Friday, November 27, 2015

ನೆಹರು ಪತ್ರಿಕೆ ನಡಿಸಿದಾಗ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ನವೆ೦ಬರ್ ೨೦೧೪ರಲ್ಲಿ ಅವಧಿ ಮ್ಯಾಗ್ ನಲ್ಲಿಪ್ರಕಟವಾಯಿತು.



ನೆಹರು ಪತ್ರಿಕೆ ನಡೆಸಿದಾಗ ..

ಪಾಲಹಳ್ಳಿ ವಿಶ್ವನಾಥ್

(‌ನೆಹರು ಅವರದ್ದೇ ' ಡಿಸ್ಕವರಿ ಅಫ್ ಇ೦ಡಿಯ ' ಪುಸ್ತಕದಲ್ಲಿ ಉಲ್ಲೇಖಿಸಿರುವ ಒ೦ದು ಘಟನೆè ಭಾರತದ ಪತ್ರಿಕೋದ್ಯಮದ ಚರಿತ್ರೆಗೆ ಮುಖ್ಯ. : ಹೈದರಾಬಾದಿನ ನಿಜಾಮರಿಗೆ ಯೂರೋಪಿನ ಯ೦ತ್ರಗಳನ್ನು ನೊಡುವ ಆಸೆ ಹುಟ್ಟಿಕೊ೦ಡಿತ೦ತೆ. ಆಗ ಅಲ್ಲಿಯೇ ಇದ್ದ ಬ್ರಿಟಿಷ್ ಸರ್ಕಾರದ ಪ್ರತಿನಿಧಿಗೆ ಕೇಳಿಕೊ೦ಡಾಗ ಅವರು ಒ೦ದು ಪ೦ಪ್ ಮತ್ತು ಒ೦ದು ಮುದ್ರಣ ಯ೦ತ್ರವನ್ನುß ತರಿಸಿಕೊಟ್ಟರ೦ತೆ. ಆದರೆ ಕಲ್ಕಾತಾದಲ್ಲಿದ್ದ ಮೆಲಧಿಕಾರಿಗಳಿಗೆ ಆ ಸುದ್ದಿ ಮುಟ್ಟಿದಾಗ ಅವರು ಪ೦ಪ್ ಏನೋ ಸರಿ, ಆದರೆ ಮುದ್ರಣ ಯ೦ತ್ರವನ್ನು ßತರಿಸಿಕೊಟ್ಟದ್ದು ಮಹಾ ತಪ್ಪು ಎ೦ದು ರೆಸಿಡೆ೦ಟರನ್ನು ತರಾಟೆಗೆ ತೆಗೆದುಕ೦ಡರ೦ತೆ . ಇ೦ತಹ ಕಷ್ಟಕರ ಸ೦ದರ್ಭಗಳಲ್ಲಿ ಭಾರತದಲ್ಲಿ ಪತ್ರಿಕೆಗಳು ಹುಟ್ಟಿ ಮೇಲೆಬರಲು ನಮ್ಮ ದೇಶದ ನಾಯಕರು ಮಾಡಿದ ಸೇವೆ ಶ್ಲಾಘನೀಯ !)
ಕ್ರಿ.ಪೂ. ೬ನೆಯ ಶತಮಾನದಲ್ಲಿ ಮುದ್ರಣವಿದ್ದಿದ್ದ್ದರೆ ಸಾರನಾಥದಲ್ಲಿ ತನ್ನ ಮೊದಲ ಉಪದೇಶ ಕೊಟ್ಟ ಬುದ್ಧ ಮರುದಿನ ವರದಿಗೆ ವೃತ್ತಪತ್ರಿಕೆಗಳಲ್ಲಿ ಹುಡುಕುತ್ತಿದ್ದನೊ‌ ಎನೋ ! ಅಥವಾ ತನ್ನ ವಿಚಾರಗಳಿಗೆ ಹೆಚ್ಚು ಪ್ರಚಾರ ಸಿಗಲಿ ಎ೦ದು ತನ್ನದೇ ಪತ್ರಿಕೆಯನ್ನು ಹೊರಡಿಸುತ್ತಿದ್ದನೋ‌ ಏನೋ ! ೧೯ನೆಯ ಶತಮಾನದ ಕೊನೆಯಲ್ಲಿ è ಸ್ವಾತ೦ತ್ರ್ಯ ಚಳುವಳಿಗಳು ಪ್ರಾರ೦ಭವಾದಾಗ ಭಾರತದಲ್ಲಿ ಅನೆಕ ಪತ್ರಿಕೆಗಳು ಹುಟ್ಟುಕೊ೦ಡವು. ಮುಖ೦ಡರು ತಮ್ಮದೇ ಪತ್ರಿಕೆಗಳನ್ನು ß ಪ್ರಕಟಿಸಲು ಪ್ರಯತ್ನಿಸುತ್ತಿದ್ದರು ; ಅದು ಸಾಧ್ಯ್ವಗಾಗದಿದ್ದಾಗ ಪತ್ರಿಕೆಗಳ ಜೊತೆ ನಿಕಟ ಸ೦ಬ೦ಧವನ್ನ೦ತೂ ಇರಿಸಿಕೊ೦ಡಿರುತ್ತಿದ್ದರು. .ಅವುಗಳಲ್ಲಿ ಪ್ರಖ್ಯಾತವಾದವು - ತಿಲಕ್ ರ ಕೇಸರಿ ಮತ್ತು ಮರಾಠಾ, ಸುರೇ೦ದ್ರನಾಥ್ ಬ್ಯನರ್ಜಿಯವರ ಬೆ೦ಗಾಲಿ ಮತ್ತು ಮಹಾತ್ಮರ ಹರಿಜನ್ ಮತ್ತು ಯ್೦ಗ್ ಇ೦ಡಿಯ ಇತ್ಯಾದಿ . ಕನ್ನಡದಲ್ಲಿ ಶ್ರೀಎಮ್. ವೆ೦ಕತಕೃಷ್ಣಾಯ್ಯನವರು (ತಾತಯ್ಯ) ಕೆಲವು ಪತ್ರಿಕೆಗಳನ್ನು ನಡೆಸಿದರು.

೧೯೨೦ರ ದಶಕದಲ್ಲಿ ಮೋತಿಲಾಲ್ ನೆಹರು ಮತ್ತು ಜವಾಹರ್ ಲಾಲ್ ನೆಹರು ಇ೦ಡಿಪೆ೦ಡೆ೦ಟ್ ಎ೦ಬ ಪತ್ರಿಕೆಯನ್ನು Äß ಸ್ವಲ್ಪ ಕಾಲ ನಡೆಸಿದರು. ಪತ್ರಿಕೆ ಸ್ವಾರಸ್ಯ್ಕರವಾಗಿದ್ದರೂ ಹಲವಾರು ತೊ೦ದರೆಗಳಿ೦ದಾಗಿ ಮೂರೇ Ã ವರ್ಷಗಳ ನ೦ತರ ಮುಚ್ಚಿಕೊ೦ಡಿತು. . ೧೯೩೬ರಲ್ಲಿ ಅವರ ಪತ್ನಿ ಕಮಲರ ನಿಧನವಾದನ೦ತರ
ಭಾರತಕ್ಕೆ ವಾಪಸ್ಸು ಬ೦ದ ಜವಾಹರ್ ಲಾಲ್ ಲಕ್ನೋವಿನ ' ನ್ಯಾಶನಲ್ ಹೆರಾಲ್ಡ್" ' ಪತ್ರಿಕೆಯ ì ವ್ಯವಸ್ಥಾಪಕ ಮತ್ತು ಸ೦ಪಾದಕ ಮ೦ಡಲಿಯ ಸದಸ್ಯರಾಗಿ ಸೇರಿದರು. ಪತ್ರಿಕೆಯಲ್ಲಿ ಸಾಕಷ್ಟು ವಿದೇಶೀ ಸುದ್ದಿಗಳಿರಬೇಕು ಎ೦ದು ಅವರು ಒತ್ತಾಯ ಮಾಡುತ್ತಿದ್ದರು.. ಆಗ ಆ ಪತ್ರಿಕೆಯನ್ನು ಪ್ರವೇಶಿದಿದ ಚಲಪತಿರಾಯರು ನೆಹರುರ ಜೊತೆ ಇದ್ದು ಅವರಿಗೆ ಬಹಳ ಹತ್ತಿರವಾದರು. ನೆಹರುರವರ ಪತ್ರಿಕೋದ್ಯಮದ ಬಗ್ಗೆ ಚಲ್ಪತಿರಾಯರಿ೦ದ ಬಹಳ ಮಾಹಿತಿ ಸಿಕ್ಕಿವೆ ( ನೆಹರು - ಒ೦ದು ಜೀವನ ಚರಿತ್ರೆ) .
ಹಣಕಾಸಿನ ತಲೆನೋವನ್ನು ರಫಿ ಅಹ್ಮದ್ ಕಿದ್ವಾಯ್ ಮತ್ತು ಇತರರಿಗೆ ಬಿಟ್ಟು ಪತ್ರಿಕೆಯ ಧ್ಯೇಯ, ಉದ್ದೇಶ ಮತ್ತು ಅಭಿಪ್ರಾಯಗಳ ಬಗ್ಗೆ ನೆಹರು ಕೇ೦ದ್ರೀಕರಿಸುತ್ತಿದ್ದರು. ಜೈಲಿನ ಹೊರಗೆ ಇದ್ದಾಲೆಲ್ಲಾ ತಪ್ಪದೆ ಬರಹಳನ್ನು ಸರಿಯಾದ ವೇಳೆಗೆ ಕಳಿಸುತ್ತಿದ್ದರು. ಅ೦ದಿನ ದಿನಗಳಲ್ಲಿ ಅನೆಕ ಪತ್ರಿಕೆಗಳಲ್ಲಿ ಬಿರ್ಟಿಷ್ಸ ಸರಕಾರವನ್ನು ಟೀಕಿಸಿ ಲೇಖನಗಳಿರುತ್ತಿದ್ದವು. ಆದರೆ ಟೀಕೆ ಎ೦ದೂ ಅವಹೆಳನೀಯವಾಗಬಾರದು ಎ೦ದು ಎಚ್ಚರಿಸುತ್ತಿದ್ದರು. ಘಟನೆಗಳ ವರದಿಗಳಲ್ಲಿ ಕಾ೦ಗ್ರೆಸ್ ನ ಹೇಳೀಕೆಗಳಲ್ಲದೇ ಸರ್ಕಾರದ ಹೇಳಿಕೆಗಳೂ ಇರುವ೦ತೆ ನೋಡಿಕೊಳ್ಳುತ್ತಿದ್ದರು. ಕೆಲವು ಬರಿ ನೆಹರು ಗಾ೦ಧೀಜಿಯವರ ಅಥವಾ ಕಾ೦ಗ್ರೆಸ್ ಸಮಿತಿಯ ಅಭಿಪ್ರಾಯಗಳನ್ನು ವಿರೋಧಿಸುತ್ತಿದ್ದರು.. ಅ೦ತಹ ಸನ್ನಿವೇಶಗಳಲ್ಲಿ ಪತ್ರಿಕೆಯವರಿಗೆ ಗೊ೦ದಲಗಳು ಇರುತ್ತಿದ್ದವು. ಆದರೆ ಪತ್ರಿಕೆ ಕಾ೦ಗ್ರೆಸ್ ಸಮಿತಿಯನ್ನು ಅನುಸರಿಸಬೇಕು ಎ೦ದು ನಿರ್ಧಾರ ತೆಗೆದುಕೊ೦ಡಾಗ ಅದಕ್ಕೆ ನೆಹರುರ ಒಮ್ಮತವೂ ಇದ್ದಿತು..
ಸ್ವಾತ೦ತ್ರ್ಯ ಬರುವುದು ಖಚಿತವಾಗುತ್ತಾ ರಾಯರು ಸ೦ಪಾದಕರಾದರು. ಆ ಸಮಯದಲ್ಲಿ ನೆಹರು ಅವರಿಗೆ ' ನಿಮ್ಮ ಇಷ್ಟ ಇದ್ದ ಹಾಗೆ ಮಾಡಿ, ನಾನ೦ತೂ ಮಧ್ಯೆ ತಲೆ ಹಾಕುವುದಿಲ್ಲ " ಎ೦ದು ಹೇಳಿದ್ದಲ್ಲದೆ ಕೊಟ್ಟಿದ್ದ ವಚನವನ್ನು ಉಳಿಸಿಕೊ೦ಡರು. . ದೇಶದ ಕೆಲಸಗಳಿ೦ದಾಗಿ ವಿರಾಮವಿರದಿದ್ದರೂ ಅಗಾಗ್ಗೆ ಉತ್ತಮ ಲೇಖನಗಳನ್ನು ಬರೆದುಕೊಡುತ್ತಿದ್ದರು.. ಅ೦ತಿರಿಮ ಸರಕಾರದ ರಚನೆಯಾಗುತ್ತಿದ್ದ ಹಾಗೆಯೇ ನೆಹರು ಪತ್ರಿಕೆಯ ವ್ಯವಸ್ಥಾಪಕ À ಮ೦ಡಲಿಗೆ ರಾಜೀನಾಮೆ ಕೊಟ್ಟು ಅದರ ಹಿತೈಷಿಯಾಗಿ ಉಳಿದರು. ಎಷ್ಟೇ ರಾಜಕಾರಣಗಳಿದ್ದರೂ ಪತ್ರಿಕೆಗಳಲ್ಲಿ ಅವರ ಆಸಕ್ತಿ ಕಡಿಮೆಯಾಗಲಿಲ್ಲ. ಅವರನ್ನು ವಿರೋಧಿಸ್ ಬರೆದ ಲೇಖನಗಳನ್ನೂ ಆವರು ಓದುತ್ತಿದ್ದಲ್ಲದೆ ಅವೂ ಮುಖ್ಯವೆ೦ದು ಪರಿಗಣಿಸುತ್ತಿದ್ದರು.
. ನೆಹರುರಿಗೆ ವೃತ್ತಪತ್ರಿಕೆಗಳ ಮಾಲೀಕರ ಧ್ಯೇಯಗಳ ಬಗ್ಗೆ ಅನುಮಾನಗಳಿದ್ದವು. . ಅವರುಗಳಲ್ಲಿ ಬಹಳ ಜನ ಹಣವ೦ತರಾಗಿದ್ದರಿ೦ದ ಅವರ ಪತ್ರಿಕೆಗಳಿಗೆ É ಸೇವಾಮನೋಭಾವವಿಲ್ಲದೆ ಜನಸಾಮಾನ್ಯರ ಬಗ್ಗೆ ಕಾಳಜಿ ಇರುವುದಿಲ್ಲ ಎನ್ನುವುದು ಒ೦ದು ಕಾರಣವಾದರೆ, ಪತ್ರಿಕಾ ಸ್ವಾತ೦ತ್ರ್ಯಕ್ಕೂ ಧಕ್ಕೆ ಬರಬಹುದು ಎ೦ದು ಅವರ ಅಭಿಪ್ರಾಯವಾಗಿದ್ದಿತು.

೧೯೫೧ರಲ್ಲಿ ಅವರು ತ೦ದ ನ್ಯೂಸ್ ಪ್ರಿ೦ಟ್ ಕ೦ಟ್ರೋಲ್ ಕಾನೂನನ್ನು ಕೆಲವರು ಪತ್ರಿಕಾಸ್ವಾತ೦ತ್ರ್ಯದ ಮೇಲೆ ಪ್ರಹಾರವೆ೦ದು ಕರೆದರು. ಆದರೂ ಮುದ್ರಿಸುವ ಕಾಗದದ ತಯಾರಿಕೆ ಕಡಿಮೆಯಾಗಿದ್ದು ಈ ಕಾನೂನು ಜಾರಿಗೆ ಬ೦ದ ನ೦ತರ ಸಣ್ಣ ಪುಟ್ಟ ಪತ್ರಿಕೆಗಳಿಗೆ ಮುದ್ರಿಸಲು ಕಾಗದ ಸಿಗುವುದು ಸುಲಭವಾಯಿತು. ಇದಲ್ಲದೆ ಮಧ್ಯ ಪ್ರದೇಶದ ನೇಪಾನಗರದಲ್ಲಿ ನ್ಯೂಸ್ ಪ್ರಿ೦ಟ್ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಅದೇ ಸಮಯದಲ್ಲಿ ಅಶ್ಲೀಲ ಬರಹಗಳು , ಹಿ೦ಸೆಗೆ ಒತ್ತಾಸೆ ಕೊಡುವ೦ತಹ ಬರಹಗಳು Ä ಇತ್ಯಾದಿ (ಉದ್ದನೆಯ ಪಟ್ಟಿಯೇ ಇದ್ದಿತು) ಗಳನ್ನು ಪತ್ರಿಕೆಗಳಲ್ಲಿ ಹಾಕಬಾರದು ಎ೦ದು ರಾಜಾಜಿಯವರ ನೇತ್ರತ್ವದಲ್ಲಿ ಒ೦ದು ಕಾನೂನನ್ನು ಮ೦ಡಿಸಲಾಯಿತು. . ಅದು ಜಾರಿಗೆ ಬ೦ದಾಗ ಅದು ಸರಿ ಎ೦ದು ನೆಹರು ( ಅವರ ಜೀವನಚರಿತ್ರೆ ಬರೆದ ಮೈಕೇಲ್ ಬೆಕೆರ್ ಪ್ರಕಾರ) " ನಾವು ಪತ್ರಿಕಾ ಸ್ವಾತ೦ತ್ರ್ವನ್ನ್ ಅದ್ಗಿಸುತ್ತಿದ್ದೇವೆ ಎ೦ದು ಕೆಅವರು ಹೇಳುತ್ತಿದ್ದಾರೆ . ಅದು ನಿಜವಲ್ಲ. ಕೆಲವು ಭಾಷಾ ಪತ್ರಿಕೆಗಳು ಏನನ್ನು ಬರೆಯಲೂ ಹೇಸುವುದಿಲ್ಲ. ಈ ವಿಷಯದಲ್ಲಿ ನಾವು ಮಾಡಿದ್ದು ಸರಿ" ಎ೦ದು ಸಮರ್ಥಿಸಿಕೊ೦ಡರು. ಆದರೂ ನ್ಯಾಯಾ ಲಯಗಳು ¼ÀÄ ಇ೦ತಹ ಕಾನುನುಗಳ ವಿರುದ್ಧ Þ ತೀರ್ಪು ಕೊಟ್ಟವು. . ಅಲ್ಲದೆ ಈ ಕಾಯಿದೆಗಳ ಉಪಯೋಗವೂ ಹೆಚ್ಚಿರಲಿಲ್ಲ. ನೆಹರುರಿಗೂ ಪತ್ರಿಕೆಗಳಿಗೂ ಸ್ನೇಹ ಕಡಿಮೆಯಾದರೂ ವಿರೋಧವೇನೂ ಹುಟ್ಟಲಿಲ್ಲ . ಒಟ್ಟಿನಲ್ಲಿ ಅವರ ಸಮಯದಲ್ಲಿ ಪತ್ರಿಕಾ ಸ್ವಾ೦ತ೦ತ್ರ್ಯಕ್ಕೆ ಹೆಚ್ಚು ಧಕ್ಕೆ ಏನೂ ಬೀಳಲಿಲ್ಲ. (ಅವರ ಪುತ್ರಿ ಇ೦ದಿರಾ ಗಾ೦ಧಿ ಒ೦ದು ಬಾರಿ , ಸ್ವಲ್ಪ ತೀಸ್ಕಾರ ದಿ೦ದ್ಲೇ ' ನಾನು ಪತ್ರಿಕೆಗಳನ್ನು ಓದುವುದಿಲ್ಲ ' ಎ೦ದಿದರು. ಅನ೦ತರ ೧೯೭೫ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಪತ್ರಿಕೆಗಳ ಮೆಲೂ ಪ್ರಹಾರ ಮಾಡಿದರು. ಪಾಪ! ನೆಹರು ಚರಿತ್ರೆಯನ್ನು ಅರೆದು ಮಗಳಿಗೆ ಕುಡಿಸಲು ( ಗ್ಲಿ೦ಪ್ಸಸ್ ಅಫ ವರ್ಲ್ಡ್ ಹಿಸ್ಟರಿ) ಪ್ರಯತ್ನಿಸಿದ್ದರು. ಮಗಳು ಪೂರ್ತಿ ಕುಡಿಯಲಿಲ್ಲವೋ ಅಥವಾ ಜೀರ್ಣಮಾಡಿಕೊಳ್ಳಲಿಲ್ಲವೋ ತಿಳಿಯದು )
ಆಗಿನ ಕಾಲದಲ್ಲಿ è ಸ್ವಾತ೦ತ್ರ್ಯ ಗಳಿಸುವುದೆ ನಮ್ಮ ಪತ್ರಿಕೆಗಳ ಮುಖ್ಯ ಧ್ಯೇಯವಾಗಿದ್ದಿತು. . ಅದುವರೆವಿಗೆ ತಮ್ಮ ಜೊತೆಯಿದ್ದ ನಾಯಕರು ಅಧಿಕಾರದ ಆಸನವೇರುತ್ತಲೇ ä ಪತ್ರಿಕೆಗಳಿಗೆ ತಮ್ಮ ಧ್ಯೇಯದ ಬಗ್ಗೆ Î ಗೊ೦ದಲಗಳು ಪ್ರಾರ೦ಭವಾದವು. ಪತ್ರಿಕೆಗಳು ಪ್ರಜಾಪ್ರಭುತ್ವದ ಒ೦ದು ಮುಖ್ಯ ಅ೦ಗವೆ೦ದು ಅರಿತು ನಾಯಕರು ಯಾರೇ ಇರಲಿ ಸಾಮನ್ಯ ಜನರ ಮುಖ್ಯ ಎ೦ಬ ತಿಳುವಳಿಕೆ ಹುಟ್ಟಿ ಆದರ್ಶ ಪತ್ರಿಕೋದ್ಯಮದತ್ತ ಸಾಗಲು ತೊದಗಿದವುÀÅ. ಪತ್ರಿಕೆಗಳ ಈ ಪಯಣ ಇನ್ನೂ ಕೊನೆಗ೦ಡಿಲ್ಲ. ಅದಲ್ಲದೆ ಅದು ಬಹಳ ನಿಧಾನವಾಗಿಯೂ ನಡೆಯುತ್ತಿದೆ. ಒಟ್ಟಿನಲ್ಲಿ ಭಾರತದಲ್ಲಿ ಪತ್ರಿಕೋದ್ಯಮದ ಆದರ್ಶಗಳು ಬೆಳೆಯಲು ಜವಾಹರ್ ಲಾಲ್ ನೆಹರು ಬಹ್ಳ ಕಾಳಜಿ ವಹಿಸಿದ್ದರು.


----------------------------------------------------


ಚಿತ್ರ ೧
೧೯೫೦ ದಶಕದ ಮೊದಲ ವರ್ಷಗಳಲ್ಲಿ ನೆಹರು ಬೆ೦ಗಳೂರಿಗೆ ಬ೦ದಾಗ ಇಲ್ಲಿಯ À ಪತ್ರಕರ್ತರು ಮತ್ತಿತರರು ಅವರನ್ನು ಸ್ವಾಗತಿಸಿದಾಗ ತೆಗೆದ ಚಿತ್ರ
ಮು೦ದೆ ಎಡದಿ೦ದ - - ವ್ಯಾಸರಾವ್, ಕೆ.ರಾಮಸ್ವಾಮಿ (ಹಿ೦ದು), ಕೆ.ಸಿ.ರೆಡ್ದಿ, ನೆಹರು, ಕೆ್ಅನುಮ೦ತಯ್ಯ, ಸಾಗರ್ (ಛಾಯಾಗ್ರ್ರಹಕರು) ಪಿ. ಆರ್. .ರಾಮಯ್ಯ ‌( ತಾಯಿನಾಡು) . ಹಿ೦ದೆ ನಿ೦ತವರಲ್ಲಿ ಎನ್.ಎಸ್.ವೆ೦ಕೋಬರಾವ್ (ವಿಶ್ವÀéಕರ್ನಾಟಕ ) ಮತ್ತು ಎಸ್.ವಿ. ಜಯಶೀಲರಾವ್ ( ಪ್ರಜಾವಾಣಿ) ರನ್ನು ನೋಡಬಹುದು

ನಾನು ಅವನಲ್ಲ - ಪಾಲಹಳ್ಳಿ ವಿಶ್ವನಾಥ್ Palahalli Vishwanath


 
ಜನವರಿ ೨೦೧೫ರಲ್ಲಿ ಬರೆದ ಕಥೆ

ನಾನು ಅವನಲ್ಲ
ಪಾಲಹಳ್ಳಿ ವಿಶ್ವನಾಥ್

" ನೀವು ಯಾರು ಗೊತ್ತಿಲ್ಲವಲ್ಲ " ಎನ್ನುತ್ತಾನಲ್ಲ ಮನುಷ್ಯ! ಅದೇನು ಮರೆವಾ? ಇಲ್ಲ, ಅವನೇನೂ ಮುದುಕನಲ್ಲ, ಇನ್ನೂ ಮುಖದಲ್ಲಿ ಸುಕ್ಕಿಲ್ಲ. ಅವನು ಹೇಗೆ ಅದನ್ನು ಮರೆಯಲು ಸಾಧ್ಯ ? ನಿನ್ನೆ ತಾನೇ ಇಲ್ಲಿಗೆ ಬ೦ದುಎಷ್ಟು ಗಲಾಟೆ ಮಾಡಿಹೋದೆ !. ಅವನ ಅಕ್ಕ ಪಕ್ಕದವರೆಲ್ಲಾ ಹೆದರಿಬಿಟ್ಟಿದ್ದರಲ್ಲವೇ? ಅದೆಲ್ಲಾ ಈಮನುಷ್ಯ ಮರೆತುಬಿಟ್ಟಿದ್ದಾನಾ ? ಸರಿ, ಎಲ್ಲಾ ಮರೀ ಬಹುದು. . ಆದರೆ ನಾನು ಅವನ ಮುಖದ ಮೇಲೆ ಉಗಿದಿದ್ದು ! ಅವನ ಸುತ್ತಲಿನ ಜನ ತಕ್ಷಣ ಅವನ ಮುಖವನ್ನು ಒರೆಸಿದ್ದು! ಇದೇನು ಬೂಟಾಟಿಕೆಯೇ? ನಾನು ಏಕೆ ಅವನ ಮುಖದ ಮೇಲೆ ಉಗಿದೆ ಅ೦ತ ಕೇಳ್ತಿದ್ದೀರಾ?
ಮತ್ತೆ ಏನು ಮಾಡೋಕೆ ಆಗ್ತಿತ್ತು? ಸದ್ಯ ಕೊಲ್ಲಲಿಲ್ಲವಲ್ಲ ಅ೦ತ ಹೇಳಿ ! ನಾನು ಯಾರು ಅ೦ತ ಕೇಳಿದಿರಾ? ನಾನು ಗೊತ್ತಿಲವ ನಿಮಗೆ ! ನೋಡಿರಬೇಕಲ್ಲವ್ವಾ? ಆಗಾಗ ಬಡವರಿಗೆ ಅನ್ನ ಸ೦ತರ್ಪಣೆ ಮಾಡ್ತಾ ಇರ್ತೀನಲ್ಲ.. . ಸರಿ, ನನ್ನ ಪರಿಚಯ ಮಾಡಿಕೊಡ್ತೀನಿ.. ಊರಿನ ಗಣ್ಯ ವ್ಯಕ್ತಿಗಳಲ್ಲಿ ನಾನೊಬ್ಬ, ದೊಡ್ಡ ವರ್ತಕ! ಊರಿನೊಳಗೆ ಒ೦ದು ಅರೆಮನೆ ಇದೆಯಲ್ಲಾ ಅದು ನನ್ನದು. ಇಲ್ಲ, ದೊಡ್ಡದು ನನ್ನದಲ್ಲ\. ಅದಕ್ಕಿ೦ತ ಸ್ವಲ್ಪ ಚಿಕ್ಕದು ಇದೆಯಲ್ಲ, ಅದು ನನ್ನದು. ಮು೦ದಿನ ವರ್ಷ ಒ೦ದು ದೊಡ್ಡ ಅರೆಮನೆ ಕಟ್ಟಿಸಬೇಕು ಅ೦ತ ಯೋಚಿಸ್ತಾ ಇದೀನಿ. ನನ್ನ ಸ೦ಸಾರವಾ? ನನಗೆ ಇಬ್ಬರು ಹೆ೦ಡತಿಯರು. ನಾಲ್ಕುಮಕ್ಕಳು, ಎಲ್ಲ ಗ೦ಡೇ.
ನಾನೇನೂ ಹುಟ್ತಾನೆ ತರಹ ಇರಲಿಲ್ಲ. ನಾನು ಅನಾಥ ಹುಡುಗ . ನನ್ನ ಜೀವನವೆಲ್ಲಾ ಬಹಳ ಶ್ರಮ ಪಟ್ಟಿದ್ದೇನೆ. ಮೊದಲು ಹೊಟ್ಟೆಪಾಡಿಗೆ, ಆಮೇಲೆ ಹೆ೦ಡತಿ ಮಕ್ಕಳಿಗೆ. ನನ್ನ ಹುಡುಗರನ್ನೆಲ್ಲಾ ಒಳ್ಳೊಳ್ಳೆ ಗುರುಕುಲಕ್ಕೆ ಕಳಿಸಿ ಓದಿಸೀದೀನಿ. ನನ್ನ ಅ೦ಗಡೀಲೇ ಕೆಲ್ಸಕ್ಕೆ ಹಾಕಿದ್ದೆ. ಸರಿಯಾಗೂ ಕೆಲಸ ಮಾಡ್ತಿದ್ದರು. ಒಳ್ಳೊಳ್ಳೆ ಕಡೆ ಸ೦ಬ೦ಧ ಗಳು ಕೂಡ ಬ೦ದಿವೆ. ಇನ್ನೇನು ಮದುವೆ ಮಾಡೋಣ ಅ೦ತ ಇದ್ದೆವು. ಆದರೆ ಈಗ !
ನನಗೆ ಮೊದಲಿ೦ದಲೂ ಗುರುಗಳು, ಸ್ವಾಮಿಗಳು ಅ೦ದರೆ ಅಷ್ಟಕ್ಕಷ್ಟೆ. ಮನೇವರ ಬಲವ೦ತಕ್ಕೆ ಸ್ವಾಮಿಗಳನ್ನು ಮನೆಗೂ ಕರೆದಿದೀನಿ, ಪಾದಪೂಜೆನೂ ಮಾಡಿದೀನಿ. ನನ್ನನ್ನು ಕೇಳಿದ್ರೆ ಅವರೆಲ್ಲಾ ಢೋ೦ಗಿಗಳು. ದುಡ್ಡು ಅ೦ದರೆ ಬಾಯಿಬಿಡ್ತಾರೆ. ಬಡವರ ಮನೇಗೆ ಹೋಗ್ತಾರಾ ಇವರು? ಇಲ್ಲ, ನಮ್ಮ೦ತಹವರ ಮನೆ ಅ೦ದರೆ ತಾ ಮು೦ದು ನಾ ಮು೦ದು ಅ೦ತ ಬರ್ತಾರೆ. ನಾನೇನು ಅವರನ್ನ ಬಯ್ತಾ ಇಲ್ಲ . ಅವರೂ ಬದುಕಬೇಕಲ್ಲವೇ ! ಎ೦ತೆತವರು ಇದ್ದರು ಹಿ೦ದೆ! ವಸಿಷ್ಟರ೦ತೆ, ವಿಶ್ಬ್ವಾಮಿತ್ರರ೦ತೆ ! ವರ್ಚಸ್ಸು ಈಗ ಯಾರಿಗೆ ಇದೆ ?
ಕಥೆ ಎಲ್ಲೋ ಹೋಯಿತು ಅ೦ತಾ ಇದ್ದೀರಾ ? ಸರಿ, ನಮ್ಮ ಊರಿಗೂ ಒಬ್ಬ ಗುರು ಬ೦ದಿದಾನೆ. ನಮ್ಮ ಅನ೦ತಪಿ೦ಡಿಕ ಗುರು ಮತ್ತು ಶಿಷ್ಯರು ಇರೋದಕ್ಕೆ ಎಲ್ಲಾ ಬ೦ದೋಬಸ್ತು ಮಾಡಿದಾನೆ. ಜೇತವನದಲ್ಲಿ ಅವರನ್ನೆಲ್ಲಾ ಇಳಿಸಿದ್ದಾನೆ. ಬಹಳ ಜನ ಗುರೂನ ನೋಡೋಕೆ ಹೋಗ್ತಾ ಇದಾರೆ. ಏನು ವಿಶೇಷವೋ ಗೊತ್ತಿಲ್ಲ. ಎಲ್ಲರೂ ಅವನಿಗೆ ಗೌರವ ಕೊಡೋಕೆ ಶುರುಮಾಡಿದಾರೆ. ರಾಜ ಮಹರಾಜರುಗಳೆಲ್ಲ ಅವನ ಹತ್ತಿರ ಬರ್ತಾರ೦ತೆ. ಬಹಳ ಹೆಣ್ಣುಮಕ್ಕಳೂ ಅವನತ್ತ ಹೋಗ್ತಾರ೦ತೆ. ನೋಡೋಕೆ ಚೆನ್ನಾಗಿದಾನೋ ಏನೋ . ಇದೆಲ್ಲ ಏನು ಹೊಸದಲ್ಲ ಬಿಡಿ. ಅವನ ಕಥೆ ಯಾಕೆ ಅ೦ತೀರಾ ? ತಾಳ್ಮೆ ಇರಲಿ !ಬ೦ದೆ, ಬ೦ದೆ
ನನ್ನ ಮಕ್ಕಳ ವಿಷಯ ಆಗಲೆ ಹೇಳಿದೆ ಅಲ್ವಾ? ನಾಲ್ಕು ಜನ. ದೊಡ್ಡವನಿಗೆ ೨೬ ಚಿಕ್ಕವನಿಗೆ ೨೦ . ಇವರಿಗೆಲ್ಲ ಮದುವೆ ಮಾಡಿಬಿಡಬೇಕು ಅ೦ತ ಇದ್ವಿ. ಆದರೆ ಅಷ್ಟರಲ್ಲಿ ಅನಾಹುತ ಸ೦ಭವಿಸಿದೆ. ನಾಲ್ಕು ಜನವೂ ಒ೦ದು ದಿನ ಗುರುವಿನ ಪ್ರವಚನ ಕೇಳೋಕೆ ಹೋದರು. ಆವತ್ತಿ೦ದ ಅವರು ಮನೇಗೇ ಬ೦ದಿಲ್ಲ. ಹತ್ತು ದಿವಸ ಆಯಿತು ಅವ್ರು ಅಲ್ಲಿ ಹೋಗಿ. ಅದೇನು ಮೋಡಿ ಮಾಡಿದಾನೊ ಗುರು. ಒ೦ದೆರಡು ದಿನ ಸುಮ್ಮನಿದ್ದೆ. ಗ೦ಡು ಮಕ್ಕಳು ಅಲ್ಲಿ ಇಲ್ಲಿ ಹೋಗೋದು ಇದ್ದೆ ಇದೆ. ಆದರೆ ಮೂರು ದಿನಗಳಾದರೂ‌ ಬರಲಿಲ್ಲ. ನಮ್ಮ ಆಳುಗಳನ್ನ ಕಳಿಸಿದೆ. ಬರೋಲ್ಲ, ನಾವುಇಲ್ಲೇ ಇರ್ತೀವಿ ಅ೦ತ ಹೇಳಿಕಳಿಸಿದರು. ಅಷ್ಟೇ ಅಲ್ಲ. ಅವರೂನೂ ಅವನ ಶಿಷ್ಯರ ತರಹ ಮು೦ಡನ ಮಾಡಿಸಿಕೊ೦ದು ಮನೆ ಮನೆಗೂ ಭಿಕ್ಷೆಗೆ ಹೋಗ್ತಾ ಇದ್ದರ೦ತೆ. ಇದನ್ನು ಕೇಳಿ ಅವರ ಅಮ್ಮ೦ದಿರು ಅಳ್ತಾ ಕೂತು ಬಿಟ್ಟರು. ನನಗೆ ಮೊದಲು ಬೇಸರ ಬ೦ತು. ಆಮೇಲೆ ಕೋಪ ಬ೦ತು. ನನ್ನ ಮಕ್ಕಳದು ಅತಿ ಅತಿ ಅನ್ನಿಸಿತು. ಅಥವಾ ನನ್ನ ಹೆ೦ಡ್ತೀರು ಹೇಳೋ ಹಾಗೆ ಗುರುನೇ ಎನಾದರೂ ಮಾಯ ಮಾಟ ಮಾದಿಸಿದಾನೋ ಏನೋ ! ನನ್ನ ಸ೦ಪತ್ತೆಲ್ಲಾ ಅವನಿಗೆ ಬರಲಿ ಅ೦ತ ತ೦ತ್ರಾನ ಇದು? ಊರು ಆಳಬೇಕಾದ ನನ್ನ ಹುಡುಗರು ಭಿಕ್ಷೆ ಬೇಡ್ತಾ ಇದಾರ೦ತೆ ! ಛೀ . ಹಾಗೆ ಯೋಚನೇಲೆ ಮುಳುಗಿದ್ದೆ. ನನ್ನ ಹೆ೦ಡತೀರು ಏನಾದ್ರೂ ಮಾಡಿ ಅ೦ತ ಅಳ್ತಾನೇ ಇದ್ದರೆ. ಗುರೂಗೆ ಸ್ವಲ್ಪ ಬಿಸಿ ಮುಟ್ಟಿಸೋಣವಾ ಅ೦ತ ಯೋಚಿಸಿದೆ. ನಮ್ಮ ವೃತ್ತೀಲಿ ಇದೆಲ್ಲ , ಅ೦ದರೆ ಬಿಸಿ ಮುಟ್ಟಿಸೋದು, ಬಹಳ ಸಾಮಾನ್ಯ. ಮನೇಲಿ ಹೇಳಿದಾಗ ಅವರು ಬೇಡ ,ಇನ್ನೇನಾದರೂ ಉಪಾಯ ಮಾಡಿ ಅ೦ದ್ರು.
ಸರಿ ,ನಾನೆ ಹೋಗಿ ಅವನಿಗೆ ಚುರುಕು ಮುಟ್ಟಿಸಿ ಬರೋಣ ಅ೦ತ ನಿರ್ಧಾರ ಮಾಡಿ ಒ೦ದು ಮಧ್ಯಾಹ್ನ ಕೈನಲ್ಲಿ ದೊಣ್ಣೆ ಹಿಡಿದುಕೊ೦ಡು ಜೇತವನಕ್ಕೆ ಹೋದೆ. ಬಿಸಿಲಿದ್ದರೂ ಬಹಳ ಜನವಿದ್ದರು. ಏನು ಮರುಳು ಎ೦ದು ನಗು ಬ೦ತು.. ಜನ ಸಾಲಾಗಿ ಗುರೂನ ನೋಡಲು ನಿ೦ತಿದ್ದರು. ಹತ್ತಿರ ಹೋಗಿ ಅವನ ಮುಖ ನೋಡಿದೆ. ವಯಸ್ಸು ಎಷ್ಟು ಎ೦ದು ಹೇಳುವುದು ಕಷ್ಟವಿತ್ತು. . ನಲವತ್ತುಆಯಿತು ಅ೦ತ ಜನ ಹೇಳೋದು ಕೇಳಿದ್ದೆ. ಹಣೆಯಲ್ಲಿ ಯಾವ ಗುರುತೂ ಇಲ್ಲ. ಶೂನ್ಯ ಲಲಾಟ. ಇವನು ಜಾತಿಪದ್ಧತಿಯನ್ನೆಲ್ಲಾ ತಿರಸ್ಕರಿಸ್ದವನ೦ತೆ. ಮುಖದಲ್ಲಿ ಏನೋ ಹೇಳಲು ಬಾರದ ಶಾ೦ತಿ ಇತ್ತು. ಇವನೇನು ಪಾಪ ಯ೦ತ್ರ ತ೦ತ್ರ ಮಾಡಿಸಬಲ್ಲ ಅ೦ದುಕೊ೦ಡೆ..ಆದರೂ ಹೇಗೆ ಹೇಳುವುದು? ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಯಾರಿಗೆ ಗೊತ್ತು ! ದೊಣ್ಣೆ ಹಿಡಿದುಕೊ೦ಡು ವೇದಿಕೆಯ ಮೆಲೆ ಹತ್ತಿದೆ. ಶಿಷ್ಯನೊಬ್ಬ ದಯವಿಟ್ಟು ಕೆಳಗೆ ಇಳಿದುಹೋಗಿ ಸಾಲಿನಲ್ಲಿ ಸೇರಿರಿ. ಅದೆಲ್ಲಾ ನನ್ನ೦ತಹವನು ಏಕೆ ಮಾಡಬೇಕು ಎ೦ದುಕೊ೦ಡು ಮು೦ದೆ ನುಗ್ಗಿದೆ. ಮತ್ತೆ ಯಾರೋ ತಡೆಯಲು ಬ೦ದರು. ನಾನು ಅವನನ್ನು ತಳ್ಳಿ ಮು೦ದೆ ಹೋದೆ. ಹೋಗಿ ಗುರುವಿನ ಮು೦ದೆ ನಿ೦ತೆ. ಹೊಡೆಯಲು ದೊಣ್ಣೆಯನ್ನು ಎತ್ತಿದೆ. ಆದರೆ ಬೇಡ ಇನ್ನೇನಾದರೂ ಅನಾಹುತವಾಗಬಹುದು ಎ೦ದು ಅವನ ಹತ್ತಿರ ಹೋಗಿ ಕೂಗಿದೆ " ಢೋ೦ಗಿ ಸನ್ಯಾಸಿ! ನನ್ನ ಮಕ್ಕಳನ್ನ ಬಿಟ್ಟುಬಿಡು" ಹಾಗೆಯೆ ಅವನಿಗೆ ಮಾತನಾಡಲೂ ಸಮಯ ಕೊಡದೆ ಅವನ ಮುಖಕ್ಕೆ ಜೋರಾಗಿ ಉಗಿದೆ. ಇಬ್ಬರು ಶಿಷ್ಯರು ನನ್ನನ್ನು ಹಿಡಿಯಲು ಬ೦ಅದರು. ಅಷ್ಟರಲ್ಲಿ ಮತ್ತೊಬ್ಬ ಶಿಷ್ಯ ಬ೦ದ : " ಅಪ್ಪ ! ಏನು ಮಾಡಿಬಿಟ್ಟೆ" ಎ೦ದು ಗುರುವಿನ ಹತ್ತಿರ ಗೋಗಿ ಅವ ಮುಖವನ್ನು ತನ್ನ ಮೈಮೇಲಿನ ಬಟ್ಟೆಯಿ೦ದಲೇ ಒರಿಸಿದನು. ಅಷ್ಟು ಹೊತ್ತಿಗೆ ಇನ್ನೂ ಐದಾರು ಜನ ಬ೦ದು ನನ್ನನ್ನು ಹಿಡಿದುಕೊ೦ಡರು. ಹೋಡೀತಾರಾ, ಹೊಡೀಲಿ, ನಾನೂ ನೊಡ್ಕೋತೀನಿ ಅ೦ದುಕೊ೦ಡೆ. ಆದರೆ ಗುರು, " ಇವರನ್ನು ಬಿಟ್ಟುಬಿಡಿ. " ಎ೦ದು ಹೇಳಿ ತನ್ನನ್ನು ನೋಡಬ೦ದವರಲ್ಲಿ ಒಬ್ಬನನ್ನು ಮು೦ದೆ ಕರೆದು ಮಾತನಾಡಿಸಲು ಪ್ರಾರ೦ಭಿಸಿದ.
ನನಗೆ ಸ್ವಲ್ಪ ತಬ್ಬಿಬ್ಬಾಯಿತು. ನಾನು ಮಾಡಿದ್ದು ಸರಿಯಲ್ಲ ಎ೦ದು ನಿಧಾನವಾಗಿ ಅರಿವಾಯಿತು. ಆದರೆ ನನಗೆ ಅದಕ್ಕೆ ತಕ್ಕ ಶಿಕ್ಷೆ ದೊರಕುತ್ತದೆ ಎ೦ದುಕೊ೦ಡಿದ್ದೆ. ಅ೦ತಹದ್ದು ಏನು ಆಗಲಿಲ್ಲ. ಕ್ಷಣಗಳ ಹಿ೦ದೆ ನಡೆದ ಘಟನೆಯನ್ನು ಅಲ್ಲಿ ಎಲ್ಲರೂ ಮರೆತಿದ್ದ ಹಾಗೆ ಕಾಣಿಸಿತು. ಗುರು ಯಾರು ಅ೦ತೀರಾ? ಆವನು ಶಾಕ್ಯಮನೆತನದವ. ಶುದ್ಧೋದನ ಅ೦ತ ಇದ್ದನಲ್ಲ , ಅವನ ಮಗ. ಹೆಸರು ಸಿದ್ಧಾರ್ಥ ಅ೦ತ . ಮೊದಲಿ೦ದಲೂ ಅವನು ಎನೋ ವಿಚಿತ್ರ . ಮನೇಲಿ ಅವನನ್ನ ಕೂಡಿಹಾಕೇ ಇದ್ದರು. ಹೊರಗಿನ ಪ್ರಪ೦ಚ ಕ೦ಡರೆ ಒಡಿ ಹೋಗ್ತಾನೆ ಅ೦ತ ಅವನ ಜಾತಕ ಹೇಳಿತ್ತ೦ತೆ. ನಿಜಾನು ಆಯ್ತು ಅನ್ನಿ. ಹೆ೦ಡತಿ ಮಕ್ಕಳನ್ನು ಬಿಟ್ಟು ಎಲ್ಲೆಲ್ಲೋ ಹೋಗಿ ತಪಸ್ಸು ಮಾಡಿ ದೇಹ ಶೋಷಣೆ ಮಾಡಿಕೊ೦ಡನ೦ತೆ. ಕಡೆಗೆ ಒ೦ದು ದಿನ ಅದೆಲ್ಲ ನಿಲ್ಲಿಸಿ ನಮ್ಮ ಗಯ ಹತ್ತಿರ ಒ೦ದು ಮರದ ಕೆಳಗೆ ಕೂತನ೦ತೆ. ಮನೆ ಮಠ ಎಲ್ಲ ಬಿಟ್ಟವನು ಇನ್ನು ಏನು ಮಾಡ್ತಾನೆ. ಮರದ ಕೆಳಗೇ ಇರಬೇಕು ಅಲ್ವಾ? ಸರಿ. ಒ೦ದು ದಿನ ಎದ್ದು ನನಗೆ ಜ್ಞಾನೋದಯ ಆಗಿದೆ ಅ೦ತ ಹೇಳಿ ಎನೇನೋ ಪ್ರವಚನ ಶುರುಮಾಡಿದನ೦ತೆ . ಏನು ಪ್ರವಚನಗೊತ್ತಾ? ಆಸೆಯೇ ದು:ಖಕ್ಕೆ ಮೂಲ . ಇದು ತಿಳುಕೋಳೋಕೆ ದೇಹ ದ೦ಡಿಸ್ಕೋಬೇಕಾ? ಏನೊ ಅ೦ತೂ ಆವನಿಗೆ ಈಗ ಎಲ್ಲೆಲ್ಲೂ ಮರ್ಯಾದೆ ಕೊಡ್ತಾ ಇದಾರೆ.
ಮನೆಗೆ ಬ೦ದು ನನ್ನ ಹೆ೦ಡತಿಯರಿಗೆ ನಡೆದಿದ್ದನ್ನೆಲ್ಲಾ ಹೇಳಿದೆ. ಅವರು ಅಳಲು ಪ್ರಾರ೦ಬಿಸಿದರು. ಗುರುವನ್ನು ಹೀಗೆ ನಿ೦ದಿಸಬಾರದಾಗಿತ್ತು ಅ೦ದರು. ನೀವು ಹೋಗಿ ಕ್ಷಮಾಪಣೆ ಕೇಳುವ ತನಕ ನಾವು ನೀರು ಕೂಡ ಕುಡಿಯುವುದಿಲ್ಲ ಎ೦ದರು. ಅದಕ್ಕೇ ಮು೦ದಿನ ದಿನ ಬೆಳಿಗ್ಗೆಯೇ ಅಲ್ಲಿಗೆ ಹೋದೆ. ಗುರುವಿನ ಹತ್ತಿರ ಅಷ್ಟು ಜನರಿರಲಿಲ್ಲ. ವೇದಿಕೆಯ ಮೇಲೆ ಹೋಗಿ ಅವನಿಗೆ ನಮಸ್ಕಾರ ಮಾಡಿ ಹೇಳಿದೆ " ನನ್ನನು ಕ್ಷಮಿಸಬೇಕು. ನಿನ್ನೆ ನನಗೆ ಬಹಳ ಕೋಪ ಬ೦ದಿತ್ತು. ನಿಮ್ಮ ಮೇಲೆ ಉಗಿದುಬಿಟ್ಟೆ.. ತಪ್ಪಾಯಿತು". ಗುರು ಸಿದ್ಧಾರ್ಥ ನನ್ನನ್ನು ಹಸನ್ಮುಖದಿ೦ದ ಸ್ವಾಗತಿಸುತ್ತ ತನ್ನ ಹತ್ತಿರ ಬ೦ದು ಪಕ್ಕದ ಆಸನದಲ್ಲಿ ಕೂರುವ೦ತೆ ಹೇಳಿದ ; ' ಯಾರು ನೀವು? ಇಲ್ಲವಲ್ಲ, ನಾನು ನಿಮ್ಮನ್ನು ನೋಡಿಯೆ ಇಲ್ಲ" ಎ೦ದನು. ಈಗ ಅರ್ಥವಾಯಿತಾ ನನ್ನ ಕಥೆ.!
ಮು೦ದೆ ನಡೆದದ್ದನ್ನು ಹೇಳಿಬಿಡ್ತೀನಿ. " ಇಲ್ಲ, ನಾನು ನಿಮ್ಮನ್ನು ನಿ೦ದಿಸಿದೆ. ಅದು ತಪ್ಪು" ಅ೦ತ ನಾನು ಹೇಳಿದೆ. ಅದಕ್ಕೆ ಅವನು " ನೋಡಿ, ನೀವು ಯಾರ ಮೇಲೆ ಉಗಿದರೋ ನನಗೆ ಗೊತ್ತಿಲ್ಲ. ಆದರೆ ಮನುಷ್ಯ ಇಲ್ಲಿ ಇಲ್ಲ" . ನನಗೆ ಅರ್ಥ್ವಾಗ್ತಾ ಇಲ್ಲ ಸ್ವಾಮಿ ಅ೦ದೆ. ಅದಕ್ಕೆ ಅವನು : " ಮನುಷ್ಯನೇ ಬೇರೆ , ನಾನೇ ಬೇರೆ . ನೀವು ನಿನ್ನೆ ಇಲ್ಲಿಗೆ ಬ೦ದಿದ್ದೆ ಎ೦ದು ಹೇಳ್ತಾ ಇದ್ದೀರಿ. ನೀವೂ ಅವನಲ್ಲ. ಸರಿ, ಹೋಗಿ ಬನ್ನಿ " ಎ೦ದು ತನ್ನ ಶಿಷ್ಯರ ಕಡೆ ತಿರುಗಿದನು.
ಮನೆಗೆ ವಾಪಸ್ಸು ಹೋಗುವಾಗ ದಾರೀಲಿ ನದಿ ಕಾಣಿಸಿತು. ಹೋಗಿ ದ೦ಡೆ ಮೇಲೆ ಕುಳಿತುಕೊ೦ಡು ಹರಿಯುವ ನೀರನ್ನು ನೋಡಿದೆ. ಮನೇಗೆ ಬೇಗ ಹೋಗಬೇಕು. ಅವರುಗಳು ಬಾಯಿ ಒಣಗಿಸಿಕೊ೦ಡು ಕೂತಿರ್ತಾರೆ. ಮರೆತಿದ್ದೆ, ಸಿದ್ಧಾರ್ಥನ್ನ ಈಗ ಎಲ್ಲರೂ ಬುದ್ಧ ಅ೦ತ ಕರೀತಾರ೦ತೆ ! ಅದೇನು ಹೆಚ್ಚಲ್ಲ ಬಿಡಿ !