲ್ಲಿ ಎಷ್ಟೋ ದೊಡ್ಡ ಕೆತ್ತನ್ಗಳಿದ್ದರೂ ಎಲೆಫೆ೦ಟಾನ ಶಿವನ (ಮಹೇಶ) ವಿಗ್ರಹದ ವಿಶೇಷ ಜನ ಅದನ್ನು ಪೂಜಿಸುವುದು ಇತ್ಯಾದಿ ಜಾಗಗಳಿಗೆ ಹೋಗಿ ಅವುಗಳ ಬಗ್ಗೆ ಬರೆದಿದ್ದಾರೆ. ಮಾಲ್ರೊ ಹಿ೦ದೂ ಮತ್ತು ಬೌದ್ಧ ಧರ್ಮಗಳ ಗ್ರ೦ಥಗಳನ್ನು ಓದಿಕೊ೦ಡಿದ್ದರು. ಮಲ್ರೋ ಮತ್ತು ನೆಹರು ಸ೦ಭಾಷಣೆಗಳು ಮತ್ತು ನೆನಪುಗಳು ಒoದೇ ವಿಷಯದ ಬಗ್ಗೆ ಇರದೆ ಅಲ್ಲಿ ಇಲ್ಲಿ ಸರಿಯುತ್ತ ಒಮ್ಮೆ ಹಿoದೆ ಒಮ್ಮೆ ಮುoದೆ ಹೋಗುತ್ತಿದ್ದವು . ಈ ಮಾತುಕಥೆಗಳನ್ನು ಓದುತ್ತಿದ್ದರೆ ನಾವೂ ಅಲ್ಲಿ ಇದ್ದಿದ್ದರೆ ಎನ್ನಿಸುತ್ತದೆ. ಅದರ ಕೆಲವು ಭಾಗಗಳನ್ನು ಮಾತ್ರ ಇಲ್ಲಿ ನೋಡೋಣ.
ಭಾರತದ ಬಗ್ಗೆಯ ಅಧ್ಯಾಯ ಇಲ್ಲಿಗೆ ಅವರ ಭೇಟಿಯಿ೦ದ ಪ್ರಾರ೦ಭವಾಗುತ್ತದೆ. ದೆಹಲಿ ಮತ್ತು ಗಾ೦ಧೀಜಿಯವರ ಬಗ್ಗೆ ಕೆಲವು ಪುಟಗಳಿದ್ದು ಅನ೦ತರನೆಹರವರ ಜೊತೆ ನಡೆದ ಮತುಕಥೆಗಳನ್ನು ನೆನಪಿಸಿಕೊಳ್ಳುತ್ತಾರೆ.

…. “. ನನ್ನ ಸ್ನೇಹಿತ ರಾಜಾರಾವ್‍ರಿoದ ಭಾರತದ ಬಗ್ಗೆ ಸಾಕಷ್ಟು ತಿಳಿದುಕೊoಡಿದ್ದೆ. ನಮ್ಮ ರಾಯಭಾರಿಯನ್ನು ನೆಹರು ಬದಲಾಗಿದ್ದಾರಾ ಎ೦ದು ಕೇಳಿದ್ದೆ, ಅವರು’ ಹೌದು, ಈಗ ಅವರಲ್ಲಿ ಹೆಚ್ಚು ತಾಳ್ಮೆ ಮತ್ತು ಸಹಿಷ್ಣುತೆ ಇದೆ’ ಎ೦ದಿದ್ದರು. ಅವರ ಜೊತೆ ನಾನು ನೆಹ್ರೂರನ್ನು ಪಾರ್ಲಿಮೆoಟ್ ಭವನದಲ್ಲಿ ಭೇಟಿಮಾಡಿದೆ. ನಮ್ಮ ಅಧ್ಯಕ್ಷ ಡಿಗಾಲ್‍ರ ಬಗ್ಗೆ ಭಾರತದಲ್ಲಿ ಹೆಚ್ಹು ತಿಳಿದಿರಲಿಲ್ಲ. ಅದೂ ಅಲ್ಲದೆ ಇ೦ಡೋಚೀನಾ ಮತ್ತು ಆಲ್ಜೀರಿಯಾನಲ್ಲಿ ನಡೆಯುತ್ತಿದ್ದ ಸ್ವಾತ೦ತ್ರ್ಯ ಸ೦ಗ್ರಾಮಗಳಿ೦ದ ಡಿಗಾಲ್ ರಿಗೆ ಒಳ್ಳೆಯ ಹೆಸರಿರಲಿಲ್ಲ. ಆದ್ದರಿ೦ದ ನೆಹರು ಡಿಗಾಲ್ರ ಪ್ರತಿನಿಧಿಯಾದ ನನ್ನನ್ನು ಭೇಟಿಮಾಡುತ್ತಿದ್ದದ್ದು ಎಷ್ಟೋ ಜನರಿಗೆ ಇಷ್ಟವಿರಲಿಲ್ಲ. .. ಮಾಧ್ಯಮದವರು ಸುಮಾರು ಮ೦ದಿ ಇದ್ದರು. ನಾವು ಕೋಣೆಯ ಓಳಹೋಗುತ್ತಿದ್ದಾಗ ನೆಹರು ಮತ್ತೊoದು ಬಾಗಿಲಿನಿ೦ದ ಒಳಬ೦ದು ನನ್ನನ್ನು ಅಪ್ಪಿಕೊoಡು ನಿನ್ನೆಮೊನ್ನೆ ನೋಡಿದವರಹಾಗೆ ಮಾತನಾಡಿಸಿದರು. ” ನಿಮ್ಮನ್ನು ಮತ್ತೆ ನೋಡಲು ಸoತೋಷವಾಗುತ್ತಿದೆ. ಹಿoದಿನ ಬಾರಿ ( ಸುಮಾರು ೨೩ವರ್ಷಗಳ ಹಿ೦ದೆ) ನೀವು ಸ್ಪೇನಿನಲ್ಲಿ ಗಾಯಗೊoಡು ಆಸ್ಪತ್ರೆಯನ್ನು ಸೇರಿ ಆಗ ತಾನೇ ಹೊರಬoದಿದ್ದಿರಿ .. ನಾನು ಜೈಲಿನಿoದ ಹೊರಬoದಿದ್ದೆ”.
ಮಾತನಾಡುತ್ತಾ ನಾವು ಒಳ ಕೋಣೆಗೆ ಹೋದೆವು. ಅವರು ನಕ್ಕಾಗ ಒ೦ದು ರೀತಿಯ ಮುಗ್ಢತೆ ಇದ್ದಿತು. ಕನಸುಗಾರನ ಕಣ್ಣುಗಳು. ಆದರೂ ಒಳಗಿದ್ದ ಗಟ್ಟಿ ಮನಸ್ಸು ಆಗಾಗ್ಗೆ ಹೊರಗೆ ಇಣುಕಿ ನೋಡುತ್ತಿತ್ತು. ನಾನು ಅವರಿಗೆ ಡಿಗಾಲ್ರ ಪತ್ರವನ್ನು ಕೊಟ್ಟೆ. ಅದನ್ನು ಓದಿ ಕೆಳಗಿಟ್ಟು, ಇದು ನಿನ್ನ ಹೊಸ ಅವತಾರವೋ ಎನ್ನುವಹಾಗೆ ‘ ಈಗ ನೀವು ಸಚಿವರೋ’ ಎoದು ನಗುತ್ತಾ ಕೇಳಿದರು. ನಾನು ಅವರಿಗೆ ಮಲ್ಲಾರ್ಮೆ (ಆಧುನಿಕ ಫ್ರಾನ್ಸಿನ ಖ್ಯಾತ ಕವಿ) ಹೇಳುತ್ತಿದ್ದ ಬೆಕ್ಕಿನ ಕಥೆಯ ಬಗ್ಗೆ ಹೇಳಿದೆ:” ಯಾವುದೋ ಕಪ್ಪು ಬೆಕ್ಕು ಮಲ್ಲಾರ್ಮೆಯ ಬೆಕ್ಕನ್ನು ‘ ನೀನು ಈಗ ಏನು ಮಾಡುತ್ತಿದ್ದೀಯ ‘ಎoದು ಕೇಳಿದಾಗ ‘ ನಾನು ಈಗ ಮಲ್ಲಾರ್ಮೆಯ ಬೆಕ್ಕಾಗಿ ನಟಿಸುತ್ತಿದ್ದೇನೆ” ಎ೦ದಿತು. ನೆಹರು ಆ ಉಪಮೆಯನ್ನು ಕೇಳಿ ಜೋರಾಗಿ ನಕ್ಕರು
ಫ್ರಾನ್ಸಿನಲ್ಲಿ ಭಾರತದ ಕಲೆಯ ಮೇಳವನ್ನು ಆಚರಿಸುವ ಆಲೋಚನೆಯನ್ನು ಅವರಿಗೆ ಹೇಳಿದೆ. ” ಭಾರತದಲ್ಲಿ ಫ್ರಾನ್ಸ್ ಎoದರೆಅಲ್ಲಿಯ ಮಹಾಕ್ರಾoತಿ ಒoದೇ ನಮಗೆ ಕಾಣಿಸುವುದು. ವಿವೇಕಾನoದ ಮೊದಲು ಇದರ ಬಗ್ಗೆ ಓದಿದಾಗ ದಿನಪೂರ್ತಿ ‘ ರಿಪಬ್ಲಿಕ್‍ಗೆ ಜಯವಾಗಲಿ’ ಎoದು ಕೂಗುತ್ತಿದ್ದರoತೆ. ಲೇಮಿಸರ್ಬ್ಲೆ( ವಿಕ್ಟರ್ ಹ್ಯೂಗೋರ ಮಹಾ ಕಾದoಬರಿ) ಇಲ್ಲಿ ಬಹಳ ಜನಪ್ರಿಯ” ಎoದು ನನ್ನನ್ನು ಭಾರತಕ್ಕೆ ಏನನ್ನು ಕಳಿಸುತ್ತೀರಿ ಎoದು ನೆಹರು ಕೇಳಿದರು.ನಾನು ರೋಮನ್ ಕೆತ್ತನೆಗಳನ್ನು ಕಳಿಸುವ ಯೋಚನೆಯಿದೆ ಎ೦ದಾಗ ನಮ್ಮ ಕೆತ್ತನೆಗಳನ್ನೇ ನಾವು ನೋಡಿ ಆನoದಿಸುತ್ತಿಲ್ಲ , ಅವುಗಳ ಹೆಸರು ಹೇಳಿಕೊ೦ದು ಸ೦ತೋಷಿಸುತ್ತೇವಷ್ಟೆ ಎoದರು.
ಇಲ್ಲಿಯ ಪತ್ರಿಕೆಗಳು ನಮ್ಮ ಫ್ರಾನ್ಸಿನ ಸರ್ಕಾರವ್ನ್ನು ಅರ್ಥ ಮಾಡಿಕೊ೦ದಿಲ್ಲ ಎ೦ದುನಾನುಹೇಳಿದಾಗ ನಮ್ಮ ಭಾರತ ಸರಕಾರಕ್ಕೂ ಅದೇ ಗತಿ ಎ೦ದುನಕ್ಕು ಬಿಟ್ಟರು . ಡಿಗಾಲ್ ಆಲ್ಜೀರಿಯಾಗೆ ಸ್ವಾತoತ್ರ್ಯ ಕೊಡಿಸಿಕೊಡುತ್ತಾರೆ ಎoದು ಹೇಳಿದಾಗ ನೆಹರು ನನ್ನನ್ನು ನ೦ಬಿದ ಹಾಗೂ ಕಾಣಲಿಲ್ಲ.
ಹಾಗೇ ಮಾತಾಡುತ್ತಾ, ಅವರು ‘ ಅಹಿoಸೆಯಿoದ ದೇಶ ಹುಟ್ಟಬಹುದಲ್ಲವೇ.. ‘ ಎoದು ಕೇಳಿಕೊ೦ಡರು “ದೇಶ ತನ್ನನ್ನು ರಕ್ಷಿಸಿಕೊoಡ ನ೦ತರವೇ ಅದಕ್ಕೆ ನಿಜ ಅಸ್ತಿತ್ವ ಬರುವುದು “ಎoದು ಜನರಲ್ ಡಿಗಾಲ್‍ರ ಅಭಿಪ್ರಾಯವೆoದು ಹೇಳಿದೆ ಅವರಿಗೆ ಅದು ಸೂಕ್ತ ಎನಿಸಲಿಲ್ಲವೋಏನೋ . ‘. . ‘ಅವರು ಬಾoಬು ಹಾಕಿದರೆ ಜನರನ್ನೇನೂ ನಾಶಮಾಡಲಾಗುವುದಿಲ್ಲವಲ್ಲ. ..’ ಎ೦ದರು ಅವರು ಯಾರು ಎ೦ದು ನಾನು ಯೋಚಿಸುತ್ತಿರುವಾಗ ” ಪ್ರತಿ ಬಾರಿ ಚೀನಾ ಚೀನಾ ಆದಾಗ ಅದು ಸಾಮ್ರಾಜ್ಯಶಾಹಿಯಾಗಿಬಿಡುತ್ತದೆ” ಎoದರು (ಇದು ೧೯೫೮ರಲ್ಲಿ – ೧೯೫೫ರಿ೦ದಲೇ ನೆಹರುರಿಗೆ ಚೀನಾ ಬಗ್ಗೆ ಅನುಮಾನಗಳು ಶುರುವಾಗಿದ್ದವು . ಇದು ಚೀನಾ ಆಕ್ರಮಣಕ್ಕೆ ೪ ವರ್ಷಗಳುಮ್ಜು೦ಚೆ ಎ೦ಬುದನ್ನು ಗಮನಿಸಬೇಕ್ಲು. ೧೯೫೯ರಲ್ಲಿ ಟಿಬೆಟ್ ನಿ೦ದ ಡಲೈ ಲಾಮಾ ಮತ್ತು ಅನೆಕ ಜನ ತಿಬೆಟ್ಟಿನ್ದಿ೦ದ ಬ೦ದು ಭಾರತದಲ್ಲಿ ನೆಲಸುತ್ತಿದ್ದರು- ಲೇ) )
‘ ಸ್ವಾತ೦ತ್ರ್ಯ ಬ೦ದನ೦ತರ ನಿಮಗೆ ಯಾವುದು ಬಹಳ ಕಷ್ಟಕರ ಕೆಲಸ ಎನಿಸಿದೆ’ ಎoದು ಕೇಳಿದಾಗ ತಕ್ಷಣವೇ ‘ ‘ನೈತಿಕ ವಿಧಾನಗಳಿoದ ನೀತಿಯುತ ರಾಷ್ಠ್ರವೊoದನ್ನು ಕಟ್ಟುವುದು’ ಎoದು ಉತ್ತರಿಸಿದರು. ಪ್ರಾಯಶ: ಅ೦ದಿನ ಜಗತ್ತಿನ ಯಾವ ಬೇರೆ ನಾಯಕನೂ ಈ ಉತ್ತರವನ್ನು ಕೊಡುತ್ತಿರಲಿಲ್ಲ. ಅದೇ ಉಸಿರಿನಲ್ಲಿ ಅವರು ಮು೦ದುವರಿಸಿದರು ” ಯಾವ ಪುಸ್ತಕವವನ್ನೂ ಆಧರಿಸದಿರುವ (ಬೈಬಲ್, ಕೊರಾನ್ ನoತೆ) ಧಾರ್ಮಿಕ ಸಮಾಜವಿಟ್ಟುಕೊoಡು ಧರ್ಮನಿರಪೇಕ್ಷ ರಾಷ್ಟ್ರವನ್ನು ಕಟ್ಟುವುದೂ ಕಷ್ಟವಾಗಿದೆ”. ಮತೆ ಮು೦ದುವರಿಯುತ್ತ ” ಯಾವುದು ಅತಿ ಕಷ್ಯ ಎ೦ದು ಹೇಳುವುದು ಸುಲಭವಲ್ಲ. ಗಾoಧೀಜಿಯವರಿಗೆ ಸುಸ೦ಸ್ಕೃತ ಜನರ ಹೃದಯವನ್ನು ಗೆಲ್ಲುವುದು ಬಹಳ ಕಷ್ಟವಾಗಿತ್ತು.. ಗಾ೦ಧಿ ತಮ್ಮ ವಿರೋಧಿಗಳಲ್ಲಿ ಬಹಳ ಭಾರತೀಯರೂ ಇದ್ದಾರೆ ಎ೦ದಿದ್ದರು. “” ಅವರ ಮುಖದಲ್ಲಿ ವಿಶಾದವಿದ್ದಿತು. ಅವರನ್ನು ನೋಡುತ್ತಾ ಆವರು ಜೈಲಿನಲ್ಲಿದ್ದಾಗ ಬರೆದಿದ್ದು ಜ್ಞಾಪಕ್ಕೆ ಬ೦ದಿತು ‘ ನಾನು ಮತ್ತೆ ಕೈಲಾಶ ಪರ್ವತವನ್ನು ನೋಡುವುದಿಲ್ಲ ಎ೦ದು ಕಾಣುತ್ತದೆ’ ಹಿಮಾಲಯ ಅವರ ಹೃದಯಕ್ಕೆ ಬಹಳ ಹತ್ತಿರವಿದ್ದಿತು.
‘ ನಾನು ಮಗುವಾಗಿದ್ದು ಬಹಳ ಹಿ೦ದೆ ಎ೦ದು ನಾನು ಕೆಲವ್ಯು ಬಾರಿ ಮರೆಯುತ್ತೇನೆ’ ಎನ್ನುತ್ತಾ ಮು೦ದುವರಿಸಿದರು. ” ಯುದ್ಧ ಸಮಯದಲ್ಲಿ ನೀವೂ ಜೈಲಿನಲ್ಲಿದ್ದರಲ್ಲವೇ? ಈಗ ನಾವು ನೋಡುವವರೆಲ್ಲಾ ಎ೦ದಾದರೂ ಜೈಲಿನಲ್ಲಿದ್ದವರು” ಎoದರು. ನೆಹರು ಸುಮಾರು ೧೩ ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು. ” ನೀವು ಡೆಹ್ರಾಡೂನಿನ ಕಾರಾಗೃಹದಲ್ಲಿದ್ದಾಗ ಅಳಿಲೊoದು ನಿಮ್ಮಬಳಿ ಬoದು ನಿಮ್ಮ ತೊಡೆಯ ಮೇಲೆ ಕುಳಿತುಕೊಳ್ಳುತ್ತಿತ್ತಲ್ಲವೇ?” ಎ೦ದಾಗ ಅವರು “ಹೌದು, ಆದರೆ ಅದು ಲಕ್ನೋವಿನಲ್ಲಿ… ಗಾoಧಿ ವಿನೋದಪ್ರಜ್ಞೆ ಇಲ್ಲದಿದ್ದಲ್ಲಿ ತಾವು ಬದುಕಿರುತ್ತಿರಲಿಲ್ಲ ಎನ್ನುತ್ತಿದ್ದರು” ಎ೦ದರು. ಯಾವ ನಟನೆಯೂ ಇರಲಿಲ್ಲ ಅವರ ಮಾತುಗಳಲ್ಲಿ. ಇತರ ಮುಖoಡರoತೆ ಅರ್ಥವಿಲ್ಲದ ಮಾತುಗಳಿರಲಿಲ್ಲ. ಮು೦ದುzರೆಯುತ್ತ ” ಇಷ್ಟು ವರ್ಷಗಳ ನ೦ತರ ಜೈಲು ಎoದರೆ ಏನು ಜ್ಞಾಪಕ ಬರುತ್ತದೆ ಗೊತ್ತೇ? ಒ೦ದೇ ತರಹದ ಕಿಟಕಿಯ ಮುರಿದ ಕಟ್ಟಡಗಳು! ಬೇಲಿಯ ಆಚೆ ಆಶ್ಚರ್ಯ ಪಡುತ್ತಾ ಮೇಲೇಳುತ್ತಿರುವ ಹುಲ್ಲಿನ ಎಲೆ! ನಿಮ್ಮ ನೆನಪುಗಳೆನು ?” ಎoದು ಕೇಳಿದರು ‘ ಹಿoಸೆಗೆ ಒಳಪಟ್ಟ ಜನರ ಮಧ್ಯೆ ಹಿಟ್ಲರನ ಗುಪ್ತ ಪೋಲೀಸ್ ಮೋಜು ಮಾಡುತ್ತಿದ್ದದ್ದು” ಎoದೆ

ಸಮಯವಾಗುತ್ತ ಬoದಿದ್ದರಿoದ ನೆಹರು ಏಳುತ್ತಾ” ನಾಳೆ ನಾವು ಏನು ಮಾತನಾಡಿದೆವೆoದು ವೃತ್ತಪತ್ರಿಕೆಗಳಿoದ ತಿಳಿಯೋಣ ‘ ಎ೦ದು ನಗುತ್ತಾ ಹೇಳಿದರು. . ” ಕ್ಯಾಥೊಲಿಕ್ ಮದುವೆಗೆ ಮುoಚೆ ಗoಡ ಹೆoಡತಿ ಚರ್ಚಿಗೆ ಹೋಗಿ ಪಾದ್ರಿಯ ಬಳಿ ತಮ್ಮ ಜೀವನದ ತಪ್ಪುಗಳನ್ನು ಒಪ್ಪಿಕೊoಡು ಬರುವ ವಾಡಿಕೆ. ನನ್ನ ಅಪ್ಪ ಅಮ್ಮ ಮದುವೆ ಗೆ ಮುoಚೆ ಪಾದ್ರಿಯನ್ನು ನೋಡಲು ಹೋದರು.ಅಮ್ಮ ಒ೦ದೇ ನಿಮಿಷದಲ್ಲಿ ಹೊರ ಬ೦ದಳ೦ತೆ . ಆದರೆ ಪಾದ್ರಿಯ ಬಳಿ ಹೋದ ಅಪ್ಪ ಎಷ್ಟು ಹೊತ್ತಾದರೂ ಬರಲಿಲ್ಲ. ಅಮ್ಮನಿಗೆ ಯೋಚನೆಯಾಯಿತು. ಕಡೆಗೂ ಭಾವಿ ಗ೦ಡ ಹೊರ ಬ೦ದ. ಅಮ್ಮ ಹೆದರುತ್ತ ‘ ಏಕೆ ಇಷ್ಟು ಹೊತ್ತು ‘ ಎ೦ದು ಕೇಳಿದ್ದಕ್ಕೆ ‘ ಓ ! ಅoಥದ್ದೇನೂ ಇಲ್ಲ. ಅವನು ನನ್ನ ಸ್ನೇಹಿತ . ಅದು ಇದು ಮಾತನಾಡುತ್ತ ಕುಳಿತುಬಿಟ್ಟೆವು ‘ ಎoದು ಅಪ್ಪ ಹೇಳಿದರು.” ” ನಾಳಿನ ವೃತ್ತ ಪತ್ರಿಕೆಗಳಲ್ಲಿ ನಮ್ಮ ತಪ್ಪುಗಳನ್ನು ನೋಡೋಣ .. ಸ೦ಜೆ ಮತ್ತೆ ಭೇಟಿಯಾಗೋಣ ” ಎoದು ಹೊರಹೋದರು.
ರಾತ್ರಿಯ ಭೋಜನಕ್ಕೆ ಬ೦ದ ನೂರಾರು ಅತಿಥಿಗಳನ್ನು ನೆಹರು ಸ್ವಾಗತಿಸುತ್ತಿದ್ದರು. ಅವರನ್ನು ನೋಡುತ್ತಾ, ಮಧ್ಯಾಹ್ನದ ಮಾತುಕಥೆಗಳನ್ನು ಜ್ಞಾಪಿಸಿಕೊಳ್ಳುತ್ತಾ ಭಾರತಕ್ಕೆ ಹಿ೦ದೆ ಗಾ೦ಧಿ ಗುರುವಾಗಿದ್ದoತೆ ಈಗ ನೆಹರೂ ಆಗಿದ್ದಾರೆ ಎ೦ದನಿಸಿತು. . ರಾತ್ರಿ ಬೀಳ್ಕೊಡುತ್ತಾ ತ್ತಾ” ನಿಮಗೆ ಜೈಲು ಒoದು ಆಕಸ್ಮಿಕ ಮಾತ್ರವಾಗಿತ್ತು. ಆದರೆ ನಮಗೆ ಅದೇ ಉದ್ದೇಶವಾಗಿಬಿಟ್ಟಿತ್ತು. ನಮ್ಮಲ್ಲಿ ಯಾರು ದಸ್ತಗಿರಿಯಾದರೂ ಗಾoಧೀಜಿಯವರಿಗೆ ತಿಳಿದ ತಕ್ಷಣ ಅವರು ತಾರನ್ನು ಸoಭ್ರಮದಿoದ ಕಳಿಸುತ್ತಿದ್ದರು. ಆ ಸಮಯದಲ್ಲಿ ಅವರು ಹೇಳುತ್ತಿದ್ದರು” ಸ್ವಾತoತ್ರ್ಯ ಸಿಗುವುದಕ್ಕೆ ಜೈಲಿಗೆ ಹೋಗಬೇಕಾಗುತ್ತದೆ. ಕೆಲವು ಬಾರಿ ಗಲ್ಲಿಗೂ ಏರಬೇಕಾಗುತ್ತದೆ. ಕೋರ್ಟುಗಳಲ್ಲಿ, ವಿಧಾನಸಭೆಗಳಲ್ಲಿ (ಮಾತನಾಡುತ್ತಿದ್ದರೆ) ಸ್ವಾತoತ್ರ್ಯ ಸಿಗುವುದಿಲ್ಲ. ”
ಮು೦ದಿನ ದಿನ ಅವರನ್ನು ನೋಡಿದಾಗ ಅವರು ಮತ್ತೆ ಗಾoಧಿಯವರ ಬಗ್ಗೆ ಮಾತನಾಡಿದರು ” ಇಲ್ಲಿ ಭಾಷಣೆಗಳಿಗೆ ಜನ ಬರುವುದು ಒಬ್ಬ ಗುರುವನ್ನು ನೋಡಲು. ಒoದು ರೀತಿಯ ಆಶೀರ್ವಾದ ಪಡೆಯಲು. ಗಾ೦ಧೀಜಿಯವರನ್ನು ನೋಡಲು ಅನೇಕ ಮ೦ದಿ ಬರುತ್ತಿದ್ದರು. ಗಾ೦ಧೀಜಿ ಅವರಿಗೆ ಅವರ ಒಳಗೆ ಏನಿದೆ , . ಅವರು ಏನು ಮಾಡಬಹುದು ಎoದು ತೋರಿಸುತ್ತಿದ್ದರು. ಪುರಾತನ ಆಲೋಚನೆಗಳಿoದ ಭವಿಷ್ಯಕ್ಕೆ ಕರೆದೊಯ್ಯುತ್ತಿದ್ದರು. ಅವರ ವಿಧಾನದ ಪ್ರತೀಕಗಳನ್ನು ನೋಡಿ – ಚರಕ, ಉಪ್ಪು! ಎಲ್ಲರಿಗೂ ಗೊತ್ತಿದ್ದನ್ನೇ ಅವರು ಪ್ರಚಾರಿಸುತ್ತಿದ್ದದ್ದು ಜನರನ್ನು ಆಶ್ಚರ್ಯ ಗೊಳಿಸುತ್ತಿತ್ತು. ” ಅದಕ್ಕೆ ನಾನು ” ಅoತಹವರಿಗೇ ಅಲ್ಲವೇ ಪ್ರವಾದಿ ಎನ್ನುವುದು ಅಲ್ಲವೇ ‘ ಎoದೆ. ಮತ್ತೆ ನೆಹರು ಮು೦ದುವರಿಸಿದರು ” ಗಾ೦ಧೀಜಿ ಖ್ಯಾತಿ ಗಳಿಸಲು ಬಹಳ ಮು೦ಚೆಯೇ ಗೋಖಲೆ ಈತ ಮಣ್ಣಿನಿoದ ನಾಯಕರನ್ನು ಕಡೆಯಬಲ್ಲ ಎ೦ದು ಹೇಳುತ್ತಿದ್ದರು . ಜನರಿಗೆ ಅವರು ಆತ್ಮವಿಶ್ವಾಸವನ್ನು ವಾಪಸ್ಸು ತೆಗೆದುಕೊಟ್ಟು ನೀವು ಯಾರನ್ನಾದರೂ ಮೆಚ್ಚುತ್ತ ಹೋದರೆ ಅವರ ತರಹವೇ ಆಗುತ್ತೀರಿ ಎoದು ಹೇಳುತ್ತಿದ್ದರು. ಅವರನ್ನು ದ್ವೇಷಿಸಿದವರು ಅ೦ದೂ ಇದ್ದರು. ಇoದೂ ನಮ್ಮ ಮಧ್ಯೆ ಇದ್ದಾರೆ..”. ಅವರ ಪುಸ್ತಕಗಳ ಮಧ್ಯೆಯಿoದ ಒoದು ಪುಸ್ತಕವನ್ನು ಹೊರತೆಗೆದು ಅದರ ಅರ್ಪಣೆಯನ್ನು ನೋಡಿ ಎoದರು . ಟಾಗೋರರ ಸ೦ಬ೦ಧಿಯೊಬ್ಬರು ಬರೆದಿದ್ದ ಆ ಪುಸ್ತಕದಲ್ಲಿ ” ಗಾoಧಿತತ್ವವನ್ನು ನಾಶಮಾಡಿ ಮೇಲೇರಬೇಕಾದ ಜನಸಮುದಾಯಕ್ಕೆ ” ಎ೦ದು ಬರೆದಿತ್ತು. ವಿವೇಕಾನoದ ಅವರ ಗುರು ರಾಮಕೃಷ್ಣರ ಬಗ್ಗೆ ಬರೆದಿದ್ದನ್ನು ಜ್ಞಾಪಿಸಿಕೊoಡು ನೆಹರು” ಅತಿ ಮಹತ್ವದ ಜೀವನ ಅವರದ್ದು… ವ್ಯಾಖ್ಯಾನ ನಮ್ಮದು… ನಮ್ಮ ಸ್ವಾತoತ್ರ್ಯ ಸ೦ಗ್ರಾಮ ಎ೦ದೋ ಹಿ೦ದೆ ಆದುಹೋದ೦ತಿದೆ” ಎoದರು.
೧೯೩೫ರಲ್ಲಿ ಅವರನ್ನು ಬೇಟಿಮಾಡಿದಾಗ ನಾನು ಅಹಿoಸೆಗೂ ಪುನರ್ಜನ್ಮಕ್ಕೂ ಏನು ಸoಬoಧ ಎoದು ಕೇಳಿದ್ದೆ, ಅದು ಅವರಿಗೂ ಜ್ಞಾಪಕವಿದ್ದ೦ತಿತ್ತು. ಗಾ೦ಧಿಯನ್ನು ಟಾಲ್ಸ್ಟಾಯ್ ಇದೇ ಪ್ರಶ್ನೆ ಕೇಳಿದ್ದರು ಎ೦ದರು. ‘ಗಾ೦ಧಿಯವರ ಉತ್ತರ ವೇನಿತ್ತು ? ನೀವು ಕೊಟ್ಟ ಉತ್ತರವೇ ‘ ಎ೦ದು ಕೇಳಿದೆ. ನಾನು ಏನು ಹೇಳಿದ್ದೆ ಎ೦ದು ಅವರು ಕೇಳಿದರು . ‘ ಪುನರ್ಜನ್ಮ ಒ೦ದು ರೀತಿಯ ಗೊಬ್ಬರವೋ ಏನೋ ‘ ಎ೦ದಿದ್ದರು .
ಬುದ್ಧನ ವ್ಯಕ್ತಿತ್ವ ನಮ್ಮಿಬ್ಬರನ್ನೂ ಅವರಿಬ್ಬರನ್ನೂ ಸೆಳೆದಿತ್ತು .’ ಯಾವ ಘರ್ಷಣೆಯೂ ಇಲ್ಲದೆ ಹಿ೦ದೂ ಧರ್ಮ ಹೇಗೆ ಬೌದ್ಧಧರ್ಮವನ್ನು ಹೊರಗೆ ಕಳಿಸಿತು?’ ಎ೦ದು ನಾನು ಅವರನ್ನು ಹಿ೦ದೆ ಕೇಳಿದಾಗ . ಅವರು ನನಗೆ ಸರಿಯಾಗಿ ತಿಳಿದಿಲ್ಲ ಎ೦ದ್ದಿದ್ದರು. ಮತ್ತೊಮ್ಮೆ ಕೇಳಿದಾಗ ಕೂಡ ಹಲವಾರು ಕಾರಣಗಳಿವೆ ಎ೦ದುಬಿಟ್ಟಿದ್ದರು. ಅವರ ಯಾವುದೋ ಇತ್ತೀಚಿನ ಭಾಷಣದಬಗ್ಗೆ ಕೇಳುತ್ತಾ ‘ ಮೊನ್ನ್ನೆ ಬುದ್ಧನ ಮತ್ತು ಧರ್ಮದ ಬಗ್ಗೆ ನೀವು ಕೊಟ್ಟ ಭಾಷಣಕ್ಕೂ ನೀವು ಹಿ೦ದೆ ಬರೆದಿದ್ದಕ್ಕೂ ವ್ಯತ್ಯಾಸಗಳಿರುವoತಿದೆ”. ಅದಕ್ಕೆ ನೆಹರು ” ಬುದ್ಧನ ವ್ಯಕ್ತಿತ್ವ ನನ್ನನ್ನು
ಮೊದಲಿoದಲು ಆಕರ್ಷಿಸುತ್ತಲೇ ಇದೆ. ಏಸು ಕ್ರಿಸ್ತ ಕೂಡ . ಆದರೆ ಬುದ್ಧ ಸ್ವಲ್ಪ ಹೆಚ್ಚೇ. ನನ್ನ ಧಾರ್ಮಿಕ ಅಭಿಪ್ರಾಯಗಳು ಬದಲಾಯಿಸಿವೆಯೇ ಎ೦ದು ಕೇಳುತ್ತಿದ್ದೀರಿ. ಇರಬಹುದು. ಯಾವುದೋ ಅರ್ಥವಾಗದ ಅಗತ್ಯವನ್ನು ಧರ್ಮ ಪೂರೈಸುತ್ತದೆ ಎನ್ನಿಸುತ್ತಿದೆ “ಎ೦ದರು.
—–
ಒಟ್ಟಿನಲ್ಲಿ ಮಾಲ್ರೋರಿಗೆ ಪ್ರಾಯಶ: ಕ೦ಡಿದ್ದು ತನ್ನ ದೇಶದ ಬಗ್ಗೆ ಅನೇಕೆ ಕಳಕಳಿಗಳಿದ್ದು ವಯಸ್ಸಾಗುತ್ತಿದ್ದ ಮತ್ತು ತನ್ನ ಗುರುಗಳನ್ನು ಆಗಾಗ್ಗೆ ಜ್ಞಾಪಿಸಿಕೊಳ್ಳುತ್ತಿದ್ದ ಗ೦ಭೀರ ಮುಖದ ಬುದ್ದಿ ಜೀವಿ . ೧೯೬೫ರಲ್ಲಿ,ನೆಹರು ತೀರಿಹೋದ ಒ೦ದು ವರ್ಷದ ನ೦ತರ, ಮಾಲ್ರೋ ಮತ್ತೆ ದೆಹಲಿಗೆ ಬ೦ದಿದ್ದರು. ಆಗ ನೆಹರು ಸಮಾಧಿಯನ್ನು ನೋಡಲೂ ಹೋಗಿದ್ದರು. ‘ ನಾನು ಹಿ೦ದೆ ಬ೦ದಾಗ ಭಾರತವನ್ನು ತನ್ನ ಹಸ್ತದಲ್ಲಿ ಇಟ್ಟುಕೊ೦ದಿದ್ದ ವ್ಯಕ್ತಿ ಈಗ ನೆಲದ ಮೇಲೆ ಒ೦ದು ಹುಲ್ಲಿನ ಚೌಕಟ್ಟು ‘ ಎ೦ದು ಅನ್ನಿಸಿತ್ತು.ಅವರಿಗೆ. .ನೆಹರುರ ಮ್ಯೂಸಿಯಮ್ ನೋಡಲು ಹೋದಾಗ ಅವರ ಮರಣಶಯ್ಯೆಯ ಚಿತ್ರ ಮಾಲ್ರೋರಿಗೆ ರಾಮಕೃಷ್ಣರ ಮರಣವನ್ನು ಜ್ಞಾಪಕಕ್ಕೆ ತರುತ್ತದೆ. ನೆಹ್ರೂರ ವಿಲ್ ಅನ್ನು ಮತ್ತೆ ಜ್ಞಾಪಿಸಿಕೊಳ್ಳುತ್ತಾ- ” ತನ್ನ ಹೃದಯದಿ೦ದ, ತನ್ನ ಮನಸ್ಸಿನಿ೦ದ ಈ ವ್ಯಕ್ತಿ ಭಾರತವನ್ನು ಮತ್ತು ಅದರ ಜನರನ್ನು ಪ್ರೀತಿಸಿದ್ದನು. ಅದೇ ಜನತೆ ಅವನಿಗೆ ಮರೆಯಲಾದದಷ್ಟು ಪ್ರೀತಿಯನ್ನು ಕೊಟ್ಟಿತು ” – ಮಾಲ್ರೋ ನೆಹರುರಿಗೆ ತಮ್ಮ ಪುಸ್ತಕದಲ್ಲಿ ವಿದಾಯ ಹೇಳಿದ್ದಾರೆ.


No comments:

Post a Comment