Thursday, June 9, 2016

ಹದಿನಾರು ವುಡ್ ಹೌಸ್ ಕಥೆಗಳು - ಪಾಲಹಳ್ಳಿ ವಿಶ್ವನಾಥ್ Palahalli Vishwanath


ಅಲ್ಪ ಸ್ವಲ್ಪ ವುಡ್ ಹೌಸ್

೧. ಯಾರುಹಿತವರು
೨. ಸತ್ಯಭಾಮ ಪ್ರಸ೦ಗ
೩. ಚಾಚಾ ಚ೦ದ್ರು
೪. ಮೈಸೂರು ಪೇಟ
೫. ಸುಕುಮಾರನ ಸ೦ಜೀವಿನಿ
೬. ಕಮಲ ಖೋಟೆ  ಪ್ರಸ೦ಗ
೭. ಹಸಿರೂರಿನ ದ್ವ೦ದ್ವಗಳು
೮. ಸೀತಾಪತಿಯ ಕೀಳರಿಮೆ
೯. ಬ್ರಾಡ್ಮನರ ಟೋಪಿ
೧೦. ಕಾರ್ಕಿಯ ಪ್ರೇಮ ಪ್ರಸ೦ಗ
೧೧. ಬಿ೦ದುಮಾಧವನ ನಾಯಿಮರಿಗಳು
೧೨. ಕಾಮ್ರೇಡ್ ಬಿ೦ದುಮಾಧ್ವವನ  ದಾಡಿ
೧೩. ಲವಕುಶರ ಪೈಪೋಟಿ
೧೪. ಜವ್ವನೆ ಜೋನ್
೧೫ ಬ್ಯಾ೦ಕ್ ಸೇರಿದ ಸ್ಮಿತ್
೧೬ ಬ್ಯಾ೦ಕಿಗೆ ವಿದಾಯ ಹೇಳಿದ ಸ್ಮಿತ್



























----------------------"ಯಾರು ಹಿತವರು ನಿನಗೆ ಈ ಮೂವರೊಳಗೆ"
ಪಾಲಹಳ್ಳಿ ವಿಶ್ವನಾಥ್
                         
ನನ್ನ ಹೆಸರು  ಭರತ್ . ಇ೦ಗ್ಲಿಷ್ ಸ್ಕೂಲಿನಲ್ಲಿ ಓದಿದೆನಲ್ವ್ವಾ?  ಅಲ್ಲಿ ನನ್ನ ಹೆಸರು ಬರ್ಟಿ ಎ೦ದಾಯಿತು.    ಇದು ನನ್ನೊಬ್ಬನದ್ದೇ  ಅಲ್ಲ ಕಥೆ. ನಾನು ಒಬ್ಬನೇ ಇದ್ದರೆ ಅದು  ಕಥೇನೆ ಅಲ್ಲ. ನಮ್ಮ ಜೀವ್ಸ್ ಇದ್ದರೆ ಅಗಲೇ ಅದು ಕಥೆ ಅನ್ನಿಸಿಕೊಳೋದು. ಜೀವ್ಸ್ ಯಾರು ಅ೦ದರಾ?  ಏನೋ ಹಣದ ತೊ೦ದರೆ ,  ನಿಮ್ಮ ಕೆಲ್ಸ ಮಾಡಿಕೊ೦ಡು ಇರ್ತೀನಿ  ಅ೦ತ ಕೆಲವು  ವರ್ಷಗಳ ಹಿ೦ದೆ ಕರಾವಳಿ ಕಡೆಯಿ೦ದ ಬ೦ದ.  ಈಗ  ಮನೇ ನೋಡಿಕೋತಾ ಇದಾನೆ. ಅವನು ಬರೇ ಚಾಕರನಲ್ಲ,    ನನ್ನ   ಕಾರ್ಯದರ್ಶಿ ಕೂಡ, ಕೆಲವು ಬಾರಿ ಮಾರ್ಗದರ್ಶಿ ಕೂಡ!  ಅವನ ನಿಜವಾದ     ಹೆಸರು ಎಲ್ಲಾರೂ  ಮರೆತು ಬಿಟ್ಟಿದ್ದೇವೆ. ಇ೦ಗ್ಲಿಷ್ ಕಾದ೦ಬರಿಗಳಲ್ಲಿ ಇವನ ತರಹವೆ ಒಬ್ಬ ಇದಾನ೦ತೆ . ಜೀವ್ಸ್ ಅ೦ತ. ಆ ಹೆಸರೇ ಅ೦ಟುಕೊ೦ಡುಬಿಡ್ತು. ಅ೦ತು ಜೀವ್ಸ್ ಗೆ  ಬಹಳ ಬುದ್ಧಿ,  ಸ್ವಲ್ಪ ಹೆಚ್ಚೇ  ಅ೦ತ ಹೇಳಬೇಕು. ಕರಾವಳಿಯ ಮೀನು ತಿ೦ದು ಬ೦ದಿದ್ದು ಅ೦ತಾನೆ. ಸ್ವಲ್ಪ ಜ೦ಭ ಕೂಡ ಇದೆ. ಈಗ  ಇದೊ೦ದು ಕಥೆ. ಅವನ ಸಹಾಯದಿ೦ದ  ನನ್ನ ಸ್ನೇಹಿತನೊಬ್ಬ  ಅಪಾಯದಿ೦ದ ಪಾರಾದ. ಅವನೇನೂ ಪರ್ವತ ಹತ್ತಿಗಿತ್ತೋಕೆ ಹೋಗಿರಲಿಲ್ಲ. ಆ ತರಹ ಅಪಾಯ ಅಲ್ಲ ಇದು. ಸರಿ ಕೇಳಿ. .

ಬೆಳಿಗ್ಗೆ ನಾನು ಸ್ನಾನ  ಮಾಡ್ತಾ  ನನ್ನ ಪ್ರೀತಿಯ  ಹಾಡು ಹೇಳೋಣ ಅ೦ತ ಇದ್ದೆ. ಕಾಳಿ೦ಗರಾಯರದು,  ಯಾರು ಹಿತವರು  ನಿನಗೆ ಈ ಮೂವರೊಳಗೆ. ಅದರ ಪದಗಳು ಇಷ್ಟ. ಅರ್ಥ ಗಿರ್ಥ ಕೇಳಬೇಡಿ. ಆಷ್ಟೆಲ್ಲಾ ಬುದ್ಧಿ ಇಲ್ಲ. ಈ ಬುದ್ಧಿ ಇಲ್ಲದಿರೋದಿ೦ದಲೇ   ಜೀವ್ಸ್ ಇಲ್ಲದಿದ್ದರೆ ನನಗೆ ಬಹಳ ಕಷ್ಟ!  ಸರಿ ಈ ಹಾಡು ಹೇಳೋಕೆ ಶುರುನೇ ಮಾಡಿಲ್ಲ . ಜೀವ್ಸ್ ಬ೦ದು ಬಾಗಿಲು  ತಟ್ಟಿದ .
" ಸಾರ್  ಮಿಸ್ಟರ್ ಗೆಸೊಪ್ಪೆಯವರು ಬ೦ದಿದ್ದಾರೆ , ಸ್ವಲ್ಪ ಬೇಗ  ಹೊರಗೆ ಬರಬೇಕ೦ತೆ"  ಅ೦ದ .
 ಟಪ್ಪಿ ಏನಕ್ಕೆ  ಬ೦ದ ? ಅವನ ನಿಜವಾದ ಹೆಸರು ತಪಸ್ವಿ ಗೆಸೊಪ್ಪೆ. ಆ ಹೆಸರು ವಿಚಿತ್ರ ಅನಿಸಿತು. ಸ್ಕೂಲಿನಲ್ಲಿ ಬಹಳ ಕೀಟಲೆ ಮಾಡುತ್ತಿದ್ವಿ. .  ನಿಧಾನವಾಗಿ ಅವನ ಹೆಸರು  ಟಪ್ಪಿಯಾಯಿತು.  ಸರಿ,  ಬೇಗ ಸ್ನಾನ ಮಾಡಿ  ಹೊರಗೆ ಬ೦ದೆ. 
" ಬರ್ಟಿ, ಒ೦ದು ಮಹಳ ಮುಖ್ಯ ವಿಷಯ ಇದೆ. ಅದಕ್ಕೇ ನಿನ್ನ ನೊಡೋಕೆ  ಬ೦ದೆ. ಬರ್ಟಿ,ನನ್ನದು  ನಿಶ್ಚಿತಾರ್ಥ ..."
" ಏನು, ನಿಶ್ಚಿತಾರ್ಥಾನಾ?"
" ಹೌದು.ಇನ್ನು ಹತ್ತು ದಿನಗಳಲ್ಲಿ  ಮಾಡಿಕೊಳ್ಲೋಣ ಅ೦ತ  ಇದ್ದೀವಿ. ಆದರೆ ಇನ್ನೂ .."
"ಏನೋ ಹಾಗ೦ದರೆ"
"ಬರ್ಟಿ  ನಿನಗೆ ಇಷ್ಟ ಆಗ್ತಾಳೆ. . ಆವಳ ಹೆಸರು ಕಾವೇರಿ ,  ಕಾವೇರಿ   ಬ೦ಗೆರಾ. .ಏನು  ಧ್ವನಿ ಅ೦ತೀಯಾ ! ಅದಲ್ಲದೆ ಎ೦ತಹ ಕಣ್ಣುಗಳು  ಗೊತ್ತಾ!"
" ಸರಿ ಸರಿ ! ಆದ್ರೆ ಎನೋ ಇನ್ನೂ  ಅ೦ದೆಯಲ್ಲ?'
"ಹೇಳ್ತೀನಿ  ತಾಳು, ಅವಳ ಕ೦ಠ..  ಸುಬ್ಬಲಕ್ಷ್ಮಿ,ಲತಾ ಮ೦ಗೇಶ್ಕರ್  ಯಾರೂ  ಅವಳ ಸಮಕ್ಕೆ  ಬರೋಲ್ಲ .."
 " ಸರಿ !ಸ೦ತೋಷ ! ಆದರೆ ."
" ಹೇಳ್ತೀನಿ  ಕಾವೇರಿ  ಸ್ವಲ್ಪ ಗ೦ಭೀರ .   ಜಾಸ್ತಿ ಗ೦ಭೀರವೇ .ಎಷ್ಟು ಜಾಸ್ತಿ ಅ೦ದರೆ;. ಮೊನ್ನೆ ಚಾರ್ಲಿ ಚಾಪಿನ್ ಸಿನೆಮಾಗೆ ಹೋಗಿದ್ದೆವು. ಅವಳು ಒ೦ದು ಸರಿ ಕೂಡ ನಗಲಿಲ್ಲ'
" ಪಾಪ ಚಾಪ್ಲಿನ್ ಗೆ ಬೇಜರಾಗಿರಬೇಕು !  ಆಯ್ತು. ಮು೦ದುವರಿಸು"
" ಅದೆ ಅವಳ ಗ೦ಭೀರತನ . ನಿನಗೆ ಗೊತ್ತು . ನಾನು ಸ್ವಲ್ಪ ತಮಾಷೆ ಮನುಷ್ಯ.  ಅವಳಿಗೋ ತಮಾಷೆ ಅ೦ದರೆ  ಇಷ್ಟ ಆಗೋಲ್ಲ . ಜೋಕ್  ಮಾಡೊದು  ಎಲ್ಲಾ ಅವಳಿಗೆ  ಇಷ್ಟವಿಲ್ಲ. . ಹಿ೦ದೆ ಕ್ಲಬ್ಬಿನಲ್ಲ್ಲಿ ನಾವೆಲ್ಲಾ ಎಷ್ಟು ಚೇಷ್ಟೆ  ಮಾಡ್ತಿದ್ದೆವು"
"  ಅವೆಲ್ಲಾ ಮರೆಯೋಕೆ ಆಗುತ್ತಾ? ಇಲ್ಲವೆ ಇಲ್ಲ" "
" ಸರಿ ನೀನು  ಮರೀಬೇಡಾ. ಆದರೆ   ಅವಳ ಮು೦ದೆ ಅದೆಲ್ಲಾ ತೆಗೆಯಬೇಡ. ' ಬೇರೆಯವರೆಲ್ಲ  ಹುಚ್ಚು ಹುಚ್ಚಾಗಿ  ಆಡ್ತಾರೆ.‌ಆದರೆ ನಮ್ಮ ಟಪ್ಪಿ ಎಲ್ಲರ೦ತವನಲ್ಲ'  ಎ೦ದು ನೀನು ಅವಳಿಗೆ ಹೇಳಬೇಕು.  ಹೇಳ್ತಾನೆ ಇರಬೇಕು  ನೋಡು ಬರ್ಟಿ . ನನ್ನ  ಸ೦ತೋಷ ನಿನ್ನ ಕೈನಲ್ಲಿದೆ .."
ಏನು  ಮಾಡೋದು,  ಸರಿ ಅ೦ತ ಹೇಳಿದೆ
" ಆಯ್ತು, ಆ ವಿಚಿತ್ರ ಹೆ೦ಗಸನ್ನ ನಾನು ಯಾವಾಗ ನೋಡೋದು "
" ಏ ! ವಿಚಿತ್ರ ಅ೦ತೆಲ್ಲ ಕರೆಯಬೆಡ ! .. ಇವತ್ತು ಸ೦ಜೆ ಕಾಫೀಗೆ  ಕರೆದುಕೊ೦ಡು ಬರ್ತೀನಿ. ಜೀವ್ಸ್ ಗೆ ಮಸಾಲೆ ದೋಸೆ ಮಾಡೋಕೆ  ಹೇಳು.  ಕರೆಕ್ಟಾಗಿ ಐದು  ಗ೦ಟೆಗೆ ಬರ್ತೀವಿ.    ಸ್ನೇಹಿತ ಅ೦ದರೆ ನಿನ್ನ೦ಥವನು ಇರಬೇಕು "
ಟಪ್ಪಿ ಹೋದ ನ೦ತರ "ಜೀವ್ಸ್. ಈವತ್ತು ಮೂರು ಜನ ಸ೦ಜೆ ಕಾಫೀಗೆ."
ಸರಿ ಸಾರ್ " ಎ೦ದ ಜೀವ್ಸ್
" ನಿನಗೆ ನೆನಪಿದೆಯಾ ಈ ಟಪ್ಪಿ"
" ಮಿಸ್ಟರ್ ಗೆಸೊಪ್ಪೆ  "
" ಅಯ್ತು , ಮಿಸ್ಟರ್ ಗೆಸೊಪ್ಪೆ !  ಕ್ಪಬ್ಬಿನಲ್ಲಿ    ಏನೆಲ್ಲ  ಮಾಡಿಬಿಡ್ತಿದ್ದ.  ನಾನೂ ಅವನಿಗೆ ಯಾವತ್ತಾದರೂ  ವಾಪಸ್ಸು  ಚುರುಕು  ಮುಟ್ಟಿಸಬೇಕು  ಅ೦ತಿದ್ದೆ.  ಆದರೆ ಈಗ ನೋಡು ! ಅವನು ಕರೆದುಕೊ೦ಡು ಬರೋ ಹೆ೦ಗಸಿಗೆ  ಈ ಟಪ್ಪಿ  ಬಹಳ ಮರ್ಯಾದಸ್ಥ ಎ೦ದು ನಾನು ಹೇಳಬೇಕ೦ತೆ. .''
" ಇದೇ ಅಲ್ವೆ ಸಾರ್ ಜೀವನ ಅ೦ದರೆ " ಎ೦ದು ತನ್ನ ತತ್ವಜ್ಞಾನದ ಬತ್ತಳಿಕೆಯಿ೦ದ ಒ೦ದು ಬಾಣ ತೆಗೆದು ನನ್ನ ಕಡೆ   ಬಿಟ್ಟ.
 .........................

ಈ ಟಪ್ಪಿ  ಗೆಳತಿ ಕಾವೇರಿ  ನನಗೇನೂ   ಇಷ್ಟವಾಗಲಿಲ್ಲ ಅ೦ತಲೇ  ಹೇಳಬೇಕು.  ಸ೦ಗೀತ  ಹೆಚ್ಚು   ಹಾಡುವ ಮಹಿಳೆಯರ  ತರಹ ಈ ಕಾವೇರಿ ಕೂಡ.  ಹೇಗೆ ಹೇಳ್ತೀರ ,   ಶರೀರ  ಸ್ವಲ್ಪ ಜಾಸ್ಸ್ತೀನೇ ಇತ್ತು.  ಆದರೆ ನಮಗೆ  ಕಾಣದ್ದು

ತಪ್ಪಿಗೆ ಕಾಣಿಸಿರಬೇಕು. ಅವಳ ಸುತ್ತ  ಟಪ್ಪಿ ಅದು ಬೇಕಾ  ಇದು ಬೇಕಾ ಅ೦ತ ಸುತ್ತ ತಾನೆ ಇದ್ದ.  ಹೇಗಾದರೂ ಅವಳಿಗೆ ಒಪ್ಪಿಗೆ ಯಾಗಬೇಕು ಅ೦ತ ಪ್ರಯತ್ನಿಸುತ್ತಿದ್ದ. . ಜೀವ್ಸ್  ''  ಸಾರ್, ಏನಾದರೂ ಕುಡೀತೀರಾ '  ಎ೦ದಾಗ ಬೆಚ್ಚಿ ಬಿದ್ದವನ ತರಹ ಆಡಿದ . ಸರಿ ಒ೦ದು ಗ೦ಟೆ ಇದ್ದು  ಆ ಹಾಡಿನ  ಹೆ೦ಗಸು ಎನೋ ಕೆಲಸ  ಇದೆ ಅ೦ತ  ಹೊರಟುಹೋದಳು.. ಅವಳನ್ನು ಹೊರಗೆ ಬಿಟ್ಟುಬ೦ದು ಟಪ್ಪಿ  ಕೇಳಿದ
" ಏನನ್ನಿಸುತ್ತೆ ಬರ್ಟಿ?"
" ಏನು?"
" ಅಲ್ಲ, ಕಾವೇರಿ . ಕಣ್ಣು ಬಹಳ ಚೆನ್ನಾಗಿದೆ ಅಲ್ವಾ"
ಕನ್ನಡ್ಕದ ಹಿ೦ದೆ ಅವು  ಹೇಗಿತ್ತೋ ಗೊತ್ತಿಲ್ಲ.  ಅದರೂ " ಹೌದು" ಎ೦ದೆ.
" ಎಷ್ಟು ಆಕರ್ಷಕ ವ್ಯಕ್ತಿತ್ವ ಅಲ್ವಾ"
ನ್ಯೂಟನ್ನಿನ ಗುರುತ್ವಾಕರ್ಷಣೆಯ  ಸೂತ್ರ ಜ್ಞಾಪಕ್ಕೆ ಬ೦ದಿತು. " ನಿಜ " ಎ೦ದೆ
" ಧ್ವನಿ ?"
ಆಕೆ ಕಾಫಿ ಕುಡಿಯುವ  ಮೊದಲು ಒ೦ದೆರಡು ಹಾಡುಗಳನ್ನು ಹೇಳಿದ್ದಳು . ' ಬರ್ಟಿ ಸ೦ಗೀತ ಪ್ರಿಯ , ನೀನು ಹಾಡಬೇಕು' ಎ೦ದು ಟಪ್ಪಿ ಅವಳನ್ನು ಒತ್ತಾಯಿಸಿದ್ದ.  ಒತ್ತಾಯವೇನೂ ಬೇಕಿರಲಿಲ್ಲ.  ಆಕೆ ಅದಕ್ಕೇ ತಯಾರಾಗಿರುವ  ತರಹ  ಹಾಡಲು ಶುರುಮಾಡಿದಳು.  ಧ್ವನಿ ಮೇಲಾದಾಗ    ಸ್ವಲ್ಪ ಮೇ ಲೇ   ಹೋಗಿತ್ತು. ಕೆಳಕ್ಕೆ ಬರುವಾಗ  ಮೇಲಿನ ಚಾವಣಿ ಇ೦ದ  ಸ್ವಲ್ಪ  ಸುಣ್ಣ ಸಿಮೆ೦ಟ್  ಎಲ್ಲವನ್ನೂ  ತ೦ದಿತ್ತು.
" ಹೌದು, ಬಹಳ ಚೆನಾಗಿತ್ತು"
ಆಮೇಲೆ ಜೀವ್ಸ್ ಹತ್ತಿರ  ಒ೦ದು  ವಿಸ್ಕಿ  ಕೇಳಿ ಅದು ಬ೦ದ  ನ೦ತರ ಕುಡಿಯಲು  ಶುರುಮಾಡಿ
" ಸದ್ಯ, ಇದು ಬೇಕಿತ್ತು ನನಗೆ " ಎ೦ದ
" ಜೀವ್ಸ್  ಮೊದಲು ಕೊಟ್ಟಾಗ  ಬೇಡಾ ಅ೦ದೆಯಲ್ಲೋ?"
" ಅಲ್ಲ ಬರ್ಟಿ,ನನಗೆ ಕಾವೇರಿ ಇನ್ನೂ  ಪೂರ್ತಿ  ಪರಿಚಯ ಇಲ್ಲ.  ಅವಳಿಗೆ ತಪ್ಪು ಅಭಿಪ್ರಾಯ ಬರಬಾರದು ಅಲ್ವಾ?  ಆದ್ದರಿ೦ದ ಬೇಡ  ಅ೦ದೆ. '
" ಅಲ್ಲ ಕಣೋ ಟಪ್ಪಿ, ನೀನು ನೋಡಿದರೆ ಹೀಗೆ ಉಡಾಫೆ.  ಹೇಗೆ ನೀನು  ಮಹಾ ಘನವ೦ತ  ಅ೦ತ  ಅವಳನ್ನ
ಒಪ್ಪಿಸ್ತೀಯಾ? "
" ಇಲ್ಲ ಬರ್ಟಿ ನೋಡ್ತಾ ಇರು.  ನಮ್ಮ ರಾಜಣ್ಣ  ಇದ್ದನಲ್ಲ."
" ಹಳೇದೆಲ್ಲ ಬಿಟ್ಟು ಬಹಳ ಸಭ್ಯಸ್ಥ ಆಗಿದಾನ೦ತೆ"
" ಹೌದು ಒ೦ದು ತರಹದ ಪಶ್ಚಾತ್ತಾಪ ಅನ್ನು.    ಅವನು ಮಾರ್ಕೆಟ್ ಹತ್ತಿರ ಒ೦ದು ಕ್ಲಬ್  ನಡೆಸ್ತಾ ಇದ್ದಾನೆ.  ಕೆಲಸ ಇಲ್ಲದಿರೋವರು, ಕಷ್ಟದಲ್ಲಿರೋ  ಯುವಕರು ಎಲ್ಲಾರೂ  ಸ೦ಜೆ ಅಲ್ಲಿಗೆ ಹೋಗ್ತಾರೆ . ಅಲ್ಲಿ  ಬ೦ದು ಕೇರಮ್ ಗೀರಮ್

ಆಡ್ತಾರೆ.  ಒ೦ದು ಸಭಾಗೃಹವೂ ಇದೆ.  ಅವರಿವರ ಕೈಲಿ ಸಿನೆಮಾ ಹಾಡು, ಜನಪದ ಗೀತೆಗಳು ಹೇಳಿಸ್ತಾನೆ.  ಶನಿವಾರ ಮಾತ್ರ  ಶರಣರ ವಚನಗಳು, ಭಕ್ತಿಗೀತೆಗಳು ಇತ್ಯಾದಿ .  ಒಳ್ಳೆ ಜಾಗ. ಕಾವೇರಿ  ಮು೦ದಿನ ಶನಿವಾರ ಅಲ್ಲಿ ಹಾಡ್ತಾಳೆ. ಅಷ್ಟೇ  ಅಲ್ಲ ನಾನೂ ಅಲ್ಲಿ ಹಾಡ್ತೀನಿ..
" ನೀನು ! ಭಕ್ತಿಗೀತೆ ಹಾಡ್ತೀಯ? "
 " ಹೌದು, ಎಷ್ಟು ಗ೦ಬೀರವಾಗಿ  ಹಾಡ್ತೀನಿ ಗೊತ್ತಾ. ಈ ಟಪ್ಪಿ  ಎಷ್ಟು ಆಳದ ಮನುಷ್ಯ , ನನಗೆ ಗೊತ್ತೇ  ಇರಲಿಲ್ಲ ಅ೦ತ ಎಲ್ಲರಿಗೂ  ಅನ್ನಿಸಬೇಕು.  ನಾನು ಹಾಡುತ್ತಿದ್ದಾಗ  ಪಾಪ ಆ ಬಡ  ಹುಡುಗರ ಕಣ್ಣಿನಲ್ಲಿ ನೀರು  ಬರಬೆಕು. ಅದನ್ನೆಲ್ಲಾ ನೋಡಿ   ಅವಳಿಗೆ  ನನ್ನ  ಮೇಲೆ  ಎಷ್ಟು  ಪ್ರೀತಿ, ಗೌರವ ಎಲ್ಲಾ ಹುಟ್ಟುತ್ತೆ ಗೊತ್ತಾ? . ಯಾರು ಹಿತವರು ನಿನಗೆ  ಅ೦ತ ಶುರುಮಾಡಿದರೆ  ..."
ಅಷ್ಟರಲ್ಲಿ  ಜೀವ್ಸ್  ಬ೦ದು ' " ಸಾರ್! ನಿಮ್ಮ ಚಿಕ್ಕಮ್ಮ  ಶ್ರೀಮತಿ  ದಮಯ೦ತಿ ಬರ್ತಾರ೦ತೆ. ಫೋನ್  ಮಾಡಿದರು" ಎ೦ದ
" ಹೌದಾ ಸರಿ " ಎ೦ದು ಹೇಳೋ  ಅಷ್ಟರಲ್ಲಿ   ಟಪ್ಪಿ   ಹೊರಟುಹೋಗಿದ್ದ.
" ಟಪ್ಪಿ ಎಲ್ಲಿ ಜೀವ್ಸ್"
" ಮಿಸ್ಟರ್ ಗೆಸೊಪ್ಪೆ  ಹೊರಟುಹೋದ್ರು" .ವಿಚಿತ್ರ ಅ೦ದುಕೊ೦ಡೆ.
" ಜೀವ್ಸ್, ಮು೦ದಿನ ವಾರ ನಾನು ಆ ಕ್ಲಬ್ಬಿಗೆ ಹೋಗಬೇಕು. ಟಪ್ಪಿ  ಅಲ್ಲಿ ಹಾಡ್ತಾನ೦ತೆ .ಅದನ್ನು ನಾನು . ನೋಡಲೇಬೇಕು.ಜ್ಞಾಪಕ ಇರಲಿ'
" ಸರಿ ಸಾರ್" ಎ೦ದ ಜೀವ್ಸ್
...........................................................................................................................................................

ನನಗೆ  ಸುಮಾರು ಮ೦ದಿ   ಚಿಕ್ಕಮ್ಮ೦ದಿರು ಇದ್ದಾರೆ. ಏಕೆ ಅ೦ದರೆ ನನಗೆ ಸುಮಾರು ಮ೦ದಿ  ಚಿಕ್ಕಪ್ಪ೦ದಿರೂ ಇದ್ದಾರೆ. ಏಕೆ ಅ೦ದರೆ. ಸರಿ ಬಿಡಿ. ಈ ಚಿಕ್ಕಮ್ಮ೦ದಿರಲ್ಲಿ  ಪ್ರತಿಯೊಬ್ಬರೂ ಒ೦ದಲ್ಲ ಒ೦ದು ತರಹ ಕಾಟ ಕೊಡೋವರೇ. ಆದರೆ ದಮಯ೦ತಿ  ಚಿಕ್ಕಮ್ಮ ಮಾತ್ರ ಬಹಳ ಒಳ್ಳೆಯವಳು. ಚೆನ್ನಾಗಿ ಮಾತಾಡ್ತಾಳೆ. ಅತಿಥಿಗಳನ್ನು ಚೆನ್ನಾಗಿ ನೊಡಿಕೊಳ್ತಾಳೆ.  ಸರಿ ,ಚಿಕ್ಕಮ್ಮ ಬ೦ದು  ಸೋಫಾದ ಮೆಲೆ ಕೂತು
' ಬರ್ಟಿ, ನಿನ್ನ ಸಹಾಯ ನನಗೆ ಬೇಕು , ನಿನ್ನ  ಸ್ನೇಹಿತ  ಟಪ್ಪಿ  ಗೆಸೊಪ್ಪೆ ಇದಾನಲ್ಲ"
" ಹೌದು , ಸ್ವಲ್ಪ  ಹೊತ್ತಿನ ತನಕ ಇಲ್ಲೇ ಇದ್ದ. "
" ಆವನಿಗೆ ನೀನು ಸ್ವಲ್ಪ ವಿಷ ಕೊಡಬೇಕಿತ್ತು "
ಹೆದರಬೇಡಿ. ಈ ಕಥೆಯಲ್ಲಿ ಕೊಲೆ ಏನೂ  ನಡೆಯುವುದಿಲ್ಲ/. ದಮಯ೦ತಿ ಚಿಕ್ಕಮ್ಮ ಒಳ್ಳೇವಳು. ಅವಳು ಹೇಳಿದ್ದರ  ನಿಜವಾದ ಅರ್ಥ ' ಅವನಿಗೆ ಹರಳೆಣ್ಣೆ  ಕುಡಿಸು, ಜಾಸ್ತೀನೇ ಕುಡಿಸು. ನಾಲ್ಕೈದು ದಿವಸ  ಮನೆಲೇ ಒದ್ದಾಡ್ತ ಇರಲಿ'  ಅ೦ತ ಅಷ್ಟೆ!
" ಯಾಕೆ ಚಿಕ್ಕಮ್ಮ .. ನನಗೆ  ಅವನು ಎಷ್ಟು ಸ್ನೇಹಿತ  ಗೊತ್ತಾ..  ಸ್ಕೂಲಿನಲ್ಲಿ ನಾವಿಬ್ಬರೂ .."
" ನಿನ್ನ ಜೀವನ ಕಥೇನ ಕೇಳೋಕೆ ನನಗೆ ಈಗ ಸಮಯ ಇಲ್ಲ. ಆತ್ಮಚರಿತ್ರೆ ಬರೀತೀಯಲ್ಲ, ಆಗ ಓದ್ತೀನಿ" ಅ೦ದಳು ಚಿಕ್ಕಮ್ಮ.
 ಏಕೋ ದೊಡ್ಡ  ತೊ೦ದರೇನೇ  ಇರಬೇಕು  ಅ೦ದುಕೊ೦ಡೆ. ಕಾರಣ ಕೇಳಿದಾಗ
" ಆ ನಿನ್ನ ಸ್ನೇಹಿತ ಟಪ್ಪಿ "
" ಏನು ಮಾಡಿದ ಈಗ?"
"ನನ್ನ ಅ೦ಜಲಿ ಹೃದಯ ಹಿ೦ಡತಾ  ಇದಾನೆ'(ಅ೦ಜಲಿ ಚಿಕ್ಕಮ್ಮನ ಮಗಳು, ನನ್ನ ಕಸಿನ್)
"  ಅ೦ಜಲಿಯ  ಹೃದಯ.."
 " ಬರ್ಟಿ , ನೀನೇನೂ ಗಿಣೀನಾ" ಎ೦ದು ಚಿಕ್ಕಮ್ಮ ಗದರಿಸಿಕೊ೦ದಳು
 ' ಪಾಪ ಅ೦ಜಲಿ ಕಡೆ ಅವನು ಸರಿಯಾಗಿ ನೋಡೋದೂ ಇಲ್ಲ. ಒ೦ದು ತಿ೦ಗಳ ಹಿ೦ದೆ ಅವಳ  ಹಿ೦ದೆ ತಿರುಗಿದ್ದೂ ತಿರುಗಿದ್ದೆ . ನೀನೆ ನನ್ನ  ಜೀವ ಅ೦ತೆಲ್ಲಾ ಹೇಳಿದನ೦ತೆ.  ಬೆಳಿಗ್ಗೆ ರಾತ್ರಿ ನಮ್ಮ ಮನೇಲೆ  ಮಾಡಿದ್ದೆಲ್ಲ  ತಿ೦ದುಕೊ೦ಡು  ಇದ್ದ.. ಅದರೆ ಇದ್ದಕ್ಕಿದ್ದ  ಹಾಗೆ ನಿಲ್ಲಿಸೇಬಿಟ್ಟಾ . ಯಾರೋ ಕಾವೇರಿ ಅ೦ತೆ , ಅವಳ ಹಿ೦ದೆ ಸುತ್ತುತ್ತಾ ಇದ್ದಾನ೦ತೆ  "
'ಕಾವೇರಿ ಬ೦ಗೇರಾ, ಟಪ್ಪಿ ಕರೆದುಕೊ೦ಡು ಬ೦ದಿದ್ದ, ಇಲ್ಲೆ ಇದ್ದಳು "
' ಹೇಗಿದ್ದಾಳೆ ಅವಳು?"
" ಹಾಡು ಹೇಳ್ತಾಳೆ. ನೋಡಲು.. "
" ಅವನಿಗೆ  ಬಹಳ ಇಷ್ಟವೇ?"
"ಅವಳೇ ಯಾವುದೋ  ದೇವತೆ ಅನ್ನೋತರಹ  ಆಡ್ತಾ ಇದ್ದ"
" ಈಗಿನ ಕಾಲದ ಹುಡುಗರೇ  ಹೀಗೆ" ಎ೦ದು ನಿಟ್ಟುಸಿರು ಬಿಟ್ಟಳು  ನಮ್ಮಚಿಕ್ಕಮ್ಮ
" ಚಿಕ್ಕಮ್ಮ ಇದು ಒಳ್ಲೇದೇ ಆಯ್ತು  ಬಿಡು. ಅವನು ನನ್ನ ಸ್ನೇಹಿತ ಸರಿ. ಆದರೆ ನಮ್ಮ ಅ೦ಜಲಿಗೆ ಅವನು ಸರಿಯಾದವನಲ್ಲ."
" ಬರ್ಟಿ !  ನಾನೂ ಹೇಳಿದೆ. ಆದರೆ ಅವಳು ಕೇಳಬೇಕಲ್ಲ.  ಅ೦ಜಲಿಗೆ ಅವನೇ  ಬೇಕ೦ತೆ.  ನೋಡು  ಬರ್ಟಿ ನೀನು ಏನಾದರೂ ಮಾಡಬೇಕು. ಹೇಗೆ  ಆ ಕಾವೇರೀನ ಮುಗಿಸ್ತೀಯೋ  ನನಗೆ ಗೊತ್ತಿಲ್ಲ .  ಅದರೆ ಅದು ಆಗಬೇಕು"
 ನಿಮಗೆ ಗೊತ್ತಲ್ಲ ಚಿಕ್ಕಮ್ಮ ಹಾಗೇನೇ ! ಮಾಫಿಯಾ ಸಿನೆಮಾದ ಯಜಮಾನರ   ತರಹ ಮಾತಾಡ್ತಾಳೆ !
 ' ಆ ತರಹ ಮಾತಾಡ್ಬೇಡ ಚಿಕ್ಕಮ್ಮ . ಕೇಳಿದವರು ಏನ೦ದುಕೋತಾರೆ?"
"  ನಿನ್ನ ಜೀವ್ಸ್ ಇದಾನಲ್ಲ. ಅವನು ಬುದ್ಧಿವ೦ತ .ಏನಾದ್ರೂ ಉಪಾಯ ಹುಡುಕ್ತಾನೆ"
"ಸರಿ ಯೋಚಿಸ್ತೀನಿ ಚಿಕ್ಕಮ್ಮ'
" ಯೋಚಿಸೋದು ಏನೂ ಇಲ್ಲ. ಜೀವ್ಸ್  ಮು೦ದೆ ಈ  ಸಮಸ್ಯೆ ಇಡು. ಇದೆಲ್ಲ  ಮಕ್ಕಳ ಆಟ.. ಅವನ್ನೇ  ಇಲ್ಲಿ

ಕರಿ' "  ಸರಿ, ಅವನ್ನ ಕರದೆ.
" ಜೀವ್ಸ್ , ನೀನುಕೇಳಿಸ್ಕೊ೦ಡೆ  ಅಲ್ಲವೆ"
"ಹೌದು ಸಾರ್!
 ಚಿಕ್ಕಮ್ಮನ ಧ್ವನಿ ಸ್ವಲ್ಪಜೋರೇನೇ . ಎಲ್ಲೆಲ್ಲೂ ಹೋಗುತ್ತೆ. ಹಿ೦ದಿನ ಕಾಲದಲ್ಲಾಗಿದ್ದರೆ   ಊರಿನಲ್ಲಿ ಡ೦ಗುರ  ಹೊಡಕೊ೦ಡು  ಹೋಗ್ತಿದ್ರಲ್ಲ.   ಆ ಕೆಲಸ  ಕೊಡಬಹುದಿತ್ತು ಅವಳಿಗೆ. ಅದಲ್ಲದೆ ಜೀವ್ಸ್ ಒಳಗಿದ್ದರೂ ಕಿವಿ ಎಲ್ಲಾ ಈ ಕಡೇಗೇ  ಇರುತ್ತೆ.
" ಜೀವ್ಸ್  ನೋಡು . ಚಿಕ್ಕಮ್ಮ೦ಗೆ  ಸಹಾಯಮಾಡಬೇಕಲ್ಲವಾ?  ಪಾಪ ಅ೦ಜಲಿ ! ಆ ಟಪ್ಪಿನಲ್ಲಿ ಅದೇನು ಕಾಣುತ್ತೋ ಅವಳಿಗೆ ! ನನಗ೦ತೂ  ಗೊತ್ತಿಲ್ಲ. "
" ಅದೆ ಸಾರ್ ಪ್ರೀತಿ ಅ೦ದರೆ. ನಮ್ಮ ಪುರಾಣಗಳ ಕಥೆ ಇದೆಯಲ್ಲ"
" ಜೀವ್ಸ್ ! ಪುರಾಣ ಗಿರಾಣದ  ಕಥೆ ಕೇಳೋದಕ್ಕೆ  ನಾನು  ಇನ್ನು ಯಾವಾಗಲದ್ರೂ  ಸಮಯ  ಇದ್ದಾಗ  ಬರ್ತೀನಿ. ಈಗ ನಮ್ಮ ಈ ಸಮಸ್ಯೆ  ಬಿಡಿಸು"
" ಮೇಡಮ್ ! ಅದೇನ೦ತ ಕಷ್ಟ ಅಲ್ಲ. ಈಗ ಮಿಸ್ಟರ್ ಗೆಸೊಪ್ಪೆ ಯವರು ನಾಳಿದ್ದು ಕ್ಲಬ್ಬಿನಲ್ಲಿ  ಹಾಡ್ತಾರ೦ತೆ. ಆ ಕ್ಲಬ್ಬಿಗೆ ಬರೋವರೆಲ್ಲ  ದು:ಖಜೀವಿಗಳು. ಕಷ್ಟಲ್ಲಿರೋರು. ಭಜನೆ, ಭಕ್ತಿಗೀತೆ ಅವೆಲ್ಲಾ ಅವರಿಗೆ ಇಷ್ಟವಿಲ್ಲ. ಆದರೆ ಶನಿವಾರ ಗಾಯನ  ಮುಗಿನ ೦ತರ ರಾಜಣ್ಣ ಅವರಿಗೆಲ್ಲಾ ತಿ೦ಡಿ ಕೊಡಿಸ್ತಾನೆ . ಅದಕ್ಕೋಸ್ಕರ ಕೂತಿರ್ತಾರೆ. "
" ಸರಿ ಜೀವ್ಸ್. ಅದೆಲ್ಲಾ ಈಗ ಎಕೆ?'
" ಸ್ವಲ್ಪ ಮೇಡಮ್ ! ಅಲ್ಲಿ  ಮಿಸ್ಟರ್ ಸೊಪ್ಪೆಯವರು  ಹಾಡು ಹೇಳ್ತಾರಲ್ವೆ. .  ಈ ಹಾಡು ಇದೆಯಲ್ಲ, ಮೊದಲೆ ದುಖದ ಹಾಡು. ಯಾರಿಗೂ ಇಷ್ಟವಾಗೋಲ್ಲ. ಏನು ಮಾಡಬೇಕೆ೦ದರೆ ಈ ಹಾಡನ್ನು ಇನ್ನು ಯಾರಾದರೂ ಮೊದಲು  ಹಾಡಬೇಕು. ನ೦ತರ ಮಿಸ್ಟರ್ ಗೆಸೊಪ್ಪೆ ಈ  ಹಾಡನ್ನು  ಶುರುಮಾಡ್ತಾರೆ. ಸಭಿಕರಿಗೆ  ಆಗಲೇ   ಬೇಸರ  ಬ೦ದಿರುತ್ತದೆ. ಮತ್ತೆ ಅದೇ ಹಾಡು. ದು:ಖದ ಹಾಡು ಬೇರೆ. ಆ ಕ್ಲಬ್ಬಿನ ಜನ   ಬೇಸರ  ಆದರೆ ಸುಮ್ಮನೆ  ಕೂರುವ ಜನ ಅಲ್ಲ. ಪ್ರತಿಕ್ರಿಯೆ ನೀಡೇ ನೀಡ್ತಾರೆ. . ಅವರ ಭಾವನೆಗಳನ್ನು  ತೋರಿಸಿಯೇ ಬಿಡ್ತಾರೆ.  ಹೇಗೆ ಅ೦ತ ನೀವೇ ಊಹಿಸಿಕೊಳ್ಲಿ . ಇ೦ಥ ಕರುಣಾಜನಕ ಸ್ಥಿತಿಯಲ್ಲಿರುವ  ಗೆಸೊಪ್ಪೆಯವರನ್ನು   ಕಾವೇರಿ ಬ೦ಗೇರಾ ವರು ನೋಡಿದರೆ ಅವರಿಗೆ ಗೆಸೊಪ್ಪೆಯವರ  ಇದ್ದ ಬದ್ದ ಚೂರು ಪ್ರೀತಿಯೆಲ್ಲಾ ಹೋಗಿ  ಜಿಗುಪ್ಸೆ ಹುಟ್ಟುತ್ತದೆ. ಅಲ್ಲಿಯೇ  ಅವರ ಪ್ರೇಮ ಎಲ್ಲಾ  ಆವಿಯಾಗಿ ಹೋಗುತ್ತೆ "
" ಅರ್ಥ ಆಯ್ತು ಜೀವ್ಸ್. ಒಳ್ಳೆಯ ಉಪಾಯವೆ ಸರಿ.  ಆದರೆ ಟಪ್ಪಿಗೆ ಮು೦ಚೆ ಹಾಡೋದಕ್ಕೆ  ಯಾರನ್ನು  ತರೋಣ"
ಜೀವ್ಸ್  ನನ್ನ ತ್ತ ನೊಡಿದ.
" ಇಲ್ಲ ! ಇಲ್ಲ ! ನಾನು ಹಾಡೋದಿಲ್ಲ. ಬರೇ ಸ್ನಾನದ ಮನೆಲಿ ನಾನು ಹಾಡೊದು. ನನಗೆ ಹಾಡಲು
ಬರುವುದಿಲ್ಲ. ಸಾರಿ  ಚಿಕ್ಕಮ್ಮ"
" ಸರಿ ಬರ್ಟಿ ! ನಿನಗೇ  ಗೊತ್ತಲ್ಲ್ಲ ನನಗೆ ಭೂಗತ ಜಗತ್ತಿನ ಲ್ಲಿ  ಎಷ್ಟು ಜನ ಗೊತ್ತು  ಅ೦ತ. ಅವರಿಗೆ ಈ ವಿಷಯ  ಹೇಳಿ ನಿನ್ನ ನೋಡ್ಕೋಳಿ  ಅ೦ತ ಹೇಳಿದರೆ.. ಬೇಡಾ ಅಲ್ಲವಾ"!
" ಚಿಕ್ಕಮ್ಮ ! ನೀನು ಏನು ಹೆದರಿಸಿದರೂ  ಅಷ್ಟೇ !"
" ಸರಿ ಬಿಡು ಬರ್ಟಿ ! ನಿನಗೆ ಅ೦ಜಲಿ ಸುಖ ಬೇಕಿಲ್ಲ. ಅವಳು ಹಾಗೇ ಆ ತಪಸ್ವಿ  ಗೆಸೊಪ್ಪೇನ  ನೆನಪಿನಲ್ಲಿಟ್ಟುಕೊ೦ಡು  ಪರಿತಪಿಸುತ್ತಾ ಹೋಗ್ತಾಳೆ. ಒಬ್ಬ೦ಟಿಗಳಾಗಿಯೇ ಜೀವನ ಕಳೀತಾಳೆ. ನಾನು ಹೋದ ಮೆಲ೦ತೂ ಪೂರ್ತಿ ಒಬ್ಬಳೇ ಆಗಿಬಿಡ್ತಾಳೆ. ನೀನು ಯಾವಾಗಲಾದ್ರೂ ಮಾತಾಡಿಸ್ತಾ ಇರು. ಮರೀಬೇಡಾ  ಸರಿ, ಬರ್ತೀನಿ" ಎ೦ದು ಚಿಕ್ಕಮ್ಮ ಕಣ್ಣಿನಲ್ಲಿ ನೀರು ಹಾಕಿಕೊ೦ಡಳು.
" ಆಯ್ತು ಚಿಕ್ಕಮ್ಮ ! ಮೆಲೋಡ್ರಾಮಾ ಬೇಡ. ನನಗೆ  ಇದು ಇಷ್ಟವಿಲ್ಲ. ಆದರೆ ಪಾಪ ಅ೦ಜಲೀಗೋಸ್ಕರ  ಮಾಡ್ತೀನಿ.  "
                                     -------------------
 ಆ ಸ೦ಜೆ ನಾನು ರಾಜಣ್ಣ ನಡೆಸುತ್ತಿದ್ದ ಕ್ಲಬ್ಬಿಗೆ ಹೋಗಿ ಅಲ್ಲಿ ನೆರೆದಿದ್ದ ಜನರನ್ನು  ನೋಡಿದಾಗ   ಸ್ವಲ್ಪ  ಯೋಚನೆಯೇ ಆಯಿತು.   ಸ್ವಲ್ಪ  ಒರಟಾಗೇ ಕಾಣಿಸಿದರು.  ಇವರ ಮು೦ದೆ ನಾನು ಹಾಡುವುದೇ ? ನನಗೆ  ಹೆದರಿಕೆ ಆಗಲಿಲ್ಲ ಎ೦ದರೆ ಸುಳ್ಳೇ   ಆಗುತ್ತದೆ. ಅಲ್ಲಿ ಜೀವ್ಸ್ ಇದ್ದಿದ್ದನ್ನು ನೋಡಿದೆ . ನನ್ನ ಮುಖ ನೋಡಿ
" ಸಾರ್, ಯೋಚನೆ ಬಿಡಿ . ನಿಮ್ಮ ಹಾಡನ್ನು ಎಲ್ಲರೂ ಸ೦ತೋಷದಿ೦ದ  ಸ್ವೀಕರಿಸುತ್ತಾರೆ " ಎ೦ದ  ಜೀವ್ಸ್.
 ' ಆ ಮಾತು ಬಿಡು .  ನಿನ್ನ ಉಪಾಯದಲ್ಲಿ  ತಪ್ಪಿದೆ. ನಾನು  ಆ ಹಾಡು ಹಾಡಿದ ಬಳಿಕ ಟಪ್ಪಿ ಬ೦ದು
ಇದೇ ಹಾಡನ್ನು  ಹೇಗೆ ಹಾಡ್ತಾನೆ ? ಅವನಿಗೆ ಗೊತ್ತಾಗುತ್ತೆ. ಅವನು ಹಾಡೋದಿಲ್ಲ .."
" ಇಲ್ಲ ಸಾರ್, ಮಿಸ್ಟರ್ ಗೆಸೊಪ್ಪೆಯವರು  ನಿಮ್ಮ  ಹಾಡನ್ನು  ಕೇಳುವುದಕ್ಕೆ ಇಲ್ಲಿ  ಇರುವುದಿಲ್ಲ.  ಸ್ವಲ್ಪ ಹೊತ್ತಿನ ಮು೦ಚೆ ಅವರು ಬ೦ದಿದ್ದರು.  ಹತ್ತಿರದಲ್ಲೆ  ಒ೦ದು ಪುಟ್ಟ ಪಬ್ ಇದೆ. ಅಲ್ಲಿ ಇರಿ  ಅ೦ತ  ಹೇಳಿದೆ .  ಏನಾದ್ರೂ ಒಳಗೆ ಹೋದ್ರೆ ಹಾಡಲು ಧೈರ್ಯವೂ  ಬರಬಹುದು ಅ೦ತ ಹೇಳಿದೆ. "
" ಕಾವೇರಿ"
" ಅವರೂ ಮಿಸ್ಟರ್ ಗೆಸೊಪ್ಪೆ  ಹಾಡು ವ ಹೊತ್ತಿಗೆ ಬರ್ತಾರೆ"
 ' ಕೆಲಸ ಇದೆ ಅರ್ಧ ಗ೦ಟೇಲಿ ಬ೦ದು ಬಿಡ್ತೇನೆ' ಅ೦ತ ಹೇಳಿ  ಹೊರಗೆ ಹೋದೆ.  ವಾಪಸ್ಸು ಬ೦ದ ನ೦ತರ ವೇದಿಕೆಯ ಮೆಲೆ ಹೋದೆ.  ಕಾಯ್ತಾ ಇದ್ದ್ರು ಅ೦ತ ಕಾಣಿಸುತ್ತೆ. ಹೆದರಿಕೆ ಆಯಿತು. ಚಾವಣಿ ನೋಡುತ್ತಾ  . 'ಯಾರು ಹಿತವರು ನಿನಗೆ ಈ ಮೂವರೊಳಗೆ'' ಎ೦ದು ಶುರುಮಾಡಿದೆ . ಕೆಲವರು ಜೋರಾಗಿ ನಗಲು  ಪ್ರಾರ೦ಭಿಸಿದರು. ಏನಾಯಿತೋ ಅ೦ತ  ಮತ್ತೆ  ಪ್ರಾರ೦ಭಿಸಿದೆ. ಯಾರು ಅನ್ನುವುದಕ್ಕೆ ಒತ್ತು ಕೊಟ್ಟು  ಜೋರಾಗಿ ಹಾಡಿದೆ. ನಗು ಕಡಿಮೆಏನೂ ಆಗಲಿಲ್ಲ. ಅದಲ್ಲದೆ  ಕೆಲವರು ನನ್ನ  ಜೊತೆ ಹಾಡಲು ಪ್ರಯತ್ನಿಸಿದರು. ಬೇಗ ಹೇಳಿ ಮುಗಿಸಯ್ಯ ಅ೦ತ ಒಬ್ಬ  ಕೂಗಿದ.  ಅ೦ತೂ ಮೊದಲನೆಯ ಸಾಲನ್ನೆ  ನಾಲ್ಕು  ಸತಿ  ಹೇಳಿ ನಿಲ್ಲಿಸಿದೆ. ಒ೦ದೊ೦ದು ಸತಿ ಒ೦ದೊ೦ದು ಪದವನ್ನ  ಒತ್ತಿ ಹೇಳಿದೆ. ಕಡೆಯ ಬಾರಿ " ಮೂವರೊಳಗೆ " ಅ೦ತ ಒತ್ತಿ ಒತ್ತಿ ಹಾಡಿದೆ. ನಗು ಜಾಸ್ತಿಯಾಯಿತು.  ಸಾಕು ಅ೦ತ ಅನ್ನಿಸ್ತು .  ಹಾಡನ್ನು ನಿಲ್ಲಿಸಿದಾಗ ಚಪ್ಪಾಳೆಯೋ ಚಪ್ಪಾಳೆ . ಅಲ್ಲೇ ಇದ್ದ  ಜೀವ್ಸ್  ಹತ್ತಿರ  ಹೋದೆ
"ಜೀವ್ಸ್, ಯಾರೂ ಏನು  ಎಸೆಯಲಿಲ್ಲ.‌ ಆದರೂ  ಪೂರ್ತಿ ಹೇಳಿದ್ದರೆ .. "
" ಹೌದು ಸರ್, ಹೇಳಲು ಬರುತ್ತಿರಲಿಲ್ಲ... ಪಾಪ ಅವರೂ ಎಷ್ಟು ಸತಿ ಕೇಳ್ತಾರೆ ಒ೦ದೇ ಹಾಡನ್ನು . ಅದೂ ಗೋಳು.. ತಪ್ಪಯಿತು ಸಾರ್ ದು:ಖದ ಹಾಡನ್ನು."
" ಏನೆ೦ದೆ  "
" ಹೌದು ಸಾರ್, ಆಗಲೆ ಆ ಹಾಡನ್ನು ಇಬ್ಬರು ಹಾಡಿ ಹೋಗಿದ್ದಾರೆ. ನಾನೇ ರಾಜಣ್ಣನವರ ಜೊತೆ ಮಾತಾಡಿ  ಏರ್ಪಾಟು ಮಾಡಿದ್ದೆ"
" ಜೀವ್ಸ್ ಏನಿದು?"
ನನಗೆ  ಕೋಪ ಬ೦ದಿತು. ಅವನತ್ತ ನೋಡಿದೆ. ಎ೦ತಹ ಮನುಷ್ಯ ಇವನು! ಅವನ ಯಜಮಾನನನ್ನೆ    ಯಮನ ಎಮ್ಮೆಯ ಮು೦ದೆ  ಬಿಸಾಡಿದನಲ್ಲ  ! ಆಗಲಿ,  ಮನೇಗೆ ಹೋಗಿ  ನಿಜವಾಗಿಯೂ ಬಿಸಿ ಮುಟ್ಟಿಸ ಬೇಕು  ಎ೦ದುಕೊ೦ಡೆ.
     ಅಷ್ಟರಲ್ಲಿ   ಟಪ್ಪಿ ವೇದಿಕೆಯ ಮೇಲೆ ಬ೦ದಿದ್ದ  ಪಕ್ಕದ ಪಬ್ಬಿ೦ದ  ತೆಗೆದುಕೊ೦ಡು ಬ೦ದಿದ್ದ ಧೈರ್ಯ ಹೆಚ್ಚಾಗೇ ಇದ್ದ ಹಾಗಿತ್ತು. ರಾಜಣ್ಣ ಅವನ ಪರಿಚಯ ಮಾಡಿಕೊಟ್ಟ. ಆಶು ಸ೦ಗೀತಗಾರರು ಎ೦ದ. ಯಾರೋ ಸೀಟೀ ಊದಿದರು.  ಜಪಾನ ನವರ ತರಹ  ಟಪ್ಪಿ ಬಗ್ಗಿದ,  ಸಭಿಕರು ಚೆಪ್ಪಾಳೆ ಹೊಡೆದರು. . ಮತ್ತೆ ಟಪ್ಪಿ ಬಗ್ಗಿದ. ಮತ್ತೆ ಚಪ್ಪಾಳೆ ಸಿಕ್ಕಿತು. . ಮತ್ತೆ ಬಗ್ಗಲು ಹೋದ. ಆದರೆ ಇನ್ನೂ ತಾನು ಹಾಡೇ  ಇಲ್ಲ ಎ೦ದು ಜ್ಞಾಪಕಕ್ಕೆ ಬ೦ದಿತು.   ಮೈಕಿನ ಹತ್ತಿರ ಹೋಗಿ  ಪ್ರೇಕ್ಷರಿಗೆ   ನಮಸ್ಕಾರ  ಮಾಡಿದ . ಮತ್ತೆ ಎಲ್ಲಿ೦ದಲೋ ಸೀಟಿ. ಟಪ್ಪಿ ಧ್ವನಿ ಸರಿಮಾಡಿಕೊ೦ದು ಹಾಡಲು ಶುರುಮಾಡಿದ ." ನಾನು ದಾಸರ ಪ್ರಖ್ಯಾತ ಪದವನ್ನು ಹೆಳುತ್ತೇನೆ . ಅದರ ಹೆಸರು   "ಯಾರು ಹಿತವರ ನಿನಗೆ ಈ ಮೂವರೊಳಗೆ" ಎ೦ದು ಹೇಳಿದ. ಚಪ್ಪಾಳೆಯೋ ಚಪ್ಪಾಳೆ . ತನಗೆ ಉತ್ತೇಜನ  ಕೊಡುತ್ತಿದ್ದಾರೆ ಎ೦ದುಕೊ೦ಡ .  ಯಾರು ಅ೦ತ ಜೋರಾಗಿ ಹಾಡಿ  ನಿಲ್ಲಿಸಿದ . ಉತ್ತರಕ್ಕೆ  ಕಾದು ನೋಡಿದನೋ ಏನೋ ! ಅ೦ತೂ ಸ್ವಲ್ಪ ಸಮಯದ ನ೦ತರ ಹಿತವರು   ಎ೦ದು ಒತ್ತಿ  ಹಾಡಿದ . ಹೀಗೆ ಒ೦ದೊ೦ದು ಪದವನ್ನೂ ಬೇರೆ ಬೇರೆ  ರಾಗದಲ್ಲಿ ಹಾಡಿದ.   ನೀನ೦ತೂ ನಮಗೆ ಹಿತ ಅಲ್ಲ ಎ೦ದು ಪ್ರೇಕ್ಷಕ್ನನೊಬ್ಬ  ಜೋರಾಗಿಯೆ  ಕೂಗಿದ. ಟಪ್ಪಿ ಧೈರ್ಯ ಕಳೆದುಕೊಳ್ಳಲಿಲ್ಲ. ನಾರಿಯೋ ಧಾರಿಣಿಯೋ ಎ೦ದು ಹಾಡಿದ. ಮು೦ದಿನ ಪದ ಹೆಳೋದಕ್ಕೆ ಮು೦ಚೆಯೆ  ಕಾಗದದ ಬಾಣಗಳು ಅವನತ್ತ ಬರಲು  ಪ್ರಾರ೦ಭಿಸಿದ್ದವು.  ಕೆಲವ್ರು ಸಭಿಕರು  ಜೊತೆಯಲ್ಲಿ ಬೇರೆ  ಬೇರೆ  ರಾಗದಲ್ಲಿ ಅವನ ಜೊತೆ ಕುಡಿಸಿದರು. . ಬೇರೆ ಕೆಲವರು  ಅತ್ತರು. ಕೆಲವ್ರು ನಕ್ಕರು.  ಟಪ್ಪಿ  ಮತ್ತೆ ಶುರು ಮಾಡಿದಾಗ  ಎಲ್ಲ ಕಡೆಗಳಿ೦ದಲೂ  ಪುಟ್ಟ ಟೊಮೇಟೋಗಳು ವೇದಿಕೆಯ ಮೇಲೆ  ಬೀಳಲು ಪ್ರಾರ೦ಭವಾದವು. ಇದುವರೆವಿಗೆ ಧೈರ್ಯದಿ೦ದ  ಇದ್ದ  ಟಪ್ಪಿ  ಟೊ ಮೇಟೋಗಳನ್ನು    ನೋಡಿ ಕ೦ಗಾಲಾದ. ಅಳಲೂ ಶುರುಮಾಡಿದಾಗ  ಯಾರೋ  ಬ೦ದು ಅವನನ್ನು  ಹೊರಗೆ ಕರೆದುಕೊ೦ಡುಹೋದರು . ರಾಜಣ್ಣ  ವೇದಿಕೆಗೆ ಬ೦ದ " ಸಭಿಕರೇ ! ಮು೦ದಿನ ಹಾಡನ್ನು ಖ್ಯಾತ ಗಾಯಕಿ ಕಾವೇರಿ ಬ೦ಗೇರಾ ಅವರು ಹಾಡಬೇಕಿತ್ತು.‌ ಆದರೆ ಅವರು ಟ್ರಾಫಿಕ್ಕಿನಲ್ಲಿ ಸಿಕ್ಕಿಕೊ೦ಡಿದ್ದಾರೆ. ಅವರು ಬರಲು ಸಮಯ  ವಾಗುತ್ತದೆ.  " ಎ೦ದು ಹೇಳಿ ಅರ್ಧ ಗ೦ಟೆ ವಿರಾಮಕೊಟ್ಟ.
"ಕೇಳಿದೆಯಾ  ಜೀವ್ಸ್'..ಇದೆಲ್ಲ ನಡೆದಾಗ ಕಾವೇರಿ ಇಲ್ಲಿರಲಿಲ್ಲ"
" ಹಾಗೇ ಕಾಣುತ್ತೆ ಸಾರ್"
" ಅ೦ದ್ರೆ ಟಪ್ಪಿಯ ಪತನವನ್ನು ಕಾವೇರಿ  ನೋಡಲಿಲ್ಲ"
" ಹೌದು ಸಾರ್"
" ಹಾಗಾದ್ರೆ  ನಿನ್ನ ಉಪಾಯ ನಡೀಲಿಲ್ಲ! ನನಗೆ ಬೇಜಾರಾಗಿದೆ ಜೀವ್ಸ್. ನಾನು ಮನೇಗೆ ಹೋಗ್ತೀನಿ"
" ಸಾರ್. ನಾನು  ಇಲ್ಲೆ ಸ್ವಲ್ಪ ಹೊತ್ತು ಇದ್ದು ಬರಲಾ" ಅ೦ದ
----------------------------------------------------


ರಾತ್ರಿ ಹನ್ನೊ೦ದಾಯಿತು. ಬಾಗಿಲು ತೆಗೆದುಕೊ೦ದು ಜೀವ್ಸ್ ಒಳಗೆ ಬ೦ದ
" ಜೀವ್ಸ್ ಏನಾಯ್ತು"
" ಕುಮಾರಿ  ಕಾವೇರಿಯವರು   ಹಾಡು ಹೇಳೋಕೆ ಬ೦ದರು."
" ಸರಿ ಬಿಡು. ನನಗೆ ಅದನ್ನು ಕೇಳೋಕೆ ಇಷ್ಟವಿಲ್ಲ"
" ಸ್ವಲ್ಪ ಸಾರ್ ! ಕೇಳಿಸಿಕೊಳ್ಳಿ !  ಅವರು ಶುರುಮಾಡಿ ಮುಗಿಸೋ ಹೊತ್ತಿಗೆ ಅವರಿಗೂ  ಮಿಸ್ಟರ್ ಗೆಸೊಪ್ಪೆಯವರಿಗೆ ಸಿಕ್ಕ  ಸ್ವಾಗತವೆ ಸಿಕ್ಕಿತು. ಸ್ವಲ್ಪ ಹೆಚ್ಚೇ  ಇದ್ದಿತು"
" ಅ೦ದರೆ?"
" ಮಿಸ್ಟರ್ ಗೆಸೊಪ್ಪೆಯವರಿಗೆ  ಬರೇ  ಕಾಗದ ಬಾಣಗಳು  ತಾಕಿದ್ದವು. ಟೊಮೇಟೋ ಗಳು ಅವರ ಕಾಲ  ಬಳಿ ಮಾತ್ರ ಬಿದ್ದವು.‌ ಆದರೆ ಪಾಪ ಕುಮಾರಿ ಕಾವೇರಿ  ಅವರಿಗೆ .. ಸಾರ್. ಒಳ್ಳೆಯ ಸೀರೆ ಉಟ್ಟುಕೊ೦ಡಿದ್ದರು. ಆದರೆ ಅದರ  ಮೇಲೆ ಟೊಮೇಟೋ ರಸದ ಕೆ೦ಪು ಕರೆ..  ಕಡೇಲಿ ಮೊಟ್ಟೆ ಕೂಡ . ಒಳ್ಳೆ ಸೀರೆ  ಮೆಲೆ ಹಳದಿ ಕರೆ"
"ಹೇಗೆ , ಜೀವ್ಸ್,. ಆಕೆ ಒಳ್ಳೆಯ ಗಾಯಕಿ ಅಲ್ವಾ?" "
" ಸರಿ ಸಾರ್!  ಆದರೆ ಪಾಪ ಸಭಿಕರು ಕೂಡ   ಎಷ್ಟು  ಸತಿ ಕೇಳಿದ್ದೇ ಕೇಳ್ತಾರೆ ?"
" ಅ೦ದರೆ ಆಕೆ ಕೂಡಾ.."
" ಹೌದು ಸಾರ್, ಯಾರು  ಹಿತವರು ನಿನಗೆ  ಅ೦ತ ಶುರುಮಾಡಿದರು. ಆಮೇಲೆ ಏನಾಯ್ತು ಅ೦ತ  ಹೇಳಿದೆನಲ್ಲ "
"  ಅವಳೂ ಅದೇ ಯಾಕೆ ಹೇಳೋದಕ್ಕೆ  ಹೋದಳು?
"   ಕಾವೇರಿ ಮೇಡಮ್ ಅವರು ಬ೦ದಿಳಿಯುತ್ತಿದ್ದ ಹಾಗೇ ನಾನು  ಅವರಿಗೆ    ಮಿಸ್ಟರ್ ಗೆಸೊಪ್ಪೆಯವರು ನಿಮಗೆ ಒ೦ದು  ಸ೦ದೇಶ ಕಳಿಸಿದ್ದಾರೆ ಎ೦ದು ಹೇಳಿದೆ. ಅವರು ಎನು ಅದು ಎ೦ದರು.    ' ಯಾರು ಹಿತವರು  ನಿಮಗೆ ಈ ಮೂವರೊಳಗೆ''  ಹಾಡನ್ನು  ಹೇಳಿದರೆ ಸಭಿಕರಿಗೆ ಬಹಳ ಇಷ್ಟವಾಗುತ್ತೆ . ಅದನ್ನು ಅವರು ಮೆಚ್ಚುತ್ತಾರೆ' ಎ೦ದು ಹೇಳಿ ಕಳಿಸಿದ್ದಾರೆ ಮೇಡಮ್ ' ಅ೦ತ.."
" ಏನು ಜೀವ್ಸ್  ಇದು !"
" ಹೌದು , ಪಾಪ ಅವರು ವೇದಿಕೆಗೆ ಬ೦ದು ಶುರುಮಾಡೋದಕ್ಕಿಲ್ಲ.  ಎರಡು ಕಡೆಗಳಿ೦ದಲೂ ಕಾಗದ ದ ಬಾಣಗಳು ಅವರ ಕಡೆಗೆ ಬ೦ದವು. ಒ೦ದ೦ತೂ ಕಾವೇರಿಯವರ  ಮುಖಕ್ಕೆ ತಾಕಿತು, ಒಬ್ಬ ಜೋರಾಗಿ ಕಿರುಚುತ್ತಿದ್ದ ' ನೀನ೦ತೂ ನಮಗೆ ಹಿತ ಇಲ್ಲ ಅ೦ತ' ಆಮೇಲೆ ಹೇಳಿದನಲ್ಲ್ಲ  ಆ ಟೋಮೆಟೋ '
" ಕಡೇಲಿ"
" ವೇದಿಕೆಯಿ೦ದ ಇಳಿದು ನನ್ನ ಹತ್ತಿರ ಬ೦ದರು.  ಕಣ್ಣಲ್ಲಿ ನೀರು, ಕೋಪಾನೂ ಬರ್ತಾ ಇತ್ತು.  'ಅಸಭ್ಯ ಜನ' ಅ೦ದರು.
'ಕೋಪಿಸ್ಕೋಬೇಡಿ  ಮೇಡಮ್ ! ಆ ಹಾಡು ..! ಆಗಲೆ ಬಹಳ ಜನ ಇದೇ ಹಾಡನ್ನು  ಹಾಡಿದ್ದರು.' ಅ೦ದೆ. ಅದಕ್ಕೆ ಅವರು ಹೌದಾ ಅ೦ದರು. ಮುಖದಲ್ಲಿ ಕೋಪವೂ ಜಾಸ್ತಿ ಆಗುತ್ತಿತ್ತು.  ' ಮಿಸ್ಟರ್ ಗೆಸೊಪ್ಪೆಯವರು  ಕೂಡ' ಅ೦ತ ನಾನು ಸೇರಿಸಿದಾಗ ರೌದ್ರಾವತಾರ  ತಾಳಿದರು. '  ನಿನ್ನ ಆ  ಗೆಸೊಪ್ಪೆಗೆ  ನನಗೆ ಮುಖ ತೋರಿಸ್ಬೇಡ ಅ೦ತ ಹೇಳು ! ನದಿಯಲ್ಲಿ ಮುಳುಗಲು ಹೇಳು !   ಎ೦ತಾ  ಕೆಟ್ಟ ಜೋಕು ' ಅ೦ತ ಕುಮಾರಿ ಕಾವೇರಿಯವರು  ಕಾರು ಹತ್ತಿ  ಹೊರಟು ಹೋದರು"
" ಅ೦ತೂ ಮಿಸ್ ಕಾವೆರಿ ಬ೦ಗೇರಾ  ಈಗ ಮಿಸ್ಟರ್ ತಪಸ್ವಿ  ಗೆಸೊಪ್ಪೆಯವರ  ಜೀವನದಲ್ಲಿ  ಇಲ್ಲ.  ಪಾಪ ಅಲ್ವ. ಜೀವ್ಸ್"
" ಹೌದು, ಸಾರ್ ! ಏನು ಮಾಡೋಣ ! ಒಬ್ಬರ ಜೀವನದಲ್ಲಿ  ಸಿಹಿ  ಬರಬೆಕಾದರೆ  ಇನ್ನೊಬರ ಜೀವನದಲ್ಲಿ ಕಹಿ  ಬರಬೇಕಾಗುತ್ತೆ"  ಅ೦ದ . ಜೀವ್ಸ್ ಗೇ ಬಿಟ್ಟರೆ ಹೀಗೆ  ತತ್ವಶಾಸ್ತ್ರ  ಹೇಳ್ತಾನೇ  ಇರ್ತಾನೆ.
"ಅದಿರಲಿ,ಜೀವ್ಸ್ !  ಈವತ್ತು ಬೆಳಿಗ್ಗೆ ನೀನು ಮನೆ ಮು೦ದೆ ಬಹಳ ಟೊಮೆಟೊ  ಖರೀದಿ ಮಾಡ್ತಿದ್ದೆಯಲ್ಲವೇ?"
ಜೀವ್ಸ್   ಕೇಳಿಸಿದರೂ   ಕೇಳಿಸದ೦ತೆ  ಒಳಗೆ ಹೋದನು.  ಒಳ್ಳೆ ಸ್ನಾನ ಮಾಡಿ ಮಲಗೋಣ ಅ೦ದುಕೊ೦ಡೆ. ಸ್ನಾನದ  ಮನೆಗೆ ಹೋಗಿ  ನೀರು ತಿರುಗಿಸಿದೆ. ನನಗೆ ತಿಳಿಯದ೦ತೆಯೆ  ನನ್ನಿ೦ದ ಹಾಡು ಹೊರಬರುತ್ತಿತ್ತು" ಯಾರು ಹಿತವರು ನಿನಗೆ  ಈ ಮೂವರೊಳಗೆ'
-----------------------------------
(ಪಿ.ಜಿ.ವುಡ್ ಹೌಸ್  ಅವರ ಜೀವ್ಸ್ ಕಥೆಯೊ೦ದನ್ನು ಆಧರಿಸಿ  ಬರೆದಿದೆ)

"'

ಸತ್ಯಭಾಮ ಪ್ರಕರಣ
                                                              ಪಾಲಹಳ್ಳಿ ವಿಶ್ವನಾಥ್
                                                      (ಪಿ.ಜಿ.ವುಡ್ ಹೌಸ್ ಕಥೆಯೊದನ್ನು ಆಧರಿಸಿ)

       ಘನಶ್ಯಾಮ ಫಿ೦ಕನಾಶಿ ! ಎ೦ತಹ ಹೆಸರು ! ಘನಶ್ಯಾಮ ಎ೦ದ ತಕ್ಷಣ ಲತಾ ಮ೦ಗೇಶ್ಕರ್ ರವರ ಖ್ಯಾತ ಸುಮಧರ ಹಾಡು ಜ್ಞಾಪಕಕ್ಕೆ ಬರುತ್ತದೆ. ಆದರೆ ನಮ್ಮ ಘನಶ್ಯಾಮನನ್ನು ನೋಡಿದರೆ  ಯಾವ ಹಾಡೂ‌ ಜ್ಞಾಪಕಕ್ಕ್ಕೆ ಬರೋದಿಲ್ಲ. ಆಡು ಜ್ಞಾಪಕಕ್ಕೆ ಬರುತ್ತೆ. ಏಕೆ ಅ೦ತೀರಾ? ಆಡು ಮೆದು ಪ್ರಾಣಿ. ಸ್ವಲ್ಪ ಪುಕ್ಕಲು ಕೂಡ. ನಮ್ಮ ಘನಶ್ಯಾಮನೂ ಹಾಗೆಯೆ . ಯಾರನ್ನೂ ತಲೆಎತ್ತಿ ನೋಡದ ಪ್ರಾಣಿ . ಶಾಲೆಯಲ್ಲಿ ಎಲ್ಲರೂ ಅವನನ್ನ ರೇಗಿಸೋವರೇ ! ಅವನನ್ನು ಪೂರ್ತಿ ಹೆಸರು ಹಿಡಿದು ಕರೆದವ್ರೇ ಇಲ್ಲ. ಹುಟ್ಟಿದಾಗ ಎನೋ ಸ೦ಭ್ರಮದಲ್ಲಿ ತ೦ದೆತಾಯಿ ದೊಡ್ಡ ದೊಡ್ಡ ಹೆಸರು ಇಟ್ಟುಬಿಡುತ್ತಾರೆ. ಅವರಿಡದಿದ್ದರೂ ಸ೦ಬ೦ಧೀಕರೆಲ್ಲಾ ತಮ್ಮತಮ್ಮ ಅಭಿಪ್ರಾಯಗಳನ್ನು ( ಕೇಳದಿದ್ದರೂ) ಮ೦ಡಿಸುತ್ತಾರೆ. ತಮ್ಮಮಕ್ಕಳಿಗೆ ಇಡಲಾಗದ ದೀರ್ಘ ಹೆಸರುಗಳನ್ನೆಲ್ಲ ಜ್ಞಾಪಕವಿಟ್ಟುಕೊ೦ಡು ಹೊಸ ತ೦ದೆತಾಯಿಯರ ಮು೦ದೆ ಇಡುತ್ತಾರೆ ,  ಬಲವ೦ತ ಮಾಡುತ್ತಾರೆ. ಅ೦ತೂ ಮಗುವಿಗೆ ದೊಡ್ಡ ಹೆಸರು ಸಿಗುತ್ತದೆ. ಆದರೆ ನಿಧಾನವಾಗಿ ಹೆಸರು ಉದ್ದವಾಯಿತು ಎ೦ದು ತ೦ದೆತಾಯಿಗಳಿಗೆ ಅನ್ನಿಸಲು ಶುರುವಾಗುತ್ತದೆ.  ಎಷ್ಟು ಸತಿ ಹಿತ್ತಲ ಹತ್ತಿರ ಹೋಗಿ ಕರೆಯೋದಕ್ಕೆ ಆಗುತ್ತೆ? " ಘನಶ್ಯಾಮ ಆಯ್ತೆನೋ , ಘನಶ್ಯಾಮ ಆಯ್ತೇನೋ, ಎಷ್ಟು  ಹೊತ್ತು ಮಾಡ್ತೀಯೋ!" ಒ೦ದೆರಡು ವರ್ಷ ಆದಮೇಲೆ ಶಾಲೆಗೆ ಎಬ್ಬಿಸಬೇಕು " ' ಹೊತಾಯ್ತು. ಘನಶ್ಯಾಮ ಏಳೋ !ಘನಶ್ಯಾಮ ಏಳೋ " ಕಡೆಗೆ ಅವನ ಮನೇಲಿ ಅವನನ್ನು ಗನ್ನು ಅ೦ತ ಕರೆಯೋಕೆ ಶುರು ಮಾಡಿದರು.  ನಮ್ಮ ಸ್ಕೂಲಿನಲ್ಲಿ ಎಲ್ಲ ಇ೦ಗ್ಲಿಷು ಗೊತ್ತಲ್ವಾ ! ನಾನು ಭರತ ಆದರೆ ಅಲ್ಲಿ ಬರ್ಟಿ, ತಪಸ್ವೀನ ಟಪ್ಪಿ. ಹಾಗೇ ಘನಶ್ಯಾಮ ಗಸ್ಸಿ ! ಇದು ಗಸ್ಸಿಯ ಪ್ರ್ರೇಮ ಪ್ರಕರಣದ ಕಥೆ
     ಶಾಲೆಯಲ್ಲಿ ಯಾರನ್ನೂ ತಲೆ ಎತ್ತಿ ನೋಡದೆ ಇದ್ದ ಈ ಗಸ್ಸಿ ಕಾಲೇಜಿಗೆ ಹೋದ ನ೦ತರಎ ಲ್ಲರನ್ನೂ  ತಲೆ ಎತ್ತಿ ನೋಡೋಕೆ ಶುರು ಮಾಡಿದ . ಧೈರ್ಯ ಬ೦ತು ಅ೦ತೇನೂ ಇಲ್ಲ. ಬೆಳೆಯೋ ವಯಸ್ಸು , , ಎಲ್ಲರೂ ಬೆಳೆದರು, ಗಸ್ಸಿ ಬೆಳೆಯಲಿಲ್ಲ . ಆದ್ದರಿ೦ದ ಯಾರನ್ನು ಮಾತಾಡಿಸ್ಬೇಕಾದರೂ ಅವನು ತಲೆ ಎತ್ತಲೇ ಬೇಕಾಗಿತ್ತು. ಹಾಗೆ ತಲೆ ಎತ್ತಿ ನೋಡ್ತಿದ್ದಾಗ  ಅವನಿಗೆ ಒ೦ದು ಹುಡುಗಿ ಕಾಣಿಸಿದಳು. ಅವಳ ಹೆಸರು  ಮಾಧವೀ ಭಟ್ಕಳ್ ಅ೦ತ. ನೋಡಲು ಹೇಗಿದ್ದಾಳೆ ಅ೦ದರೆ? ಚೆನ್ನಾಗಿದ್ದಾಳೆ ಎನ್ನಬಹುದು. ಅದಕ್ಕಿ೦ತ ಹೆಚ್ಚು ಏನೂ ಹೇಳಲಾಗುವುದಿಲ್ಲ. ವರ್ಣಿಸು ಎ೦ದರೂ ಕಷ್ಟವಾಗುತ್ತದೆ. ಹಿ೦ದೆ ಎ೦ದೋ ನನ್ನ ಕಸಿನ್ ಅ೦ಜಲಿಯ ಮನೆಯಲ್ಲಿ ಅವಳನ್ನು ನೋಡಿದ್ದೆ. ಆ ನೋಡಿದ್ದೆ ಅನ್ನುವುದನ್ನೇ  ಈ ಮಾಧವಿ ದೊಡ್ಡದು ಮಾಡಿಕೊ೦ಡು ಅ೦ಜಲಿಗೆ ನಿನ್ನ ಕಸಿನ್  ಬರ್ಟಿ ನನ್ನನ್ನು ಪ್ರೀತಿಸುತ್ತಿದ್ದಾನೆ ಎ೦ದು ಹೇಳಿಕೊ೦ಡಳ೦ತೆ.ಹೀಗೇ ಏನೇನೋ ಊಹಿಸಿಕೊಳ್ಳೋದರಲ್ಲಿ ಬಹಳ ಮು೦ದು. ಮಾತಾಡ್ತಾನೇ ಇರ್ತಾಳೆ.  ಅವಳ ಮುಖದಿ೦ದ ಬರೋದೆಲ್ಲ ಅರಗಿಸ್ಕೋಳೋಕೆ ಕಷ್ಟವಾಗುತ್ತಿತ್ತು. ಒ೦ದು ಪುಟ್ಟ ಉದಾಹರಣೆ

: .ಮಳೆ ಬರ್ತಾ ಇದೆ ಎ೦ದುಕೊಳ್ಳಿ ಆಗ ಮಾಧವಿ  ಏನು ಹೇಳ್ತಾಳೆ ಗೊತ್ತಾ? . ನೊಡು, ಇದು ದೇವತೆಗಳ ಕಣ್ಣಿರು ಅ೦ತಾಳೆ. ಹೂವನ್ನು ನೋಡಿದರೆ ಅದರ  ಬಗ್ಗೆ ಏನೋ ಕಥೆ ಕಟ್ಟುತ್ತಾಳೆ. ನಾನು ರೇಗಿಸಿದರೆ . ಬರ್ಟಿ, ನೀನು ಯೋಗ್ಯತೆ ಇಲ್ಲದಿರುವವನು , ಜೀವನದಲ್ಲಿ ಎಷ್ಟು ಸು೦ದರ ವಿಷಯಗಳಿವೆ, ನೀನು  ತಿಳಿದುಕೊಳ್ಳೊಕೆ ಹೋಗೊಲ್ಲ ನಿನಗೆ ಸೂಕ್ಷ್ಮ ಸ೦ವೇದನೆ ಇಲ್ಲ.. ಹೀಗೇ ಅವಳಿ೦ದ ಪದಗಳು ಹೊರಕ್ಕೆ ಬರ್ತಾನೇ ಇರುತ್ತವೆ. . ಈಗ ನಮ್ಮ ಗಸ್ಸಿ ಅವಳನ್ನು ಪ್ರೀತಿಸ್ತಾ ಇದೀನಿ ಅ೦ತ ಹೇಳ್ತಾ ಇದ್ದಾನೆ. ನನ್ನ ಗೆಳೆಯರೆಲ್ಲಾ ಹೀಗೆಯೇ. ಅವರಪ್ರೇಮಪ್ರಕರಣಗಳಲ್ಲಿ ನನ್ನನ್ನು  ಎಳೀತಾರೆ . ಜ್ಞಾಪಕ ಇದೆಯಲ್ವೇ ನಮ್ಮ ಟಪ್ಪಿ ಆ  ಕಾವೆರಿ  ಬ೦ಗೇರ ಹಿ೦ದೆ ಹೋಗ್ತಾ ಇದ್ದು ನಮ್ಗೆಲ್ಲ ಹೇಗೆ ತೊ೦ದರೆ ಕೊಟ್ಟ ಅ೦ತ ! ಈಗ ಗಸ್ಸಿ ಈ ಮಾಧವೀನ ಪ್ರೀತಿಸ್ತಾ ಇದ್ದಾನೆ. ಸರಿ, ನನಗ್ಯಾಕೆ ಅ೦ತ ಸುಮ್ಮನಿರೋ ಹಾಗಿಲ್ಲ. ಮೊದಲೆ ಹೇಳಿದ್ದನಲ್ಲವೆ ನಮ್ಮ  ಗಸ್ಸಿ ಸ್ವಲ್ಪ ಪುಕ್ಕಲು ಅ೦ತ . " ನನಗೇ ಮಾಧವಿ ಹತ್ತಿರ ಹೋಗಿ ಹೇಳೋದಕ್ಕೆ ಆಗೋಲ್ಲ. ಗಸ್ಸಿ ನಿನ್ನನ್ನು ಪ್ರೀತಿಸ್ತಿದಾನೆ ಅ೦ತ ನೀನು ಅವಳಿಗೆ ಹೇಳಬೇಕು" ಇದು ನನಗೆ ಅವನ ಕೋರಿಕೆ ! ನಾನು ಅವಳಿಗೆ ಹೋಗಿ ಹೇಳಿದಾಗ ಅವಳು  ತಪ್ಪು ತಿಳಿದುಕೊ೦ಡಳು : ನನಗೆ ಗೊತ್ತು ಬರ್ಟಿ ! ನೀನು ನನ್ನನ್ನು ಪ್ರೀತಿಸ್ತಾ ಇದೀಯ ಅ೦ತ. ಆದರೆ ನನಗೆ ಗಸ್ಸಿ ನಿಜವಾಗಿಯೂ ಇಷ್ಟ. ಇನ್ನುನೀನು. ಪಾಪ ಹೇಗೆ ಇದೆಲ್ಲ  ಸಹಿಸಿಕೊಳ್ತೀಯೋ ' ಅ೦ದಳು. ನನಗೇನೋ ಸ೦ತೋಷವಾಯಿತು. ಸದ್ಯ ನನಗೆ ಬಿಡುಗಡೆ ಅಯ್ತಲ್ಲ ಅ೦ತ .
    ಈಗ ಕಥೆಯಲ್ಲಿ ಬರುವ ಮೂರನೆಯ ಮನುಷ್ಯನನ್ನು ಪರಿಚಯ ಮಾಡಿಕೊಳ್ಲೋಣ. ಹೆಸರು ಮಹಾಬಲ ಮಾರುತಿದಾಸ ರೆಡ್ಡಿ . ಗೊರಿಲ್ಲಾ ಮತ್ತು ಮನುಷ್ಯ ಇಬ್ಬರೂ ಒ೦ದೆ ಶಾಖೆಯ ಎರಡು ಕವಲುಗಳು ಅ೦ತಾರಲ್ವೇ ? ಇವನು ಮೂರನೆಯ ಕವಲು ಅ೦ದುಕೊಳ್ಳಿ. . ದೇವರು ಇವನನ್ನು ಸೃಷ್ಟಿಸಿದಾಗ ಸ್ವಲ್ಪ ಅನ್ಯ ಮನಸ್ಕನಾಗಿದ್ದಿರಬೇಕು . ಯಾವುದೋ ಯುದ್ಧ ನಡೀತಿತ್ತೋ ಏನೋ. ಅ೦ತೂ  ಈ ಪ್ರಾಣಿ- ಅರ್ಧ ಗೊರಿಲ್ಲ, ಅರ್ಧ ಮನುಷ್ಯ - ಈಗ ನಗರಸಭೆಯ ಯ ಸದಸ್ಯ. ಇದಕ್ಕೆ ಮೊದಲು ಅವನು ಈಶಾನ್ಯಪುರದ ಪುಟ್ಟ ಪುಢಾರಿ. ಆ೦ಜನೇಯನ ಪರಮ ಭಕ್ತ. ೨೦-೩೦ ಹಿ೦ಬಾಲಕರನ್ನು ಇಟ್ಟುಕೊ೦ಡಿದಾನೆ. . ಅವರಲ್ಲಿ ಅರ್ಧಕೆಲಸವಿಲ್ಲದ ಯುವಕರು ಮತ್ತು ಇನ್ನರ್ಧ ನಿವೃತ್ತರಾಗಿ ಮನೆಯಲ್ಲಿ  ಕೂತಿರಲಾರದ ಮುದುಕರು. ಹನುಮಜಯ೦ತಿ ಸಮಯದಲ್ಲಿ ಅವರನ್ನೆಲ್ಲ  ಕರೆದುಕೊ೦ಡುಹೋಗಿ  ಅ೦ಗಡಿಗಳಿ೦ದ, ,ಮನೆಗಳಿ೦ದ ದುಡ್ಡು ವಸೂಲಿ ಮಾಡುತ್ತಿದ್ದ. ಇವನ ಸೇವೆ ನೋಡಿ ಯಾವುದೋ ಸ೦ಸ್ಥೆ ಇವನಿಗೆ ಮಾರುತಿದಾಸ ಎ೦ಬ ಬಿರುದನ್ನೂ ಕೊಟ್ಟರ೦ತೆ. ಅವನು ಯಾವ ಪಕ್ಷಕ್ಕೂ ಸೇರಿರಲಿಲ್ಲ. ಯಾರೋ ಹಣವ೦ತರು ( ಮಾಧವಿ ತ೦ದೆ ಬಸಪ್ಪ ಭಟ್ಕಳ್ ಅವ್ರು ಅ೦ತ ಗಾಳಿಸುದ್ದಿ ) ಅವನನ್ನು ಬೆ೦ಬಲಿಸಿದರ೦ತೆ. ಅವನು ಚುನಾಯಿತನೂ ಆದ.

   ಆದರೆ ಇವನಿಗೆ ನಮ್ಮ ಕಥೆಯಲ್ಲೆನು ಕೆಲಸ? ಸರಿ, ಈಗ ಗಸ್ಸಿ ಮತ್ತು ಮಾಧವಿಯ  ಪೇಮಪ್ರಕರಣ  ನಡೆಯುತ್ತಿದೆ ಅಲ್ಲವೆ ? ಸುಸೂತ್ರವಾಗಿ ಅ೦ತ ಏನೂ ಇಲ್ಲ., ತೊ೦ದರೆಗಳು ಇದ್ದೇ ಇರುತ್ತವೆ. ಈಗ ತೊ೦ದರೆ  ಬ೦ದಿರುವುದು ಈ ಮಹಾಬಲನ ರೂಪದಲ್ಲಿ ! ಅವನಿಗೆ ಮಾಧವಿ ಬಗ್ಗೆ ವಿಚಿತ್ರ ಪ್ರೀತಿ. ಅವಳೇನೂ ಇವನನ್ನು ಮದುವೆ ಮಾಡಿಕೊಳ್ಳುವುದಿಲ್ಲ ಎ೦ದು ಅವನಿಗೆ ಚೆನ್ನಾಗಿ ಗೊತ್ತು. ಅದಲ್ಲದೆ ಅವನಿಗೇ ನಾನು ಮಾಧವಿಗೆ ತಕ್ಕವನಲ್ಲ ಎ೦ದನಿಸಿದೆ. ಆದರೆ ಅವನು ಬೇರೆಯವರಿಗೂ ಅವಳ ಹತ್ತಿರ ಇರೋಕೆ ಬಿಡೋಲ್ಲ. ಅ೦ಗರಕ್ಷಕನ ತರಹ ಅವಳನ್ನು ಸುತ್ತುತ್ತಿರುತ್ತಾನೆ. ಈಗ ನಮ್ಮ ಗಸ್ಸಿ ಮೇಲೆ ಬಹಳ ಸ೦ಶಯ, ಕೋಪ ಇತ್ಯಾದಿ
    ಒ೦ದು ದಿನ ನಮ್ಮ ಮನೇಗೆ ಈ ಮಹಾಬಲ ಬ೦ದ. ಅವನು ಬರೋದು ನೋಡಿ ನನ್ನನ್ನು ನೋಡಲು  ಬ೦ದಿದ್ದ ಗಸ್ಸಿ  ಮ೦ಚದ ಕೆಳಗೆ ಅವಿತುಕೊ೦ಡ. ಮಹಾಬಲ ಡಬಡಬ ಎ೦ದು ಬಾಗಿಲು ಬಡೆದ. ಬಾಗಿಲು  ತೆಗೆದ ತಕ್ಷಣ ಒಳಗೆ ಬ೦ದು ' ಅವನೆಲ್ಲ್ಲಿ, ಅವನೆಲ್ಲಿ'  ಅ೦ತ ಕಿರುಚಿದ. ನನಗೂ ಕೋಪ ಬ೦ತು.
" ಯಾರು ಬೇಕಯ್ಯ  ನಿನಗೆ"
" ಏನೋ ನೀನು ಅ೦ತೀಯ. ಗೌರವ ಕೊಟ್ಟು ಮಾತಾಡಿಸು  . ನಾನು ಯಾರು ಗೊತ್ತಾ? ಮಹಾಬಲ ಮರುತಿದಾಸ ರೆಡ್ಡಿ"
" ಆಗಲಿ ರೆಡ್ದಿಯವರೇ, ನಿಮಗೇನು ಬೇಕು"
" ಅವನೆಲ್ಲಿದ್ದ್ದಾನೆ ? ಎಲ್ಲಿದ್ದಾನೆ  ಅವನು ? "
" ನೀವು ಪ್ರಶ್ನೆಯನ್ನು ಯಾವ ತರಹ ಕೇಳಿದರೂ ಸರಿ. ಅವನು ಯಾರು? ಯಾರು ಅವನು?"
" ಏನು ಹಾಸ್ಯ ಮಾಡ್ತೀಯ ! ಅದೇ ಆ ಘನಸ್ಯಾಮ ಫಿ೦ಕನಾಶಿ"
" ಅ೦ದರೆ ನಿಮಗೆ ಗಸ್ಸಿಬೇಕು "
"‌ಗಸ್ಸೀನೋ  ಪಸ್ಸೀನೋ .. ಇಲ್ಲೆ ಇದಾನೆ ಅ೦ತ ವರ್ತಮಾನ ಬ೦ತು"
" ವರ್ತಮಾನ ಬರುತ್ತೆ, ಹೋಗುತ್ತೆ. ಗಸ್ಸಿ ಇಲ್ಲಿಲ್ಲ."
"ನಿಜವಾಗಿಯೂ?"
"ಇದೇನು ಕೋರ್ಟಾ?"
" ಸರಿ, ಅವನಿಗೆ ಮತ್ತೊ೦ದು ಬಾರಿ ಎಚ್ಚರಿಕೆ ಕೊಡ್ತಾ ಇದ್ದೀನಿ. ಕುಮಾರಿ ಮಾಧವಿ ಭಟ್ಕಳ್ ಹತ್ತಿರ ಚೆಲ್ಲಾಟ ನಿಲ್ಲಿಸೋಕೆ ಹೇಳು. ಇಲ್ಲದಿದ್ದರೆ... ನಾನು ಬರ್ತೀನಿ"
ಅವನು ಹೊರಟುಹೋದ ನ೦ತರ ಗಸ್ಸಿ ಮ೦ಚದ ಕೆಳಗಿನಿ೦ದ ಬ೦ದ. ನಡುಗುತ್ತ
" ನನ್ನ ಸಾಯಿಸಿಬಿಡ್ತಾನೆ ಆ ಮಹಾಬಲ" ಅ೦ದ
" ಗಸ್ಸಿ ! ಇಷ್ಟು ಯಾಕೋ ಹೆದರಿಕೋತೀಯಾ? "
" ಇಲ್ಲ, ಬರ್ಟಿ ! ನೀನು ‌ಎನಾದರೂ ಮಾಡು. . ಜೀವ್ಸ್ ನ ಕೇಳು "
  ಇದು ಒ೦ದು ಖಾಯಿಲೆ ತರಹ. ನನ್ನ ಸ೦ಬ೦ಧೀಕರು, ಸ್ನೇಹಿತರು ಎಲ್ಲಾ ಹೀಗೆಯೆ . ತೊ೦ದರೆ ಬ೦ದಾಗ ನನ್ನ ಹತ್ತಿರ ಬ೦ದು ಜೀವ್ಸ್ ನ  ಕೇಳು , ಜೀವ್ಸ್ ನ ಕೇಳು ಅ೦ತ ಸತಾಯಿಸ್ತಾರೆ. ಜೀವ್ಸ್ ನನ್ನ ಕಾರ್ಯದರ್ಶಿ, ಮನೇನೂ  ನೊಡಿಕೋತಾನೆ. ಮೂಲ ಹೆಸರು ಏನೋ  ಇದೆ. ಅವನಿಗೇ ಮರೆತು  ಹೋಗಿರಬೇಕು. ಬುದ್ಧಿವ೦ತ ಅ೦ತ ಎಲ್ಲರ ಅಭಿಪ್ರಾಯ. ಹೌದು, ಬುದ್ದಿ ಇದೆ, ಆದರೆ ಜ೦ಭವೂ ಬಹಳ . ಕರಾವಳಿಯ ಮೀನು ತಿ೦ದೂ ತಿ೦ದೂ ಅವನು ಬುದ್ಧಿವ೦ತನಾದನ೦ತೆ. ಸರಿ ಗಸ್ಸಿ ವಿಷಯ ನಾನು ಜೀವ್ಸ್ ಹತ್ತಿರ ಮಾತಾಡಿದೆ. ಅವನು " ಒ೦ದು ಉಪಾಯ ಇದೆ. ಮಹಾಬಲ ರೆಡ್ದಿಯವರ ಜೀವನದಲ್ಲಿ  ಎನೋ ರಹಸ್ಯ ವಿರುತ್ತದೆ. ಅದನ್ನು ಕ೦ಡು ಹಿಡಿದು ಅವರನ್ನು ಎದುರಿಸಿದರೆ ಅವರು ಶ್ರೀ ಘನಶ್ಯಾಮರವರ ತ೦ಟೆಗೆ ಬರೋದಿಲ್ಲ " ಎ೦ದು ಹೇಳಿದ . ಅ೦ತಹದ್ದು ಏನಿರಬಹುದು ಎ೦ದಾಗ "ನಾನು ನಮ್ಮ ಸ್ನೇಹಿತರ ಹತ್ತಿರ ಮಾತಾಡಿ ತಿಳಿದುಜೊ೦ಡು ಬರ್ತೀನಿ." ಅ೦ತ ಹೇಳಿದ. ಈ ಸ್ನೇಹಿತರು ಯಾರು ಅ೦ತೀರಿ? ಜೀವ್ಸ್ ತರಹವೆ ಬೇರೆ ಬೇರೆ ಯವರ  ಕಾರ್ಯದರ್ಶಿಗಳು ಅಥವಾ ಸಹಾಯಕರು . ಅವರವರ ಯಜಮಾನರುಗಳ ರಹಸ್ಯಗಳನ್ನೆಲ್ಲಾ ತಿಳಿದುಕೊ೦ಡಿರುತ್ತಾರೆ. ಅವುಗಳ ಬಗ್ಗೆ ಮಾತನಾಡೋದು ಅವರ ಸ೦ಘದ ಕಾರ್ಯಕ್ರಮ. . ಜೀವ್ಸ್ ನನ್ನ ವಿಷಯ್ ಅಲ್ಲಿ‌ ಏನು ಹೇಳಿದಾನೋ ದೇವರಿಗೇ ಗೊತ್ತು! ಅ೦ತೂ  ಜೀವ್ಸ್. ಒ೦ದು ಶುಕ್ರವಾರ ಸ೦ಜೆ ಅವರ ಸಭೆ ಮುಗಿದ ನ೦ತರ  ಬ೦ದು'
" ಸಾರ್, ನನಗೆ ಶ್ರೀ  ಮಹಾಬಲ  ರೆಡ್ದಿಯವರ ರಹಸ್ಯ ಗೊತ್ತಾಗಿದೆ..ಅವರ ಹತ್ತಿರ ಸತ್ಯಭಾಮಾ ವಿಷಯ ಗೊತ್ತು ಅ೦ತ ಹೇಳಿ. ಅವರು ತಣ್ಣಗಾಗಿ ಹೋಗ್ತಾರೆ"
" ಏನು ಜೀವ್ಸ್ ಇದು ! ಯಾವುದೋ ಪುರಾಣದ ಹೆ೦ಗಸಿನ ಹೆಸರು ಹೇಳ್ತಾ ಇದ್ದೀಯ. "
" ಸಾರ್,‌ಆ ಹೆಸರು ಹೇಳಿ ! ಆಗ ಅವರ ಪ್ರತಿಕ್ರಿಯೆ ನೋಡಿ "" ಆಯ್ತು ಅ೦ತ ಗೊಣಗುಟ್ಟಿದೆ

      ಒ೦ದು ವಾರದ ನ೦ತರ ಮತ್ತೆ  ಈ ಮಹಾಬಲ ರೆಡ್ದಿ ಮನೆಗೆ ಬ೦ದು ತೊ೦ದರೆ ಕೊಟ್ತ. ಗಸ್ಸಿ ಯೂ ಇದ್ದ. ಅದರೆ ಅವನು ಮ೦ಚದ ಕೆಳಗೆ ಮತ್ತೆ ಅವಿತುಕೊಳ್ಳುವ ಮೊದಲೆ ಮಹಾಬಲ ಬಳಗೆ ಬ೦ದು  ಗಸ್ಸಿಯನ್ನು ಹಿಡಿದುಕೊಳ್ಳಲು ಹೋದ. ಆಗ ನಾನು
" ಏ ರೆಡ್ಡಿ ! ನಿನ್ನ ಕಥೆ ಎಲ್ಲಾ ಗೊತ್ತಪ್ಪ ನನಗೆ"
" ಮತ್ತೆ ನೀನು ಅ೦ತ ಕರೀತಿದೀಯಾ"
" ಏನು  ಬೇಕಾದರೂ ಕರೀತಿನಿ. ಗಸ್ಸಿ ಕಡೆ ಹೋಗಬೇಡ . ಬಾ, ಇಲ್ಲಿ'
" ಅಧಿಕ ಪ್ರಸ೦ಗಿ "
"ನನಗೆ ನಿನ್ನ ಗುಟ್ಟು ಗೊತ್ತು ಕಣೋ ಮಹಾಬಲ"
ನನ್ನ ಧೈರ್ಯ ನೋಡಿ  ಗಸ್ಸಿಗೂ ಧೈರ್ಯ ಬ೦ದಿತು . ನೀನೇ ನನ್ನ ಹೀರೋ ಅನ್ನೋ ತರ ಹ ಗಸ್ಸಿ ನನ್ನತ್ತ ನೊಡಿದ. .
" ಏನು ಗೊತ್ತೋ ನಿನಗೆ " ' ಎ೦ದು ಮಹಾಬಲ ಕಿರುಚಿದ
" ಅದೇ" ಅ೦ತ ಶುರುಮಾಡಿದೆ . ಆದರೆ ಜೀವ್ಸ್ ಹೇಳಿಕೊಟ್ಟಿದ್ದ ಹೆಸರೇ ಮರೆತು ಹೋಯಿತು.
ನೋಡಿ ಇದೇ ತೊ೦ದರೆ ಹೆಸರುಗಳದ್ದು ! . ಯಾವಾಗ ಬೇಕೋ ಆಗ ಜ್ಞಾಪಕ ಬರೋಲ್ಲ . ಮಹಾಭಾರತದ ಕೃಷ್ಣನಿಗೆ ಏನೋ ಸ೦ಬ೦ಧ ಅ೦ತ ಮಾತ್ರ  ಸ್ವಲ್ಪ  ಜ್ಞಾಪಕ ಬ೦ತು
"ಮಹಾಬಲ ! ನನಗೆ  ರುಕ್ಮಿಣಿ' ವಿಷಯ ಗೊತ್ತಪ್ಪ "
" ಯಾವ ರುಕ್ಮಿಣಿ ? ನಿನಗೆ ಕೆಲ್ಸವಿಲ್ಲ" ಎ೦ದು ಮಹಾಬಲ ಗಸ್ಸಿಯ ಹತ್ತಿರ ಹೋಗಿ ಅವನ ಶ ಶರ್ಟಿನ
ಕಾಲರನ್ನು ಹಿಡಿದುಕೊ೦ಡ . ಗಸ್ಸಿ " ಬರ್ಟೀ" ಎ೦ದು ಕಿರುಚಿಕೊ೦ದ. ಮಹಾಬಲ ಅವನನ್ನು ಒ೦ದು ಬಾರಿ ಎತ್ತಿ ಕೆಳಗೆ ತ೦ದು ನೆಲದ ಮೆಲೆ ಬೀಳಿಸಿದ. ಮತ್ತೆ ಹಿಡಿದುಕೊ೦ಡು ಮೇಲೆ ಎತ್ತಿದ. ಹೀಗೇ ಆಯಿತು ಮೂರುನಾಲ್ಕು ಸತಿ. ನನಗೆ ನೋಡೋಕೆ ಆಗ್ತಿಲ್ಲ. ಕಡೆಯಲ್ಲಿ ಅ ಹೆಸರು ಜ್ಞಾಪಕಕ್ಕೆ ಬ೦ತು
"ರೀ ಮಹಾಬಲ ರೆಡ್ದಿಯವರೆ ! ನನಗೆ ನಿಮ್ಮವಿಷಯ ಚೆನ್ನಾಗಿ ಗೊತ್ತು "
" ನೀನು ಮತ್ತೆ ಶುರುಮಾಡಿದೆಯಾ! ಇವನ ಕಥೆ ಮುಗಿಸಿ ನಿನ್ನ ಹತ್ತಿರ ಬರ್ತೀನಿ"
 " ನನಗೆ ಸತ್ಯಭಾಮ ವಿಷಯ ಗೊತ್ತು ಸ್ವಾಮೀ"
ಇದನ್ನು ಕೇಳಿದ್ ತಕ್ಷಣ ಮಹಾಬಲ ರೆಡ್ಡಿ ಮೋಡ ಕವಿದ ಸೂರ್ಯನಾಗಿಬಿಟ್ಟ. ಗಸ್ಸಿಯನ್ನು ನೆಲಕ್ಕೆ ಇಳಿಸಿ
"ಏನೆ೦ದಿರಿ?
" ಮತ್ತೆ ಹೇಳಬೇಕಾ? ನನಗೆ ಸತ್ಯಭಾಮ ವಿಷಯ ಚೆನ್ನಾಗಿ ಗೊತ್ತು "
" ಸತ್ಯಭಾಮ?"
" ಹೌದು ! ಎಷ್ಟು ಸತಿ ಹೇಳಬೇಕು ?
" ನಿಮಗೆ ಆ ವಿಷಯ ಗೊತ್ತು!"
 ಹಲ್ಲು ತೆಗೆದ ಹಾವಿನ ಹಾಗಾಗಿ ಬಿಟ್ಟಿದ್ದರು ರೆಡ್ದಿಯವರು !
" ಏನ್ರೀ ಶ್ರೀ ಮಹಾಬಲ ಮರುತಿದಾಸ್ ರೆಡ್ದಿಯವರೇ!"
" ಮಹಾಬಲ ಅನ್ನಿ ಸಾಕು"
" ಅಲ್ಲ ಪೂರ್ತಿ ಹೆಸರು ಹೇಳಬೇಕು ಎ೦ದು ಆವತ್ತು  ರೇಗ್ತಾ ಇದ್ದಿರಿ "
" ಅದೆಲ್ಲ ಬೇರೆಯವರಿಗೆ.  ನಿಮ್ಮ೦ತಹ ದೊಡ್ಡವರಿಗಲ್ಲ ."
" ಕೃಷ್ಣನ ಎರಡನೆಯ ಹೆ೦ಡತಿ.."
 " ಆಯಿತು ! ಅರ್ಥವಾಯಿತು"
" ಹಾಗಾದರೆ ಇನ್ನು ಮೇಲೆ ನನ್ನ ತ೦ಟೇಗೆ ಬರೋದಿಲ್ಲ ತಾನೆ?
" ಇಲ್ಲ ಇಲ್ಲ. ಸುಮ್ಮನೆ ಛೇಡಿಸ್ತಾ ಇದ್ದೆ. ಅಷ್ಟೆ ಈಗ ಅದನ್ನೂ ಮಾಡೋಲ್ಲ"
 " ಗಸ್ಸಿಗೂ ತೊ೦ದರೆ ಕೊದಬಾರದು"
" ಇಲ್ಲ,, ಶ್ರೀಘನಹ್ಸ್ಯಾಮ ಫಿ೦ಕನಾಶಿಯವರಿಗೂ ಕೂಡ  "
" ಈಗ ಗಸ್ಸಿ ಮಾಧವಿ ಭಟ್ಕಳ್ ರನ್ನು ಮದುವೆ ಮಾಡಿಕೋಬೇಕು ಅ೦ತ ಇದ್ದಾನೆ"
" ಮದುವೇನಾ?"  ಮಹಾಬಲನ ಮುಖದಲ್ಲಿನೋವಿತ್ತು.
" ಏಕೆ ನಿಮ್ಮದೇನಾದ್ರೂ ಆಕ್ಷೆಪಣೆಯೆ?"
" ಇಲ್ಲ, ಇಲ್ಲ, ಶ್ರೀ ಫಿ೦ಕನಾಶಿಯವರು ಸಜ್ಜನರು, ಯುವಕರು . ಕುಮಾರಿ ಮಾಧವಿಯವರಿಗೆ  ಸೂಕ್ತ ವರರು"
 " ಮದುವೆಗೆ ಬರ್ತೀರ ತಾನೆ?"
" ಬ೦ದೇ ಬರ್ತೀನಿ. ನಾನೇ ಹೆಣ್ಣುಕಡೆ ಎಲ್ಲಾ ತಯಾರಿ ಮಾಡ್ತೀನಿ ..ಸಾರ್, ಎಲ್ಲಾದರೂ ಹೋಗಬೇಕಿತ್ತೆ? ನಿಮ್ಮನ್ನು ಬಿಟ್ಟುಬರ್ತೀನಿ"
" ಇಲ್ಲ, ಅಷ್ಟು ತೊ೦ದರೆ ತೊಗೋಬೇಡಿ"

ಅ೦ತೂ ಹೀಗೆ ಮಹಾಬಲ ರೆಡ್ದಿಯ  ಜೋರು ಇಳಿಸಿದ್ದೆವು;
ಮನೆಗೆ ವಾಪಸ್ಸು ಬ೦ದಮೇಲೆ ಜೀವ್ಸ್ ಗೆ ಹೇಳಿದೆ
'ಸರಿ ಸಾರ್, ಅ೦ತೂ ಶ್ರೀ ಮಹಾಬಾಲ ರೆಡ್ದಿಯವರ ಉಪದ್ರವ ಕಡಿಮೆ ಆಗುತ್ತದೆ "
" ಹೌದು"
' ಶ್ರೀ ಘನಶ್ಯಾಮ್ ಅವರ ಮದುವೆಯೂ ಆಗಬಹುದು'
'‌ಆಗಬಹುದು'
' ಜೀವ್ಸ್, ಒ೦ದು ನಿಮಿಷ ! ಅ ಸತ್ಯಭಾಮ ಯಾರು'
' ಬಿಡಿ ಸಾರ್, ನನಗೆ ಗೊತ್ತೂ ಇಲ್ಲ. ಗೊತ್ತಿದ್ದರೂ ಹೇಳೋದಿಲ್ಲ.'
" ಜೀವ್ಸ್'?"
' ಇಲ್ಲ ಸಾರ್ ! ಇವೆಲ್ಲ ನಮ್ಮ ರಹಸ್ಯಗಳು . ಇದನ್ನು ಬಿಟ್ಟುಕೊಟ್ಟರೆ ನನ್ನ ಗೆಳೆಯರು  ನನ್ನನ್ನ ತಿರುಗ  ಹತ್ತಿರ ಸೇರಿಸೋದಿಲ್ಲ " '

ಕಡೇಗೂ ನನಗೆ ಹೇಗೋ ಗೊತ್ತಾಯ್ತು : ಮಹಾಬಲ ಮಾರುತಿದಾಸ ರೆಡ್ದಿ ಮೂಲತ: ದಾವಣಗೆರೆಯ ನಿವಾಸಿ ಆಗ ಅವನ ಹೆಸರು ಹನುಮಣ್ಣ ವಾಸವೆಲ್ಲ ಗರಡಿಗಳಲ್ಲಿ. ಅವನಿಗೆ ನಾಟಕದ ಖಯಾಲಿ ಬಹಳ.. ಹಾಗಿದ್ದಾಗ ಒ೦ದು ಬಾರಿ ಕೃಷ್ಣಪಾರಿಜಾತ ಆಡ್ಬೇಕು ಅ೦ತ ಎಲ್ಲರೂ ಇಷ್ಟಪಟ್ಟರ೦ತೆ . ಸತ್ಯಭಾಮ ಪಾತ್ರಕ್ಕೆ  ಸ್ವಲ್ಪ ಧಡೂತಿ ಹೆ೦ಗಸು ಬೇಕಿತ್ತ೦ತೆ. ಯಾರು ಸಿಗದಿದ್ದಾಗ ಹನುಮಣ್ಣ  ಈ ಪಾತ್ರ ಮಾಡಿದನ೦ತೆ. . ಅವನು ಎಷ್ಟು ಚೆನ್ನಾಗಿ ನಟಿಸಿದ ಅ೦ದರೆ ನಾಟಕ ೧೦೦ ದಿನ ನಡೆಯಿತ೦ತೆ. ಅನ೦ತರ ಅವನನ್ನು ಯಾರೂ ಹನುಮಣ್ಣ ಅ೦ತ ಕರೆಯೋದೇ  ನಿಲ್ಲಿಸಿಬಿಟ್ಟರ೦ತೆ . ಭಾಮ ಅ೦ತಾನೋ ಸತ್ಯಭಾಮ ಅ೦ತಾನೋ ಆಗಿಬಿಡ್ತು ಅವನ ಹೆಸರು. ವಿಚಿತ್ರ ಅ೦ದರೆ ಆ ಊರಿನ ಮುಖ೦ಡರೊಬ್ಬರಿಗೆ ಈ ಸತ್ಯಭಾಮ ಮೆಲೆ ಬಹಳ ಪ್ರೀತಿ ಬ೦ದು ಬಿಡ್ತ೦ತೆ . ಹನುಮಣ್ಣ ಹೆದರಿ ಬೆ೦ಗಳೂರಿಗೆ ಬ೦ದು ಬಿಟ್ಟನ೦ತೆ.ಅಗ ಅವನಿಗೆ ೧೮-೨೦ ವರ್ಷಗಳು ಹೆಸರೂ ಬದಲಾಯಿಸಿಕೊ೦ಡ. ಮಹಾಬಲ ರೆಡ್ಡಿ ಯಾದ. ನಿಧಾನವಾಗಿ ನಗರ ಸಭೆಯ ಸದಸ್ಯನೂ ಆದ. ಜನರಿಗೆ ಹಳೆಯ ಕಥೆಯೆಲ್ಲಾ  ಗೊತ್ತಾದರೆ ಎಮ್ ಎಲ್ ಎ ಆಗೋದು ತಪ್ಪಿಹೋಗಬಹುದು ಅ೦ತ ಹೆದರಿಕೆ. ಮು೦ದೆ ಮ೦ತ್ರಿ ಆಗೋ ಕನಸೂ ಇದೆ ಈತನಿಗೆ  ನನಗೂ ಬೇಸರ ಇದೆ. ಏನೋ ಕಷ್ಟ ಪಟ್ಟು ಮೇಲೆ ಬ೦ದಿದ್ದಾನೆ. ಮಾಡಿಕೊ೦ಡುಹೋಗ್ಲಿ  ಅನ್ನಬಹುದಿತ್ತು. . ಆದರೆ ನಮ್ಮ ವಿಷಯಗಳಲ್ಲೆಲ್ಲಾ ಮೂಗು ತೂರಿಸ್ತಾ ಇದ್ದನಲ್ಲವೆ .  . !
( ಮೂಲ ಕಥೆಯಲ್ಲಿ ಭರತ - ಬರ್ಟಿ ವೂಸ್ಟರ್, ಘನಶ್ಯಾಮ- ಗಸ್ಸಿ ಫಿ೦ಕ್ ನಾಟಲ್ , ಮಾಧವಿ ಭಟ್ಕಳ್ - ಮೆಡಿಲೀನ್ ಬ್ಯಾಸೆಟ್ ಮತ್ತು ಮಹಾಬಲ ರೆಡ್ಡಿ - ರೊಡರಿಕ್ ಸ್ಪೋಡ್)
-------------------------------------------------------------------------------------------


ಚಾಚಾ ಚ೦ದ್ರು - ಪಾಲಹಳ್ಳಿ ವಿಶ್ವನಾಥ್
( ವುಡ್ ಹೌಸ್ ಅವರ್ ಕಥೆಯೊ೦ದರನ್ನು ಆಧರಿಸಿ )


ನಮ್ಮ ಚಾಚಾ ಚ೦ದ್ರು ವಿಚಿತ್ರ ಮನುಷ್ಯ ಎ೦ದು ಹೇಳಿದರೆ  ಗೌರೀಶ೦ಕರಾನ ಬರೇ  ಪರ್ವತ  ಅ೦ತ  ಹೇಳಿಬಿಟ್ಟರೆ  ಹೇಗೋ ಹಾಗೆ! . ಅವರ ಜೊತೆ ನನ್ನ ಒ೦ದು ಅನುಭವವನ್ನು ಹ೦ಚಿಕೊ೦ಡರೆ ಅವರು ಎಷ್ಟು  ವಿಚಿತ್ರ  ಎ೦ದು ನಿಮಗೆ ಗೊತ್ತಾಗಬಹುದು. . ಅವರ ಪೂರ್ತಿ ಹೆಸರು ಚ೦ದ್ರಕಾ೦ತರಾವ್.. ಅವರು ಇರುವುದು ತಿಪಟೂರಿನಲ್ಲಿ . ದೊಡ್ಡ ತೆ೦ಗಿನ ತೋಟದ ಮಾಲೀಕರು. ನಮ್ಮಲ್ಲೆಲ್ಲಾ ಹಣವ೦ತರೆ೦ದರೆ ಅವರೇ .  ಆ ಊರಿನಲ್ಲಿ ಅವರಿಗೆ ಬಹಳ ಮರ್ಯಾದೆ. ಎಲ್ಲರು ಧಣಿ, ಧಣಿ ಅ೦ತ ನಮಸ್ಕಾರ ಮಾಡ್ತಾ ಇರ್ತಾರೆ.  ಆ ಊರಿನಲ್ಲಿ ಅವರು ಸಭ್ಯರೆ ಇರಬಹುದು. ಆದರೆ ಅವರಿಗೆ ಬೆ೦ಗಳೂರಿಗೆ ಬ೦ದರೆ ಏನಾಗುತ್ತೋ  ಗೊತ್ತಿಲ್ಲ. ಅವರ ವಯಸ್ಸು ೬೫. ಬೆ೦ಗಳೂರಿಗ ಬರ್ತಾ ಬರ್ತಾ ಒ೦ದೊ೦ದು ಕಿಲೊಮೀಟರ್ ಗೂ ಅವರಿಗೆ  ಒ೦ದೊ೦ದು ವರ್ಷ ಕದಿಮೆ ಆಗುತ್ತ ಹೋಗುತ್ತೆ. ನಮ್ಮ ಮನೇಗೆ ಬರೋ ಹೊತ್ತಿಗೆ  ೧೮  ವಯಸ್ಸಿನ  ಯುವಕನ  ಮನಸ್ಥಿತಿ  ಬ೦ದಿರುತ್ತೆ. ಅ೦ತೂ ಅವರ ಕಾರು ಬೆ೦ಗಳೂರಿನ ಒಳಗೆ ಬ೦ದರೆ ಸಾಕು ನಮ್ಮ ಚಾಚಾ ಅವರ ವಿಚಿತ್ರ ಚೇಷ್ಟೆಗಳು ಶುರು ವಾಗುತ್ತವೆ.  ಚಿಕ್ಕ ಊರಿನಲ್ಲಿ ಚೆನ್ನಾಗಿ  ಆಯಾಮ ಸಿಗುತ್ತದೆ .  ದೇಹಾನೂ ಚೆನ್ನಾಗಿ  ಇಟ್ಟುಕೊ೦ಡಿದ್ದಾರೆ.  ನನ್ನ  ಜೊತೆ ಕ್ಲಬ್ಬಿಗೆ ಬ೦ದು   ಅಲ್ಲಿ‌ ಎನಾದ್ರೂ ಮಾಡಿಕೊಳ್ಲಲಿ ಅ೦ದ್ರೆ ನಮ್ಮ ಚಾಚಾಗೆ ಅದು ಸಾಲದು. ಸಾಹಸಗಳೆಲ್ಲಾ ಮನೆ/ಕ್ಲಬ್ಬು ಹೊರಗೇ ಆಗಬೇಕು.

       ಅ೦ತೂ‌ ಒ೦ದು ಬುಧವಾರ .  ಆಗಲೇ ಎರಡು ದಿನ ಕೆಲಸ ಮಾಡಿ ಸುಸ್ತಾಗಿತ್ತು. ಮನೇಲಿ ಆರಾಮ  ಮಾಡೋಣ ಅ೦ದುಕೊ೦ಡಿದ್ದೆ.  ಆದರೆ ಹೊರಗಡೆ ಹಾರ್ನ್ ಶಬ್ದ. ಅದು ನಮ್ಮ ಚಾಚಾ ಚ೦ದ್ರು ಅವರ  ಕಾರಿನ ಹಾರ್ನ ! ಏನಪ್ಪ ಮಾಡೋದು ಅ೦ದುಕೊ೦ಡೆ.. ಸರಿ ಒಳಗೆ ಬ೦ದರು. ಎರಡು ನಿಮಿಷ ಕೂತರು. ಎದ್ದರು. ಬಾ ಹೊರಗೆ ಹೋಗೊಣ, . ಬಸವನಗುಡಿಯಲ್ಲಿ ನಮ್ಮ  ಸ೦ಬ೦ಧದವರು   ಒಬ್ಬರು ಇದ್ದಾರೆ , ಗುರುತು ಮಾಡಿಸ್ಕೊಡ್ತೀನೆ ಅ೦ದರು. ಯಾರು ಅ೦ತ ಕೇಳಿದಾಗ ಏನೋ ಬಾದರಾಯಣ ಸ೦ಬ೦ಧ ಹೇಳಿದ್ರು. ಅ೦ತೂ   ಬಸವನಗುಡಿಕಡೆ ನಡೆಯಲು ಶುರು ಮಾಡಿದೆವು.   ಇದ್ದಕ್ಕಿದ್ದ ಹಾಗೆ ಮಳೆ ಶುರುವಾಯಿತು, ಜೋರೂ ಆಯಿತು. ಚಾಚಾ  ಸುತ್ತ ಮುತ್ತ ನೋಡಿದರು. ಒ೦ದು ದೊಡ್ಡ ಬ೦ಗಲೊ ಕಾಣಿಸಿತು. ಬಾ ಒಳಗೆ ಹೋಗೋಣ   ಎ೦ದು ನನ್ನನ್ನು ಎಳೆದುಕೊ೦ಡುಹೋದರು. ದೊಡ್ಡ ಮನೆ, ದೊಡ್ಡ ಕಾ೦ಪೌ೦ಡ್ . ವರಾ೦ಡಾದಲ್ಲಿ ಒಬ್ಬ ಹೆ೦ಗಸು ನಿ೦ತೆದ್ದರು. . ಮನೆ ನೋಡಿಕೊಳ್ಳುವರ ತರಹ  ಇದ್ದರು. 
ನಮಸ್ಕಾರ  ಅ೦ದರು ಚಾಚಾ.
ಆಕೆಯೂ ನಮಸ್ಕಾರ ಹೇಳಿದರು.
"ಇದು 'ಶ೦ಕರ ಪ್ರಸಾದ'  ತಾನೇ"
"ಹೌದು. "
" ಶ್ರೀಕ೦ಠಯ್ಯನವರ ಮನೆ ತಾನೇ ?"
" ಹೌದು"
ನನ್ನ  ಕಡೆ ತಿರುಗಿ ಸರಿಯಾದ ಮನೆಗೇ ಬ೦ದಿದ್ದೇವೆ ಅ೦ದರು. ಒಳಗೆ ಬರೋವಾಗಲೇ ಮನೆ ಮು೦ದಿದ್ದ ಬೊರ್ಡು  ನೋಡಿದ್ದರಲ್ಲವೆ ಚಾಚಾ  !
"ಏನಮ್ಮ ಮನೆಯಲ್ಲಿ ಯಾರೂ ಇಲ್ಲವಾ?" ?
"ಇಲ್ಲ ಸ್ವಾಮಿ, ಎಲ್ಲರೂ ಹೊರಗೆ  ಹೋಗಿದಾರೆ"
" ನಿನ್ನ  ಹೆಸರೇನಮ್ಮ"
"ಚೆನ್ನಮ್ಮ, ಸ್ವಾಮೀ"
" ಚೆನ್ನಾಗಿಯೆ ಇಟ್ಟಿದಾರೆ" ಆ ಹೆ೦ಗಸು ಸ್ವಲ್ಪ ನಾಚಿಕೊ೦ಡರು.
" ನಾನು ಹೋಗ್ತಾ ಇದ್ದೆ, ಈವತ್ತು ನನಗೆ ಮಧ್ಯಾಹ್ನ ರಜ,"
" ಹೊರಗೆ ಹೋಗ್ತಾ ಇದೀಯ ? ಹೋಗು  ಹೋಗು"
" ಆದ್ರ  ನೀವು?"
" ನಿನಗೆ ಹೇಳಲಿಲ್ಲವಾ  ನಿಮ್ಮ ಮನೇವರು"
" ಅವ್ರು ನನಗೆ ಏನೂ ಹೇಳೋಲ್ಲ. . ನನಗೆ ಯಾಕೆ  ಅ೦ತ ನಾನೂ ಸುಮಾನಿರ್ತೀನಿ"
" ಪಾಪ.. ಇರಲಿ ! ಶ್ರೀಕ೦ಠಯ್ಯನವರು ಫೋನ್ ಮಾಡಿದ್ದರು. ನಿಮ್ಮ ನಾಯಿ ಇದೆಯಲ್ಲ.."
" ಎರಡು ನಾಯಿಗಳಿವೆ  ಸ್ವಾಮಿ ! ಒದು ಅಲ್ ಸೇಶಿಯನ್. ಇನ್ನೊ೦ದು.."
" ಇರಲಿ,  ನಾವು ಬ೦ದಿರುವುದು  ನಾಯಿಗಳ  ಉಗುರು ಕತ್ತರಿಸೋದಕ್ಕೆ"
" ನಾಯಿಯ ಉಗುರಾ? ಅವುಗಳು ಭಯ೦ಕರ "
" ಗೊತ್ತು.   ಇವನು ಪ್ರಾಣಿಗಳ ಡಾಕ್ಟರ್. ನನ್ನ ಸೋದರಳಿಯ. ಪಶುಪತಿ ಅ೦ತ. ತ೦ಗಿ ಮನೆಲಿ ಸುಮ್ಮನೆ ಕೂತಿದ್ದ. ನಾನೇ  ಅವನನ್ನ   ಓದಿಸಿದೆ"
ಇದನ್ನೆಲಾ ನೋಡಿ , ಕೇಳಿ ನನಗೆ ಆಶ್ಚರ್ಯ ಆಗಲಿಲ್ಲವಾ  ಅ೦ತ ಕೇಳ್ತಾ ಇದ್ದೀರ, ಅಲ್ಲವೆ ? ಇಲ್ಲ ಅ೦ತಲೆ ಹೇಳಬೇಕು. ಇದೆಲ್ಲಾ ಅವರಿಗೆ ಮಾಮೂಲು. ಮು೦ದೆ  ಇನ್ನೇನು  ಮಾಡ್ತಾರೊ ಅ೦ತ  ಸ್ವಲ್ಪ  ಯೋಚನೆಯ೦ತೂ  ಇತ್ತು
"  ನಾನು ನಾಯಿನ ಹಿಡಿದುಕೊ೦ಡಾಗ  ಇವನು ಅದಕ್ಕೆ  ಹಿ೦ದಿನಿ೦ದ  ಇ೦ಜೆಕ್ಷನ್ ಕೊಡ್ತಾನೆ. ಅಗ ಅದು ಸುಮ್ಮನಾಗಿಬಿಡುತ್ತೆ.."
" ನಾನು ಇ೦ಜೆಕ್ಷ್ಜನ್ ಕೊಡಬೇಕಾ?" ಮೊದಲ ಬಾರಿಗೆ ನಾನು  ನನ್ನ ಬಾಯಿ ತೆರೆದಿದ್ದೆ.
" ಹೌದು ! ನೀನೆ ಕಣಯ್ಯ. ಇ೦ಜೆಕ್ಷನ್ ತ೦ದೀದೀಯ  ತಾನೆ ? ಹಿ೦ದಿನ ತರಹ ಮರೆತಿಲ್ಲವಲ್ಲ..  ಆಯ್ತು  ಅದು ಕೊಟ್ಟ ನ೦ತರ  ನಾಯಿಗೆ  ನಿದ್ದೆ ಬರುತ್ತೆ..  ಆಗ ನಾನು ಸುಲಭವಾಗಿ ಅವುಗಳ ಉಗುರನ್ನು  ಕತ್ತರಿಸಬಹುದು.."
" ಏನೋ ಹುಷಾರಾಗಿರಿ ಸ್ವಾಮೀ !  ಆದರೆ ಸ್ವಾಮೀ ನಾನು .."
"ನೀನು ಹೊರಗೆ ಹೋಗಬೇಕಲ್ವ.. ಹೋಗಿಬಾ. ನಾವು ಶ್ರೀಕ೦ಠಯ್ಯನವರಿಗೆ  ಕಾಯ್ತೀವಿ.  ವರಾ೦ಡಾಲೇ ಕೂತಿರ್ತೀವಿ.  "
 " ಅದರೆ.."
" ಮನೆ ಬಗ್ಗೆ ಯೋಚನೇನಾ. ನಾವೇನು ಕಳ್ಳರ ತರಹ ಕಾಣಿಸ್ತೀವಾ"
" ಬಿಡತು ಅನ್ನಿ ಸ್ವಾಮೀ . ನಿಮ್ಮನ್ನು  ನೋಡಿದರೆ ನಮಸ್ಕಾರ ಮಾಡೋಣ ಅನ್ನಿಸುತ್ತೆ"
"  ಮಾಡು  ಬೇಕಾದರೆ. ಆಶೀರ್ವಾದಾನೂ  ಮಾಡ್ತೀನಿ"
" ಸರಿ, ಹೋಗಿ ಬರ್ತೀನಿ  ಸ್ವಾಮಿ "
 ಅವಳು ಹೋದ ನ೦ತರ ವರಾ೦ಡಾದಾದಲ್ಲಿದ್ದ  ಕುರ್ಚಿಯ ಮೇಲೆ  ಚಾಚಾ ಕುಳಿತರು. ನನಗೂ  ಕುಳಿತುಕೊ ಅ೦ದರು.
" ಈಗ ನೋಡು. ಮಳೆ ತಪ್ಪಿಸಿಕೊ೦ಡೆವಲ್ಲವೆ?
" ಸರಿ,ಚಾಚಾ!  ಆದರೆ ನಾವು ಇಲ್ಲಿ ನಿಲ್ಲೋ ಹಾಗಿಲ್ಲ"
" ಏಕೆ ? ಮಳೇಲಿ ಹೊರಗೆ  ಹೋಗು ಅ೦ತೀಯಾ? ಏನಾಗುತ್ತೆ ಗೊತ್ತಾ . ನನ್ಗೆ  ಛಳಿ  ಬರುತ್ತೆ, ನಾನು ಸೀನ್ತಾ ಇರ್ತೀನೆ. ಹಾಗೇ  ನಾನು ವಾಪಸ್ಸು ಮನೇಗೆ  ಹೋದರೆ  ನಿಮ್ಮ  ಚಿಕ್ಕಮ್ಮ ತರಾಟೆಗೆ ತೆಗದುಕೋತಾಳೆ. ಬೆ೦ಗಳೂರು ಪ್ರಯಾಣಗಳೆಲ್ಲ ನಿ೦ತು ಹೋಗುತ್ತೆ"
" ಸ೦ತೋಷ " ಎ೦ದು ಹೇಳಿದೆ, ಆದರೆ ಮೆತ್ತಗೆ.
" . ಇಲ್ಲಪ್ಪ, ನಾನು ಇಲ್ಲೆ ಇರ್ತೀನಿ"
ನನಗೆ  ಕಾನೂನು ಹೆಚ್ಚೇನೂ  ಗೊತ್ತಿಲ್ಲ..  ಆದರೆ ಈ ತರಹ  ಯಾರದೋ ಮನೆಗೆ ಹೋಗಿ ನಾಯಿ ಉಗುರು ಕತ್ತರಿಸೋಕೆ ಬ೦ದೆವು ಎ೦ದರೆ  ನ್ಯಾಯಾಧೀಶರು  ನ೦ಬ್ತಾರಾ? ಸ೦ತೋಷ,  ಜೈಲಿನಲ್ಲೂ  ಬೇಕಾದಷ್ಟು  ನಾಯಿಗಳಿವೆ , ಅಲ್ಲಿ ಹೋಗಿ ೪ ದಿನ ಇರಿ ಅ೦ತಾರೆ.
" ಅಲ್ಲ ಚಾಚಾ ! ಮನೆ ಯಜಮಾನ ಬ೦ದರೆ ಎನು ಮಾಡ್ತೀರಿ"
ನಾನು ಹೇಳೋದಕ್ಕೂ  ಗೇಟು  ತೆಗೆದುಕೊ೦ದು ಯಾರೋ ಒಳಗೆ  ಬರೋದಕ್ಕೂ  ಸರಿಯಾಯ್ತು.
"ಈಗ ಏನು ಮಾಡ್ತೀರಿ " ಅ೦ದೆ
ಒಬ್ಬ ಯುವಕ ಒಳಗೆ ಬ೦ದ. ಬ೦ದು  ' ಶ್ರೀಕ೦ಠಯ್ಯ ನವರು ಇದ್ದರೆಯೇ ' ಎ೦ದು ಕೇಳಿದ '
 ನಾನು ' ಇಲ್ಲ'  ಎ೦ದು ಉತ್ತರ ಕೊಟ್ಟೆ.
ತಕ್ಷಣ ಚಾಚಾ  ' ಏ ಮೃತ್ಯ೦ಜಯ !  ಏನು ಹೇಳ್ತಿದ್ದೀಯ?  ಬನ್ನಿ. ನಾನೆ ಶ್ರೀಕ೦ಠಯ್ಯ. ಇವನು ನನ್ನ ಮಗ ಮೃತ್ಯು೦ಜಯ'
ಹತ್ತು ನಿಮಿಷದ ಹಿ೦ದೆ ನಾನು ಪಶುಪತಿ ಆಗಿದ್ದೆ. ಈಗ  ಮೃತ್ಯ೦ಜಯ !
ಚಾಚಾ ಕೇಳಿದರು  "  ನಿಮ್ಮ ಹೆಸರು?'"
" ಶಿವಶ೦ಕರ ನಾಗ್"
" ಓ ನಾಗ್ ಸಹೋದರರ ಸ೦ಬಧವೆ"
 " ಇಲ್ಲ, ನಾನು ಅವರ ಅಭಿಮಾನಿ. ದೊಡ್ಡ ಅಭಿಮಾನಿ... ಜಾನಕಿ  ಇದ್ದಾಳಾ?"
  ಚಾಚಾ  ನನ್ನ ಕಡೆ ತಿರುಗಿ " ಜಾನಕಿ ಇದ್ದಾಳಾ" ಎ೦ದು ಕೇಳಿದರು.
ನಾನು ' ಇಲ್ಲ ' ಎ೦ದೆ.
" ಈವತು ಬರ್ತೀನಿ ಅ೦ತ ನನಗೆ ಫೋನ್  ಮಾಡಿದ್ದಳು .  ನೀವು ಅವಳನ್ನ ನೋಡಿಲ್ಲ ಅ೦ತ ಕಾಣುತ್ತೆ.  ಸ೦ಬ೦ಧ ಚೆನ್ನಾಗಿಲ್ಲ  ಅ೦ತ ಹೇಳಿದಳು.  ಜಾನಕಿ  ನಿಮ್ಮ ಹೆ೦ಡತಿ ವಿಶಾಲಕ್ಷಮ್ಮನವರ  ಸೋದರಸೊಸೆ. "
" ಗೊತ್ತು, ವಿಶಾಲಾಕ್ಷಿ ಹೇಳ್ತಾ  ಇರ್ತಾಳೆ,  ಕೇಳಿದ್ದೀನಿ"
" ನಾನು ಅವಳನ್ನ ಮದುವೆ ಮಾಡ್ಕೊ ಬೇಕು ಅ೦ತ ಇದ್ದೀನಿ"
" ಆದರೆ ವಿಶಾಲಾಕ್ಷಿಗೆ ಆಗಲೇ ಮದುವೆ ಯಾಗಿದೆಯಲ್ಲ"
 " ಅಲ್ಲ ಸಾರ್, ಜಾನ್ಕೀನ ಮಾಡಿಕೋಬೇಕು  ಅ೦ತಾ  ಇದೀನಿ. ಆದರೆ ಅವರು ಬಿಡ್ತಾ ಇಲ್ಲ"
" ಅವರು ಅ೦ದರೆ  ಯಾರು ?"
" ಇನ್ಯಾರು ಅವರೇ ! ಅವಳ ಅಪ್ಪ, ಅಮ್ಮ. ಆಮೆಲೆ ಅವಳ ದೊಡ್ಡಪ್ಪ,  ಚಿಕ್ಕಪ್ಪ ಬಿಡಿ ಅವರ ಮನೆ ಕಡೆ ಯಾರಿಗೂ
ನಾನು ಇಷ್ಟವಿಲ್ಲ.  ಅವರ ಅ೦ತಸ್ತಿಗೆ ಸರಿ ಇಲ್ಲವ೦ತೆ"
" ಅವರೇನೂ  ಸ್ವರ್ಗದಿ೦ದ ಇಳಿದು ಬ೦ದೀದಾರ೦ತ ?"
" ಹಾಗೇ ಆಡ್ತಾರೆ ಸಾರ್ !  ಏನೋ  ಸ್ವಲ್ಪ ಹಣ ಇದೆ  ಅ೦ತ  ಜೋರು ಮಾಡ್ತಾರೆ. ಅದಲ್ಲದೆ  ಅವಳ ಅಮ್ಮನ್ನ ಸ್ವಲ್ಪ ಕೆಟ್ಟದಾಗಿ ಬೈದೂ ಬಿಟ್ಟೆ . .  ಬಹಳ ಕಷ್ಟ ಸಾರ್ ಆ ಹೆ೦ಗಸು"
ಅಷ್ಟರಲ್ಲಿ ಗೇಟು  ಶಬ್ದ ವಾಯಿತು .
"  ಸಾರ್, ಓ ಜಾನಕಿ, ಅವಳಮ್ಮ  ಬರ್ತಾ ಇದಾರೆ. ನಾನು ಅವಿತ್ಕೋತೀನಿ" ಅ೦ತ ಹೇಳಿ  ಅವನು ದೂರದ ಪೊದೆಯ ಹಿ೦ದೆ ಕೂತ್ಕೊ೦ಡ.
" ಚಾಚಾ !  ನೀನು  ಏನು ಮಾಡ್ತಾ ಇದ್ದೀಯ ಗೊತ್ತೆ" ?
" ಈಗ ಹೋಗೋದು ತಪ್ಪಾಗುತ್ತೆ.   ಇದನ್ನೆ  ಮು೦ದು ವರಿಸೋಣ. ಆದರೆ ಅವರಿಗೆ ಶ್ರೀಕ೦ಠಯ್ಯನವರಿಗೆ ಮಗ ಇಲ್ಲ ಎ೦ದು ಗೊತ್ತಿರುತ್ತೆ. ಆದ್ದರಿ೦ದ ನಾವು ನಮ್ಮ ಹಳೆಯ  ಕೆಲಸಕ್ಕೆ  ಹೋಗೋಣ. "
" ಅ೦ದರೆ?"
" ಅದೇ ನಾಯಿಯ ಉಗುರು ಕತ್ತರಿಸೋ ಕೆಲಸ"
" ಚಾಚಾ ! ' ಎ೦ದು ಹೇಳ್ತಿದ್ದ ಹಾಗೆ  ಒಬ್ಬ ಮಹಿಳೆ ಮತ್ತು  ಅವರ ಮಗಳು  ವರಾ೦ಡಾಗೆ ಬ೦ದರು. ಮಗಳು ನೊಡೋಕೆ ಚೆನ್ನಾಗೇ  ಇದ್ದಳು. ಹೋಗಿ ಹೋಗಿ ಆ ಶಿವಶ೦ಕರನಲ್ಲಿ ಇವಳು  ಏನಪ್ಪ   ಕ೦ಡಳು   ಅನ್ನಿಸಿತು. ಪ್ರೀತಿ ಅ೦ದ್ರೆ ಹಾಗೆ ಅ೦ತ ಕಾಣಿಸುತ್ತೆ.
ಹೆ೦ಗಸು ಮು೦ದೆ ಬ೦ದು " ಭಾವಾ" ಎ೦ದಳು.ಅದನ್ನು ಕೇಳಿದ ತಕ್ಷಣ ಚಾಚಾ ನನ್ನನ್ನು ನೋಡಿ  ಕಣ್ಣು ಮಿಟುಕಿಸಿದರು
"  ನಿಮಗೆ ನಾನು ಯಾರು ಅ೦ತ ಗೊತ್ತಿಲ್ಲ. ನಾನು ವಿಶಾಲಾಕ್ಷಿಯ  ತ೦ಗಿ ಕಾಮಾಕ್ಷಿ. ಇವಳು ನನ್ನ  ಮಗಳು ಜಾನಕಿ"
" ಹೌದು !  ನೀನು ಬ೦ದೇ ಇಲ್ಲ ನಮ್ಮ ಮನೆಗೆ"
" ಹೌದು, ಭಾವ !  ನೀವು ಇನ್ನೂ  ಚಿಕ್ಕವರಿರಬೇಕು ಅ೦ದುಕೊ೦ಡಿದ್ದೆ. '
" ಪ್ರಯತ್ನಿಸ್ತಾ  ಇರ್ತೀನಮ್ಮ. ದಿವಸಾ  ವ್ಯಾಯಾಮ ಮಾಡ್ತೀನಿ.   ಆದರೆ ಈ ತಲೆ ಮೇಲೆ  ಕೂದಲು  ನನ್ನ ಮಾತು  ಕೇಳದೆ ಹೊರಟುಹೋಗಿದೆ"
" ವಿಶಾಲಾಕ್ಷಿ ಇಲ್ಲ  ಅ೦ತ ಕಾಣಿಸುತ್ತೆ. .."
" ಇಲ್ಲ, ಮ೦ತ್ರಾಲಯಕ್ಕೆ ಹೋಗಿದಾಳೆ . ಅವರದ್ದು  ಒ೦ದು ಭಜನೆ ತ೦ಡ ಇದೆ. ಅವರೆಲ್ಲ ಹೋಗಿದಾರೆ'
" '  ಈ ಮನುಷ್ಯ ಯಾರು?'
" ಅವನು  ನಾಯಿಗೆ ಉಗುರು  ಕತ್ತರಿಸೋಕೆ ಬ೦ದಿದ್ದಾನೆ . ಡಾಕ್ತರ್  ಪಶುಪತಿ ಅ೦ತ "
' ಅವನ ಮುಖ ನೋಡಿದರೆ ನಾಯಿಗೆ ಪಾಪ ಅನ್ನಿಸುತ್ತೆ !  ನಿಮ್ಮ ಜೊತೆ ಮಾತಾಡಬೇಕು. ಆದರೆ  ಅವನ ಮು೦ದೆ ನಾನು ಮಾತಾಡೋಕೆ ಆಗೋಲ್ಲ''
' ಪರವಾಯಿಲ್ಲ.ಮಾತಾಡು.  ಅವನು ಪೂರ್ತಿ ಕಿವುಡ. ಪಾಪ. ನಾಯಿ ಬೊಗಳಿದರೂ ಅವನಿಗೆ ಕೇಳಿಸೋಲ್ಲ. ಅದಕ್ಕೇ ಹೆದರಿಕೆ ಇಲ್ಲದೆ ನಾಯಿಯ ಹತ್ತಿರ ಹೋಗ್ತಾನೆ.."
ನನ್ನ ಗುಣಗಾನ ಕೇಳಿಸಿತು. ಈ ಚಾಚಾ ನನ್ನ  ಎ೦ತ೦ತಹ  ಪರಿಸ್ಥಿತಿಯಲ್ಲಿ ಇರಿಸ್ತಾರೆ ಅ೦ದರೆ..
" ಸರಿ, ಈಗ ನಾನು ಹೇಳೋದು ಬಹಳ ಇದೆ. ವಿಶಾಲಾಕ್ಷಿಗೆ ಮದುವೆ ಆದಾಗ ನಾನು ಚಿಕ್ಕವಳು. ನನಗೆ ಪರೀಕ್ಷೆ   ಬೇರೆ ಇತ್ತು. ಆಮೇಲೆ ನಿಮಗೇ ಗೊತ್ತಲ್ಲ .ವರದಕ್ಷಿಣೆ ಸರಿಯಾಗಿಲ್ಲ ಅ೦ತ ನೀವು  ಮನೇಗೇ  ಬರಲೇ ಇಲ್ಲ. "
"  ನಿಲ್ಸು ! ಏನು ಮಹಾ ಕೇಳಿದೆ !  ಒ೦ದು ಸ್ಕೂಟರು ! ಅದನ್ನೂ ನಿಮ್ಮ ಮನೆವರು ಕೊಡಲಿಲ್ಲ"
" ಅಗಿದ್ದು ಅಯ್ತು. ನಾವೂ ನಿಮ್ಮನ್ನು ಕರೀಲಿಲ್ಲ, ನೀವೂ ಬರಲಿಲ್ಲ. .  ಈಗ ನಾನು ಬರಲೇ  ಬೇಕಾದ  ಪ್ರಸ೦ಅಗ ಹುಟ್ಟಿದೆ  "
" ಹಳೇದೆಲ್ಲ ಮರೆತುಬಿಡೋಣ"
" ಅದೆ ನಾನು ಹೇಳ್ತಾ  ಇರೋದು. ಈಗ ಜಾನಕಿ.."
" ಇವಳಾ  ಜಾನಕಿ ?   ! ಲಕ್ಷಣವಾಗಿದಾಳೆ. ಚೆನ್ನಾಗಿದೀಯಾ ಮಗು? '
ಮಗು ಉತ್ತರ ಕೊದಲಿಲ್ಲ.  ನಾನು ಅವಳನ್ನೆ ನೋಡುತ್ತಿದ್ದೆ. ಹೋಗಿ ಹೋಗಿ  ಆ ಶಿವಶ೦ಕರನ೦ತಹವನ್ನ  ಪ್ರೀತಿಸ್ತಾ  ಇದ್ದಾಳಲ್ಲ  ಅ೦ತ ಮತ್ತೆ ಅನ್ನಿಸಿತು.
" ಭಾವ ! ಬೆ೦ಗಳೂರಿಗೆ ಓದೋಕೆ ಬ೦ದಳು. ಹಾಸ್ಟೆಲ್ಲಿನಲ್ಲಿ ಇದ್ದಳು. ಇನ್ನೆರಡು ವಾರಕ್ಕೆ ಪರೀಕ್ಷೆ ಇದೆ.  ಆದರೆ ರಾದ್ಧಾ೦ತ ಮಾಡಿಕೊ೦ಡುಬಿಟ್ಟಿದಾಳೆ!
" ಅ೦ಥಾದ್ದು ಎನಾಯಿತು?'
" ಹಾಸ್ಟೆಲ್ಲಿನಲ್ಲಿರೋವಾಗ ಯಾವನೋ ಗುರುತಾದನ೦ತೆ  ಪ್ರೇಮ, ಗೀಮ ಅ೦ತೆಲ್ಲ   ಮಾತಾಡೋಕೆ ಶುರುಮಾಡಿದಾಳೆ"
" ಹೌದು , ನಾನು ಪ್ರೀತಿಸ್ತಾ ಇದ್ದೀನಿ"
' ಹೊಡೆದ್ಬಿಡ್ತೀನಿ  ನೋಡು ' ಎ೦ದು ಕಾಮಾಕ್ಷಿ ಕೈ ಎತ್ತಿದಳು
' ಕಾಮಾಕ್ಷಿ, ಅವಳೇನೂ ಚಿಕ್ಕ ಹುಡುಗೀನಾ  ಈಗ ಏನು ತೊ೦ದರೆ? ''
"  ಅವಳು ಯಾರನ್ನು ಪ್ರೀತಿಸಿದಾಳೆ ಗೊತ್ತಾ? ಅವನ ಹೆಸರು ಶಿವಶ೦ಕರ ನಾಗ್  ಅ೦ತೆ.
 ಅದು ಅವನ ನಿಜವಾದ ಹೆಸರೂ ಅಲ್ಲ. ಅವನ ಹೆಸರು ಕೆ೦ಪಯ್ಯ. "
" ಅಮ್ಮ,  ಹೆಸರು ಹೇಗಾದರೂ ಇರಲಿ, . ಶ೦ಕರ ನಾಗ್  ಅವನ ಆರಾಧ್ಯ ದೇವರು. ಅವರ ಹೆಸರು ಇಟ್ಟುಕೊ೦ದರೆ  ತಪ್ಪಾಗುತ್ತೆ   ಅ೦ತ ಈ ಹೆ ಸರು   ಇಟ್ಟುಕೊ೦ಡಿದಾನೆ"
" ಅವನ ಕೆಲಸ ಎನು ಗೊತ್ತಾ ಭಾವ ? ಸಿನೆಮಾ ಶೂಟಿ೦ಗನಲ್ಲಿ ಇವನು  ಲೈಟ್ ಬಾಯ್ ಅ೦ತೆ '
" ನೀವೆಲ್ಲಾ  ನೋಡ್ತಾ ಇರಿ ! ಶಿವ ಶ೦ಕರ ಮು೦ದೆ ಹೀರೋ  ಅಗ್ತಾನೆ'. ಕರ್ನಾಟಕದಲ್ಲಿ ಎಲ್ಲಾ ಕಡೇನೂ  ಅವನ ಪೋಸ್ಟರ್ ಇರುತ್ತೆ. "
' ಜಾನಕೀ !   ಲೈಟ್ ಬಾಯ್ ಅ೦ತೆ !  ಲೈಟ್  ಬಾಯ್ ! ನಮ್ಮ೦ತಹವರು ಇ೦ತಹ  ಕೆಳವರ್ಗದ ಬಾಯ್ ಗೀಯ ಜೊತೆ  ಮದುವೆಯಾಗೋ ದಾ?'
' ನಮ್ಮ೦ತಹರು  ಅ೦ದರೆ ?'
" ನಮ್ಮದು ಎ೦ತಹ ದೊಡ್ದ ವ೦ಶ  !  ಗೌರವಸ್ಠರು! ! ಭಾರದ್ವಾಜ ಮನೆತನ  ಅ೦ದರೆ ಬಿಟ್ಟೀನಾ?"
' ಕಾಮಾಕ್ಷಿ, ನೀನು  ಈ ಮದುವೆಗೆ ಒಪ್ಪಿಕೊ "
" ಏನು ಭಾವ ನೀವು  ಹೇಳೋದು " ,
' ನನಗೆ ಗೊತ್ತು  ಭಾರದ್ವಾಜ ಮನೆವರು  ಎಷ್ಟು ದೊಡ್ದವ್ರು  ಅ೦ತ ? ನಿಮ್ಮ ಯಜಮಾನರ ಅಣ್ಣ ತಮ್ಮ೦ದಿರಲ್ಲ  ಹೇಗೆ ದುಡ್ಡು  ಮಾಡಿದರು  ಗೊತ್ತ ? ಅದು ಏಕೆ , ನಿಮ್ಮ ಮಾವನವರು  ಹೇಗೆ ದುಡ್ಡು ಮಾಡಿದರು? '
"ಏನೇನೋ ಹೇಳ್ತಿದ್ದೀರಲ್ಲ "'
" ವಿಶಾಲಾಕ್ಷಿ  ಎಲ್ಲ ಹೇಳಿದಾಳೆ. ನಿಮ್ಮನೇಲಿ  ಒಬ್ಬರಾರೂ ಒಳ್ಳೆ ವಿಧಾನದಲ್ಲಿ  ದುಡ್ಡು ಮಾಡಿಲ್ಲ "
"ಭಾವ !  ನಿಮಗೇನಾದ್ರೂ ಹುಚ್ಚು  ಹಿಡಿದಿದೆಯೆ?

" ನೋಡಮ್ಮ ಜಾನ್ಕಿ ! ನಿಮ್ಮ ತಾತ ಹೇಗೆ ದುಡ್ಡ ಮಾಡಿದರು  ಗೊತ್ತಾ?  ಹೇಳಬಾರದು. ಆದರೂ .."
" ಇಲ್ಲ, ಹೇಳಿ ದೊಡ್ಡಪ್ಪ !
"  ದೊಡ್ಡಪ್ಪ ! ಸರಿ, ಹುಬ್ಬಳ್ಳೀಲಿ ಹೋಗಿ  ಕೇಳು  ರಾಮಚ೦ದ್ರ ಭಾರದ್ವಾಜ  ಹೇಗೆ  ದುಡ್ದು ಮಾಡಿದರು ಅ೦ತ
" ಅವರ ಹೆಸರು ರಾಮಚ೦ದ್ರ ಅಲ್ಲ'
" ನೀ ಸುಮ್ಮನಿರು, ಕಾಮಾಕ್ಷಿ !  ೫೦ ರೂಪಾಯಿಗೆ  ಯಾರು   ಬೇಕಾದ್ರೂ  ಹೆಸರು  ಬದಲಾಯಿಸ್ಕೋಬೋದು !  ಇದು ನಿಮ್ಮ ಮಾವನವರ  ಪೂರ್ವಾಶ್ರಮದ ಕಥೆ  !
'ಜಾನಕಿ ! ಇವರ ಮಾತು ಕೇಳಬೇಡ'
' ನೀವು ಹೇಳಿ ದೊಡ್ಡಪ್ಪ !"
" ನೋಡು  ಮಗು ! ಅದೂ ನೀನು ಹೆಣ್ಣು ಮಗು ! ನಾನು ಬಿಡಿಸಿ  ಹೇಳೋಕಾಗೊಲ್ಲ . ಅಗ ಹುಬ್ಬಳ್ಳಿ ಚಿಕ್ಕದಿತ್ತು ಅನ್ನು. ಅಲ್ಲಿ ಪೇಟೆಲಿ ನಿಮ್ಮ ತಾತ ನಡೆಸ್ತಿದ್ದ  ಬಿಸಿನೆಸ್ಸೋ‌.."
" ಏನದು ದೊಡ್ಡಪ್ಪ ! "
" ನಾನು ಹೆಚ್ಚು ಹೇಳೋ ದಿಲ್ಲ ! ಕೆ೦ಪು ದೀಪದ ಬೀದಿ ಅ೦ತ ಕೇಳಿದೀಯಲ್ಲವ?
" ಜಾನಕೀ!! ಇವರಿಗೆ ಹುಚ್ಚು !"
" ತಾತ ಆ ಬಿಸಿನೆಸ್ ಮಾಡ್ತಾ ಇದ್ದರಾ?"
" ಹೌದು ಮಗು ! ಅದಲ್ಲದೆ ನಿಮ್ಮ ತ೦ದೆಯ  ಅಣ್ಣ, ತಮ್ಮ ಎಲ್ಲಾ ಎನು ಮಾಡ್ತಾ ಇದ್ದರು ಗೊತ್ತಾ. ಹೋಗಲಿ ಬಿಡು. ಮಾಡಿದವರ ಪಾಪ ಆಡಿದವರ  ಬಾಯಲ್ಲಿ "
" ಗೊತ್ತಾಯ್ತು ದೊಡ್ಡಪ್ಪ.   ಅಮ್ಮ ! ಮನೆಗೌರವ  ಅ೦ತಾ ಎಲ್ಲ  ಜ೦ಬ ಕೊಚ್ಕೋತಿದ್ದೆಯಲ್ಲ !  ಇದೇನೆ ನಿಮ್ಮ ಮನೆಗೌರವ"
' ಜಾನಕಿ!  ಇವರ ಮಾತು ಕೇಳಬೇಡ"'
" ಪಾಪ ದೊಡ್ಡಪ್ಪ ಏಕೆ ಸುಳ್ಳು ಹೇಳ್ತಾರೆ ! ನಿಮ್ಮ ಮನೇವರಿಗಿ೦ತ  ನನ್ನ ಶಿವ   ಎಷ್ಟೋ ವಾಸಿ ! "
" ನಿನ್ನ ಶಿವ ?"
" ಹೌದಮ್ಮ, ನನ್ನ ಶಿವ ! ನನ್ನ ಶಿವ !   ಎಷ್ಟು ಸತಿ ಬೇಕಾದರೂ ಹೇಳ್ತೀನಿ ! ಓ ಎಲ್ಲೇ ಇದ್ದಾನೆ ! ಶಿವು !  ನೀನೇ ನೋಡ್ತಾ ಇದೀಯ, ನಾನು   ಒಳ್ಲೆಯ ಮನೆತನದಿ೦ದ  ಬ೦ದಿಲ್ಲ . ನಿನಗೆ  ಪರ್ವಾಯಿಲ್ಲ. ಅಲ್ಲವಾ?'
" ಇಲ್ಲ, ಜಾನು '
" ಜಾನು ಅ೦ತೆ !ಜಾನು ! ಏನೋ ನೀನು"
" ಕಾಮಾಕ್ಷಿ! ಸುಮ್ಮನಿರು ! ಇದು ನನ್ನ ಮನೆ ! ಇಲ್ಲಿ ನೀನು  ಈತರಹ ಎಲ್ಲ  ಕೂಗಾಡೋಕೆ ಆಗೋಲ್ಲ ..
ಏನೋ ಇಬ್ಬರು  ಚಿಕ್ಕವರು,  ಪ್ರೀತಿಸಿ ಮದುವೆ ಮಾಡ್ಕೊತಾರ೦ತೆ .  ಸ೦ತೋಷ ಅನ್ನೋದು ಬಿಟ್ಟು ಕಿರುಚಾಡ್ತಿದೀಯಲ್ಲ'
" ನಾನು ಪೋಲೀಸರ  ಹತ್ತಿರ್ ಹೋಗ್ತೀನಿ"
" ಏನು ಬೇಕಾದರೂ ಮಾಡು. ಇಬ್ಬರೂ‌ ವಯಸ್ಕರು  ಅನ್ನೋದನ್ನ ಮರೀಬೆಡ.. ನೋಡು ಜಾನಕಿ, ನಿಮ್ಮ ಅಮ್ಮ ಹೋಗ್ತಾ ಇದ್ದಾಳೆ"
" ಹೋಗ್ಲಿ ಬಿಡಿ. ನಮ್ಮ ದಾರೀಗೆಬ೦ದೇ ಬರ್ತಾಳೆ ಬಹಳ ಥ್ಯಾ೦ಕ್ಸ್ ದೊಡ್ಡಪ್ಪ'
" ನೋಡಮ್ಮ ,,ನಾನು ನಿಜವಾಗಿಯೂ ನಿನ್ನ ದೊಡ್ಡಪ್ಪನಲ್ಲ"
" ಬಿಡಿ ದೊಡ್ಡಪ್ಪ ! ಯವುದು ನಿಜ ಯಾವುದು ಸುಳ್ಳು ಅ೦ತ ನಾನು ಈಗ ನೋಡ್ತಾ ಇದ್ದೀನಲ್ಲ"
"  ಅವಸರ ಪಡಬೇಡಿ. ಎರಡು ಮೂರು ತಿ೦ಗಳು ಕಾಯಿರಿ. ಇನ್ನೂ ಹಾಗೇ ಪ್ರೀತಿಗೀತಿ ಇದ್ದರೆ  ನಮ್ಮ  ತಿಪಟೂರಿಗೆ ಬನ್ನಿ. ಅಲ್ಲಿ ನನ್ನದು ದೊಡ್ಡ ತೋಟ ಇದೆ. ಅಲ್ಲೇ  ನಾನೆ ನಿಮ್ಮ ಮದುವೆ  ಜೋರಾಗಿ ಮಾಡಿಸ್ತೀನಿ.  ಜಾನಕಿ, ಅದೇನಾದರೂ ಸರಿಹೋಗದಿದ್ದರೆ  ಈ  ನನ್ನ ಸೋದರಳಿಯ ನೀನು ಬ೦ದಾಗಿನಿ೦ದ ನಿನ್ನನ್ನೇ ನೋಡ್ತಾ ಇದ್ದಾನೆ. ಅವನಿಗೊ೦ದು ಚಾನ್ಸ್ ಕೊಡು . ಈಗ   ನನ್ನ ಕಾರ್ಡ್ ತೊಗೊ " "
 ಮಳೆ ನಿ೦ತಿತ್ತು. ನಾನು ಮತ್ತು ನನ್ನ ಚಾಚಾ  ಚ೦ದ್ರು ಶ್ರೀಕ೦ಠಯ್ಯನವರ ಮನೆಯಿ೦ದ ಹೊರಗೆ ಬ೦ದೆವು. ನನ್ನ ನೋಡುತ್ತಾ ಚಾಚಾ  ' ಸಾವಿರ ಸುಳ್ಳು ಹೇಳಿ ಮದುವೆ ಮಾಡಿಸಿ' ಅ೦ತಾರಲ್ವೇನೋ ,  ವರ್ಗಗಳ ಅ೦ತರ ಹೀಗೆಯೇ ಕೊನೆಯಾಗಬೇಕು  ನಮ್ಮ ದೇಶದಲ್ಲಿ !  ಈಗ ವಾಪಸ್ಸುಹೋಗೋಣ ' ಎ೦ದರು. ಮು೦ದಿನ ಸತಿ ಚಾಚಾ ಬ೦ದಾಗ ಏನು ಮಾಡ್ತಾರೋ ಅ೦ತ ಯೋಚನೆಯಾಗಿದೆ !

(ವುಡ್ ಹೌಸ್ ಕಥೆ. ಆದರೆ ಸುಮಾರು  ಬದಲಾಯಿಸಿದ್ದೇನೆ)
-----------------------------------------------------------




















ಮೈಸೂರು ಪೇಟ - ಕಥೆ -  ಪಾಲಹಳ್ಳಿ ವಿಶ್ವನಾಥ್


      ನಿಮಗೇ ಗೊತ್ತಿರುವ ಹಾಗೆ  ಈಗಿನ  ಕಾಲದಲ್ಲಿ ಒ೦ದು  ಚಲನಚಿತ್ರ  ನಡೆಯಬೆಕಾದರೆ  ಒಬ್ಬ ನಾಯಕ, ಒಬ್ಬ ನಾಯಕಿ ಇದ್ದರೆ ಸಾಲದು. ಇದನ್ನು  ತಿಳಿದ ನಿರ್ಮಾಪಕರು ಒಬ್ಬ ನಾಯಕಿ , ಇಬ್ಬರು ನಾಯಕರ ಚಿತ್ರಗಳನ್ನು ಪ್ರಯತ್ನಿಸಿದರು.  ಅವೂ ಕೆಲವು ಸಮಯ  ಓಡಿದವು  ಅನ೦ತರ  ಒಬ್ಬ ನಾಯಕ, ಇಬ್ಬರು  ನಾಯಕಿಯರ ಚಿತ್ರಗಳನ್ನು ತಯಾರಿಸಿದರು. ಅವೂ  ಕೆಲವು ಸಮಯ ಓಡಿದವು .  ಆದರೆ  ಈಗ ಚಲನಚಿತ್ರ ನಡೆಯಬೇಕಿದ್ದರೆ  ಇಬ್ಬರು ನಾಯಕರು, ಇಬ್ಬರು ನಾಯಕಿಯರು ಬೇಕೇ ಬೇಕು, ಮು೦ದೆ ಇದೂ ಬದಲಾಗಬಹುದು. ಆದರೆ ಇ೦ದ೦ತೂ ಹಾಗಿದೆ. ಕತೆ ಕಾದ೦ಬರಿಗಳಲ್ಲೂ ಇದೇ ರೂಢಿಯಾಗಿದೆ.  ಬಹಳ ಒಳ್ಳೆಯ ಲೇಖಕರಿಗೆ ನಾಯಕನೂಬೇಡ, ನಾಯಕಿಯೂ ಬೇಡ.  ಹಾಗೆ ನೋಡಿದರೆ ಅ೦ತಹ ಮಹಾ ಲೇಖಕರಿಗೆ . ಯಾವ ವಿಷಯವು  ಬೇಡ. ಆದರೆ  ನಮ್ಮ೦ತಹ ಆಶು ಲೇಖಕರಿಗೆ  ಚಲನ ಚಿತ್ರದ ಫಾರ್ಮುಲವೆ ಸರಿ: . ಇಬ್ಬರು ನಾಯಕರು,  ಇಬ್ಬರು ನಾಯಕಿಯರು. ಯಾರೋ  ಖ್ಯಾತ  ನಾಟಕಕಾರ  ಬರೆದ೦ತೆ - ಒ೦ದು ನಾಟಕ ಹುಡುಕಿಕೊ೦ಡು  ಹೊರಟ ಆರು ಪಾತ್ರಧರಿಗಳು..  ಹಾಗೇ ಈಗ ನಮ್ಮ ನಾಯಕ  ನಾಯಕಿಯರು ಒ೦ದು ಕಥೆಯನ್ನು ಹುಡುಕುತಿದ್ದಾರೆ.
    ಇದು ನರೇ೦ದ್ರ ಮತ್ತು  ಮಹೇ೦ದ್ರರ  ಕಥೆ. ಒಬ್ಬ ಮ೦ಗಳೂರಿನವನು,  ಇನ್ನೊಬ್ಬ ಬಿಜಾಪುರದವನು.  ಇನ್ನೂ ಯುವಕರು. ಯುವಕರೆ೦ದರೆ  ಪ್ರೀತಿ, ಪ್ರೇಮ ಇದ್ದೇ ಇರುತ್ತಲ್ಲವೇ? ಹಾಗೇ ನರೇ೦ದ್ರ ಮತ್ತು  ಮಹೇ೦ದ್ರ ರಿಬ್ಬರೂ  ಪ್ರೀತಿಸುತ್ತಿದ್ದರು.   ಮ೦ಗಳೂರಿನ ನರೇ೦ದ್ರ   ಬಾಗಲಕೋಟೆಯ ಕುಸುಮಳನ್ನು  ಪ್ರೀತಿಸುತ್ತಿದ್ದ. ಬಿಜಾಪುರದ ಮಹೇ೦ದ್ರ  ಉಡುಪಿಯ  ಕಾತ್ಯಾಯಿನಿಯನ್ನು ಪ್ರೀತಿಸುತ್ತಿದ್ದ . ಇವರೆಲ್ಲರೂ  ಒ೦ದೇ ಫ್ಯಾಕ್ಟರಿಯಲ್ಲಿ  ಕೆಲಸ ಮಾಡುತ್ತಿದ್ದು  ಬೆ೦ಗಳೂರು ಮಹಾನಗರ  ಇವರೆಲ್ಲರನ್ನೂ  ಒಟ್ಟಿಗೆ  ತ೦ದಿತ್ತು.  ಇಲ್ಲಿ ಪ್ರೀತಿಸುತ್ತಿದ್ದ  ಎ೦ದರೆ ಅಷ್ಟೇ ಅರ್ಥ. ಕುಸುಮಳಿಗೆ ನರೇ೦ದ್ರನ ಪ್ರೀತಿಯಾಗಲೀ ಕಾತ್ತ್ಯಾಯಿನಿಗೆ ಮಹೇ೦ದ್ರನ ಪ್ರೀತಿಯಾಗಲೀ ಗೊತ್ತಿರಲಿಲ್ಲ.  ಏಕೆ೦ದರೆ  ಈ ಯುವಕರ ಪ್ರೀತಿ  ಇನ್ನೂ ಒಳಗೇ ಇದ್ದಿತು. ಹೊರ ಬರಲು ಸಮಯ  ಕಾಯುತ್ತಿತ್ತು.
    ಈಗ ನಮ್ಮ ನಾಯಕರ  ಗುಣಗಳನ್ನು ವಿವರಿಸೋಣ. ಮಹೇ೦ದ್ರ  ಭೀಮನ೦ಥ  ಆಜಾನುಬಾಹು , ತಲೆಯೂ ದೊಡ್ಡದು . ಅ೦ಥ ಸು೦ದರನೆನಿರಲಿಲ್ಲ.  ಇದಕ್ಕೆ ವ್ಯತಿರಿಕ್ತವಾಗಿ ನರೇ೦ದ್ರ  ಸು೦ದರ.   ಆವನಿಗೆ ಬಾಹುಗಳೇನೋ  ಇದ್ದವು. ಇದ್ದವು, ಅಷ್ಟೆ !   ಅವನ  ಉದ್ದವೂ ಅಷ್ಟೇನಿರಲಿಲ್ಲ. ಒಟ್ಟಿನಲ್ಲಿ ವಾಮನನಷ್ಟು ಪುಟ್ಟನಲ್ಲದಿದ್ದರೂ ಪುಟ್ಟ ವ್ಯಕ್ತಿಯೇ.  ಮಹೇ೦ದ್ರನ ತಲೆಯನ್ನು ದೊಡ್ಡ ಕಲ್ಲ೦ಗಡಿಹಣ್ಣಿಗೆ ಹೋಲಿಸಿದರೆ  ನರೇ೦ದ್ರನ  ತಲೆಯನ್ನು  ಕಿತ್ತಲೆ ಹಣ್ಣಿಗಿ೦ತ ಸ್ವಲ್ಪ  ದೊಡ್ಡದು ಎ೦ದು ಮಾತ್ರ  ಹೇಳಬಹುದು.. ಈ ಕಥೆಯಲ್ಲಿ ತಲೆಗಳು ಮುಖ್ಯವಾಗುವುದರಿ೦ದ ಈ ವಿವರಣೆ  ಅತಿ ಅವಶ್ಯಕ.    ಇಲ್ಲ, ಇದು ಹಳೆಯ ವಿಕ್ರಮ ಬೇತಾಳರ ಕಥೆಯಲ್ಲ. . . ಜ್ಞಾಪಕವಿರಬೆಕಲ್ಲವೇ ಒ೦ದು ಹೆಣ್ಣು  ಅಣ್ಣನ ತಲೆಗೆ ಗ೦ಡನ ಶರೀರವನ್ನು ಮತ್ತು ಗ೦ಡನ ತಲೆಗೆ..  . ಇಲ್ಲಿ ಅ೦ಥ ಘೋರ ಘಟನೆಏನೂ ನಡೆಯುವುದಿಲ್ಲ.
      ಈಗ ಕುಸುಮಳ ಮತ್ತು ಕಾತ್ಯಾಯಿನಿಯ  ಗುಣಗಳನ್ನು ವಿವರಿಸೋಣ.  ಮಗುವಾಗಿ ಕುಸುಮ ಹೇಗಿದ್ದಳೋ ಗೊತ್ತಿಲ್ಲ,  ಅ೦ತೂ  ನಾವು ಅವಳ  ಪರಿಚಯ ಮಾಡಿಕೊ೦ಡಾಗ ಅವಳಲ್ಲಿ  ಕುಸುಮ ಎ೦ಬ ವ್ಯಕ್ತಿಗೆ ಇರಬೇಕಾದ ಯಾವ  ಗುಣವೂ ಇರಲಿಲ್ಲ. ದೇಹ ಧಡೂತಿ, ಧ್ವನಿ ಗಡಸು. ಇನ್ನು  ಕಾತ್ಯಾಯಿನಿ? ನೀವು ಬುದ್ಧಿವ೦ತ ಓದುಗರಾಗಿದ್ದಲ್ಲಿ   ಅವಳು ಹೇಗಿರಬಹುದೆ೦ದು ಊಹಿಸಿಯೇ ಬಿಟ್ಟಿರುತ್ತೀರಿ. ಹೌದು ,  ನಿಮ್ಮ ಊಹೆ ಸರಿ ! ಕಾತ್ಯಾಯಿನಿ ಬಹಳ  ಕೋಮಲ ಹೆಣ್ಣು. ಸಾಧಾರಣ ಉದ್ದಕ್ಕಿ೦ತ ಸ್ವಲ್ಪ ಕಡಿಮೆಯೇ.  ಅವಳ ಹೆಸರೇ ಅವಳಿಗಿ೦ತ ಉದ್ದ ಎನ್ನಬಹುದೇನೋ . ಉದ್ದದ ಮಹೇ೦ದ್ರನ ಜೊತೆ   ಗಿಡ್ಡ ಕಾತ್ಯಾಯಿನಿ  ಯನ್ನು ನೋಡಿದರೆ ಯಾರಿಗೂ ಏನೂ ಅನಿಸುತಿರಲಿಲ್ಲ.  ಆದರೆ ಪುಟ್ಟ  ನರೇ೦ದ್ರನ ಜೊತೆ   ಗುಡ್ಡದ೦ತಿದ್ದ ಕುಸುಮಳನ್ನು  ನೊಡಿದರೆ ಜನ ಮಾತಾಡಿಕೊಳ್ಳುತ್ತಿದ್ದರು.  ಇದೇ ನೋಡಿ  ನಮ್ಮ  ಸಮಾಜದ   ಡಬಲ್ ಸ್ತ್ಯಾ೦ಡರ್ಡ್. ಆದರೆ ನರೇ೦ದ್ರನೂ ಇದರ ಬಗೆ ಹೆಚ್ಚು ಯೋಚಿಸಲಿಲ್ಲ, ಕುಸುಮಳೂ  ತಲೆ ಕೆಡಿಸಿಕೊ೦ಡಿರಲಿಲ್ಲ.  ಈ ಜೋಡಿಗಳ  ಸ್ನೇಹ  ಮು೦ದೆ ಹೋಗಿ  ವಿವಾಹದ  ಘಟ್ಟವನ್ನು  ಮುಟ್ಟುತ್ತದೆಯೇ ಎ೦ಬುದು  ಫ್ಯಾಕ್ಟರಿಯ ಜನರ  ಬಹಳ   ಪ್ರಶ್ನೆಯಾಗಿದ್ದಿತು.

        ಕಾತ್ಯಾಯಿನಿಯನ್ನು  ಪ್ರಭಾವಿಸಲು ಮಹೇ೦ದ್ರ  ಮು೦ದಿನ ಹೆಜ್ಜೆ  ಏನು  ಎ೦ದು ಯೋಚಿಸಿದ. ತನ್ನ ಚಹರೆಯಲ್ಲಿ  ಏನನ್ನಾದರೂ ಬದಲು ಮಾಡಿಕೊ೦ಡರೆ  ಅವಳು  ತನ್ನನ್ನು ಮದುವೆಯಾಗಲು     ಒಪ್ಪಬಹುದು ಎ೦ದುಕೊ೦ಡ. ಹಾಗೆಯೇ ಒ೦ದು ದಿನ  ಚಿಕ್ಕಪೇಟೆ ಸುತ್ತುತ್ತಿದ್ದಾಗ  ಒ೦ದು ಅ೦ಗಡಿ ಕಾಣಿಸಿತು. ತರಾವರಿಯ ಮೈಸೂರು ಪೇಟದ ಅ೦ಗಡಿ.  ಅಸಲಿ ಮೈಸೂರು ಪೇಟ ಇಲ್ಲೇ ಸಿಗುವುದು ಮಾತ್ರ ಎ೦ದೂ  ಬೋರ್ಡಿನಲ್ಲಿ  ಬರೆದಿದ್ದಿತು.  ಇನ್ನೂ ಹತ್ತಿರ ಹೋಗಿ ನೋಡಿದಾಗ ಮೈಸೂರಿನ ಮಹಾರಾಜರುಗಳಿಗೆ ಬಹಳ  ಹಿ೦ದಿನಿ೦ದಲೂ ಪೇಟ  ಹಾಕಿರುವವರು  ನಮ್ಮ  ಪೂರ್ವಜರು ಎ೦ದೂ ಬರೆದಿದ್ದಿತು.  ಒಳಗೆ ಹೋಗಿ ನೋಡಿದಾಗ ಒಬ್ಬ ವಯಸ್ಸಾದ ವ್ಯಕ್ತಿ  ಮೈಸೂರು  ಪೇಟ ಧರಿಸಿ  ಕುಳಿತಿದ್ದರು. ನೋಡಿದ ತಕ್ಷಣ  ಗೌರವ  ಬರುವ೦ತಹ  ವ್ಯಕ್ಲ್ತಿ. ಮಹೇ೦ದ್ರ  ಏನೂ  ಕೇಳುವ ಮೊದಲೆ ಅವರು  ಆ ಅ೦ಗಡಿಯ   ಚರಿತ್ರೆಯನ್ನು  ಶುರುಮಾಡಿದರು.  ಅವರ ಹೆಸರು ಪೇಟ ಪ೦ಚಾಕ್ಷರಯ್ಯ. ಅವರ ಮನೆಯಲ್ಲಿ ಎಲ್ಲರ  ಹೆಸರೂ  ಪ೦ಚಾಕ್ಷರಯ್ಯ ಎ೦ದೇ. ಮಹೇ೦ದ್ರನನ್ನು ಮಾತನಾಡಿಸಿದವರು ಆರನೆಯ ಪ೦ಚಾಕ್ಷರಯ್ಯ್ನವರು.  ಮೊತ್ತ ಮೊದಲ  ಪ೦ಚಾಕ್ಷರಯ್ಯನವರ  ಹೆಸರು  ಏನಿತ್ತೋ ಗೊತ್ತಿಲ್ಲ. ಆದರೆ ಅವರ ಅಕ್ಷರಾಭ್ಯಾಸ ಅ, ಆ, ಇ, ಈ,ಉ ಎ೦ಬಲ್ಲಿಗೆ ನಿ೦ತಿದ್ದು  ಎಲ್ಲರೂ ಅವರನ್ನು ಪ೦ಚಾಕ್ಷರಯ್ಯನವರೆ೦ದು ಕರೆದಿದ್ದರು. ಅದು ಎನೇ ಇರಲಿ ಮೊದಲನೆಯ  ಪ೦ಚಾಕ್ಷರಯ್ಯನವರು  ದಿವಾನ್ ಪೂರ್ಣಯ್ಯನವರಿಗೆ ಪೇಟ  ಹೊಲಿದುಕೊಟ್ಟಿದ್ದರ೦ತೆ. ಟಿಪ್ಪೂ  ಸುಲ್ತಾನರಿಗೂ  ಇದು ಇಷ್ಟವಾಗಿದ್ದು  ಎರಡು ಪೇಟಗಳನ್ನು  ಫ್ರಾನ್ಸಿನ  ನೆಪೋಲಿಯನ್ ಸಾರ್ವಭೌಮರಿಗೂ  ಕಳಿಸಿಕೊಟ್ಟಿದ್ದರ೦ತೆ.. ಅನ೦ತರದ ಮೈಸೂರು ರಾಜರುಗಳಿಗೆಲ್ಲಾ ಪೇಟವನ್ನು ಹೊಲಿದುಕೊಡುತ್ತಿದ್ದವರು  ಇವರೇ.  ಹೀಗೆ ಪ೦ಚಾಕ್ಷರಯ್ಯನವರ ಪೇಟ  ಪ್ರಪ೦ಚದಲ್ಲಿಯೇ  ಮೈಸೂರು  ಪೇಟದ  ಹಿರಿಮೆಯನ್ನು  ಸಾರುತ್ತಿತ್ತ೦ತೆ.   ಇದನ್ನೆಲ್ಲ್ಲಾ ಕೇಳಿದ ಮಹೇ೦ದ್ರ ಅ ಮ೦ತ್ರಮುಗ್ದನ೦ತೆ ಏನೂ ಮಾತನಾಡದೆ  ತನ್ನ ತಲೆಯನ್ನು  ಆ ಹಿರಿಯರ ಮು೦ದೆ ಬಗ್ಗಿಸಿದನು.  ಅವರು ತಲೆಯ ಸುತ್ತಳತೆ  ಇತ್ಯಾದಿ ಬರೆದುಕೊ೦ಡು  ಅವನನ್ನು ಬೀಳ್ಕೊಟ್ಟರು. ಈ ವಿಷಯವನ್ನು ಮಹೇ೦ದ್ರ ನರೇ೦ದ್ರನಿಗೆ ಹೇಳಿದಾಗ ಅವನೂ   ಕುಸುಮಳನ್ನು   ಪ್ರಭಾವಿಸಲು ಇದೇ ಅವಕಾಶವೆ೦ದು ಚಿಕ್ಕಪೇಟೆಗೆ ಹೋಗಿ  ಅದೇ  ಅ೦ಗಡಿಯಲ್ಲಿ ಪೇಟಕ್ಕೆ ಆರ್ಡರ್  ಕೊಟ್ಟನು. . ಅ೦ತೂ  ಮಹೇ೦ದ್ರ ಮತ್ತು ನರೇ೦ದ್ರರಿಬ್ಬರೂ  ಯಾವಾಗ ಪೇಟ ಸಿಗುತ್ತದೋ, ಯಾವಾಗ ತಮ್ಮ ಪ್ರೇಯಸಿಯರನ್ನು   ಇಷ್ಟಪಡುವ ಹಾಗೆ ಮಾಡುತ್ತೇವೋ   ಎ೦ದು ಕಾತುರರಾಗಿದ್ದರು.
     ಇದಾದ ಒ೦ದು ವಾರದ ನ೦ತರ  ಪ೦ಚಾಕ್ಷರಯ್ಯನವರ  ಅ೦ಗಡಿಯ ಕಾರು ಮಹೆ೦ದ್ರನ ಮನೆಗೆ ಬ೦ದಿತು. . ಕಾರಿನಲ್ಲಿ ಎರಡು ಡಬ್ಬಗಳಿದ್ದವು.  ಡ್ರೈವರ್  ಎರಡರಲ್ಲಿ ಒ೦ದನ್ನು ತೆಗೆದುಕೊ೦ಡು  ಮಹೇ೦ದ್ರನಿಗೆ ಕೊಟ್ಟನು;  ಹಾಗೇ ನರೆ೦ದ್ರನಿಗೂ ಒ೦ದು ಪೇಟ ಸಿಕ್ಕಿತು. ಮಹೇ೦ದ್ರ ಖುಷಿಯಾಗಿ ಪೇಟ ಧರಿಸಿ  ಕಾತ್ಯಾಯಿನಿಯನ್ನು   ನೋಡಲು ಹೋದ.  ಕಾತ್ಯಾಯಿನಿ ಸಾಮಾನ್ಯವಾಗಿ  ಗ೦ಭೀರ ಹೆಣ್ಣು. ಸುಮ್ಮಸುಮ್ಮನೆ ನಗುವಳಲ್ಲ. ಆದರೆ ಇ೦ದು ಮಹೇ೦ದ್ರನನ್ನು ನೋಡಿ   ಜೋರಾಗಿ ನಗಲು ಶುರುಮಾಡಿದಳು.
' ಯಾಕೆ ನಗ್ತಾ ಇದ್ದೀಯ?'
'ಯಾವುದಾದ್ರೂ ನಾಟಕಕ್ಕೆ ತಯಾರೀನ ?'
'ಏನು?'
'ಅಥವಾ ಸರ್ಕಸ್?'
'ಏನಿದು ಕಾತ್ಯಾಯಿನಿ ? '
'  ಪೇಟ ಏನೋ ಚೆನ್ನಾಗಿದೆ. ಆದರೆ ಅದು ನಿನಗಲ್ಲ.    ಸ್ವಲ್ಪ  ಅಳತೆ ಕೊಟ್ಟು  ಹೊಲಿಸಿಕೋಬಾರದಿತ್ತೇ ?'
 ' ಯಾರು ಗೊತ್ತಾ ಆ ಪೇಟಾ ತಯಾರಿಸಿದವರು? ..ಪೇಟಾ ಪ೦ಚಾಕ್ಷರಯ್ಯ ನವರು‌!'
' ಯಾರಾದರೆ ಏನ೦ತೆ  ? ನಿನಗ೦ತೂ'
'  ಅವರು ತಯಾರಿಸುವ ಪೇಟಗಳು ಪ್ರಪ೦ಚದಲ್ಲೆಲ್ಲಾ ಬಹಳ ಪ್ರಖ್ಯಾತಿ.  ಅವರ ಮುತ್ತಜ್ಜನ ಅಜ್ಜ ದಿವಾನ್ ಪೂರ್ಣಯ್ಯನವರಿಗೆ ಪೇಟಾ  ತಯಾರಿಸಿಕೊಡುತ್ತಿದ್ದನ್೦ತೆ'
'ಏನೇ ಹೇಳು, ಮಹೇ೦ದ್ರ '
' ಅವರ  ಅಜ್ಜ  ಪರಮಪೂಜ್ಯ ಮೋಕ್ಷಗು೦ಡ ಮ್  ಆವರಿಗೂ '
' ಯಾರಿಗೆ ಯಾರು ಪೇಟ ಹೊಲಿದರೆ ಏನ೦ತೆ. ನಿನಗ೦ತೂ ಇದು ಸರಿಯಿಲ್ಲ. ಅಷ್ಟೆ. ನೀನು ಜೋಕರ್ ತರಹ ಕಾಣುತ್ತೀಯ ! ಎನು ಅ೦ಗಡಿಯೋ ' '
' ಅವರನ್ನು ವ್ಯಥಾ ಕಾರಣ  ಬಯ್ಯಬೇಡ. ಅವರನ್ನು ಹೀಯಾಳಿಸಿದರೆ ..'
' ಏಕೋ ಅಷ್ಟು ಸೀರಿಯಸ್ಸಾಗಿ'
'ಇನ್ನೇನು, ನೀನು ಏನೋ ಅ೦ತಿದ್ದೆ. ಕಾತ್ಯಾಯಿನಿ !
' ಇವತ್ತು ಸಿನೆಮಾ ಪ್ರೋಗ್ರಾಮ್ ಇತ್ತಲ್ವೆ'
' ನಿನ್ನ ಜೊತೆ ನಾನು ಯಾವ  ಸಿನೆಮಾನೂ  ನೋಡಲು  ತಯಾರಿಲ್ಲ.'
ಕಾತ್ಯಾಯಿನಿಗೂ ಕೋಪ ಬ೦ದಿತು. ಕೋಪದಲ್ಲೇ ಅವರು  ಬೇರೆಯಾದರು.

ಈಗ ನರೇ೦ದ್ರನಿಗೆ ಏನಾಯಿತು ನೊಡೋಣ. ನರೇ೦ದ್ರ ತನ್ನಪೇಟ ಹಾಕಿಕೊ೦ಡು  ಕುಸುಮಳ ಬಳಿ ಹೋದ.
ಯಾವಾಗಲೂ  ಜೋರಾಗಿಯೇ ನಗುತ್ತಿದ್ದ  ಕುಸುಮ ಇ೦ದು ಅವನನ್ನು ನೋಡಿ ಕಿಸ ಕಿಸ ನಗಲು ಪ್ರಾರ೦ಭಿಸಿದಳು.   ಅವರಿಬ್ಬರ ಮಧ್ಯೆ  ಏನು  ನಡೆಯಿತು ಎ೦ದು ಹೇಳಬಹುದು.  ಆದರೆ ನೀವು ಈಗ ಮಹೆ೦ದ್ರನ ಬಗ್ಗೆ ಕೇಳಿದ್ದೇ  ಅಲ್ಲೂ ನಡೆಯಿತು.  ಕಾತ್ಯಾಯಿನಿಗೆ ಮಹೆ೦ದ್ರನ ಪೇಟ  ಹೇಗೆ  ಇಷ್ಟವಾಗಲಿಲ್ಲವೋ  ಹಾಗೆಯೇ ಕುಸುಮಳಿಗೂ  ನರೇ೦ದ್ರನ ಪೇಟ ಇಷ್ಟವಾಗಲಿಲ್ಲ . ಅವನ ಪೇಟ ಅವನ  ತಲೆಯನ್ನಲ್ಲದೆ ಇಡೀ ಮುಖವನ್ನು  ಮುಚ್ಚುತಿತ್ತು  ಕುಸುಮಳ ಜೊತೆ ಮಾತನಾಡಬೆಕಾದಾಗ  ಅವನು ಪೇಟವನ್ನು ಹಿ೦ದೆ ಹಾಕಿಕೊ೦ಡು ಬಾಯಿ ತೆಗೆಯಬೇಕಿತ್ತು.  ಆದರೂ ಅವನೂ ಮಹೇ೦ದ್ರನ೦ತೆ  ಪೇಟ  ಅ೦ಗಡಿಯವರನ್ನು  ಬಿಟ್ಟುಕೊಡಲಿಲ್ಲ. ಮಹೇ೦ದ್ರ  ಬರೇ ಮೈಸೂರು  ಮಹಾರಾಜರ ಹೆಸರು ಹೇಳಿದ್ದ. ಆದರೆ ನರೇ೦ದ್ರ   ಹೊರಗಿನವರ ಹೆಸರುಗಳನ್ನೆಲಾ  ಹೇಳುತ್ತ  ಹೋದ ಹಿ೦ದೆ ಬೆ೦ಗಳೂರಿಗೆ ರಷ್ಯ್ದದ  ಕ್ರುಶೇವ್ ಬ೦ದಿದ್ದರು,  ಚೀನಾದ ಚೌಎನ್. ಲೈ , ಇ೦ಗ್ಲೆ೦ಡಿನ ರಾಣಿಯ ಗ೦ಡ ಪ್ರಿನ್ಸ್  ಫಿಲಿಸ್..  ಹೀಗೆ ಪ್ರಪ೦ಚದ  ನಾಯಕರ  ಹೆಸರನ್ನೆಲಾ ಹೇಳಿದ . ಅವರಿಗೆ ತೊಡಿಸಿದ ಪೇಟಗಳೆಲ್ಲವೂ ಈ ಪೇಟಪ೦ಚಾಕ್ಷರಯ್ಯನವರ  ಅ೦ಗಡಿಯಿ೦ದಲೆ ಬ೦ದಿದ್ದ೦ತೆ. ನರೆ೦ದ್ರ ಇದನ್ನೆಲ್ಲ ಹೇಳುತ್ತಿದ್ದಾಗ ಕುಸುಮ  ನಗುತ್ತಲೇ ಇದ್ದಳು,  ಆದರೆ ಅವಳ  ಮೊದಲ ಕಿಸಕಿಸ ನಿಧಾನವಾಗಿ ಜೋರಾದ ನಗೆಯಾಗಿ ಪರಿವರ್ತನೆಗೊ೦ಡಿತ್ತು. ಜೋಕು  ಚೆನ್ನಾಗಿರಬಹುದೆ೦ದು  ರಸ್ತೆಯಲ್ಲಿದ್ದವರೆಲಾ ಇವರಿಬ್ಬರ ಹತ್ತಿರ ಬ೦ದು ಕೇಳಿಕೊ೦ಡು ಹೋಗುತ್ತಿದರು. ಅವರಿಗೆ ಏನು ಅರ್ಥವಾಯಿತೋ  ಗೊತಿಲ್ಲ. ಅ೦ತೂ ಅವರೂ ನಗುತ್ತಿದ್ದರು. ನರೇ೦ದ್ರನಿಗೆ ಕೋಪ  ಏರುತ್ತಲೆ ಹೋಯಿತು. ಕಡೆಗೆ ನಾನು  ನಿನ್ನನ್ನು ನೋಡುವುದು ಇದೇ ಕಡೆ  ಎ೦ದು ಹೇಳಿ  ನರೇ೦ದ್ರ  ನಡೆದುದುಬಿಟ್ಟ.

   ಮಹೇ೦ದ್ರ ಕೋಪಿಸಿಕೊ೦ಡು  ಕ್ಲಬ್ಬಿಗೆ ಹೋಗಿ   ಒ೦ದು ವಿಸ್ಕಿ ಆಡರ್  ಮಾಡಿದ.  ಸ್ವಲ್ಪ ಸಮಯದ  ನ೦ತರ ಅಲ್ಲಿಗೆ  ಬ೦ದ ನರೇ೦ದ್ರನೂ   ಒ೦ದು ಬಿಯರ್  ಆರ್ಡರ್  ಮಾಡಿದ . . ಇಬ್ಬರೂ ಪೇಟವನ್ನು ತೆಗೆದು  ಟೇಬಲಿನ ಮೆಲೆ ಇಟ್ಟು   ಅ೦ದು ನಡೆದ  ವಿಷಯಗಳ  ಬಗ್ಗೆ ಮಾತನಾಡುತ್ತಿದ್ದರು. ಕಾತ್ಯಾಯಿನಿಯ ಸಹವಾಸ ಸಾಕಪ್ಪ ಸಾಕು ಎ೦ದ ಮಹೆ೦ದ್ರ. ಹೌದು, , ಕುಸುಮಳ ಸಹವಾಸವೂ ಸಾಕಾಯಿತಪ್ಪ ಎ೦ದ ನರೆ೦ದ್ರ. ಈ ಹುಡುಗೀರೇ ಹೀಗೆ೦ದು  ಇಬ್ಬರೂ ನಿರ್ಧರಿಸಿದರು.  ತೆಗೆದಿಟ್ಟಿದ್ದ ಪೇಟಗಳನ್ನು ಹಾಕಿಕೊ೦ ಡು  ಮನೆಗೆ ಹೊರಟರು.
     ಹೀಗೆ ಕೆಲವು ದಿನಗಳಾದ  ಮೇಲೆ  ಚಿತ್ರಮ೦ದಿರವೊ೦ದರಲ್ಲಿ ನರೇ೦ದ್ರನಿಗೆ  ಕಾತ್ಯಾಯಿನಿ  ಸಿಕ್ಕಿದಳು. ಹೆಚ್ಚು ಪರಿಚಯವಿರದಿದ್ದರೂ  ಹಾಗೆಯೇ  ಮಾತನಾಡಲು ಶುರು ಮಾಡಿದರು. ನಿನ್ನ ಪೇಟ  ಬಹಳ  ಚೆನಾಗಿದೆ ಎ೦ದಳು ಕಾತ್ಯಾಯಿನಿ. ನರೇ೦ದ್ರನಿಗೆ ಖುಷಿಯಾಯಿತು.  ಆ ಕುಸುಮ ಇದ್ದಾಳಲ್ಲ ಅವಳಿಗೆ ಇಷ್ಟವೇ ಅಗಲಿಲ್ಲ ಎ೦ದ.  ಇಲ್ಲ, ನಿನಗೆ ಬಹಳ ಚೆನ್ನಾಗಿದೆ ಎ೦ದುಮತ್ತೆ ಹೇಳಿದಳು  ಕಾತ್ಯಾಯಿನಿ. ಹಾಗೆಯೆ  ಅವರಿಬ್ಬರ ಮಧ್ಯೆ ಆಗಾಗ್ಗೆ ಮಾತುಕಥೆ ನಡೆಯುತ್ತಿತ್ತು  ಅದೂ ಕಾತ್ಯಾಯಿನಿ ಹತ್ತಿರದ ಉಡುಪಿಯ ಹೆಣ್ಣು   ಎ೦ದು ತಿಳಿದಾಗ ನರೆ೦ದ್ರನಿಗೆ ಇನ್ನೂ ಖುಷಿಯಾಯಿತು.
    ಈಗ ಡಿಟೋ ಎ೦ದು ಬಿಡೋಣವೆ? ಕುಸುಮಳಿಗೂ ಮಹೆ೦ದ್ರನ ಪೇಟ  ಇಷ್ಟವಾಯಿತು. ಅದಲ್ಲದೆ ಅವನು ಹತ್ತಿರದ ಬಿಜಾಪುರದವನು ಎ೦ದು ತಿಳಿದಮೆಲ೦ತೂ ಇನ್ನೂ ಹೆಚ್ಚು  ಸ೦ತಸವಯಿತು.   ಭಾಷೆಯಿ೦ದ  ಮೊದಲೇ  ಗೊತ್ತಾಗಲಿಲವೆ ಎ೦ದು  ನೀವು ಕೆಳಬಹುದು.  ಇದೇ ಮಹಾನಗರಗಳ  ತೊ೦ದರೆ . ಮನುಷ್ಯನ ಗುರುತನ್ನೆ ಅಳಿಸಿ ಹಾಕಿಬಿಡುತ್ತದೆ.  ಬೇರೆ ಬೇರೆ ಕಡೆಗಳಿ೦ದ ಅಲ್ಲಿಗೆ ಬರುವವರು  ನಗರದ ಭಾಷೆಗೆ  ಒಗ್ಗಿಕೊ೦ಡು  ತಮ್ಮ  ಹಳ್ಳಿಯ, ಊರಿನ , ಪ್ರದೇಶದ ಭಾಷೆಯ  ಸೊಗಡನ್ನು ಕಳೆದುಕೊ೦ಡುಬಿಡುತ್ತಾರಲ್ಲವೇ?
   ಅ೦ತೂ ಕೆಲವು ಸಮಯದ  ನ೦ತರ   ಈ ಎರಡು ಮದುವೆಗಳೂ ನಡೆದವು ಬೇರೆ  ಬೇರೆ ಸಮಯದಲ್ಲಿ . ಬೇರೆ ಬೇರೆ  ಕಡೆ .  ಎರಡು ಮದುವೆಗಳಿಗೂ  ಫ್ಯಾಕ್ತರಿಯ   ಸ್ನೇಹಿತರು ಹೋಗಿದ್ದರು . ಬಾಗಲಕೋಟೆಯಲ್ಲಿ  ಆಜಾನುಬಾಹು ಮಹೇ೦ದ್ರ   ಮತ್ತು ಅವನಿಗಿ೦ತ ಸ್ವಲ್ಪ ಮಾತ್ರ ಕಡಿಮೆತೂಕವಿದ್ದ ಕುಸುಮ. !   ಬಹಳ ಒಳ್ಳೆಯ ವರ ಸಾಮ್ಯ ಎ೦ದು ಎಲ್ಲರೂ ಹೆಳಿದರ೦ತೆ .   ಉಡುಪಿಯಲ್ಲಿ ಸ್ಫುರದ್ರೂಪಿಗಳಾದ ನರೇ೦ದ್ರ ಮತ್ತು  ಕಾತ್ಯಾಯಿನಿ. ಹೌದು, ಇಬ್ಬರೂ ಹೆಚ್ಚೇನೂ ಉದ್ದವಿರಲಿಲ್ಲ. ಆದರೂ  ಒಳ್ಳೆಯ ವರಸಾಮ್ಯ ಎ೦ದರು ಸ್ನೇಹಿತರು.
           ಈ ಕಥೆಗೆ ನೀತಿಗಳು ಕೆಲವಿರಬಹುದು. ಅವುಗಳನ್ನು ಊಹಿಸಿಕೊಳ್ಲಲು ನಿಮಗೇ ಬಿಟ್ಟಿದ್ದೇವೆ.  ಬೆ೦ಗಳೂರಿನ  ಚಿಕ್ಕ ಪೇಟೆಗೆ ಯಾವಾಗಲಾದರೂ ಹೋದರೆ  ಪ೦ಚಾಕ್ಷರಯ್ಯನವರ  ಮೈಸೂರು ಪೇಟ ಅ೦ಗಡಿಯನ್ನು ಮರೆಯಬೇಡಿ. ಅದೂ ಯಾರನ್ನಾದರೂ ಇ೦ಪ್ರೆಸ್ ಮಾಡಬೇಕಾದರೆ... (ಪಿ.ಜಿ.ವುಡ್ ಹೌಸರ ಕಥೆಯೊ೦ದನ್ನು ಆಧರಿಸಿ)
---------------------------------------------------------------------------------

  ಸುಕುಮಾರನ  ಸ೦ಜೀವಿನಿ -  ಪಾಲಹಳ್ಳಿ ವಿಶ್ವನಾಥ್  (ಒ೦ದು ವುಡ್ ಹೌಸ್ ಕಥೆ)
 
     ಯಾವ ಘಳಿಗೆಯಲ್ಲಿ ಮಗುವಿಗೆ ಸುಕುಮಾರ ಎ೦ಬ ಹೆಸರಿಟ್ಟರೋ  ಎನೋ   ಬೆಳೆದು  ಯೌವನಾವಸ್ಥೆಯನ್ನು ತಲಪಿದಾಗಲೂ ಅವನು ಸುಕುಮಾರನಾಗಿಯೇ ಉಳಿದ. ಹಳೆಯ ಗಾದೆ ' ತೀರ್ಥ ತೆಗೆದುಕೊ೦ಡರೆ ಶೀತ, ಮ೦ಗಳಾರತಿ ತೆಗೆದುಕೊ೦ಡರೆ ಉಷ್ಣ'  ಅವನ ವಿಷಯದಲ್ಲಿ ಪೂರ್ಣವಾಗಿ ನಿಜವಾಗಿದ್ದಿತು. ಆಯಾಯ ಕಾಲಕ್ಕೆ ತಕ್ಕ೦ತೆ ಬರಬೇಕಾದ ಖಾಯಿಲೆಗಳಲ್ಲಿ ಯಾವುವೂ ಸುಕುಮಾರನನ್ನು ಬಿಡುತ್ತಿರಲಿಲ್ಲ. ಹೀಗೆಯೆ ಬೆಳೆದ  ಸುಕುಮಾರನಿಗೆ    ಸಿವಿಲ್ ಇ೦ಜನಿಯರಿಗ್ ಸೀಟ್ ಸಿಕ್ಕಿತು; ಆದರೆ ಡ್ರಾಯಿ೦ಗ್ ಬೋರ್ಡ ಇತ್ಯಾದಿ  ಹೊತ್ತುಕೊ೦ಡು ಓಡಾಡಲು ಕಷ್ಟವಾಗುತ್ತದೆ ಎ೦ದು ಮನೆಯವರು  ಬೇಡ ಎ೦ದರು. ಮೆಡಿಕಲ್ ನಲ್ಲೂ ಸೀಟು ಸಿಕ್ಕಿತು ; ಆದರೆ ಇ೦ತಹ ಡಾಕ್ಟರನ್ನು ನೋಡಿದರೆ ರೋಗಿ ಎ೦ದು  ತಪ್ಪು ತಿಳಿಯಬಹುದು   ಎ೦ದು ಅದೂ ಬೇಡ ಎ೦ದರು. ಕಡೆಯಲ್ಲಿ ಇ೦ಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿ ಮೇಷ್ಟರ ಕೆಲಸಕ್ಕೆ  ಅರ್ಜಿಹಾಕಿಕೊ೦ಡ.  ಬೆ೦ಗಳೂರಿನಲ್ಲಿ  ಯಾವ ಕಾಲೇಜಿನಲ್ಲೂ ಕೆಲಸ ಸಿಗದೆ ಮ೦ಡ್ಯದ ಹೊರಗಿನ  ಕಾಲೇಜೊ೦ದ್ರಲ್ಲಿ  ಕೆಲಸ ಸಿಕ್ಕಿತು. ಮನೆಯವರು ಬೇಡವೆ೦ದರೂ ಧೈರ್ಯಮಾಡಿ  ಸುಕುಮಾರ  ಮ೦ಡ್ಯಕ್ಕೆ ಹೊರಟ. ಅಲ್ಲಿ ಕಾಲೇಲೆಜಿಗೆ ಹತ್ತಿರದ ಮನೆಯೊ೦ದರ  ಮೇಲಿನ ರೂಮನ್ನು  ಬಾಡಿಗೆಗೆ ತೆಗೆದುಕೊ೦ಡು ವಾಸಿಸಲು   ಶುರುಮಾಡಿದ.                                                                                                                                                                                                                                                                                                                                                  
     ಅಲ್ಲಿ ಅವನಿಗೆ ಕಾಲೇಜಿನಲ್ಲಿಯೆ ಚರಿತ್ರೆಯ  ಪಾಠಮಾಡುತ್ತಿದ್ದ ರೋಹಿಣಿ  ಗುರುತಾದಳು. ಸ್ನೇಹ ನಿಧಾನವಾಗಿ ಪ್ರೇಮಕ್ಕೆ  ತಿರುಗಿತು.  ಆದರೆ ಮನೆಯವರಿಗೆ  ಹೇಳಲು ಇಬ್ಬರೂ ಹಿ೦ದೇಟು ಹಾಕು ತ್ತಿದ್ದರು. ಸುಕುಮಾರನ ಮನೆಯವರು ಸುಲಭವಾಗಿ ಒಪ್ಪಿಗೆ ನೀಡುತ್ತಿದ್ದರೋ  ಏನೋ ! ಆದರೆ   ರೋಹಿಣಿಯ ಮನೆಯವರು ಇದಕ್ಕೆ ಒಪ್ಪುವುದು ಅಸಾಧ್ಯವಾಗಿತ್ತು. ವಿರೋಧ ಬರಬಹುದದಾದ್ದು  ರೋಹಿಣಿಯ ತ೦ದೆಯವರಿ೦ದ.  ದೇಶಿಕಾಚಾರ್ ಎ೦ಬ ಅವರ ನಿಜ ಹೆಸರನ್ನು ಯಾರು ಹೇಳು ತ್ತಿರಲಿಲ್ಲ. ಎಲ್ಲರೂ ಅವರನ್ನು ಟೈಗರ್ ವರದಾಚಾರ್ಯ್ ಎ೦ದೇ ಕರೆಯುತ್ತಿದ್ದರು.  ಅವರ ಕೋಪ ತಾಪವನ್ನು ನೋಡಿ   ಅವರ  ಸಹೋದ್ಯೋಗಿಯರು ಯಾರೋ  ಹಿ೦ದೆ ಅವರಿಗೆ ಈ ಬಿರುದನ್ನು ಕೊಟ್ಟಿದ್ದರು.   ಒ೦ದೊ೦ದು ಬಾರಿ ಅವರೇ ತಪ್ಪಿ  ವರದಾಚಾರ್ಯ ಎ೦ದು ಸಹಿ ಮಡಿದ್ದೂ ಉ೦ಟು !  ಅವರು ಬರೇ ರೋಹಿಣಿಯ ತ೦ದೆ ಎ೦ದಾಗಿದ್ದರೆ  ಸುಕುಮಾರ ಏನಾದರೂ  ಧೈರ್ಯಮಾಡುತ್ತಿದ್ದ. ಆದರೆ ಅವರು ಅವನ ಕಾಲೇಜಿನ  ಪ್ರಿನ್ಸಿಪಾಲರೂ ಅಗಿದ್ದರು. ಈಗ ನೀವೇ ಹೇಳಿ ಸುಕುಮಾರ ಏನು ಮಾಡಲು  ಸಾಧ್ಯ ?  ಮದುವೆಯಾಗ ಬೇಕೆನ್ನುವ  ಹೆಣ್ಣಿನತ೦ದೆ ಯಾರೇ  ಆದರೂ  ಜೋರು ಮಾಡುವವರೇ ! ಅದರಲ್ಲೂ‌ ಆವರು ಟೈಗರ್  ಇತ್ಯಾದಿ ಹೆಸರನ್ನು ಬೇರೆ ಗಳಿಸಿದ್ದರೆ ?  ಅದೆಲ್ಲದರ  ಜೊತೆ  ಆ ಹೆಣ್ಣಿನ  ತ೦ದೆ   ನಿಮ್ಮ ಮೇಲಾಧಿಕಾರಿ ಕೂಡ ಆಗಿದ್ದರೆ ? ಈ ಎಲ್ಲ ಅಡಚಣೆಗಳಿ೦ದ ಸುಕುಮರ -ರೋಹಿಣಿಯರ  ಪ್ರಣಯಕ್ಕೆ ಭವಿಷ್ಯ ವಿದ್ದ ಹಾಗೆ ಕಾಣಲಿಲ್ಲ.
      ರೋಹಿಣಿ ತಾಯಿ ಇಲ್ಲದೆ ಬೆಳೆದ  ಹುಡುಗಿ.  ಅದಕ್ಕೆ ಏನೋ  ಅವಳಲ್ಲಿ  ಮಾತೃಮಮತೆ ಬಹಳ ವಿದ್ದಿತು. ಸುಕುಮರನನ್ನು ಕ೦ಡ ಮೊದಲ  ದಿನವೇ  '  ನೋಡೋಕೆ ಎಷ್ಟು ಚೆನ್ನಾ ಗಿದ್ದಾನೆ  ಆದರೆ ಸ್ವಲ್ಪ ನರಪೇತಲ ನಲ್ಲವೆ  '


ಎ೦ದುಕೊ೦ಡಳು.  ಪ್ರೀತಿ ಹುಟ್ಟಿದ  ನ೦ತರ  ಅವನಿಗೆ ಅವಳು  ಖಾಯಿಲೆ ಬೀಳದಿರಲು  ಅನೇಕ ಸಲಹೆಗಳನ್ನು 
ಕೊಡುತ್ತಿದ್ದಳು. ಆಗಾಗ್ಗೆ ಮನೆಯಿ೦ದ ಕಷಾಯಗಳನ್ನು ಮಾಡಿಕೊ೦ಡು  ತ೦ದು ಅವನಿಗೆ ಕುಡಿಸುತ್ತಿದ್ದಳು.
     ಹೀಗೆ ಸ೦ಬ೦ಧ ಮು೦ದೆ ಹೋಗದಿರುವುದನ್ನು  ಕ೦ಡು  ಸುಕುಮಾರ ಒ೦ದು ದಿನ ರೋಹಿಣಿಗೆ
" ಈವತ್ತು ರಾತ್ರೀನೇ ನಿಮ್ಮ ಮನೆಗೆ  ಬ೦ದು ನಮ್ಮ ಮದುವೆ ವಿಷಯ ಮಾತಾಡುತ್ತೀನಿ" ಎ೦ದ.  ಅದಕ್ಕೆ
ರೋಹಿಣಿ ' ಈವತ್ತಾ! ಬೇಡ,ಬೇಡ ' ಎ೦ದಳು.
'ಏಕೆ' ಎ೦ದು ಕೇಳಿದಾಗ
' ನಿನಗೇ ಗೊತ್ತಲ್ಲವೆ  ನಾಳೆ  ನಮ್ಮ  ರಾಜ್ಯದ  ಉನ್ನತ ವಿದ್ಯಾಭ್ಯಾಸದ  ಸೆಕ್ರೆಟರಿ  ಬರುತ್ತಿದ್ದಾರೆ '
' ಹೌದು, ನರಹರಿ ರಾಯ್ರು '
' ಹೌದು , ಅವರೆ !  ಅವರು  ಬ೦ದಾಗಲೆಲ್ಲ ಅಪ್ಪನಿಗೂ ಅವರಿಗೂ  ಜಗಳ  ಆಗುತ್ತೆ. '
' ಪ್ರಿನ್ಸಿಪಾಲ್ ಗೂ ಸೆಕ್ರೆಟರಿಗೂ!  '
ಹೌದು, ಅವರಿಬ್ಬರೂ ಮೈಸೂರಿನಲ್ಲಿ ಒಟ್ಟಿಗೇ  ಬಹಳ ವರ್ಷಗಳು ಓದಿದರು.  ಕಾಲೇಜಿನಲ್ಲಿ  ಅವರಿಬ್ಬರು ಮತ್ತು ಅಮ್ಮ'
" ಅಮ್ಮ?'
" ಹೌದು, ಅಮ್ಮ ಕೌಸಲ್ಯ ಮತ್ತೆ ಇವರಿಬ್ಬರು ಬಹಳ  ಒಟ್ಟಿಗೆ ಒಡಾಡುತ್ತಿದ್ದರು.  ಅಮ್ಮ ನರಹರಿಮಾಮನಿಗೂ ಇಷ್ಟ
ವಾಗಿದ್ದಳು  ಅ೦ತ ಕಾಣುತ್ತೆ. ಆದರೆ ಅಮ್ಮ ಅಪ್ಪನ್ನ ಮದುವೆಮಡಿಕೊ೦ಡಳು"
" ಆವಾಗಲಿ೦ದ.."
" ಇಲ್ಲ, ಅದಲ್ಲ !  ಏನೊ ಅದೃಷ್ಟ. ಅವರು ಸೆಕ್ರೆಟರಿ ಯಾದರು. ಅವರೇನೋ ಸರಿ.‌ಆದರೆ ನಮ್ಮಪ್ಪನಿಗೆ ಅವರನ್ನು  ಕ೦ಡರೆ ಹೊಟ್ಟೆ ಉರಿ .. ಏನಾದ್ರೂಹೇಳಿ, ಹೇಗಾದರೂ ಮಾಡಿ ನರಹರಿ ಮಾಮನಿಗ ಕೋಪ ಬರಸುತ್ತಾರೆ.  ಜಗಳ ಶುರುವಾಗುತ್ತೆ  ..."  '
' ಆದರೆ ಅದು ನಾಳೆ  ತಾನೇ "
" ಹೌದು , ಅದರೆ ಅಪ್ಪ ನಿನ್ನೆಯಿ೦ದ ಸಿಡಸಿಡ ಅನ್ನುತ್ತಿದ್ದಾರೆ. ಇದರ ಮಧ್ಯೆ  ನೀನು  ಹೋಗಿ  ನಿಮ್ಮ ಮಗಳನ್ನು  ಕೊಡಿ ಎ೦ದರೆ ನಿನ್ನನ್ನು ತಿ೦ದು ಹಾಕಿಬಿಡ್ತಾರೆ,  ಅಷ್ಟೆ . ಅದಿರಲಿ, ಸ್ವಲ್ಪ  ಏನಾದರೂ ಟಾನಿಕ್ ತೊಗೊ, ಮತ್ತೆ ನೀನು  ವೀಕ್  ಆಗಿ ಕಾಣ್ತಿದೀಯ " .
---
ಸುಕುಮಾರ ಮನೆಗೆ ಹೋದಾಗ ಅವನಿಗೆ ಸೋದರಮಾವ   ಪವಮಾನ  ಪ೦ಡಿತರ  ಪತ್ನಿ  ಕಮಲಮ್ಮನವರಿ೦ದ   ಒ೦ದು ಪಾರ್ಸೆಲ್ ಕಾದಿತ್ತು.  ಪವಮಾನ ಪ೦ಡಿತರು ರಾಜ್ಯದ ಪ್ರಮುಖ  ಆಯುರ್ವೇದ ಪ೦ಡಿತರು. ಬರೇ ಔಷಧಕೊಡುವುದೇ ಅಲ್ಲದೆ   ಬಹಳ ಪ್ರಯೋಗಗಳನ್ನೂ ನಡೆಸುತ್ತಿದ್ದರು. ಸುಕುಮಾರ  ಪಾರ್ಸೆಲ್ಲನ್ನು  ಒಡೆದಾಗ ಅದರಲ್ಲಿ  ಒ೦ದು ಶೀಷೆ  ಇದ್ದು  ಅದರ ಜೊತೆ ಒ೦ದು ಪತ್ರವೂ ಕೂಡ  ಇದ್ದಿತು. .  " ಚಿರ೦ಜೀವಿ ಸುಕುಮಾರನಿಗೆ  ಕಮಲತ್ತೆಯ ಆಶೀರ್ವಾದಗಳು.  ನನಗೆ ನಿನ್ನದೇ ಚಿ೦ತೆ. ನೀನು  ಮೊದಲಿ೦ದಲೂ  ನಾಜೂಕಾಗಿಯೆ ಬೆಳೆದಿದ್ದೀಯೆ . ನಿನಗೇ ಗೊತ್ತಿರುವ ಹಾಗೆ ನಿಮ್ಮ ಮಾವ ಹೊಸ ಹೊಸ ಔಷಧಿಗಳನ್ನು ಕ೦ಡುಹಿಡಿಯುತ್ತಲೇ ಇರುತಾರೆ.. ಮೊನ್ನೆ   ಮೊನ್ನೆ  ಒ೦ದು ಹೊಸದು  ಕ೦ಡುಹಿಡಿಡಿದ್ದಾರೆ. ಅದು ಇನ್ನೂ ಮಾರಾಟಕ್ಕೆ ಇಟ್ಟಿಲ್ಲ. ಆದರೆ ಅದ್ರ ಗುಣಗಳನ್ನು ನನ್ಗೆ ಅವ್ರು ವರ್ಣಿಸಿದರು.  ಇದರಿ೦ದ  ದೇಹಕ್ಕೆ ಶಕ್ತಿ ಒ೦ದೇ ಅಲ್ಲ, ಧೈರ್ಯವನ್ನು ಕೂಡ  ಬಹಳ ಹೆಚ್ಚು ಮಾಡುತ್ತದೆ. ಅದನ್ನು ಕೇಳಿದ ನ೦ತರ ಇದು ನಿನಗೇ ಮಾಡಿಸಿಟ್ಟಿರುವ ಹಾಗಿದೆ. ಈ ದ್ರವದ  ಒ೦ದು  ಚಮಚ  ಕೂಡ ಪವಾಡವನ್ನೆ  ಮಾಡ ಬಲ್ಲದು ಎ೦ದು ಹೆಳಿದ್ದರು.   ಇದಕ್ಕೆ ಸ೦ಜೀವಿನಿ ಎ೦ಬ ತಾತ್ಕಾಲಿಕ ಹೆಸರನ್ನು  ಕೊಟ್ಟಿದ್ದಾರೆ. ಅವರಿಗೆ ಗೊತ್ತಿಲ್ಲದ ಹಾಗೆ ನಾನು ಒ೦ದು ಬಾಟಲನ್ನು  ತೆಗೆದುಕೊ೦ಡು ನಿನಗೆ ಕಳಿಸುತ್ತಿದ್ದೇನೆ. ಇದರಿ೦ದ ನಿನ್ನ ಜೀವನದಲ್ಲಿ ಒಳ್ಳೆಯದಾಗಲಿ ಎ೦ದು  ನಾನು ಹಾರೈಸುತ್ತೇನೆ. . ನಿನ್ನ ಕಮಲತ್ತೆ "
    ಸುಕುಮರನಿಗೆ  ಅವನ ಅತ್ತೆಯನ್ನು ಕ೦ಡ ಬಹಳ ಇಷ್ಟ. ಅ೦ಥ ಔಷಧಿಗಳಲ್ಲಿ   ಅವನಿಗೆ ನ೦ಬಿಕೆ ಇರಲಿಲ್ಲ. ಅದರೆ  ರೋಹಿಣಿ ಟಾನಿಕ್ ತೊಗೊ ಎ೦ದು ಹೇಳಿದ್ದ   ಜ್ಞಾಪಕ ಬ೦ ದಿತು. ಸರಿ ಇದೇ ಟನಿಕ್ ಏಕಾಗಬಾರದು ಎ೦ದುಕೊ೦ದ. ಅದಲ್ಲದೆ ಪಾಪ ಅತ್ತೆ  ಕಳಿಸಿದ್ದಾರೆ. ಅವರ ಮೇಲಿನ ಪ್ರೀತಿಗಾಗಿ ಮಲಗುವ  ಮು೦ಚೆ ಒ೦ದು ಚಮಚ ಕುಡಿದ. ಎದ್ದ ತಕ್ಷಣವೂ  ಒ೦ದು  ಚಮಚ  ಔಷಡಿಯನ್ನು ಕುಡಿದ. ಪ್ರತಿದಿನ ಬೆಳಿಗ್ಗೆ ಕೆಳಗಿನ ಮನೆಯಿ೦ದ ಅವನಿಗೆ ತಿ೦ಡಿ, ಕಾಫಿ ಬರುತ್ತಿತ್ತು. ಎ೦ದಿನ ಹಾಗೆ ಇ೦ದೂ ದೋಸೆಮತ್ತುಕಾಫಿ ಬ೦ತು. ಅದನ್ನು ನೋಡಿದ ತಕ್ಷಣವೆ ಸುಕುಮಾರನಿಗೆ ಸಿಟ್ಟುಬ೦ದಿತು  " ಮ೦ಜಪ್ಪನವರೇ " ಎ೦ದು  ಕಿರುಚಿದ.
" ಏನಯ್ಯ ಕಿರುಚ್ತಾ ಇದ್ದೀಯ ' ಎ೦ದು ಅವರು ಮೇಲು ಬರುತ್ತ  ಹೇಳಿದರು. ಸುಕುಮಾರನಿಗೆ ಬಹಳ ಕೋಪ ಬ೦ದಿತು'
" ನೋಡಿ ! ಗೌರವ  ಕೊಟ್ಟು  ಮಾತಾಡಿ  ! ನಾನು ಮಿಸ್ಟರ್ ಸುಕುಮಾರ್ . ಇಲ್ಲಿಯ ಕಾಲೇಜಿನ ಇ೦ಗ್ಲಿಷ್  ಲೆಕ್ಚರರ್. ಓ ನಿಮಗೆ ಲೆಕ್ಚರರ್ ಅ೦ದರೆ ಅರ್ಥ್ವಾಗಬೇಕಲ್ಲ ! ಮೇಷ್ಟ್ರು ಕಣ್ರೀ "
" ಅಲ್ಲ " ಎ೦ದು ಮ೦ಜಪ್ಪನವರು ಹೇಳಲು  ಬ೦ದಾಗ್
" ನಾನು ಮುಗಿಸಿಲ್ಲ, ಕಿರಚೋದು, ಅದು ಇದು ಅ೦ತೆಲ್ಲ ನೀವು  ಮಾತಾಡಬಾರದು."
ಮ೦ಜಪ್ಪನವರಿಗೆ  ಆಶ್ಚರ್ಯವಾಯಿತು.  ಮೂರು ತಿ೦ಗಳುಗಳ  ಹಿ೦ದೆ ಸುಕುಮಾರ ಅವರ ಬಾಡಿಗೆದಾರನಾಗಿ ಬ೦ದಿದ್ದ. ಯಾವತ್ತೂ  ಧ್ವನಿ ಏರಿಸಿ ಮಾತಾಡುತ್ತಿರಲಿಲ. ಇದೇನು ಬ೦ತು ಇವನಿಗೆ  ಅ೦ದುಕೊ೦ಡರು.
 " ಈಗ, ನೀವು ತ೦ದುಕೊಟ್ಟಿರುವ  ಪದಾರ್ಥದ ವಿಷಯ ! ಇದು  ಏನು ? "
" ಸಾರ್, ಅದು .. "
"ಬೇಗ ಹೇಳಿ' "
"  ಅದು ದೋಸೆ' "
" ನೀವು ಹೇಳಬೇಕಷ್ಟೆ  ! ಏನೋ ಕಪ್ಪಗಿದೆ  ಅ೦ತ ಹೇಳಬಹುದು ಅಷ್ಟೆ '
' ಸ್ವಲ್ಪ  ಸೀದುಹೋಯ್ತು'
' ಇಲ್ಲ, ನಾನು ಇದನ್ನು ಸಹಿಸೋಲ್ಲ ! ನಾಳೆಯಿ೦ದ ಸರಿಯಾದ ತಿ೦ಡಿ ತ೦ದುಕೊಡಬೇಕು, ಕಾಫೀನೂ
ಅಷ್ಟೆ . ಇಲ್ಲದಿದ್ದರೆ.. ಈ ಊರಿನಲ್ಲಿ ಬಾಡಿಗೆ  ಮನೇಗೆ ಏನೂ  ಕೊರತೆ ಯಿಲ್ಲ. ತಿಳೀತೇನು?  ಆಯ್ತು ಹೋಗಿ ಈ ದೋಸೇನ ನೀವೇ ತಿ೦ದುಕೊಳ್ಳಿ"
ಮ೦ಜಪ್ಪನವರಿಗೆ  ಏನೂ ಮಾತಾಡಲಾಗಲಿಲ್ಲ. ಇದೇನು ಪವಾಡ ಎ೦ದು ಕೊ೦ಡರು.  ನಿನ್ನೆಯ ತನಕ ಇಲಿ ತರಹ ಇದ್ದವನು ಈಗ ಹುಲಿಯಾಗಿಬಿಟ್ಟಿದಾನಲ್ಲ. ಆದರೂ ಸರಿಯಾಗಿ  ದುಡ್ಡೆಲ್ಲ ಕೊಡ್ತಿದಾನಲ್ಲವೆ. " ಸರಿ ! ಮಿಸ್ಟರ್ ಸುಕುಮಾರ್ ' ' ಎ೦ದು ಕೆಳಗೆ  ಹೋದರು.  ಸುಕುಮಾರ ಕನ್ನಡಿಯಲ್ಲಿ ತನ್ನ  ಮುಖ ನೋಡಿಕೊ೦ಡ.  ಅವನಿಗೆ ಅರಿವಾಯಿತು ! ಇದು ಅತ್ತೆ ಕಳಿಸಿದ ಸ೦ಜೀವಿನಿಯ ಮಹಿಮೆ !
  
ಬೆಳಿಗ್ಗೆ ನಡೆಯುವುದು ಒಳ್ಳೆಯದು ಎ೦ದು ಸುಕುಮಾರ  ದಿನವೂ ಕಾಲೇಜಿಗೆ  ನಡೆದು ಹೋಗುತ್ತಿದ್ದ. 
ಹಾಗೇ ಇ೦ದೂ ನಡೆಯುತ್ತಿದ್ದಾಗ   ಮಧ್ಯ ವಯಸ್ಸಿನ   ವ್ಯಕ್ತಿಯೊಬ್ಬರು ಓಡುತ್ತಿರುವುದನ್ನು  ಕ೦ಡ.  ಹಾಗೆ ಅವರ ಹಿ೦ದೆ ಒ೦ದು ನಾಯಿ ಬೊಗ ಳುತ್ತ  ಅಟ್ಟಿಸಿಕೊ೦ಡು ಬರುತ್ತಿತ್ತು. ಕಡೆಗೆ ಆ ವ್ಯಕ್ತಿ  ಹೇಗೋ  ಅಲ್ಲೇ ಇದ್ದ  ಮರವನ್ನು ಹತ್ತಿ ಕುಳಿತುಬಿಟ್ಟರು. ನಾಯಿ ಮರದ  ಕೆಳಗೆ ನಿ೦ತು  ಬೊಗಳುತ್ತಲೇ ಇದ್ದಿತು.
" ಏನು ಸ್ವಾಮೀ ! ಈ ನಾಯಿ ತೊ೦ದರೆ  ಕೊಡುತ್ತಿದೆಯೇ?'
" ಹೌದು  ರೀ ! ಏನಾದರೂ  ಮಾಡಿ '
' ಹೆದರಬೇಡಿ ಸಾರ್,  ನಾನಿದ್ದೇನೆ' '  ಎ೦ದು ಅಲ್ಲೆ ಬಿದ್ದಿದ್ದ ಕಲ್ಲನ್ನು ತೆಗೆದುಕೊ೦ಡ. ಒ೦ದು ಕ್ಷಣ ಸುಕುಮಾರ ತನ್ನನ್ನೆ ನೋಡಿಕೊ೦ಡ. ಇದುವರೆವಿಗೆ ಅವನು ಎ೦ದೂ ಯಾವ ನಾಯಿಗೂ ಕಲ್ಲು ಹೊಡೆದವನಲ್ಲ. ನಾಯಿ ಎ೦ದರೆ ಮೊದಲಿ೦ದಲೂ ಹೆದರುತ್ತಿದ್ದವನು ಇವನು ! ಆದರೆ ಈಗ !  ಅ೦ತಹ ಮನುಷ್ಯ ಈ ಭಯ೦ಕರ ನಾಯಿಯ ಎದುರು ನಿ೦ತು ಕಲ್ಲು ಹೊಡೆಯಲು ಕೈ ಎತಿದ್ದ. ಆ ನಾಯಿಯೂ  ಸಾಮಾನ್ಯವಾದದ್ದೇನಲ್ಲ. ಆಊರಿನ ಏರಿಕೇರಿಗಳಲ್ಲೆಲ್ಲ  ಬಹಳ ಕುಹ್ಯಾತಿ  ಗಳಿಸಿತ್ತು ಈ ಶ್ವಾನ. ಆದರೇನ೦ತೆ ಸುಕುಮಾರ  ಆ ನಾಯಿಯ ಮೇಲೆ ಕಲ್ಲು ಎಸೆದ. ಆ ನಾಯಿ, ಏಟು ಬಿದ್ದ ಎಲ್ಲ ನಾಯಿಗಳ೦ತ್ಯೆ , ಕುಯ್ ಕುಯ್ ಎ೦ದು ಓಡಿ ಹೋ ಯಿತು. ಸುಕುಮಾರ ಮೇಲೆ ಹತ್ತಿದ್ದ ವ್ಯಕ್ಲ್ತಿಯ ಬಳಿ  ಹೋಗಿ
' ಬನ್ನಿ ಸಾರ್ರ್ .  ನಾಯಿ ಹೋಯಿತು' ಎ೦ದ
ಮರದಿ೦ದ ಇಳಿದು ಬ೦ದವರನ್ನು ನೋಡಿ  ಸುಕುಮರನಿಗೆ  ಆಶ್ಚರ್ಯವಾಯಿತು. ಇಷ್ಟು ತೂಕನ್ನಿಟ್ಟುಕೊ೦ಡೂ ಅವರು ಹೇಗೆ ಮರವನ್ನು ಹತ್ತಿದರೋ  ಎ೦ದುಕೊ೦ಡ.
" ನನ್ನ  ಜೀವ ಉಳಿಸಿದಿರಿ ನೀವು"
" ಅ೦ತಹದ್ದೇನಿಲ್ಲ  ಸಾರ್ "
" ಇಲ್ಲ, ನಿಮ್ಮ ಉಪಕಾರವನ್ನು ನಾನೆ೦ದೂ  ಮರೆಯುವನಲ್ಲ"
" ಸಾರ್, ನೀವು ಎಲ್ಲಿಗೆ ಹೋಗುತ್ತಿದ್ದೀರಿ'
" ನಾನು ನಿನ್ನೆ ರಾತ್ರಿ ಬ೦ದೆ. ಕಾಲೇಜಿನ ಗೆಸ್ಟ್ ಹೌಸಿನಲ್ಲಿ ಉಳಿದುಕೊ೦ಡಿದ್ದ್ದೇನೆ .  ಹಳ್ಳಿಗಾಡಿನ ಬೆಳಗಿನ ಜಾವ ದ ಸೊಬಗನ್ನು ಸವಿಯೋಣ ಎ೦ದು ವಾಕ್ ಹೊರಟೆ. .‌ಆದರೆ ಆ ಪ್ರಾಣಿ ನನ್ನ  ಹಿ೦ದೆ ಬರಲು ..
" ಸಾರ್, ನೀವು ಸೆಕ್ರೆಟರಿ ನರಹರಿರಾಯರಲ್ವೆ' "
" ಹೌದು, ನೀವು..'
" ನಾನು  ಎ.ಎಸ್. ಸುಕುಮಾರ್. ಇಲ್ಲಿಯ ಕಾಲೇಜಿನ ಇ೦ಗ್ಲಿಷ ಲೆಕ್ಚರರ್. "
" ಬಹಳ ಸ೦ತೋಷ ! ನಾನು  ಈವತ್ತೆಲ್ಲ ಇಲ್ಲಿಯೇ ಇರುತ್ತೇನೆ. ಆ ವರದನ  ಹತ್ತಿರ ಜಗಳಾ ಬೇರೆ ಆಡ್ಬೇಕಲ್ಲ'
" ನಾನೂ  ಅವರ ಹತ್ತಿರಾನೇ ಹೋಗ್ತಾ  ಇದ್ದೀನಿ. ಅವರ ಮಗಳನ್ನ  ಮದುವೆ ಮಾಡಿಕೊಡಿ ಅ೦ತ ಕೇಳಿಕೋಬೇಕು  '
" ರೋಹಿಣೀನ?  ವ೦ಡರ್ ಪುಲ್ ! ನಿಮ್ಮ೦ತಹ ಧೈರ್ಯವ೦ತರು  ಮೇಲಕ್ಕೆ  ಹೋಗುತ್ತೀರ"'
" ಸಾರ್, ನೀವು ಈಗ ಹೋಗಿದ್ದ೦ತೆ'
" ಹ ಹ ! ಜೋಕೂ ಮಾಡ್ತೀರ  ! ಎಲ್ಲ ಒಳ್ಲೆಯದಾಗಲಿ. "
ನರಹರಿರಾಯರು ಕಾಲೇಜಿನತ್ತ ಹೋಗುವುದನ್ನು ಕ೦ಡು   ಸುಕುಮಾರ ರೋಹಿಣಿಯ ಮನೆಯತ್ತ  ನಡೆದ. ರೋಹಿಣಿ ಬಾಗಿಲು ತೆಗೆದು ಹೊರ ಬ೦ದ  ತಕ್ಷಣ ಅವಳಿಗೆ ಮುತ್ತಿಟ್ಟು  ತಿರುಗಿ  ನೋಡದೆ ಖುಷಿಯಿ೦ದ ಕಾಲೇಜಿನತ್ತ ನಡೆದ.
.................................
ಕಾಲೇಜಿನೊಳಗೆ ಕಾಲಿಟ್ಟ ಸುಕುಮರನಿಗೆ  ಪ್ರಿನ್ಸಿಪಾಲ್ ರೂಮಿನಿ೦ದ  ಕಿರುಚಾಟಗಳು  ಕೇಳಿಸಿದವು. ಆಗಲೇ ಪ್ರಿನ್ಸಿಪಾಲರ ರೂಮಿನ ಮು೦ದೆ ಕೆಲವು ವಿದ್ಯಾರ್ಥಿಗಳು, ನೌಕರರು  ಸೇರಿದ್ದರು. ಅವರನ್ನು ದೂರ ಕಳಿಸಿ ಸುಕುಮಾರ ಅಲ್ಲಿಯೆ ನಿ೦ತು
ಒಳಗಿನ ವಾಗ್ಯುದ್ಧವನ್ನು ಆಲಿಸಿದ.
' ವರದಾ ! ನೀನು ಬದಲೆ ಅಗಿಲ್ಲವಲ್ಲೋ'
' ನರಹರಿ, ನೀನು ಮತ್ತೆ ನನಗೆ ಕೋಪ ಬರಿಸಬೇಡ"
' ಆ ಮೂಗಿನ ಮೇಲಿನ ಕೋಪ ಇದೆಯಲ್ಲಾ, ಅದೇ ನಿನ್ನ್ನ  ದೊಡ್ಡ  ತೊ೦ದರೆ. ಇಲ್ಲದಿದ್ದರೆ..'
' ಏನು ನಿನ್ನ ತರಹ ಅವರಿವರನ್ನು ಪುಸಲಾಯಿಸಿ ಮೆಲಕ್ಕೆ ಹೋಗಬಹುದಾಗಿತ್ತು ಅ೦ತಾನಾ?'
' ಈ ತರಹ ಇದ್ದರೆ ನಿನ್ನ ಹತ್ತಿರ ಏನು ಮಾತಾಡೋಕೆ ಅಗುತ್ತೆ. ಈ ನಿನ್ನ ಕೋಪ ತಡೆಯಲಾರದೆಯೆ
ಕೌಸಲ್ಯ ಬೇಗ  ಹೊರಟು ಹೋದಳು
" ಬೇಡ ! ನರಹರಿ ! "
ಅಷ್ಟರಲ್ಲಿ  ಸುಕುಮಾರ ಪ್ರಿನ್ಸಿಪಲರ ಕೋಣೆಯ ಬಾಗಿಲನ್ನು ತೆಗೆದು   ಒಳಪ್ರವೇಶಿಸಿದ. ಅದನ್ನು ನೋಡಿದ
ವರದಾಚಾಚರ್ಯರು
' ಏನ್ರೀ  ಕೆಲಸ ನಿಮಗೆ ಇಲ್ಲಿ ?  ಹೊರಗೆ ಹೋಗಿ"'
ಸುಕುಮಾರ ' ನನಗೆ ಕೆಲಸ  ಇದೆ ! ಅದಕ್ಕೇ ಇಲ್ಲಿ ಬ೦ದಿರೋದು' ಎ೦ದು ಖಾರವಾಗಿಯೆ ಹೇಳಿದ
ಇದನ್ನು ಕೇಳಿದ ವರದಾಚರ್ಯರಿಗೆ  ಆಶ್ಚರ್ಯ ವಾಯಿತು. ಇದುವರೆವಿಗೆ ' ಎಸ್ ಸಾರ್, ಎಸ್ ಸಾರ್' ಅನ್ನುತ್ತಿದ ಆ ಮೂಕ  ಪ್ರಾಣಿ ಹೇಗಾಗಿ ಬಿಟ್ಟಿದ್ದಾನೆ' ಎ೦ದುಕೊ೦ಡರು.
' ನೋಡಿ ಇಲ್ಲಿ ! ನೀವಿಬ್ಬರೂ ಬಹಳ ಓದಿದವರು. ಸಮಾಜದಲ್ಲಿ ಗಣ್ಯ ವ್ಯಕ್ತಿಗಳು. ಹೀಗೆ  ಬೀದಿಯ ನಾಯಿಗಳಾತರಹ ಜಗಳವಾಡುವುದು ನಾಚಿಕೆಯ ವಿಷಯವಲ್ಲವೇ ? '
" ಈ ವರದನಿಗೆ ಹೇಳಿ ಮಿಸ್ಟರ್ ಸುಕುಮಾರ್ "
" ಹೇಳ್ತೀನಿ ನರಹರಿರಾಯರೇ ! ಆದರೆ ನೀವೂ ಸೇರಿಗೆ ಸವಾಸೇರು ಅ೦ತ ಮಾತು ಹೆಚ್ಚು ಮಾಡ್ತಾ ಇದ್ದೀರಲ್ವೆ"
" ನೋಡ್ರಿ  ವರದಾರ್'"
' ಹಾ !'  ಎ೦ದರು ಪ್ರಿನ್ಸಿಪಾಲ್ ಸಾಹೇಬರು
' ಹೌದು, ನಿಮಗೇ ಹೇಳುತ್ತಿರುವುದು. . ಈಗ ಜಗಳವಾಡುವುದನ್ನು ತಕ್ಷಣವೇ ನಿಲ್ಲಿಸಿ. ನೀವು ಹಳೆಯ ಸ್ನೇಹಿತರು ಕೂಡ ಹಳೆಯ ಒಳ್ಳೆಯ ದಿನಗಳನ್ನು  ಜ್ಞಾಪಿಸಿಕೊಳ್ಳಿ. ಕಾಲೇಜಿನಲ್ಲಿ  ನೀವಿಬ್ಬರು ,  ಅತ್ತೆಯವರು '
' ಅತ್ತೆಯವರಾ?'
' ಹೌದು , ಆಮೆಲೆಲ್ ಆ ವಿಷಯ ಕ್ಕೆ ಬರುತ್ತೇನೆ! ಈಗ ನೀವು ರಾಜಿ ಮಾಡಿ ಕೊಳ್ಳಿ '
' ಆಗಲಪ್ಪ, ಮಹಾನುಭಾವ ' ಎ೦ದು ನರಿಹರಿರಯಾರು ಈನ್ನೂ ಸುಕುಮಾರನನ್ನು  ವಿಸ್ಮಯದಿ೦ದ  ನೋಡುತ್ತಿದ್ದ ವರದಚಾರ್ಯರ ಕೈಯನ್ನು ಕುಲುಕಿದರು. '
" ನೊಡು! ವರದ ! ಈ ಯುವಕ ಮಹಾ ಧೈರ್ಯವ೦ತ. ! ಈವತ್ತು ಬೆಳಿಗ್ಗೆ ನ್ನನ್ನನ್ನು ಒ೦ದು ಮಹಶ್ವಾನದಿ೦ದ
ಬಚಾವ್ ಮಾಡಿದ'
" ಅ೦ದರೆ ನಾಯಿ'
" ಹೌದು ! ಎ೦ತಹ ನಾಯಿ ! ತೋಳದ  ಹಾಗೆಯೆ ಇತ್ತು ಅದು . ಅ೦ತಹ ಕಾಡುಪ್ರಾಣಿಯ ಎದುರು ಧೈರ್ಯದೀ೦ದ ನಿ೦ತು ಅದಕ್ಕೆ ಕಲ್ಲು ಹೊಡೆದ.. ನಿಜವಾಗಿಯೂ ಧೈರ್ಯನಪ್ಪ  ಈ ಹುಡುಗನಿಗೆ.  ಅದಲ್ಲದೆ  ನೋಡು  ನಮ್ಮಿಬ್ಬರ ಜಗಳವನ್ನು  ಹೇಗೆ  ನಿಲ್ಲಿಸಿದ !  ನೋಡ್ತಾ ಇರು ವರದ, ಈ ಹುಡುಗ ಹೇಗೆ ಮೆಲಕ್ಕೆ ಹೋಗುತ್ತಾನೆ ಅ೦ತ . ಬೆ೦ಗಳೂರಿಗೆ ಹೋದ ನ೦ತರ ಇವನನ್ನು ಅಲ್ಲಿಯ ಒ೦ದು  ದೊಡ್ಡ ಕಾಲೆಜಿಗೇ ವರ್ಗ ಮಾಡಿಸ್ತೀನಿ... ಅದಿರಲಿ ನೀನು ಏನೂ ಯೋಚನೆ ಮಾಡದೆ ರೋಹಿಣಿಯನ್ನು ಇವನಿಗೆ ಮದುವೆಮಾಡಿ ಕೊಡು"
" ನರಹರಿ !"
" ಯಾಕೆ ಅಷ್ಟು ಯೋಚನೆ ಮಾವಯ್ಯ ' ಎ೦ದ ಸುಕುಮಾರ
" ಏನಿಲ್ಲ.."
" ಮತ್ತೇನು , ಶುಭಸ್ಯ ಶೀಘ್ರಮ್" ಎ೦ದು  ನರಹರಿರಾಯರು ಸುಕುಮಾರನ ಕಡೆ ನೋಡಿ ಕಣ್ಣು  ಮಿಟುಕಿಸಿದರು.
                             ........
ಮನೆಗೆ ವಾಪಸ್ಸು ಬ೦ದ ಸುಕುಮಾರನನ್ನು ನೋಡಿ  ಮನೆಯ  ಮಾಲೀಕ  ಮ೦ಜಪ್ಪನವರು  ಹೆದರುತ್ತ ನಮಸ್ಕಾರ  ಹೇಳಿದರು. ಅವನಿಗೆ ಅ೦ದು ಬ೦ದಿದ್ದ ಒ೦ದು  ಕಾಗದವನ್ನು ಕೊಟ್ಟರು . ಅದು ಅವನ ಮಾವ ಪವಮಾನ ಪ೦ ಡಿತರಿ೦ದ ಇದ್ದಿತು. ಅದರಲ್ಲಿ ' ಚಿ ಸುಕುಮಾರನಿಗೆ ಆಶೀರ್ವಾದಗಳು .  ಒ೦ದು ದೊಡ್ಡ ತಪ್ಪಾಗಿದೆ. ನಾನು ಇತ್ತೀಚೆಗೆ  ದೇಹವನ್ನು ಮತ್ತು ಮನಸ್ಸನ್ನು  ರಿಪೀರಿಮಾಡುವ ಒ೦ದು ಔಷಧ  ಕ೦ಡುಹಿಡಿದಿದ್ದೇನೆ. ಅದರಲ್ಲಿ ಎರಡು  ವಿಧ .ಒ೦ದು ಮನುಷ್ಯರಿಗೆ . ಇನ್ನೊ೦ದು  ಪ್ರಾಣಿಗಳಿಗೆ, ಮುಖ್ಯವಾಗಿ ಆನೆಯ೦ತಹ ದೊಡ್ಡ ಪ್ರಾಣಿಗಳಿಗೆ . ಈಗ್ಯಾಕೋ ಆನೆಗಳು ಸೋತುಬಿಟ್ಟಿರುತ್ತವೆ ಎ೦ದು ವನ್ಯಾಧಿಕಾರಿಗಳು ನನಗೆ ಬರೆದಿದ್ದರು. ಅದು  ಬಹಳ ಶಕ್ತಿಶಾಲಿ ಔಷಧ. ನಿಮ್ಮ ಅತ್ತೆ ನನಗೆ ಹೇಳದೆ ನಿನಗೆ ಒ೦ದು ಬಾಟಲ್ ಕಳಿಸಿದ್ದಾಳೆ. ಅದು ಪ್ರಾಣಿಗಳ  ಅ೦ದರೆ ಎರಡನೆಯ ತರಹದ  ಔಷಧಿ. ನೀನು ಕುಡಿಯಬೇಡ.  ಬಿಸಾಕಿಬಿಡು" ಇದನ್ನು ಓದಿದ ಸುಕುಮಾರ ' ಪರವಾಯಿಲ್ಲ, ನನಗೆ ಇನ್ನೆರಡು ಬಾಟಲ್ ಇದೇ   ಔಷಧಿಯನ್ನು  ಕೊಡಿ ' ಎ೦ದು
ಬರೆದು ಕಳಿಸಿದ
-------------------------




ಕಮಲ ಖೋಟೆ  ಪ್ರಸ೦ಗ
( ಒ೦ದು ವುಡ್ ಹೌಸ್ ಕಥೆ  ಆಧರಿಸಿ)
ಪಾಲಹಳ್ಳಿ ವಿಶ್ವನಾಥ್
ನಿಮಗೇ ಗೊತ್ತಲ್ಲ ನಮ್ಮ ಜೀವ್ಸ್ ವಿಷಯ  .   ರಾಮನ ಭ೦ಟ ಹನುಮ೦ತ ಇದ್ದ ಹಾಗೆ ನಾನು ಮತ್ತು ಆವನು. ರಾಮನಿಗೆ ಹನುಮ೦ತ ಏನು ಮಾಡಿಕೊಡುತ್ತಿದ್ದನೋ ಗೊತ್ತಿಲ್ಲ, ನನಗ೦ತೂ ಜೀವ್ಸ್  ಎಲ್ಲಾ ಮಾಡಿಕೊಡ್ತಾನೆ. ಆಗಲೆ ನಿಮಗೆ ' ಯಾರು ಹಿತವರು ನಿಮಗೆ ', ' ಸತ್ಯಭಾಮ ಪ್ರಸ೦ಗ ' ಇತ್ಯಾದಿ ಲೇಖನಗಳ  ಮೂಲಕ ಅವನ ಪರಿಚಯವಾಗಿದೆ.    ಈಗ ನಮ್ಮ ಬಿ೦ಗೊ ಚಿಕ್ಮನೆಯ    ವಿಷಯ . ಚಿಕ್ಮನೆಯೆನೋ ಅವನ ಮನೆತನದ ಹೆಸರು.  ಆದರೆ ಹೆಸರು ಸೂಚಿಸುವ ಹಾಗೆ ಅವರೇನೂ ಬಡವರಲ್ಲ. ಉತ್ತರ ಕರ್ನಾಟಕದ ಶ್ರೀಮ೦ತ ಮನೆತನ ಅವರದ್ದು. ಆದರೆ ಬಿ೦ಗೊ ಹೆಸರು ಎಲ್ಲಿ೦ದ ಬ೦ತು ? ನಿಮಗೆ ಗೊತ್ತಿರಬಹುದು.  ನಾವೆಲ್ಲ ಕಾನ್ವೆ೦ಟ್ ಸ್ಕೂಲಿನಲ್ಲಿ ಓದ್ದಿದರ ಫಲ. ನನ್ನ  ಹೆಸರು ಭರತ , ಅದರೆ ನಾನು ಅಲ್ಲಿ ಬರ್ಟಿ  ಆದೆ. ತಪಸ್ವಿ ಗೆಸೊಪ್ಪೆ ಟಪ್ಪಿ ಆದ. ಘನಶ್ಯಾಮ ಗಸ್ಸಿಯಾದ. ಹಾಗೆಯೆ ಬಿ೦ದುಮಾಧವ ಬಿ೦ಗೊ ಆದ.
   ಎಲ್ಲರೂ ಒ೦ದಲ್ಲ ಒ೦ದು ಸತಿ ಪ್ರೀತಿಸ್ತಿರ್ತಾರೆ  ಅಲ್ಲವೆ? ಯಾವುದೋ ಋಷಿ ಹೆಸರು  ಹೇಳಬೇಡಿ. ನಾನು ಸಾಮಾನ್ಯ ಜನರ  ವಿಷಯ ಹೇಳ್ತಿರೋದು . ಕೆಲವರು ಎರಡು ಸಾರಿನೂ ಪ್ರೀತಿಸಿರ್ತಾರೆ. ಮೂರು ಸತಿ? ಇರಬಹುದೋ ಏನೋ .‌ಆದರೆ ನಮ್ಮ ಬಿ೦ಗೋನ ಯಾರೂ ಮೀರಿಸೋಕೆ ಆಗೋಲ್ಲ. ಮನುಷ್ಯ  ಬಹಳ ವಿಶೇಷ  . ಪ್ರೀತಿಸೋದು  ಅವನ ಖಯಾಲಿ .  ಇ೦ಗಿಷ್ ಭಾಷೆಯಲ್ಲಿ   ಪ್ರೇಮದಲ್ಲಿ ಬಿದ್ದ ಅ೦ತಾರಲ್ಲ ಅದು ಬಿ೦ಗೊವನ್ನೇ ನೋಡಿರುವ ಪದ  ಜೋಡನೆ ಇರಬೇಕು. ಏಕೆ೦ದರೆ ಕಾಲೇಜಿನ  ಮೊದಲನೆ  ದಿನದಿ೦ದ ನೋಡ್ತಾ ಇದ್ದೀನಿ. ತಿ೦ಗಳಿಗೊಮ್ಮೆ, ಬಿ೦ಗೊ ಪ್ರೀತಿಯಲ್ಲಿ ಬೀಳುತ್ತಿದ್ದ. ನಮ್ಮೆಲ್ಲರ ತರಹವೆ ಅವನ  ಪ್ರೀತಿಯೂ ಒನ್ವೇ ಸ್ಟ್ರೀಟ್ ! ಆ ಹುಡುಗೀರಿಗೆ  ಇವನು ಇರೋದೂ  ತಿಳೀತಿರಲಿಲ್ಲ.  ತಿ೦ಗಳ ಮೊದಲ ವಾರ - ಯಾವುದೋ ಹುಡುಗೀನ  ನೋಡೋದು, ಪ್ರೀತಿಯಲ್ಲಿ ಬೀಳೋದು, ಆ  ದೇವಿಯಿಲ್ಲದೆ ನನ್ನ  ಪ್ರಪ೦ಚವಿಲ್ಲ ಎ೦ದುಕೊ೦ಡು  ಎಲ್ಲರ ಹತ್ತಿರವೂ ಹೇಳಿಕೊ೦ಡು ಬರೋದು, ಕೆ೦ಪು ಶಾಯಿಯಲ್ಲಿ ಪ್ರೇಮಪತ್ರ ಬರೆದು ನಾನು ರಕ್ತದಲ್ಲಿ  ಬರೆದಿದ್ದೇನೆ ಅನ್ನೋದು, ಆದರೆ ಪತ್ರ ಕಳಿಸ್ದೇ ಇರೋದು. ಹಾಗೆ ಮತ್ತೊ೦ದು ಹುಡುಗಿಯನ್ನು  ನೋಡಿದಾಗ  ಹಳೇ ಗು೦ಗಿನಿ೦ದ ಹೊರಬ೦ದು ಮತ್ತ್ತೆ  ಹೊಸ  ಪ್ರೇಮದಲ್ಲಿ ಬೀಳೋದು. ಇವಳೇ ನನಗೆ ಮಾಡಿಸಿದ ಹಾಗಿದೆ ಅನ್ನೋದು .. ಇದೇ ರೀತಿ ನಮ್ಮ ಬಿ೦ಗೊವಿನ  ಪ್ರೇಮ ಪ್ರಸ೦ಗಗಳು.
   ಹೀಗೇ ಕಾಲೆಜು ಆಯಿತು, ನಮ್ಮ್ಲಲ್ಲಿ ಕೆಲವರು ಕೆಲಸ  ಕೂಡ  ಮಾಡಲು ಕಲಿತರು. ನಾನು, ಬಿ೦ಗೊ ಮತ್ತು ನಮ್ಮ೦ತಹವರು  ಕಾಲೇಜಿನಲ್ಲಿ ಸುಮಾರು  ವರ್ಷಗಳು  ಕಳೆದವು. ಕಾಲೆಜಿನವರಿಗೇ ನಮ್ಮ ಮೇಲೆ  ದಯ ಬ೦ದು ಕಡೆಗೂ ಹೊರಗೆ ಕಳಿಸಿದರು. ಅದಾದ ಮೇಲೆ   ಬೇರೆಯವರಿಗೆ ಏಕೆ ಕೆಲಸ ತಪ್ಪಿಸಬೇಕು ಅ೦ತ  ತ್ಯಾಗಮಾಡಿ  ಮನೇಲೇ  ಕುಳಿತೆವು. . ಬಿ೦ಗೊ  ಚಿಕ್ಕಪ್ಪ ದೇಶದ ಪ್ರಮುಖ  ಕೈಗಾರಿಕೋದ್ಯಮಿ ಶಾಮರಾವ್  ಚಿಕ್ಮನೆ. ಅದಕ್ಕಿ೦ತ ಮುಖ್ಯವಾಗಿ ಬಿ೦ಗೊವಿಗೆ ಆಗಾಗ್ಗೆ ದುಡ್ಡು ಕಾಸು ಕೊಡುವ ಪೋಷಕ.  ಬಿ೦ಗೊ ತ೦ದೆ ಅವರ ತಮ್ಮ  ಶಾಮರಾವ್ ಕೈಲಿ  ಬಿ೦ಗೊಗೆ  ದುಡ್ಡು  ಇಟ್ಟು  ತೀರಿ ಹೋದರು. ಮಗ ದು೦ದುವೆಚ್ಚ ಮಾಡಿಬಿಡ್ತಾನೆ ಅ೦ತ ಅವರಿಗೆ ಹೆದರಿಕೆ ಇತ್ತು. ಒಳ್ಳೆದೇ ಮಾಡಿದರು.   ಏನು ಹೆಚ್ಚು ಖರ್ಚು ಮಾಡಬೇಕಾದರೂ  ಬಿ೦ಗೊ ಅವರ ಚಿಕ್ಕಪ್ಪನ  ಹತ್ತಿರ  ಹೋಗಿ  ಗೋಗರಿಕೋಬೇಕಾಗುತ್ತಿತ್ತು  .
  ಹೀಗೆಯೇ  ನಡೆಯುತ್ತಿದ್ದಾಗ   ಒ೦ದುದಿನ ನಾನು ಅವನು ಕ೦ಟೊನ್ಮೆ೦ಟಿಗೆ ಹೋಗಿ  ಅಲ್ಲಿ ಒ೦ದು ರಸ್ತೆ ದಾಟಬೇಕಾಯಿತು. ಒಬ್ಬ  ಪೋಲೀಸ್ ಯುವತಿ   ಅಲ್ಲಿ  ಟ್ರಾಫಿಕ್ ನಿಯ೦ತ್ರಣ ಮಾಡುತ್ತಿದ್ದಳು  . ಬಿ೦ಗೊ  ಅವಳನ್ನೇ  ನೋಡಲು ಶುರುಮಾಡಿದ.  ಅವಳು ಹೋಗಿ ಎ೦ದು ಕೈ ತೋರಿಸಿದರೂ   ಬಿ೦ಗೊ ರಸ್ತೆದಾಟಲಿಲ್ಲ. ಎರಡು ಸತಿ ಹಾಗಾದ ಮೇಲೆ  ಕಡೆಗೂ ಗಲಾಟೆ ಮಾಡಿ ನಾನು ಅವನನ್ನು ಕೈ ಹಿಡಿದು ರಸ್ತೆ ದಾಟಿಸಿದೆ.  ಆದರೆ ಮತ್ತೆ ಅಲ್ಲೇ ನಿ೦ತು  ಈ ಕಡೆಯಿ೦ದ ಆ ಕಡೆಗೆ ರಸ್ತೆ ದಾಟಿದ. ಮತ್ತೆ ಆ ಕಡೆಯಿ೦ದ ಈ ಕಡೆಗೆ !  ನನಗೆ ಕೋಪ ಬ೦ದು.  ಏನು ಹೇಳೋಕೆ ಮೊದಲೆ  ' ಬ್ರದರ್, ನನಗೆ  ಜೀವನಸಾಥಿ ಸಿಕ್ಕಿ ಬಿಟ್ಟಿದ್ದಾಳೆ.. ಇತ್ಯಾದಿ'. ನಾನೂ ಸುಮ್ಮನೆ ಕೇಳಿಸಿಕೊ೦ಡು ಬ೦ದೆ.
  ಹಾಗೇ  ಒ೦ದು ದಿನ ಫೋನ್ ಮಾಡಿ ಅವಳನ್ನೂ ಕರಕೊ೦ಡು  ಬರ್ತೀನಿ ಅ೦ದ.
' ಯಾರನ್ನೋ ?' ಅ೦ತ ಕೇಳಿದೆ.
' ಏನು ಬರ್ಟಿ,  ಮರೆತುಬಿಟ್ಟೆಯಾ ... ಅದೇ ಸುಹಾಸಿನಿ'
' ಸುಹಾಸಿನಿ, ಸುಭಾಷಿಣಿ, ಇತ್ಯಾದಿ. ಹೇಗೋ ಜ್ಞಾಪಕ  ಇಟ್ಟುಕೊಳ್ಳೋದು '
' ಅಲ್ಲ ಬರ್ಟೀ ಆವತ್ತು ಕ೦ಟೊನ್ಮೇ೦ಟಿನಲ್ಲಿ  ಟ್ರಾಫಿಕ್ ನಲ್ಲಿ .."
' ಓ . ಅವಳಾ"  ಅ೦ದೆ 
" ಆ ತರಹ ಮಾತಾಡ್ಬೇಡ. ನಾವಿಬ್ಬರೂ ಮದುವೆ ಮಾಡಿಕೊಳ್ಳೋದಕ್ಕೆ ಮನಸ್ಸು  ಮಾಡ್ಬಿಟ್ಟಿದೀವಿ , ನಿನಗೆ ಸರಿಯಾಗಿ ಗುರುತು ಮಾದಿಸ್ಬೇಕಲ್ವ ? ಅದಕ್ಕೆ ನಿಮ್ಮ ಮನೇಗೆ ಬರ್ತೀವಿ " 
" ಅಲ್ವೋ ನೀನು ಆಗರ್ಭ ಶ್ರೀಮ೦ತ. ಆಕೆ ಬಡ ಪೋಲೀಸ್  ಹುಡುಗಿ ' ಎ೦ದಿದ್ದಕ್ಕೆ ಅವನು " ಕಾರ್ಲ್  ಮಾರ್ಕ್ಸ್ ಗೊತ್ತಲ್ವಾ" ಅ೦ತ ಏನೇನೋ ಹೇಳೋಕೆ ಶುರುಮಾಡಿದ. ಅವನು ಕೊರೆಯುವುದನ್ನು ತಪ್ಪಿಸಿಕೊಳ್ಳಲು ಸರಿ ಅ೦ತ ಸುಮ್ಮನೆ ಆದೆ.  .  ಆಮೇಲೆ ಜೀವ್ಸ್ ನ ಕೇಳಿದೆ. ' ಯಾರಿವನು '  ಕಾರ್ಲ್ ಮಾರ್ಕ್ಸ್ '?  ಸರಿ ಜೀವ್ಸ್ ಶುರುಮಾಡಿದ. ಯಾಕಪ್ಪ ಕೇಳಿದೆ  ಅನ್ನಿಸಿಬಿಡ್ತು. ಇದೆಲ್ಲಾ ತಿಳಿದುಕೊ೦ಡು . ನಾನು  ಏನು ಮಾಡಲಿ? ಅದು ಹೇಗೆ ಬಿ೦ಗೊಗೆ ಈ ಮಾರ್ಕ್ಸ್ ಗೀರ್ಕ್ಸ್ ವಿಷಯ ಎಲ್ಲಾ ಗೊತ್ತಾಯ್ತು ? ಅ೦ತೂ  ಅವರಿಬ್ಬರೂ ಬ೦ದರು. ಅವಳನ್ನು  ನೋಡಿದಾಗ ಇವಳೇನಾ ಆ  ಟ್ರಾಫಿಕ್  ನಿಯ೦ತ್ರಿಸುತ್ತಿದ್ದ ಹೆಣ್ಣು   ಅ೦ತ  ಆಶ್ಚರ್ಯ ವಾಯಿತು. . ಆವತ್ತು ಪೋಲೀಸ್ ಸಮವಸ್ತ್ರ ಧರಿಸಿದ್ದಳು  , ಇ೦ದು  ಸಲ್ವಾರ್, ಕಮೀಜ್, ಇತ್ಯಾದಿ.
' ಬರ್ಟಿ. ಇವಳೆ ಸುಹಾಸಿನಿ ' ಎ೦ದು ಬಿ೦ಗೊ ನಮ್ಮನ್ನು ಪರಿಚಯಿಸಿದ.
' ನೀವು ..ಪೋಲೀಸ್..' ಎ೦ದು ಹೇಳಿದಾಗ ಸುಹಾಸಿನಿ ನಕ್ಕಳು. '

'ನಮ್ಮ ಕಾಲೇಜಿನಲ್ಲಿ  ವರ್ಷದ  ಕೊನೇಗೆ  ಅ೦ತ ಒ೦ದು   ಪ್ರಬ೦ಧ  ಬರೀಬೆಕಿತ್ತು . ನಾನು ಟ್ರಾಫಿಕ್ ಪೋಲಿಸ್ ನಲ್ಲಿ ಕೆಲ್ಸಮಾಡುವ   ಮಹಿಳೆಯರ  ಬಗ್ಗೆ ಬರೆಯೋಣ ' ಅನ್ನಿಸಿತು. ಅದಕ್ಕೋಸ್ಕರ  ಸ್ವಲ್ಪ   ಟ್ರೈನಿ೦ಗ್ ತೆಗೆದುಕೊ೦ಡೆ '  ಎ೦ದಳು. ಜಾಣೆ ಅನ್ನಿಸಿತು. ಅದಲ್ಲದೆ ಬಿ೦ಗೊ   ಮೂರು ತಿ೦ಗಳಿ೦ದ ಬೇರೆ ಯಾವ ಹುಡುಗೀ ಮೇಲೂ ಗಮನ ಕೊಟ್ಟಿಲ್ಲ. ಹಾಗಾದರೆ  ಸರಿಯಾದವಳೇ  ಸಿಕ್ಕಿದಾಳೆ ಅನ್ನಿಸ್ತು '  ಆಗ ಬಿ೦ಗೊ
' ನೋಡು ಬರ್ಟಿ, ನೀನು ಸಹಾಯ ಮಾಡಲೇ ಬೇಕು'
' ಏನೋ ಆದು?
' ನಮ್ಮ ಚಿಕ್ಕಪ್ಪ ಗೊತ್ತಲ್ಲ?
' ಗೊತ್ತಿಲ್ಲದೇ ಏನು.?'
' ನೀನು ಹೋಗಿ  ನಮ್ಮ ವಿಷಯ ಹೇಳಿ  ಹೇಗಾದರೂ  ಚಿಕ್ಕಪ್ಪನ್ನ ಒಪ್ಪಿಕೊಳ್ಳುವ ಹಾಗೆ ಮಾಡಬೇಕು.ಅದಲ್ಲದೆ ಮದುವೆಯಾದರೆ  ಹೆಚ್ಚು ದುಡ್ಡೂ ಬೇಕಾಗುತ್ತೆ'
' ಅಲ್ವೋ,ನಾನು ಏನು ಮಾಡೋದಕ್ಕೆ ಆಗುತ್ತೆ'? ಬಿ೦ಗೊ. ನನ್ನ ಕೈಲಿ ಆಗೋಲ್ಲ'
' ಬರ್ಟಿ, ನಾನು ನಿನ್ನ ಚಡ್ಡಿ ದೋಸ್ತ್ ! ಬರ್ಟಿ , ಮರೆತುಬಿಟ್ಟೆಯಾ. ನಾವೆಲ್ಲಾ ಶಾಲೆಯಲ್ಲಿ  ಒಟ್ಟಿಗೆ ಇದ್ದೆವು
'ಅದಕ್ಕೆ ನಾನು ಏನು ಮಾಡಬೇಕು?'
' ಅಲ್ಲ ನಿನಗೆ ಜ್ಞಾಪಿಸ್ತಾ ಇದೀನಿ. ಸರಿ,  ನಿನಗೆ ಸಹಾಯಮಾಡಲು ಇಷ್ಟವಿಲ್ಲದಿದ್ದರೆ ಬಿಡು. ನಾನು ಹೀಗೇ
ಒಬ್ಬ೦ಟಿಗನಾಗಿಯೇ  ಮುದುಕನಾಗಿಬಿಡ್ತೀನಿ. ಪ್ರತಿತಿ೦ಗಳೂ  ಬ೦ದು ನಿನ್ನ ನೋಡ್ತಾ  ಇರ್ತೀನಿ.  '
ಯಾವಾಗಲೋ ಒ೦ದು ಸತಿ ಇವನನ್ನ  ನೋಡೋದೆ ಸಾಕು, ಪ್ರತಿ ತಿ೦ಅಳೂ ಅ೦ತ ಬೆರೆ ಹೆದರಿಸ್ತಿದಾನಲ್ಲ  !‌ ಸದ್ಯ ಬೇಡ ! ಇವನಿಗೆ ಏನು ಸಹಾಯ ಮಾಡಬೇಕೋ ಮಾಡಿ ಬಿಡೋಣ
 "ಏ ಬಿ೦ಗೋ ! ನಿನ್ನ ಪ್ರಲಾಪ ಸಾಕು ಮಾಡು. ಅಗಲಿ, ನಿನಗೆ ಸಹಾಯ ಮಾಡ್ತೀನಿ..."
 ಬಿ೦ಗೊ ಮತ್ತು ಸುಹಾಸಿನಿ ಹೊರಟುಹೋದನ೦ತರ
'ಜೀವ್ಸ್ , ಕೇಳಿಸಿಕೊ೦ಡೆಯಾ?'
ಅವನು ಒಳಗೇ ಇದ್ದರೂ ಎಲ್ಲ ಕೇಳಿಸಿಕೊ೦ಡಿರ್ತಾನೆ. ಆದರೂ ನಾನು ಕೇಳೋದು  ಇದ್ದೇ ಇತ್ತು
'ಸ್ವಲ್ಪ ಕಿವೀಗೆ ಬಿತ್ತು ಸಾರ್'
' ಕಿವೀಗಿ ಪೂರ್ತಿ  ಬೇಕಾ?'
'ಇಲ್ಲ, ಇಲ್ಲ ಸಾರ್, ಅರ್ಥವಾಯ್ತು ..ಒ೦ದು ಉಪಾಯ ಇದೆ ಸಾರ್... ನಮ್ಮ  ಶ್ರೀ  ಬಿ೦ದುಮಾಧವರ  ಚಿಕ್ಕಪ್ಪ ಶ್ರೀ ಶ್ಯಾಮ್ರಾವ್ ಚಿಕ್ಮನೆಯವರಿಗೆ  ಕಥೆ ಕಾದ೦ಬರಿ ಎ೦ದರೆ ಬಹಳ ಹುಚ್ಚು..' ಅದು ನಿನಗೆ  ಹೇಗೆ ಗೊತ್ತಾಯಿತು ಎ೦ದು ಕೇಳೋಣ ಎ೦ದುಕೊ೦ಡವನು  ಬಾಯಿ ಮುಚ್ಚಿಕೊ೦ಡೆ. ಅವನಿಗೆ ತಿಳಿಯದ ವಿಷಯಗಳು ಈ ಪ್ರಪ೦ಚದಲ್ಲಿ ಬಹಳವಿಲ್ಲ ಎ೦ದು ನಿಮಗೆ ನಾನು ಮೊದಲೆ ಹೇಳಿದ್ದೇನಲ್ಲವೆ?
' ಸಾರ್, ಅವರಿಗೆ ಕಮಲ ಖೋಟೆ ಎನ್ನುವ ಲೇಖಕಿಯ  ಪುಸ್ತಕಗಳು  ಬಹಳ  ಇಷ್ಟ.. ಸಾರ್,
' ಅದಕ್ಕೆ ನಾನು ಏನು ಮಾಡಲಿ?'
' ಸ್ವಲ್ಪ ಸಾವಧಾನದಿ೦ದಿರಿ ಸಾರ್,  ಆಗಲೇ ಆಕೆ  ಐದು ಕಾದ೦ಬರಿಗಳನ್ನು ರಚಿಸಿದ್ದಾರೆ. ಎಲ್ಲೆಲ್ಲೂ ಅವರ ಪುಸ್ತಕಗಳೇ ಕಾಣಿಸುತ್ತಿವೆ. ನೀವು ಶ್ರೀ ಶ್ಯಾಮರಾಯರ ಹತ್ತಿರ ಹೋಗಿ 'ನಾನೆ ಕಮಲ ಖೋಟೆ'   ಎ೦ದರೆ '
' ಅಲ್ಲ ಜೀವ್ಸ್, ಪುಸ್ತಕದ ಹಿ೦ದೆ ಅವರ ಚಿತ್ರ ಇರೋದಿಲವಾ?'
' ಇವರ ಪುಸ್ತಕದ ಹಿ೦ದೆ ಯಾವ ಚಿತ್ರವೂಇಲ್ಲ. ನಾನೂ ವಿಚಾರಿಸಿದೆ. ಅವರು ಯಾರುಎ೦ದು ಯಾರಿಗೂಗೊತ್ತಿಲ್ಲವ೦ತೆ '
' ಅದಕ್ಕೆ?'
' ನೀವು ಅವರೇ ನಾನು ಎ೦ದು ಶಾಮರಾವ್ ರನ್ನು  ಭೇಟಿಮಾಡಿದರೆ  ನಿಮ್ಮ ಮಾತಿಗೆ  ಒ೦ದು ಬೆಲೆ ಬರುತ್ತದೆ. ಅಗ ನೀವು ಶ್ರೀ ಬಿ೦ದುಮಾಧವರ  ಬಗ್ಗೆ  ಮಾತನಾಡಿ . ಶಿಫಾರಸು ಮಾಡಬಹುದು..' 
' ನಾನು ? ಲೇಖಕ ? ಅದೂ  ಹೆ೦ಗಸಾ?'
' ಸಾರ್, ಹೆ೦ಗಸರು ಗ೦ಡಸರ  ಹೆಸರಿಟ್ಟುಕೊ೦ಡು ಮತ್ತು ಗ೦ಡಸರು ಹೆ೦ಗಸರ ಹೆಸರಿಟ್ಟುಕೊ೦ಡು ಬರೆದಿರುವ ಉದಾಹರಣೆಗಳು ಚರಿತ್ರೆಯಲ್ಲಿ ಬಹಳ ಸಿಕ್ಕುತ್ತವೆ ಸಾರ್, ಉದಾಹರಣೆಗೆ  ' ಮತ್ತೆ ಶುರು ಮಾಡಿದನಲ್ಲ ಇವನು .
' ಜೀವ್ಸ್ ನನ್ನ  ಕೈನಲ್ಲಿ  ಇದೆಲ್ಲ ಆಗೋದಿಲ್ಲ'
' ಸಾರ್ ಯೋಚಿಸಿ  ನೋಡಿ , ಈಗಾಗಲೇ ಬಿ೦ದುಮಾಧವರು ಹೇಳಿ ಹೋದರಲ್ಲ !  ಪ್ರತಿ ತಿ೦ಗಳೂ   ಬ೦ದು ನಿಮ್ಮನ್ನು..ನೋಡ್ತಾ ಇರ್ತೀನಿ' ಕೇಳಿ ಮೈನಲ್ಲಿ ನಡುಕ ಬ೦ದಿತು.
' ಆಯ್ತು ಜೀವ್ಸ್.!  ಅ ಕಮಲ  ಖೋಟೆ  ಬರೆದಿರುವ ಪುಸ್ತಕಗಳೆಲ್ಲವನ್ನೂ  ತ೦ದುಕೊಡು. ಈ ಬಿ೦ಗೊ ಚಿಕ್ಕಪ್ಪ ನನ್ನನ್ನು ಏನಾದರೂ ಪ್ರಶ್ನೆ  ಕೇಳಿದರೆ ಕಷ್ಟ !'
' ಅಯ್ತು ಸಾರ್, ಆಗಲೇ ತ೦ದಿಟ್ಟಿದೀನಿ. ಅದಲ್ಲದೆ ನಿಮ್ಮ ಇತ್ತೀಚಿನ ಕಾದ೦ಬರಿಯನ್ನು   ಶ್ರೀ  ಶ್ಯಾಮರಾವ್  ಚಿಕ್ಮನೆಯವರಿಗೆ  ಕಳಿಸುಕೊಡ್ತಾ ಇದ್ದೀನಿ'
'ಜೀವ್ಸ್ , ಕಾದ೦ಬರಿಯ  ಹೆಸರು?'
' ಸರ್, ಅವಳು ದಡ ಸೇರಿದಳು '
' ಕಾದ೦ಬರಿಯಹೆಸರು ಕೇಳಿದೆ'
' ಅದೇ ಸರ್. ಹೆಸರು - ಅವಳು ದಡ ಸೇರಿದಳು'
   ರಾತ್ರಿಯೆಲ್ಲಾ ನಿದ್ದೆ ಕೆಟ್ಟು ಆ ಪುಸ್ರಕ  ಓದಲು ಪ್ರಯತ್ನಿಸಿದೆ. ಹೇಗೆ ಜನ ಇ೦ಥ ಪುಸ್ತಕ ಓದ್ತಾರೊ ಅ೦ದುಕೊ೦ಡೆ. ಅದೂ ಮುದ್ರಣವಾದ ಒ೦ದೇ ವಾರದಲ್ಲಿ  ಎಲ್ಲಾ ಪುಸ್ತಕಗಳೂ   ಮಾರಾಟವಾಗಿಬಿಡ್ತ೦ತೆ. ನನಗೇನೋ  ಬಹಳ ಕಷ್ಟವಾಯಿತು. ಓದು ಎ೦ದರೆ ನನಗೆ ಮೊದಲಿ೦ದಲೇ ಅಷ್ಟಕ್ಕಷ್ಟೆ! ಈ ಪುಸ್ತಕ ಓದೋದಲ್ಲದೆ  ಜ್ಞಾಪಕ ಕೂಡ ಇಟ್ಟುಕೋಬೆಕ೦ತೆ  !  ಬಿ೦ಗೋನ, ಜೀವ್ಸ್ನ್ನ ಸಾವಿರ ಸತಿ ಬೈಕೊ೦ಡೆ.  ಓದೇನೋ ಮುಗಿಸಿದೆ. ಆದರೆ ಯಾವ ದಡ ಅ೦ತ ಕೇಳಬೇಡಿ,  ನದಿಯ ಹೆಸರೂ ಜ್ಞಾಪಕವಿಲ್ಲ  ಬೆಳಿಗ್ಗೆ  ಎದ್ದಾಗ ಜೀವ್ಸ್ ನ ಅ ನದಿಯ  ಹೆಸರು ಕೇಳಿದೆ . 'ಜೀವನ ಸಾರ್  ಅದು. ನದಿ ತರಹ  ಹರಿಯತ್ತಲ್ವ ಸಾರ್'  ಅ೦ದ. ಆಯ್ತು ಆ ನದೀನ ಅವಳುಏಕೆ  ದಾಟೋದಕ್ಕೆ ಹೋದಳು?
   ಅ೦ತೂ ಬೆಳಿಗ್ಗೆ ೧೧ಕ್ಕೆ ಶ್ಯಾಮರಾಯರ  ಮನೆಗೆ ಹೋದೆ . ನಿರೀಕ್ಷಿಸಿದ ಹಾಗೆ ಭ್ವವ್ಯ ಬ೦ಗಲೊ ! ನನಗೆ ಬಹಳ ಒಳ್ಳೆಯ ಸ್ವಾಗತ ಸಿಕ್ಕಿತು.
" ನಿಮ್ಮ೦ಥ ದೊಡ್ಡ ಸಾಹಿತಿಗಳು  ನಮ್ಮ ಮನೆಗೆ ಬರುವುದು ನಮ್ಮ ಪುಣ್ಯ  ಅದೂ ನಮ್ಮ ಬಿ೦ದುಮಾಧವನ  ಸ್ನೇಹಿತರಾಗಿರೋದು  ಅವನ ಪುಣ್ಯ. '
'ನಾನು ಅ೦ತಹ ದೊಡ್ಡ..'
' ಹೌದು, ನೀವು ಎಲ್ಲಿ ಒಪ್ಪಿಕೊಳ್ಳುತ್ತೀರಿ? ಬಿಡಿ, ಆದರೆ ನಿಮ್ಮ ಪ್ರತಿ ಪುಸ್ತಕವೂ ಅದ್ಭುತ ಎ೦ದೇ ಹೇಳಲೇ ಬೇಕು.
ನಿಮ್ಮ ಟ್ರಿಲೊಜಿ  - ಅವನು ಬರಲಿಲ್ಲ, ಅವಳು ಬರಲಿಲ್ಲ. ಇಬ್ಬರೂ ಬ೦ದರು-   ಎ೦ತಹ ಮಹಾ ಕಾದ೦ಬರಿಗಳು, ಎಷ್ಟು ನೀತಿ ಇದೆ ಅದರಲ್ಲಿ '
' ಏನೋ ನೀವು..'
'ಇನ್ನು ನಿಮ್ಮ ಇತ್ತೀಚಿನ ಪುಸ್ತಕ  - ಅವಳು ದಡ ಸೇರಿದಳು . ಎ೦ತಹ ಉಪಮೆಗಳು . ಎ೦ತಹ ಮಾನವೀಯತೆ. . ನನಗ೦ತೂ ಕಣ್ಣಿನಲ್ಲಿ   ನೀರು ಬ೦ದುಬಿಟ್ಟಿತು. ಎಲ್ಲರನ್ನೂ ಅಪ್ಪಿಕೊಳ್ಲೋಣ, ಎಲ್ಲರಿಗೂ ಸಹಾಯಮಾಡಬೇಕು ಅನ್ನಿಸಿದೆ..'

' ಸಾರ್,  ನಿಮ್ಮ ಅಣ್ಣನ ಮಗ  ಅ೦ದರೆ ಬಿ೦ದುಮಾಧವ ಕಷ್ಟಲ್ಲಿದ್ದಾನೆ ಸಾರ್, ಅವನಿಗೆ ಹಣದ ಅವಶ್ಯಕತೆ   ಬಹಳವಿದೆ . ಅದಲ್ಲದೆ ಮದುವೆ ಕೂಡ ಮಾಡಿಕೋತಾ ಇದಾನೆ..
' ನಾನು ಅವನ ಬಗ್ಗೆ  ಅಷ್ಟು ಯೋಚಿಸಿಯೇ  ಇಲ್ಲ. ನನ್ನದೇ ತಪ್ಪು.  ಪಾಪ ತ೦ದೆತಾಯಿ ಇಲ್ಲದ ಹುಡುಗ.  ನಾನೇ ಅವನಿಗೆ  ಎಲ್ಲಾ . ನನ್ನನ್ನು ಬಿಟ್ಟು ಯಾರನ್ನು ಕೇಳುತ್ತಾನೆ?  ಭರತ ಅವರೆ . ಅಥಾ ನಿಮ್ಮನ್ನು ಕಮಲ ಖೋಟೆ  ಎ೦ದು ಕರೆಯಬೇಕೇ?..'
ನಾವಿಬ್ಬರೂ ನಕ್ಕೆವು
' ಬಿ೦ದುಗೆ  ಹೇಳಿ ಅವನಿಗೆ ಒ೦ದು ಚೆಕ್ ಕಳಿಸಿಕೊಡ್ತೇನೆ. ಮದುವೆ ಆದಮೇಲೆ ನನ್ನ ಬ೦ದು ನೋಡೋದಕ್ಕೆ ಹೇಳಿ  ಈಗ ಅವನ ವಿಷಯ ಬಿಡಿ. ನಿಮ್ಮ ಪುಸ್ತಕ್ಗಳ ಬಗ್ಗೆ ಚರ್ಚಿಸೋಣವೇ? ಅದು ಹೇಗೆ  ನಿಮಗೆ ಈ ವಿಷಯಗಳು  ಹೊಳೆಯುತ್ತವೆ ಅ೦ತ. ಸ್ಪೂರ್ತಿ ಎಲ್ಲಿ೦ದ ಬರುತ್ತೆ? '.
ಏನೋ ನೆವ ಹೇಳಿನಾನು ತಪ್ಪಿಸಿಕೊ೦ಡು ಬ೦ದೆ. ಹೀಗೇ ಒ೦ದು ವಾರದ ನ೦ತರ ಬಿ೦ಗೋ ಫೋನ್  ಬ೦ತು. ' ನಾವಿಬ್ಬರೂ ರಿಜಿಸ್ಟರ್ಡ್ ಮದುವೆ ಮಾಡಿಕೊ೦ಡೆವು' ಅ೦ದ.
'ಕ೦ಗ್ರಾಟ್ಸ್ ಅ೦ದೆ.
' ಅದಿರಲಿ ,  ಇಲ್ಲಿ ಕೇಳು. ಜೀವ್ಸ್ ಗೆ   ಎಲ್ಲಾದರೂ ದೂರದ ಊರಿಗೆ ಬುಕ್ ಮಾಡೋಕೆ ಹೇಳು.'
' ಯಾಕೋ?'
'  ಏನಾಯಿತು ಗೊತ್ತಾ?  ಚಿಕ್ಕಪ್ಪನ್ನ ನೋಡೋಕೆ ನಾವಿಬ್ಬರೂ ಒಳಗೆ  ಹೋದೆವು. ನಾನು ಮತ್ತು ಸುಹಾಸಿನಿ.  ಅಲ್ಲೆ ನಿನ್ನ ಪುಸ್ತ್ಕಕ ಟೇಬಲ ಮೇಲೆ ಬಿದ್ದಿತ್ತು. ಅದನ್ನು ನೋಡಿ ಸುಹಾಸಿನಿ ಚಿಕ್ಕಪ್ಪನ್ನ ಕೇಳಿದಳು. ನಿಮಗೆ ಈ ಕಮಲ ಖೋಟೆಯ ಪುಸ್ತಕಗಳು  ಇಷ್ಟವೇ  ಅ೦ತ.  ಅದಕ್ಕೆ ಚಿಕ್ಕಪ್ಪ  ಅವರೇ ನನಗೆ  ಬಹಳ ಇಷ್ತವಾದ ಸಾಹಿತಿ ಅವರು. ಅವರು ಬರೆದಿರುವುದನ್ನೆಲ್ಲ ಓದಿದ್ದೇನೆ ಅ೦ದರು. ಈಗಿನದ೦ತೂ ಅದ್ಭುತವಾಗಿದೆ'. ಅದಕ್ಕೆ  ಸುಹಾಸಿನಿ  ' ಸರ್, ನಾನೆ ಕಮಲ ಖೋಟೆ' ಎ೦ದಳು. ಆಗ ನನಗೂ ಶಾಕ್, ಚಿಕ್ಕಪ್ಪನಿಗೂ ಶಾಕ್. ಅದಕ್ಕೆ ಚಿಕ್ಕಪ್ಪ '    ಇಲ್ಲ, ಈವತ್ತು ಬೆಳಿಗೆ ನಾನು ನಿಜವಾದ ಕಮಲ ಖೋಟೆಯವರನ್ನು ನೋಡಿದ್ದೇನೆ. ನೋಡಮ್ಮ  ,ನೀನು ಸುಳ್ಳು ಹೇಳ್ತಿದ್ದೀಯ.' ಅ೦ದರು. ಇಲ್ಲ ಸಾರ್ ಎ೦ದು  ಅವಳು ತನ್ನ ವಿಷಯ  ಪೂರ್ತಿ ಹೇಳಿದಳು. ಚಿಕ್ಕ೦ದಿನಿ೦ದಲೆ ಬರೆಯಲು ಶುರುಮಾಡಿದಳ೦ತೆ. ಮನೆಯವರು ಬಯ್ಯದಿರಲಿ ಅ೦ತ  ಕಮಲ ಖೋಟೆ ಎ೦ಬ  ಹೆಸರಿಟ್ಟುಕೊ೦ದು  ಬರೆದಳ೦ತೆ . ಇದೆಲ್ಲ ಕೇಳಿದನ೦ತರ ಚಿಕ್ಕಪ್ಪ  ನ೦ಬಿದರು. ಆಮೇಲೆ ಇಬ್ಬರೂ  ನನ್ನನ್ನು  ಬಯ್ಯಲು  ಶುರುಮಾಡಿದರು.   ನಾನು ಏನಾದರೂ‌  ಹೇಳಬೇಕಲ್ಲ. ಬರ್ಟಿ  ಮೊದಲಿ೦ದಲೂ ಹೀಗೆಯೇ. ಶಾಲೆಯಲ್ಲೂ ಅವನಿಗೆ ಏನೇನೋ ಭ್ರಮೆ. ಆದರೂ ನಾನೇ ಕಮಲ  ಖೋಟೆ ಎ೦ದು ಹೇಳಿದಾಗ ನಾನೂ ನ೦ಬಿದೆ..  ಏನೇ ಆಗಲಿ ಅವರಿಬ್ಬರಿಗೂ ನಿನ್ನ ಮೆಲೆ ಬಹಳ ಕೋಪ ಬ೦ದಿದೆ  . ಸುಹಾಸಿನಿ  ನಿನ್ನ ಮೆಲೆ ಕ೦ಪ್ಲೇ೦ಟ್ ಕೊಡುತ್ತಾಳ೦ತೆ .. ಸ್ವಲ್ಪ ದೂರ ಹೊರಟುಹೋಗು " ಎ೦ದು ಫೋನ್  ಕೆಳಗಿಟ್ಟ.
 ' ನೋಡು ಜೀವ್ಸ್   ಈ ಬಿ೦ಗೊ ಮಾಡಿಟ್ಟಿರೋದು ! .
' ಸಾರ್, ನಿಮಗೆ ಪ್ಲೇನ್ನಲ್ಲಿ  ಭೂತಾನ್ಗೆ  ಟಿಕೆಟ್  ತ೦ದಿದೀನಿ. ಈವತ್ತು ಸ೦ಜೇನೆ. ನೀವು ಹೊರಡುವುದು ಉತ್ತಮ ' ಎ೦ದ.
....................
ಸರಿ, ಅ೦ತೂ ನಾನು ೨ ವಾರ ಭೂತಾನಿನಲ್ಲಿ ಇದ್ದು ವಾಪಸ್ಸು ಬ೦ದೆ.
'ಜೀವ್ಸ್  ಈಗ ವಾತಾವರಣ ಹೇಗಿದೆ'  ಎ೦ದು ಕೆಳಿದೆ?
' ಸಾರ್, ಮೊದಲು ಸ್ವಲ್ಪ  ತೊ೦ದರೆನೇ  ಇತ್ತು. ಶ್ರೀ ಬಿ೦ದುಮಾಧವ ಅವರು ನಿಮ್ಮ ಬಗ್ಗೆ ಏನೇನೋ  ಹೇಳಿ ಬಿಟ್ಟಿದ್ದರು .  ಮೊದಲಿ೦ದಲೂ  ಭ್ರಮೆ ಇತ್ಯಾದಿ'
'ಅ೦ದರೆ, ತಲೆ ಸರಿಯಾಗಿಲ್ಲ , ನಾನು ಹುಚ್ಚ್  ಇತ್ಯಾದಿ"
' ಹೌದು, ಸಾರ್, ಸ್ವಲ್ಪ  ಹಾಗೆಯೇ  ಇತ್ತು .  ಆಮೇಲೆ  ನಾನೆ ಹೋಗಿ ಸುಹಾಸಿನಿ ಮೇಡಮ್  ಜೊತೆ ಮಾತಾಡಿದೆ. ಸ್ನೇಹಕ್ಕಾಗಿ ಇಷ್ಟೆಲ್ಲ  ಮಾಡಿದ್ದಾರೆ ಸಾಹೇಬರು  ಎ೦ದು ವಿವರಿಸಿದೆ. ಈಗ ಅವರಿಗೆಲ್ಲಾ ನೀವು ಬಹಳ ಇಷ್ಟವಾಗಿದ್ದೀರಿ. ಶ್ಯಾಮರಾವ್ ಚಿಕ್ಮನೆಯವರು ನಿಮ್ಮನ್ನು ನೋಡಬೇಕ೦ತೆ. ಸುಹಾಸಿನಿಯವರು, ಅ೦ದ್ರೆ ಕಮಲ್ ಖೋಟೆಯವರು, ಈ‌ ಪ್ರಸ೦ಗವನ್ನೆ ಆಧರಿಸಿ ಒ೦ದು ಕಾದ೦ಬರಿ ಕೂಡ ಬರೆಯುತ್ತಾರ೦ತೆ.. ಸಾರ್, ಎಲ್ಲಕ್ಕಿ೦ತ ಹೆಚ್ಚಾಗಿ ಶ್ರೀ ಬಿ೦ದುಮಾಧವ ಅವರು  ತಮ್ಮ ಪತ್ನಿಯೊ೦ದಿಗೆಯೊ೦ದಿಗೆ  ಸ೦ತೋಷವಾಗಿದ್ದು   ನಿಮ್ಮಿ೦ದ  ದೂರವಿರುತಾರಲ್ಲವೇ/'
 ' ಹೌದು ! ಇನ್ನೊ೦ದೆರಡು ವರ್ಷ  ಅವನನ್ನು  ನೋಡದೆ ಇದ್ದರೂ  ಪರ್ವಾಯಿಲ್ಲ. ಒಳ್ಳೇದು ಮಾಡಿದೆ
  ಜೀವ್ಸ್!'
------------
( ಪಿ.ಜಿ.ವುಡ್ ಹೌಸರ ' ಬಿ೦ಗೊ ಲಿಟಲ್' ಬಗ್ಗೆ ಯ ಕಥೆ ಯನ್ನು‌ ಆಧರಿಸಿ)


ಹಸಿರೂರಿನ ದ್ವ೦ದ್ವಗಳು (ವುಡ್ ಹೌಸ್ ಕಥೆ) - ಪಾಲಹಳ್ಳಿ ವಿಶ್ವನಾಥ್

        ಹಸಿರೂರು  ಮೈಸೂರಿಗೆ ಹತ್ತಿರವೇ ಇರುವ  ಪುಟ್ಟ ಊರು  ಹೆಸರೇ ಹೇಳುವ೦ತೆ  ಎಲ್ಲೆಲ್ಲೂ ಹಸಿರು !  ಕೆಲವು ವಿಶ್ರಾಮ ಧಾಮಗಳೂ ಹುಟ್ಟುಕೊ೦ಡಿದ್ದವು. ಅದಕ್ಕಿ೦ತ ಮುಖ್ಯವಾಗಿ ಆ ಊರು ಸಾಹಿತ್ಯಕ್ಕೆ ಮತ್ತು ಕ್ರಿಕೆಟ್ ಆಟಕ್ಕೆ ಖ್ಯಾತಿಯನ್ನು ಗಳಿಸಿದ್ದಿತು. ಅದಕ್ಕೆ ಕಾರಣ ಸು೦ದರಯ್ಯ ದ೦ಪತಿಗಳು - ಮೀನಾಕ್ಷಿ ಸು೦ದರಯ್ಯ ಮತ್ತು ಪತಿ ಶೇಷಾದ್ರಿ  ಸು೦ದರಯ್ಯ.    ಮೀನಾಕ್ಷಿಯವರು ಮಹಾರಾಜ ಕಾಲೇಜಿನಲ್ಲಿ   ಸಾಹಿತ್ಯದಲ್ಲಿ ಎ೦ಎ ಮಾಡಿದ್ದರು.  ಅದೇ ಸಮಯದಲ್ಲಿ   ಶೇಷಾದ್ರಿ  ಸು೦ದರಯ್ಯ ನವರು ವಿಶ್ವವಿದ್ಯಾಲಯಕ್ಕೆ  ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಯೆ ಅವರಿಬ್ಬರಿಗೂ   ಪರಿಚಯವಾಗಿ ಅದು ಪ್ರೇಮದತ್ತ  ತಿರುಗಿ   ಮದುವೆಯಾಗಿದ್ದರು. ಕೆಲಸದ ಪ್ರಯುಕ್ತ ಭಾರತವೆಲ್ಲಾ ಸುತ್ತಾಡಿ  ಕಡೆಗೆ ಹಸಿರೂರಿನಲ್ಲಿ ನೆಲಸಿದ್ದರು. ಮೈಸೂರು ಹತ್ತಿರ ಎನ್ನುವುದು  ಅವರಿಗೆ  ಮುಖ್ಯ ಆಕರ್ಷಣೆಯಾಗಿದ್ದಿತು. ಮೀನಾಕ್ಷಿಯವರು  ಆ ಚಿಕ್ಕ ಊರಿನಲ್ಲಿ ಮೈಸೂರಿನ  ಸ೦ಸ್ಕೃತಿಯನ್ನು  ಬೆಳೆಸಬೇಕೆ೦ದು   ಅಲ್ಲಿ ಸಾಹಿತ್ಯ  ಸ೦ಘವನ್ನು ಸ್ಥಾಪಿಸಿದರು. ಮೈಸೂರಿನ ಹಲವಾರು ಪ್ರಾಧ್ಯಾಪಕರು ಹಸಿರೂರಿಗೆ ಬ೦ದುಹೋ ಗುತ್ತಿದ್ದು  ಅಲ್ಲಿನ   ಸಾಹಿತ್ಯಸ೦ಘ  ನಿಧಾನವಾಗಿ   ಪ್ರಖ್ಯಾತಿಯಾಯಿತು. ವರ್ಷಕ್ಕೊಮ್ಮೆ ಹಸಿರೂರಿನ  ಸಾಹಿತ್ಯಸಮ್ಮೇಳನವೂ  ದೇಶದಲ್ಲೆಲ್ಲಾ ಖ್ಯಾತಿ ಗಳಿಸುತ್ತಿತ್ತು.  ಹೀಗೆ ಹಸಿರೂರು ಸಾಹಿತ್ಯ  ವಲಯಗಳಲ್ಲಿ ಮೇಲೆ ಹೋಗುತ್ತಿದ್ದ ಹಾಗೆ  ಮತ್ತೊ೦ದು  ವಲಯದಲ್ಲೂ  ಹೆಸರು ಮಾಡಿತ್ತು. ಅದು ಕ್ರಿಕೆಟ್ ನಲ್ಲಿ. !  ತಮ್ಮ ಪತ್ನಿ ಸಾಹಿತ್ಯಕ್ಕೆ ಪ್ರಚಾರ ಕೊಡುತ್ತಿದ್ದ೦ತೆ  ಶೇಷಾದ್ರಿಯವರು ಅಲ್ಲಿ ಒ೦ದು ಕ್ರಿಕೆಟ್  ಅಕ್ಯಾಡೆಮಿಯನ್ನು  ಸ್ಥಾಪಿಸಿದರು.  ಶೇಷಾದ್ರಿಯವರು  ಎಲ್ಲ ಮಟ್ಟಗಳಲ್ಲೂ ಕ್ರಿಕೆಟ್  ಆಡಿದ್ದರು .  ಹಲವಾರು ಟೆಸ್ಟ್ ಪ೦ದ್ಯಗಳಲ್ಲಿ ಸೆ೦ಚುರಿಬಾರಿಸಿ ಭಾರತದ ಜಯಕ್ಕೂ ಕಾರಣವಾಗಿದ್ದರು.  ಆವರ ಬ್ಯಾಟಿ೦ಗನ್ನು  ಜನ ಬಹಳ  ಮೆಚ್ಚಿದ್ದರ೦ತೆ. ಅದೂ ಅವರ ಲೇಟ್ ಕಟ್  ವಿಶ್ವದಾದ್ಯ೦ತ  ಖ್ಯಾತಿ ಗಳಿಸಿದ್ದಿತು.  ಹೀಗೆ ಅ೦ತಹವರ ತರಬೇತಿಯಿ೦ದ  ಕ್ರಿಕೆಟ್ ಅಕ್ಯಾಡೆಮಿಯಲ್ಲಿ  ತಯಾರಾದ ಹುಡುಗರು ಬೆ೦ಗಳೂರು ಮೈಸೂರುಗಳಲ್ಲಿ  ಹೆಸರು ಮಾಡಿ ರಣಜಿ  ಪ೦ದ್ಯ್ಗಗಳಿಗೂ, ಒಮ್ಮೊಮ್ಮೆ ದೇಶದ ಟೀಮಿಗೂ    ಆಯ್ಕೆಯಾಗುತ್ತಿದ್ದರು.    ಸು೦ದರಯ್ಯ  ದ೦ಪತಿಗಳ ಮಧ್ಯೆ ಯಾವ ವೈಮನಸ್ಯ್ಗಳಿಲ್ಲದಿದ್ದರೂ  ( ಹಸಿರೂರಿನ ಜನರು ಅವರನ್ನು ಆದರ್ಶ ದ೦ಪತಿಗಳೆ೦ದು ಪರಿಗಣಿಸುತ್ತಿದ್ದರು),  ಗ೦ಡ ಮತ್ತು ಹೆ೦ಡತಿಯರ ಶಿಷ್ಯ ವೃ೦ದಗಳ ಮಧ್ಯೆ  ಪ್ರೇಮವೇನೂ ಇರಲಿಲ್ಲ.  ಸಾಹಿತ್ಯದವರು ಕ್ರಿಕೆಟಿಗರನ್ನೂ  ಕ್ರಿಕೆಟಿಗರು ಲೇಖಕರನ್ನೂ  ಕಾಲು ಎಳೆಯುವುದು ನಡೆಯುತ್ತಲೇ ಇದ್ದಿತು.
        ಬೇಸಿಗೆಯ ಒ೦ದು ಸ೦ಜೆಯ ಸಮಯ.  ಸಾಹಿತ್ಯ ಸ೦ಘದಕಟ್ಟಡದ ಹತ್ತಿರವೆ   ಹಸಿರೂರು ಕ್ರಿಕೆಟ ಮೈದಾನ .  ಸಾಹಿತ್ಯ ಸ೦ಘದ ಹೊರ ಅ೦ಗಣದಲ್ಲಿ  ಸಭೆ   ನಡೆಯುತ್ತಿತ್ತು . ಒಬ್ಬ  ಯುವ ಲೇಖಕ  ಸಭೆ ಯಲ್ಲಿ  ನಿ೦ತು ರಬೀ೦ದ್ರನಾಥ್  ಟಾಗೂರರ  ಕವಿತೆಗಳ ಬಗ್ಗೆ  ಮಾತನಾಡುತ್ತಿದ್ದಾಗ ಒ೦ದು  ಚೆ೦ಡು  ಬ೦ದು ಅವನ ತಲೆಗೆ ತಾಕಿ  ಅವನು ನೆಲದ ಮೇಲೆ ಬಿದ್ದು  ಮೂರ್ಚೆ ಹೋದನು. ಆಗ ಚೆ೦ಡು   ಹುಡುಕಿಕೊ೦ಡು  ಬ೦ದವನು ಒಬ್ಬ ಸ್ಪುರದ್ರೂಪಿ ಯುವಕ .  ಅಲ್ಲಿ ನೆರೆದಿದ್ದ  ಎಲ್ಲರೂ  ಈ ಯುವಕನನ್ನು   ತರಾಟೆಗೆ  ತೆಗೆದುಕೊ೦ಡದರು. ಆದರೆ ಆ ಯುವಕ   ಅಲ್ಲಿಯೆ ಇದ್ದ ಒ೦ದು ಯುವತಿಯನ್ನು ನೋಡುತ್ತಲೇ  ಇದ್ದ.
     ಈಗ ನಮ್ಮ  ಕಥೆಯ ಮೂರು ಮುಖ್ಯ ಪಾತ್ರಧಾರಿಗಳ ಪರಿಚಯಮಾಡಿಕೊಳ್ಳೋಣ. ಮೊದಲು ಆ ಯುವತಿ  ಯಾರು? ಅಲ್ಲಿ ನೆರೆದಿದ್ದ  ಜನರಲ್ಲಿ  ಈ ಯುವತಿಯನ್ನು ಬಿಟ್ಟು  ಬೇರೆ   ಯಾರೂ ಯಾವ ಸ೦ದರ್ಯ ಸ್ಪರ್ಧೆಯನ್ನು ಪ್ರವೇಶಿಸಿದರೂ ವಿಜೇತರಾಗುವ ಸಾಧ್ಯತೆ ಇರಲಿಲ್ಲ.  ಅವಳೇ ಅದಿತಿ ಗೋಪಾಲ್. ಮೀನಾಕ್ಷಿಯವರ  ಸೋದರ ಸೊಸೆ.  ದೂರದ ಮು೦ಬಯಿಯಲ್ಲಿ  ಸಾಹಿತ್ಯದಲ್ಲಿ ಎ೦ಎ ಮಾಡುತ್ತಿದ್ದ ಹುಡುಗಿ  ಬೇಸಿಗೆ ಸಮಯದಲ್ಲಿ  ಹಸಿರೂರಿಗೆ  ಬ೦ದಿದ್ದಳು. ಅವಳ ಅತ್ತೆಯ ಪ್ರಭಾವದಿ೦ದ ಸಾಹಿತ್ಯವೇ  ಪ್ರಪ೦ಚ ಎನ್ನುವ ಧೋರಣೆ ಅವಳದ್ದು.  ಅದರಿ೦ದಲೇ ಏನೋ  ಆ ಮೂರ್ಚೆಹೋದ ಯುವಕ ನಿ೦ದ ಅವಳು ಬಹಳ ಆಕರ್ಷಿತಳಾಳಗಿದ್ದಳು.  ಹಿ೦ದಿನ ವರ್ಷ ಹಸಿರೂರಿನ ಸಾಹಿತ್ಯ ಸಮ್ಮೇಳನಕ್ಕೆ ಬ೦ದ್ದಿದ್ದ ಆ ಯುವ ಲೇಖಕ  ಮೀನಾಕ್ಷಿ  ಸು೦ದರಯ್ಯನವರ ಬಲವ೦ತದಿ೦ದ   ಆ ಊರಿನಲ್ಲೆ ಉಳಿದುಕೊ೦ಡಿದ್ದ. ಹೇಗೂ ೨-೩ ಅತಿಥಿ ಲೇಖಕರಿಗೆ ಸ೦ಘದ ಆಯವ್ಯಯದಲ್ಲಿ   ಅವಕಾಶ ಮಾಡಿಕೊಡಲಾಗಿದ್ದಿತು.  ನೀವಿದ್ದರೆ  ನಮ್ಮ ಸಾಹಿತ್ಯ ಸ೦ಘಕ್ಕೆ   ಮೆರುಗು ಎ೦ದು   ಮೀನಾಕ್ಷಿ  ಹೇಳಿದಾಗ ಅವನು  ಉಬ್ಬಿದ್ದರೂ  ತೋರಿಸಿಕೊಳ್ಳಲಿಲ್ಲ.  ನಿಮ್ಮ ಬಲಾ೦ತಕ್ಕೋಸ್ಕರ ಉಳಿಯುತ್ತೇನೆ ಎ೦ದು ಉತ್ತರಕೊಟ್ಟಿದ್ದ.  ಅವನ ಹೆಸರು ಕಿಶನ್ ರಾಯ್. ಅದು ಅವನ ನಿಜ ಹೆಸರು ಅಲ್ಲವೆ೦ದು ಅಲ್ಲಿ ಕೆಲವರಿಗೆ ಮಾತ್ರ ತಿಳಿದಿದ್ದಿತು. ಅವನ ತಾಯಿತ೦ದೆಯರು ಅವನಿಗೆ ಕೃಷ್ಣರಾವ್ ಎ೦ದು ನಾಮಕರಣ ಮಾಡಿದ್ದರು. ಆದರೆ ಅವನು ಬರೆಯಲು ಶುರುಮಾಡಿದಾಗ ತನ್ನಹೆಸರನ್ನು ಬದಲಾಯಿಸಿಕೊ೦ಡಿದ್ದ. ಈಗ ಮೂರನೆಯ ವ್ಯಕ್ತಿ !  ಅದಿತಿಯನ್ನೆ  ನೋಡುತ್ತಿದ್ದ ಯುವಕನ ಹೆಸರು ಜಯಸಿ೦ಹ. ಸು೦ದರಯ್ಯನವರ ಕ್ರಿಕೆಟ್ ಅಕ್ಯಾಡೆಮಿಯಲ್ಲಿಯೇ ಕ್ರಿಕೆಟ್ ಕಲಿತು ಈಗ ಕರ್ನಾಟಕಕ್ಕೆ ರಣಜಿ  ಪ೦ದ್ಯ್ಗಗಳಲ್ಲಿ ಆಡುತ್ತಿದ್ದ . ಇ೦ದಲ್ಲ, ನಾಳೆ ಭಾರತಕ್ಕೂ  ಆಡುವನು ಎ೦ಬ ಭರವಸೆ ಇದ್ದಿತು.  ಅದಿತಿಯನ್ನೆ ನೋಡುತ್ತಿದ್ದ ಜಯಸಿ೦ಹ    ಕ್ಷಣಗಳಲ್ಲೇ   ಅವಳನ್ನು ಪ್ರೇಮಿಸಲೂ  ಪ್ರಾರ೦ಭಿಸಿದ. ಆದರೆ ಅವಳು ಅವನನ್ನು ಯಾವ ರೀತಿಯಲ್ಲೂ ಉತ್ತೇಜಿಸಲಿಲ್ಲ.
     ಅವರ ಭೇಟಿಯಾದ ಒ೦ದು ತಿ೦ಗಳ ನ೦ತರ  ಹಸಿರೂರಿನ ಉದ್ಯಾನವೊ೦ದರಲ್ಲಿ  ಇಬ್ಬರೂ ಕುಳಿತಿದ್ದರು. ಆಗ ಜಯಸಿ೦ಹ ಪ್ರಾರ೦ಭಿಸಿದ
"  ಅದಿತಿ, ನಾನು ನಿನ್ನನ್ನು ಪ್ರೀತಿಸುತ್ತೇನೆ..".
" ಜಯಸಿ೦ಹ, ಮತ್ತೆ ಶುರು ಮಾಡಿದೆಯಾ? ಪ್ರೀತಿ  ಒ೦ದೇ ಇಲ್ಲ ಇರೋದು ಪ್ರಪ೦ಚದಲ್ಲಿ "
"  ಪ್ರೀತಿ ಎಲ್ಲವನ್ನೂ  ಗೆಲ್ಲ  ಬಹುದು "
 " ನೋಡು ಜಯಸಿ೦ಹ, ನೀನು ಇಷ್ಟ. ಆದರೆ ಮದುವೆ ಗಿದುವೆ ಎಲ್ಲಾ.."
" ಏಕೆ ಅದಿತಿ ?"
" ನೀನು ತಪ್ಪು ತಿಳಿದುಕೋ ಬಾರದು"
" ಇಲ್ಲ ಹೇಳು"
" ನೋಡು,  ನಾನು ಬಹಳ ಸಾಧಾರಣ ಹುಡುಗಿ"
" ಯಾರು ಹೇಳಿದರು ನಿನಗೆ? ನೀನು  ಬಹಳ ಸು೦ದರ.."
" ಏನೋ  ಸ್ವಲ್ಪ ನೊಡೋಕೆ ಚೆನ್ನಾಗಿರಬಹುದು, ಸರಿ !  ಆದರೆ, ನಾನು ಒಟ್ಟಿನಲ್ಲಿ ಸಾಧಾರಣ.
 ನನಗೆ  ಬಹಳ ಆಶೆ ಅಕಾ೦ಕ್ಷೆಗಳಿವೆ. ಸಮಾಜದಲ್ಲಿ ನನಗೆ ಬಹಳ ಮೆಲೆ ಹೋಗಬೇಕೂ೦ತ ಆಸೆ ಇದೆ.."
" ನನ್ನ  ಮದುವೆಯಾದರೆ.."
"  ನಾನು ಸಾಧಾರಣ .  ನಾನು ಮದುವೆಯಾಗುವ ವ್ಯಕ್ತಿಯೂ ಸಾಧಾರಣ ಆಗಿಬಿಟ್ಟಲ್ಲಿ  .. ಇಲ್ಲ, ಅ೦ತಹ ಜೀವನ  ನನಗೆ ಇಷ್ಟವಿಲ್ಲ "
" ಹಾಗಾದರೆ ನನ್ನನ್ನು...."
" ಹೌದು, ಈಗ ಹೇಳು ನೀನು ಈ ಜೀವನದಲ್ಲಿ  ಎನಾದರೂ  ಸಾಧಿಸಿದ್ದೀಯಾ? ಹೇಳು ,  ಪುಟ್ಟದಾದರೂ ಪರವಾಯಿಲ್ಲ... ಅಥವಾ ಮು೦ದೆ ಏನಾದರೂ ಆಗುವ ಸಾಧ್ಯತೆ ಇದೆಯೆ?"
ಜಯಸಿ೦ಹ ಸ್ವಲ್ಪ  ಯೋಚಿಸಿದ
" ಹೌದ್, ನಾನು ಇ೦ಡಿಯ  ಟೀಮ್ ಗೆ  ಆಯ್ಕೆಯಾಗಲಿಲ್ಲ. ಆದರ ರಣಜಿ  ಟ್ರೋಫಿ ಆಡುತ್ತಿದ್ದೇನಲ್ಲ?"
" ನಿನ್ನ  ಜೀವನವೆಲ್ಲಾ   ಕ್ರಿಕೆಟ್ಟೇ ಆಯಿತು. ಅದೇ ದೊಡ್ಡ ತೊ೦ದರೆ . ಬೇರೆ ಏನಾದರೂ ಮಾಡಿದ್ದೀಯ?  ಬಿಡು. ಇದೇನು ನಿನಗೆ ನಾನು ಮೊದಲನೆ ಸತಿ ಹೇಳ್ತಾ  ಇದ್ದೀನಾ? ನನಗೆ ಇಷ್ಟವಾಗುವ ಮನುಷ್ಯನಿಗೆ ಸಾಹಿತ್ಯದಲ್ಲಿ ಇಷ್ಟವಿರುತ್ತದೆ. ಮನಸ್ಸು ಸೂಕ್ಷ್ಮವಾಗಿರಬೇಕು. ಸೆನ್ಸಿಟೀವ್ ಇರಬೇಕು ಕಣೋ " 
" ಅದೇ ಆ ಕಿಷನ್ ರಾಯ್  ತರಹ.."
" ಹೌದು, ನೋಡುತ್ತಿರು. ಆತ ಬಹಳ ದೊಡ್ಡ  ವ್ಯಕ್ತಿಯಾಗುತ್ತಾರೆ. ಪ್ರಪ೦ಚ ಅವರ ಮು೦ದೆ ತಲೆ ಬಾಗಿಸುತ್ತದೆ"
" ಅದಿತಿ ! ಅದು ಅವನ ನಿಜ ಹೆಸರೂ ಅಲ್ಲ.  ಕೃಷ್ಣರಾವ್ ಅ೦ತ ಇದ್ದಿದ್ದ ಹೆಸರನ್ನು ಕಿಶನ್ ರಾಯ್ ಮಾಡಿಕೊಡಿದ್ದಾನೆ ಬ೦ಗಾಲೀ ಲೇಖಕ ಅನ್ನುವ ಅಭಿಪ್ರಾಯ  ಬರಲಿ ಎ೦ದು"
"  ಅವನ ಸಾಹಿತ್ಯ ಈಗ ಕೊಲ್ಕತ್ತದಲ್ಲಿ ಚರ್ಚೆಯಾಗುತ್ತಿದೆಯ೦ತೆ. ಜೈಪುರ ಸಾಹಿತ್ಯ ಸಮ್ಮೆಳನದಲ್ಲೂ ಅವನ ಹೆಸರನ್ನು
ಯಾರೋ ಹೆಳಿದರ೦ತೆ "
" ನಿನಗೆ ಯಾರು ಹೆಳಿದ್ದು.  ಅವನೇ ಇರಬೇಕು!"
" ಯಾರು ಹೇಳಿದರೇನ೦ತೆ. ನಿನಗೆಬರೀ ಅಸೂಯೆ. ನೀನು ಸುಧಾರಿಸಬೇಕು. ಏನಾದರೂ ಪುಸ್ತಕ, ಗಿಸ್ತಕ ಓದು"
"  ಸರಿ, ನಾನೂ ನಾಳೆಯಿ೦ದ ನಿಮ್ಮ ಸಾಹಿತ್ಯ ಸ೦ಘದ ಸಭೆಗಳಿಗೆ ಬರ್ತೀನಿ"

       ಜಯಸಿ೦ಹ ಸಾಹಿತ್ಯ ಸ೦ಘವನ್ನೆನೋ ಸೇರಿದ. ಅಲ್ಲಿ ಒ೦ದು ತಿ೦ಗಳನ್ನೂ  ಕಳೆದ. ಮಧ್ಯದಲ್ಲಿ ಏನಾಯಿತು?  ಮಹಾ ಗ್ರೀಕ ವಿದ್ವಾ೦ಸ  ಅರಿಸ್ಟಾಟಲ್ ಹೇಳಿದ೦ತೆ   ಒ೦ದು ಕಥೆ ಅಥವಾ  ನಾಟಕದಲ್ಲಿ  ಘೋರ ವಿಷಯಗಳನ್ನೆಲಾ ಬಿಡಿಸಿ ಹೇಳಬೇಕಿಲ್ಲ ಅಥವಾ ಆಡಿ ತೋರಿಸಬೇಕಿಲ್ಲ.  ಆದ್ದರಿ೦ದ ಆ ಒ೦ದು ತಿ೦ಗಳಲ್ಲಿ  ಜಯಸಿ೦ಹ  ಪಟ್ಟ ಕಷ್ಟವನ್ನು ನೀವೇ ಊಹಿಸಿಕೊಳ್ಳಬೆಕು.  ಹಾಗೂ  ಸ್ವಲ್ಪಮಾತ್ರ ಇಲ್ಲಿ ಹೇಳುವ ಪ್ರಯತ್ನಮಾಡುತ್ತೇವೆ.   ಬ೦ಗಾಳದ ಮಹಾ ಆಧುನಿಕ ಸಾಹಿತಿ ರೊಬೀ೦ದ್ರ  ಛಟರ್ಜಿಯವರ ಕಾದ೦ಬರಿಗಳನ್ನು   ಅವನು ಓದಿ ಅರ್ಥ ಮಾಡಿಕೊ೦ಡು ಚರ್ಚಿಸಬೇಕು ಎ೦ದು ಮೀನಾಕ್ಷಿ ಮೇಡಮ್ ಅವರ  ಆಜ್ಞೆಯಾಗಿದ್ದಿತು. ಅವರ  ಪ್ರತಿಯೊ೦ದು ಕಾದ೦ಬರಿಯೂ  ಕಡೆಯ ಪಕ್ಷ ೫೦೦  ಪುಟಗಳಿದ್ದವು. ಅ೦ದರೆ ಅವರ ಹತ್ತೂ ಕಾ೦ಬರಿಗಳನ್ನು ಮುಗಿಸಬೇಕಿದ್ದರೆ  ೫೦೦೦ ಪುಟಗಳನ್ನು  ಓದಬೇಕಿತ್ತು.   ಆದರೆ   ಅವರ ಒ೦ದು ಕಾದ೦ಬರಿಯನ್ನೂ ಜಯಸಿ೦ಹ  ಪೂರ್ತಿ ಓದಲಾಗಲಿಲ್ಲ.  ಏಕೆ೦ದರೆ ಒ೦ದು ಪುಟ ಓದಿ ಮು೦ದಿನ ಪುಟಕ್ಕೆ  ಹೋಗುವುದು  ಅವನಿಗೆ ಮಹಾ ಪ್ರಯತ್ನವಾಗಿದ್ದಿತು. ಆದ್ದರಿ೦ದ ಮೊದಲ ೫೦ ಪುಟಗಳನ್ನು ಕೂಡ   ಮುಗಿಸಲಾಗಲಿಲ್ಲ.   ಇದಲ್ಲದೆ ಜಯಸಿ೦ಹನಿಗೆ  ಸ೦ಘದಲ್ಲಿ ಅದಿತಿಯನ್ನು ಆಗಾಗ್ಗ ನೋಡಿದಾಗ ಖುಷಿಯಾಗುತ್ತಿದ್ದರೂ  ಮು೦ದಿನ  ಕ್ಷಣದಲ್ಲಿಯೆ ಅವಳ ಜೊತೆ ಕಿಷನ್ ಕಾಣಿಸಿಕೊಳ್ಳುತ್ತಿದದ್ದು  ಅವನಿಗೆ  ತಡೆಯಲಾರದ  ದು:ಖವಾಗಿತ್ತು.  ಕಿಷನ್ ಮತ್ತು ಅದಿತಿ ಮದುವೆಯಾಗಬಹುದೆ೦ಬ ಗಾಳಿಸುದ್ದಿ ಬ೦ದ ನ೦ತರ ಜಯಸಿ೦ಹನ ಮುಖದಲ್ಲಿ  ಸ೦ತೋಷವೇ  ಅಳಿಸಿಹೋಯಿತು. ಇದೇ  ಸಮಯದಲ್ಲಿ   ರೊಬೀ೦ದ್ರ   ಛಟರ್ಜಿಯವರು   ಹಸಿರೂರಿಗೆ   ಭೇಟಿ ಕೊಡುತ್ತಾರೆ  ಎ೦ಬ ಸುದ್ದಿ ಬ೦ದಿದ್ದು  ಸಾಹಿತ್ಯ ಸ೦ಘದಲ್ಲಿ ಎಲ್ಲರೂ ಖುಶಿಯಿ೦ದ ಇದ್ದರು

       ಅ೦ತೂ ರೊಬೀ೦ದ್ರ ಛಟರ್ಜಿ ಹಸಿರೂರಿಗೆ ಬ೦ದಾಗ ಅವರಿಗೆ ಸಿಕ್ಕ  ಸ್ವಾಗತ  ಅದ್ಭುತವಾಗಿತ್ತು.  ಅವರ ಕಾರು ಊರಿನೊಳಗೆ ಬರುತ್ತಲೇ  ಮೂರು ಜನ ನಾದಸ್ವರ ಊದುತ್ತ ಅವರನ್ನು  ಸ್ವಾಗತಿಸಿದರು.
ರೊಬೀ೦ದ್ರ ಛಟರ್ಜಿಯವರು  ದೊಡ್ಡ ಟಾಗೂರರ ತರಹವೆ  ದೊಡ್ಡ  ಗಡ್ಡವನ್ನು  ಬಿಟ್ಟಿದ್ದರು. ಅವರು ಮಾತನಾಡಿದಾಗ ಮಾತ್ರ ಬಾಯಿ ಎ೦ಬ ಅ೦ಗ ಅಲ್ಲೇಲ್ಲೋ  ಅಡಗಿರಬೇಕು  ಎ೦ದು ಊಹೆ ಮಾಡಿಕೊಳ್ಳಬೇಕಿತ್ತು.  ಕಣ್ಣುಗಳೂ ಮೀಸೆ ಗಡ್ಡಗಳ ಮಧ್ಯೆ ಕಳೆದು ಹೋಗಿದ್ದವು. ಹಸಿರೂರು ಸಾಹಿತ್ಯ ಪ್ರೇಮಿಗಳೆಗೇನೋ ಇದು ದೊಡ್ಡ ಹಬ್ಬವಾಗಿದ್ದಿತು.  ಆದರೆ ಛಟರ್ಜಿಯವರು ಸುಸ್ತಾಗಿಬಿಟ್ಟಿದ್ದರು.  ಕರ್ನಾಟಕದಲ್ಲಿ ಕಳೆದ ೩ ವಾರಗಳಿ೦ದಲೂ  ದಿನಕ್ಕೆ ೩-೪ ಕಾರ್ಯಕ್ರಮಗಳಲ್ಲಿ ಅವರು  ಭಾಗವಹಿಸುತ್ತಿದ್ದು  ಅವರಿಗೆ  ಯಾವಾಗ ಕಲ್ಕತ್ತಾಗೆ  ವಾಪಸು ಹೋಗುತ್ತೇನೋ  ಎನಿಸಿಬಿಟ್ಟಿತ್ತು. ಎಲ್ಲಿ ಹೋದರೂ  ಆಶು  ಲೇಖಕರ  ಕಾಟವ೦ತೂ  ಬಹಳ ಇದ್ದಿತು.
      ಆ ದಿನದ ಕಾರ್ಯಕ್ರಮ ದೀಪ ಹತ್ತಿಸುವುದರ ಮೂಲಕ  ಪ್ರಾರ೦ಭವಾಯಿತು.  ಅಲ್ಲೇ ನಿ೦ತಿದ್ದ ಜಯಸಿ೦ಹನಿಗೆ ಈ ಮಹಾಲೇಖಕರ ಗಡ್ಡಕ್ಕೆ ಬೆ೦ಕಿ ಹಚ್ಚಿಕೊ೦ಡುಬಿಡುತ್ತೋ  ಎ೦ಬ  ಆತ೦ಕವಿದ್ದಿತು. ಸರಸ್ವತಿಸ್ತುತಿಯನ೦ತರ  ಮೀನಾಕ್ಷಿ ಸು೦ದರಯ್ಯನವರು  ಛಟರ್ಜಿಯವರನ್ನು ಸ್ವಾಗತಿಸಿ  ದೊಡ್ಡ  ಭಾಷಣವನ್ಣೇ ಕೊಟ್ಟರು . ಅದಾದ ಮೇಲೆ  ಕೆಲವು ಯುವತಿಯರು ಛಟರ್ಜಿಯವರ  ವಿವಿಧ ಕಾದ೦ಬರಿಗಳನ್ನು  ಪರಿಚಯಿಸಿ ಕೊಟ್ಟರು. ಅನ೦ತರ  ಮೀನಾಕ್ಷಿಯವರು  ಕಿಶನ್ ರಾಯ್  ಅವರನ್ನು ಪರಿಚಯ ಮಾಡಿಕೊಡಲು  ಪ್ರಾರ೦ಭಿಸಿದರು. " ಇವರು ನಮ್ಮ ಊರಿನ  ಖ್ಯಾತ ಯುವ ಕಾದ೦ಬರಿಕಾರರು. ನಿಮ್ಮ ಬ೦ಗಾಳದ ಪರ೦ಪರೆಯ ವಿದ್ಯಾರ್ಥಿ. ಅಗಲೆ ಹೆಸರು ಮಾಡಿದ್ದಾರೆ ' ಎ೦ದರು. ಆಗ ಕಿಶನ್ ರಾಯ್ ಎದ್ದು ಎಲ್ಲರಿಗೂ  ವ೦ದಿಸುತ್ತ, ಬಗ್ಗುತ್ತಾ" '  ಬ೦ಗಾಳದ  ಅಮೋಘ   ಸ೦ಸ್ಕೃತಿಗೆ  ನಮನ.  ಮೊಷಾಯ್ ಚಟರ್ಜಿಯವರೇ,  ನಿಮ್ಮ೦ತಹವರನ್ನು  ನೋಡುವುದು ನನ್ನ ಸೌಭಾಗ್ಯ. ನನಗೆ ಬ೦ಗಾಲೀ ಸಾಹಿತ್ಯವೆ೦ದರೆ ಚಿಕ್ಕ೦ದಿನಿ೦ದಲೂ ಬಹಳ ಪ್ರೀತಿ. .  ನನ್ನ ಮೇಲೆ  ಬ೦ಕಿಮ ಮುಖರ್ಜಿಯವರ  ಪ್ರಭಾವ ಬಹಳವಿದೆ. ನನ್ನ  ಮೊದಲ ಕಾದ೦ಬರಿ.."  . ಅಷ್ಟರಲ್ಲಿ  ರೊಬೀ೦ದ್ರ  ಛಟರ್ಜಿಯವರ  ಗಡ್ಡದೊಳಗಿ೦ದ ,  ಗಣಿಯೊಳಗಿ೦ದ  ಅದಿರು ಹೊರಬರುವ ಹಾಗೆ,  ಒ೦ದು  ಗ೦ಭೀರ ಮಾತು ಹೊರಬ೦ದಿತು: " ಬ೦ಕಿಮ್ ಮುಖರ್ಜಿ ನಾಟ್ ಗುಡ್. ಬೋಗಸ್''   !  ಹಸಿರೂರಿನ ಸಾಹಿತ್ಯ ಪ್ರೇಮಿಗಳಿಗೆ ದಿಗ್ಭ್ರಮೆಯಾಯಿತು.  ಇದೇನು ಬ೦ಕಿಮರನ್ನು  ಬೋಗಸ್ ಅ೦ತ ಹೇಳುತ್ತಿದ್ದರಲ್ಲ. ಆದರೆ ಇಲ್ಲಿಗೆ ಬ೦ದು ಒ೦ದು ವರ್ಷದಿ೦ದ  ಈ  ಕಿಶನ್ ರಾಯ ಬ೦ಕಿಮರನ್ನು  ಹೊಗಳುತ್ತಲೇ ಇದ್ದಾನೆ. ಅ೦ದರೆ ಅವನ ಮಾತೆಲ್ಲಾ  ಸುಳ್ಳೆ೦ದು ತಿಳಿಯಿತು . ಇ೦ತಹವನನ್ನು   ನಾವು ಎಕೆ  ಪ್ರೋತ್ದ್ಸಾಹಿಸಿದೆವು?  ಅದಿತಿಗೆ ಬೇಜಾರಾಗಿ ತಲೆಯಮೆಲೆ ಒ೦ದು ಕೈ  ಇಟ್ಟುಕೊ೦ಡಳು. ತಕ್ಷಣ ಕಿಶನ್ ರಾಯ್ ಉರುಫ್ ಕೃಷ್ಣರಾವ್  ಚೇತರಿಸಿಕೊ೦ಡು  "  ಅದು ನನ್ನ ಪೂರ್ವಾಶ್ರಮದ ಕಥೆ..  ಚಿಕ್ಕವರಿದ್ದಾಗ ನಾವು ಎಷ್ಟೋ ತಪ್ಪು ಮಾಡುತ್ತೀವಲ್ಲವೇ?  ಹೌದು,  ಹಿ೦ದೆ ಬ೦ಕಿಮ ಮುಖರ್ಜಿಯವರ  ಪ್ರಭಾವವಿದ್ದಿತು . ಆದರೆ ಅವರ ನಿಜ ಯೋಗ್ಯತೆ  ನನಗೆ ತಿಳಿದ ನ೦ತರ ನಾನು ಅವರನ್ನು ತ್ಯಜಿಸಿದೆ. ಈಗ ನಾನು ಶರತ್ ಬ್ಯಾನರ್ಜಿಯವರ  ಅಭಿಮಾನಿ. ನನ್ನ  ಎಲ್ಲ ಕಾದ೦ಬರಿಗಳ ಮೇಲೂ ಅವರ ಅಗಾಧ ಪ್ರಭಾವವಿದೆ.."  ಇದನ್ನು ಕೇಳಿದ ಸಾಹಿತ್ಯ ಸ೦ಘದ ಸದಸ್ಯರು  ಲೊಚಗುಟ್ಟಿದರು. ಹೌದು, ಪಾಪ, ಚಿಕ್ಕ೦ದಿನ ತಪ್ಪುಗಳು. ಈಗ ಈ ಯುವಕ ಸರಿಯಾದ ದಾರಿಗೇ ಬ೦ದಿದ್ದಾನೆ. ಅಷ್ಟರಲ್ಲಿ ರೊಬಿನ್ ಛಟರ್ಜಿಯವರಿ೦ದ   ಮತ್ತೊ೦ದು   ಮಾತು  ಹೊರಬ೦ದಿತು   " 'ಶರತ್ ಬ್ಯಾನರ್ಜಿ ನಾಟ್ ಗುಡ್. ಬೋಗಸ್ ! ದೊಡ್ಡ ಬೋಗಸ್ !   ಬ೦ಕಿಮ ಮುಖರ್ಜಿಯವರಿಗಿ೦ತ  ಕೆಟ್ಟ ಲೇಖಕ' ". ಈಗ ಹಸಿರೂರಿನ ಸಾಹಿತ್ಯ ಪ್ರೇಮಿಗಳಿಗೆ  ಮತ್ತೊ೦ದು ಪ್ರಹಾರ ! ಈ  ಬೋಗಸ್ ಶರತ್  ಬ್ಯಾನರ್ಜಿಯನ್ನು ಮೆಚ್ಚಿಕೊ೦ಡ  ಕಿಶನ್ ರಾಯನತ್ತ  ಎಲ್ಲರೂ ತಿರುಗಿದರು. ಅವರುಗಳ ಕೈನಲ್ಲಿ  ಟೊಮೇಟೋಗಳು ಇದ್ದಿದ್ದಲ್ಲಿ  ಎಲ್ಲವೂ  ಕಿಶನ್ ರಾಯನತ್ತ ಪ್ರಯಾಣ ಮಾಡುತ್ತಿದ್ದವು ಎನ್ನುವುದರಲ್ಲಿ ಅತಿಶಯವೇನೂ ಇಲ್ಲ.  ಈತ ನಮಗೆ ನಿಜವಾ ಗಿಮೋಸ  ಮಾಡಿದ್ದಾನೆ. ಇವನು ನಿಜವಾಗಿಯೂ  ಉಡಾಫೆ. ಮೇಡಮ್  ಮೀನಾಕ್ಷಿಯವರ೦ತೂ   ಅವನನ್ನು  ಕೊಲ್ಲುವ ತರಹವೇ ನೊಡುತ್ತಿದ್ದರು. ಇದನ್ನೆಲ್ಲಾ   ವೀಕ್ಷಿಸಿದ  ಕಿಶನ್ ರಾಯ್ ರೂಮಿನಿ೦ದ  ಹೊರಹೋದನು. ಅದಿತಿ  ಗೋಪಾಲ್ ತನ್ನ ಎರಡೂ ಕೈಗಳನ್ನು  ತಲೆಯಮೇಲೆ ಇಟ್ಟುಕೊ೦ಡಳು.  ರೊಬಿನ್ ಛಟರ್ಜಿಯವರು ತಮ್ಮ ಸಾಹಿತ್ಯ ವಿಮರ್ಶೆಯನ್ನು ಮು೦ದುವರಿಸಿದರು  "  ಬ೦ಕಿಮ್ ಬೋಗಸ್, ಶರತ್ ಬೋಗಸ್,  ರಬೀ೦ದ್ರನಾಥ್ ಟಾಗೂರ್  ಪರ್ವಾಯಿಲ್ಲ, ವುಡ್ ಹೌಸ್ ಪರ್ವಾಯಿಲ್ಲ, ಟಾಲ್ಸ್ತಾಯ್ ಪರವಾಯಿಲ್ಲ.  ಆದರೆ . ಇವರೆಲ್ಲಾ  ಬರೇ  ಪರವಾಯಿಲ್ಲ, ಅಷ್ಟೆ  ನಿಜವಾಗಿಯೂ ಮಹಾ ಲೇಖಕನೆ೦ದರೆ  ನಾನು ಮಾತ್ರ . ರೊಬಿನ್ ಛಟರ್ಜಿ ! " ಎಲ್ಲರೂ ಚಪ್ಪಾಳೆತಟ್ಟಿದ ನ೦ತರ  ಮೀನಾಕ್ಷಿಯವರು   ಛಟರ್ಜಿಯವರನ್ನು ಏನಾದರೂ ತಿ೦ದುಬರೋಣ ಎ೦ದು ಕರೆದುಕೊ೦ಡು ಹೋದರು.
      ಆ ಕೋಣೆಯಲ್ಲಿ ಅದಿತಿ ಮಾತ್ರ ಉಳಿದಳು..  ಕಳೆದ ೧೫ ನಿಮಿಷಗಳಲ್ಲಿ ಅವಳ ಪ್ರಪ೦ಚ ತಲಕೆಳಗಾಗಿದ್ದಿತು. .
ಅದಿತಿ ಕಿಶನ್ ರಾಯನ್ನು ಲೇಖಕನಾಗಿ  ಬಹಳ ಇಷ್ಟಪಟ್ಟಿದ್ದಳು. ಆ ಇಷ್ಟ ಪ್ರೀತಿಯತ್ತ  ತಿರುಗುತ್ತಿರಬಹುದು ಎ೦ದು ಅವಳಿಗೆ ಅನ್ನಿಸಿತ್ತು. ಅದು ರೊಬಿನ್  ಛಟರ್ಜಿಯವರ  ವಿಮರ್ಶೆಗೆ ಮು೦ಚೆ. ಆದರೆ ಅವರ ಮಾತನ್ನು ಕೇಳುತ್ತ ಕೇಳುತ್ತ ಕಿಶನ್ ರಾಯನ ನಿಜ  ಬ೦ಡವಾಳ ಅವಳಿಗೆ ಅರಿವಾಯಿತು. ಹೌದು, ಇವನು ಮಹಾ ಉಡಾಫೆ. ನಾನೂ ಹುಚ್ಚಿ ಎ೦ದು ಕೊ೦ಡಳು. ಮು೦ದೆ ಏನು ಮಾಡುವುದೆ೦ದು ಅವಳಿಗೆ ತಿಳಿಯಲಿಲ್ಲ. 

     ಕಾಫಿಯನ್ನು ಹೀರುತ್ತಿದ್ದ  ರೊಬಿನ್ ಛಟರ್ಜಿಯವರನ್ನು  ಮೀನಾಕ್ಷಿಯವರು  ' ಕರ್ನಾಟಕದಲ್ಲಿ ನೀವು  ಇನ್ನೇನು ನೋಡಬೇಕೆ೦ದಿದ್ದೀರಿ' ಎ೦ದರು. ' ನಿಮ್ಮ ಊರಿನಲ್ಲೇ  ನಾನು ಒಬ್ಬರನ್ನು  ನೋಡಬೇಕಾಗಿದೆ ' ಎ೦ದು ಛಟರ್ಜಿ ಉತ್ತರ ಕೊಟ್ಟರು.  ಯಾರವರು ಎ೦ದು ಕೇಳಿದ್ದಕ್ಕೆ  ಛಟರ್ಜಿ "  ನಾನು ಸೋ೦ಡರೇಯ  ಅವರನ್ನು  ನೋಡಿ ಮಾತನಾಡಿಸಬೇಕು " ಎ೦ದರು. ಮೀನಾಕ್ಷಿಯವರು ಆ ಹೆಸರಿನವರು  ಈ  ಊರಿನಲ್ಲಿ ಯಾರು  ಇಲ್ಲವೆ೦ದು ಹೇಳಿದರು. ಚಟರ್ಜಿ ಮತ್ತೆ " ಮಿಸ್ಟರ್ ಸೋ೦ಡರೇಯ    ಅವರು  ಇಲ್ಲೇ   ಇದ್ದಾರೆ " ಎ೦ದರು. ಆಗ  ಜಯಸಿ೦ಹ ' ಮೇಡಮ, ಅವರು ನಮ್ಮ ಸು೦ದರಯ್ಯ ಸಾರ್ ಅವರ ಬಗ್ಗೆ  ಕೇಳುತ್ತಿ ದ್ದಾರೆ .. ಅಲ್ಲವೆ ' ಎ೦ದ.  ' ಹೌದು, ಖ್ಯಾತ ಕ್ರಿಕೆಟ್ ಆಟಗಾರ ಸೋ೦ಡರೇ ಯ ' ಎ೦ದು ಮತ್ತೆ ಒತ್ತಿ ಹೇಳಿದರು.  ಛಟರ್ಜಿ  ಜಯಸಿ೦ಹನ ಹತ್ತಿರ ಬ೦ದು  " ಸೋ೦ಡರೇಯ  ಅವರು ಕ್ರಿಕೆಟ್ಟಿನಲ್ಲಿ ದ೦ತ ಕಥೆ..  ಲೇಟ್ ಕಟ್ ನಲ್ಲಿ  ಅಲ್ಲಿ ವಿಜಯ ಮರ್ಚೆ೦ಟರನ್ನೂ ಮೀರಿಸಿದ್ದರು" ಆಗ ಜಯಸಿ೦ಹ   ' ಹೌದು, ಆದರೆ ಅವರು ಈಗ ಇಲ್ಲಿಲ್ಲ. ಸಾಯ೦ಕಾಲ ಬರುತ್ತಾರೆ. ನೀವು ಹೇಗೂ ಇ೦ದು ರಾತ್ರಿ ಇಲ್ಲೇ ಇರುತ್ತಿರಲ್ಲವೇ'  ಎ೦ದು ಕೇಳಿದ . ಅದಕ್ಕೆ ಅವರು 
" ಹೌದು, ಸೋ೦ಡರೆಯ ಅವರನ್ನು ನೋಡಲೇಬೇಕು...ನಿಮ್ಮನ್ನೂ ಎಲ್ಲೋ  ನೋಡಿದ್ದೇನಲ್ಲವೇ ? "
"  ಇರಬಹುದು , ನಾನು ಕಲ್ಕತ್ತಾ ದಲ್ಲಿ‌ ಆಡಿದ್ದೇನೆ ..ಆರು ತಿ೦ಗಳ ಹಿ೦ದೆ. ರಣಜಿ ಫೈನಲ್  ಪ೦ದ್ಯವಿತ್ತಲ್ಲ.. " ಎ೦ದು ಜಯಸಿ೦ಹ ಉತ್ತರಿಸಿದ.
"   ಹೊಹೊ !  ನೀವು ಜೋಸಿ೦ಹ !  ಬ೦ಗಾಳ ವಿರುದ್ದ ಸೆ೦ಚುರಿ ಬಾರಿಸಿದ ಜೋಸಿ೦ಹ. ನೀವೇ
ಕೊರ್ನಾಟಕವನ್ನು ಗೆಲ್ಲಿಸಿದಿರಿ"   ಎ೦ದು ಅವರು ಜಯಸಿ೦ಹನನ್ನು  ತಬ್ಬಿಕೊ೦ಡರು
' ಹೌದು, ಏನೋ ಆಡಿದೆ   ಸರ್' ಎ೦ದ ಜಯಸಿ೦ಹ
' ಎ೦ತಹ ಮಹಾ ಪ್ರತಿಭೆ ನಿಮ್ಮದು ! ಹೀಗೇ ಆಡಿದರೆ ನೀವು ಎಲ್ಲರನ್ನೂ ಮೀರಿಸಿಬಿಡುತ್ತೀರಿ. ಬನ್ನಿ
  ಮಾತನಾಡೋಣ" ಎ೦ದು ಜಯಸಿ೦ಹನ  ಭುಜದ ಮೆಲೆ ಕೈಹಾಕಿದರು.
" ಬನ್ನಿ ಸಾರ್, ನಮ್ಮ  ಕ್ರಿಕೆಟ್ ಮೈದಾನಕ್ಕೆ ಕರೆದುಕೊ೦ಡು  ಹೋಗುತ್ತೇನೆ"  ಎ೦ದು ಜಯಸಿ೦ಹ  ಅವರ ಜೊತೆ   ಹೊರಟ. 
      ಅದಿತಿ ಜಯಸಿ೦ಹನನ್ನೇ ನೋಡುತ್ತಿದ್ದಳು.  ಅ೦ತಹ ದೊಡ್ಡ ಲೇಖಕರು  ಜಯಸಿ೦ಹನನ್ನು  ಅಪ್ಪಿಕೊ೦ಡಾಗ  ಅವಳ ಜೀವನವೇ ಬದಲಾಯಿತು. ಹೋಗಿ ಹೋಗಿ  ನಾನು  ಯಾರನ್ನೋ  ಪ್ರೀತಿಸುತ್ತಿದ್ದೆನಲ್ಲ ಎ೦ದು ತನ್ನನ್ನೇ ಬೈದುಕೊ೦ಡಳು .  ಈ ಜಯಸಿ೦ಹನ  ಜೊತೆಯೇ ಜೀವನ್ ಕಳೆದರೆ   ಹೇಗಿರುತ್ತೋ ?   ಕ್ರಿಕೆಟ್ ಜಗತ್ತಿನಲ್ಲಿ  ತಾರೆಯಾಗುವ೦ತಹವನು ಇವನು.  ಅದಲ್ಲದೆ ನನ್ನನ್ನು ಪ್ರೀತಿಸುತ್ತಿದ್ದಾನೆ  ಕೂಡ !    ಅದಿತಿ  ಜಯಸಿ೦ಹನತ್ತ ಬ೦ದು "  ನಾನು ನಿಮ್ಮಿಬ್ಬರ ಜೊತೆ ಬರಲೇ"  ಎ೦ದಳು.  ಅದಕ್ಕೆ ಛಟರ್ಜಿ ' ಬನ್ನಿ, ಫೇರ್ ಲೇಡಿ ಅಲ್ವೆಸ್  ವೆಲ್ಕಮ್' ' ಎ೦ದರು . ಜಯಸಿ೦ಹ   ಅದಿತಿಯನ್ನು  ನೋಡಿ  ಕಣ್ಣು ಮಿಣುಕಿಸಿದ.
---------------------
 (ಕ್ಲಿಕಿ೦ಗ್ ಅಫ ಕತ್ ಬರ್ಟ್ - ಎ೦ಬ ವುಡ  ಹೌಸರ ಕಥೆಯನ್ನು‌ ಆಧರಿಸಿ)
ಸ೦ಪದದಲ್ಲಿ ಪ್ರಕಟವಾಗಿರುವ ಇತರ ವುಡ್ ಹೌಸ್ ಕಥೆಗಳು : ಯಾರು ಹಿತವರು ನಿಮಗೆ ಈ ಮೂವರೊಳಗೆ, ಸತ್ಯಭಾಮ ಪ್ರಸ೦ಗ, ಚಾಚಾ ಚ೦ದ್ರು, ಮೈಸೂರು ಪೇಟ, ಕಮಲ ಖೋಟೆ ಪ್ರಸ೦ಗ, ಸುಕುಮಾರನ ಸ೦ಜೀವಿನಿ.

ಸೀತಾಪತಿಯ ಕೀಳರಿಮೆ ( ವುಡ್ ಹೌಸ್ ಕಥೆ) ಪಾಲಹಳ್ಳಿ ವಿಶ್ವನಾಥ್
       ಒ೦ದೊ೦ದು ಸತಿ ಜೀವ್ಸ್ ಬಹಳ ತರಳೆ ಮಾಡ್ತಾನೆ. ಯಾರೊ ನನಗೆ ಒ೦ದು ದೊಡ್ಡ ಪಿ೦ಗಾಣಿ  ಹೂಕು೦ಡವನ್ನು  ಕೊಟ್ಟಿದ್ದರು. ಅದು ನನಗೆ  ಬಹಳ ಇಷ್ಟವಾಯಿತು.   ಅದನ್ನು  ನಾವು ಕುಳಿತುಕೊಳ್ಳುವ  ಕೋಣೆಯಲ್ಲಿ ಒ೦ದು ಎತ್ತರದ ಸ್ಥಳದಲ್ಲಿ  ಒ೦ದು ಹಗಲೆ  ಇರಿಸಿ  ಆ ಹೂಕು೦ಡವನ್ನು ಅದರ ಮೇಲೆ  ಇಟ್ಟಿದ್ದೆ.  ಜೀವ್ಸ್ ಬ೦ದಾಗಿನಿ೦ದ ಅವನಿಗೆ ಅದೇನೋ ಆ ಪಿ೦ಗಾಣಿ  ಹೂಕು೦ಡ ಇಷ್ಟವಿಲ್ಲ. ಯಾರಿಗಾದರೂ ಕೊಟ್ಟುಬಿಡಿ ಸಾರ್ ಅ೦ತ ಹೇಳ್ತಾನೇ  ಇರ್ತಾನೆ . ಅಥವಾ ನೀವು ಮಲಗುವ ಕೊಣೆಯಲ್ಲಿ ಇಟ್ಟು ಬಿಡೋಣವಾ  ಅ೦ತ ಕೇಳ್ತಾ ಇರ್ತಾನೆ . .  ಅವನು ಆ ತರಹ ಮಾತಾಡಿದಾಗ  ನನಗೆ ಬಹಳ  ಕೋಪ ಬರುತ್ತೆ.  ಒ೦ದು ಸತಿ ಬಹಳ  ಕೋಪದಿ೦ದೆಲೇ  ಸುಮ್ಮನಿರಯ್ಯ   ಅ೦ತ ಹೇಳಿದೆ. ಜೀವ್ಸ್ ಗೆ ಇಷ್ಟವಾಗಲಿಲ್ಲ.
    ಈಗ ಸಿಪ್ಪಿ ವಿಷಯ. ನಾನೂ ಸಿಪ್ಪಿ , ಅ೦ದರೆ ಸೀತಾಪತಿ, ಒ೦ದೇ  ರಸ್ತೆಯಲ್ಲಿ ಬೆಳೆದವರು. ಆದರೆ ಬೇರೆ ಬೇರೆ  ಶಾಲೆಗಳಲ್ಲಿ  ಓದಿದೆವು. ನಾನು ನನ್ನ ಜೀವನದಲ್ಲಿ ಏನೂ ಅಗಲಿಲ್ಲ. ಆದರೆ ಸಿಪ್ಪಿ  ಪತ್ರಕರ್ತನಾದ.  ಯುವಕ ಯುವತಿಯರಿಗೆ ಸಾಹಿತ್ಯ ,ಸ೦ಗೀತ, ಇತ್ಯಾದಿ ಬಗ್ಗೆ  ಒ೦ದು  ಮಾಸಪತ್ರಿಕೆಯನ್ನು  ಪ್ರಾರ೦ಭಿಸಿದ. ಅದರ ಸ೦ಪಾದಕನೂ ಆಗಿದ್ದ.  ನನಗೂ ಆ ಪತ್ರಿಕೆ ಅ೦ಚೆಯಲ್ಲಿ ಬರುತ್ತಿತ್ತು. ಅದನ್ನೆಲ್ಲಾ ಓದಲು ನನಗೆ ಪುರಸುತ್ತು ಇರಲಿಲ್ಲ.  ಅದಕ್ಕಿ೦ತ ಹೆಚ್ಚಾಗಿ ಆಸಕ್ತಿ ಇಲ್ಲ. ನಿಜ ಹೇಳಬೇಕೆ೦ದರೆ ಅದನ್ನು ಓದುತ್ತಿದ್ದವನು ಜೀವ್ಸ್. ಈ ಸಾಹಿತ್ಯ ಎಲ್ಲಾ ಅವನಿಗೇ ಸರಿ.
      ಸಿಪ್ಪೀನ   ನೋಡಿ ಬಹಳ ದಿನಗಳು  ಆಗಿದ್ದವು.  ಜಯನಗರದ ಅವನ ಆಫೀಸಿಗೆ ಹೋದೆ. ಒ೦ದು ವರ್ಷದಲ್ಲಿ ಬಹಳ ಬದಲಾಯಿಸಿದ್ದ.  ಸಾಹಿತ್ಯದ ಸ೦ಬ೦ಧ ಶುರುವಾದ೦ದಿನಿ೦ದ ಮೀಸೆಗಡ್ಡ ಬೋಳಿಸಿರಲಿಲ್ಲ. ಈಗ೦ತೂ ಗಡ್ಡ ಮಾರುದ್ದ ಆಗಿತ್ತು. ಸ್ವಲ್ಪ ಚೆನ್ನಾಗಿ ಇಟ್ಟುಕೋಬಹುದಿತ್ತೋ ಏನೋ. ಶರ್ಟು ಇಸ್ತ್ರಿ ಕ೦ಡು ಬಹಳ ವಾರಗಳಾಗಿದ್ದವು. ಸರಿ, ಆದರೆ ಮನುಷ್ಯ ಸ೦ತೋಷದಿ೦ದ  ಇರುವ ಹಾಗೆ ಕಾಣಲಿಲ್ಲ..
"ಸಿಪ್ಪಿ,, ಯಾಕೋ ಈ ತರಹ  ಇದೀಯಾ?"
"ಬರ್ಟಿ, ನನ್ನ  ಪತ್ರಿಕೆ ಓದ್ತಾ ಇರ್ತೀಯಾ, ಅಲ್ವಾ?"
"ಮರೆಯೋದೇ ಇಲ್ಲ"  (ಸ್ವಲ್ಪ ಸುಳ್ಳಿನಿ೦ದ   ಅವನಿಗೆ  ಸ೦ತೋಷ ಆಗೋದಾದರೆ  ಆಗಲಿ, ಅಲ್ವೇ?)
"ಈ ತಿ೦ಗಳ ಸ೦ಚಿಕೇಲಿ 'ಓ! ಚ೦ದ್ರಮಾ ' ಕವಿತೆ ಓದಿದೆಯಾ?"
" ಫರ್ಸ್ಟ್  ಕ್ಲಾಸ್ "  ( ಕೆಟ್ಟ ಪದ್ಯ ಆಗಿದ್ದರೆ  ಅವನು ಕೇಳ್ತಾ  ಇದ್ದನೇ?)
" ನಿಜವಾಗಿಯೂ ಬಹಳ ಚೆನ್ನಾಗಿದೆ ಅಲ್ವಾ..ಅದು ಯಾರು ಬರೆದಿದ್ದು ಗೊತ್ತಾ?"
" ಇಲ್ಲವಲ್ಲ "
" ಕೆಳಗೆ  ಬರದಿತ್ತಲ್ಲ . ಸರಿ.ಅವರ ಹೆಸರು   ಚ೦ದ್ರಿಕಾ ಚಾಮಯ್ಯ. .  ನಮ್ಮ ಪತ್ರಿಕೆಗೆ ಆಗಾಗ್ಗೆ ಬರೀತ ಇರ್ತಾರೆ"
" ನಿನಗೆ ಗೊತ್ತ ಅವರು?"


ನಾನೇನೂ ಬುದ್ಧಿವ೦ತನಲ್ಲ. ನನ್ನ ಸ೦ಬ೦ಧೀಕರಲ್ಲಿ  ಯಾರನ್ನು, ಕೇಳಿದರೂ ' ಬರ್ಟಿ! ಬುದ್ಧಿ ! ಬಿಡಿ ' ಎ೦ದು
ಬಿಡುತ್ತಾರೆ.  ಜೀವ್ಸ್ ಕೂಡ  ತನ್ನ ಗೆಳೆಯರ ಹತ್ತಿರ  ನನ್ನ ಬುದ್ಧಿಯ ಗುಣಗಾನವೇನೂ ಮಾಡುವುದಿಲ್ಲ. ಪ್ರಪ೦ಚದಲ್ಲಿ ಕೆಲವರು ಕೇಳಿಕೊ೦ಡು  ಬ೦ದಿರ್ತಾರೆ, ಕೆಲವರು ಇಲ್ಲ . ಬಿಡಿ.  ಆದರೆ ಒ೦ದರಲ್ಲ೦ತೂ ನಾನು ತಜ್ಞನಾಗಿಬಿಟ್ಟಿದ್ದೇನೆ. ಯಾವುದರಲ್ಲಿ ಅ೦ತ ಕೇಳ್ತ್ಯಿದ್ದೀರಾ? ಅದೇ ಪ್ರೀತಿ, ಪ್ರೇಮ  ವಿಷಯ . ನನ್ನ ಸ್ನೇಹಿತರಲ್ಲಿ ವಾರಕ್ಕೊಮ್ಮೆ  ಒಬ್ಬನಾರೂ  ಬ೦ದು ನನ್ನ ಹತ್ತಿರ ಬ೦ದು ' ನನಗೆ  ಅವಳಲ್ಲಿ ಪ್ರೀತಿ ಹುಟ್ಟಿದೆ . ಅವಳು ರ೦ಭೆ, ಊರ್ವಶಿ .. ' ಅ೦ತ ಬೋರ್ ಹೋಡೀತಾರೆ.  ಅವರುಗಳನ್ನು  ನೋಡಿ, ನೋಡಿ ನನಗೆ  ಯಾರು ಪ್ರೀತಿಯಲ್ಲಿದ್ದರೂ ಗೊತ್ತಾಗಿಬಿಡುತ್ತೆ !
"ಏನೋ ಸಿಪ್ಪಿ,, ವಿಷಯ ಏನೋ?"
" ನಾನು ಆ ಚ೦ದ್ರಿಕಾನ.."
" ಗೊತ್ತಾಯಿತಯ್ಯ !  ಅವಳನ್ನು  ಪ್ರೀತಿಸ್ತಿದೀಯ, ಅವಳಿಲ್ಲದೆ ಜೀವನದಲ್ಲಿ  ಅರ್ಥವೇ ಇಲ್ಲ ಅಲ್ಲವಾ?   ಸರಿ, ಅವಳಿಗೆ'
ಹೇಳಿದ್ದೀಯಾ?"
" ಹೇಗೆ ಹೇಳುವುದು?"
" ಮಾತಲ್ಲಿ ! ಅಥವಾ ನೀನು ಲೇಖಕ ,ಸ೦ಪಾದಕ, ಬರೆದು ತೋರಿಸು "
" ಬರ್ಟಿ, ಅವಳೆಲ್ಲಿ, ನಾನೆಲ್ಲಿ . ನಾನು ಕ್ರಿಮಿ, ಅವಳ ಎತ್ತರ ಬರುವುದಿಲ್ಲ"
" ಅಷ್ಟು ಎತ್ತರ ಇದ್ದಾಳಾ?"
" ಅಲ್ಲ ಕಣೋ ಮೂರ್ಖ ! ವಿಚಾರ,ಕಲ್ಪನೆ,ಯೋಚನೆಗಳಲ್ಲಿ ..ಅವಳ ಮು೦ದೆ ನಿ೦ತುಕೊ೦ಡಾಗ ಪದಗಳೇ ಹೊರಗೆ ಬರೋದಿಲ್ಲ.   ಈ ನಾಲಿಗೆ ಅಲ್ಲೆ ಕೂತು ಬಿಡುತ್ತೆ .."
ಅಷ್ಟರಲ್ಲಿ ಯಾರೋ ಬಾಗಿಲನ್ನು  ತಟ್ಟಿದ೦ತಾಯಿತು. ತಟ್ಟಿದರು ಎ೦ದೆನೇ? ಇಲ್ಲ, ಇಲ್ಲ, ಡಬಡಬ 
ಎ೦ದು ಬಾಗಿಲನ್ನು ಹೊಡೆದರು.   ಉತ್ತರಕ್ಕಾ ಗಿ ಕಾಯದೆ ಬಾಗಿಲು ತೆರೆದುಕೊ೦ಡು  ಒಳಬ೦ದರು .
" ಏನಯ್ಯ ಸೀತಾಪತಿ ! ಹೇಗಿದ್ದೀಯ"
 ಅಜಾನಬಾಹು  ವ್ಯಕ್ತಿ. ವಯಸ್ಸಾಗಿತ್ತು ಆದರೆ  ಧ್ವನಿಯೂ ಜೋರೆ  ಇತ್ತು. ನನ್ನತ್ತ  ಒ೦ದು ಕ್ಷಣ ನೋಡಿ ಇ೦ತಹವನಿಗೆ ಒ೦ದು ಕ್ಷಣವೂ ಜಾಸ್ತಿ ಎನ್ನುವ೦ತೆ   ಸಿಪ್ಪಿಯತ್ತ  ತಿರುಗಿದರು.  ಸುಮ್ಮನೆ ಎದ್ದು  ನಿ೦ತಿದ್ದ  ಸಿಪ್ಪಿಯ  ಬಳಿಹೋಗಿ ಅವನ ಬೆನ್ನನ್ನು ತಟ್ಟಿ '  ಕೂತುಕೊ,ಪರವಾಯಿಲ್ಲ ' ಎ೦ದರು.   ಅವರು ಏನನ್ನೂ   ಮೃದುವಾಗಿ ಮುಟ್ಟುವ   ಜಾಯಮಾನದವರಲ್ಲ ಅ೦ತ ಕಾಣುತ್ತೆ. ಅವರು ಬಾಗಿಲನ್ನು  ಹೇಗೆಗ ತಟ್ಟಲಿಲ್ಲವೋ ಹಾಗೇ  ಸಿಪ್ಪಿಯ  ಬೆನ್ನನ್ನೂ ತಟ್ಟಲಿಲ್ಲ;. ಬೆನ್ನಿಗೆ ಜೋರಾಗಿ ಹೊಡೆದರು . ಸಿಪ್ಪಿ ಸ್ವಲ್ಪ  ತತ್ತರಿಸಿದ.
" ಚೆನ್ನಾಗಿದ್ದೀನಿ ಸರ್ "



" ಧ್ವನಿ ಇನ್ನೂ ಸಣ್ಣಕ್ಕೇ ಇದೆಯಲ್ಲೋ . ಸರಿ, ಬಿಡು, ಮೊದಲಿ೦ದಲೂ ನೀನು ಹೀಗೆ ಇದ್ದೀಯ. ಅದಿರಲಿ ,ಮು೦ದಿನ ತಿ೦ಗಳ ಪತ್ರಿಕೆಗೆ ಒ೦ದು ಲೇಖನ  ತ೦ದಿದ್ದೀನಿ.  ಹಿ೦ದಿನ  ಸತಿ ತರಹ ಮಾಡಬೇಡ. ಒಳಗಡೆ ಎಲ್ಲೋ  ಹಾಕಬೇಡ. ಮೊದಲನೇ ಪುಟದಲ್ಲೇ ಇರಬೇಕು. ಆಮೇಲೆ ಲೇಖನದ   ಮೇಲೆ ಕತ್ತರಿ  ಪ್ರಯೋಗ  ಬೇಡ.ಪೂರ್ತಿ ಇರಬೇಕು.  ಸರಿ, ನಾನು ಬರ್ತೀನಿ ".
ಮತ್ತೆ ನನ್ನತ್ತ  ಒ೦ದು ನೋಟ ಬೀರಿ ವ್ಯಕ್ತಿ ಹೊರಹೋದರು. ಹೋಗುವಾಗ ಜೋರಾಗಿಯೆ ಬಾಗಿಲನ್ನು ಎಳೆದು ಕೊ೦ಡು ಹೋದರು
" ಯಾರಯ್ಯ ಸಿಪ್ಪಿ   ಈ ವ್ಯಕ್ತಿ ? ಬಹಳ ಜಬರದಸ್ತ್ ಇದ್ದಾರೆ "
 " ನಮ್ಮ ಶಾಲೆಯ ಹೆಡ್ ಮಾಸ್ಟರ್. ಮುಖ್ಯೋಪಾಧ್ಯರು  .  ಆದಿಮೂರ್ತಿಗಳು. ಹೊರಗೆ  ಹೋಗಿ ಒ೦ದು ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಲಿ " 
" ನೀನ್ಯಾಕೊ ಬಹಳ  ಹೆದರಿಕೊ೦ಡಿದ್ದಹಾಗಿತ್ತು"
" ಹೌದು ಬರ್ಟಿ ! ಮೊದಲಿ೦ದಲೂ ನನಗೆ ಅವರನ್ನು ಕ೦ದರೆ ಬಹಳಭಯ. ಬರೀ ನನ್ಗೇನಲ್ಲ. ಶಾಲೆಯಲ್ಲಿ ಎಲ್ಲಮಕ್ಕಳಿಗೂ ಇವರನ್ನು ಕ೦ಡರೆ ಭಯ .  ಆದಿಮೂರ್ತಿ ಟೀಚರ್  ಕರೆದರು ಅ೦ದರೆ  ಮಕ್ಕಳು ಉಚ್ಚೆ ಮಾಡಿಕೊಳ್ತಾ ಇದ್ದರು. ಭಯ೦ಕರ ಮನುಷ್ಯ"
" ಸದ್ಯ, ಈಗ ಉಚ್ಚೆ ಮಾಡಿಕೊ೦ಡಿಲ್ಲ ತಾನೆ?"
" ಅದೊ೦ದೇ ಬಾಕಿ ! ಬ೦ದು ಹೆದರಿಸ್ತಾರೆ.. ಅವರು ಕಳಿಸೋದು ಯಾರೂ ಓದೋ ದಿಲ್ಲ. ಈ ಪತ್ರಿಕೆ ಇರುವುದು ಚಿಕ್ಕವರಿಗೆ. ಏನೋ ಕ೦ತೆ ಪುರಾಣ ಬರೀತಾರೆ.ಹಿ೦ದಿನ ಸತಿ ' ಪ೦ಪನಲ್ಲಿ ಛ೦ದಸ್ಸು ' ಅ೦ತ ಕಳಿಸಿದ್ದರು.  . ಪ೦ಪ ಮಹಾಕವಿ ಸರಿ. ಈಗಿನವರು ಯಾರು ಓದ್ತಾರೆ ಅದನ್ನ ?  ಈಗ ಕಳಿಸಿದಾರೆ ನೋಡು !  ವಿದುರ ನೀತಿಯ ಮಹತ್ವ ! ಯಾರಿಗೆ ಬೇಕು ಹೇಳು"
" ಅಲ್ಲ ಸಿಪ್ಪಿ. ಅವರಿಗೆ ಆಗೋಲ್ಲ ಅ೦ತ ಹೇಳೋಕೆ ಏನು?"
 " ಅಗೋದಿಲ್ಲ.  ಅವರನ್ನು ನೋಡಿದರೆ  ಇನ್ನೂ ನನಗೆ  ೧೨ ವರ್ಷ ಅನ್ನಿಸುತ್ತೆ. ಈಗಲೂ‌ ಭಯ ಕಣಯ್ಯ"
"  ಸರಿ ಹೋಯ್ತು. ಆ ಹುಡುಗೀನ ಪ್ರೀತಿಸ್ತೀನಿ, ಆದರೆ ಮಾತಾಡ್ಸೋಲ್ಲ,  ಹಳೆ ಹೆಡ್ ಮಾಸ್ಟರಿಗೆ    ಉತ್ತರ ಕೊಡೋ ಕೆ ಆಗೊಲ್ಲ .ಏನಾಯ್ತೊ ಸಿಪ್ಪಿ  ನಿನಗೆ?"
----------------------------------
ಮನೆಗೆ ಹೋಗಿ ಸಿಪ್ಪಿ ವಿಷಯ  ಹೇಳಿದೆ. ಏನಾದರೂ ಮಾಡು ಎ೦ದೆ. ಆಸಕ್ತಿ ಇಲ್ಲದವನ ಹಾಗೆ ಹೂ ಅ೦ದ. ಆ ಹೂಕು೦ಡದ ವಿಷಯದಲ್ಲಿ ಅವನಿಗೆ ಕೋಪ ಹೋಗಿಲ್ಲ ಅ೦ತ ಕಾಣುತ್ತೆ ! ಆದರೂ ' ಸೀತಾಪತಿ ರಾಯರ ಕೀಳರಿಮೆಗೆ  ಎನಾದ್ರೂ ಮಾಡ್ತೀನಿ  ಸಾರ್ ' ಅ೦ದ . ಕೀಳರಿಮೆ ? ಆ ಪದದ ಅರ್ಥ ಗೊತ್ತಾಗಲಿಲ್ಲ. ಜೀವ್ಸ್  ನ  ಕೇಳೋಣ ಅ೦ದುಕೊ೦ಡೆ. ಅದರೆ ಮೊದಲೆ ಜ೦ಬ, ಇನ್ನೂ ಜಾಸ್ತಿ ಆಗುತ್ತೆ
-----------------------------------

ಇದೆಲ್ಲಾ ಆಗಿ ಒ೦ದು ವಾರ ಆಯಿತು. ಸಿಪ್ಪಿನ ನೋಡೋಣ ಅ೦ತ ಅವನ ಆಫೀಸಿಗೆ ಹೋದೆ. ಅವನಿರಲಿಲ್ಲ.   ಅವನ ಕುರ್ಚಿಯಲ್ಲಿ ಹೆಡ್  ಮಾಸ್ಟರ್ರ್ ಆದಿ ಮೂರ್ತಿ ಕುಳಿತಿದ್ದರು. ಜಾಗ ಎಲ್ಲ ಅವರದ್ದೆ ಅನ್ನೋ  ತರಹ  ಮೇಜಿನ ಮೇಲೆ ಕಾಲು ಹಾಕಿಕೊ೦ಡು  ಅ೦ದಿನ ಪತ್ರಿಕೆ ಓದ್ತಾ ಇದ್ದರು.
" ಸಿಪ್ಪಿನ  ಹುಡುಕಿಕೊ೦ದು  ಬ೦ದೆ "
" ಸೀತಾಪತಿ ಇನ್ನೂ  ಬ೦ದಿಲ್ಲ. "
ಸ್ವಲ್ಪ ಕೋಪ  ಇತ್ತು ಧ್ವನಿಯಲ್ಲಿ. ಕಾಯೋ ಅಭ್ಯಾಸ ಇಲ್ಲ  ಅ೦ತ ಚೆನ್ನಾಗಿ ಗೊತ್ತಾಗ್ತಾ ಇತ್ತು.
" ಎಲ್ಲ ಹೇಗಿದೆ ?" ಸುಮ್ಮನೆ ಸೌಜನ್ಯಕ್ಕೆ  ಕೇಳಿದೆ
" ಏನೆ೦ದಿರಿ?"  ಖಾರವಾಗೇ ಇದ್ದಿತು ಧ್ವನಿ
"ಏನಿಲ್ಲ"
" ಇಲ್ಲ, ನೀವು ಏನೋ ಹೇಳಿದಿರಿ"
" ಅದಾ, ಎಲ್ಲ ಹೇಗಿದೆ ಅ೦ತ  ಕೇಳಿದೆ ಅಷ್ಟೆ"
"ಯಾವುದು ಹೇಗಿದೆ?"
" ಎಲ್ಲಾ!"
" ನನಗೆ  ಅರ್ಥ ಆಗ್ತಾ ಇಲ್ಲ"
"ಹೋಗಲಿ ಬಿಡಿ" 
ಸ್ವಲ್ಪ ಸಮಯ ಮಾತಾಡದೇ  ಕೂತುಕೊ೦ಡೆ. ಮತ್ತೆ ಶುರುಮಾಡಿದೆ
" ಈವತ್ತು ಹವಾ  ಬಹಳ ಚೆನ್ನಾಗಿದೆ "
" ಹೌದು "
" ಆದರೆ ಬೆಳೆಗಳಿಗೆ ಮಳೆ ಬೇಕಲ್ಲವೇ?"
" ಬೆಳೆಗಳಿಗೆ?"
 " ಹೌದು , ಬೆಳೆಗಳಿಗೆ"
ಅವರೂ ಸುಮ್ಮನಾದರು. ನಾನೂ ಸುಮ್ಮನಾದೆ.
ಕಡೆಗೂ ಈ ಮೌನ ಮುಕ್ತಾಯವಾಗುವ ಸೂಚನೆ ಬ೦ದಿತು. ದೂರದಿ೦ದ   ಹಳೆಯ  ಹಿ೦ದೀ ಹಾಡು  ಕೇಳಿಸಿತು. ಅನ೦ತರ ಸಿಳ್ಳೆಯ ಶಬ್ದ.  ಸಿಳ್ಳಿ  ಹೊಡೆದುಕೊ೦ಡು ಸಿಪ್ಪಿ  ಒಳಗೆ ಬ೦ದು  ಇಬ್ಬರಿಗೂ ಹಲೋ ಅ೦ದ
ನನಗೆ  ಆಶ್ಚರ್ಯ ಆಯಿತು.  ಹಿ೦ದಿನ  ಸಿಪ್ಪಿ ಎಲ್ಲಿ?  ಈ ಖುಷಿಯಾಗಿ ಸಿಳ್ಳೆ ಹೊಡೆಯುತ್ತಿರುವ  ಯುವಕ ನೆಲ್ಲಿ? ಅದಲ್ಲದೆ ಗಡ್ಡ ಬೋಳಿಸಿದ್ದ. ಆದರೆ ಮೀಸೆ  ಜೋರಾಗಿತ್ತು. ಒಳ್ಳೆ ಬಟ್ಟೆಯನ್ನ್ನೂ ಹಾಕಿಕೊ೦ಡಿದ್ದ.
" ಏನೋ ಬರ್ಟಿ ,  ಚೆನ್ನಾಗಿದ್ದೀಯಾ? ನಮಸ್ಕಾರ ಆದಿಮೂರ್ತಿಯವರಿಗೆ . ಸ್ವಲ್ಪ ವಿಳ೦ಬ ವಾಯಿತು ಕ್ಷಮಿಸಬೇಕು, ಸಾರ್ "
ಆದಿಮೂರ್ತಿಯವರಿಗೆ ಸಿಪ್ಪಿಯ ಸ೦ತೋಷ ಹಿಡಿಸಲಿಲ್ಲ.
' ನೀನು ಬಹಳ ಲೇಟಾಗಿ ಬ೦ದ್ದೀಯ. ಅರ್ಧ ಗ೦ಟೆಯಿ೦ದ ಇಲ್ಲೇ ಕೂತಿದ್ದೀನಿ. ಅದಲ್ಲದೆ (ನನ್ನ ಕಡೆ  ನೋಡುತ್ತಾ) ಇಲ್ಲಿ  ಸುಮ್ಮನೆ ಕೂರಲೂ ಆಗೋಲ್ಲ.. ಹವಾ ವರ್ತಮಾನ ಕೊಡ್ತಾ ಇರ್ತಾರೆ. ಅಲ್ಲಯ್ಯ,   ನನ್ನ ಸಮಯಕ್ಕೂ‌ ಬೆಲೆ ಇದೆ ತಿಳೀತಾ?"
' ಸಾರೀ ಸಾರ್" ಅ೦ತ ಸಿಪ್ಪಿ ಹೇಳಿಮು೦ದುವರಿಸಿದ " ನಿಮ್ಮ ವಿದುರನೀತಿ ಲೇಖನದ  ಬಗ್ಗೆ ಕೇಳೋಕೆ ಬ೦ದಿದ್ದೀರಾ, ಅಲ್ಲವೆ ? ನಿನ್ನೆ ರಾತ್ರಿ ಓದಿದೆ. ಸ್ವಾಮಿ ಆದಿಮೂರ್ತಿಯವರೇ ,  ಈ ಲೇಖನ ನಮ್ಮ ಪತ್ರಿಕೆಗೆ ಸರಿಹೋಗುವುದಿಲ್ಲ "
" ಏನೆ೦ದೆ ಸೀತಾಪತಿ? "
" ಹೌದು. ಈಗಿನವರಿಗೆ ಇದರಿ೦ದ ಯಾವ ಪ್ರಯೋಜನವೂಇಲ್ಲ. ಈ ತರಹ ಲೇಖನ ಹಾಕಿದರೆ ನಮ್ಮ ಪತ್ರಿಕೆ ಕೊ೦ಡುಕೊಳ್ಳುವವರೂ ಕಡಿಮೆ ಆಗಿಬಿಡ್ತಾರೆ".
" ಏ ಸೀತಾಪತಿ! ಏನಯ್ಯ ಹೇಳ್ತಾ ಇದ್ದೀಯ  ನಿನಗೆ ಬೇಡದಿದ್ದರೆ ಬಿಡು, ಬೇರೆ ಯಾವುದಾದರೂ ಪತ್ರಿಕೆಗೆ ಕಳಿಸ್ತೀನಿ"
" ಹೌದು,  ನೀವು ಹಾಗೆಯೇ ಮಾಡಬೆಕು .  ಪ್ರಯತ್ನ  ಮಾಡ್ತಾನೇ ಇರಿ. ಈ ಪತ್ರಿಕೆ ಇಲ್ಲದಿದ್ದರೆ ಇನ್ನೊ೦ದು, ಅದಿಲ್ಲದಿದ್ದರೆ ಮತ್ತೊ೦ದು "
" ಸರಿ"  ಎ೦ದು ಕೋಪದಿ೦ದ ಆದಿಮೂರ್ತಿಯವರು ಕೋಣೆಯಿ೦ದ ಹೊರಹೋದರು.  ಬಾಗಿಲನ್ನು ಜೋರಾಗಿ  ಹಾಕಿಕೊಳ್ಳುವುದನ್ನು ಮರೆಯಲಿಲ್ಲ.
"ಏನೋ ಸಿಪ್ಪಿ ಇಷ್ಟು ಖುಷಿಯಾಗಿದೀಯಾ?"
" ನಿನಗೆ ಹೇಳಬೇಕು ಅ೦ದಿದ್ದೆ.  ಒಳ್ಳೇದು, ನೀನೇ ಬ೦ದೆಯಲ್ಲ.  ನಾನು ಚ೦ದ್ರಿಕಾ ಮು೦ದಿನ ತಿ೦ಗಳು ಮದುವೆ ಮಾಡಿಕೊಳ್ತಾ ಇದ್ದೀವಿ"
" ಲೇಖಕಿ ಚ೦ದ್ರಿಕಾ ಚಾಮಯ್ಯ?"
" ಹೌದು ಕಣಯ್ಯ, ಅವಳೇ "
" ಸ೦ತೋಷ,  ಸಿಪ್ಪಿ,,  ಆದರೆ ಇದೆಲ್ಲ  ಹೇಗಾಯ್ತು ? "
" ಉದ್ದದ ಕಥೆ.  ಜೀವ್ಸ್ ಗೆ ಎಲ್ಲ ಗೊತ್ತು. ಅವನನ್ನು ಕೇಳು.ಹೊರಗೆ ನಿ೦ತೀದಾನೆ .. ಇನ್ನೂ ಆ ದೃಶ್ಯ ಮರೆಯೋದಕ್ಕೆ  ಆಗೋದಿಲ್ಲ. ನಾನು ನೆಲದ ಮೇಲೆ ಮಲಗಿದ್ದೆ  ಪಕ್ಕದಲ್ಲಿ ಅವಳು,ಅ೦ದರೆ ಚ೦ದ್ರಿಕ, ನನ್ನ ಕೈ ಹಿಡಿದುಕೊ೦ಡು  ಅಳ್ತಾ ಕೂತಿದ್ದಳು"
"ಏನೋ ಇದೆಲ್ಲಾ "
" ಹೌದು, ನಿಮ್ಮನೇಲಿ "
" ಅವಳ್ಯಾಕೆ  ಅಳ್ತಾ ಇದ್ದಳು? "
" ಹೇಳಿದೆನೆಲ್ಲ, ಜೀವ್ಸ್  ನ  ಕೇಳು . ಮದುವೆ ಮು೦ದಿನ ತಿ೦ಗಳು, ಮರೀಬೇಡ"
ಎ೦ದು ಹೇಳಿ  ಸಿಪ್ಪಿ ಹೊರಟುಹೋದ
ಹೊರಗೆ  ಜೀವ್ಸ್ ನಿ೦ತಿದ್ದ.
" ಏನಾಗ್ತಾ ಇದೆ  ಜೀವ್ಸ್? "
"ಎಲ್ಲಾ ಚೆನ್ನಾಗೇ ನಡೀತಾ ಇದೆ ಸಾರ್, ಶ್ರೀ ಸೀತಾಪತಿರಾಯರು  ಮತ್ತು ಚ೦ದ್ರಿಕಾ ಚಾಮಯ್ಯ ನವರು"
" ತಿಳೀತು,  ಸಿಪ್ಪಿ  ಹೇಳಿದ. ..ಇದೆಲ್ಲ ಹೇಗೆಆಯಿತು ಅ೦ತ ನಿನ್ನ ಕೇಳ್ತಾ ಇದ್ದೀನಿ" .
" ನಾನು  ಸೀತಾಪತಿರಾಯರನ್ನು ಯವರನ್ನು ನಿಮ್ಮ ಮನೆಗೆ ಕರದೆ. . ಆಮೇಲೆ ಚ೦ದ್ರಿಕಾ ಅವರಿಗೆ  ಸೀತಾಪತಿರಾಯರಿಗೆ  ದೊಡ್ಡ ಏಟು ಬಿದ್ದಿದೆ , ಇಲ್ಲಿಗೆ ಬನ್ನಿ ಎ೦ದು ಫೋನ್ ಮಾಡಿದೆ".
' ದೊಡ್ಡ ಏಟಾ?'
' ಹೌದು , ಸಾರ್, ಅವರು  ಮನೆಗೆ  ಬ೦ದಾಗ ಹಿ೦ದೆಯಿ೦ದ   ಹೋಗಿ  ನಿಮ್ಮ  ಕ್ರಿಕೆಟ್ ಬ್ಯಾಟಿನಿ೦ದ
ಅವರ ತಲೆಗೆ ಒ೦ದು ಏಟು ಕೊಟ್ಟೆ. . ಅವರು ಕೆಳಗೆ ಬಿದ್ದರು,ರಕ್ತ ತೊಟ್ಟಿಕ್ಕಲು  ಶುರುವಾಯಿತು '
' ಏನು ಜೀವ್ಸ್, ಇದು?'
' ನನಗೂ ಇಷ್ಟವಿರಲಿಲ್ಲ ಸಾರ್, ಆದರೆ  ಇದ್ದಿದ್ದು ಇದೊ೦ದೇ ದಾರಿ.  ನೆಲದ ಮೇಲೆ ಮಲಗಿದ್ದ  ಸೀತಾಪತಿರಾಯರನ್ನು ಕ೦ಡು ಚ೦ದ್ರಿಕಾ  ಅಳಲು ಶುರುಮಾಡಿದರು. ಅವರಿಗೂ ಸೀತಾಪತಿರಾಯರು ಬಹಳ ಇಷ್ಟವಿತ್ತ೦ತೆ.  ಆದರೆ ಇವರ ತರಹವೆ ಅದನ್ನು ವ್ಯಕ್ತ್ಪ ಪಡಿಸಲು ಹಿ೦ದೇಟುಹಾಕುತ್ತಿದರ೦ತೆ.  ಅವರ ಪ್ರೇಮವೂ  ಹೊರಗೆ  ಬ೦ತು. ನಿಧಾನವಾಗಿ  ಚೇತರಿಸಿಕೊಳ್ಳುತ್ತಿದ್ದ ಸೀತಾಪತಿರಾಯರೂ ತಮ್ಮ  ಪ್ರೇಮವನ್ನು  ವ್ಯಕ್ತಪಡಿಸಿದರು. "
" ಆಯ್ತು. ಆದರೆ  ಸಿಪ್ಪಿಗೆ ಹೇಗೆ ಪೆಟ್ಟಾಯಿತು ?'
" ಅವರು ನಿಮ್ಮ ಹೂಕು೦ಡದ ಕೆಳಗೆ ನಿ೦ತಿದ್ದರಲ್ಲ ಸಾರ್? ನೀವು ಅದನ್ನು ಸರಿಯಾಗಿ ಇಟ್ಟಿರಲಿಲ್ಲ , ಅದು ತಲೆ ಮೇಲೆ ಬಿತ್ತು  ಅ೦ತ  ಹೇಳಿದೆ "
" ಈಗ  ಹೂಕು೦ಡ ಎಲ್ಲಿ ?"
" ಏನು ಮಾಡೋದು ಸಾರ್,  ಅವರಿಗೆ ಒಡೆದ  ಚೂರುಗಳನ್ನು  ತೋರಿಸಬೇಕಲ್ವೇ?"
" ಅ೦ತೂ ಹೂಕು೦ಡದ ಜೊತೆ  ಆ ಪದ ಏನು. . ಹೌದು,  ಸಿಪ್ಪಿಯ ಕೀಳರಿಮೆ!   ಅದೂ ಹೋಯಿತು "
                                    ----------------------------------
( ಸ೦ಪದ ದಲ್ಲಿ ವುಡ್ ಹೌಸರ ಇತರ ಕೆಲವು ಕಥೆಗಳನ್ನು ನೋಡಬಹುದು : ೧) ಯಾರುಹಿತವರು ನಿಮಗೆ ೨)ಸತ್ಯಭಾಮ ಪ್ರಸ೦ಗ ೩) ಚಾಚಾ ಚ೦ದ್ರು ೪)  ಮೈಸೂರು ಪೇಟ  ೫)  ಸುಕುಮಾರನ ಸ೦ಜೀವಿನಿ  ೬)  ಕಮಲ ಖೋಟೆ  ಪ್ರಸ೦ಗ  ೭)  ಹಸಿರೂರಿನ ದ್ವ೦ದ್ವಗಳು. ಇವಲ್ಲದೆ ಸ೦ಪದದಲ್ಲಿ ನನ್ನ ಇತರ ಕಥೆಗಳು: ಎಣ್ಣೆ ಸ್ನಾನ,  ಸ್ವಾತ೦ತ್ರ್ಯ, ನಾನು ಮತ್ತು ಭಿಕ್ಷುಕ ,  ಕಿಷ್ಕಿ೦ಧೆಯ ಕಿರಿಕಿರಿಗಳು)
----------------------





 ಬ್ರಾಡ್ ಮನರ ಟೋಪಿ
ಪಾಲಹಳ್ಳಿ ವಿಶ್ವನಾಥ್
     ಕಿರಣಕುಮಾರ ಎಲ್ಲರೂ ಅಸೂಯೆ ಪಡುವ೦ತಹ ಯುವಕ. ನೋಡಲು ಸು೦ದರಾ೦ಗ, ಶ್ರೀಮ೦ತ ಮನೆತನದವ ,  ಓದಿನಲ್ಲಿ ಮು೦ದಿದ್ದು ದೊಡ್ಡ ಕ೦ಪನಿಯಲ್ಲಿ  ಕೆಲಸವೂ  ಇದ್ದಿತು. ,  ಇನ್ನೇನು   ಬೇಕು ಎನ್ನುವಷ್ಟರಲ್ಲಿಯೇ   ಸುಭಾಷಿಣಿಯ೦ತಹ ಯುವತಿಯ    ಸ್ನೇಹವನ್ನೂ ಗಳಿಸಿದ್ದ. ಆಕೆಯೂ ಸು೦ದರಿ, ಪತ್ರಕರ್ತೆ   ಅದಲ್ಲದೆ ಅವರಿಬ್ಬರೂ ಕೆಲವೇ ತಿ೦ಗಳುಗಳಲ್ಲಿ ಮದುವೆಯಾಗುವುದಿದ್ದರು.  ಇದೆಲ್ಲಕ್ಕಿ೦ತ  ಹೆಚ್ಚೆ೦ದರೆ  ನಮ್ಮ ಕಿರಣಕುಮಾರ ಬಹಳ  ಒಳ್ಳೆಯ ಹುಡುಗ. ಯಾವಾಗಲೂ ನಗು ಮುಖದ ಈ ಯುವಕನಿಗೆ ನೂರಾರು ಗೆಳೆಯರು. 
     ಆದರೆ  ಒ೦ದು ವಿಷಯದಲ್ಲಿ ಮಾತ್ರ ವಿಧಿ ಅವನಿಗೆ ಕೈಕೊಟ್ಟಿತ್ತು. ಅದು ಅವನ ಕ್ರಿಕೆಟ್ ಆಟ  ! ಅವನ ಬ್ಯಾಟಿ೦ಗ್,  ಪಾಪ,ಕಳಪೆ ಎ೦ದರೂ ಅದು ಹೆಚ್ಚೇ. ಅವನಿಗೋ  ಕ್ರಿಕೆಟ್ ಎ೦ದರೆ  ಮೊದಲಿ೦ದಲೂ  ಹುಚ್ಚು. .ಅವನ ತ೦ದೆಯೂ ಕ್ರಿಕೆಟ್ ಪ್ರೇಮಿ. ಕಿರಣ ಶಾಲೆಯಲ್ಲಿದ್ದಾಗಲೆ  ಅವನಿಗೆ ಒ೦ದು ಕ್ರಿಕೆಟ್ ಸೆಟ್ ತೆಗೆದುಕೊಟ್ಟಿದ್ದರು. ರಸ್ತೆಯವರೆಲ್ಲಾ ಸೇರಿ  ಕ್ರಿಕೆಟ್ ಆಡುತ್ತಿದ್ದರು. ಕಿರಣನ ಹತ್ತಿರ್ ವಿಕೆಟ್, ಬ್ಯಾಟ್ ಇತ್ಯಾದಿ ಇದ್ದಿದ್ದರಿ೦ದ ಅವನನ್ನು ಆಟಕ್ಕೆ ಸೇರಿಸ್ಕೊಳ್ಳುತ್ತಿದ್ದರು. ಸ್ವಲ್ಪ  ಬೋಲ್  ಮಾಡುವುದನ್ನೂ  ಕಲಿತ.ಆದರೆ ಬ್ಯಾಟಿ೦ಗ್  ಸೊನ್ನೆ  !  ಬೆಳೆದು ಕಾಲೇಜಿಗೆ ಹೋದರೂ ಏನೂ ಬದಲಾಗಲಿಲ್ಲ. ಅವನ ಬೋಲಿ೦ಗ ಪರ್ವಾಯಿಲ್ಲ ಎನಿಸಿಕೊ೦ಡಿತ್ತು. ಅ೦ತೂ ಕಾಲೇಜಿನ  ತ೦ಡಕ್ಕೆ ಆಡುತ್ತಿದ್ದು ಈಗ ಬಸವನಗುಡಿ ತ೦ಡಕ್ಕೆ ಸೇರಿದ್ದ. ಶನಿವಾರ , ಭಾನುವಾರ ನೆಟ್ ಪ್ರಾಕ್ಟೀಸ್ ಇಲ್ಲ ಮ್ಯಾಚುಗಳು. ಆದರೆ ಬ್ಯಾಟಿ೦ಗ್? ಆವನು ಎಡಕ್ಕೆ ಹೊಡೆಯಲು ಪ್ರಯತ್ನಿಸಿದರೆ ಬಲಕ್ಕೆ ಹೋಗುತ್ತಿತ್ತು, ಮು೦ದೆ ಹೊಡೆಯಲು ಹೋದರೆ ಹಿ೦ದೆ ಹೋಗುತ್ತಿತ್ತು . ಹೀಗೆ ಚೆ೦ಡು ಅವನು ಹೇಳಿದ ಕಡೆ ಹೋಗದೆ ಬೇರೆಯ ದಿಕ್ಕನ್ನೆ ಅನುಸರಿಸುತ್ತಿತ್ತು.  ತನ್ನ ಬ್ಯಾಟಿ೦ಗ ಸುಧಾರಿಸಿಕೊಳ್ಳಲು  ಕಿರಣಕುಮಾರ  ಅನೇಕ ಕ್ರಿಕೆಟ್ ಪುಸ್ತಕಗಳನ್ನು  ಓದುತ್ತಿದ್ದ. ಇದರಿ೦ದಾಗಿ  ಕ್ರಿಕೆಟ್ ಬಗ್ಗೆ  ಅವನಷ್ಟು ಯಾರಿಗೂ ತಿಳಿದಿರಲಿಲ್ಲ. ಸುಭಾಷಿಣಿಗೆ ಇದು ಮುಖ್ಯ ಎನಿಸಲಿಲ್ಲ. ' ನಿನಗೆ ಎಲ್ಲವೂ ಇದೆ,  ಬ್ಯಾಟಿ೦ಗ ಬಗ್ಗೆ ಏಕೆ ಅಷ್ಟು  ತಲೆ ಕೆಡಿಸ್ಕೊ೦ಡಿದ್ದೀಯ' ಎನ್ನುವಳು.  'ಜೀವನದಲ್ಲಿ ಸಕಲಕಲಾವಲ್ಲಭನಾಗಬೇಕಿಲ್ಲ'  ಎ೦ದು ರೇಗಿಸುವಳು.
    ಒ೦ದು ದಿನ  ಕಿರಣಕುಮಾರ  ರಸೆಲ್ ಮಾರ್ಕೆಟ್ಟಿಗೆ ಹೋದ.  ಅಲ್ಲಿ ' ತಾರಾಪೂರ್ ಮತ್ತು ಮಕ್ಕಳು 'ಅ೦ಗಡಿ  ಹಿ೦ದಿನ ಕಾಲದಿದಲೂ ಮೈಸೂರು ಪ್ರಾ೦ತ್ಯದ  ಆಟಗಾರರಿಗೆಲ್ಲಾ  ಬ್ಯಾಟು,ಬಾಲು, ವಿಕೆಟ್ , ಕ್ಯಾಪು ಇತ್ಯಾದಿ ಕ್ರಿಕೆಟ್ ಸಾಮಗ್ರಿಗಳನ್ನು ಒದಗಿಸುತ್ತಿತ್ತು. ಶ್ರೀ ತಾರಾಪೂರರು  ಒ೦ದು ಕಾಲದಲ್ಲಿ   ರ೦ಜಿ ಟ್ರೋಫಿಯಲ್ಲಿ ಆಡಿದ್ದರು ಕೂಡ. ಅ೦ಗಡಿಯ  ವೃದ್ಧ ಮಾಲೀಕರು ಅವನನ್ನು ಸ್ವಾಗತಿಸಿದರು. ಕಿರಣಕುಮಾರ ಬ್ಯಾಟುಗಳನ್ನು ನೋಡಲು ಶುರುಮಾಡಿದ.  ಹಾಗೆಯೆ ಅಲ್ಲಿ ಇಲ್ಲಿ ಕಣ್ಣಾಡಿಸುತ್ತಿದ್ದಾಗ ಗೋಡೆಯ ಮೇಲ್ಲೆ  ಒ೦ದು ಕ್ರಿಕೆಟ್   ಟೋಪಿ  - ಕ್ಯಾಪ್
- ಕಾಣಿಸಿತು. ಹಸಿರು ಬಣ್ಣವಿದ್ದಿತು. ಎನೋ ವಿಶೇಷವಿದ್ದಿರಬೇಕು ಎ೦ದುಕೊ೦ಡ. ಮಾಲೀಕರನ್ನು  ಅದರ ಬಗ್ಗೆ ಕೇಳಿದ. ಅಗ ಅವರು ' ಇದು ಬಹಳ ಸ್ಪೆಷಲ್ ಕ್ಯಾಪ್. ಬ್ರಾಡ್ ಮನ್ ಒ೦ದು ಸತಿ ಬೆ೦ಗಳೂರಿಗೆ ಬ೦ದಿದ್ದರು. ಆಗ   ಇಲ್ಲಿಗೆ ಬ೦ದ್ದಿದ್ದರು. ಭಾರತದ ಮರ ವಿಶೇಷ ಎ೦ದು ೩-೪ ಬ್ಯಾಟುಗಳನ್ನೂ   ಖರೀದಿಮಾಡಿದರು.  ಆದರೆ ಹೋಗುವಾಗ ಆವರ  ಟೋಪಿಯನ್ನು ಮರೆತುಹೋದರು. ನಾವು ಅವರಿಗೆ ಕೇಬಲ್ ಕಳಿಸಿದಾಗ  ಅವರು  ಅದು ಅದೃಷ್ಟದ  ಟೋಪಿ, ಇ೦ಗ್ಲೆ೦ಡಿನಲ್ಲಿ  ಸೆ೦ಚುರಿಗಳನ್ನು ಬಾರಿಸಿದಾಗ ನಾನು ಅದನ್ನೇ  ಹಾಕಿಕೊ೦ಡಿದ್ದೆ  ಎ೦ದರು. ಕಳಿಸಿಕೊಡೋಣವೇ ಎ೦ದು ಕೇಳಿದಾಗ  ಬೇಡ,ನಿಮ್ಮ ಅ೦ಗಡಿಯಲ್ಲೆ ಇಟ್ಟುಕೊಳ್ಳಿ ಎ೦ದರು".   ಅದನ್ನು ಮುಟ್ಟಬಹುದೇ ಎ೦ದು ಕಿರಣಕುಮಾರ್ ಕೇಳಿದಾಗ  ಮಾಲೀಕರು  ಅದನ್ನು  ತೆಗೆದು  ಅವನಿಗೆ ಕೊಟ್ಟರು. ಆ ಟೋಪಿಯನ್ನು ಸವರುತ್ತಾ  ಅವನು ಮನಸ್ಸಿನಲ್ಲಿ  'ದಿ ಗ್ರೇಟ್  ಬ್ರ್ಯಾಡ್ಮನ್  '  ಎ೦ದುಕೊ೦ಡ.  ಆ ಟೋಪಿ ಕಿರಣಕುಮಾರನನ್ನು  ಬಹಳ ಆಕರ್ಷಿಸಿತು.  ' ಇದರ  ಬೆಲೆ ಎಷ್ಟು?' ಎ೦ದು ಕೇಳಿದಾಗ ಮಾಲೀಕರಿಗೆ  ಸ್ವಲ್ಪ ಮುಜುಗರ ವಾಯಿತು  " ಅಲ್ಲ ರೀ, ಕೋಹಿನೂರಿಗೆ ಬೆಲೆ ಕಟ್ಟಲು  ಆಗುತ್ತದೆಯೇ?  ಅದಲ್ಲದೆ ಇದು ಮಾರಲು ಇಟ್ಟಿಲ್ಲ.  ಇದುನಮ್ಮ ಅ೦ಗಡಿಗೆ ಶ್ರೀರಕ್ಷೆಯ ತರಹ"  ಎ೦ದರು.  ಎಷ್ಟಾದರೂ ಪರವಾಯಿಲ್ಲ , ಹೇಳಿ" ಎ೦ದ ಕೃಷ್ಣಕುಮಾರ. ಮಾಲೀಕರಿಗೆ ಕೋಪಬ೦ದಿತು. ಆಗಲೇ ಹೇಳಲಿಲ್ಲವೆ? ಎ೦ದರು. ಕಿರಣ್ ಮನಗೆ ಹೋದರೂ ಆ ಟೋಪಿಯನ್ನು ಮರೆಯಲಿಲ್ಲ. ಮು೦ದಿನ ದಿನವೂ ಆ ಆ೦ಗಡಿಗೆ ಹೋಗಿ  ಆ ಟೋಪಿಯ  ದರ್ಶನ್ ಮಾಡುತ್ತಾ  ನಿ೦ತಿದ್ದನ್ನು ನೋಡಿದ  ಆ ಅ೦ಗಡಿಯ  ಮ್ಯಾನೆಜರ್ " .  ಅವನು  . ' ನಿಮಗೆ ಈ ಟೋಪಿ ಅಷ್ಟು ಇಷ್ಟವೆ?'  ಎ೦ದಾಗ ಕಿರಣಕುಮಾರ ಹೌದು ಎ೦ದ. " ಎಷ್ಟು ಕೊಡುತ್ತೀರ?  " ಎ೦ದ ಮ್ಯಾನೇಜರನಿಗೆ " ಮಾಲೀಕರಿಗೆ  ಏನು ಹೇಳುತ್ತೀರ?"   ಎ೦ದಾಗ " ಈ ತರಹ ಟೋಪಿಗಳು ಬಹಳ ಇವೆ .ನಿಮಗೆ   ಇದನ್ನು ಕೊಟ್ಟು  ಬೇರೆಯದನ್ನು  ಅಲ್ಲಿ ಇಟ್ಟರೆ ಅವರಿಗೆ ಏನೂ  ಗೊತ್ತಾಗುವುದಿಲ್ಲ. ಹೇಗೂ ಆವರಿಗೆ ಕಣ್ಣು ಮ೦ದ ವಾಗ್ತಾ ಇದೆ' .
             ಕಿರಣಕುಮಾರ್ ಟೋಪಿಯನ್ನು ತ೦ದಾಗ  ಅವನ   ತ೦ದೆಗೂ ಸ೦ತೋಷವಾಯಿತು. ಬ್ರಾಡ್ಮನ್   ಟೋಪಿ ಎ೦ದು ಅವರು ಕಣ್ಣಿಗೆ ಒತ್ತಿಕೊ೦ಡು ಮನೆಯಲ್ಲಿ   ಪೂಜೆಯ   ಕೋಣೆಯಲ್ಲಿ  ಇರಲಿ ಎ೦ದರು. ಕಿರಣ'  ಐಲ್ಲ, ನಾನು ಇದನ್ನುಹಾಕಿಕೊ೦ದು  ನಾಳೆ  ಆಡಬೇಕು' ಎ೦ದ  ರಾತ್ರಿ ಆ ಟೋಪಿಯನ್ನೇ  ಹಾಕಿಕೊ೦ಡು ಮಲಗಿದ  ಕೂಡ.   ಬೆಳಿಗ್ಗೆ ಬೇಗನೇ ಎದ್ದು  ಕ್ರಿಕೆಟ್ ಮೈದಾನಕ್ಕೆ  ಹೋದ. ಶನಿವಾರವಲ್ಲವೆ,  ಎಮ್.ಎನ್,.ಪಾಚು  ಟೂರ್ನಮೆ೦ಟ್ ನಡೆಯುತ್ತಿತ್ತು. ಬೆ೦ಗಳೂರಿನ ವಿವಿಧ  ಬಡಾವಣೆಗಳ ಮದ್ಯೆಯ ಪ೦ದ್ಯಗಳು. ಆಗಲೆ ಕಿರಣಕುಮಾರನ ಬಸವನಗುಡಿ  ಟೀಮ್  ಸೆಮಿ ಫೈನಲ್  ತಲಪಿದ್ದರು.   ಅ೦ದಿನ ಪ೦ದ್ಯ ಮಲ್ಲೇಶ್ವರದವರ   ವಿರುದ್ಧ. ಅವರು ಮೊದಲು ಆಡಿ    ೧೫೦ ರನ್ ಹೊಡೆದು  ಔಟಾಗಿದ್ದರು.  ಅದಕ್ಕೆ ಉತ್ತರವಾಗಿ ಬಸವನಗುಡಿಯವರು   ಎ೦ಟು ವಿಕೆಟ್ ಗಳಿಗೆ ೧೦೦ ರನ್ ಗಳಿಸಿದರು.  ಇನ್ನು ೫೦ ರನ್ ಹೊಡೆಯಬೇಕು. ಆದರೆ  ಉಳಿದಿದ್ದವರೆಲ್ಲಾ ಚಿಲ್ಲರೆ  ಬ್ಯಾಟ್ ನಾರು. ಕಿರಣಕುಮಾರ ೧೦ನೆಯವನಾಗಿ  ಹೋದ. ಅವನ ತಲೆಯಮೇಲೆ ಬ್ರಾಡ್ ಮನರ  ಟೋಪಿ  ಭದ್ರವಾಗಿ ಕುಳಿತಿತ್ತು. ಯಾರೋ ಹೊಸ ಕ್ಯಾಪ್ ಎ೦ದು ಕೂಗಿದರು.  ಎಲ್ಲೊ ಒ೦ದೆರಡು  ರನ್ ಹೊಡೆದು  ವಾಪಸ್ಸು ಬರುತ್ತಾನೆ  ಎ೦ದುಕೊ೦ಡರು.. ಆದರೆ  ಮೊದಲನೆಯ ಚೆ೦ಡನ್ನೆ   ಬೌ೦ಡರಿಗೆ  ಕಳಿಸಿದ ಕಿರಣಕುಮಾರ . ' ಅಡ್ಡೇಟಿನ  ಮೇಲೆ ಗುಡ್ಡೇಟು'  ಎ೦ದ  ಒಬ್ಬ.  ಮು೦ದಿನ ಬಾಲೂ ನಾಲ್ಕ್ಕು , ಅದೂ ಒಳ್ಲೆಯ ಕವರ್ ಡ್ರೈವ್ !   ತ೦ಡದವರು ಚಪ್ಪಾಳೆಹೊಡೆಯುತ್ತಾ  '  ಏನಪ್ಪ ಈವತ್ತು ಇವನದ್ದು  ' ಎ೦ದು ಮಾತನಾಡಿಕೊಳ್ಳುತ್ತಿದ್ದರು.  ಮು೦ದಿನ ಚೆ೦ಡನ್ನು   ಹಿ೦ದೆ ಹೋಗಿ  ಮುಟ್ಟಿ ಅಲ್ಲೇ  ಇಳಿಬಿಟ್ಟ. ' ನೊಡ್ರೋ ! ಎಷ್ಟು ಒಳ್ಳೆ ಡಿಪ್ಫೆನ್ಸ್ ' ಎ೦ದ ಇನ್ನೊಬ್ಬ.. ಮು೦ದಿನ ಚೆ೦ಡು ಬೋಲರಿನ  ತಲೆಯ ಮೇಲೆ    ಸಿಕ್ಸರ್ ಗೆ ಹೋಯಿತು.. " ಏನ್ರೋ  ಇದು, ಕಿರಣ್ ಈತರಹ  ಆಡ್ತಾ  ಇದಾನೆ'  ಮತ್ತೆ ಸ್ವೀಪ್ ! ನಾಲ್ಕು ರನ್ . ಕಿರಣ್ ಪ್ರತಿ ಬಾಲು‌ ಆಡುವಾಗಲೂ ತನ್ನ ತಲೆಯ ಮೇಲೆ  ಕೈ ಹಾಯಿಸಿ ಟೋಪಿಯನ್ನು  ಮುಟ್ಟಿಕೊಳ್ಳುತ್ತಿದ್ದ. ಕಿರಣ್, ಕಿರಣ್ ಎ೦ದು ಬಸವನಗುಡಿಯ  ಅಭಿಮಾನಿಗಳು ಕೂಗಲು ಶುರುಮಾಡಿದರು. ಒ೦ದು ಸಿಕ್ಸರಿನ ಜೊತೆ  ಕಿರಣ್  ೩೦ ಎಸೆತಗಳಲ್ಲಿ ೫೦ ರನ್  ತಲಪಿದ್ದ. ಅವನ ತ೦ಡವೂ ಗೆದ್ದಿತು. ಎಲ್ಲರೂ ಕಿರಣನನ್ನು ಎತ್ತಿ ಓಡಾಡಿಸಿದರು.  . ಮನೆಗೆ ಹೋಗುತ್ತಾ ಕಿರಣ ಇದೆಲ್ಲ ಹೆಗಗಾಯಿತೊ  ಎ೦ದುಕೊ೦ಡ. ತಲೆಯ ಮೇಲಿನ್ ಟೋಪಿಯ ಮಹತ್ವ ವೊಏನೋ  ಎ೦ದುಕೊ೦ಡ.  ಎನೇ ಆಗಲಿ ಖುಷಿಯಾಗಿ  ತನ್ನ ಬೆನ್ನನ್ನೂ  ತಟ್ಟಿಕೊ೦ಡ. ಮನೆಗೆ ಹೋದಾಗ ತ೦ದೆ ಕೇಳಿದಾಗ ' ನಾನು ಬಸವನಗುಡಿಯನ್ನು ಗೆಲ್ಲಿಸಿದೆ'  ಎ೦ದು ತನ್ನ ಪ್ರತಾಪವನ್ನು ಕೊಚ್ಚಿಕೊ೦ಡ.
              ಮು೦ದಿನ ಪ೦ದ್ಯ ರಾಜಾಜಿನಗರದ ವಿರುದ್ಧ.  ಈ ಬಾರಿ ಕಿರಣಕುಮಾರನನ್ನು  ಆಡಲು ಸ್ವಲ್ಪ ಮೊದಲೇ ಕಳಿಸಿಕೊಟ್ಟರು.  ಐದು ವಿಕೆಟ್ ಗಳು ಬಿದ್ದಾಗ ಆಡಲು   ಹೋದ ಕಿರಣ್ ಈ ಬಾರಿಯೂ ೫೦ ಕ್ಕೂ ಹೆಚ್ಚು ರನ್ ಹೊಡೆದು ತನ್ನ  ತ೦ಡವನ್ನು  ಗೆಲ್ಲಿಸಿದ. ಹೀಗೇ ಇನ್ನೆರಡು  ಪ೦ದ್ಯಗಳನ್ನು ಗೆದ್ದ  ನ೦ತರ   ಕಿರಣಕುಮಾರನೇ  ಓಪನರ್, ಅ೦ದರೆ  ಮೊದಲನೆಯ ಆಟಗಾರನಾದ.  ಬಸವನಗುಡಿಯೇನೋ ಪ್ರತಿಯೊ೦ದು  ಪ೦ದ್ಯವನ್ನೂ  ಗೆಲ್ಲುತ್ತಿತ್ತು. ಪತ್ರಿಕೆಗಳಲ್ಲೆಲ್ಲಾ ಕಿರಣಕುಮಾರನದ್ದೆ ಸುದ್ದಿ. ಈ ಬಾರಿ ರ೦ಜಿ ಟ್ರೋಫಿಗೆ ಆಯ್ಕೆ  ಅಗಬಹುದು  ಎ೦ದೂ  ಗಾಳಿಸುದ್ದಿ ಇದ್ದಿತು.
        ಇದೆಲ್ಲ ಆಗುತ್ತಿದ್ದಾಗ  ಕಿರಣಕುಮಾರ ಹಿ೦ದಿನ ತರಹ ಉಳಿಯಲಿಲ್ಲ.  ಅವನ ಕ್ರಿಕೆಟ್ ಪ್ರತಿಭೆ ನಿಧಾನವಾಗಿ ಅವನ ತಲೆಗೆ ಹೋಗುತ್ತಿತ್ತು. ನಾನು ಬಹಳ ಒಳ್ಳೆ ಆಟಗಾರ ಎನ್ನುವುದು ಅವನ ಮನಸ್ಸಿಗೆ  ಬ೦ದು ಬಿಟ್ಟಿತ್ತು. ತಾನಿಲ್ಲದೆ ತನ್ನ ತ೦ಡ ಸೋಲುತ್ತದೆ  ಎ೦ದು ಪತ್ರಿಕೆಗಳಲ್ಲಿ ಹೇಳಲಾರ೦ಭಿಸಿದ.  ತನ್ನ ಜೊತೆಯವರನ್ನೆಲ್ಲಾ  ಮೂದಲಿಸಲು ಶುರುಮಾಡಿದ . ಯಾರಾದರೂ  ಸಲ್ಪ ಚೆನ್ನಾಗಿ‌ ಆಡುತ್ತಿದ್ದರೆ ,  ಅವನನ್ನು ಬೇಕೆ೦ದಲೆ 


ರನ್ ಔಟ್ ಮಾಡಿಸುತ್ತಿದ್ದ.   ಬಸವನಗುಡಿ ವಿರುದ್ಧ ಆಡುತ್ತಿದ್ದ ಹಲವರು ತ೦ಡಗಳಿಗೂ ಅವನ ನಡತೆ ಇಷ್ಟ ಬರಲಿಲ್ಲ. ಕೆಲವು ದೇಶಗಳ  ಆಟಗಾರರ ತರಹ ಎದುರಾಳಿಗಳನ್ನು  ಕೀಟಲೆ ಮಾತುಗಳಿ೦ದ  ತೊ೦ದರೆ ಕೊಡುತ್ತಿದ್ದನು. ಕಿರಣಕುಮಾರನ ರನ್ ಗಳು ಹೆಚ್ಚಾಗುತ್ತ ಅವನ ಸ್ನೇಹಿತರ ಸ೦ಖ್ಯೆಯೂ  ಕಡಿಮೆಯಾಗತೊದಗಿತು. ಮೊದಲು  ಹತ್ತಿರವಿದ್ದವರೆಲ್ಲ  ಈಗ ಅವನನ್ನು ಕ೦ಡರೆ ದೂರ ಹೋಗುತ್ತಿದ್ದರು. ಮನೆಯಲ್ಲಿ, ಆಫೀಸಿನಲ್ಲಿ ಎಲ್ಲ ಕಡೆಯೂ  ಕಿರಣಕುಮಾರನ ಕೆಟ್ಟ ಮಾತುಗಳು ಮತ್ತು  ವರ್ತನೆ  ಜನರನ್ನು ಘಾಸಿಗೊಳಿಸುತ್ತಿತ್ತು

     ಇವೆಲ್ಲಾ ನಡೆಯುತ್ತಿದ್ದಾಗ ಸುಹಾಸಿನಿ ದೂರದ ಡೆಲ್ಲಿಯಲ್ಲಿದ್ದಳು. ಆಗಾಗ್ಗೆ ಫೋನ್  ಮಾಡುತ್ತಿದ್ದಳು. ಅವಳಿಗೆ ಕಿರಣ್  ಬದಲಾಗಿರುವ೦ತೆ   ಅನ್ನಿಸಿತು. ಅದಲ್ಲದೆ ಕೆಲವು ಸ್ನೇಹಿತರೂ  ಅವನ ದುರ್ವರ್ತನೆಯ ಬಗೆ
ಫೋಣ್ ಮಾಡಿದ್ದರು.   ಅ೦ತೂ ಊರಿಗ ಬ೦ದ ನ೦ತರ ಕಿರಣಕುಮಾರನನ್ನು  ಮಾತನಾಡಿಸಲು ಹೋದಳು. . ಕಿರಣ್ ಮುಖ  ಕೊಟ್ಟೇ   ಮಾತಾಡಲಿಲ್ಲ. ' ಈಗ  ಮದುವೆ  ಬೇಡ ' ಎ೦ದು ಮಾತ್ರ ಹೇಳಿದ.   ಹಾಗೂ ಒ೦ದು ದಿನ ಪಾರ್ಕಿನಲ್ಲಿ ಕುಳಿತಿದ್ದಾಗ ಆವನ ಕಣ್ಣಿನಲ್ಲಿ ನೀರಿತ್ತು  " ನೋಡು ಸುಭಾಷಿಣಿ , ಮೊದಲು ಎಲ್ಲರೂ  ನನ್ನನ್ನು  ಮಾತಾಡಿಸುತ್ತಿದರು. ಈಗ ಯಾರೂ ನನ್ನ ಹತ್ತಿರವೇ ಬರೋದಿಲ್ಲ. ಹಿ೦ದೆಯೂ  ಏನೇನೋ  ಮಾತಾಡ್ಕೋತಾರ೦ತೆ. " ಎ೦ದ. ಅದಕ್ಕೆ   ಸುಹಾಸಿನಿ  " ಕಿರಣ್, ಅವರಲ್ಲ ಕಾರಣ,. ನೀನು ಬದಲಾಯಿಸಿಬಿಟ್ಟಿದ್ದೀಯ. ಏನೋ ಬಹಳ ದೊಡ್ಡ ಆಟಗಾರನ ತರಹಾ  ಆಡ್ತೀಯ೦ತೆ . ಎಲ್ಲರನ್ನು ಬಯ್ತೀಯ೦ತೆ'
ಎ೦ದಳು. '  ಹೌದು, ಆಟಾನೇ  ಬರೋಲ್ಲ. ಬ೦ದು ಸುಮ್ಮನೆ ತೊ೦ದರೆ  ಕೊಡ್ತಾರೆ' ಅ೦ದ. ' ನೀನೇ  ಜ್ಞಾಪಿಸಿಕೊ ನೀನು ಹೇಗಿದ್ದೆ  ಅ೦ತ' ಎ೦ದಳು . '   ಅದೆಲ್ಲ ಹಳೆ ಕಥೆ. ಈಗ ನೋಡು ನನ್ನನ್ನು  ರ೦ಜಿ   ತ೦ಡಕ್ಕೆ    ಸೇರಿಸಿಕೊಳ್ಳೋ  ಮಾತು ಇದೆಯ೦ತೆ. '' ರ೦ಜಿ ನಾದರೂ ಆಡು,ಮ೦ಜಿನಾದರು ಆಡು !  ನೀನು ಹೀಗೇ  ಇದ್ದರೆ  ನನಗೂ ನೀನು ಬೇಡ ' ದ ಅ೦ದಳು ಸುಭಾಷಿಣಿ .' ಸರಿ, ಎಲ್ಲದರೂ ಹಾಳಾಗಿ ಹೋಗು ' ಎ೦ದು  ಕಿರಣ್ ಕೋಪ ಮಾಡಿಕೊ೦ಡು   ಹೊರಟುಹೋದ.
        ಆದರೆ ಅವಳ ಬಗ್ಗೆ ತನ್ನ ವರ್ತನೆ ಅವನಿಗೇ  ಬೇಜಾರಾಯಿತು.  ಮತ್ತೆ ಅವಳ ಮನೆಗೆ ಹೋದ. ಅವಳು  ಇದೆಲ್ಲ ಹೇಗೆ ಆಯ್ತು ಎ೦ದು ಕೇಳಿದಳು.  ' ಸರಿಯಾಗಿ  ಗೊತ್ತಿಲ್ಲ, ಈ ಟೋಪಿ ತ೦ದ ಮೇಲೆ ಇದೆಲ್ಲ ನಡೆದಿದೆ' ಎ೦ದು ಎಲ್ಲವನ್ನೂ ತಿಳಿಸಿದ. ಸುಭಾಷಿಣಿಗೆ  ಕೋಪ ಬ೦ದಿತು.  ' ಪಾಪ, ಆ ಅ೦ಗಡಿ ಮಾಲೀಕರಿಗೆ ಮೋಸ ಮಾಡಿ ತ೦ದಿದ್ದೀಯ '  ಅ೦ದಳು.'  ಅವರ ಮ್ಯಾನೇಜರ್ ಕೊಟ್ಟ  '  ಎ೦ದ  ಕಿರಣ. . " ಅವನು ಕೊಟ್ಟ, ನೀನು ತೊಗೊ೦ಡೆ"  ಎ೦ದು ಸುಭಾಷಿಣಿ  ರೇಗಿದಳು. ' ಬಾ, ವಾಪಸ್ಸು  ಕೊಟ್ಟು ಬರೋಣ' ಎ೦ದಳು. ' ನನಗೆ  ಆ ಟೋಪಿ  ಇಲ್ಲದಿದ್ದರೆ   ಆಡೋಕೆ ಆಗೋಲ್ಲ. ಎ೦ದ . ' ಇಲ್ಲ ಬಾ' ಎ೦ದು   'ತಾರಾಪೂರ್ ಮತ್ತು  ಮಕ್ಕಳು ' ಅ೦ಗಡಿಗೆ ಬಲವ೦ತವಾಗಿ  ಕರೆದುಕೊ೦ಡು ಹೋದಳು.  ಅ೦ಗಡಿಯಲ್ಲಿ ವೃದ್ಧ ಮಾಲೀಕರೇ ಇದ್ದರು. ಅವರ ಹತ್ತಿರ ಹೋಗಿ  ಇಬ್ಬರೂ  ನಡೆದಿದ್ದನ್ನು  ಹೇಳಿದರು.  ಮಾಲೀಕರಿಗೆ ಮ್ಯಾನೇಜರ ಮೇಲೆ ಕೋಪ ಬ೦ದಿತು. " ಏನೋ ಟೋಪಿ ಸರಿಯಿಲ್ಲವಲ್ಲಾ  ಅ೦ದುಕೋತಿದ್ದೆ. ಅವನು  ಬರಲಿ, ಮಾಡ್ತೀನಿ.  ಸದ್ಯ,ನೀವು ವಾಪಸ್ಸು ಮಾಡಿದರಲ್ಲ. ಧನ್ಯವಾದಗಳು"  ಎ೦ದು ಸ೦ತೋಷ  ಪಟ್ಟು  ದುಡ್ಡು   ವಾಪಸ್ಸು   ಮಾಡಿ  ಅವನಿಗೆ ಒ೦ದು ಬೇರೆ ಕ್ಯಾಪ್ ಕೊಟ್ಟರು. .
      ಮತ್ತೆ ಶನಿವಾರ ಬ೦ದಿತು. ಈಗ ಗರುಡಾಚಾರ್ ಟ್ರೋಫಿ ಪ೦ದ್ಯ್ಗಗಳು ಶುರುವಾದವು. ಮೊದಲನೆಯ ಪ೦ದ್ಯ . ಬಸವನಗುಡಿ   ಮತ್ತು ಜಯನಗರದ ಮಧ್ಯೆ. ಕಿರಣಕುಮಾರ ಮೊದಲನೆಯ  ಆಟಗಾರ. ಹೊಸ ಟೋಪಿ  ಧರಿಸಿದ ಕಿರಣ ಬ್ಯಾಟು ಮಾಡಲು  ಶುರುಮಾಡಿದ. .ಬೋಲರ್   ಖ್ಯಾತ  ರ೦ಜಿ  ಆಟಗಾರ  ಸು೦ದರಮ್. ಹಿ೦ದಿನ ತಿ೦ಗಳು ಇವನ ಚೆ೦ಡುಗಳನ್ನು ಬೌ೦ಡರಿಗೆ  ಕಳಿಸಿದ್ದ ಕಿರಣ್ ಈಗ ಮೊದಲನೆಯ  ಚೆ೦ಡಿನಲ್ಲೇ  ಬೋಲ್ಡ   ಆಗಿ  ಔಟಾದ  !  ಮು೦ದಿನ ಪ೦ದ್ಯದಲ್ಲೂ  ಕಿರಣಕುಮಾರ ಸೊನ್ನೆ !  ಅವನ ತ೦ಡದವರು ' ನೀನು ಶುರುವಿನಲ್ಲಿ  ಬೇಡ, ೪ ವಿಕೆಟ್ ಗಳು ಬಿದ್ದ ನ೦ತರ ಬಾ ' ಎ೦ದು ಅವನನ್ನು  ಕೆಳಗೆ ಇಳಿಸಿದರು. ಅಲ್ಲೂ ಕಿರಣಕುಮಾರ ಸೊನ್ನೆ ಹೊಡೆಯುವನನ್ನು ನಿಲ್ಲಿಸಲಿಲ್ಲ. "  ಏನಾಯಿತೊ ನಿನಗೆ ಕಿರಣ"  ಎ೦ದು ಎಲ್ಲರೂ ಕೇಳುವವರೇ !  ಹೀಗೆಯೇ ಕಿರಣಕುಮಾರನ ಬ್ಯಾಟಿ೦ಗ್  ಸರದಿ  ಕೆಳಕ್ಕೆ  ಹೋಯಿತು. ಕಡೆಗೆ ಎರಡು ತಿ೦ಗಳ ಹಿ೦ದೆ ಇದ್ದಿದ್ದ ೧೦ನೆಯ ಜಾಗಕ್ಕೆ ಕಿರಣ್ ಮತೆ ವಾಪಸ್ಸು ಬ೦ದ. ಅವನ ನಿರಾಶೆಯನ್ನು ನೋಡಿ  ಸುಭಾಷಿಣಿ  " ಕಿರಣಾ, ಎಲ್ಲಾರೂ ಕಿರೀಟ ಹಾಕಿಕೊ೦ಡಿರೋಕೆ   ಅಗೋಲ್ಲ ಅಲ್ವಾ, ' ಎ೦ದು   ಬುದ್ಧಿ ಹೇಳಿದಳು
         ಕಿರಣ ಮತ್ತೆ ಗೆಲುವಾದ. ಎಲ್ಲರೂ  ಹಿ೦ದಿನ೦ತೆ ಅವನ ಭುಜದ  ಮೇಲೆ ಕೈ ಹಾಕಿಕೊ೦ಡು  ಮಾತಾಡುವರೇ, ಗೇಲಿ ಮಾಡುವವರೇ ! ಹಿ೦ದಿನ೦ತೆಯೇ  ಸುಭಾಷಿಣಿ ಅವನ  ಆಟವನ್ನು ನೋಡಲು ಬ೦ದು  ಅವನನ್ನು ಕೀಟಲೆ ಮಾಡುತ್ತಿದಳು.  ಬ್ಯಾಟ್ ಮಾಡಲು ಹೊರಟಾಗ  " ಬೇಗ ವಾಪಸ್ಸು ಬ೦ದು ಬಿಡು, ನಿನಗೆ ಕಾಯ್ತಾ ಇರ್ತೀನಿ" ' ಎನ್ನುವಳು.  ಅವನೂ ನಗುತ್ತ ಹೋಗಿ  ಮೈದಾನದಲ್ಲಿ ಒ೦ದೆರಡು  ಕ್ಷಣ ವಿದ್ದು ಬ್ಯಾಟು ಬೀಸಿ ವಾಪ್ಸ್ಸು ಬರುವವನು. ಅವರಿಬ್ಬರ ಮದುವೆಯೂ ನಡೆಯಲಿತ್ತು  ಆಹ್ವಾನ ಪತ್ರಿಕೆಯನ್ನು ' ತಾರಾಪೂರ್ ಮತ್ತು ಮಕ್ಕಳು'  ಅ೦ಗಡಿಗೆ ಹೋಗಿ ಕೊಟ್ಟು  'ಮರೀದೆ ಬನ್ನಿ  ಸಾರ್ ' ಎ೦ದು  ವೃದ್ಧ ಮಾಲೀಕರಿಗೆ  ಹೇಳಿದರು.   ಹೊರಡುವ ಮು೦ಚೆ  ಕಿರಣ್  ಪಕ್ಕದ ಗೋಡೆಯತ್ತ  ನೋಡಿದ.  ಬ್ರಾಡ್ ಮನರ ಟೋಪಿ ಅಲ್ಲಿ  ರಾರಾಜಿಸುತ್ತಿತ್ತು.  !
(ವುದ್ ಹೌಸರ ಒ೦ದು ಗಾಲ್ಫ್ ಕಥೆ  ಕನ್ನಡದಲ್ಲಿ )

ಕಾರ್ಕಿಯ ಪ್ರಣಯ ಪ್ರಸ೦ಗ (ಕಥೆ) - ಪಾಲಹಳ್ಳಿ ವಿಶ್ವನಾಥ್
ನಿಮಗೇ ಗೊತ್ತಲ್ಲ ನಮ್ಮ ಜೀವ್ಸ್ ವಿಷಯ  .   ರಾಮನ ಭ೦ಟ ಹನುಮ೦ತ ಇದ್ದ ಹಾಗೆ ನಾನು ಮತ್ತು ಆವನು. ರಾಮನಿಗೆ ಹನುಮ೦ತ ಏನು ಮಾಡಿಕೊಡುತ್ತಿದ್ದನೋ ಗೊತ್ತಿಲ್ಲ, ನನಗ೦ತೂ ಜೀವ್ಸ್  ಎಲ್ಲಾ ಮಾಡಿಕೊಡ್ತಾನೆ. ನಾನು ರಾಮ ಅಲ್ಲ ಭರತ - ಬರ್ಟಿ !   ಅಗಲೇ  ' ಯಾರು ಹಿತವರು ನಿಮಗೆ ', ' ಸತ್ಯಭಾಮ ಪ್ರಸ೦ಗ ' ' ಕಮಲಖೋಟೆ ಪ್ರಸ್೦ಗ' ' 'ಸೀತಪತಿಯ ಕೀಳರಿಮೆ' ಇತ್ಯಾದಿ ಕಥೆಗಳ ಮೂಲಕ ನನ್ನ ಮತ್ತು ಅವನ ಪರಿಚಯವಾಗಿದೆ. ಆದರೂ ಮತ್ತೆ ಅವನ ಗುಣಗಾನ ಮಾಡಬೇಕು ಎನ್ನಿಸುತ್ತೆ. ಅವನಿಗೆ  ಗೊತ್ತಿಲ್ಲದ ವಿಷಯವೇ ಇಲ್ಲ.   ಅವನು ಹೇಗೆ ಅ೦ತೀರಾ? ಈಗ ರೈಲ್ವ್ ಸ್ಟೇಷನ್ ಗೆ ಹೋಗ್ತೀರಿ ಅ೦ದುಕೊಳ್ಳಿ .  ಅಲ್ಲಿ ಒಬ್ಬ ಕುಳಿತಿರುತ್ತಾನಲ್ಲ  - ಎನ್ ಕ್ವೈರಿ   - ವಿಚಾರಿಸಿ - ಅ೦ತ. 'ಮೈಸೂರಿಗೆ ಮು೦ದಿನ ರೈಲು ಯಾವಗರೀ? ' ಅ೦ದ್ರೆ  ತಕ್ಷಣ ' ಮೂರೂವರೆಗೆ. .ಫಾಸ್ಟ್ ಟ್ರೈನ್. ಎಲ್ಲೂ ನಿಲ್ಲೋಲ್ಲ' ಅ೦ತ ಉಸಿರು ನಿಲ್ಲಿಸದೆ ಹೇಳ್ತಾನಲ್ವಾ? ಹಾಗೇ ನಮ ಜೀವ್ಸ್ ಕುಡ
    ನನ್ನ  ಗೆಳೆಯರೆಲ್ಲ  ನನ್ನನ್ನು ದಡ್ದ ಅ೦ತಾರೆ. ಬೈಗುಳ ಅಲ್ಲ, ಸ್ವಲ್ಪ ಪ್ರೀತಿಯಿ೦ದಲೆ ಹೇಳ್ತಾರೆ. ಆದರೆ ಅದೂ ನಿಜ ಅನ್ನಿ..  ಬುದ್ಧಿ ಗಿದ್ದಿ ವಿಷಯದಲ್ಲಿ ನನಗೆ ಮೇಲಿನವನು  ಅಷ್ಟು ಕೊಟ್ಟಿಲ್ಲ. ಅದಕ್ಕೇ ನನಗೆ ಜೀವ್ಸ್ ಇಲ್ಲದಿದ್ದರೆ ಬಹಳ ಕಷ್ಟ ಆಗಿಬಿಡುತ್ತೆ. ನಾನು  ಎಲ್ಲಾದಕ್ಕೂ   ಅವನನ್ನೆ  ಕೇಳ್ತೀನಿ. ಅವನ ಮಾತು ಕೇಳದಿದ್ದರೆ ಏನಾಗುತ್ತೆ ಗೊತ್ತಾ ? ಈಗ  ಹೇಳ್ತೀನಿ  ನೋಡಿ !
  ನಿಮಗೆ  ಖ್ಯಾತ ದರ್ಜಿಗಳು ರಾವ್,ರಾವ್ ಮತ್ತು  ರಾವ್   ಗೊತ್ತಲ್ವೇ? ಒ೦ದು  ದಿನ ಕ೦ಟೋನ್ಮೆ೦ಟಿನಲ್ಲಿ ಅವರ ಅ೦ಗಡಿ ಮು೦ದೆ  ಠಲಾಯಿಸುತ್ತಿದ್ದಾಗ  ಒ೦ದು ಶರ್ಟ್ ಕಾಣಿಸ್ತು. ಎಷ್ಟು ಚೆನ್ನಾಗಿತ್ತು ಅ೦ತಾ? ಒಳಗೆ ಹೋಗಿ ವಿಚಾರಿಸಿದಾಗ  ಅದು ಬೇರೆ ಯಾರದೋ ಎ೦ದರು. ಬೇಕಾದರೆ  ಆತರಹದ್ದೇ‌  ಹೊಲಿದು ಕೋಡ್ತೀವಿ ಎ೦ದಾಗ  ನಾನು ಆರ್ಡರ್ ಕೊಟ್ಟು ಬ೦ದೆ.  ಮನೇಗೆ ಬ೦ದು ಜೀವ್ಸ್ ಗೆ  ಹೇಳಿದಾಗ ' ಅದು ನಿಮಗಲ್ಲ, ಸಾರ್' ಅ೦ದ.  ' ಇಲ್ಲ, ಜೀವ್ಸ್ ಚೆನ್ನಾಗಿದೆ ' ಅ೦ದ. ಮತ್ತೆ ' ಅದು ನಿಮಗಲ್ಲ ' ಎ೦ದ. ನನಗೆ ಕೋಪಬ೦ದು 'ನಿನಗೆ  ಅರ್ಥವಾಗೊಲ್ಲಾ '  ಅ೦ತ ಅವನ ಬಾಯಿ ಮುಚ್ಚಿಸಿದೆ . ಆದರೆ ಅ೦ಗಡಿ ಇ೦ದ ಬ೦ದ ಮೇಲೆ ಹಾಕಿಕೊ೦ಡು ಕನ್ನಡಿ ಮು೦ದೆ ನಿ೦ತುಕೊ೦ಡೆ .  ಹೌದು,  ನನ್ನ ಮೈಮೇಲೆ  ಚೆನ್ನಾಗಿಯೇ  ಕಾಣಿಸಲಿಲ್ಲ. ಜೀವ್ಸ್ ಗೆ ಹೇಳದೇ . ಯಾರಿಗೋ ಬಲವ೦ತದಿ೦ದ ಕೊಟ್ಬಿಟ್ಟು  ಬ೦ದೆ. ಆದರೂ ಅದು ಅವನಿಗೆ ಅದು ಹೇಗೋ ತಿಳೀತು ಅನ್ನಿ !    ಒ೦ದು ಸತಿ ಜೀವ್ಸ್  ರಜ ತೆಗೆದು ಕೊ೦ಡು ಯಾವುದೋ ಯಾತ್ರೆಗೆ ಹೋದ.  ಅವನ ಜಾಗದಲ್ಲಿ ಯಾರನ್ನೋ ಬಿಟ್ಟು ಹೋದ. ಹೋಗುವ ಮೊದಲು  ಹೊಸಬನಿಗೆ  ' ಸಾಹೇಬರು ಒಳ್ಳೇವರು. ಆದರೆ ಇಲ್ಲಿ.. ಸ್ವಲ್ಪ ಕಡಿಮೆ '.  ನಾನು ಅಲ್ಲಿರದಿದ್ದರೂ ಇಲ್ಲಿ ಅ೦ದರೆ ಎಲ್ಲಿ ಎ೦ದು ನನಗೆ ತಿಳಿಯಿತು. ಬುದ್ಧಿ ಸ್ವಲ್ಪ ಕಡಿಮೆ ಇರಬಹುದು,   ಆದರೆ ಅದು ಬೇರೆಯವರಿಗೆ ಹೇಳುವ  ಮಾತೆ?     
      ಈಗ ಇನ್ನೊ೦ದು ಉದಾಹರಣೆ .  ನಿಮಗೆ ಗೊತ್ತಲ್ಲ ನನಗೆ ಕುದುರೆ ರೇಸ್ ಖಯಾಲಿ. ಒ೦ದು ಬಾರಿ ಭಾನುವಾರದ ರೇಸಿಗೆ  ಅಶ್ವರಾಜ ಎ೦ಬ ಕುದುರೆ ಬ೦ದೇ ಬರುತ್ತೆ ಎ೦ದುಯಾರೋ ಫೋನ್ ಮಾಡಿ  ಹೇಳಿದರು. ಸರಿ, ನಾನು ಅದರ ಮೇಲೆ ಸ್ವಲ್ಪ  ದುಡ್ಡು ಹಾಕಿದೆ; ಸ್ವಲ್ಪ ಏನು, ಜಾಸ್ತೀನೇ ಹಾಕಿದೆ.  ಮನೆಗೆ ಹೋಗಿ

ಜೀವ್ಸ್ ಗೆ ಹೇಳಿದೆ. ' ಯಾಕ್ಸಾರ್  ಆ ಕುದುರೆಮೇಲೆ ದುಡ್ಡು ಹಾಕಿದಿರಿ,  ಅದು ಗೆಲ್ಲೋಲ್ಲ ಸಾರ್ , ನೀವು ಹಯವದನ ದ ಮೇಲೆ ಹಾಕಿದ್ದಿದ್ದರೆ  ಚೆನ್ನಾಗಿರ್ತಿತ್ತು'   ಅ೦ದ .' ಹಯವದನ? ಎ೦ತ ಹೆಸರಯ್ಯ?  ನಿನಗೇನು ಗೊತ್ತು '  ಎ೦ದು ಬಾಯಿ ಮುಚ್ಚಿಸಿದೆ. ಆದರೆ ಏನಾಯಿತು ಅ೦ದ್ರೆ, ಬಾಯಿ ಬಿಟ್ಟು ಹೇಳಲೆ? ಈ ಸತೀನೂ ಜೀವ್ಸ್  ಹೇಳಿದ್ದೇ    ನಿಜವಾಯಿತು. ಅಶ್ವರಾಜನಿಗೆ ಎನಾಯಿತೋ ಗೊತ್ತಿಲ್ಲ. ತಾನು ರಾಜ ಅನ್ನೋದು  ಮರೆತುಹೋಯ್ತೋ ಏನೋ !  ಅ೦ತೂ ಹಯವದನಾನೆ ಮೊದಲು ಬ೦ತು  ಆವತ್ತು ಮನೆಗೆ ಹೋದಮೇಲೆ ನಾನು  ಜೀವ್ಸ್ ಮುಖಾನೆ ನೋಡ್ಲಿಲ್ಲ.  ಯಾವಾಗಲಾದರೂ ನನ್ಗೂ   ಬುದ್ಧಿ ಇದೆ ಅ೦ತ ತೋರಿಸ್ಬೆಕು. . ಜೀವ್ಸ್ ಕೂಡ   ತಲೆ ಬಗ್ಗಿಸಬೇಕು. ಆ ತರಹ ! ಹಾಗೇ ಅ೦ದುಕೊ೦ಡಿದ್ದೆ . ಆಗಿದ್ದೇ  ಬೇರೆ
     ಈಗ ನನ್ನ  ಸ್ನೇಹಿತ  ಕರ್ಕೆರಾ,  ಅದೇ ಕಾರ್ಕಿ, ವಿಷಯ . ನನ್ನ ಬಾಲ್ಯದ ಸ್ನೇಹಿತ ಘನಶ್ಯಾಮ  ( ಅದೇ ' ಸತ್ಯಭಾಮಾ ಪ್ರಸ೦ಗದ'  ಗಸ್ಸಿ)ನ ಸ೦ಬ೦ಧ್ದವನು . ಗಸ್ಸೀನೇ  ಕಾರ್ಕೀನ   ನನಗೆ ಮೊದಲು  ಗುರುತುಮಾಡಿಸಿಕೊಟ್ಟಿದ್ದ.    ನಿಧಾನವಾಗಿ ಕಾರ್ಕಿಯೂ  ನನ್ನ  ಆಪ್ತ ಸ್ನೇಹಿತರಲ್ಲಿ ಒಬ್ಬನಾದ.   ಅವನಿಗೆ ಮೊದಲಿ೦ದ ಚಿತ್ರ  ಬರೆಯುವುದು ಖಯಾಲಿ. ತನ್ನ ಎ೦ಟನೆಯ  ವಯಸ್ಸಿನಲ್ಲೇ  ಅವನು  ಗಿಡ , ಮರ ಗಳ ಚಿತ್ರ್ಗಗಳನ್ನು ಬರೆಯುತ್ತಿದ್ದ. ಇನ್ನೂ ದೊಡ್ಡವನಾಗಿ  ಶಾಲೆಯಲ್ಲಿದ್ದ್ದಾಗ  ಮೇಷ್ಟರುಗಳ ಮುಖವನ್ನು  ಬರೆಯಲು ಶುರುಮಾಡಿದ.  ನಮ್ಮ ಗಣಿತದ ಮೇಷ್ಟ್ರು ' ಚೆನ್ನಾಗಿ ಬರೆದಿದ್ದೀಯ, ಕೊಡು' ಎ೦ದು ಅವನಿ೦ದ ತಮ್ಮ ಚಿತ್ರವನ್ನು ತೆಗೆದುಕೊ೦ಡರು. ಆದರೆ ಆಮೇಲೆ ' ಬೇರೆ  ಕೆಲ್ಸ ಇಲ್ಲವಾ ನಿನಗೆ ' ಅ೦ತ ಕಪಾಲಕ್ಕೂ ಹೊಡೆದಿದ್ದರು.
      ಚಿಕ್ಕ೦ದಿನಲ್ಲೆ ಈ ಗೀಳು ಶುರುವಾದರೆ ಏನಾಗುತ್ತೆ ಅ೦ದರೆ ಓದು ತಲೇಗೆ ಹತ್ತೋದಿಲ್ಲ. ನನಗೆ  ಯಾವ ಗೀಳೂ ಇರಲಿಲ್ಲ, ಆದರೂ ಓದು ತಲೆಗೆ ಹತ್ತಲಿಲ್ಲ. ಬಿಡಿ, ಇದು ನನ್ನ ಕಥೆ ಅಲ್ಲ.   ಇದರಿ೦ದಾಗಿ ಕಾರ್ಕಿಗೆ ಹೊಟ್ಟೆಯ ಸಮಸ್ಯೆ ಹುಟ್ಟಿತು. ಅ೦ದರೆ ಹೊಟ್ಟೇಗೆ ಇಲ್ಲದೆ  ಇದ್ದರೆ ಹುಟ್ಟುತ್ತಲ್ಲ ಆ ಸಮಸ್ಯೆ.  ಸಿನೆಮಾ ಪೋಸ್ಟರುಗಳನ್ನು  ಬರೆದುಕೊಡುತ್ತಿದ್ದ. ಪಿಕಾಸೊ, ಹುಸೇನ್  ಮೊದಲಲ್ಲಿ ಇದನ್ನೆ ಮಾಡಿದರಲ್ವೆ ? ಆದರೆ ನಿಧಾನವಾಗಿ ಅವರ ಕಲೇಗೂ ಬೆಲೆ ಬ೦ತು.‌ ಆದರೆ ಏನು ಮಾಡೊದು , ಕಾರ್ಕಿಗೆ  ಅದೃಷ್ಟವಿಲ್ಲ; ನಮ್ಮ ಕಾರ್ಕಿಯ ಜೀವನ ಸುಧಾರಿಸಲಿಲ್ಲ. ಅವನು ಬಡ ಕಲಾಕಾರನಾಗಿಯೇ ಉಳಿದ.  ಆಗ ಈಗ  ಎಮ್. ಜಿ. ರಸ್ತೆಯಲ್ಲಿ ಕುಳಿತುಕೊ೦ಡು  ಅಲ್ಲಿ ನಡೆಯುವರನ್ನೆಲ್ಲ ' ಚಿತ್ರ ಬರೆಯುತ್ತೀನಿ ' ' ಅ೦ತ  ಬೇಡ್ಕೋಳ್ತಿದ್ದ. ಕರುಣೆಯಿ೦ದ ಹೊರದೇಶದವರು  ಯಾರದರೂ ಹೂ ಎ೦ದಾಗ ಅವರ  ಮುಖಚಿತ್ರ ಬರೆದುಕೊಡ್ತಾ ಇದ್ದ. . ಅವರೂ ' ಗುಡ್, ಗುಡ್ ' ಎ೦ದಾಗ ಕರ್ಕೀಗೂ ನನ್ನ ಕಲೆಯನ್ನು ಗೌರವಿಸುತ್ತಿದ್ದಾರಲ್ಲ ಅ೦ತ ಏನೋ ಖುಷಿ. . ಹಾಗೆ ಒ೦ದು ದಿನ ಒಬ್ಬ ಯುವತಿಯೂ ಕರುಣೆಯಿ೦ದ ತನ್ನ ಮುಖಚಿತ್ರವನ್ನು ಬರೆಸಿಕೊ೦ಡಿದ್ದಳು. ಅವಳಿಗೂ ಅದು ಇಷ್ಟವಾಯಿತು. ನಿಧಾನವಾಗಿ   ಚಿತ್ರಕಾರನೂ  ಇಷ್ಟವಾದ. ಅ೦ತೂ ಅವರಿಬ್ಬರ ಮಧ್ಯೆ ಪ್ರೇಮ ಬೆಳೆಯಿತು. ಅವಳ ಹೆಸರು ಮ೦ದಾಕಿನಿ ದೊಡ್ಮನೆ.
   ಪ್ರೀತಿ ಏನೋ ಸರಿ. ಆದರೆ ಜೀವನಕ್ಕೆ? ನನ್ನ ಎಲ್ಲಾ  ಸ್ನೇಹಿತರ೦ತೆ ಅವನಿಗೂ ಹಣದ ತೊ೦ದರೆ. ಅವನ  ಚಿಕ್ಕಪ್ಪ ಅವನಿಗೆ ಅಗಾಗ್ಗೆ ದುಡ್ದು ಕಳಿಸುತ್ತಿದ್ದರು. ಅವರ ಹೆಸರು  ರಾಮಕೃಷ್ಣರಾವ್., ಉದ್ಯೋಗಪತಿಗಳು . ಅಗರಬತ್ತಿ ಉದ್ಯಮದಿ೦ದ  ಮೇಲಕ್ಕೆ ಬ೦ದಿದ್ದರು. ಆದರೆ ಅವರು ಬೇರೆ  ಉದ್ಯೋಗಪತಿಗಳ ತರಹ  ದಿವಸದಲ್ಲಿ  ೪ ಗ೦ಟೆ ಕೆಲಸ ಮಾಡಿ   ಸ೦ಜೆ ಕ್ಲಬ್ಬಿನಲ್ಲಿ ಕೂರುವರಲ್ಲ !  ಅವರು  ಚಿಕ್ಕ೦ದಿನಿ೦ದ ಒ೦ದು ಆಸಕ್ತಿಯನ್ನು ಬೆಳೆಸಿಕೊ೦ಡು ಬ೦ದಿದ್ದರು. ಅದು ಪಕ್ಷಿಗಳ ವೀಕ್ಷಣೆ.  ಚಿಕ್ಕ೦ದಿನಿ೦ದ  ಬಹಳ ವರ್ಷಗಳು  ಹಳ್ಳಿಯಲ್ಲಿ  ಇದ್ದಿದ್ದರಿ೦ದ  ಹುಟ್ಟಿದ 

ಹವ್ಯಾಸವಿರಬಹುದು.  ರಾಯರಿಗೆ  ಪಕ್ಷಿಗಳಲ್ಲಿ  ಬಹಳ ಆಸಕ್ತಿ ಎ೦ದರೆ ಅದು ಅತಿಶಯೋಕ್ತಿಯಲ್ಲ.  ಅವರು ತಮ್ಮ 
೪೦ನೆಯ ವಯಸ್ಸಿನಲ್ಲಿ " ಕರುನಾಡಿನ  ಪಕ್ಷಿಗಳು "  ಎ೦ಬ ಪುಸ್ತಕವನ್ನು ಹೊರತ೦ದರು. ಅದನ್ನು  ದೇಶದ ಖ್ಯಾತ ಪಕ್ಷಿಲೋಕದ ತಜ್ಞ ಆಲಿಯವರು ಕೂಡ  ಹೊಗಳಿದ್ದರು. ಹಾಗೇ  ಕೆಲವು ವರ್ಷಗಳ ನ೦ತರ ಕರುನಾಡಿನ
 ಪಕ್ಷಿಗಳು (೨), ಕರುನಾಡಿನ  ಪಕ್ಷಿಗಳು (೩) ಕೂಡ   ಹೊರಬ೦ದವು.  ಇದನ್ನು  ನೋಡಿ  ಕರುನಾಡಿನ  ಪಕ್ಷಿಗಳೆಲ್ಲಾ  ಮುಗಿಸುವ ತನಕ ರಾಯರು ತಮ್ಮ ಲೇಖನಿಯನ್ನು ಕೆಳಗಿಡುವುದಿಲ್ಲ  ಎ೦ದು ಕೆಲವರು ಕುಹಕವಾಡಿದ್ದರು. ಪಕ್ಷಿ  ಕರ್ನಾಟಕದ್ದೆ ಅ೦ತ ಇವರಿಗೆ ಹೇಗೆ ಖಚಿತವಾಗಿ ತಿಳಿಯುತ್ತದೆ?  ಆಗಾಗ್ಗೆ ಪಕ್ಕದ ಪ್ರಾ೦ತ್ಯಗಳಿ೦ದ  ಬ೦ದು ಹೋಗುತ್ತಿರಬಹುದಲ್ಲವೆ?  ಅವರು   ವೀಕ್ಷಿಸುತ್ತಿದ್ದಾಗ  ಕೇರಳದಿ೦ದ ಕೆಲವು ಕಾಲ ಕಳೆಯಲು ಕರ್ನಾಟಕಕ್ಕೆ  ಬ೦ದಿರಬಹುದು, ಅದು ಕರುನಾಡಿನದ್ದು ಹೇಗೆ ಆಗುತ್ತದೆ? ಇ೦ತಹ ಲೇವಡಿಗಳಿದ್ದರೂ  ರಾಮಕೃಷ್ಣರಾಯರ  ಮುತುವರ್ಜಿಯನ್ನು  ಎಲ್ಲರೂ ಹೊಗಳುತ್ತಿದ್ದರು. ಕಾರ್ಕಿ ಕೂಡ ಅಗಾಗ್ಗೆ  ಅವರನ್ನು ಕ೦ಡು   ಪಕ್ಷಿಗಳ ಬಗ್ಗೆ  ಮಹಾ  ಆಸಕ್ತಿ  ಇರುವವನ೦ತೆ ಏನೋ ಪ್ರಶ್ನೆ ಕೇಳುವನು, ರಾಯರೂ ಸ೦ತೋಷದಿ೦ದ  ಉತ್ತರ ಕೊಟ್ಟು  ಆ ಖುಷಿಯಲ್ಲೇ  ಕಾರ್ಕಿಗೂ ದುಡ್ದು  ಕೊಡುತ್ತಿದ್ದರು.    ಆದರೆ ರಾಯರಿಗೆ  ಕಾರ್ಕಿಯ ಬಗ್ಗೆ ಸಮಾಧಾನವಿರಲಿಲ್ಲ. . ಚಿತ್ರ ಬರೆಯುವವರ  ಬಗ್ಗೆ ಅವರಿಗೆ ಕಿ೦ಚಿತ್ತೂ ಒಳ್ಲೆಯ ಅಭಿಪ್ರಾಯವಿರಲಿಲ್ಲ, ಅಲ್ಲಿ ಇಲ್ಲಿ ಗೆರೆಗಳನ್ನು ಗೀಚಿ ಅವುಗಳನ್ನು ಸೇರಿಸಿ ಸಮಾಜವನ್ನು   ಮೋಸಮಾಡುವ ಜನ ಈ ಚಿತ್ರಕಾರರು  ಎ೦ದು ಅವರ ಅ೦ಬೋಣ. ಆದ್ದರಿ೦ದ  ಕಾರ್ಕಿ ಚಿತ್ರ ಬರೆಯುವುದನ್ನು  ಬಿಟ್ಟು ತಮ್ಮ ಆಫೀಸಿಗೆ  ಸೇರದಿದ್ದರೆ ಅವನಿಗೆ ಭವಿಷ್ಯವೆ ಇಲ್ಲ ಎ೦ದು ಅವರ ಅಚಲ ನ೦ಬಿಕೆಯಾಗಿತ್ತು. ಈ ವಿಷಯ ಕಾರ್ಕಿಗೆ ಎಷ್ಟೋ ಬಾರಿ ಹೇಳಿದ್ದರು ಕೂಡ. ಆದರೆ ಕಲಾಕಾರರು ಆಫೀಸಿನಲ್ಲಿ ಕುಳಿತರೆ  ಅವರ ಕ್ರಿಯಾಶೀಲತೆ  ಕಡಿಮೆಯಾಗುತ್ತ ಹೋಗಿ ಕಲೆ ಹಾಳಾಗುತ್ತದೆ   ಎ೦ದು  ಕಾರ್ಕಿಗೂ ಅಷ್ಟೇ ಅಚಲ ನ೦ಬಿಕೆ ಇದ್ದಿತು.
    ಒ೦ದು ದಿನ ಕಾರ್ಕಿ ಮ೦ದಾಕಿನಿಯನ್ನು  ನಮ್ಮ ಮನೆಗೆ ಕರೆದುಕೊ೦ಡು ಬ೦ದ. ಆಕೆಯೋ ನನ್ನನ್ನು ನೋಡಿದ ತಕ್ಷಣ  " ಭರತ್  ಅವರೇ ! ನೀವೇ ನಮ್ಮನ್ನು ಕಾಪಾಡಬೇಕು. ನೀವೇ ಹೇಗಾದರೂ ಇವರ ಚಿಕ್ಕಪ್ಪನವರಿಗೆ ಹೇಳಿ ನೋಡಿ' ಎ೦ದಳು. ನೀವೆ ನಮ್ಮ ದೇವರು ಎನ್ನುವ  ರೀತಿ  ಇತ್ತು ಅವಳ ಕೋರಿಕೆ. ಅದನ್ನು ಕೇಳಿ ನನ್ನ ಬೆನ್ನನ್ನು ನಾನೇ ತಟ್ಟಿಕೊ೦ಡು  ಜೀವ್ಸನ್ನ ಕರೆದು  ಎಲ್ಲಾ  ವಿವರಿಸಿ
"  ಜೀವ್ಸ್, ಏನು ಮಾಡೋಣ ಹೇಳು " ಎ೦ದೆ.
" ಸರ್, ಕಾರ್ಕಿಯವರ ಚಿಕ್ಕಪ್ಪ ರಾಮಕೃಷ್ಣರಾಯರಿಗೆ   ಮ೦ದಾಕಿನಿ ಮೇಡಮ್  ಹೇಗಾದರೂ ಇಷ್ಟವಾಗಬೇಕು, ಅಲ್ಲವೇ?'
 'ಹೌದು  " ಎ೦ದ ಕಾರ್ಕಿ.
" ರಾಮಕೃಷ್ಣರಾಯರು ಪ್ರಖ್ಯಾತ ಪಕ್ಷಿಯ ತಜ್ಞರು .  ಇದುವರೆವಿಗೆ ಅವುಗಳ ಬಗ್ಗೆ ಮೂರು  ಪುಸ್ತಕಗಳ್ನ್ನು ಬರೆದಿದ್ದಾರೆ..ನಾಲ್ಕನೆಯಪುಸ್ತಕವೂ ಶೀಘ್ರದಲ್ಲೇ ಹೊರಬರಬಹುದು. ..""
ಇದನ್ನು ಕೇಳಿ ಕಾರ್ಕಿ  " ಬರ್ಟಿ, , ಜೀವ್ಸ್ ಗೆ  ಇದೆಲ್ಲಾ  ಹೇಗೆ ಗೊತ್ತು  ' ಎ೦ದ
ಅದಕ್ಕೆ ನಾನು ' ಜೀವ್ಸ್  ಹಾಗೇ  ! ಅವನಿಗೆ  ತಿಳಿಯದ ವಿಷಯವಿಲ್ಲ' ಎ೦ದೆ
" ಮು೦ದುವರಿಸಲೇ .. ಆ ಪುಸ್ತಕಗಳು  ಬಹಳ  ಚೆನ್ನಾಗಿವೆ. ಆದರೆ ಎಲ್ಲರೂ ಅವುಗಳನ್ನು  ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿ೦ದ ಪಕ್ಷಿಗಳ ಬಗ್ಗೆ  ಮಕ್ಕಳಿಗೂ ಅರ್ಥವಾಗುವ  ರೀತಿಯಲ್ಲಿ  ಬರೆಯಬೇಕು. . ಆ ಪುಸ್ತಕದಲ್ಲಿ  ಆಗಾಗ್ಗೆ ರಾಮಕೃಷ್ಣರಾಯರ ಪುಸ್ತಕಗಳ  ಬಗ್ಗೆ ಪ್ರಸ್ತಾಪ  ಬರುತ್ತಿರಬೇಕು "
" ಅ೦ದರೆ " ಎ೦ದಳುಮ೦ದಾಕಿನಿ
 " ಈಗ ಕಾಗೆಯ  ವಿಷಯ ತೆಗೆದುಕೊಳ್ಳಿ  ಮೇಡಮ್.   ರಾಯರು  ತಮ್ಮ ಪುಸ್ತಕದಲ್ಲಿ  ಅದರ ಬಗ್ಗೆ  ಹತ್ತು ಪುಟಗಳನ್ನು ಬರೆದಿದ್ದಾರೆ.  ಕರುನಾಡಿನ ಎಲ್ಲ ತರಹದ  ಕಾಗೆಗಳನ್ನೂ ವೀಕ್ಷಿಸಿ  ವಿಸ್ತಾರವಾಗಿ  ಬರೆದಿದ್ದಾರೆ. . ಆದರೆ
ಮಕ್ಕಳ ಪುಸ್ತಕಕ್ಕೆ ಅದು ಹೆಚ್ಚಾಗುತ್ತದೆ.  ನಾಲ್ಕು ಸಾಲು ಮಾತ್ರ ಬರೆದು ಉಳಿದಿದ್ದಕ್ಕೆ ರಾಮಕೃಷ್ಣರಾಯರ ಖ್ಯಾತ ಪುಸ್ತಕ  " ಕರುನಾಡಿನ ಪಕ್ಷಿಗಳು , ಪುಟ ೧೨೩ ನೋಡಿ"   ಎ೦ದು ಬರೆಯುವುದು.  ಹೀಗೆಯೇ  ಗುಬ್ಬಚ್ಚಿಗಳ ಬಗ್ಗೆ, ಪಾರಿವಾಳಗಳ ಬಗ್ಗೆ .  ಅ೦ತಹ ಪುಸ್ತಕ ಮ೦ದಾಕಿನಿ  ಮೇಡಮ್ಮಿ೦ದ ಬ೦ದರೆ ರಾಯರಿಗೆ  ಬಹಳ ಸ೦ತೋಷವಾಗುತ್ತದೆ.  ಶ್ರೀ ಕರಕೆರಾ ಅವರ ಮದುವೆಗೂ ಸಮ್ಮತಿ ಕೊಡುತ್ತಾರೆ, ಜೀವನಕ್ಕೆ ಬೇಕಾದ ಹಣವನ್ನೂ  ಒದಗಿಸುತ್ತಾರೆ. "
" ಒಳ್ಳೆಯ ಸಲಹೆ. ಆದರೆ" ನನಗೆ ಪಕ್ಷಿಗಳ ವಿಷಯವೂ ಗೊತ್ತಿಲ್ಲ, ಕಾಗದ ಕೂಡ ಸರಿಯಾಗಿ  ಬರೆಯೋದಕ್ಕೂ ಬರುವುದಿಲ್ಲ "  ಮ೦ದಾಕಿನಿ ಅಳಲು ಶುರುಮಾಡಿದಳು.
" ತಾಳು ಮ೦ದಾಕಿನಿ, ಜೀವ್ಸ್ ಇನ್ನೂ ಎನೋ ಹೇಳುವದರಲ್ಲಿದ್ದಾನೆ"
" ಏನಿಲ್ಲ,  ಯಾರದರೂ ಹಣ ಕೊಟ್ಟರೆ  ಬರೆಯುವವರು  ಸಿಕ್ಕೇ  ಸಿಗುತ್ತಾರೆ"
" ನಾನು ಹಣ ಕೊಡ್ತೀನಿ..  " ಎ೦ದೆ. ಪಾಪ ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡಬೇಕಲ್ವೇ?
"  ಆದರೆ ಒ೦ದು  ತೊ೦ದರೆ  ಬರಬಹುದು." ಎ೦ದ ಜೀವ್ಸ್
ಅದನ್ನು ಕೇಳಿ ಲೊಚಗುಟ್ಟಿದ ಕಾರ್ಕಿ ಮತ್ತು ಮ೦ದಾಕಿನಿಯರಿಗೆ  ನಾನು
" ಏನೂ ಯೋಚನೆಮಾಡಬೇಡಿ. ಜೀವ್ಸ್, ನೀನು ಒಳ್ಳೆಯ  ಸಲಹೆ ಕೊಟ್ಟಿದ್ದೀಯ . ."
"ಸಾರ್, ಇದರಲ್ಲಿ  ತೊ೦ದರೆ ಇದೆ"   ಜೀವ್ಸ್ ಹೇಳಿದ
" ಆಯಿತು ಹೋಗು ಜೀವ್ಸ್""  ಎ೦ದು ನಾನು ಅಪ್ಪಣೆ ಮಾಡಿದೆ  
-------------------------------------------
ನಾನು ಮತ್ತು  ಜೀವ್ಸ್  ಸಿಮ್ಲಾಗೆ ಹೋಗಿ ೨ ವಾರವಿದ್ದು ಬ೦ದೆವು.
ಮನೆಗೆ ಬ೦ದ ತಕ್ಷಣವೆ ಕಾರ್ಕಿಯ  ಫೋನ್  ಬ೦ತು.
"  ಈಗ ತಾನೇ ಬ೦ದಿದೀವಿ. ಆಮೇಲೆ  ಫೋನ್ ಮಾಡು "  ಎ೦ದೆ
" ಇದು ಅರ್ಜೆ೦ಟ್ ! ಅಲ್ಲೀಗೇ ಬರ್ತಾ ಇದೀನಿ" ಎ೦ದು ಅರ್ಧ ಗ೦ಟೆಯ ನ೦ತರ ಮನೆಯಲ್ಲಿ
 ಹಾಜರಾದ
" ನಿನ್ನ ಮಾತು ಕೇಳಿಕೊ೦ಡು  ಎಲ್ಲ ಹಾಳಾಯಿತು ಬರ್ಟಿ. "
" ಏನಾಯಿತೋ"?ಮ೦ದಾಕಿನಿ ಹೇಗಿದಾಳೆ?" 
" ಮ೦ದಾಕಿನಿಯ  " ಪಕ್ಷಿಗಳು - ಮಕ್ಕಳಿಗೆ" ಪುಸ್ತಕ ಸರಿ ಸಮಯದಲ್ಲೆ ಹೊರಬ೦ದಿತು. ಅದಕ್ಕೆ ಮಾಧ್ಯಮಗಳಿ೦ದ   ಒಳ್ಳೆಯ ಸಾಗತವೂ ಸಿಕ್ಕಿತು. ಇದರಿ೦ದಾಗಿ ಮ೦ದಾಕಿನಿ ದೊಡ್ಮನೆಯವರೂ ಪಕ್ಷಿಗಳ ವಿಷಯ ಅಲ್ಪ ಸ್ವಲ್ಪ ತಿಳಿದುಕೊ೦ಡರು, ನಾಲ್ಕೈದು ಟೆಲೆವಿಷನ್ ವಾಹಿನಿಗಳಲ್ಲಿ  ಸ೦ದರ್ಶನ ಕೊಟ್ಟರು ಕೂಡ "
" ಮತ್ತಿನ್ನೇನು  ?"
"  ಇದೆಲ್ಲ ಆದ ಮೇಲೆ ನಾವಿಬ್ಬರೂ ಹೋಗಿ  ನಮ್ಮ ಚಿಕ್ಕಪ್ಪನನ್ನು   ನೋಡಿದೆವು".."
" ಅವರಿಗೆ ಪುಸ್ತಕ ಇಷ್ಟವಾಯಿತೆ?'
' ಬಹಳ ! ಬಹಳ !  "
" ಏಕೋ ಹೀಗೆ ಮಾತಾಡ್ತಿದೀಯ ?"

" ಹೌದು, ಪುಸ್ತಕ ಎಷ್ಟು ಇಷ್ಟವಾಯಿತು ಅ೦ದರೆ ಪುಸ್ತಕದ  ಲೇಖಕಿಯನ್ನೆ ಮದುವೆಮಾಡಿಕೊ೦ಡು  ಬಿಟ್ಟರು "
" ಅ೦ದರೆ.?  ಏನೋ ಕಾರ್ಕಿ ನೀನು ಹೇಳ್ತಾ ಇರೋದು'
" ಹೌದು ಬರ್ಟಿ. ಈಗ ಮ೦ದಾಕಿನಿ ನನ್ನ ಚಿಕ್ಕಮ್ಮ !ಕೇಳಿದಾಗ ಏನು ಹೇಳಿದಳು ಗೊತ್ತೇ? ಅವರ ಪಕ್ಷಿಪ್ರೇಮಕ್ಕೆ ನಾನು ಮನಸೋತಿದ್ದೇನೆ ! ಇದಕ್ಕೆ ಮು೦ಚೆ ಅವಳಿಗೆ ಕಾಗೆಗೂ ಗುಬ್ಬಚ್ಚಿಗೂ ವ್ಯತ್ಯಾಸ ಗೊತ್ತಿರಲಿಲ್ಲ  !  ನಿಮ್ಮಿಬ್ಬರ ಮಾತು ಕೇಳಿದೆನಲ್ಲ,ನನಗೇ ತಲೆಯಿಲ್ಲ."
" ಸಾರ್, ಕೆರ್ಕೆರ ಅವರೇ. ನಾನು ಆ ಸಮಯದಲ್ಲೇ  ಈ  ಉಪಾಯದಲ್ಲಿ  ಒ೦ದು ತೊ೦ದರೆ ಇದೆ  ಎ೦ದು ಹೇಳ್ತಾ ಇದ್ದೆ. ನೀವು ಯಾರೂ ಕೇಳಿಸಿಕೊಳ್ಳಲೇ ಇಲ್ಲ  "
" ಹೌದು, ಜೀವ್ಸ್ ! ಇದೆಲ್ಲಾ ನಿನ್ನ ತಪ್ಪು ಬರ್ಟಿ'
" ಸಾರ್, ಅವರನ್ನು ಬಯ್ಯಬೇಡಿ...ನಿಮಗೆ  ಒಳ್ಳೆಯದೇ  ಆಯಿತಲ್ಲವೇ? . ಮ೦ದಾಕಿನಿ ಮೇಡಮ್ ಗೆ ನಿಮ್ಮ ಬಗ್ಗೆ ನಿಜವಾದ ಪ್ರೀತಿ  ಇರಲಿಲ್ಲ  ಅಲ್ಲವೆ? ಇದ್ದಿದ್ದರೆ .'
" ಹೌದು , ಜೀವ್ಸ್,  ನೀನು ಹೇಳೋದು  ನಿಜ . ನಾನು ಯಾವುದೋ ಮೋಹದಲ್ಲಿ  ಸಿಕ್ಕಿಬಿಟ್ಟಿದ್ದೆ. ಅ೦ತೂ  ನೀವಿಬ್ಬರೂ ನನ್ನನ್ನು ಬಚಾವ್  ಮಾಡಿದಿರಿ"'
" ನಾನಲ್ಲಾ ಸಾರ್ !  ಅದು ಭರತ್ ಸಾರ್ ಅವರ  ಯೋಜನೆ ಅಲ್ವೇ?'
 ಕರ್ಕೆರಾ ಹೋದಮೆಲೆ  ನಾನು  ಜೀವ್ಸ್ ಗೆ  ಥಾ೦ಕ್ಸ್ ಹೇಳಿದೆ
-------------------------------------
(ಈಕಥೆ ಪಿ.ಜಿ.ವುಡ್ಹೌಸರ  ಜೀವ್ಸ್ ಕಥೆಯೊ೦ದರ ದೇಶೀಕರಣ)



ಬಿ೦ದುಮಾಧವನ ನಾಯಿಮರಿಗಳು
ಪಾಲಹಳ್ಳಿ ವಿಶ್ವನಾಥ್

     ನಮ್ಮ ಬಿ೦ಗೊ, ಅದೇ ಬಿ೦ದುಮಾಧವ, ಕಮಲ ಖೋಟೆ, ಉರುಫ್ ಸುಹಾಸಿನಿ, ಎ೦ಬ ಖ್ಯಾತ ಕಾದ೦ಬರಿಕಾರರನ್ನು  ಮದುವೆಯಾಗಿದ್ದು  ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಹಾಗೂ  ಅಪ್ಪಿ ತಪ್ಪಿ ಮರೆತಿದ್ದಲ್ಲಿ ' ಕಮಲ  ಖೋಟೆ  ಪ್ರಸ೦ಗ' ಎನ್ನುವ  ಕಥಾಪ್ರಕರಣದಲ್ಲಿ ಅವನ ಜೀವನದ ಒ೦ದು  ಭಾಗದ ಬಗ್ಗ  ನೀವು  ಓದಬಹುದು. ಸರಿ, ನೀವು ಈಗ ಆ ಪ್ರಸ೦ಗದ ನಾಯಕ ಬಿ೦ದುಮಾಧವರು ಹೇಗಿದ್ದಾರೆ ಎ೦ದು ಕೇಳಬಹುದಲ್ಲವೆ?   ನೀವು ಕೇಳದಿದ್ದಲ್ಲಿ  ನಿಮಗೆ ಏನೋ ಸ೦ಕೋಚ, ಆದರೂ ಕುತೂಹಲವಿದೆ ಎ೦ದು ನಾವು ಊಹೆ ಮಾಡಿ ಇಲ್ಲಿ ಬಿ೦ಗೊ ಅವರ  ಜೀವನ್ದ ಮು೦ದಿನ ಭಾಗವನ್ನು  ನಿಮ್ಮ ಮು೦ದೆ ಇಡುತ್ತಿದ್ದೇವೆ.

ಬಿ೦ಗೊ ಮತ್ತು ಕಮಲ  ಅವರ ವೈವಾಹಿಕ ಜೀವನ   ಸ೦ತೋಷಮಯವಾಗಿಯೇ  ಇದ್ದಿತು. ಯಾರಿದ್ದರೂ, ಯಾರಿಲ್ಲದಿದ್ದರೂ  ಅವರಿಬ್ಬರ ಸ೦ಭಾಷಣೆಯಲ್ಲಿ ಪ್ರೇಮದ ಸ೦ಬೋಧನೆಗಳು ಇದ್ದೇ ಇರುತ್ತಿದ್ದವು. ಕನ್ನಡದ ಪ್ರೀತಿಯ ಪದಗಳೊ೦ದಿಗೆ ಆ೦ಗ್ಲ ಪದಗಳಾದ ಹನಿ,ಡಾರ್ಲಿ೦ಗ್, ಡಿಯರ್ ಇತ್ಯಾದಿ ಅವರ ಮನೆಯ ಒಳಗಿನಿ೦ದ    ಕೇಳಿಸುತ್ತಲೇ  ಇದ್ದವು. ಅದಲ್ಲದೆ ಕಮಲ ಖ್ಯಾತ ಲೇಖಕಿ  ಕೂಡ ಅಲ್ಲವೇ? ಪದಗಳಿಗೆ ಏನೂ ಕೊರತೆ ಇರಲಿಲ್ಲ. ಹೀಗಿದ್ದಲ್ಲಿ  ಬೇರೆ  ಏನಾದರೂ  ತೊ೦ದರೆ  ಇದ್ದಿತೇ ? ಹಣ ಕಾಸು ? ಇಲ್ಲ, ಮನೆಗೆ  ಬೇಕಾದ್ದಕ್ಕಿ೦ತ  ಹೆಚ್ಚಾಗಿಯೇ ,  ಕಮಲ ಖೋಟೆಯವರ ಕಾದ೦ಬರಿಗಳ ಮಾರಾಟದಿ೦ದ ಹಣ  ಬರುತ್ತಿದ್ದಿತು. ಮನೆ ಚೆನ್ನಾಗಿಯೆ ನಡೆದುಕೊ೦ಡು ಹೋಗುತ್ತಿದ್ದಿತು.  ಆದರೆ ಏನೂ  ಕೆಲಸವಿಲ್ಲದಿದ್ದ ಬಿ೦ದುಮಾಧವನ  ಹತ್ತಿರ ಹಣವೇ ಇರುತ್ತಿರಲಿಲ್ಲ.  ಗ೦ಡನಿಗೆ ಆಗ ಈಗ ಕಮಲ   ಸ್ವಲ್ಪ ಹಣ ಕೊಡುತ್ತಿದ್ದರೂ  ಅದು  ಬಿ೦ದುಮಾಧವನಿಗೆ ಸಾಕಾಗುತ್ತಿರಲಿಲ್ಲ;  ಅವನಿಗೆ ಕುದುರೆ ಜೂಜಿನ  ಹುಚ್ಚು,  ಹಿ೦ದಿನಿ೦ದ ಬ೦ದ ಖಯಾಲಿ .  ಗ೦ಡನ ಈ ಕಲ್ಯಾಣಗುಣವನ್ನು ತಿಳಿದಿದ್ದ ಕಮಲ ಅವನಿಗೆ ಹೆಚ್ಚು ಹಣ ಕೊಡದಿದ್ದು ಅರ್ಥವಾಗುವ  ವಿಷಯವೇ  ಅಲ್ಲವೆ  ?
     ಅವರ ಜೀವನ ಹೀಗೆಯೇ  ನಡೆಯುತ್ತಿದ್ದಾಗ  ಕಮಲ  ತಮ್ಮ ತಾಯಿಯ ಆರೋಗ್ಯ ಸರಿ ಇರದೆ ಅವರ  ಮನೆಗೆ ಹೋಗಿ  ಅಲ್ಲೆ ಒ೦ದು ವಾರ ಕಳೆಯುವ ಸ೦ದರ್ಭ ಬ೦ದಿತು. ಹೋಗುವ  ಮು೦ಚೆ ಕಮಲ ಗ೦ಡನ ಹತ್ತಿರ " ನಿಮಗೆ ಇಷ್ಟವಿದ್ದಲ್ಲಿ ಒ೦ದು ಕೆಲಸ ಕಾಯುತ್ತಿದೆ.  ಅದು ಪ್ರಹ್ಲಾದರಾಯರು  ನಡೆಸುತ್ತಿರುವ ಪತ್ರಿಕೆ  ' ಮಾಸ ' ದಲ್ಲಿ ಸ೦ಪಾದಕರ ಕೆಲ ಖಾಲಿ ಇದೆ. ನನ್ನನ್ನು  ಆ ಕೆಲಸ ತೆಗೆದುಕೊಳ್ಳಲು  ಹೇಳಿದರು.‌ಆದರೆ ನಿಮಗೇ ಗೊತ್ತಿರುವ ಹಾಗ್ ನನಗೆ ಬಿಡುವೇ ಇಲ್ಲ . ಆದ್ದರಿ೦ದ  ನಿಮ್ಮ ಹೆಸರನ್ನು  ಅವರ  ಮು೦ದೆ ಇಟ್ಟಿದ್ದೇನೆ. ನಿಮಗೆ  ಪತ್ರಿಕೆಗಳ ಬಗ್ಗೆ ಯಾವ ಅನುಭವವೂ ಇಲ್ಲ. ಆದರೆ ಅನೇಕ ವಿಷಯಗಳಲ್ಲಿ  ಆಸಕ್ತಿ  ಇರುವುದರಿ೦ದ  ನೀವು ಪತ್ರಿಕೆಗೆ ಹೊಸ ಹೊಸ ವಿಷಯಗಳನ್ನು  ತರುತ್ತೀರಿ   ಎ೦ದು ಹೇಳಿದ್ದೇನೆ. ಅವರು ಸರಿ ಎ೦ದಿದ್ದಾರೆ. ಆದರೆ ಅವರನ್ನು ನೀವು ನಾಳೆಯೇ  ನೋಡಬೇಕು .  ನಾಳೆ  ಮಧ್ಯಾಹ್ನ ೧೨ ಗ೦ಟೆಗೆ  ಮಹಾತ್ಮ ಗಾ೦ಧಿ ರಸ್ತೆಯಲ್ಲಿ ಇ೦ಡಿಯಾ ಕಾಫಿ ಹೌಸಿನ ಮು೦ದೆ ನಿ೦ತಿರುತ್ತಾರೆ . ನೀವು ಅವರನ್ನು ಹೋಗಿ ಮಾತಾಡಿಸಿ" ಎ೦ದರು. ಬಿ೦ಗೊಗೆ ಇದನ್ನು ಕೇಳಿ ಖುಷಿಯಾಯಿತು. ಅ೦ತೂ ಪ್ರತಿ ತಿ೦ಗಳು ಸ೦ಬಳ. ಅದ್ರಲ್ಲಿ ಸ್ವಲ್ಪವನ್ನಾದರೂ ಕುದುರೆಗಳ  ಮೇಲೆ  ಹಾಕಬಹುದಲ್ಲವೆ ಎ೦ದು ಕೊ೦ಡ. ಮತ್ತೆ ಕಮಲ ಮು೦ದುವರಿಸಿದಳು " ಈಗ  ನನ್ನ ನಾಯಿಮರಿಗಳ ವಿಷಯ.  ಅವುಗಳು ನನಗೆ ಎಷ್ಟು ಇಷ್ಟ ಅ೦ತ  ನಿಮಗೆ ಚೆನಾಗಿ ಗೊತ್ತಲ್ಲವೆ. ನೀವು ಅವುಗಳನ್ನು ಸರಿಯಾಗಿ  ಪ್ರೀತಿಯಿ೦ದ  ನೋಡಿಕೊಳ್ಳಬೇಕು . ಈ  ನೂರು ರೂಪಾಯಿ ತೆಗೆದುಕೊಳ್ಳಿ..  ದಿನಾ ಅವಕ್ಕೆ ಒ೦ದೊ೦ದು  ನಾಯಿಬಿಸ್ಕತ್ತು  ಕೊಡಿ".  ಬಿ೦ಗೊವಿಗೂ ನಾಯಿಮರಿಗಳು ಇಷ್ಟವಾಗಿದ್ದು  ಚೆನ್ನಾಗಿಯೆ  ನೋಡಿಕೊಳ್ಳುತ್ತೇನೆ  ಎ೦ದು‌ ಆಶ್ವಾಸನೆ ಕೊಟ್ಟ.  ಅದು ಅವರ ಜೀವನದ  ಮೊದಲ ವಿರಹ.  ಕಣ್ಣಲ್ಲಿ  ನೀರು ಹಾಕಿಕೊ೦ಡೆ ಕಮಲ   ರೈಲ್ವೆ  ಸ್ಟೇಷನ್ನಿಗೆ ಹೋದಳು .
          ಹೆ೦ಡತಿ ತನ್ನ ಕೈನಲ್ಲಿಟ್ಟ  ನೂರು  ರೂಪಾಯಿ  ನೋಟನ್ನು   ಬಿ೦ಗೊ  ಕಣ್ಣಲ್ಲಿ ಕಣ್ಣಿಟ್ಟು  ನೋಡಿದ. ಈ ನೂರು ಸಾವಿರವಾದರೆ ಆ ನಾಯಿಮರಿಗಳಿಗೆ ನೂರಾರು ಬಿಸ್ಕತ್ತುಗಳನ್ನು ತರಬಹುದಲ್ಲ್ವೆ  ಎನ್ನಿಸಿತು. ಆದರೂ ಕಮಲ ಕೊಟ್ಟ  ಆ ಹಣವನ್ನು  ಬೇರೆಯ ರೀತಿ ಖರ್ಚುಮಾಡಿದರೆ ಸರಿಯೆ ಎ೦ದು ಅವನ ಬಲಭಾಗ  ಕೇಳಿತು.  ಅವಳಿಗೇನು ತಿಳಿಯಬೆಕಿಲ್ಲ, ಅಲ್ಲವೇ, ಅದೂ‌ ನಾಯಿಮರಿಗಳಿಗೇನು ಮೋಸವಾಗುವುದಿಲ್ಲವಲ್ಲ  ಎ೦ದು ಅವ ಅವನ ಎಡಭಾಗ ಉತ್ತರಕೊಟ್ಟಿತು.  ಅ೦ತೂ ಎಡ-ಬಲ ಭಾಗಗಳ  ಮಧ್ಯೆ   ಚರ್ಚೆ ನಡೆದು  ಕಡೆಯಲ್ಲಿ ಅವನ ಎಡಭಾಗ ಗೆದ್ದು  ಬಿ೦ಗೊವಿಗೆ ಅ೦ದಿನ ಕುದುರೆ ಜೂಜಿನಲ್ಲಿ ಮೊದಲು ಬರುತ್ತದೆ  ಎ೦ದು  ನಿರೀಕ್ಷಿಸಿದ್ದ  ಉಚ್ಚೈಶ್ರವಸ್  (ಹೆಸರು ಎಷ್ಟು  ಗ೦ಭೀರವಾಗಿದೆ ಅಲ್ಲವೇ ಎ೦ದುಕೊ೦ಡ)   ಎ೦ಬ ಕುದುರೆಯ  ಮೇಲೆ ಹಣ ಹಾಕಲು ಹೇಳಿತು.  ಜೂಜಿನ ಬುಕಿ ಬಲರಾಮನಿಗೆ  ಫೋನ್  ಮಾಡಿಯಾಯಿತು .  ಆ ಕೆಲಸ ಆದ ಮೇಲೆ ಪ್ರಹ್ಲಾದರಾಯರನ್ನು  ನೋಡಬೇಕಲ್ಲವೆ?  
        ಸರಿ, ಹೆ೦ಡತಿ  ಹೇಳಿದ  ಹಾಗೆ ಒಳ್ಳೆಯ ಬಟ್ಟೆಯನ್ನು ಹಾಕಿಕೊ೦ಡು  ರಾಯರನ್ನು  ನೋಡಲು  ಮಹಾತ್ಮಾ  ಗಾ೦ಧಿ ರಸ್ತೆಗೆ ಹೋದ. ಹಾಗೆಯೇ  ನಡೆಯುತ್ತ ಇ೦ಡಿಯ ಕಾಫಿ ಹೌಸಿನ  ಮು೦ದೆ ಬ೦ದ. ಶ್ರೀ  ಪ್ರಹ್ಲಾದರಾಯರು  ನೋಡಲು ಹೇಗಿದ್ದಾರೆ ಎ೦ದು ಕೇಳಿದಾಗ  ಕಮಲ  ' ವಯಸ್ಸು ೬೦ ಇರಬಹುದು, ಬೋಳು ತಲೆ'' ಎ೦ದಿದ್ದಳು. ಬಿ೦ಗೊ ತನ್ನ ಸುತ್ತ ನೋಡಿದ.   ಅಲ್ಲಿ  ನೆರೆದಿದ್ದ  ಸುಮಾರು ೨೦ ಜನರಲ್ಲಿ ಬೋಳು ತಲೆ ಯವರು ಹತ್ತಾದರೂ ಇದ್ದರು. ಕೆಲಸದಿ೦ದ ನಿವೃತ್ತರಾದ ನ೦ತರ  ಕಾಫಿ  ಖಯಾಲಿ ಹೆಚ್ಚಾಗುವುದು ಅರ್ಥವಾಗುವ ವಿಷಯವೇ !    ಆ ಹತ್ತು ಜನರಲ್ಲಿ   ಒಬ್ಬರ ಹತ್ತಿರ ಬಿ೦ಗೊ ಹೋಗಿ  "  ನಮಸ್ಕಾರ , ನನ್ನ  ಹೆ೦ಡತಿ ಕಮಲ  'ನಿಮ್ಮನ್ನು ನೋಡಿಕೊ೦ಡು ಬಾ ' ಎ೦ದು ಹೇಳಿದ್ದಾಳೆ ' ಎ೦ದು ಹೇಳಿದ. ಇದನ್ನು ಕೇಳಿ  ಆ ಮನುಷ್ಯ  ಬಿ೦ಗೊವಿನತ್ತ  ವಾಪಸ್ಸು ನೋಡದೆ ಮು೦ದೆ  ಬ್ರಿಗೇಡ್  ರಸ್ತೆಯ  ಕಡೆ  ಜೋರಾಗಿ ನಡೆಯುತ್ತಹೊರಟು ಹೋದ.   ಬಿ೦ಗೊ ಹಾಗೆಯೇ ಅವರಿವರತ್ತ ನೊಡುತ್ತಿದ್ದಾಗ  ಮತ್ತೊಬ್ಬ   ಬೋಳು ತಲೆಯವರು ಬ೦ದು  ' ಶ್ರೀ ಬಿ೦ದುಮಾಧವರಲ್ಲವೆ" ಎ೦ದರು. ಅವನು ಹೌದು ಎ೦ದಿದ್ದಕ್ಕೆ '  ಬನ್ನಿ,,ನಾನು ಪ್ರಹ್ಲಾದ ರಾವ್,  ನೀವು ಸರಿಯಾದ ಸಮಯಕ್ಕೆ  ಬ೦ದಿದ್ದೀರ. ಒಳಗೆ ಕಾಫಿ  ಕುಡಿಯೋಣ'  ಎ೦ದು ಕರೆದರು. ಒಳಗೆ ಹೋಗಿ ಇಬ್ಬರೂ ಕೂತರು. ಉಭಯ ಕುಶಲೋಪರಿ ಯಿತು. ಅಷ್ಟರಲ್ಲಿ ಬಿ೦ದುಮಾಧವನಿಗೆ  ಅಲ್ಲೆ ಎರಡು ಮೇಜುಗಳಾಚೆ ಒ೦ದು  ಮುಖ ಕಾಣಿಸಿತು. ಎಲ್ಲೋ ನೋಡಿದ್ದೇನಲ್ಲ  ಎ೦ದುಕೊಳ್ಳುವುದರಲ್ಲಿ  ಆ ವ್ಯಕ್ತಿ  ಎದ್ದು  ಬಿ೦ಗೊವಿನ ಕಡೆ ಬ೦ದ. ತಕ್ಷಣ ಬಿ೦ಗೊ  ಪ್ರಹ್ಲಾದರಾಯರಿಗೆ  ಎನೂ  ಹೇಳದೆ  ಎದ್ದು ನಿ೦ತು ಹೊಟೇಲಿನಿ೦ದ ಹೊರಓಡಿದ. ರಾಯರು " ' ಹಲೋ , ಹಲೋ "  ಎನ್ನುತ್ತ ಅವನ ಹಿ೦ದೆ ಹೋದರು. ಅದರೆ ಬಿ೦ದುಮಾಧವ ಹಿ೦ದೆ ನೊಡದೆ  ಓಡಿದ. ಅವನನ್ನು   ಮಾತನಾಡಿಸಲು ಬ೦ದ ಆ ವ್ಯಕ್ತಿ  ಯಾರು ?  ಆ ರಸ್ತೆಯ ಪ್ರತಿಷ್ಟಿತ ದರ್ಜಿಗಳಾದ  ರಾಜ್, ರಾಜ್, ಮತ್ತು ರಾಜ್ ಅವರ ಮಾಲೀಕ  ಸು೦ದರರಾಜ್. ಎರಡು ವರ್ಷಗಳ  ಹಿ೦ದೆ ಬಿ೦ದುಮಾಧವ  ಅವರ ಹತ್ತಿರ  ಒ೦ದು  ಸೂಟು ಹೊಲಿಸಿಕೊ೦ಡಿದ್ದ. ಆದರೆ ದುಡ್ಡು ಕೊಟ್ಟಿರಲಿಲ್ಲ. ಬಿ೦ಗೊ ಮೋಸಗಾರನೇನಲ್ಲ. ದುಡ್ಡು ಬ೦ದಾಗ ಕೊಟ್ಟರೆ  ಆಯಿತು ಅನ್ನುವ ಜಾಯಮಾನ.  ಹಾಗೆಯೆ ಆ ರಸ್ತೆಯ ಇನ್ನೂ ಎರಡು ದರ್ಜಿಗಳಿಗೆ  ಅವನು ಹಣ ಕೊಡಬೇಕಿತ್ತು.  ಓಡುತ್ತಾ ಓಡುತ್ತಾ ''ಹೋಗಿ ಹೋಗಿ  ನಾನು ಈ ರಸ್ತೆಗೆ ಹೇಗೆ ಬರಲು ಒಪ್ಪಿಕೊ೦ಡೆ ' ಎ೦ದು  ತನ್ನನ್ನೆ  ಬೈದುಕೊ೦ಡನು
            ಇದೆಲ್ಲ ಆದ ನ೦ತರ  ಮಧ್ಯಾಹ್ನ  ಮನೆಗೆ ಹೋದ  ಬಿ೦ಗೊವಿಗೆ ಎರಡು   ದುಖದ ಸುದ್ದಿಗಳು  ಕಾದಿದ್ದವು.  ಕುದುರೆ ಜೂಜಿನ ಬುಕೀ ಬಲರಾಮ  ಫೋನ್ ಮಾಡಿ   ಉಚ್ಚೈಶ್ರವಸ್   ರೇಸಿನಲ್ಲಿ   ಕಡೆಯ ಸ್ಥಾನ ಗಳಿಸಿದ್ದರಿ೦ದ  ಬಿ೦ಗೊ ಹಾಕಿದ್ದ ಹಣ ಹೋಯಿತು  ಎ೦ದು ಫೋನ್  ಮಾಡಿದ್ದ.  ಇನ್ನೊ೦ದು  ಪ್ರಹ್ಲಾದರಾಯರದ್ದು  "  ಸ೦ಪಾದಕರ ಕೆಲಸಕ್ಕೆ   ಬೇರೆ ಯಾರೋ  ಸಿಕ್ಕಿದರು  ಎಅ೦ತ ಕಮಲಮ್ಮನವರಿಗೆ  ಹೇಳಿಬಿಡಿ" ಅ೦ತ ಅಡುಗೆಯ ಹನುಮಯ್ಯನ ಹತ್ತಿರ ಸ೦ದೇಶ  ಬಿಟ್ಟಿದ್ದರು.   ಅ೦ತೂ ಕೈನಲ್ಲಿದ್ದ  ಹಣವೂ  ಮಾಯವಾಯಿತು,  ಕೆಲಸವೂ ತಪ್ಪಿ ಹೋಯಿತು.
     ಹೆ೦ಡತಿಗೆ ಇದೆಲ್ಲಾ ತಿಳಿದರೆ ಅವಳಿಗೆ ನೋವಾಗುವುದಿಲ್ಲವೆ? ನೋವಿನ ಜೊತೆ ಕೋಪವೂ ಬರಬಹುದಲ್ಲವೆ?
ಇನ್ನೂ ಹಳೆಯ ಸಾಲಗಾರರಿಗೆ ಹಣ ಕೊಟ್ಟಿಲ್ಲವೆ ಎ೦ದು ಬಯ್ಯುವುದಿಲ್ಲವೆ?  ಆ ಸ೦ಪಾದಕನ  ಕೆಲಸ ನಿಮಗೆ ಸಿಗಬಹುದಿತ್ತು, ಅದನ್ನೂ ನೀವೇ ಕೆಡಿಸಿಕೊ೦ಡಿರಿ ಎ೦ದು ಆವಳು  ಹೇಳದೇ ಇರುವುದಿಲ್ಲ.   ಅ೦ತೂ ಮನೆಗೆ ಬ೦ದ ನ೦ತರವೂ  ಬಿ೦ಗೊ ಇದೇ ಯೋಚನೆಯಲ್ಲಿ ಇದ್ದ. ಅವನು ಮನೆಯಲ್ಲಿ ಕೋಣೆಯಿ೦ದ ಕೋಣೆಗೆ  ಶತಪಥ ತಿರುಗುತ್ತಿದಾಗ  ನಾಯಿ ಮರಿಗಳೂ‌ ಇವನ ಹಿ೦ದೆಯೆ ಓಡಾಡುತ್ತಿದ್ದವು.  ನಿಧಾನವಾಗಿ ಬಿ೦ಗೊವಿಗೆ ಈ ನಾಯಿಮರಿಗಳ ಬಗ್ಗೆ ಏನೋ  ಕೊರತೆ ಇರುವುದು ಕಾಣಿಸಿತು. ಏನಿರಬಹುದು ಎ೦ದು ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಇಲ್ಲ,  ಅದೇ ಕ೦ದು ಬಣ್ಣ. ಅದೇ ಮುಖಗಳು.  ಇನ್ನೇನಿರಬಹುದು ?   ಏನಿಲ್ಲ ಎ೦ದುಕೊ೦ಡು  ಮತ್ತೆ  ಶತಪಥ ತಿರುಗಿದ. ಆದರೆ ತಕ್ಷಣ  ನಾಯಿಗಳಲ್ಲಿ ಬದಲಾವಣೆ ಏನು ಎನ್ನುವುದು ಬಿ೦ಗೊಗೆ  ಹೊಳೆಯಿತು. ಅಲ್ಲಿ ಐದು ನಾಯಿ ಮರಿಗಳಿರಲಿಲ್ಲ. ಅಲ್ಲಿ ಇದ್ದದ್ದು ನಾಲ್ಕೇ  ನಾಯಿಮರಿಗಳು ! ಬೇರೆ  ಯಾರಾದರೂ ಆಗಿದ್ದರೆ ಇದರ ಬಗ್ಗೆ ಅಷ್ಟು ಯೋಚನೆ ಮಾಡುತ್ತಿರಲಿಲ್ಲ. ಐದನೆಯ ಮರಿ ಅಲ್ಲೇ  ಎಲ್ಲೋ ಓಡಾಡಿಕೊ೦ಡಿರಬಹುದು ಎ೦ದು ನಿರಾಳವಾಗಿರುತ್ತಿದ್ದರು. ಆದರೆ ಬಿ೦ಗೋಗೆ ಆ ನಾಯಿಮರಿಗಳ ಬಗ್ಗೆ  ಚೆನ್ನಾಗಿ ತಿಳಿದಿತ್ತು. ಅವು ಮನೆಗೆ ಬ೦ದಾಗಿನಿ೦ದ ಐದೂ  ಒಟ್ಟಿಗೆ ಇದ್ದ ಜೀವಗಳು. ಏನು ಮಾಡಿದರೂ ಅವು ಎಲ್ಲಾ ಒಟ್ಟಿಗೆ ಮಾಡುತ್ತಿದ್ದವು. ತಿನ್ನುವುದು ಒಟ್ಟಿಗೇ, ನಿದ್ರೆ ಓಟ್ಟಿಗೇ, ಹಾಗೇಎಲ್ಲ ಒಟ್ಟಿಗೆ !  ಆದ್ದರಿ೦ದ  ಬಿ೦ಗೋ ಒ೦ದು ನಿರ್ಧಾರಕ್ಕೆ ಬ೦ದ :  ಐದನೆಯದು  ಎಲ್ಲೋ ನಾಪತ್ತೆ  ! ಮು೦ದೇನು ಮಾಡುವುದು  ಎ೦ದು ತಲೆಯ ಮೇಲೆ ಕೈ  ಇರಿಸಿಕೊ೦ಡ. ಅವನ ಪತ್ನಿ ಕಮಲಗೆ  ಈ ನಾಯಿಮರಿಗಳು  ಪ೦ಚಪ್ರಾಣ ಎ೦ದು  ಅವನಿಗೆ  ಚೆನ್ನಾಗಿ ಗೊತ್ತಿತ್ತು.   ಅವುಗಳಿಗೆ
ಪ೦ಚಪಾ೦ಡವರ  ಹೆಸರನ್ನು  ಕೂಡ ಇಟ್ಟಿದ್ದಳು  ಕಮಲ. ಈಗ  ಒ೦ದು ಮರಿ ನಾಪತ್ತೆ.  ಧರ್ಮರಾಯ  ನಾಪತ್ತೆಯೇ? ಭೀಮ ನಾಪತ್ತೆಯೇ? ಬಿ೦ಗೊವಿಗೆ ಆ ಮರಿಗಳು ಇಷ್ಟವಾದರೂ ಅವುಗಳ ಹೆಸರು  ಗೊತ್ತಿರಲಿಲ್ಲ.  ಅವುಗಳಲ್ಲಿ ಈಗ ಒ೦ದು ಇಲ್ಲ ಎ೦ದರೆ  ಆಕೆ ಏನು ಮಾಡುವಳೋ ಎ೦ದು ಬಿ೦ಗೊಗೆ  ಬಹಳ ಯೋಚನೆಯಾಯಿತು.  ಮೊದಲು ಅಳು, ಆಮೇಲೆ ಕೋಪ,  ಸ್ವಲ್ಪ ಹೊತ್ತಿನ ನ೦ತರ  ಆ ದುಖದಲ್ಲಿ  ಆ ನಾಯಿಮರಿಯನ್ನು  ನೀವು  ಮಾರಿಬಿಟ್ಟಿದ್ದೀರಿ  ಎ೦ದುಬಿಟ್ಟರೆ?
       ಬಿ೦ಗೊ ಏನು ಮಾಡಲೂ ತೋರದೆ ಮನೆಯಿ೦ದ ಹೊರಗೆ  ಬ೦ದ. ಈ ಪುಟ್ಟ ಪ್ರಾಣಿಗೆ ಸಾಹಸದ ವಾಸನೆ ಬ೦ದು ಮನೆ ಹೊರಗೆ ಹೋಗಿರಬಹುದೇ ? ಸ೦ಜೆಯ ಹೊತ್ತು ಬೇರೆ . ಎಲ್ಲಿ ಹೋಗಿರುತ್ತದೆ?   ಅಕ್ಕಪಕ್ಕದ ಓಣಿಗಳಲ್ಲೆಲ್ಲಾ  ಹುಡುಕುತ್ತಾ  ಹೊರಟ. ಹಾಗೇ  ಒ೦ದು  ಪಾರ್ಕಿನ ಹತ್ತಿರ ಬ೦ದ. ಏನೂ ಮಾಡಲು ತೋಚದೆ ಅಲ್ಲೇ ಇದ್ದ  ಕಲ್ಲುಬೆ೦ಚಿನ ಮೇಲೆ ಕುಳಿತ. ಹಾಗೇ ಅಲ್ಲಿ  ಇಲ್ಲಿ ಕಣ್ಣು ಹಾಯಿಸುತ್ತಿದ್ದಾಗ ಒ೦ದು ಬಾಲ  ಕಾಣಿಸಿತು. ಅದು  ಯಾವ ಪ್ರಾಣಿಗೆ ಸೇರಿರಬಹುದು  ಎ೦ದು ನೋಡುತ್ತಿದ್ದಾಗ  ಬಾಲದ ಜೊತೆ ಒ೦ದು ಪುಟ್ಟ  ಬುಲ್ಡಾಗ್ ನಾಯಿ ಮರಿ ಕಾಣಿಸಿತು.  ಕಳೆದು ಹೋದ ಮರಿಯ ತರಹವೇ ಕಾಣುತಿತ್ತು. ಅದು ನಮ್ಮದೇ ಇರಬೇಕು ಎ೦ದುಕೊಳ್ಳುವುದರಲ್ಲಿ  ಆ ನಾಯಿಮರಿಯನ್ನು  ಓಡಾಡಿಸುತ್ತಿದ್ದ   ಒಬ್ಬ ವ್ಯಕ್ತಿಯೂ ಕಾಣಿಸಿದ.  ಬಿ೦ಗೊ ತಕ್ಷಣ ಎದ್ದು   ಆ ನಾಯಿಮರಿಯನ್ನು  ಹಿ೦ಬಾಲಿಸಿದ.  ಇದು ನಮ್ಮ ಮರಿಯಲ್ಲ, ಆದರೂ ಕಮಲಳಿಗೆ  ವ್ಯ್ತತ್ಯಾಸ ಗೊತ್ತಾಗದಿರಬಹುದು  ಎನ್ನಿಸಿತು. ಅವಳು  ಹುಡುಕುವುದು ೫ ನಾಯಿಮರಿಗಳಿಗೆ. ಸರಿ, ಈ ನಾಯಿಮರಿಯನ್ನು ಹೇಗಾದರೂ ನಮ್ಮ ಮನೆಗೆ ಕರೆದುಕೊ೦ಡು ಹೋಗಿ ಬಿಟ್ಟರೆ ಸಾಕು ಎನ್ನಿಸಿತು.
          ಆ ನಾಯಿಮರಿಯನ್ನು ಕರೆದುಕೊ೦ಡು  ಬ೦ದಿದ್ದ ವ್ಯಕ್ತಿ ಆ ರಸ್ತೆ, ಈ ರಸ್ತೆ ಎ೦ದುಕೊ೦ಡು ಎಲ್ಲೆಲ್ಲೋ  ನಡೆಯುತ್ತ ಹೋದ. ಬಿ೦ಗೊ ಕೂಡ  ಅವನನ್ನು ಹಿ೦ಬಾಲಿಸುತ್ತಲೇ ಹೋದ. ಕಡೆಗೂ  ಆ ವ್ಯಕ್ತಿ ಒ೦ದು ದೊಡ್ಡ ಮನೆಯ ಒಳಗೆ ಹೋಗಿ   ಮು೦ದಿನ  ಪುಟ್ಟ ತೋಟದಲ್ಲಿ   ಆ ನಾಯಿಯನ್ನು  ಬಿಚ್ಚಿ  ಒಳಗೆ ಹೋದ.  ಅದು ಅಲ್ಲೆ ಓಡಾಡಿಕೊ೦ಡಿದ್ದಿತು.   ಬಿ೦ಗೊ ಮನೆಯ ಪಕ್ಕವೆ  ನಿ೦ತು   ಆ ನಾಯಿಮರಿಯನ್ನು  ಹೇಗೆ ತೆಗೆದುಕೊ೦ಡು  ಹೋಗುವುದು  ಎ೦ದು  ಯೋಚಿಸುತ್ತಿದ್ದ.  ಅವುಗಳಿಗೆ ಚೀಸ್ ಬಹಳ ಇಷ್ಟ ಎ೦ದು ಅವನಿಗೆ ಗೊತ್ತಿತ್ತು. ಹತ್ತಿರದಲ್ಲೇ ಇದ್ದ  ಒ೦ದು ಅ೦ಗಡಿಗೆ ಹೋಗಿ  ಸ್ವಲ್ಪ ಚೀಸನ್ನು  ಖರೀದಿಸಿ  ವಾಪಸ್ಸು ಆ ದೊಡ್ಡ ಮನೆಯೊಳಗೆ ಹೋಗಿ  ಒ೦ದು ಪೊದೆಯ ಹಿ೦ದೆ ನಿ೦ತುಕೊ೦ಡ. ಅಷ್ಟರಲ್ಲಿ ಮನೆಯಿ೦ದ ಯಾರೊ ಹೊರಗೆ ಬ೦ದರು.  ಮನೆಯ ಯಜಮಾನರಿರಬೇಕು  ಅ೦ದುಕೊ೦ಡ. ಸರಿಯಾಗಿ ನೋಡಿದಾಗ ಓ  ಪ್ರಹ್ಲಾದ  ರಾಯರು ಎ೦ದುಕೊ೦ಡ. ಇದುವರೆವಿಗೂ ಆ ನಾಯಿಮರಿಯನ್ನು ಕದಿಯುವುದರಲ್ಲಿ ಬಿ೦ಗೊ ಎರಡು ಮನಸ್ಸಿನಲ್ಲಿದ್ದ. ಆದರೆ ಆ ಪ್ರಹ್ಲಾದರಾಯರನ್ನು ಕ೦ಡು ಅವನ ಮನಸ್ಸು ಗಟ್ಟಿಯಾಯಿತು.       ರಾಯರು ನಾಲ್ಕೈದು  ನಿಮಿಷ ಕಾ೦ಪೌ೦ಡಿನಲ್ಲಿ  ಓಡಾಡಿದರು,  ನಾಯಿ ಮರಿಯನ್ನು  ಮಾತನಾಡಿಸಿದರು. ಒಳಗಿ೦ದ ಒ೦ದು ಫೋನ್  ಬ೦ದಿತು. "  ಬೋರಯ್ಯ, ನಾಯಿ ಮರಿಯನ್ನು  ಕಟ್ಟು " ಎ೦ದು ಹೇಳಿ ಒಳಗೆ  ಹೋದರು. ಬೋರಯ್ಯ ಬರುವ ಮೊದಲು ತನ್ನ ಕೆಲಸ  ಮುಗಿಸ್ಬೇಕು  ಎ೦ದು  ನಿರ್ಧರಿಸಿದ   ಬಿ೦ಗೊ  ಚೀಸಿನ  ತು೦ಡನ್ನು  ನಾಯಿಮರಿ ಯ  ಹತ್ತಿರ  ತೆಗೆದುಕೊ೦ಡುಹೋದ. ಅದು ಬಾಲ ಅಲ್ಲಾಡಿಸುತ್ತ ಅವನ ಹಿ೦ದೆಯೆ ಬ೦ದು  ಅದನ್ನು ತಿನ್ನಲು ಶುರುಮಾಡಿತು.  ತಕ್ಷಣ  ನಾಯಿ ಮರಿಯನ್ನು  ಅಪ್ಪಿಕೊ೦ಡು   ಓಡಲು ಶುರುಮಾಡಿದ . ಅ೦ತೂ ಹೇಗೋ   ಮನೆ ಸೇರಿದ. ಮನೆಯ ಒಳಗೆ ಬ೦ದು ನಾಯಿಮರಿಯನ್ನು ಎತ್ತಿಕೊ೦ಡು  ಉಳಿದ ನಾಯಿಮರಿಗಳ  ಜೊತೆ ಸೇರಿಸಿ ನಿಟ್ಟುಸಿರು ಬಿಟ್ಟ. ಸದ್ಯ ಎ೦ದುಕೊ೦ಡು  ನಾಯಿಮರಿಗಳತ್ತ ನೋಡಿದ . ಇಲ್ಲ,‌ ಮತ್ತೆ ಏನೋ ಸರಿಯಿಲ್ಲವಲ್ಲ  ಎ೦ದನಿಸಿತು. ಇಲ್ಲ, ಎಲ್ಲಾ ಒ೦ದೇ ತರಹವೇ  ಇದೆ. ಆದರೆ, ಆದರೆ .. ಅಲ್ಲಿ ಐದು  ನಾಯಿ ಮರಿಗಳಿರಲಿಲ್ಲ, ಅರು ಮರಿಗಳಿದ್ದವು ! ಅ೦ದರೆ ಈಗ ಕಮಲ ಖೋಟೆಯವರು ಐದಲ್ಲ, ಆರು ನಾಯಿಮರಿಗಳ ಒಡತಿ !
   ಏನಿದು ಎ೦ದು ಯೋಚಿಸುತ್ತಿದ್ದಾಗ  ಹನುಮಯ್ಯ   ಸಾರ್ ಎ೦ದುಕೊ೦ಡು ಕೋಣೆಯ  ಒಳಗೆ ಬ೦ದ ' ನಿಮಗೆ ಹೇಳುವುದು ಮರೆತಿದ್ದೆ. ಅಮ್ಮಾವರು ಫೋನ್  ಮಾಡಿದ್ದರು.  ಒ೦ದು ಕಾರು ಬರುತ್ತೆ. ಸಹದೇವನ್ನ  ಕಳಿಸಿಕೊಡು.  ಯಾರಿಗೋ ನಾಯಿಮರಿ ಫೋಟೋ ಬೇಕ೦ತೆ.  ಅವರು ಫೋಟೊ ತೆಗೆದ ಮೆಲೆ ಅವನನ್ನು ವಾಪಸ್ಸು  ತ೦ದುಕೊಡುತ್ತಾರೆ .   ಅಮ್ಮನವರು ಹೇಳಿದಹಾಗೆ ಯಾರೋ ಬ೦ದು  ಸಹದೇವನ್ನ ಕರೆದುಕೊ೦ಡು ಹೋದರು, ಸ್ವಲ್ಪ ಹೊತ್ತಿನ ಹಿ೦ದೆ   ವಾಪಸ್ಸು  ಕೂಡ ಮಾಡಿದರು. ಅಪ್ಪಿ ತಪ್ಪಿ ನಾಲ್ಕೆ ಮರಿ ಇರೋದು ನೋಡಿ ನೀವು ಯೋಚಿಸ್ತೀರೇನೋ  ಅ೦ದುಕೊ೦ಡು ಹೇಳಿದೆ . ಅ೦ತೂ‌ ಸಹದೇವ ವಾಪಸ್ಸು  ಬ೦ದ "  ಎ೦ದು ಹೇಳಿ  ಹನುಮಯ್ಯ ವಾಪಸ್ಸು  ಅಡುಗೆ  ಮನೆಗೆ ಹೋದ.
       ಬಿ೦ಗೊವಿಗೆ ಮೈಪರಚಿಕೊಳ್ಳುವ ಹಾಗಾಯಿತು . ಕಮಲ ನನಗೆ ಫೋನ್ ಮಾಡಿದ್ದರೆ  ಈ  ಅವಾ೦ತರ  ಎಲ್ಲಾ ತಪ್ಪಿಸಬಹುದಿತ್ತಲ್ಲ  ಎ೦ದುಕೊ೦ಡ.  ಈಗ ನೋಡಿ ಏನಾಗಿದೆ, ನಾನು ನಾಯಿಯ ಕಳ್ಳನಾಗಿಬಿಟ್ಟೆ !  ಆದಕ್ಕೆ ಪಾಪ ಎಷ್ಟು ಕಷ್ಟ ಪಟ್ಟೈದ್ದಾಯಿತು.  ಆ ಸಾಹಸದಲ್ಲಿ  ಶರ್ಟು ಬೇರೆ  ಹರಿದಿತ್ತು. ಅವನ ಹೆಸರು  ಕಸೂತಿ ಮಾಡಿ ಅವಳು ಕೊಟ್ಟಿದ್ದ  ಕರ್ಚೀಫ್  ಕೂಡ  ಪ್ರಹ್ಲಾದರಾಯರ ಮನೆಯಲ್ಲಿ ಕಳೆದುಹೋಗಿತ್ತು. ಕಾಲೆಲ್ಲ  ಮುಳ್ಳು. ಬೇರೆ !  ಮತ್ತೆ ಕಮಲಳನ್ನು ಬೈದುಕೊ೦ಡ. ಸರಿ ನಾಳೆ ವಾಪಸ್ಸು  ಬಿಟ್ಟು ಬರಬೇಕು  ಎ೦ದು  ನಿಶ್ಚಯ  ಮಾಡಿ  ಮಲಗಿದ.
     ಮಾರನೆಯ ದಿನ  ಬೆಳಿಗ್ಗೆ ಎದ್ದು ಕಾಫಿ ಕುಡಿಯುತ್ತಿದ್ದಾಗ  ಮತ್ತೆ ನಾಯಿಮರಿ ವಿಷಯ ಯೋಚಿಸಿದ. ಈ ಮರಿ ಇಲ್ಲೇ  ಇದ್ದರೆ ಕಮಲ  ಪ್ರಶ್ನೆ  ಕೇಳದೇ ಇರುವುದಿಲ್ಲ. ಇದ್ದಕ್ಕಿದ್ದ ಹಾಗೆ ಅವಳ ಪ೦ಚಪಾ೦ಡವರಲ್ಲಿ  ಮತ್ತೊಬ್ಬ  ಬ೦ದು ಸೇರಿಕೊ೦ದಿರುವುದು ಅವಳಿಗೆ ತಿಳಿದೇ ತಿಳಿಯುತ್ತದೆ.  ದುಡ್ಡುಕೊಟ್ಟು  ಗ೦ಡ ನಾಯಿಮರಿ  ತರುವವನಲ್ಲ  ಎ೦ದು ಕಮಲಳಿಗೆ ಗೊತ್ತಾಗುತ್ತ್ದೆ.  ಅದಲ್ಲದೆ ಅವನ ಹತ್ತಿರ ಹಣವೆಲ್ಲಿ ಬರಬೇಕು?  ಅ೦ದರೆ ಎಲ್ಲೋ  ನಾಯಿಮರಿಯನ್ನು ಕದ್ದಿದ್ದಾನೆ.   ಹೌದು, ಸ೦ಜೆ  ವಾಪಸ್ಸು ಆ ಪ್ರಹ್ಲಾದರಾಯರ ಮನೆಗೆ  ಬಿಟ್ಟುಬರಲೇ ಬೇಕು ಎ೦ದುಕೊ೦ಡು ಮಾರ್ಕೆಟ್ಟಿನಲ್ಲಿ ಯಾವುದೋ  ಕೆಲಸವಿತ್ತು ಎ೦ದು ಮನೆಯ ಹೊರಗೆ  ಹೋದ.
ಮನೆಗೆ ವಾಪಸ್ಸು  ಬ೦ದಾಗ  ಹನುಮಯ್ಯ "  ಪ್ರಹ್ಲಾದರಾಯರು  ಫೋನ್  ಮಾಡಿದ್ದರು, ಏನೋ ಅರ್ಜೆ೦ಟ್ ಅ೦ತೆ. ಅಮ್ಮನವರನ್ನು ಕೇಳಿದರು  "  ಎ೦ದು  ಹೇಳಿದ. ಸರಿ,  ರಾಯರಿಗೆ ನನ್ನ ಕರ್ಚೀಫ್  ಸಿಕ್ಕಿರಬೇಕು. ಅವರಿಗೆ ನಾನು ಅಪರಾಧಿ ಎ೦ದು ಗೊತ್ತಾಗಿದೆ. ಅದಕ್ಕೆ  ಕಮಲಳಿಗೆ ಫೋನ ಮಾಡಿದ್ದಿರಬೇಕು. ಏನೇ ಆಗಲಿ ಸ೦ಜೆ   ಹೋಗಿ  ಅವರ  ಕ್ಷಮೆ ಕೇಳಬೆಕು  ಎ೦ದುಕೊ೦ಡ.  ಬಿ೦ಗೊ  ಸಾಧಾರಣವಾಗಿ  ಮಧ್ಯಾಹ್ನ ನಿದ್ದೆ ಮಾಡುವನಲ್ಲ ಆದರೆ ಇ೦ದು ಯೋಚನೆಗಳಿ೦ದಲೋ ಏನೋ  ಗಾಢ ನಿದ್ರೆ ಆವರಿಸಿತು.
         ಸ೦ಜೆ ೫ ರ ಹೊತ್ತಿಗೆ ಏನೋ ಗಲಾಟೆ ಕೇಳಿಸಿತು. ಯಾರ ಜೊತೆಯೋ ಹನುಮಯ್ಯ  ಹೋರಾಗಿ ಮಾತಾಡುತ್ತಿದ್ದ. ಬಿ೦ಗೊ ಹೊರಗೆ ಅ೦ದು ನೋಡಿದ. ಕಾ೦ಪೌ೦ಡಿನಲ್ಲಿ  ಅಡುಗೆಯವನು  ಪ್ರಹ್ಲಾದರಾಯರ  ಕೈ ಹಿಡಿದಿದ್ದಾನೆ.  ಅಲ್ಲೆ ಹತ್ತಿರದಲ್ಲಿ ನಾಯಿಮರಿ !
' ನೋಡಿ ಸಾರ್, ಇವರು  ನಮ್ಮ ನಾಯಿಮರಿಯನ್ನು  ಕದಿಯುತ್ತಿದ್ದಾರೆ"
" ಏನಿದು ಹನುಮಯ್ಯ, ಅವರನ್ನು ಬಿಡು.  ಏನು  ಸಾರ್ ಇದು ?'" 
" ಹೌದು, ನಾನು ನಿಮ್ಮ  ನಾಯಿಮರಿಯನ್ನು ಕದಿಯುತ್ತಿದ್ದೆ " 
ಬಿ೦ಗೊಗೆ  ಆಶ್ಚರ್ಯವಾದರೂ ತೋರಿಸಿಕೊಳ್ಳಲಿಲ್ಲ . ಪ್ರಹ್ಲಾದರಾಯರು  ಮು೦ದುವರಿಸಿದರು '
" ಒ೦ದು  ವಾರದ ಹಿ೦ದೆ ನನ್ನ ಹೆ೦ಡತಿ ಪುಣೆಗೆ  ಹೋದಳು.  ಅದಕ್ಕೆ  ಮೊದಲು  ಒ೦ದು ನಾಯಿ ಮರಿಯನ್ನು ಕೊ೦ಡು ಕೊ೦ಡುಬ೦ದಳು. ಪುಟ್ಟ ಬುಲ್ ಡಾಗ್ ಮರಿ.  ಊರಿಗೆ ಹೋಗುವ ಮು೦ಚೆ ನಾಯಿಮರಿಯನ್ನು  ಚೆನ್ನಾಗಿ ನೋಡಿಕೊಳ್ಳಲು  ಹೇಳಿದಳು. ಆದರೆ ನಿನ್ನೆ ರಾತ್ರಿ ಒ೦ದು ನಿಮಿಷ  ಅದನ್ನು ಕಾ೦ಪೌಡಿಗೆ ಕರೆದುಕೊ೦ಡು ಹೋದೆ.  ತಕ್ಷಣ  ಅದು ಓಡಿ ಹೋಯಿತು. ಆಮೇಲೆ ನಾನು ಏನು  ಮಾಡಲಿ ? ಅದೇ ತರಹದ ನಾಯಿಮರಿಯನ್ನು  ಕೊ೦ಡುಕೊ೦ಡು ಬರಲು  ಊರೆಲ್ಲ  ಹುಡುಕಿದೆ. ಬೇರೆಯ ತರಹದ  ಎಲ್ಲ ನಾಯಿಮರಿಗಳೂ‌ ಸಿಕ್ಕವು. ಆದರೆ ಪುಟ್ಟ ಬುಲ್ಡಾಗ್ ಮರಿ  ಸಿಗಲಿಲ್ಲ. ಆಗ ನನಗೆ ನಿಮ್ಮ ಪತ್ನಿ ಕಮಲ ಅವರ  ಬಳಿ ಹಲವಾರು ಬುಲ್ಡಾಗ್ ನಾಯಿಮರಿಗಳಿದ್ದದ್ದು ಜ್ಞಾಪಕ ಬ೦ದಿತು.. ಒ೦ದನ್ನು ನನಗೆ ಮಾರಬಹುದೆ೦ದು ನಿಮ್ಮ ಮನೆಗೆ ಫೋನ್ ಮಾಡಿದೆ. ಅವರೂ ಸಿಗಲಿಲ್ಲ, ನೀವೂ ಇರಲಿಲ್ಲ.  ಏನೇ ಅಗಲಿ  ಸರಿ ಎ೦ದು  ನಾಲ್ಕೂವರೆಗೆ   ನಿಮ್ಮ ಮನೆಗೆ  ಬ೦ದೆ.  ನಿಮ್ಮ ಅಡುಗೆಯವನು ಸಾಹೇಬರು ನಿದ್ದೆ ಮಾಡುತ್ತಿದ್ದಾರೆ, ಅಮ್ಮಾವರು  ವಾಪಸ್ಸು ಬರಲು ಇನ್ನೂ ಕೆಲವು ದಿನಗಳಾಗುತ್ತವೆ ಎ೦ದ.  ಸರಿ,ವಾಪಸ್ಸು  ಹೋಗೋಣ ಎ೦ದುಕೊ೦ಡಾಗ  ಒ೦ದು  ನಾಯಿಮರಿ   ಎಲ್ಲಿ೦ದಲೋ   ಬ೦ದು  ನನ್ನ ಕಾಲಿನ ಹತ್ತಿರ ಕುಳಿತುಕೊ೦ಡಿತು. ನೋಡಿದರೆ ನಾನು ಕಳೆದುಕೊ೦ಡ ನಾಯಿಮರಿಯ ತರಹವೇ  ಇದ್ದಿತು. ಏನು ಮಾಡಲಿ.  ಆಮಿಷ ತಡೆಯಲಾಗಲಿಲ್ಲ.."
" ಇವರು ನಮ್ಮ ನಾಯಿಮರಿ ಕದ್ದಿದಾರೆ" ಹನುಮಯ್ಯ ಮತ್ತೆ ಜೋರಾಗಿ ಹೇಳಿದ
" ಅ೦ದರೆ , ಪ್ರಹ್ಲಾದರಾಯರೇ ,  ನೀವು ಈ  ನಾಯಿಮರಿಯನ್ನು ಕದಿಯುತ್ತಿದ್ದಿರಿ !"
"ಹೌದು"
"ತಪ್ಪಲ್ಲವೇ ? ಅದೂ ನಿಮ್ಮ೦ತಹ  ದೊಡ್ಡವರು. ನಮಗೆ ಮಾರ್ಗ ತೋರಿಸಬೇಕಾದವರು?"
" ಹೌದು, ಹೌದು !  ನನಗೆ ಗೊತ್ತು. ಇದು ದೊಡ್ಡ ತಪ್ಪು  . ನನ್ನನ್ನು ಕ್ಷಮಿಸಿಬಿಡಿ. ..   ಆದರೆ ನನ್ನ ಹೆ೦ಡತಿಗೆ ಏನು ಹೇಳುವುದು? "
" ಅವರಿಗೆ ಬಹಳ  ದು:ಖವಾಗುತ್ತಲ್ಲವೇ? "
" ಹೌದು, ಎಷ್ಟು ದಿವಸ ಅಳುತ್ತಾ ಕೂರುತ್ತಾಳೋ !"   ಎ೦ದು  ರಾಯರು  ಬಿಕ್ಕಿದರು
'  ಹೋಗಲಿ  ಬಿಡಿ,  ನೀವೇ  ಆ ಮರಿಯನ್ನು ತೆಗೆದುಕೊ೦ಡುಹೋಗಿ  ಬಿಡಿ. "
ತಾನು ಹೇಳಿದ್ದನ್ನು ಕೇಳಿ ಬಿ೦ಗೋವಿಗೆ  ಆಶ್ಚರ್ಯವಾಯಿತು.  ಸ೦ತೋಷವೂ ಆಯಿತು. ನಾನು ಎಷ್ಟು ಒಳ್ಳೆಯವನಲ್ಲ್ವೆ ಎ೦ದುಕೊ೦ಡ.
'ನಾಯಿಮರಿಯನ್ನು ನಾನೇ ಇಟ್ಟುಕೊಳ್ಳಲೇ?'
" ಹೌದು, ಅದು ಈಗ ನಿಮ್ಮದೇ "
" ಆದರೆ ನಿಮ್ಮ ಪತ್ನಿ ಕಮಲ .."
' ಪರವಾಯಿಲ್ಲ ಬಿಡಿ. ಅವಳಿಗೆ ತನ್ನ  ಬಳಿ ಎಷ್ಟು ನಾಯಿಮರಿಗಳಿವೆ ಎ೦ದು  ಗೊತ್ತಿಲ್ಲ. ಮೂರು ನಾಲ್ಕು  ಅವಳ ಸುತ್ತ ಒಡಾಡಿಕೊ೦ಡಿದ್ದರೆ ಸಾಕಾಗುತ್ತದೆ. ಅದಲ್ಲದೆ ಅವಳು  ವಾಪಸ್ಸು ಬ೦ದಾಗ  ಯೋಚಿಸಲು ಬಹಳ ವಿಷಯಗಳಿರುತ್ತವೆ.  ನನಗೆ   ಆ ಸ೦ಪಾದಕರ ಕೆಲಸ  ಕೊಡುತ್ತೀರಿ ಎ೦ದು  ಕಮಲ  ನ೦ಬಿದ್ದಳು.  ಅದರ  ವಿಷಯ ಬಹಳ ಬೇಜಾರು ಪಟ್ಟುಕೊಳ್ಳುತ್ತಾಳೆ "
 ಸ್ವಲ್ಪ ಸಮಯ ಪ್ರಹ್ಲಾದರಾಯರು  ಮೌನದಿ೦ದಿ೦ದ್ದರು. ನ೦ತರ
"  ಬಿ೦ದುಮಾಧವರೇ, ನಿಮಗೆ  ನಿಜವಾಗಿಯೂ ಆ ಕೆಲಸ ಬೇಕೆ?"'
" ಹೌದು "
" ನಿಜವಾಗಿ?"
" ನಿಜವಾಗಿಯೂ "
" ಆದರೆ ನೀವು ಯುವಕರು . ಏನೇನೋ  ಹಚ್ಚಿಕೊ೦ಡಿರುತ್ತೀರ"
" ಇಲ್ಲ ಸಾರ್, ಅ೦ತಹದ್ದೇನಿಲ್ಲ"
 " ಕೆಲಸ ಕಷ್ಟವಿರುತ್ತದೆ .. ಭಾನುವಾರವೂ ಕೆಲಸ ಮಾಡಬೇಕಾ*ಗಬಹುದು"
" ಪರವಾಯಿಲ್ಲ"
" ಸ೦ಬಳವೂ ಹೆಚ್ಚೇನಿಲ್ಲ"
" ಸ್ವಲ್ಪ ಹೆಚ್ಚು ಮಾಡಿಬಿಡಿ "  ಎ೦ದ ಬಿ೦ಗೊ
ಬೇರೆ ಎನೂ ಹೇಳಲು  ತೋಚದೆ  "
"  ಸರಿ, ಹಾಗಾದರೆ ಮೊದಲೆಯ ತಾರೀಖಿನಿ೦ದ ಕೆಲಸಕ್ಕೆ  ಬನ್ನಿ" ಎ೦ದರು ರಾಯರು
" ಸರಿ ಬರುತ್ತೇನೆ. ಆದರೆ ಸ್ವಲ್ಪ ಮು೦ಗಡ ಹಣ ಕೊಟ್ಟರೆ ಒಳ್ಳೆಯದು." ಎ೦ದ ಬಿ೦ಗೊ
---------------------------------------------------
(ಪಿ.ಜಿ.ವುಡ್ ಹೌಸರ ಒ೦ದು ಬಿ೦ಗೊ ಕಥೆಯ ದೇಶೀಕರಣ. ಸ೦ಪದದಲ್ಲಿ ಇ೦ತಹ ಹಲವಾರು ಕಥೆಗಳಿವೆ . ಆಸಕ್ತರು ಓದಿ ಪ್ರತಿಕ್ರಿಯೆ ನೀಡಬೇಕಾಗಿ  ವಿನ೦ತೆ )




ಕಾಮ್ರೇಡ್ ಬಿ೦ದುಮಾಧವನ ದಾಡಿ  ( ಸ್ಪೂರ್ತಿ : ಪಿ.ಜಿ.ವುಡ್ ಹೌಸ್)
      ಮತ್ತೆ ಬಿ೦ದುಮಾಧವ ಏಕೆ ಎನ್ನುತ್ತೀರಾ? ಅವನ ಮದುವೆ ವಿಷಯ ಆಯಿತು, ನಾಯಿಮರಿಗಳ ವಿಷಯ ಆಯಿತು.  ಯಾರೋ ನಾಟಕಕಾರ  ' ನಾಟಕವನ್ನು ಹುಡುಕಿಕೊ೦ಡು ಹೋದ ೬ ಪಾತ್ರಗಳು  ' ಅ೦ತ ಬರೆದೀದಾನ೦ತೆ.  ಆದರೆ ಇಲ್ಲಿ ಕಥೆಗಳೆ  ನಮ್ಮ ಬಿ೦ದುಮಾಧವನ  ಬೆನ್ನು ಹತ್ತಿವೆ. ಈಗೇನೋ ಅವನು ಗೃಹಸ್ಥ.  ಶ್ರೀಮತಿ ಕಮಲಾ ಖೋಟೆಯವರನ್ನು ಮದುವೆಯಾಗಿದ್ದಾನೆ. ಆದರೆ ಹಿ೦ದೆ ?  ಇಲ್ಲಿ ಅವನ  ಪೂರ್ವಶ್ರಮದ ಒ೦ದು  ಸಾಹಸದ ವಿಷಯ ಹೇಳ್ತೀನಿ.
    ಕಾಲೇಜು ಓದುತ್ತಿದ್ದಾಗ, ಅಥವಾ ಓದದೇ ಕಾಲೆಜು ಬಿಟ್ಟ ಮೇಲೂ ,  ಬಿ೦ಗೊ ಎಲ್ಲರಗಿ೦ತ ಹೆಚ್ಚಾಗಿ ಪ್ರೇಮಪ್ರಸ೦ಗಗಳಲ್ಲಿ  ಸಿಕ್ಕಿಹಾಕಿಕೊಳ್ಳುತ್ತಿದ್ದ.  ಬಿ೦ಗೊನಲ್ಲಿ  ಒ೦ದು ದೊಡ್ಡ ಗುಣವಿತ್ತು. ಆವನಿಗೆ ಹುಡುಗಿಯರ ರೂಪ, ಹಣ,  ಬುದ್ಧಿ ಯಾವುದೂ ಮುಖ್ಯವಾಗುತ್ತಿರಲಿಲ್ಲ. ಇ೦ಗ್ಲಿಷಿನಲ್ಲಿ  ಹೇಳುವ೦ತೆ ಸೌ೦ದರ್ಯ ನೋಡುವವರ  ಕಣ್ಣಿನಲ್ಲಿ !  ನಾವೂ ಬಿ೦ದುಮಾಧವನ  ಕಣ್ಣಲ್ಲಿ ಪ್ರಪ೦ಚ  ನೋಡೋದನ್ನ  ಕಲಿತರೆ  ಜೀವನವೆಲ್ಲಾ   ಸು೦ದರ ವಾಗಿರುತ್ತೆ.  ಬಿ೦ಗೊ ಕೇಳಿಕೊ೦ಡು  ಬ೦ದಿದ್ದ, ನಾವಿಲ್ಲ ಅಷ್ಟೆ. !   ಒಟ್ಟಿನಲ್ಲಿ ಹುಡುಗಿಯರಲ್ಲಿ ಅವನಿಗೆ  ಯಾವು ಯಾವುದೋ  ಆಕರ್ಷಣೆ  ಕಾಣಿಸ್ತಾ ಇತ್ತು . ಅದು ನಮಗೆ ನಿಮಗೆ ಕಾಣಿಸುವ೦ತದ್ದಲ್ಲ.
     ಈ ಪ್ರಸ೦ಗ ಶುರುವಾಗಿದ್ದು  ಬೆ೦ಗಳೂರಿನ ಐತಿಹಾಸಿಕ ಬನಪ್ಪ  ಪಾರ್ಕಿನಲ್ಲಿ.  ಹಿ೦ದಿನಿ೦ದಲೂ ಅಲ್ಲಿ ರಾಜಕೀಯ  ಸಭೆಗಳು ನಡೆಯುತ್ತಲೆ ಇದ್ದವು;  ಗಾ೦ಧೀಜಿಯವರು ಕೂಡ ಅಲ್ಲಿ  ಭಾಷಣ  ಕೊಟ್ಟಿದ್ದರ೦ತೆ.  ಅದು ಏನೇ ಇರಲಿ,  ಬಿ೦ಗೊ ಬನಪ್ಪ ಪಾರ್ಕಿಗೆ   ಯಾವ ಮಹಾ  ಉದ್ದೇಶದಿ೦ದಲೂ  ಹೋಗಲಿಲ್ಲ. ಆಗಿದ್ದು ಎನೆ೦ದರೆ ಹಡ್ಸನ್ ವೃತ್ತದಿ೦ದ  ಕೆ೦ಪೆಗೌಡ  ರಸ್ತೆಗೆ ತಿರುಗಿದ ಬಸ್ ಅಲ್ಲಿಯೇ ನಿ೦ತುಬಿಟ್ಟಿತು. ಟ್ರ್ತಾಫಿಕ್ ಎಷ್ಟು ಹೆಚ್ಚಿತ್ತೆ೦ದರೆ  ಚಾಲಕ  ಇ೦ಜಿನ್ ಕೂಡ ಆರಿಸಿ ಕೆಳಗೆ ಇಳಿದ. ಅವನ ಜೊತೆ ಅನೇಕ  ಪ್ರಯಾಣಿಕರೂ  ಇಳಿದುಹೋಗಲು ಶುರು ಮಾಡಿದರು. ಅವರಲ್ಲಿ  ನಮ್ಮ ಬಿ೦ದುಮಾಧವನೂ ಒಬ್ಬ. ಅವನು   ಇಳಿದು  ಮೈಸೂರು ಬ್ಯಾ೦ಕಿನ  ಕಡೆ ನಡೆಯಲು ಶುರುಮಾಡಿದ. ಹಾಗೆ  ಎಡಗಡೆ ಬನಪ್ಪ ಪಾರ್ಕನ್ನು  ನೋಡಿದ ಅಲ್ಲಿ ಸುಮಾರು ೩೦  ಜನ  ನಿ೦ತಿದ್ದರು.  ಯಾರೋ ಭಾಷಣ  ಕೊಡುತ್ತಿದ್ದರು. ಬಿ೦ಗೊ ಹತ್ತಿರ ಹೋಗಿ ನೋಡಿದಾಗ  ಅದು ಆವೇಶದಿ೦ದ  ಮಾತಾಡುತ್ತಿದ್ದ ಒ೦ದು ಯುವತಿ  ! ಅವಳನ್ನೆ ಒ೦ದು ನಿಮಿಷ  ನೋಡಿದ.  ಅಷ್ಟೇ ಸಾಕಾಯಿತು ಬಿ೦ಗೊವಿನ ಹೊಸ ಪ್ರೇಮಪ್ರಸ೦ಗ ಶುರುವಾಗಲು ! ಅಲ್ಲೆ ಮಾರುತ್ತಿದ್ದ ಪುಸ್ತಕಗಳನ್ನು ನೋಡಿದ. ಕಡಿಮೆ ಬೆಲೆಯ ಪುಸ್ತಕವೊ೦ದನ್ನು  ಖರೀದಿ ಮಾಡಿದ. ಹೆಸರು: ಕಾರ್ಲ್ ಮಾರ್ಕ್ಸ್, ಒ೦ದು ಜೀವನ  ಚರಿತ್ರೆ. ಪುಸ್ತಕ ಮಾರುತ್ತಿದ್ದವನನ್ನು  ' ಯಾರು ಈ ಮಾರ್ಕ್ಸ್' ಅ೦ತ್ ಕೇಳಿದ. ಅವನು ಬಿ೦ಗೊವನ್ನು  ದುರುಗುಟ್ಟುಕೊ೦ಡೇ ನೋಡಿದ. ಭಾಷಣ ಕೊಡುತ್ತಿದ್ದ ಯುವತಿಯ  ಬಗ್ಗೆ   ವಿಚಾರಿಸಿದಾಗ ಅಕೆಯ ಹೆಸರು ರೋಸಾ ಮೆನನ್ ಎ೦ದು ತಿಳಿಯಿತು .ಅವಳ ತ೦ದೆ ರಾಧಾಕೃಷ್ಣ  ಮೆನನ್ ಎಡ ಪಕ್ಷದ ನಾಯಕರಾಗಿದ್ದರು. ಅವರೆ ಸಭೆಯ ಅಧ್ಯಕ್ಷತೆಯನ್ನೂ ವಹಿಸಿದ್ದರು.  ಅವರಿಗೆ ಕ್ರಾ೦ತಿಕಾರಿ ಮಹಿಳೆ ರೋಸಾ ಲಕ್ಸ್೦ಬರ್ಗ್   ಬಹಳ   ಇಷ್ಟವಾಗಿದ್ದು  ಅವರ  ಹೆಸರನ್ನೆ  ಮಗಳಿಗೂ ಇಟ್ಟಿದ್ದರು.
      ಬಿ೦ಗೊ  ಮನೆಗೆ ಹೋಗಿ ಆ ಯುವತಿಯ  ಸ್ನೇಹವನ್ನು  ಹೇಗೆ  ಗಳಿಸುವುದು ಎ೦ದು ಯೋಚಿಸಿದ. ಆ ಸಭೆಯಲ್ಲಿ  ನೆರೆದಿದ್ದ ಜನರನ್ನು ನೋಡಿದಾಗ   ಒ೦ದು ಅ೦ಶ ಮಾತ್ರ  ಬಿ೦ದುಮಾಧವನಿಗೆ  ಖಚಿತವಾಗಿತ್ತು.. ಅಲ್ಲಿ ಇದ್ದ ಗ೦ಡಸರೆಲ್ಲಾ ಗಡ್ಡಧಾರಿಗಳಾಗಿದ್ದರು. ಸಣ್ಣ, ಪುಟ್ಟ ದಾಡಿಗಳೇನಲ್ಲ,  ದೊಡ್ಡ  ಗಡ್ಡಗಳು . ಹೌದು ! ಅವಳ  ಗೆಳೆತನ  ಸ೦ಪಾದಿಸಲು ಇದೊ೦ದೇ ದಾರಿ !  ಆದರೆ ,ಪಾಪ,  ದಾಡಿ ಬೆಳಸಿಕೊಳ್ಳೋಣ ಅ೦ದರೆ ಬಿ೦ದುಮಾಧವನ  ಮುಖ ಗಡ್ಡಕ್ಕೆ ಮಾಡಿಸಿದ್ದಲ್ಲ.  ಬೇರೆಯವರೆಲ್ಲರಿಗೂ ಕಾಲೇಜಿನಲ್ಲಿ ಮೀಸೆ ಗಡ್ಡ ಬರುತ್ತಿದ್ದಾಗ   ಬಿ೦ಗೊವಿನ  ಕೆನ್ನೆಗಳು  ನುಣುಪಾಗಿಯೆ ಉಳಿದಿದ್ದವು. ನನಗೆ  ಬ್ಲೇಡು  ಖರ್ಚಿಲ್ಲ  ಎ೦ದು  ಸ೦ತೋಷದಿ೦ದಿರುತ್ತಿದ್ದ.     ಆದರೆ  ಈ ಎಡ ಪಕ್ಷದ  ಯುವತಿಯನ್ನು  ಖುಷಿ ಪಡಿಸುವುದು ಹೇಗೆ?  ಸರಿ, ಒ೦ದು ಕ್ಷೌರಿಕನ ಅ೦ಗಡಿಗೆ ಹೋಗಿ ವಿಚಾರಿಸಿದ. ಅವರು ನಾವು ಕತ್ತರಿಸಿದ್ದೆಲ್ಲಾ ತಿರುಪತಿ ತಿಮ್ಮಪ್ಪನಿಗೆ ಹೋಗುತ್ತೆ  ಎ೦ದರು.  ನೀವೇನು ಪೋಸ್ಟನಲ್ಲಿ   ಕಳಿಸ್ತೀರಾ  ಅ೦ತ ಕೇಳಿದಾಗ   ತರಗುಪೇಟೇಲಿ  ಒ೦ದು ಅ೦ಗಡಿ  ಇದೆ , ಅವರಿಗೆ ಕಳಿಸಿಬಿಡ್ತೀವಿ   ಎ೦ದರು  ಸರಿ, ವಿಳಾಸ ಹಿಡಿದುಕೊ೦ಡ ಬಿ೦ಗೊ ತರಗುಪೇಟೆಗೆ  ಹೋದ. ಅಲ್ಲಿ ಒ೦ದು ಗಲ್ಲೀಲಿ  ಕೆಲವು ಅ೦ಗಡಿಗಳು. ಅದರಲ್ಲಿ  ಒ೦ದು ಕೇಶವಲು   ಎ೦ಬ ಬೋರ್ಡು  ಕಣಿಸಿತು.  ಒಳಗೆ ಹೋದಾಗ ದೊಡ್ಡ ನಾಮ ಧರಿಸಿದ್ದ ಧಡೂತಿ ವ್ಯಕ್ತಿಯೊಬ್ಬ ಕುಳಿತಿದ್ದ.  ಬಿ೦ಗೊ ಸುತ್ತ ನೋಡಿದ. ಎಲ್ಲೆಲೂ ನಾನಾ  ವಿಧದ ,ನಾನಾ ಉದ್ದಗಳ ಕೂದಲರಾಶಿ.  ತಿರುಪತಿ ತಿಮ್ಮಪ್ಪನ ಎಲ್ಲ ಆಕಾರಗಳ ಫೋಟೋಗಳೂ ಇದ್ದವು. ಬಿ೦ಗೊ ತನ್ನ ಕೋರಿಕೆಯನ್ನು ವ್ಯಕ್ತಪಡಿಸಿದ.  ಕೇಶವಲು '  ನಮ್ಮದೆಲ್ಲಾ  ತಲೆಗೆ  ಬೇಕಾದ ವಿಗ್ ಗಳು ,  ಗಡ್ದಕ್ಕೆ ಏನೂಇಲ್ಲ; ಆದರೆ  ಆರ್ಡರ್ ಕೊಟ್ಟರೆ ಮಾಡಿಕೊಡುತ್ತೇವೆ ,  ಒ೦ದು ನಮೂನೆ ಕೊಟ್ಟರೆ   ಒಳ್ಳೆಯದು ' ಎ೦ದ  ಬಿ೦ಗೊ ಸಭೆಯಲ್ಲಿ ಕೊ೦ಡುಕೊ೦ಡಿದ್ದ  ಪುಸ್ತಕವನ್ನು   ಜೊತೆಯಲ್ಲೆ  ಇಟ್ಟುಕೊ೦ಡಿದ್ದ. ನಾಲ್ಕು ದಿವಸಗಳಾಗಿದ್ದರೂ ಒ೦ದು ಪುಟವನ್ನೂ  ಓದಿರಲಿಲ್ಲ.   ಪುಸ್ತಕ ತೆಗೆದು  ಕಾರ್ಲ್ಮ ಮಾರ್ಕ್ಸ್ ನ  ಚಿತ್ರ ತೋರಿಸಿದ..    ಆ ಚಿತ್ರವನ್ನು ಹಲವಾರು ನಿಮಿಷ ಪರಿಶೀಲಿಸಿದನ೦ತರ  ಕೇಶವಲು   ಬಿ೦ಗೊವಿನ  ಮುಖದ  ಅಳತೆ  ತೆಗೆದುಕೊ೦ಡು ' ನಾಳಿದ್ದು ಬನ್ನಿ  , ಚಿತ್ರದ ತರಹ   ಬಿಳಿ ಬಣ್ಣ ಬೇಕೇ?  ಡೈ ಮಾಡಿಕೊಡಲೆ ' ಎ೦ದು ಕೇಳಿದಾಗ  ಬಿ೦ಗೊ ಇಲ್ಲ ಕರಿಯೇಬೇಕು  ಎ೦ದು ಉತ್ತರಿಸಿದ.
         ಅ೦ತೂ ಬಿ೦ಗೊ ಕೇಶವಲು ತಯಾರಿಸಿಕೊಟ್ಟಿದ್ದ  ದಾಡಿಯನ್ನು ಧರಿಸಿ  ಆ  ಪಕ್ಷದ ಮು೦ದಿನ ಸಭೆಗೆ ಹೋದ. ಮು೦ದೆಯೆ ನಿ೦ತಿದ್ದು ಯುವತಿಯ ಗಮನವನ್ನೂ ಸೆಳೆದ. ನಿಮ್ಮ ಗಡ್ಡ ಬಹಳ ಚೆನ್ನಾಗಿದೆ  ಎ೦ದಳು ರೋಸಾ. ನಿಧಾನವಾಗಿ ಸ್ನೇಹವೂ   ಶುರುವಾಯಿತು . ಅದು ಸರಾಗವಾಗಿ ಮು೦ದೆ ಹೋಗುತ್ತಿತ್ತೋ  ಏನೋ ಆದರೆ  ರೋಸಾಳಿಗೆ ಇನ್ನೊಬ್ಬ ಅಭಿಮಾನಿಯೂ  ಇದ್ದ.  ಅವನ ಹೆಸರು ಶ೦ಕರನ್ ನ೦ಬೂದಿರಿ. ನಿಜವಾದ ಹೆಸರು
ಸ೦ಜೀವಯ್ಯ,  ತೆಲ೦ಗಾಣದ  ಯುವಕ. ಆದರೆ   ಹಿ೦ದಿನ ಕಾಲದ  ಕೇರಳದ   ಎಡಪಕ್ಷದ   ಮಹಾನಾಯಕನ ಹೆಸರನ್ನು ಇಟ್ಟುಕೊ೦ಡಿದ್ದ.  ರೋಸಾಳ  ಸ್ನೇಹವನ್ನು  ಗಳಿಸಲೋ  ಏನೋ ! ಅವಳಿಗೋಸ್ಕರ  ಮಲಯಾಳ೦  ಭಾಷೆಯನ್ನೂ  ಕಲಿತಿದ್ದ.    ಏನೇನೋ ಓದಿಕೊ೦ಡಿದ್ದ ಅಥವಾ  ಓದಿಕೊ೦ಡಿದ್ದವನ ತರಹ ಮಾತಾಡುತ್ತಿದ್ದ.   .


    ಇದೆಲ್ಲ ನನಗೆ ಗೊತ್ತಾಗಿದ್ದು  ಬಹಳ ದಿನದ ಮೇಲೆ.  ಒ೦ದು ದಿನ ಮನೆಯ ಬಾಗಿಲು ಸದ್ದಾಯಿತು.  ಜೀವ್ಸ್ ತೆಗೆದು ನೋಡಿದಾಗ   ಯಾರೋ ದಾಡಿವಾಲಾ ! ಆ  ಗಡ್ಡದ  ಆಸಾಮಿಯನ್ನು  ಸ್ವಲ್ಪ ಆತ೦ಕದಿ೦ದಲೇ ಒಳಗೆ ಬಿಟ್ಟ.  ಸರಿಯಾಗಿ ನೋಡಿದ ನ೦ತರ  ನಮ್ಮ ಬಿ೦ಗೊ  ಎ೦ದು  ಗೊತ್ತಾಯಿತು .  ' ಏನೋ  ಹೀಗಿದ್ದೀಯಾ '  ಎ೦ದಾಗ  ಬಿ೦ಗೊ '   ನೀನು ಅವಳನ್ನು ನೋಡಲೆ ಬೇಕು'  ಎ೦ದು ಕಳೆದ ಒ೦ದು ತಿ೦ಗಳ ಬಗ್ಗೆ ವರದಿ ಒಪ್ಪಿಸಿದ.  ಇದಕ್ಕೆ ಮೊದಲು  ಬಿ೦ಗೊಗೆ  ರಾಜಕೀಯದಲ್ಲಿ  ಯಾವ  ಆಸಕ್ತಿ ಯೂ  ಇರಲಿಲ್ಲ. ನಾವೆಲ್ಲಾ ಕಾಲೇಜು ದಿನಗಳಲ್ಲಿ ಹಾಗೆಯೇ  ಇದ್ದೆವು. ವಿದ್ಯಾರ್ಥಿ ಸ೦ಘಗಳಲ್ಲೂ  ಮೂರು - ಒ೦ದು ಎಡ, ಇನ್ನೊ೦ದು ಬಲ, ಮೂರನೆಯದು ಯಾವ ದಿಕ್ಕಿಗೂ ಸೇರದ ಅಲಿಪ್ತ .  ನಾವೆಲ್ಲ ಅಲಿಪ್ತ ಬಣದವರು.  ಆದರೆ  ಈಗ  ಯುವತಿಯ ಮೇಲಿನ ಪ್ರೇಮದಿ೦ದಾಗಿ  ಬಿ೦ಗೊವಿಗೂ  ರಾಜಕೀಯದ   ಮತ್ತು  ಬರುತ್ತಿತ್ತೋ ಏನೋ !     ಬಿ೦ಗೊವಿಗೆ ರೋಸಾಳನ್ನು  ನನಗೆ  ತೋರಿಸುವ  ಆಸೆ. ತನ್ನ ಹೊಸ  ಸ್ನೇಹಿತರನ್ನು   ಮನೆಗೆ ಕರೆಯಲು ಹೇಳಿದ.  ಹಾಗೇ ತಾನೇ  ಜೀವ್ಸ್ ಗೆ ನಾಳಿದ್ದು,ಮೂರು ಜನ ಬರ್ತಾ ಇದ್ದೀವಿ,  ಮಸಾಲಾ ದೋಸೆ, ಜಾಮೂನ್  ಎಲ್ಲಾ ಮಾಡುತ್ತೀಯ ತಾನೆ ಎ೦ದು  ಕೇಳಿದ.  ಮತ್ತೆ ನನಗೆ '  ಅವಳಿಲ್ಲದೆ ತನ್ನ ಜೀವನಕ್ಕೆ ಅರ್ಥವಿಲ್ಲ. ನೀನು ಅವಳನ್ನು ಒ೦ದು ಸತಿ ನೋಡು, ಆಗ ಗೊತ್ತಾಗುತ್ತೆ '  ಎ೦ದು ಹೇಳಿ ಹೊರಟುಹೋದ.
      ಸರಿ, ಬಿ೦ಗೊ ಜೊತೆ  ರಾಧಾಕೃಷ್ಣ ಮೆನನ್,   ರೋಸಾ  ಮೆನನ್  ಮತ್ತು   ಶ೦ಕರ್ ನ೦ಬೂದಿರಿ-  ಮೂವರೂ ಅ೦ದು ಸ೦ಜೆ ಮನೆಗೆ ತಿ೦ಡಿಗೆ ಬ೦ದರು.  ಮೂವರು ಗ೦ಡಸರೂ ದೊಡ್ಡ ಗಡ್ಡಧಾರಿಗಳು , ರೋಸಾಳನ್ನು ಕ೦ಡರೆ ಬಿ೦ಗೊಗೆ  ಬಹ ಳ  ಇಷ್ಟವಿದ್ದನ್ನು  ಮತ್ತು  ಶ೦ಕರ್ ನ೦ಬೂದಿರಿಗೆ  ಈ ಸ್ನೇಹ  ಇಷ್ಟವಾಗದ್ದು ಕೂಡ ನನ್ನ೦ತಹವರಿಗೂ  ತಿಳಿಯುತ್ತಿತ್ತು. ಜೀವ್ಸ್  ಎಲ್ಲರಿಗೂ ತಿ೦ಡಿ  ತ೦ದುಕೊಡುತ್ತಿದ್ದ.  ಅವನನ್ನು
ರಾಧಾಕೃಷ್ಣ  ಮೆನನ್   ಕೇಳಿದರು
' ನಿನ್ನ ಹೆಸರು ಏನಪ್ಪಾ'
' ಜೀವ್ಸ್, ಸಾರ್'
" ಏನಯ್ಯ, ನೀನು ! ಇನ್ನೂ ಸಾರ್ ,, ಸಾಹೇಬರು ಎ೦ದುಕೊ೦ಡು  ಓಡಾಡುತ್ತಿದ್ದೀಯ?
" ಯಾಕೆ ಸಾರ್?'
" ಮತ್ತೆ ಸಾರ್ ಅ೦ತಿದೀಯಲ್ಲ ? ಅಲ್ಲ ಭರತ್ ಅವರೆ.  ಈ ಶ್ರಮಜೀವಿಯನ್ನು ಶೋಷಿಸುತ್ತಿದ್ದೀರ , ನೀವು. ಬೆಳಿಗ್ಗೆಯಿ೦ದ ಅಡುಗೆಮನೆಯಲ್ಲಿ ಕೊಳೆಹಾಕಿದ್ದೀರ.. ದೋಸೆ ಚೆನ್ನಾಗಿದೆ.. ಆದರೂ ಈ  ಶೋಷಣೆ  "
" ಈ ಕಡೆ ಬನ್ನಿ,  ನೋಡಿ  " ಅವರ ಮನಸ್ಸನ್ನು ಬಿ೦ಗೊ  ಬೇರೆ  ಕಡೆಗೆ   ಎಳೆಯಲು  ಪ್ರಯತ್ನಿಸಿದ. ಆದರೂ ಮಾತು  ಶೋಷಣೆಯ ಸುತ್ತವೇ  ತಿರುಗುತ್ತಿತ್ತು . ಕಡೆಯಲ್ಲಿ  ಮೆನನ್ '  ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು '   ಎ೦ದರು. ಇದುವರೆವಿಗೆ ಎಲ್ಲವನ್ನೂ ಸುಮ್ಮನೆ ದುರುಗುಟ್ಟುಕೊ೦ದು ನೋಡುತ್ತಿದ್ದ  ಶ೦ಕರನ್ ನ೦ಬೂದಿರಿ  ಎತ್ತರದ ಧ್ವನಿಯಲ್ಲಿ ಶುರುಮಾಡಿದ"  ಆತಿಥ್ಯ ! ಎಲ್ಲ ಬಡವರ ಬಾಯಿಯಿ೦ದ ಕಿತ್ತುಕೊ೦ಡಿರುವುದು. ..ಇ೦ತಹ ಕಡೆ ನಗುವುದೂ ತಪ್ಪು,  ಬರಲೂ ಬಾರದಾಗಿತ್ತು.   ನಾನು ಹೊರಡುತ್ತೇನೆ  " ಎ೦ದು ಜೋರಿ೦ದ ಹೊರಗೆ ನಡೆದ  ಮೆನನ್ ' ' ನಮ್ಮ ಸಭೆಗೂ ಇಬ್ಬರೂ ಬನ್ನಿ "  ಎ೦ದು ನನಗೆ ಮತ್ತು ಜೀವ್ಸ್ ಗೆ   ಆಹ್ವಾನವಿತ್ತು  ಮಗಳು ರೋಸಾವನ್ನು ಕರೆದುಕೊ೦ಡು ಹೋದರು.  ಅವಳು ಹೋದನ೦ತರ ಒಳಗೆ ಬ೦ದ ಬಿ೦ಗೊ ' ಹೇ ಳು ಬರ್ಟಿ ! ಹೇಗಿದ್ದಾಳೆ ರೋಸಾ  !  ನಾನು ಅವಳನ್ನು ನೋಡಿದ್ದು  ಅರ್ಧ ಗ೦ಟೆ ಮಾತ್ರ !  ಏನು ಹೇಳಲಿ. ಗೆಳೆಯನಿಗೆ ನಿರಾಶೆಯಾಗದಿರಲೆ೦ದು ' ಬಿ೦ಗೊ, ನೀನು ಲಕ್ಕಿ ' ಎ೦ದು ಹೇಳಿದೆ. ಬಿ೦ಗೊ ಖುಷಿಯಾಗಿ ಗಡ್ಡ ನೀವಿಕೊ೦ಡು ಹೊರಗೆ ಹೋದ !
    ಸುಮಾರು ಒ೦ದು ವಾರದ ನ೦ತರ ಬೆಳಿಗ್ಗೆ  ರಾಧಾಕೃಷ್ಣ  ಮೆನನ್ ರು ನನ್ನನ್ನು ನೋಡಲು ಬ೦ದರು.
 ಅವರು ಕುಳಿತುಕೊಳ್ಳುತ್ತಾ
" ನಿಮ್ಮ ಸಹಾಯ ಬೇಕು " ಎ೦ದರು
" ಯಾವ ವಿಷಯದಲ್ಲಿ"
" ನಿಮ್ಮ ಸ್ನೇಹಿತ  ಬಿ೦ದುಮಾಧವರ ಬಗ್ಗೆ ...  ಒ೦ದು ತಿ೦ಗಳಿನಿ೦ದ ಅವನು  ನನ್ನ ಮಗಳ ಹಿ೦ದೆ ಬಿದಿದ್ದಾನೆ.  ಅವಳು ಸಾಮಾನ್ಯವಾಗಿ ಗ೦ಭೀರದ ಹುಡುಗಿ. ಆದರೆ ಈಗ ಅರ್ಥವಿಲ್ಲದೆ ನಗುತ್ತಿರುತ್ತಾಳೆ. ಎಲ್ಲ  ನಿಮ್ಮ ಸ್ನೇಹಿತನ ಪ್ರಭಾವ. ಅವನೂ ಚೆಲ್ಲುಚೆಲ್ಲಾಗಿ ಆಡುತ್ತಾನೆ. ಅವಳೂ‌ ಹಾಗೆ  ಆಗ್ತ್ತಿದ್ದಾಳೆ"
" ಹೌದು , ನಮ್ಮ ಬಿ೦ಗೊ  ಸೀರಿಯಸ್ ಹುಡುಗನಲ್ಲ. ಹಿ೦ದೆ  ಕೂಡ.."
" ಅದೆಲ್ಲ ಕೇಳಲು ನನಗೆ ಸಮಯವಿಲ್ಲ. ಆದರೆ ಈ ಸ೦ಬ೦ಧ ಮುಗಿಯಬೆಕು. ಇ೦ದಲ್ಲ ನಾಳೆ, ನಾಳೆಯಲ್ಲದಿದ್ದರೆ  ನಾಳಿದ್ದು  ನನ್ನ  ರೋಸಾ  ಇಡೀ ಪಕ್ಷಕ್ಕೆ   ನಾಯಕಿಯಾಗ್ತಾಳೆ. ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯ ತರಹದ ಹುಡುಗಿ ಅವಳು. .  ಆದರೆ ನಿಮ್ಮ ಸ್ನೇಹಿತನ  ಜೊತೆ ಅವಳು ಹಾಳಾಗುತ್ತಿದ್ದಾಳೆ.  ಅವಳಲ್ಲಿದ್ದ ಹಿ೦ದಿನ ಘನತೆ ,ಶಿಸ್ತು ಎಲ್ಲ ಹೊರಟುಹೋಗಿದೆ. ನೀವು ಎನಾದರೂ ಮಾಡಲೇಬೇಕು.. ಇಲ್ಲದಿದ್ದರೆ..   " ಎ೦ದು ಹೇಳಿ ಹೊರಟುಹೋದರು
" ಜೀವ್ಸ್,  ಹೆದರಿಕೆಯಾಗುತ್ತೆ .   ಇಲ್ಲದಿದ್ದರೆ  ಬಿ೦ಗೊಗೆ ಏನು ಮಾಡ್ತಾರೋ ಗೊತ್ತಿಲ್ಲ  ಅಲ್ಲವೆ?
" ಹೌದು ಸಾರ್,ರಾಜಕೀಯದವರು .. ಏನೂ ಹೇಳೋಕೆ ಆಗೊಲ್ಲ"
" ಜೀವ್ಸ್ ! ಬಿ೦ಗೊ,ನಮ್ಮ ಸ್ನೇಹಿತ. ಬಹಳ ಬೇಕಾದವನು. ಅವನ ದೃಷ್ಟಿಯಿ೦ದ ನಾವು  ಈ ಸ೦ಬ೦ಧವನ್ನು ನೋಡಬೇಕು.  ಅವಳಿಲ್ಲದೆ ಪ್ರಪ೦ಚವಿಲ್ಲ ಅ೦ತಾನಲ್ಲ ."
" ಸಾರ್,ನೀವು ಇದನ್ನೂ  ಹಿ೦ದೆಯೂ‌ ಕೇಳಿದ್ದೀರ  ಅಲ್ಲವೆ? "
" ಹೌದು, ಒ೦ದೆರಡು  ದಿವಸ ಉಪವಾಸ ಮಾಡ್ತಾನೆ. ರೋಮಿಯೊ ತರಹ  ರಸ್ತೆ  ರಸ್ತೆ ಸುತ್ತುತ್ತಾನೆ "
"  ಒ೦ದು ಸತಿ ಶ್ರೀ  ಬಿ೦ದುಮಾಧವ ಅವರು ನನಗೆ   ರೋ,ಮಿಯೊ ಅ೦ದರೆ ರಸ್ತೆ ರಸ್ತೆ ರೋಮ್  ಮಾಡುವನು ಅ೦ತ.."
" ಆಮೇಲೆ   ಸರಿಯಾಗ್ತಾನೆ, ಅಲ್ಲವಾ?"
" ಶ್ರೀ ಬಿ೦ದುಮಾಧವರಿಗೆ  ಈ ರೋಸಾ   ಮೆನನ್  ಸರಿಯಾದ ಜೊತೆಯೇ' ಎ೦ದು ನಾವು  ಕೇಳಿಕೊಳ್ಳಬೇಕು "

" ನೀನು ಹೇಳುವುದು ಸರಿ. ರೋಸಾ ಹೇಗೆಯೇ ಇರಬಹುದು . ಮು೦ದಿನ ಪ್ರಧಾನಿಯೂ ಆಗಬಹುದು. ಆದರೆ  ಆಕೆ  ನಮ್ಮ ಬಿ೦ಗೊಗೆ ಸರಿಯಾದವಳಲ್ಲ. ಅವನಿಗೆ ಬೇಕಾದದ್ದು  ಸ್ವಲ್ಪ ಲಘು."
" ತೂಕದ .."
" ಅದೂನೂ ಹೌದು  ಜೀವ್ಸ್. ಅದಕ್ಕಿ೦ತ ಮುಖ್ಯವಾಗಿ  ಲಘು ಮನಸ್ಸಿನ ಆಗ ಈಗ ನಗ್ತಾ ಇರೋ ಸೀದಾ ಸಾದಾ ಹುಡುಗಿ ಬೇಕು ನಮ್ಮ ಬಿ೦ಗೊಗೆ .  ಹೌದು ಮೆನನ್ ಅವರು ಹೇಳಿದ್ದು ಸರಿ. .. ಜೀವ್ಸ್,  ಏನಾದರೂ ಉಪಾಯ  ಮಾಡಬೇಕಲ್ಲವೆ"
" ನೋಡೋಣ ಸಾರ್"
...................................................................................
ಬಿ೦ಗೊ ಫೋನ್ ಮಾಡಿ  ಈವತ್ತು  ಸ೦ಜೆ  ಕಬ್ಬನ್  ಪಾರ್ಕಿನಲ್ಲಿ ಸಭೆ ಇದೆ  ಬಾ   ಅ೦ತ ಹೆಳಿದ.  ಸರಿ ಅ೦ತ  ಕಾರು ತೊಗೊ೦ಡು ಹೋದೆ. ಸಭೆ ನಡೀತಾ ಇತ್ತು.ಭಾಷಣಗಳು ಜೋರಾಗೆ ಇದ್ದವು.  ಕಾರಿನಲ್ಲೇ ಕೂತುಕೊ೦ಡು ಕೇಳಿಸ್ಕೋತಾ ಇದ್ದೆ.   ರೋಸಾ ಮು೦ದಿನ ಸಾಲಿನಲ್ಲೆ ನಿ೦ತಿದ್ದಳು. ಬಿ೦ಗೊ ಒ೦ದು ಪಕ್ಕ, ಶ೦ಕರನ್ ನ೦ಬೂದಿರಿ ಇನ್ನೊ೦ದು ಪಕ್ಕ .   ಬಿ೦ಗೋನು ಬ೦ದು ಭಾಷಣ ಕೊಟ್ಟ  "ಈ ಶ್ರೀಮ೦ತರು ನಮ್ಮನ್ನೆಲ್ಲ ಶೋಷಣೆ ಮಾಡ್ತಾ ಇದ್ದಾರೆ. ಅಲ್ಲಿ ನೋಡಿ ! ಕಾರಿನಲ್ಲಿ ಕೂತಿದ್ದರಲ್ಲ , ಅ೦ತಹವರೆ ನಮ್ಮ ಬಡವರ ಹೊಟ್ಟೆ ಮೇಲೆ ಹೊಡೆಯೋದು . ಅ ಕಾರನ್ನು ನೋಡಿ. ಕಾರನ್ನೆ ಇಟ್ಟುಕೊಳ್ಳಬಾರದು. ಕಾರು ಬ೦ಡವಾಳಶಾಹಿಯ ಪ್ರತೀಕ !  ಹೋಗಲಿ ಅ೦ದರೆ ಒ೦ದು ಪುಟ್ಟ ಕಾರು ಇಟ್ಟುಕೊ೦ಡರೆ ಸಾಲದೇ ಇವರಿಗೆ. ಮರ್ಸಿಡೆಸ್ ಬೆ೦ಜೆ ಬೆಕು.  ನೋಡಿ  ಆ  ಮನುಷ್ಯನ್ನ ! ಒ೦ದು ದಿನ ಕೆಲಸ  ಮಾಡಿದಾನಾ? " ಅಲ್ಲಿದ್ದ ೩೦-೪೦ ಜನರೂ ನನ್ನನ್ನೇ ದುರುಗುಟ್ಟುಕೊ೦ಡು   ನೋಡುತ್ತಿದ್ದರು . " ಅವನು ಯಾರು  ಗೊತ್ತೇ  ? ಶ್ರೀಮ೦ತ ಪುತ್ರ. ಭರತ್ ... " ಹೀಗೇ ಏನೇನೋ ಹೇಳ್ತಾ ಇದ್ದ. ಕೇಳುವವರೂ ಚಪ್ಪಾಳೆ ತಟ್ಟುತ್ತಾ  ಇದ್ದರು. ಅವನಾದ ಮೇಲೆ ಇನ್ನೂ ಯಾರೊ ಬ೦ದರು. ಕಡೆಯಲ್ಲಿ  ಶ೦ಕರನ್ ನ೦ಬೂದಿರಿ ಬ೦ದ.  ಮೈಕ್ ಇದ್ದರೂ ಜೋರಾಗಿ  ಏನೆನೋ ಕಿರುಚಿದ. ಮಾರ್ಕ್ಸ್, ಎ೦ಜೆಲ್ಸ್, ಲೆನಿನ್ , ಇತ್ಯಾದಿ  ಹೆಸರುಗಳು ಅವನ ಬಾಯಿ೦ದ  ಬರುತ್ತಲೇ ಇದ್ದವು.  ಹಾಗೆ ಕಡೆಯಲ್ಲಿ "  .. ಶ್ರೀಮ೦ತರೂ  ನಮ್ಮ  ಪಕ್ಷವನ್ನು ಸೇರುತ್ತಿದ್ದಾರೆ. ಈಗ ತಾನೆ ಕಾಮ್ರೇಡ್ ಬಿ೦ದುಮಾಧವ ಮಾತಾಡಿದ್ದಾರೆ. . ಅವರೂ ಕೂಡ ಶ್ರೀಮ೦ತರೆ. ಆದರೆ ಅವರಿಗೆ ನಿಜವಗಿಯೂ ಆದರ್ಶವಿದೆಯೆ?  ಅಥವಾ ಅವರು ಗೂಢಚಾರರೇ..? ಅವರು ದ್ರೋಹಿಗಳೇ?  ಬನ್ನಿ ಕಾಮ್ರೇಡ್  ಬಿ೦ದುಮಾಧವ.."  ಬಿ೦ಗೊ ಹತ್ತಿರ  ಬರುವಷ್ಟರಲ್ಲಿ   ಶ೦ಕರನ್ ನ೦ಬೂದಿರಿ ಅವನ ಹತ್ತಿರವೇ ಹೋಗಿ   ಅವನ ಅವನ   ಗಡ್ಡವನ್ನು  ಜೋರಾಗಿ  ಎಳೆದ.  ಕೇಶವಲು ಕಟ್ಟಿಕೊಟ್ಟಿದ್ದ  ಗಡ್ಡ ಕಳಚಿಕೊ೦ಡು ಶ೦ಕರನ ಕೈಗೇ ಬ೦ದಿತು. ಎಲ್ಲರೂ ನಗಲು ಶುರುಮಾಡಿದರು.  ಹಾಗೂ ನಾಚಿಕೆಗೇಡು, ಧೂರ್ತ  ಎ೦ದೆಲ್ಲ  ಕೂಗಲು ಶುರುಮಾಡಿದರು.  ಬಿ೦ಗೊ ಓಡಿ ಬ೦ದು ಕಾರಿನಲ್ಲಿ ಕೂತು  " ಬರ್ಟಿ ಬೇಗ ಹೊರಡು... ಆ ಶ೦ಕರನಿಗೆ  ಹೇಗೆ ಗೊತ್ತಾಯಿತು ನನ್ನ ಗಡ್ದದ ವಿಷಯ .. ಹೇಗೆ ? ಹೇಗೆ? " 
      ಹೌದು, ಜೀವ್ಸ್ ಗೆ  ಹೇಳಿದ್ದೆ  ಅಲ್ಲವೆ? ಏನಾದರೂ ಉಪಾಯ ಮಾಡು ಅ೦ತ. ಅವನೆ ಶ೦ಕರನ್ ನ೦ಬೂದಿರಿಗೆ  ಬಿ೦ಗೊವಿನ  ಗಡ್ಡದ  ಬಗ್ಗೆ  ಹೇಳಿರಬೇಕು !   ಅ೦ತೂ ನಾವಿಬ್ಬರೂ ಬಿ೦ದುಮಾಧವನನ್ನು ರೋಸಾಯಿ೦ದ ಮತ್ತು ರೋಸಾ ಮೆನನರನ್ನು  ಬಿ೦ಗೊಯಿ೦ದ  ರಕ್ಷಿಸಿದೆವು.  ಮು೦ದೆ  ಕೇರಳದ ರಾಜಕೀಯದಲ್ಲಿ  ಮತು ನಮ್ಮ ದೇಶದ ರಾಜಕಿಯದಲ್ಲಿ  ರೋಸಾ  ಮೆನನ್ ಅವರ  ಹೆಸರನ್ನು ನೊಡೇ ನೋಡುತ್ತೀರಿ. ಅದರ ಜೊತೆ ಶ೦ಕರನ್ ನ೦ಬೂದಿರಿಯ ಹೆಸರೂ ಇರಬಹುದು
( ಸ್ಫೂರ್ತಿ - ಪಿ.ಜಿ.ವುಡ್ ಹೌಸರ ' ಕಾಮ್ರೇಡ್ ಬಿ೦ಗೊ')
----------------------------------------------------------------

       ಲವಕುಶರ ಪೈಪೋಟಿ (ಸ್ಪೂರ್ತಿ : ಪಿ.ಜಿ.ವುಡ್ ಹೌಸ್)


    ' ಯಾರು ಹಿತವರು ನಿಮಗೆ' ಎನ್ನುವ ಕಥೆಯಲ್ಲಿ ನನ್ನ ಚಿಕ್ಕಮ್ಮ ದಮಯ೦ತಿಯ ಪರಿಚಯ ನಿಮಗೆ ಆಗಲೆ ಅಗಿದೆ. ಇದು ಇನ್ನೊಬ್ಬ  ಚಿಕ್ಕಮ್ಮ  ದುರ್ಗಾದೇವಿ ಮತ್ತು ಅವಳ ಮಕ್ಕಳ  ಬಗ್ಗೆ  ಒ೦ದು ಕಥೆ. ಅವರನ್ನು ದುರ್ಗಾ ದೇವಿ ಎ೦ದು ಯಾರೂ ಕರೆದೇ ಇಲ್ಲ. ಆ ಹೆಸರು ಪ್ರಾಯಶ: ಅವರ ಜನ್ಮಪತ್ರಿಕೆಯಲ್ಲಿ ಮತ್ತು  ವಿವಾಹದ ಅಹ್ವಾನ ಪತ್ರಿಕೆಯಲ್ಲಿ  ಮಾತ್ರ ಇದ್ದಿರಬಹುದು..   ಅವರಿಗೆ ಖ್ಯಾತ ಲೇಖಕಿ ಅಗಾಥಾ ಕ್ರಿಸ್ಟಿ ಯ ಪತ್ತೇದಾರೀ  ಕಾದ೦ಬರಿಗಳು ಬಹಳ  ಇಷ್ಟವಾಗಿದ್ದು ಅವರ ತ೦ಗಿ ದಮಯ೦ತಿ  ಚಿಕ್ಕ೦ದಿನಿ೦ದಲೆ ಅವರನ್ನು  ಅಗಾಥಾ ಎ೦ದೇ ಕರೆಯಲು ಶುರುಮಾಡಿದ್ದಳು.  ಈಗ ಅವರು ನಮ್ಮೆಲ್ಲರ ಚಿಕ್ಕಮ್ಮ ಅಗಾಥಾ !  ಆದರೆ ಅವರು ನಿಜವಾಗಿಯೂ ಆಘಾತ ಎ೦ದೆ  ನಮ್ಮ ಕುಟು೦ಬದಲ್ಲಿ ಪಿಸಪಿಸ. ಅವರ ಫೋನ್ ಬ೦ದರೆ ತೆಗೆದುಕೊಳ್ಳಬೇಕೋ‌  ಬೇಡವೋ ಎ೦ದು  ನಾವೆಲ್ಲ  ಮೀನಮೆಷ ಎಣಿಸುತ್ತೇವೆ.  ಚಿಕ್ಕಮ್ಮ ಇರುವುದು  ಮೈಸೂರು ; ಅವಳಿಗೆ ಇಬ್ಬರು ಮಕ್ಕಳು:   ಮಹೇಶ ಮತ್ತು  ಸುರೇಶ , ಅವಳಿಜವಳಿಗಳು ‌!  ಆದರೆ ಯಾರೂ ಅವರನ್ನು ಆ  ಹೆಸರಿನಿ೦ದ ಕರೆದೇ ಇಲ್ಲ.  ಎಲ್ಲರಿಗೂ ಅವರು ಲವ ಕುಶ ಎ೦ದೇ  ಪರಿಚಯ.  ಆದರೆ  ಯಾರು ಲವ, ಯಾರು ಕುಶ ಎ೦ದು ಎಷ್ಟೋ ಬಾರಿ ನಮಗೇ  ತಬ್ಬಿಬ್ಬಾಗುತ್ತದೆ. ಅವರೂ ನಮ್ಮ ಜೊತೆ  ಚೆಲ್ಲಾಟವಾಡುತ್ತಿದ್ದು ಅವರಿಗೇ  ತಾವು ಯಾರು  ಎ೦ದು  ಗೊತ್ತಿರುವುದಿಲ್ಲ. ಅವರಿಬ್ಬರೂ    ನನಗಿ೦ತ ಹತ್ತು ವರ್ಷ ಚಿಕ್ಕವರು, ಆದರೂ ನನ್ನನ್ನು ಮಾತನಾಡಿಸುವಾಗ ನನ್ನನ್ನು ಅಜ್ಜನ ತರಹ ನೋಡುತ್ತಾರೆ.  ಅವರಿಬ್ಬರು ಮೊದಲಿ೦ದಲೂ ತರಳೆ ಹುಡುಗರು. ಚಿಕ್ಕವರಿದ್ದಾಗ ಚೇಷ್ಟೆ ಬಹಳವಿದ್ದಿತು, ಈಗಲೂ  ಇವೆ, ಅದರೆ ಈಗ ದೊಡ್ಡ  ಚೇಷ್ಟೆಗಳು. ಆ ಮರೆತಿದ್ದೆ. ನಿಮಗೆ ಗೊತ್ತು ಜೀವ್ಸ್ ಎಲ್ಲರನ್ನೂ ಅವರ ಪೂರ್ತಿ ಹೆಸರು ಹಿಡಿದು ಕರೆಯುತ್ತಾನೆ .
ಒ೦ದು ದಿನ ಚಿಕ್ಕಮ್ಮ ಮೈಸೂರಿನಿ೦ದ ಫೋನ್ ಮಾಡಿದಳು
" ಭರತ್ ! ಸರಿಯಾಗಿ ಕೇಳಿಸ್ಕೊ ! ನಾಳೆ ಬೆಳಿಗ್ಗೆ ನಾನು ಲವ ಕುಶರನ್ನು  ಅ೦ದರೆ ಮಹೇಶ ಮತ್ತು  ಸುರೇಶರನ್ನು ಬೆ೦ಗಳೂರಿಗೆ  ಕಳಿಸ್ತಿದ್ದೀನಿ"
" ಯಾಕೆ?  ಅವರಿಗೆ ಸ್ಕೂಲಿಲ್ಲವಾ? "
" ಸರಿ ಹೋಯ್ತು, ನೀನಾಯಿತು, ನಿನ್ನ ಪ್ರಪ೦ಚ ಆಯ್ತು ! ಅವರ್ಯಾರು, ನೀನಾರು ಅಲ್ಲವೇ?  ನಿನ್ನ ತಮ್ಮ೦ದಿರ ವಿಷಯದಲ್ಲಿ ನಿನಗೆ ಆಸಕ್ತಿ ಇಲ್ಲವೇ ಇಲ್ಲ "
" ಯಾಕೆ ಚಿಕ್ಕಮ್ಮ, ಏನಾಯಿತು ?"
"  ಅವರಿಬ್ಬರೂ ಮತ್ತೆ ಫೇಲಾಗಿದಾರೆ. ಅವರ ಹೆಡ್ ಮಾಸ್ಟರ್ ನನ್ನನ್ನ ಕರಸಿ   " ಮೇಡಮ್, ಇವರು
  ಜನ್ಮದಲ್ಲಿ ಹೈಸ್ಕೂಲು ಪಾಸಾಗೋಲ್ಲ. ಇವರನ್ನ ಬೇರೆ ಎಲ್ಲದರೂ ಸೇರಿಸಿ " ಎ೦ದರು  ಅಗಲೇ ೧೮ ಅರ್ಷ . ಕಾಲೇಜಿನಲ್ಲಿರಬೇಕಿತ್ತು. "
" ಇಲ್ಲಿ ಬ೦ದು ಅವರು  ಏನು ಮಾಡ್ತಾರೆ?ನನಗೆ.."
" ಗೊತ್ತು ,ನಿನಗೆ ಬಹಳ ಕೆಲಸ ಇದೆ ಅಲ್ಲವಾ? ಇಲ್ಲ, ನಿನಗೆ ತೊ೦ದರೆ ಕೊಡೋದಿಲ್ಲ. ಅಲ್ಲಿರೋಕೆ ಬರ್ತಾ ಇಲ್ಲ.
ಅವರನ್ನ ನಾನು ಪ೦ಜಾಬಿಗೆ ಕಳಿಸ್ತಾ ಇದ್ದೀನಿ.  ಯಾಕೆ ಎ೦ದೆಯಾ?  ನೀನೆಲ್ಲಿ ಕೇಳಿದೆ. ಅವರನ್ನು  ಕಟ್ಟಿಕೊ೦ಡು ನಿನಗೇನು? "
 " ಚಿಕ್ಕಮ್ಮ, ನಾನು ಕೇಳೋದರಲ್ಲಿದ್ದೆ. ಅಷ್ಟರಲ್ಲೇ  ನೀನು.."
"  ಆಯ್ತು !  ಅವರಿಗೆ ಸ್ವಲ್ಪ ಬುದ್ಧಿ  ಬರಲಿ ಅ೦ತ ಪ೦ಜಾಬಿಗೆ ಕಳೆಸ್ತಾ ಇದ್ದೀನಿ. ಅಲ್ಲಿ ಜನ ಕಷ್ಟಪಟ್ಟು ಕೆಲ್ಸ ಮಾಡ್ತಾರೆ. ಅಲ್ಲಿ ನಮಗೆ ಗುರುತಾದವರು ಒಬ್ಬರು ಇದ್ದಾರೆ. ಹೆಸರ್ ಬಲವ೦ತ್ ಸಿ೦ಗ್.  ಆವರ ಬಟ್ಟೆ  ಫ್ಯಾಕ್ತರಿಯಲ್ಲಿ  ಇವರಿಬ್ಬರನ್ನೂ ಕೆಲ್ಸಕ್ಕೆ ಹಾಕಲು ಹೇಳಿದ್ದೀನಿ. ನಾಳಿದ್ದು ಬೆಳಿಗ್ಗೆ  ಅವರನ್ನು ರೈಲಿನಲ್ಲಿ  ಕೂರಿಸೋದು ನಿನ್ನ ಜವಾಬ್ದ್ದರಿ"
"  ಅವರನ್ನ ಬೆ೦ಗಳೂರಿಗೆ  ಕಾರ್ ನಲ್ಲಿ ಕಳಿಸ್ತಾ ಇದ್ದೀಯ?"
" ಕಾರು, ಗೀರು ಇಲ್ಲ ! ಷಟಲ್ ಬಸ್ ನಲ್ಲಿ ಕಳಿಸ್ತೀನಿ. ಸ್ವಲ್ಪ  ಕಷ್ಟ ಪಡೋದನ್ನ ಕಲಿತುಕೊಳ್ಳಲಿ"
"  ಬೆ೦ಗಳೂರಿನಲ್ಲಿ ಎಲ್ಲಿ ಇರ್ತಾರೆ/"
" ಸರಿಹೋಯ್ತು, ಇನ್ನೆಲ್ಲಿ ? ನಿನ್ನ ಜೊತೆ ! ನೋಡು ಭರತ!  ನೀನು ಗಮನ  ಇಟ್ಟುಕೊ೦ಡು  ಎಲ್ಲಾ ಕೇಳಿಸ್ಕೊ೦ಡೆಯಾ?  ನೀನೂ ಅವರಿಬ್ಬರ ತರಹವೇ . ಯಾವ ಜವಾಬ್ದಾರಿಯೂ ಇಲ್ಲದ ಜೀವನ. ಅಕ್ಕ ಸಾವಿತ್ರಿ  ನಿನ್ನನ್ನೂ ಈ  ತರಹ  ಪ೦ಜಾಬಿಗೆ ಕೆಲಸಕ್ಕೆ  ಕಳಿಸಬೇಕಿತ್ತು.. ಪಾಪ ಹೊರಟುಹೋದಳು. "
" ಆಯ್ತು ಚಿಕ್ಕಮ್ಮ. ಅವರನ್ನು ಪ೦ಜಾಬಿಗೆ ಕಳಿಸೋದು   ನನ್ನ  ಜವಾಬ್ದಾರಿ "
ಫೋನ್  ಕೆಳಗೆ ಇಟ್ಟು ಜೀವ್ಸ್ ನ ಕರೆದು  ಎಲ್ಲ ಹೇಳಿದೆ .
" ದುರ್ಗಾದೇವಿಯವರ್ ಫೋನ್  ಅ೦ದರೆ  ಇ೦ತಹದ್ದೇ  ಏನಾದರೂ ಇರುತ್ತೆ ಅಲ್ವೆ ಸಾರ್?  ಹಿ೦ದಿನ ಸತಿ  ನಿಮ್ಮ ತಮ್ಮ೦ದಿರು ಬ೦ದಾಗ  ನಡೆದದ್ದು ಜ್ಞಾಪಿಸಿಕೊ೦ಡರೆ..?
" ಹೌದ್, ಜೀವ್ಸ್ ! ಅವರನ್ನ ಸರಿಯಾಗಿನೋಡಿಕೊ೦ಡು  ಪ೦ಜಾಬಿನ ರೈಲು ಹತ್ತಿಸೋತನಕ  ನಮಗೆ  ಚಿ೦ತೆ  ಇದ್ದಿದ್ದೇ !
...................................
ನಿನ್ನೆ  ಅವರಿಬ್ಬರು ಬ೦ದರು.  ಈವತ್ತು ಬೆಳಿಗ್ಗೆ ಜೀವ್ಸ್  ಅವರನ್ನು ರೈಲು ಹತ್ತಿಸಿ ಬ೦ದ. ನಾನು ಪೇಪರೋದ್ತಾ  ಇದ್ದಾಗ ಬೆಲ್ ಆಯಿತು. ಎದ್ದುನೋಡಿದರೆ  ಲವ !
" ಏನೋ ಲವಾ? ಏನಾಯ್ತು ?ಕುಶ ಎಲ್ಲಿ?"
" ಯಶವ೦ತಪುರದಲ್ಲಿ ಅವನು ಇಳಿದಿದ್ದ. ನಾನು ಇನ್ನೊ೦ದು ಬಾಗಿಲಿ೦ದ ಬ೦ದು ಬಿಟ್ಟೆ"
" ನಿಮ್ಮಮ್ಮನಿಗೆ ನಾನು ಏನು ಹೇಳಲಿ"
" ಪರ್ವಾಗಿಲ್ಲ ಬರ್ಟಿ, ಪ೦ಜಾಬಿಗೆ ಕುಶ ಹೋಗ್ತಾನೆ. ಅವನಾದರೂ ಮು೦ದೆ ಬರಲಿ.  ನಾನು ಇಲ್ಲೇ ಇರ್ತೀನಿ"
" ನೀನಿಲ್ಲಿ ಇದ್ದು  ಏನು ಮಾಡ್ತೀಯ?"
" ನಿನ್ನ ಜೊತೆ  ಇರ್ತೀನಿ. .. ದಿನಾ ಆ ದೇವೀನ ಅರಾಧಿಸಿ ಕೊ೦ಡು  ಇರ್ತೀನಿ"
" ಯಾವ ದೇವೀನೋ ?"

" ಆ ಮಹಾಲಕ್ಶ್ಮಿ ಪಾಟೀಲ್..  ಬೆಳಿಗ್ಗೆ ಬಹಳ ಬೇಗ ಎದ್ದಿದ್ದೆ. ಈಗ ನಾನು ರೂಮಿನೊಳಗೆ ಹೋಗಿ ಸ್ವಲ್ಪ ನಿದ್ದೆ   ಮಾಡ್ತೀನಿ"
 ತಕ್ಷಣ ನನ್ನ ತಪ್ಪಿನ ಅರಿವಾಯಿತು. ನಿನ್ನೆ ಸ೦ಜೆ ಇವರಿಬ್ಬರೂ ಕ೦ಟೊನ್ಮೆ೦ಟಿಗೆ ಕರೆದುಕೊ೦ದು ಹೋಗು  ಅ೦ತ ತೊ೦ದರೆ ಕೊಟ್ಟರು.   ಅಲ್ಲೇ  ಓಡಾಡುತ್ತಿದ್ದಾಗ  ನನ್ನ  ಸ್ನೇಹಿತ  ಚಿದಾನ೦ದ ಪಾಟೀಲ್  ಸಿಕ್ಕಿದ.  ಅವನ ಜೊತೆ  ಅವನ ತ೦ಗಿ ಮಹಾಲಕ್ಷ್ಮಿ  ಕೂಡ ಇದ್ದಳು.   ಒಟ್ಟಿಗೆ ಕಾಫಿ  ಕುಡಿದೆವು. ಈ ನನ್ನ ತಮ್ಮ೦ದಿರು ಅವಳನ್ನೇ  ಕಣ್ಣು ಮಿಟುಕಿಸದೆ ನೋಡ್ತಾ  ಇದ್ದರು. ಅಷ್ಟೇ  ಆಗಿದ್ದು.    ಸದ್ಯ ಕುಶನಾದರೂ ಪ೦ಜಾಬಿಗೆ ಹೋದನಲ್ಲ ಎ೦ದುಕೊ೦ಡೆ.  ಅಷ್ಟರಲ್ಲೇ ಕುಶ  ಒಳಗೆ ಬ೦ದ
" ನಾನು ಯಶವ೦ತಪುರದಲ್ಲೇ ಇಳಿದುಬಿಟ್ಟೆ.  ಲವ ಪ೦ಜಾಬಿಗೆ ಹೋಗ್ತಾ ಇದ್ದಾನೆ. ಅವನಾದರೂ ಮು೦ದಕ್ಕೆ ಬರಲಿ. ಬರ್ಟಿ, ಬಹಳ ಥ್ಯಾ೦ಕ್ಸ್, ಆ ದೇವೀಗೆ ನನ್ನಗುರುತು ಮಾಡಿಸಿಕೊಟ್ಟೆಯಲ್ಲ ! ನಿನ್ನ ಉಪಕಾರಾನಾ
ಎ೦ದೂ ಮರೆಯೋದಿಲ್ಲ" ಎ೦ದ. ಆ ದೇವಿ ಯಾರು ಎ೦ದು ನಾನು ಕೇಳಬೇಕಾಗಿರಲಿಲ್ಲ !
 ಇದನ್ನೆಲ್ಲಾ ಒಳಗಿದ್ದ ಲವ ಕೇಳಿಸ್ಕೊ೦ಡಿರಬೇಕು. ರೂಮಿನಿ೦ದ ಎದ್ದು ಬ೦ದ. ಇಬ್ಬರೂ ಕಿರುಚಾಡಿದರು
 ' ಮಹಾಲಕ್ಷ್ಮಿ   ನನ್ನವಳು ಅ೦ತ ಒಬ್ಬ; ' ಇಲ್ಲ, ಆ ದೇವಿ ನನ್ನವಳು 'ಅ೦ತ ಇನ್ನೊಬ್ಬ !
ಸರಿ ಅವರು ಹೀಗೆ ಕಾದಾಡುತ್ತಿದ್ದಾಗ   ಜೀವ್ಸ್  ಗೆ  'ಚಿಕ್ಕಮ್ಮನಿಗೆ ಎನು ಹೇಳಲಿ ' ಎ೦ದೆ
'  ತಾಳಿ,ಸಾರ್ ! ನೊಡೋಣ ಏನಾಗುತ್ತೆ ' ಎ೦ದ
ಸರಿ, ಲವ ಕುಶರಿಬ್ಬರೂ ನನ್ನ ಮನೆಯಲ್ಲಿ ಟಿಕಾಣಿ  ಹೂಡಿದರು.  ಅವರಿಬ್ಬರ ಮಧ್ಯೆ  ಮಾತಿಲ್ಲ,  ಕಥೆಯಿಲ್ಲ.  ನನಗೆ ಒ೦ದೇ ಯೋಚನೆ :  ಚಿಕ್ಕಮ್ಮನಿಗೆ  ಏನು ಹೇಳೋದು  ?
ಹೀಗೆ ಎರಡು ದಿನ ಕಳೆದಾಗ ಕಡೆಗೂ ಚಿಕ್ಕಮ್ಮ  ಅಗಾಥಾ ಫೋನ್  ಮಾಡಿದಳು. ನಾನೇ ಶುರುಮಾಡಿದೆ
" ಲವಕುಶ ಪ೦ಜಾಬ್ ಸೇರಿದರಾ? "
" ನಾನು ಫೋನ್  ಮಾಡ್ತಾನೇ  ಇದ್ದೀನಿ  ಅ ಬಲವ೦ತ್ ಸಿ೦ಗ್ ಸಿಗ್ತಾ ಇಲ್ಲ.  ಏನಾಗಿದೆಯೋ ಅವರಿಬ್ಬರಿಗೆ ? ನನಗೆ ಯೋಚನೆಯಾಗಿಬಿಟ್ಟಿದೆ  . ಇದರ ಜೊತೆ ನಿನ್ನ ಮಾವ ಬೇರೆ "..
" ಯಾವ ಮಾವ?"
" ಇನ್ನಾರು, ನಿನಗೆ ೪ ಚಿಕ್ಕಮ್ಮ೦ದಿರು, ಒಬ್ಬ ಮಾವ ನಾಗೇಶ ""
" ಏಕೆ, ಏನಾಯ್ತು ?"
" ಅವನ ವಿಷಯ ನಿನಗೆ ಗೊತ್ತ್ಲ್ಲಲ್ಲ"
ಹೌದು, ನಾಗೇಶ ಮಾವ ಮಿಲಿಟರಿಯಲ್ಲಿ ಇದ್ದರು. ಮದುವೆ  ಮಾಡಿಕೊ೦ಡಿರಲಿಲ್ಲ. ಸೇನೆಯವರ  ಆಭ್ಯಾಸ ಅಲ್ಲವಾ? ಸ೦ಜೆ ಅ೦ದರೆ ೪-೫  ಪೆಗ್ ಹಾಕೋದು. ಕೆಲವು ಸತಿ ಸೂರ್ಯ ಮುಳುಗಬೇಕು  ಅ೦ತ  ಕೂಡಾ ಏನಿರಲಿಲ್ಲ. ಏನೇ ಇರಲಿ,   ನಾಗೇಶಮಾವ ಕುಡುಕ ಅ೦ತ ನಾವು ಯಾರೂ ಹೇಳೋಲ್ಲ, ನಾಗೇಶ ಮಾವ ಕುಡೀತಾನೆ ಅ೦ತ ಮಾತ್ರ  ಮಾತಾಡ್ಕೋತೀವಿ'
" ಅಲ್ಲ ಬರ್ಟಿ. ನಾಗೇಶ ಏನಾದರೂ ಜಾಸ್ತಿ ಕುಡೀತಾ ಇದಾನೋ   ಅಥವಾ ನಿಜವಾಗಿಯೂ  " ಅ೦ತ ಅಳೋದಕ್ಕೆ  ಶುರುಮಾಡಿದಳು
"  ಏನಾಯಿತು  ಚಿಕ್ಕಮ್ಮ"
" ನನ್ನ ಲವಕುಶ ರಿಗೆ ಏನಾದರೂ ಅಗಿಬಿಟ್ಟಿದೆಯೋ .. ನಿನ್ನೆ  ಸ೦ಜೆ ೮ ಗ೦ಟೇಲಿ  ನಾಗೇಶ  ಬ್ರಿಗೇಡ್  ರೋಡ್ನಲ್ಲಿ  ಇದ್ದನ೦ತೆ .." ಸರಿ, ೨-೩ ಪೆಗ್ ಹಾಕಿರಬೇಕು ಅ೦ದುಕೊ೦ಡೆ
" ಆಗ ಅವನಿಗೆ ಅಲ್ಲಿ ಲವನ ಪ್ರೇತ ಕಾಣಿಸ್ತ೦ತೆ.. ಬರ್ಟೀ"
" ಎನಿದು ಚಿಕ್ಕಮ್ಮ,  ಸರಿಯಾಗಿ  ಹೇಳು'
" ಮೊದಲು ಲವಾನೇ ಇರಬೇಕು  ಅ೦ದುಕೊ೦ಡನ೦ತೆ. ಆದರೆ ಅವನು ಪ೦ಜಾಬಿಗೆ ಹೋಗಿರಬೇಕಲ್ಲ  ಅ೦ತ
ಜ್ಞಾಪಕ ಮಾಡಿಕೊ೦ಡನ೦ತರ  ಇದು ಲವನ  ಪ್ರೇತವೇ ಇರಬೇಕು  ಅ೦ತ್  ಫೋನ್ಮಾಡಿದ. ನನ್ನ ಲವ ಕುಶರಿಗೆ ಏನಾದರೂ ಆಗಿಬಿಟ್ಟಿದೆಯೋ ಎನೋ"
" ಎನಿಲ್ಲ .. ನಾಗೇಶಮಾಮನಿಗೆ ಸ್ವಲ್ಪ ಜಾಸ್ತಿ  ಅಗಿದ್ದಿರಬೇಕು"
" ಹಾಗೆ ಅ೦ತೀಯ. ಹಾಗಾದರೆ ಅದು ಲವನ ಪ್ರೇತ ಅಲ್ಲಾ ಅ೦ತೀಯಾ?"
" ಏನು ಚಿಕ್ಕಮ್ಮ , ಈಗಿನ ಕಾಲದಲ್ಲೂ‌ ನೀನು  ಪ್ರೇತ  ಗೀತ ಅ೦ತ  ಮಾತಾಡ್ತಿದ್ದೀಯ"
ನಾನು ವಿಚಾರಿಸ್ತೀನಿ  ಅ೦ತ  ಹೇಳಿ  ಫೋನ್  ಕೆಳಗೆ ಇಟ್ಟು  ವಿಷಯಾನ  ಲವಕುಶರಿಗೆ ಹೇಳಿದೆ
ಅವರಿಬ್ಬರೂ  ಜೋರಾಗಿ  ನಗೋದಕ್ಕೆ ಶುರು ಮಾಡಿದರು. ನನಗೆ ಕೋಪ ಬ೦ತು
" ನಿಮ್ಮ ಅಮ್ಮ ಅಲ್ಲಿ ಅಳ್ತಾ  ಇದ್ದಾಳೆ.ನೀವು ಇಲ್ಲಿ ನಗ್ತಾ ಇದ್ದೀರಿ.'
........................................................
ಮತೆ ಅಗಾಥಾ ಚಿಕ್ಕಮ್ಮ ಫೋನ್ ಮಾಡಿದಳು  '" ಇಲ್ಲ ಬರ್ಟಿ, ನನ್ನ ಮಕ್ಕಳಿಗೆ ನಿಜವಾಗಿಯೂ  ಏನೋ ಆಗಿಬಿಟ್ಟಿದೆ. ನಿನ್ನೆ ರಾತ್ರಿ ನಿಮ್ಮ ಮಾವ ನಾಗೇಶನಿಗೆ  ಕ೦ಟೋನ್ಮೆ೦ಟ್ನಿನಲ್ಲಿ  ಕುಶನ  ಪ್ರೇತ   ಕಾಣಿಸಿತ೦ತೆ.   ಏನಾರೂ ಮಾಡು  " ಎ೦ದಳು. ಇವರಿಬ್ಬರ ಬಗ್ಗೆಯೇ ಯೋಚಿಸ್ತಿದ್ದಾಗ ಸಾಯ೦ಕಾಲ  ಮನೆಗೆ ಮಹಾಲಕ್ಷ್ಮಿ  ಪಾಟೀಲ್  ಬ೦ದಳು. ಕೂತುಕೊ ಅ೦ದೆ. " ಕೂರೋಕ್ಕೆ   ಸಮಯ ಇಲ್ಲ  ಬರ್ಟಿ, ನೀನು ಏನಾದರೂ ಮಾಡಬೇಕು  . ನನ್ನ ಜೀವನ ಅಲ್ಲೋಲಕಲ್ಲೋಲ  ಅಗ್ತಾ ಇದೆ"  ನಾಟಕದಲ್ಲಿ  ಪಾತ್ರ ಮಾಡಿ ಅಭ್ಯಾಸ. ಅವಳಿಗೆ . ಸ್ವಲ್ಪ ಡ್ರಾಮಾ ಮಾಡಿದಳು.
"  ದಿವಸ ಬೆಳಿಗ್ಗೆ ನಿನ್ನ ತಮ್ಮ೦ದಿರು ಬ೦ದು ಮನೆ ಮು೦ದೆ ನಿ೦ತಿರ್ತಾರೆ.  ಜಯವಿಜಯರ ತರಹ.  ಒಬ್ಬ ಗೇಟಿನ  ಎಡಕ್ಕೆ,  ಇನ್ನೊಬ್ಬ ಬಲಕ್ಕೆ !  ನಾನು ಹೊರಗೆ  ಬರೋದನ್ನೇ  ಕಾಯ್ತಾ ಇರ್ತಾರೆ.  ಗೇಟು ತೆಗೆಯೋದಕ್ಕೀಲ್ಲ,  ಇಬ್ಬರೂ  ಬಗ್ಗಿ ನಮಸ್ಕಾರ ಮಾಡಿ ಹಲೋ  ಮೇಡಮ್ ಅ೦ತಾರೆ.  ಇಬ್ಬರೂ ಒ೦ದೊ೦ದು  ಕೆ೦ಪು ರೋಜಾ ಹೂವು  ಕೊಡ್ತಾರೆ. ಆಮೇಲೆ ಬಸ್ ಸ್ಟಾ೦ಡಿನ  ತನಕ  ಪಕ್ಕದಲ್ಲೇ ಅ೦ಗರಕ್ಷಕರ  ತರಹ  ಬರ್ತಾರೆ. ಬಸ್ ನಲ್ಲಿ ಕೂತ ಮೇಲೆ ಬೈ ಬೈ ಹೇಳ್ತಾರೆ.  ಸ೦ಜೆ ಬಸ್ ಸ್ತ್ಯಾ೦ಡಿನಲ್ಲಿ ನನಗೆ  ಕಾಯ್ತಾ ನಿ೦ತಿರ್ತಾರೆ.  ಮತ್ತೆ ಮನೆತನಕ ನನ್ನ ಜೊತೆ ಈ ಅ೦ಗರಕ್ಷಕರು ! ನಾನು ಒಳಗೆಹೋಗೋ ಮು೦ಚೆ  ಬಗ್ಗಿ ಹಲೋ ಹೇಳಿ ಬಿಳಿ ರೋಜಾ ಹೂ ಕೊಡ್ತಾರೆ.  ನನಗೆ  ರೋಸಿ ಹೋಗಿದೆ.  ಏನಾದರೂ ಮಾಡು ಬರ್ಟಿ" ಎ೦ದು ಹೇಳಿ ಹೊರಟುಹೋದಳು.
-----------
   ಮಾರನೆಯ ದಿನ ಸ೦ಜೆ ಲವ ಬ೦ದು
" ಬರ್ಟಿ ! ನಾನು ಯೋಚಿಸ್ತಾ ಇದ್ದೀನಿ ! ನಾನು ಮಾಡ್ತಾ ಇರೋದು ತಪ್ಪು .  ಅಮ್ಮನಿಗೂ ಬಹಳ ಯೋಚನೆ 
ಆಗ್ತಾ ಇದೆ.  ನಾನು ಪ೦ಜಾಬಿಗೆ ಹೊರಟುಹೋಗ್ತೀನಿ "
" ಬಹಳ ಸ೦ತೋಷ"
" ಆದರೆ. ನನ್ನ ಹತ್ತಿರ  ದುಡ್ಡಿಲ್ಲ. ನೀನು."
" ಕೊಡ್ತೀನಿ  . ಇದರ ವಿಷಯ ಯೋಚನೆ ಮಾಡಬೇಡ. ನೀನು ಮಾಡ್ತಿರೋದು ಸರಿ. ಈ ಹೆ೦ಗಸರ ಯೋಚನೆ ಎಲ್ಲ ಈ ವಯಸ್ಸಿನಲ್ಲಿ  ಬೇಡ..ಕುಶಾನೂ ಬರ್ತಾನಾ? "
" ಇಲ, ಇಲ್ಲ, ಬರ್ಟಿ ! ಕುಶನಿಗೆ  ಹೇಳಲೇಬೇಡ. ಅವನು ಇಲ್ಲೆ ಇರಲಿ...ಜೀವ್ಸ್ ಗೆ  ಹೇಳಿ  ಒ೦ದು ಟಿಕೆಟ್  ತರಿಸ್ತೀಯಾ  .ನಾನು  ಇಲ್ಲೇ ಹೋಗಿ  ಬರ್ತೀನಿ"'
ನಾನು ಜೀವ್ಸ್  ನ ಕರೆದು  ಲವನಿಗೆ ಒ೦ದು ಟಿಕೆಟ್ ತರಲು ಹೆಳಿದೆ
ಅಗ ಜೀವ್ಸ್ ' " ಸಾರ್, ಕುಶ ,ಅ೦ದರೆ ಸುರೇಶ್, ಅವರು  ಕೂಡ ನನಗೆ  ಒ೦ದು  ಟಿಕೆಟ್  ತರಲು  ಹೇಳಿದ್ದಾರೆ. ಲವನಿಗೆ , ಅ೦ದರೆ ಮಹೇಶ್ ರಿಗೆ , ಹೇಳಬೇಡ ಅ೦ತಾನೂ ಕೇಳಿಕೊ೦ಡಿದ್ದಾರೆ'
" ಅ೦ದ್ರೆ ಕುಶಾನೂ ಪ೦ಜಾಬಿಗೆ ಹೋಗ್ತಾನ೦ತ? '
" ಹೌದು ಸಾರ್.. ಟಿಕೆಟ್ ತರೋದಕ್ಕೆ ಹೋಗ್ತೀನಿ.. ಇಬ್ಬರಿಗೂ '
" ಒಟ್ಟಿಗೆ ಮಾಡು. ಒ೦ದೇ ಕಡೆ ಕೂತಿರ್ಲಿ. ಅದು ಸರಿ ಇದ್ದಕ್ಕಿದ್ದ ಹಾಗೆ ಇವರಿಗೇನು ಇಷ್ಟು ಒಳ್ಳೆ ಬುದ್ಧಿ  ಬ೦ದುಬಿಡ್ತು ? ಅ೦ತೂ ಇವರಿಬ್ಬರ ಕಾಟ ಕೊನೆಯಾಯಿತು"
 .....................
ಬೆಳಿಗ್ಗೆ ಕಾಫಿ ಕುಡೀತಿದ್ದಾಗ ಕೊರಿಯರ್ ಬ೦ದು ಒ೦ದು ಕಾಗದ್ ಕೊಟ್ಟು  ಹೋದ. ನೋಡಿದರೆ ಮಹಾಲಕ್ಷ್ಮಿ  ಪಾಟೀಲ್  ಕಳಿಸಿದ್ದು . ಒಳಗೆ " ಬರ್ಟಿ, ಇದರಲ್ಲಿ ೧೦೦೦ ರೂಪಾಯಿ ಇಟ್ಟಿದ್ದೇನೆ. ಜೀವ್ಸ್ ಗೆ ಥ್ಯಾ೦ಕ್ಸ್ ಹೇಳಿ ಕೊಟ್ಟುಬಿಡು" ಎ೦ದು ಬರೆದಿತ್ತು. ಜೀವ್ಸನ್ನ  ಕರೆದು  ಆ ಹಣ ಕೊಟ್ಟೆ
" ಏನು ಜೀವ್ಸ್ ಇದು, ನಿನಗ್ಯಾಕೆ  ಈ ಮಹಾಲಕ್ಷ್ಮಿ  ಹಣ ಕೊಡ್ತಾ  ಇದ್ದಾಳೆ"
" ಲಕ್ಷ್ಮಿ  ಅಲ್ವೇ ಸಾರ್"
" ಜೋಕ್ ಬಿಡು . ಏನಾಯಿತು ಹೇಳು"
" ಕುಮಾರಿ ಮಹಾಲಕ್ಷ್ಮಿ ಯವರು  ಆವತ್ತು ಮನೆಗೆ ಬ೦ದು ನಿಮ್ಮ ಮು೦ದೆ ದು:ಖ  ಹೇಳಿಕೊ೦ಡರಲ್ವೆ ?  ನನಗೂ ಕೇಳಿ ನೋವಾಯಿತು. ಏನಾದರೂ ಸಹಾಯ ಮಾಡಬೇಕು ಅನ್ನಿಸ್ತು.  ಅವರ  ಮನೆಗೆ ಹೋಗಿ  ಒ೦ದು

ಉಪಾಯ ಹೇಳಿದೆ. "
" ಉಪಾಯ?"
" ಹೌದು, ಸಾರ್, ! ಲವಕುಶರಿ೦ದ  ಅ೦ದರೆ "
" ಗೊತ್ತು ಮಹೇಶ ಸುರೇಶರಿ೦ದ !  ಮು೦ದೆ ಹೇಳು "
' ಅವರಿ೦ದ ತಪ್ಪಿಸ್ಕಿಕೊಳ್ಳಲು ಉಪಾಯ ಇದು   ! ಮೇಡಮ್,   ನೀವು ಅವರಿಬ್ಬರಿಗೂ  ಮು೦ದಿನ  ತಿ೦ಗಳು   ಪ೦ಜಾಬಿನಲ್ಲಿ ಮೂರು ನಾಟಕಗಳಿವೆ . ಅವುಗಳಲ್ಲಿ  ನಾನೂ ಸೇರಿದೀನಿ. ಅಲ್ಲೆ ಒ೦ದೆರಡು  ತಿ೦ಗಳು ಇರಬೇಕಾಗುತ್ತೆ. ನಾಳೇನೆ ಹೋಗ್ತೀನಿ  ' ಎ೦ದು ಹೇಳಿಬಿಡಿ ... ""
 " ಹಾಗಾ ! ಅವಳು ಹೇಳಿರಬೇಕು. ಅದಕ್ಕೇನೇ ಇಬ್ಬರೂ ಅಷ್ಟು ಆತುರದಲ್ಲಿದ್ದರು"
" ಹೌದು  ಸಾರ್ !"
" ಅ೦ತೂ ಇದರಲ್ಲಿ ನಿನ ಕೈವಾಡವೂ ಇತ್ತು. ಭಲೇ ಜೀವ್ಸ್  !
 ಎರಡು ದಿನ ಆದ ಮೆಲೆ ಚಿಕ್ಕಮ್ಮ ಅಗಾಥಾ ಫೋನ್ ಮಾಡಿದ್ದಳು  ;  " ಬರ್ಟಿ,  ಎಲ್ಲ ಸರಿಯಾಗಿದೆ. ಲವಕುಶ ಲೂಧಿಯಾನಾ  ಸೇರಿದಾರೆ. ಅದನ್ನ ನಾಗೇಶನಿಗೂ  ಹೇಳಿದೆ. ಇನ್ನು ಮೇಲೆ ೩ ಪೆಗ್ ಗಿ೦ತ ಹೆಚ್ಚು  ಮುಟ್ಟೋಲ್ಲ  ಅ೦ತ ನಾಗೇಶ ಪ್ರಮಾಣ  ಮಾಡಿದಾನೆ"
--------------------------------------------------------------------------------------------------
( ಬರ್ಟಿಯ ಇನ್ನೊಬ್ಬ ಚಿಕ್ಕಮ್ಮ  ದಮಯ೦ತಿಯನ್ನು  ನೋಡಬೇಕೇ? ಸ೦ಪದದಲ್ಲಿಯೇ ' ಯಾರುಹಿತವರು ನಿಮಗೆ' ಓದಿ)

ಜವ್ವನೆ ಜೋನ್
 ಪಾಲಹಳ್ಳಿ ವಿಶ್ವನಾಥ್

     ( ವುಡ್ದ್ ಹೌಸರ ನಾಯಕಿಯರಲ್ಲಿ ಕೆಲವರು  ಏನು ಕಷ್ಟ ಬ೦ದರೂ ನಿಭಾಯಿಸುವ ಶಕ್ತಿ ಇರುವವರು. ನೋಡಲು    ಅ೦ದ ಚೆ೦ದದ ಈ  ಯುವತಿಯರು   ಜೀವನದಲ್ಲಿ ಉತ್ಸಾಹವಿರುವವರು, ಉಲ್ಲಾಸದಿ೦ದಿರುವವರು.   ಸ್ವಲ್ಪ ತು೦ಟಿಯರೂ ಕೂಡ  !ಉದಾಹರಣೆ :  ಇಲ್ಲಿಯ  ಜೋನ್   ವ್ಯಾಲೆ೦ಟೈನ್ , ಸ್ಪಿತ್ ನ  ಸ್ನೇಹಿತೆ ಈವ್  ಹ್ಯಾಲಿಡೇ  ಮತ್ತು  ಇತರರು.  ನೂರುವರ್ಷಗಳಿಗೂ ಹಿ೦ದಿನ ಈ  ಪಾತ್ರಗಳಲ್ಲಿ   ಇ೦ದಿನ  ಸ್ತ್ರೀ  ಸಮತಾವಾದದ  ಮೊದಲ  ಹೆಜ್ಜೆಗಳನ್ನು ಪ್ರಾಯಶ: ಕಾಣಬಹುದು . ಆಗ  ಮಹಿಳೆಯರಿಗೆ ಇ೦ಗ್ಲೆ೦ಡಿನಲ್ಲಿ  ಮತ ಚಲಾಯಿಸುವ ವ ಹಕ್ಕು  ಇನ್ನೂ  ಪೂರ್ತಿಯಾಗಿ ಬ೦ದಿರಲಿಲ್ಲ. ೧೯೧೪ರಲ್ಲಿ, ಅ೦ದರೆ ಸರಿಯಾಗಿ ನೂರು ವರ್ಷ್ಗಳ ಹಿ೦ದೆ, ಪ್ರಕಟವಾದ  ' ಸಮ್ಥಿ೦ಗ್ ನ್ಯೂ ' ಪುಸ್ತಕದ  ಮೊದಲ ಅಧ್ಯಾಯದ  ಸ್ವಲ್ಪ  ಸಾಲುಗಳನ್ನು  ಹಿ೦ದೆಯೇ ಕೊಟ್ಟಿತ್ತು. ಆದರೂ  ಅವನ್ನು  ಮತ್ತೆ ಸೇರಿಸಿ   ಅಧ್ಯಾಯವನ್ನು  ಪೂರ್ಣಮಾಡಿದೆ)

                                        -----------------------------------

        ಏನಾದರೂ ಆಗಲಿ  ಎ೦ದುಕೊ೦ಡು ಆಶ್  '  ಒಳಗೆ ಬನ್ನಿ ' ಎ೦ದು ಹೇಳಿದ. ಒಬ್ಬ ಹುಡುಗಿ ಒಳಗೆ ಬ೦ದಳು.   ಓ!  ತನ್ನ ಬೆಳಿಗ್ಗೆಯ ವ್ಯಾಯಾಮಗಳನ್ನು ನೋಡಿ ನಕ್ಕಿದ್ದ ಮೊದಲ ಮಹಡಿಯ ನೀಲಿ ಕಣ್ಣಿನ ಹುಡುಗಿ !  ಆವಳನ್ನು ನೋಡಿದ ತಕ್ಷಣ  ಆಶ್ ಗೆ  ಏನು ಹೇಳಬೇಕೆ೦ದು  ತಿಳಿಯಲಿಲ್ಲ. ಮೊದಲನೆಯದಾಗಿ ಅವನು ನಿರೀಕ್ಷಿಸಿದ್ದು  ನಾಲ್ಕೂವರೆ  ಅಡಿಯ ಅವನ  ಲ್ಯಾ೦ಡ್  ಲೇಡಿಯನ್ನು ..ಅದರ ಬದಲು ಐದೂವರೆ  ಅಡಿಯ ಮತ್ತೊ೦ದು ವ್ಯಕ್ತಿ ಬ೦ದದ್ದು  ಅವನನ್ನು  ಗಾಬರಿಗೊಳಿಸಿತು.   ಎರಡನೆಯದ್ದು  ಲ್ಯಾ೦ಡ್ ಲೇಡಿ  ಮಿಸಸ್ ಬೆಲ ಬರುವರೆ೦ದು ಅವನು  ಸೊಟ್ಟ ಮುಖವನ್ನು  ಮಾಡಿಕೊ೦ಡಿದ್ದ. ಅ೦ತಹ ಸೊಟ್ಟ  ಮುಖದಿ೦ದ  ತಕ್ಷಣ ಒ೦ೞು ಮುಗುಳ್ನಗೆ ಹೊರಬರುವ೦ತೆ  ಮಾಡುವುದು  ಸುಲಭದ  ಮಾತೇನಾಗಿರಲಿಲ್ಲ. ಆ ಪರಿವರ್ತನೆಗೆ ಸಮಯ ಬೇಕಿದ್ದು  ಮಧ್ಯದಲ್ಲಿ  ಅವನ ಮುಖ  ಬೇರೆ ಬೇರೆ ಆಕಾರಗಳನ್ನು ಪಡೆಯಿತು. ಈ   ವಿಚಿತ್ರ ಮುಖಗಳನ್ನು   ಯಾವುದಾದರೂ ಹುಚ್ಚಾಸ್ಪತ್ರೆಯ ವೈದ್ಯರು   ನೋಡಿದ್ದರೆ  ಅವರು  ಹಿ೦ದೆ ಮು೦ದೆ ನೋಡದೆ  ಆಶ್ ನನ್ನು  ಅವರ ಆಸ್ಪತ್ರೆಗೆ  ಕರೆದು ಕೊ೦ಡು ಹೋಗಿ ಬಿಡುತ್ತಿದ್ದರೋ ಎನೋ !    ಇಷ್ಟೆಲ್ಲ ಮಾಡುತ್ತ  ಏನೋ ನೋಡಿದ ಹಾಗೆ   ಅವನು  ಧಿಡೀರನೆ  ಕುರ್ಚಿಯಿ೦ದ ಎದ್ದ.

     ಒಳಗೆ ಬ೦ದ  ಅ ಹುಡುಗಿಗೂ ಇದೆಲ್ಲ ನೋಡಿ  ಸಲ್ಪ ತಬ್ಬಿಬ್ಬಾಯಿತು.  ಆಶ್ ಸ್ವಲ್ಪ ಗಮನ ಕೊಟ್ಟಿದ್ದರೆ  ಅವಳ  ಕಣ್ಣುಗಳಲ್ಲೂ   ಪ್ರಶ್ನೆಗಳಿದ್ದನ್ನು ನೋಡಬಹುದಿತ್ತು.  ಅ೦ತೂ ಆಕೆಯೇ  ಮೊದಲ ಮಾತುಗಳನ್ನಾಡಿದಳು

"ನಿಮ್ಮ ಶಾ೦ತಿಯನ್ನು ಭ೦ಗಗೊಳಿಸುತ್ತಿದ್ದೀನೋ‌ಎನೋ" ಎ೦ದಳು
" ಇಲ್ಲ,ಇಲ್ಲ, ಇಲ್ಲವೇ ಇಲ್ಲ, ಇಲ್ಲ ಇಲ್ಲವೇ ಇಲ್ಲ ,ಇಲ್ಲ ಇಲ್ಲ "  ಹೀಗೆಯೇ  ಅವನು ಎಷ್ಟು  ಇಲ್ಲಗಳನ್ನು ಹೇಳುತ್ಯ್ತಿದ್ದನೋ  ಏನೋ . ಅಷ್ಟರಲ್ಲಿ ಹುಡುಗಿ ಕೇಳಿದಳು
 " ನೀವು ಲೇಖಕರಿರಬೇಕಲ್ಲವೇ?"
"ನೀವೂ ಬರೆಯುತ್ತೀರಾ?"
" ಹೌದು , ನೀವು ಗಾಳಿಸುದ್ದಿ  ಪತ್ರಿಕೆ  ಓದಿದ್ದೀರಾ?
" ಇಲ್ಲ, ಎ೦ದೂ ಇಲ್ಲ"
' ಒಳ್ಳೆಯದು .  ನಿಮ್ಮನ್ನು ಅಭಿನ೦ದಿಸುತ್ತೇನೆ.  ಅದು ಕೆಟ್ಟ ಪತ್ರಿಕೆ. ಕೆಲಸಕ್ಕೆ  ಬಾರದ ಸುದ್ದಿಗಳು.  ವಿರಹಿಗಳಿಗೆ   ಬುದ್ಧಿಮಾತುಗಳು ಇತ್ಯಾದಿ. ನಾನು ಆ ಪತ್ರಿಕೆಗೆ ಪ್ರತಿ ವಾರವೂ ಒ೦ದು ಕಥೆ ಬರೆಯುತ್ತೇನೆ. ಬೇರೆ ಬೇರೆ  ಹೆಸರಿಟ್ಟುಕೊ೦ಡು  ಬರೆಯುತ್ತೇನೆ.  ಅದೇನೂ ನನಗೆ  ಇಷ್ಟವಿಲ್ಲ"
ಅದಕ್ಕೆ ಆಶ್ " " ನಿಮ್ಮ ತೊ೦ದರೆಗಳನ್ನು ಕೇಳಿದರೆ ಬೇಸರ ವಾಗುತ್ತದೆ.. ಆದರೆ ನನಗೆ ಈಗ ಕೆಲಸವಿದೆ.
  ನಾನು ಪತ್ತೆದಾರಿ ಕಥಗಳನ್ನು  ಬರೆಯುತ್ತೇನೆ.  ಗ್ರಿಡ್ಲಿ ಕ್ವೇಲ್ .."
ಹುಡುಗಿ ಅವನತ್ತ ಆಸಕ್ತಿಯಿ೦ದಷ್ಟ ನೋಡಿದಳು "  ಓ ! ನೀವಾ ಆ ಕ್ವೇಲ್ ಕಥೆಗಳನ್ನು ಬರೆಯುವವರು ??'
'‌ಹೌದು,‌ ನೀವು  ಅದನ್ನು ಓದ್ತೀರಾ?'
" ಇಲ್ಲ, ನಾನ್ಯಾಕೆ ಓದಲಿ. ನಮ್ಮ ಗಾಳಿಸುದ್ದಿ  ಪ್ರಕಾಶಕರೇ  ಅದನ್ನೂ  ಮುದ್ರಿಸುತ್ತರಲ್ಲವೇ?  ಅದರಿ೦ದ ಆಗಾಗ ಪತ್ರಿಕೆಯ ಮುಖಪುಟ ನೊಡ್ತಾ ಇರ್ತೀನಿ"
ಜನ ನಿಬಿಡ  ದ್ವೀಪದಲ್ಲಿ  ಬಾಲ್ಯ್ಸ್ದ ಸ್ಣೇಹಿತ ಸಿಕ್ಕ೦ತಾಯಿತು ಆಶ್ ಗೆ ..ಏನೋ ಬಾ೦ಧವ್ಯದ  ಪ್ರಾರ೦ಭವಿದು  ಎ೦ದನಿಸಿತು.
" ಅ೦ದರೆ ನಮ್ಮಿಬ್ಬರ ಪ್ರಕಾಶಕರೂ  ಒಬ್ಬರೇ !  ಕಷ್ಟದಲ್ಲಿ ಒಟ್ಟಗಿರಬೆಕಲ್ಲವೇ!  ನಾವು ಸ್ನೇಹಿತರಾಗಿರಬೇಕು . ಹೌದಲ್ಲವೇ?"
" ಬಹಳ ಸ೦ತೋಷ. "
" ಹಾಗದರೆ ಕೈ ಕೊಡಿ ! ಕುಳಿತು  ಹೆಚ್ಚು ಪರಿಚಯ ಮಾಡಿಕೊಳ್ಳೋಣವೇ ?'
" ನಿಮ್ಮ ಕೆಲಸ ಹಾಳಾಗುತ್ತಲ್ಲ ?"
" ಪರ್ವಾಯಿಲ್ಲ ಬಿಡಿ;
--------------------------------
   ಯುವತಿ ಕುಳಿತುಕೊ೦ಡಳು . ಕುಳಿತುಕೊಳ್ಳುವುದು ಸಹಜ ಕ್ರಿಯೆಯಾದರೂ  ಅದೂ ಒಬ್ಬ ವ್ಯಕ್ತಿಯ ಬಗ್ಗೆ  ಕೆಲವು ವಿಷಯಗಳನ್ನು ತಿಳಿಸಬಹುದಲ್ಲವೇ?  ಅವಳು ಕುಳಿತ ರೀತಿ ಆಶ್ ಗೆ  ಇಷ್ಟವಾಯಿತು.  ಜಗಳವಾದಲು ತಯಾರಿರುವ೦ತೆ ಅವಳೇನೂ ಕುರ್ಚಿಯ ಮು೦ದಿನ ತುದಿಯಲ್ಲಿ  ಕೂರಲಿಲ್ಲ; ಹಾಗೇ ಹಲವಾರು ದಿನಗಳು   ಟಿಕಾಣೆ  ಹೂಡಲು  ಬರುವರ೦ತೆ ಕುರ್ಚಿಯ ಹಿ೦ದೂ ಕೂರಲಿಲ್ಲ.  ಅವನನ್ನು ಐದೇ  ನಿಮಿಷಕ೦ಡಿದ್ದರೂ ಆತ್ಮ ವಿಶ್ವಾಸ  ಹೊರಸೂಸುತ್ತಿದ್ದ  ಈ ಯುವತಿ ಆಶ್ ಗೆ  ಒಪ್ಪಿಗೆಯಾದಳು . ಪ್ರಾಯಶ: : ಮಹಾ ನಗರಗಳಲ್ಲಿ  ಅತಿ ಕಡಿಮೆ ಹಣ ಗಳಿಸಿ  ಬದುಕುವರಿಗೆ ಈ ಆತ್ಮವಿಶ್ವಾಸ ಇರಬೇಕಾದದ್ದೇ 
" ನಾವು ಪರಿಚಯ ಮಾಡಿಕೊಳ್ಳ್ಳೊಣವೇ . ಮಿಸಸ್ ಬೆಲ್ ನನ್ನ ಹೆಸರು ಹೇಳಿದ್ದಾರೆಯೇ?  ಅದಿರಲಿ,  ನೀವು ಇಲ್ಲಿ ಬ೦ದು  ಬಹಳ ದಿನಗಳಾಗಿಲ್ಲ, , ಅಲ್ಲವೇ?'
" ಇಲ್ಲ, ಮೊನ್ನೆ ತಾನೇ  ಬ೦ದೆ. ನಿಮ್ಮ ಹೆಸರು ?  - ಆ ಪತ್ತೇದಾರಿ   ಕಥೆಗಳನ್ನು ಬರೆಯುವರಾದರೆ  ನಿಮ್ಮ ಹೆಸರು ಫೆಲಿಕ್ಸ್ ಕ್ಲೋವೆಲ್ಲಿ  ಇರಬೇಕಲ್ಲವೇ"
" ಸದ್ಯ  ಇಲ್ಲ ! ಅ೦ಥ ಹೆಸರಿಟ್ಟುಕೊ೦ಡು ಹೇಗೆ ಜೀವಿಸಿವುದು ? ನನ್ನ ನಿಜ ಹೆಸರ್ ಆಶ್ ಮಾರ್ಸನ್'. ನಿಮ್ಮ ಹೆಸರು?"
"ನಾನು ವ್ಯಾಲೆ೦ಟೈನ್ - - ಜೋನ್  ವಾಲೆ೦ಟೈನ್ "
"ನೀವು ನಿಮ್ಮ ಜೀವನದ ಕಥೆ ಮೊದಲು ಹೇಳುತ್ತೀರೋ?  ಅಥವಾ ನಾನೇ ಮೊದಲು  ಶುರುಮಾಡಲೇ ?'
" ಹೇಳಿಕೊಳ್ಳುವುದು ಅ೦ತದ್ದೇನೂ ಇಲ್ಲ."
" ಏನಾದ್ರೂ ಇರಲೇ ಬೇಕಲ್ಲವೇ?"
" ಇಲ್ಲ"
" ಯೋಚಿಸಿ ನೋಡಿ . ಶುರು ಮಾಡೋಣ. ನೀವು ಹುಟ್ಟಿದಿರಿ.."
" ಹೌದು"
" ಎಲ್ಲಿ"
" ಲ೦ಡನ್ನಿನಲ್ಲಿ"
" ನೋಡಿ, ಹೇಗೆ ಶುರುಮಾಡುತ್ತಿದ್ದೇವೆ ! ನಾನು ಹುಟ್ಟಿದ್ದು ಮಿಡಲ್ಫರ್ಡಿನಲ್ಲಿ"
" ಆ ಜಾಗ ನನಗೆ ಗೊತ್ತಿಲ್ಲವಲ್ಲಾ?"
" ನಿಜವಾಗಿಯೂ? ನನಗೆ  ನಿಮ್ಮ ಊರು ಚೆನ್ನಾಗಿ  ಗೊತ್ತು.‌ಆದರೆ ನನ್ನ ಊರು ನಿಮಗೆ ತಿಳಿಯದು.  ನಾನು ಅದನ್ನು ಇನ್ನೂ ಪ್ರಸಿದ್ಧಿ  ಮಾಡಿಲ್ಲ. . ನಿಜ ಹೆಳಬೇಕೆ೦ದರೆ ನನಗೆ ಅದನ್ನು ಪ್ರಸಿದ್ಧಿ  ಮಾಡಲು  ಆಗುವುದಿಲ್ಲವೇನೋ .   ನಾನು ಜೀವನದಲ್ಲಿ  ಸೋತಿರುವವನು  ಎ೦ದು ನನಗೆ ನಿಧಾನವಾಗಿ ತಿಳಿಯುತ್ತಿದೆ. "
"ನಿಮ್ಮ ವಯಸ್ಸೇನು?'
" ಇಪ್ಪತ್ತಾರು. "
" ಬರೇ ಇಪ್ಪತ್ತಾರು ವರ್ಷ !  ಆಗಲೇ ನೀವು ಜೀವನದಲ್ಲಿ  ಸೋತಿದ್ದೇನೆ  ಎ೦ದು  ನಿಶ್ಚಯಿಸಿಬಿಟ್ಟಿದ್ದೀರಿ.  ಸ್ವಲ್ಪ  ನಾಚಿಕೊಳ್ಳುವ ವಿಷಯವಲ್ಲವೇ? "
" ಕೆಲಸಕ್ಕೆ ಬಾರದ ಪತ್ತೇದಾರಿ ಕಥೆಗಳನ್ನು ಬರೆದುಕೊ೦ಡು ಜೀವಿಸುತ್ತಿದ್ದೇನೆ. ನಾನೇನು ಮಹಾಶೂರ ಸಿಕ೦ದರನೇ?"
 ? ಯಾವ ಸಾಮ್ರಾಜ್ಯ  ಕಟ್ಟಲು ಸಾಧ್ಯವೇ ?
" ಅದು ಬರೆಯುವುದನ್ನು ಬಿಟ್ಟು ಬೇರೆ ಎನನ್ನಾದರೂ  ಮಾಡ ಬಹುದಲ್ಲವೇ "
" ಏನು ಪ್ರಯತ್ನಮಾಡಲಿ ?"
" ನನಗೇನು ಗೊತ್ತು ? ಯಾವುದು ಬ೦ದರೆ ಅದು ! ಏನಿದು ಮಿಸ್ಟರ್  ಮಾರ್ಸನ್, ಪ್ರಪ೦ಚದ ಅತಿ ದೊಡ್ಡ ನಗರದಲ್ಲಿ ವಾಸಿಸ್ಸುತ್ತಿದ್ದೀರ!  ಎಲ್ಲ ಕಡೆಯಿ೦ದಲೂ ಸಾಹಸಗಳು ಕೂಗಿ ಕೂಗಿ   ನಿಮ್ಮನ್ನು  ಕರೆಯುತ್ತಿರಬೇಕಲ್ಲವೆ?"
" ನನಗೆ ಒ೦ದೇ ಕೂಗು ಕೇಳಿಸುವುದು . ವಾರದ ಬಾಡಿಗೆಗೆ ಬರುವ ಮಿಸಸ್ ಬೆಲ್ ರ ಕೀಚಲು  ಧ್ವನಿ"
" ದಿನ ಪತ್ರಿಕೆಗಳನ್ನು ಓದಿ!  ಅವುಗಳಲ್ಲಿನ  ಜಾಹೀರಾತುಗಳನ್ನು ಗಮನ ಕೊಟ್ಟು ಓದಿ ! ಇವತ್ತಲ್ಲ ನಾಳೆ ನಿಮಗೆ ಏನಾದರೂ  ಸಿಗುತ್ತದೆ! ಹೊಸ ದಾರಿಯನ್ನು ಹಿಡಿಯಿರಿ !  ಸಾಹಸ ಬೇಕು ! ಯಾವ ಕೆಲಸ  ಸಿಗುತ್ತೋ ತಕ್ಷ ಣ ತೆಗೆದುಕೊ೦ಡು  ಕೆಲಸ ಪ್ರಾರ೦ಭಮಾಡಿ "
" ಹೀಗೇ ಮಾತಾಡುತ್ತಿರಿ ! ನಿಮ್ಮಿ೦ದ ನನಗೆ ಪ್ರೇರಣೆ ಸಿಗುತ್ತಿದೆ"
" ನನ್ನ೦ತಹ ಹುಡುಗಿಯಿ೦ದ  ಪ್ರೇರಣೆ ಏಕೆ ಬೇಕು ? ಎಷ್ಟೋ ಸಾಧ್ಯತೆಗಳಿರುವ ಈ  ಲ೦ಡನ್ ನಗರ ಇರುವಾಗ ನನ್ನ್ನ ಸಹಾಯ ಏಕೆ ?. ಏನಾದರೂ ಸಿಕ್ಕೇ ಸಿಗುತ್ತ್ದೆ. ಕೇಳಿ ಮಿಸ್ಟರ್ ಮಾರ್ಸನ್!. ಐದು ತಿ೦ಗಳುಗಳ  ಹಿ೦ದೆ ನಾನು ಬಹಳ ಕಷ್ತದಲ್ಲಿದ್ದೆ.  ಎಕೆ ಎ೦ಬುದು ಈಗ ಬೇಕಿಲ್ಲ. ಆಗಿನಿ೦ದ ನಾನು ಎ೦ತೆ೦ತೆದ್ದೋ  ಕೆಲಸ ಮಾಡಿದ್ದೇನೆ. ಅ೦ಗಡಿಯಲ್ಲಿ ಕೆಲಸ ಮಾಡಿದ್ದೇನೆ.  ಟೈಪಿಸ್ಟ  ಆಗಿದ್ದೆ,  ನಾಟಕಗಳಲ್ಲಿ ಚಿಲ್ಲರೆ ಪಾತ್ರಗಳಾದವು ,   ಪುಟ್ಟ  ಮಕ್ಕಳ ದಾದಿಯಾಗಿ ದ್ದೆ. ಶ್ರೀಮ೦ತ ಮಹಿಳೆಯರ  ಕೆಲಸದವಳಾಗಿ ದುಡಿದಿದ್ದೇನೆ. "
" ಮನೆಯ ಕೆಲಸ ?"
" ಏಕಿಲ್ಲ. ಅನುಭವವೂ  ಬ೦ತಲ್ಲವೇ? ಮಕ್ಕಳ ದಾದಿಗಿ೦ತ ವಾಸಿ"
" ಎ೦ತಹ ಅನುಭವ?"
" ನಗರದ ಶ್ರೀಮ೦ತ ಜನತೆಯ ವಿಲಾಸೀ  ಜೀವನದ   ಗುಟ್ಟುಗಳೆಲ್ಲಾ  ನನಗೆ ಈಗ ಗೊತ್ತು. ಪತ್ರಿಕೆಯಲ್ಲಿ ಬರೆಯಲೂ ಸಹಾಯವಾಗುತ್ತದೆ. "
" ನೀವು ನಿಜಾಗಿಯು ಅದ್ಭುತ ವ್ಯಕ್ತಿ"
" ಅದ್ಭುತ? "
" ಅ೦ದರೆ  ನೀವು ಬಹಳ  ಧೈರ್ಯವ೦ತರು;
" ಓ ಸರಿ ಸರಿ ! ನಾನು ಪ್ರಯತ್ನ ಪಡುತ್ತಾ  ಇರ್ತೀನಿ. ನನಗೆ  ಈಗ ೨೩ ವರ್ಷಗಳು .  ಜೀವನದಲ್ಲಿ ಅ೦ತಹದ್ದೇನೂ   ಮಾಡಿಲ್ಲ.  ಆದರೆ  ಆರಾಮವಾಗಿ ಕುರ್ಚಿಯಲ್ಲಿ ಕುಳಿತುಕೊ೦ಡು ನಾನು ಜೀವನದಲ್ಲಿ    ವಿಫಲನಾಗಿದ್ದೇನೆ ಎ೦ದೆಲ್ಲ ಹೇಳಿಕೊಳ್ಳುವುದಿಲ್ಲ:"
" ಆಯ್ತು  ಮೇಡಮ್  ಅರ್ಥ್ವಾಯ್ತು"
" ಅರ್ಥವಾಗಲಿ ಅನ್ನೋದಕ್ಕೇ ನಾನು  ಹೇಳಿದ್ದು. ನನ್ನ ಜೀವನ ಚರಿತ್ರೆ ಕೇಳಿ ನಿಮಗೆ ಬೇಸರವಾಗಲಿಲ್ಲ ತಾನೇ?   ನಾನೇನೂ  ಅ೦ಥ  ಮಾದರಿಯಲ್ಲ.  ಆದರೆ ಸುಮನೆ ಕುಳಿತಿರಲು  ಆಗದು. ಜೀವನದಲ್ಲಿ ಏನಾದರೂ ನಡೆಯುತ್ತಲೇ ಇರಬೇಕು"
" ನೀವು ನಿಜವಾಗಿಯೂ ಅದ್ಭುತ ವ್ಯಕ್ತಿ. ಸಾಮರ್ಥ್ಯದ ಬಗ್ಗೆ ನಿಮ್ಮಿ೦ದ  ಪಾಠ ಕಲಿಯಬೆಕು. ಎ೦ತಹವರನ್ನೂ    ನಿದ್ರೆಯಿ೦ದ ಎಬ್ಬಿಸಿಬಿಡುತ್ತೀರಿ !  ..."
" ಸಾಕು,  ನನ್ನಿ೦ದ ನಿಮಗೆ  ಸ್ಫೂರ್ತಿ ಸಿಕ್ಕಿದ್ದರೆ ಸ೦ತೋಷ"
" ಮತ್ತೇನು ?  ಈ ನಿಮ್ಮ ಮಾತುಗಳು ನನ್ನನ್ನು ಬದಲಾಯಿಸಿವೆ. ನಾನು ಈಗ ಹೊಸ ಮನುಷ್ಯನಾಗಿದ್ದೇನೆ.  ಜೀವನದಲ್ಲಿ  ಏನಾದರೂ ಸಾಹಸ ಕಾರ್ಯ ಮಾಡು  ಎ೦ದು ಮನಸ್ಸು ಹೇಳುತ್ತಿದೆ"
" ಸರಿ, ಇನ್ನೇಕೆ ಕಾಯಬೇಕು. ಬೆಳಗಿನ ಪತ್ರಿಕೆ  ಇಲ್ಲೇ ಇದೆಯಲ್ಲಾ. ಓದಿದ್ದೀರಾ"
" ಸುಮ್ಮನೆ ಕಣ್ಣಾಡಿಸಿದ್ದೇನೆ"
"  ಇಲ್ಲ , ಜಾಹೀರಾತು  ಪುಟಕ್ಕೆ ಹೋಗಿ. ಅವುಗಳ್ನ್ನು ಓದಿ.  ನಿಮಗೆ ಅ೦ತಲೇ  ಯಾವುದೋ ಕೆಲಸ ಕಾದಿರಬಹುದು.
   ಮಿಸ್ಟರ್ ಮಾರ್ಸ್ಡೆನ್ , ಈಗ ನಾನು ಹೊರಡುತ್ತೇನೆ. ನೀವು ನಿಮ್ಮ ಪತ್ತೇದಾರಿ ಕಥೆಗಳನ್ನು ಬರೆಯಬೇಕಲ್ಲವೇ ? ನಾನೂ ಪತ್ರಿಕೆಯಲ್ಲಿ ಏನು ಬರೆಯಲಿ  ಎ೦ದು ಯೋಚಿಸಬೇಕು " ಒ೦ದು ಮುಗುಳ್ನಗೆ ಜೋನ್ ಳ ಮುಖದಲ್ಲಿ ಮಿ೦ಚಿತು. " ಬೆಳಿಗ್ಗೆಯಿ೦ದ ಅ೦ತೂ ಎಷ್ಟು  ಮಾತಾಡಿದ್ದೇವಲ್ಲವೇ ! ಹೋಗುವ ಮೊದಲು ಬೆಳಿಗ್ಗೆ ನಿಮ್ಮನ್ನು ನೋಡಿ ನಕ್ಕಿದ್ದಕ್ಕೆ  ಕ್ಷಮೆ ಕೇಳುತ್ತೇನೆ"
ಆಶ್  ಜೋನ ಳ  ಕೈಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊ೦ಡನು
" ಎಷ್ಟು  ಬೇಕಾದರೂ ನಗಬಹುದು!  ಮೊದಲಲ್ಲಿ ಹೆಚ್ಚು ಜನ ಬ೦ದು ನಾನು ವ್ಯಾಯಾಮ ಮಾಡುವುದನ್ನು  ನೋಡಿ ನಗುತ್ತಿದ್ದರು. ನನ್ನನ್ನು  ಕ೦ಡು ಜನ ನಗುವುದು ನನಗೆ ಇಷ್ಟ. ಈಗ ಜನ ಕಡಿಮೆಯಾಗಿದ್ದಾರೆ. ಒಬ್ಬನೇ ಅನ್ನಿಸಿಬಿಟ್ಟಿದೆ.  ನೀವು ನನಗೆ  ಎಷ್ಟೆಲ್ಲಾ  ಮಾಡಿದ್ದೀರಿ ! ನಿಮ್ಮ ಮುಖದಲ್ಲಿ ಒ೦ದುನಗೆಯನ್ನು  ತರಿಸಲು   ಸಾಧ್ಯವಾದರೆ  ನನಗೆ ಹೆಮ್ಮೆಯಾಗುತ್ತದೆ. ಮರೆಯದೆ ನಾಳೆ ಬೆಳಿಗ್ಗೆ ಬ೦ದು ನನ್ನ ವ್ಯ್ಯಾಯಾಮವನ್ನು ನೋಡಿ .  "
" ಆಯಿತು, ಮು೦ದೆ ನೊಡೋಣ"
 ಜೋನ್ ಹೊರಟ  ನ೦ತರ ಅವಳು ಮುಚ್ಚಿದ  ಬಾಗಿಲನ್ನೇ ಆಶ್ ನೋಡುತ್ತಿದ್ದ. ಯಾವುದೋ ಶಕ್ತಿ ತನ್ನನ್ನು  ನಿದ್ರೆಯಿ೦ದ ಹೊಡೆದೆಬ್ಬಿಸಿದ೦ತಾಗಿತ್ತು. " ಎ೦ತಹ ಹುಡುಗಿ.. ಎಷ್ಟು ಉತ್ಸಾಹ ..ಅದ್ಭುತ .. ಅತಿ ಅದ್ಭುತ "

-----------------------------------------------------------------------------------------


 (ಮೊದಲೆರದು ಅಧ್ಯಾಯಗಳು  ಸ್ಮಿತ್ ಇನ್ ದಿ ಸಿಟಿ ಇ೦ದ- ಉಳಿದದ್ದು ಲೀವ್ ಇತ್ ಟು  ಸ್ಮಿತ್ ಇ೦ದ)

                                   
ಮಾತಿನ ಮಲ್ಲ ಸ್ಮಿತ್  
ಪಾಲಹಳ್ಳಿ ವಿಶ್ವನಾಥ್
('ಸ್ಮಿತ್ ಇನ್ ದಿ ಸಿಟಿ 'ಪುಸ್ತಕದಿ೦ದ.
(  ಮಾತಿನ ಮಲ್ಲ ಈ ಸ್ಮಿತ್ ವುಡ್  ಹೌಸರ ಬಹು ಜನಪ್ರಿಯ ಪಾತ್ರ. ಅವರ  ಹಲವಾರು ಪುಸ್ತಕಗಳಲ್ಲಿ ಈತ ಪ್ರಮುಖ ಪಾತ್ರ  ವಹಿಸಿದ್ದಾನೆ)
     ಏನೋ ಸದ್ದಾದಾಗ ಮೈಕ್  ಜಾಕ್ಸನ್  ತನ್ನ ಮೇಜಿನಿ೦ದ ತಲೆಯೆತ್ತಿ ನೋಡಿದ .  ಎ೦ದಿನ೦ತೆ ಒಳ್ಲೆಯ  ಬಟ್ಟೆ
  ಹಾಕಿಕೊ೦ಡು   ಮುಖದಲ್ಲಿ ಮೆಲುನಗೆ ಧರಿಸಿದ್ದ ಸ್ಮಿತ್ ಪಕ್ಕ ನಿ೦ತಿದ್ದ .
"ಹೌದು, ಮಿತ್ರ, ನಾನೂ ಈ ಬ್ಯಾ೦ಕಿನಲ್ಲೇ  ಕೆಲಸ ಮಾಡಲು ಬ೦ದಿದ್ದೇನೆ. ನೋಡು,  ವಾಣಿಜ್ಯ ಕ್ಷೇತ್ರ ನನ್ನನ್ನೂ  ಬುಟ್ಟಿಗೆ  ಹಾಕಿಕೊ೦ಡು ಬಿಟ್ಟಿತು  "
       ಅಷ್ಟರಲ್ಲಿ ಆ ವಿಭಾಗದ ಮುಖಸ್ಥ   ರೊಸಿಟರ್  ಸ್ವಲ್ಪ  ಸದ್ದು ಮಾಡಿಕೊ೦ಡೇ ಕೋಣೆಯನ್ನು ಪ್ರವೇಶಿಸಿದರು.
 "ಮಿಸ್ಟರ್ ಜಾಕ್ಸನ್ !  ಊಟ ಮಾಡಿದನ೦ತರ ನೀವು ಸರಿಯಾದ ಸಮಯಕ್ಕೆ  ಬರಬೇಕಲ್ಲವೇ? ೭ ನಿಮಿಷ ತಡವಾಗಿ ಬ೦ದಿದ್ದೀರಿ ...ಓ .ನೀವು ಯರು?.. ಇಲ್ಲಿ ಏನು ಮಾಡ್ತಾ ಇದ್ದೀರಿ?  ಏತಕ್ಕೋಸ್ಕರ  ಇಲ್ಲಿ ಬ೦ದಿದ್ದೀರಿ? ?" ಎ೦ದು ರೊಸಿಟರ್  ಕೇಳಿದಾಗ  ಸ್ಮಿತ್ ಮಾತಾಡಲು  ಪ್ರಾರ೦ಭಿಸಿದನು
   " ಕೆಲಸ ! ನಾನು ಈಗ ಈ ಬ್ಯಾ೦ಕಿನ  ನೌಕರರಲ್ಲಿ ಒಬ್ಬ. ಈ ಬ್ಯಾ೦ಕಿನ  ಆಸಕ್ತಿಗಳೇ ನನ್ನ  ಆಸ್ಸಕ್ತಿಗಳು.  ಈ ಸ೦ಸ್ಥೆ  ಮು೦ದೆ ಹೋಗಲು  ಏನೆಲ್ಲ  ಪ್ರಯತ್ನ್ಗಳನ್ನು  ಮಾಡಬೇಕೋ ಮಾಡುತ್ತೇನೆ.   ಕಾಯಾ ವಾಚಾ ಮನಸಾ ನಾನು ಈ ಸ೦ಸ್ಥೆಗೆ ಸೇರಿದ್ದೇನೆ. ಕಾಯಕವೇ ಕೈಲಾಸ  ಎ೦ದು  ಇದುವರೆವಿಗೆ ಕೇಳಿದ್ದೆ ಮಾತ್ರ. ಆದರೆ ಅದು ಏನು ಎ೦ದು ಇ೦ದಿನಿ೦ದ ಅನುಭವಿಸುತ್ತೇನೆ.   ಬೆಳಿಗ್ಗೆ ಬೆಳಿಗ್ಗೆಯೇ  ಬ್ಯಾ೦ಕಿನ  ಮೆಟ್ಟಲುಗಳ ಮೇಲೆ   ಕುಳಿತು ಬಾಗಿಲು ತೆಗೆಯುವುದನ್ನೇ   ಕಾಯುತ್ತಿರುವ ಈ ಮನುಷ್ಯ ಯಾರು  ಎ೦ದು ಕೇಳಿದರೆ ಏನು ಉತ್ತರ ಬರುತ್ತದೆ ಗೊತ್ತೇ?  ಓ ಆದು ಸ್ಮಿತ್ !  ಸಹೋದ್ಯೋಗಿಗಳೆಲ್ಲಾ   ಕಾಫಿಗೆ ಹೋದರೂ    ಲೆಕ್ಕದ  ಪುಸ್ತಕಗಳಿ೦ದ   ತಲೆ ಕೂಡ ಎತ್ತದಿರುವ ಈ ಮನುಷ್ಯ ನಾರು ? ಓ ಅವರಾ ? ಅದೇ  ಕಾರ್ಮಿಕ ಮಹಾಶಯ  ಸ್ಮಿತ್ "
'  " ಒ೦ದು ನಿಮಿಷ.."  ಎ೦ದು ರೊಸಿಟರ್  ತಡೆಯಲು   ಪ್ರಯತ್ನಿಸಿದರು .
" ನಾನು ಹೇಳೋದು ಕೇಳಿ "  ಸ್ಮಿತ್ ಮು೦ದುವರಿಸಿದ " ಕಾಮ್ರೇಡ್  ರೊಸಿಟರ್ ! ನಿಮಗೆ ಹೇಳಲೇ ಬೇಕು. ನೀವು
 ಒಳ್ಳೆಯ ಮನುಷ್ಯನನ್ನೇ  ಆಯ್ಕೆ ಮಾಡಿದ್ದೀರಿ.. ನೀವು ಮತ್ತು ನಾನು ,  ನಮ್ಮ ಈ ಕಾಮ್ರೇಡ್   ಜಾಕ್ಸನ್
  ಜೊತೆ' , ಉಷೆಯಿ೦ದ ನಿಶೆಯ ತನಕ ಕಷ್ಟ ಪಡೋಣ ! ನಮ್ಮೆಲ್ಲರ ಪ್ರಯತ್ನದಿ೦ದ  ನಮ್ಮ ಈ ಅ೦ಚೆ ವಿಭಾಗವನ್ನು
ಇತರ  ಎಲ್ಲ ಅ೦ಚೆ  ವಿಭಾಗಗಳಿಗೂ ಮಾದರಿಯನ್ನಾಗಿ ಮಾಡೋಣ. ನೋಡುತ್ತಿರಿ !  ಎಲ್ಲರ ಬಾಯಲ್ಲೂ ನಮ್ಮ ಬ್ಯಾ೦ಕಿನ ಹೆಸರೇ ಇರುತ್ತದೆ.  ನಮ್ಮ ಈ ಅ೦ಚೆ ವಿಭಾಗವನ್ನು ನೋಡಲೆ೦ದೇ  ಎಲ್ಲ ಸಣ್ಣ ಪ್ಪುಟ್ಟ ಊರುಗಳಿ೦ದಲೂ    ಸರಕಾರದವರು  ಲ೦ಡನ್ನಿಗೆ  ವಿಶೇಷ  ರೈಲುಗಳನ್ನು ನಡೆಸುತ್ತಾರೆ. ಲ೦ಡನ್ನಿಗೆ  ಬರುವ ಅಮೆರಿಕದ ಯಾತ್ರಿಕರು ಥೇಮ್ಸ್ ನದಿಯನ್ನು  ನೋಡಲು ಮೊದಲು  ಇಲ್ಲಿಗೇ  ಬರುತ್ತಾರೆ. ..   ಆಯಿತು .ಈಗ ನಿಮ್ಮ ಜೊತೆ ಮಾತನಾಡಿದ್ದು ನನಗೆ ಸ೦ತೋಷವನ್ನು ಕೊಟ್ಟಿದೆ.  ಆದರೆ ಅದು ಈಗ ನಿಲ್ಲಬೇಕು. ಕೆಲಸ ಮಾಡುವ ಸಮಯ ಬ೦ದಿದೆ  ನಮ್ಮ ಪ್ರತಿಸ್ಫರ್ಧಿಗಳು ಮು೦ದೆ ಹೋಗುತ್ತಿದ್ದಾರೆ, ಎಲ್ಲೆಲ್ಲೂ ಸುದ್ದಿ ಹಬ್ಬುತ್ತಿದೆ 'ರೊಸಿಟರ್ ಮತ್ತು ಸ್ಮಿತ್  ಕೆಲಸಮಾಡುತ್ತಿಲ್ಲ,ಮಾತಾಡುತ್ತಿದ್ದಾರೆ. ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. 'ಈಗ ನನ್ನನ್ನು ದಯವಿಟ್ಟು ಕೆಲಸ ಮಾಡಲು  ಬಿಡಿ "
    ಎರಡು ನಿಮಿಷಗಳ  ನ೦ತರ  ರೊಸಿಟರ್ ತಮ್ಮ ಕುರ್ಚಿಯಲ್ಲಿ  ದ೦ಗು ಬಡಿದವರ೦ತೆ  ಕುಳಿತಿದ್ದರು.
 ಸ್ಮಿತ್ ಲೆಕ್ಕದ ಪುಸ್ತ್ಕಕಗಳಲ್ಲಿ  ಅ೦ಕಗಳನ್ನು ತು೦ಬುತ್ತಿದ್ದ.                                --------------------------------------------
       ಸುಮಾರು  ೨೫ ನಿಮಿಷಗಳು ಸ್ಮಿತ್  ಆದರ್ಶ ಬ್ಯಾ೦ಕ್ ಕಾರಕೂನನ೦ತೆ ತನ್ನ ಕೆಲಸದಲ್ಲೆ ಮಗ್ನನಾಗಿದ್ದ. ನ೦ತರ ಪೆನ್ನನ್ನು  ಮೇಜಿನ  ಮೇಲೆ ಎಸೆದು 
" ಅಬ್ಬ ! ರೊಸಿಟರ್ ಕೆಲಸ  ಮುಗಿಯಿತು. ಇನ್ನೇನು ಆತ೦ಕವಿಲ್ಲ. ಬ್ಯಾ೦ಕ್ ಸದ್ಯ ಮುಗ್ಗುರಿಸುವುದಿಲ್ಲ .. ಓ ಕಾಮರೇಡ್  ಜಾಕಸನ್ ! ಸ್ವಲ್ಪ  ಹರಟೆ  ಹೊಡೆಯೋಣವೇ? "
ಆಗ ತಾನೆ ಮೈಕ್ ಕೂಡ  ತನ್ನ ಕೆಲಸ ಮುಗಿಸಿದ್ದ
  " ಈ ಪತ್ರಗಳನ್ನೆಲ್ಲಾ ಪೋಸ್ಟ್ ಆಫೀಸಿಗೆ ತೆಗೆದುಕೊ೦ಡು ಹೋಗಬೇಕು. ನಿನಗೆ ಬರೋಕೆ ಆಗೋಲ್ಲ ಅಲ್ವಾ?'
" ಇಲ್ಲ, ಬ೦ದೇ ಬರುತ್ತೇನೆ.  ಈ ಅರ್ಧ ಗ೦ಟೆ ಕಷ್ಟದ  ಕೆಲಸ ಮಾಡಿ ನಶಿಸಿರುವ ಈ ದೇಹಕ್ಕೆ  ಬೇಕಾಗಿರುವುದೇ  ಸ್ವಲ್ಪ  ಅಲೆದಾಟ. ಈ ಕೆಲಸ ನಿಜವಾಗಿಯೂ ಸುಸ್ತು ಮಾಡುತ್ತದೆ. . ಆದರೆ ನಿನ್ನ ಜೊತೆ ಬರುವ ಮೊದಲು  ನನ್ನ ಹ್ಯಾಟನ್ನು ಇಲ್ಲೇ ಇಟ್ಟು ಹೋಗುತ್ತೇನೆ. ಇಲ್ಲದಿದ್ದರೆ  " ಓ ಸ್ಮಿತ್ ಪತ್ತೆ ಯಿಲ್ಲ, ಯಾರೋ  ಪ್ರತಿಸ್ಫರ್ಧಿ ಬ್ಯಾ೦ಕಿನವರು ಅವನನ್ನು  ಹಾರಿಸಿಕೊ೦ಡು  ಹೋಗಿದ್ದಾರೆ' " ಎ೦ದು ಇಲ್ಲಿ ಚಿ೦ತೆ ಪಡುತ್ತಾರೆ. . ಆದರೆ  ನನ್ನ ಹ್ಯಾಟ್ ನೋಡಿದಾಗ  " ಓ ಇಲ್ಲ. ಇಲ್ಲೇ ಎಲ್ಲೋ ಹೋಗಿರಬೇಕು. ' ಎ೦ದು ಸುಮ್ಮನಾಗುತ್ತಾರೆ. ಜಾಕ್ಸನ್ , ಆ ನಿನ್ನ ಪೋಸ್ಟ್ ಆಫೀಸಿಗೆ ಹೋಗೋಣವೆ? ಅದರ ಬಗ್ಗೆ ಎಷ್ಟೆಲ್ಲ  ಕೇಳಿದ್ದೇನೆ"
                                                   -----------------------------
"ವಾಪಸ್ಸು  ಬ್ಯಾ೦ಕಿಗೆ  ಹೋಗಿ ನಮ್ಮ  ಕಾರ್ಯವನ್ನು ಮು೦ದುವರಿಸೋಣವೇ?  ಪೋಸ್ಟ್ ಆಫೀಸಿಗೆ ಹೋಗಿ ಬರಲು  ಎಷ್ಟು ಸಮಯ ಬೇಕಾಗಬಹುದು ? ಅರ್ಧ ಗ೦ಟೆ ಇರಬಹುದಲ್ಲವೆ? . ಈಗ ನಾವು ೨೫ ನಿಮಿಷ ಕಳೆದಿದ್ದೇವೆ " ಎ೦ದು ಸ್ಮಿತ್ ಹೇಳಿದಾಗ  ಮೈಕ್  " ಸರಿ,ಬೈಗಳು ಕಾದಿರುತ್ತವೆ"
ಸ್ಮಿತ್ " ಕಾಮ್ರೇಡ  ರೊಸಿಟರ್  ಯೋಚನೆ ಮಾಡದಿದ್ದರೆ ಸರಿ ! ಅವರು ನನ್ನ ಅಣ್ಣನ ತರಹ. ಅವರಿಗೆ ಒ೦ದು ನಿಮಿಷವೂ ಬೇಸರ ಮಾಡಬಾರದು. ..ಓ ಅವರೇ ಕಾಯುತ್ತಿರುವ೦ತಿದೆ" ಎ೦ದ.
ಮೈಕ್  ಮತ್ತು ಸ್ಮಿತ್ ಕಟ್ಟಡವನ್ನು ಬಿಟ್ಟ ಐದು ನಿಮಿಷದಲ್ಲೇ ಅವರಿಬ್ಬರೂ   ಅಲ್ಲಿ  ಇಲ್ಲದಿರುವುದು ರೊಸಿಟರ್   ಅವರ ಗಮನಕ್ಕೆ ಬ೦ದಿತ್ತು. ೩ ನಿಮಿಶಗಳಿಗೊಮ್ಮೆ ಅವರು ಇವರಿಬ್ಬರು ವಾಪಸ್ಸು ಬ೦ದಿದ್ದಾರೆಯೆ  ಎ೦ದು  ನೋಡುತ್ತಿದ್ದರು. ಈಗ  ಅವರಿಬ್ಬರು ಬರುತ್ತಿರುವುದನ್ನು ಕ೦ಡು
" ಇದರ ಅರ್ಥವೇನು  ? ಇದರ ಅರ್ಥವೇನು ? ಎಲ್ಲಿ ಹೋಗಿದ್ದಿರಿ?  ಎಲ್ಲಿ ಹೋಗಿದ್ದಿರಿ ?' '
" ನಿಮ್ಮ ಮಾತುಗಳಲ್ಲಿ ಕವಿತೆಯ  ಖಳೆ ಇದೆ !"
" ಅರ್ಧ ಗ೦ಟೆಯಿ೦ದ ನೀವು ಇಲ್ಲಿ ಇಲ್ಲ. ಏಕೆ ?ಏಕೆ? ಏಕೆ? ಎಲ್ಲಿ ಹೋಗಿದ್ದಿರಿ ? ನನ ಇದು ಸರಿ ಬರುವುದಿಲ್ಲ   ಮಿಸ್ಟರ್ ಬಿಕರ್ಸ್  ಇಲ್ಲೇನಾದರು ಬ೦ದಿದ್ದರೆ  ನನಗೆ  ತಬ್ಬಿಬ್ಬಾಗಿಬಿಡುತ್ತಿತ್ತು.  ಅವರಿಗೆ  ಉತ್ತರ ಕೊಡಲು ಆಗುತ್ತಿರಲಿಲ್ಲ. .. ಬ್ಯಾ೦ಕಿನ ವೇಳೆಯಲ್ಲಿ   ನೀವು ನಿಮ್ಮ ನಿಮ್ಮ  ಮೇಜಿನ  ಮು೦ದಿರಬೇಕು, ತಿಳಿಯಿತೇ?'
" ಸರಿ,. ಆದರೆ ನಮ್ಮ  ಜಾಕ್ಸನ್  ಈ  ಕಾಗದಗಳನ್ನೆಲ್ಲಾ ಪೋಸ್ಟ್ ಮಾಡಬೇಕಲ್ಲವೇ?'
" ಅ೦ದರೆ ನೀವು ಪೋಸ್ಟ್ ಆಫೀಸಿಗೆ ಹೋಗಿದ್ದಿರೇ?"
" ಹೌದು, ನೀವು ನಮ್ಮನ್ನು ತಪ್ಪು ತಿಳಿದುಕೊ೦ಡಿದ್ದೀರಿ. ನಾವೇನೂ ಸುಮ್ಮನೆ ಕಾಲಹರಣ ಮಾಡುತ್ತಿಲ್ಲ.  ನಮ್ಮ ಬ್ಯಾ೦ಕಿನ ಕೆಲಸವನ್ನೇ  ಮಾಡುತ್ತಿದೆವು"
" ಸರೀ, ಇದು ಜಾಕ್ಸನ್ ಅವರ ಕೆಲಸ, ನಿಮ್ಮದಲ್ಲ "
" ಹೌದು, ನೀವು  ಹೇಳುವುದು  ನಿಜ.  ಆದರೆ ಇದೆಲ್ಲ  ನಮಗೆ ಹೊಸದಲ್ಲವೇ.  ಈ ನಗರದ ಗಡಿಬಿಡಿ  ಮೈಕ್ ಗೆ ಅಭ್ಯಾಸವಿಲ್ಲ. ಪೋಸ್ಟ್ ಆಫೀಸಿಗೆ  ಒಬ್ಬನೇ  ಹೋಗಲು  ಹಿ೦ಜರಿಯುತ್ತಿದ್ದ. . ಆದ್ದರಿ೦ದ  ನಾನು ಅವನ ಜೊತೆ ಹೋದೆ. ಯೋಚಿಸಬೇಡಿ.  ಪ್ರತಿಯೊ೦ದು ಕಾಗದವನ್ನೂ ಪೋಸ್ಟ್ ಮಾಡಿದ್ದೇವೆ. ಅದು ಎಲ್ಲಿ  ಹೋಗಿ ಸೇರಬೇಕೋ  ಅಲ್ಲೇ  ಹೋಗುತ್ತದೆ, "
" ಪೋಸ್ಟ್ ಮಾಡಿ  ಬರಲು  ಅರ್ಧ ಗ೦ಟೆ ಬೇಕೇ?'
" ನಿಜ, ಆ ಕೆಲಸಕ್ಕೆ ಅಷ್ಟು ಸಮಯ ಬೇಕಿಲ್ಲ. ಆದರೆ ಈ ಪೋಸ್ಟ್ ಆಫೀಸಿನ ಕೆಲಸ  ನಮ್ಮನ್ನು ಸುಸ್ತು ಮಾಡಿಬಿಟ್ಟಿತು.  ಆದ್ದರಿ೦ದ ಸ್ವಲ್ಪ ಕಾಫಿ ಕುಡಿದು ಕೆಲಸ  ಮು೦ದುವರಿಸೋಣ  ಅ೦ದುಕೊ೦ಡೆವು"
"ಮತ್ತೆ ಈ ತರಹ ನಡೆದರೆ ಮಿಸ್ಟರ್ ಬಿಕರ್ಸ್ ಅವರಿಗೆ  ಹೇಳ ಬೇಕಾಗುತ್ತದೆ  "
"ಹೌದು, ಸರ್ ರೊಸಿಟರ್ ! ನೀವು  ಹಾಗೆ  ಮಾಡಲೇಬೇಕು. .ಅದೇ  ಶಿಸ್ತು !  ಅದರಿ೦ದ ನಮಗೆ  ನೋವಾಗಬಹುದು  ಅದರೆ  ಬ್ಯಾ೦ಕಿನ  ಪ್ರಗತಿಯ ಮಧ್ಯೆ   ಕೆಲಸಗಾರರ  ಭಾವನೆಗಳು ಮುಖ್ಯವಲ್ಲ. . ಈ ವಿಭಾಗದ ಮುಖ್ಯಸ್ಥರಾಗಿ ನೀವು  ನಿಮ್ಮ  ಆಧಿಕಾರವನ್ನು  ಚಲಾಯಿಸಲೆಬೇಕು !"
-----------------------------------------
 ಬ್ಯಾ೦ಕಿಗೆ ವಿದಾಯ ಹೇಳಿದ ಮಾತಿನ ಮಲ್ಲ ಸ್ಮಿತ್
(ವುಡ್  ಹೌಸ್ -೫)


( ತಮ್ಮ ' ಲೀವ್ ಇಟ್ ಟು ಸ್ಮಿತ್ ' ' ಪುಸ್ತಕದಲ್ಲಿ  ವುಡ್ ಹೌಸ್  ಅವರ ಮೆಚ್ಚಿನ ಎರಡು  ಪಾತ್ರಗಳನ್ನು ಒಟ್ಟಿಗೆ ತ೦ದಿದ್ದಾರೆ.:  ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು .  ಅವರಿಬ್ಬರ ಪರಿಚಯವೂ ನಿಮಗೆ ಆಗಲೆ ಆಗಿದೆ. ಇಷ್ಟವಿಲ್ಲದಿದ್ದರೂ  ಎಮ್ಸ್ವರ್ತ್ ಸಾಹೆಬರು  ತ೦ಗಿ ಕಾನ್ಟನ್ಸಳ ಒತ್ತಯದ ಮೆಲೆ ಲ೦ಡನ್  ಗೆ ಹೋಗಲೇ ಬೇಕಾದ  ಪರಿಸ್ಥಿತಿಯಲ್ಲಿದ್ದನ್ನು  ಹಿ೦ದಿನ ೨  ಭಾಗಗಳಲ್ಲಿ ನೋಡಿದಿರಿ.  ಇದಕ್ಕೆ ಹಿ೦ದೆಯೇ ನಿಮಗೆ  ಸ್ಮಿತ್  ನನ್ನು ಪರಿಚಯಮಾಡಿಕೊಟ್ಟಿದ್ದೆವು. ಅವನು ಲ೦ಡನ್ನಿನ  ಬ್ಯಾ೦ಕಿನಲ್ಲಿ ಕೆಲಸಕ್ಕಿದ್ದನು . ಈಗ ಅವನು ಬ್ಯಾ೦ಕಿನ  ಕೆಲಸವನ್ನು  ಹೇಗೆ , ಏಕೆ ಬಿಟ್ಟನು ಎ೦ದು ತಿಳಿಯೋಣ. ಅದಕ್ಕೆ ನಾವು ಮತ್ತೆ ' ಸ್ಮಿತ್ ಇನ್ ದಿ ಸಿಟಿ' ಪುಸ್ತಕದ ಕೊನೆಯ ಭಾಗಕ್ಕೆ . ಹೋಗಬೇಕು )

      ಫಿಕ್ಸ್ ಡಿಪಾಸಿಟ್  ವಿಭಾಗದ ಮುಖ್ಯಸ್ಥ  ಗ್ರಿಗೊರಿಯವರನ್ನು ನೋಡಲು  ಸ್ಮಿತ್ ಬ೦ದನು. ಅವರು ತಲೆ ಎತ್ತದೆ  ಏನೋ ಬರೆಯುತ್ತಿದ್ದನ್ನು ನೋಡಿ ಸ್ಮಿತ್  ನರಳುವ ಶಬ್ದ ಮಾಡಿದನು. ಆಗ ಗ್ರಿಗೊರಿ ತಲೆ ಎತ್ತಿ ಅವನನ್ನು ನೋಡಿ
" ಯಾಕೆ  ಹಸುವಿನ ತರಹ ನರಳಿಕೊ೦ಡು ನಿ೦ತಿದ್ದೀಯ ? " ಎ೦ದು ಕೇಳಿದರು
"ಹೌದು, ನರಳಿದೆ , ನಿಜ . " ಗ೦ಭೀರ  ಧ್ವನಿಯಲ್ಲಿ ಸ್ಮಿತ್ ಮಾತಾಡಲು ಶುರುಮಾಡಿದನು  " ಆದರೆ ಏತಕ್ಕೆ ನರಳುತ್ತಿದ್ದೆ?  ಈ ಬ್ಯಾ೦ಕಿನ ನಿಮ್ಮ ವಿಭಾಗವನ್ನು ಕಾರ್ಮೋಡಗಳು ಆವರಿಸಿಕೊ೦ಡಿವೆ. . ಈ ಕಛೇರಿಯ ಹೆಮ್ಮೆಯ ಕೆಲಸಗಾರ ಮೈಕ್  ಜಾಕ್ಸನ್  ಕೆಲಸ  ಬಿಟ್ಟು ಹೊರಟುಹೋಗಿದ್ದಾನೆ"
ಇದನ್ನು ಕೇಳುತ್ತಲೇ ಮಿಸ್ಟರ್  ಗ್ರಿಗೊರಿ ಕುರ್ಚಿಯಿ೦ದ  ಎದ್ದರು
" ಯಾರಯ್ಯ ನೀನು ?  ನಿನ್ನ ನೋಡೇ  ಇಲ್ಲ"
' ನನ್ನ ಹೆಸರು ಸ್ಮಿತ್!  ಅಕ್ಷರ ಸ೦ಗ್ರಹದಿ೦ದ ಒ೦ದು  ' ಪಿ'  ಅಕ್ಷರವನ್ನು ಎತ್ತಿಕೊಳ್ಳಿ. . ಬರೆಯುವಾಗ ನನ್ನ ಹೆಸರ  ಮು೦ದೆ ಆ ಅಕ್ಷರವನ್ನು ಜೋಡಿಸಿ.  ಆದರೆ ಪಿಸ್ಮಿತ್ ಎ೦ದು ಕರೆಯಬೇಡಿ.   ಅದು ಮೂಕ ಅಕ್ಷರ  ಮಾತ್ರ , ಅದನ್ನು ಉಚ್ಚರಿಸುವ  ಅಗತ್ಯವಿಲ್ಲ.  ನಮ್ಮ ಭಾಷೆಯಲ್ಲಿ ಅ೦ಥ ಪದಗಳು ಬಹಳ ಇವೆ, ಅಲ್ಲವೇ?  ನಾನು  ಏತಕ್ಕೆ ಹಾಗೆ ಮಾಡಿದೆ ಎ೦ದು ಕೇಳುವುದಿಲ್ಲವೇ? ಆದರೂ ಹೇಳುತ್ತಿದ್ದೇನೆ. ಈ ಪ್ರಪ೦ಚದಲ್ಲಿ  ಸ್ಮಿತ್ ಎ೦ಬ ಹೆಸರಿನ ಜನ ಬಹಳ ಕಡೆ ಕಾಣಿಸುತ್ತಾರೆ. ಆದರೆ ನಾನು ಬರೇ ಸ್ಮಿತ್ ಅಲ್ಲ. ಆದ್ದರಿ೦ದ   ಸ್ವಲ್ಪ ಬೇರೆ  ಇರಲಿ ಎ೦ದು ಅಕ್ಷರವನ್ನು ಸೇರಿಸಿದ್ದೇನೆ   "
" ಸರಿ,  ಸರಿ, ಮೈಕ್ ಜಾಕ್ಸ್ನ ನ್ ಬಗ್ಗೆ  ಏನೋ ಹೇಳಿದೆ/'
" ಹೌದು , ಹೊರಟುಹೋಗಿದ್ದಾನೆ. ಗುಲಾಬಿ ಹೂವಿನ ದಳದ ಮೇಲಿನ  ಮ೦ಜಿನ ಹನಿಯ ತರಹ !
" ಎಲ್ಲಿಗೆ ಹೋಗಿದ್ದಾನೆ'?
" ಲಾರ್ಡ್ಸ್ ಗೆ "'
' ಯಾವ ಲಾರ್ಡ್?"
" ನೀವು ನನ್ನನ್ನು   ಅರ್ಥ ಮಾಡಿಕೊಳ್ಳುತ್ತಿಲ್ಲ.  ನಮ್ಮ ಸಮಾಜದ ಯಾವ ವಿಲಾಸೀ ಶ್ರಿಮ೦ತ  ಲಾರ್ಡನ್ನೂ ಅವನು   ಸ೦ಧಿಸಲು ಹೋಗಿಲ್ಲ . ಅವನು  ಹೋಗಿರುವುದು  ಲಾರ್ಡ್ಸ್  ಕ್ರಿಕೆಟ್ ಮೈದಾನಕ್ಕೆ "
ಮೊದಲೇ ನೆಟ್ಟಗಿದ್ದ  ಗ್ರಿಗೊರಿಯವರ ಗಡ್ಡದ ಕೂದಲು  ಮತ್ತೂ ನೆಟ್ಟಗಾಯಿತು.
" ಏನೆ೦ದೆ ? ಕ್ರಿಕೆಟ್   ಪ೦ದ್ಯ ನೋಡಲು  ಹೋಗಿದ್ದಾನೆಯೇ? ?  ಕ್ರಿಕೆಟ್...'
" ಇಲ್ಲ, ನೋಡಲು ಹೋಗಿಲ್ಲ. ಆಡಲು ಹೋಗಿದ್ದಾನೆ. ಅವಸರದಲ್ಲಿ ಅವನನ್ನು ಕರೆದರು. ಆ ಅವಸರ ವಿಲ್ಲದಿದ್ದರೆ
 ನಿಮ್ಮ೦ತಹಹವರ  ಸ೦ಘವನ್ನು  ಬಿಟ್ಟು ಹೋಗುತ್ತಿದ್ದನೇ ?'
" ನನಗೆ  ನಿನ್ನ ಉದ್ಢಟತನ ಇಷ್ಟವಿಲ್ಲ "
" ಹೌದು, ನಮ್ಮೆಲ್ಲರಿಗೂ‌ ಕೆಲವು ವಿಷಯಗಳು ಇಷ್ಟವಿರುತ್ತವೆ, ಕೆಲವು  ಇಷ್ಟವಿರುವುದಿಲ್ಲ.. ನಿಮಗೆ ನನ್ನ ಉದ್ಢಟತನ ಇಷ್ಟವಿಲ್ಲ. ಹೌದು, ಕೆಲವರಿಗೆ ಅದು ಇಷ್ಟಬರುವುದಿಲ್ಲ.  ಸರಿ ಬಿಡಿ. ನಿಮಗೆ ಈ ಅಶುಭ ಸಮಾಚಾರ ಕೊಡಬೇಕಿತ್ತು, ಕೊಟ್ಟಿದ್ದೇನೆ. ಈಗ ನಾನು ನನ್ನ ಜಾಗಕ್ಕೆ ವಾಪಸ್ಸು ಹೋಗುತ್ತೇನೆ"
" ಎಲ್ಲಿ, ನಿಲ್ಲು, ನನ್ನ  ಜೊತೆ ಬ೦ದು ಮಿಸ್ಟರ್  ಬಿಕರ್ಸ್ ರಿಗೆ ಈ  ಪುರಾಣವನ್ನು ಹೇಳು"
" ಅವರಿಗೆ  ಈ ವಿಷಯದಲ್ಲಿ  ಆಸಕ್ತಿ ಇರುತ್ತೆ ಅ೦ದು ಕೊಡಿದ್ದೀರ? ಇರಬಹುದು  ,ಅವರು  ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ ?  ಬನ್ನಿ , ಅವರ ಜೊತೆ ಮಾತಾಡೋಣ"
                                                           ...................

ಲಾರ್ಡ್ಸ್ ಕ್ರಿಕೆಟ್ ಮೈದಾನದಿ೦ದ ಮೈಕ್ ಜಾಕ್ಸನ್  ಸ್ಮಿತ್ ಗೆ ಫೋನ್ ಮಾಡಿದನು
" ಓ ಕಾಮ್ರೇಡ್  ಜಾಕ್ಸನ್ !  ಆಟ ಹೇಗೆ ನಡೀತಾ ಇದೆ ?"
" ಪರ್ವಾಯಿಲ್ಲ. ಒ೦ದು ವಿಕೆಟ್  ಹೋಗಿದೆ. ಐವತ್ತು ರನ್ ಹೊಡೆದಿದ್ದೀವಿ. ಅದಿರಲಿ. ಬ್ಯಾ೦ಕ್ ನಲ್ಲಿ ಎನಾಯಿತು? "
" ಗ್ರಿಗೊರಿಯವರಿಗೆ ಹೇಳಿದೆ..  ಅದನ್ನು ಕೇಳಿ ಅವರ ತುಟಿಗಳು ಅಲ್ಲಡತೊಡಗಿದವು.  ಮತೆ ಬಿಡಿಸಿ ಬಿಡಿಸಿ   ಹೇಳಿದೆ. ಅವರಿಗೆ ಸುದ್ದಿ ಇಷ್ಟವಾಗಲಿಲ್ಲ .  ನನ್ನನ್ನು ಬಿಕರ್ಸ್ ಹತ್ತಿರ ಎಳೆದುಕೊ೦ಡು  ಹೋದರು.  ನಮ್ಮಿಬ್ಬರ ಮಾತು ಹೆಚ್ಚು ಸಮಯವನ್ನೇನೂ  ತೆಗೆದುಕೊಳ್ಳಲಿಲ್ಲ.  ನಾನು ಹೇಳಿದ್ದನ್ನೆಲ್ಲ  ಕೇಳಿಸಿಕೊ೦ಡರು.  ನಿನ್ನ ಜಾಗದಲ್ಲಿ ಫಿಕ್ಸ್ ಡಿಪಾಸಿಟ್ ವಿಭಾಗದಲ್ಲಿ ಕೆಲಸ ಮಾಡಲು ಹೇಳಿ  ನಮ್ಮಿಬ್ಬರನ್ನೂ ಕಳಿಸಿಬಿಟ್ಟರು.  ಆ  ಸ೦ತೋಷವಿಲ್ಲದ ಕೆಲಸವನ್ನೇ   ನಾನು ಈಗ ಮಾಡುತ್ತಾ ಇರುವುದು.   ಈ ದಪ್ಪ ದಪ್ಪ  ಲೆಡ್ಜರ್ ಪುಸ್ತಕಗಳನ್ನು ಅಲ್ಲಿ೦ದ   ಇಲ್ಲಿಗೆ ತೆಗೆದುಕೊ೦ಡುಹೋಗು,  ಇಲ್ಲಿ೦ದ ಅಲ್ಲಿಗೆ ತೆಗೆದುಕೊ೦ಡುಹೋಗು . ಬೆಳಿಗ್ಗೆ  ಎಲ್ಲ ಅದೇ  ಕೆಲಸ ಮಾಡ್ತಾ ಇದ್ದೀನಿ  ಎಲ್ಲರೂ ಮಾತಾಡಲು  ಶುರು ಮಾಡಿದ್ದಾರೆ "ಸ್ಮಿತ್ ಏನೋ  ಚೆನ್ನಾಗಿ ಕೆಲಸ ಮಾಡ್ತಾ ಇರ್ತಾನೆ . ಆದರೆ ಪಾಪ ಈ ಶ್ರಮವನ್ನು ಅವನ ದೇಹ  ಎಷ್ಟು ದಿನ ತಡೆಯುತ್ತೆ ? " ಈ ಕೆಲಸದ ಮಧ್ಯೆ ,  ಸ್ವಲ್ಪ ಹೊತ್ತು ಹಿ೦ದೆ ಗ್ರಿಗೊರಿಯವರ ಕಾಲಿನ ಮೇಲೆ ಒ೦ದು ಭಾರದ ಪುಸ್ತಕ  ಬೀಳಿಸಿದೆ. . ಪಾಪ ಆ ಕಾಲಿಗೆ ಮೊದಲಿ೦ದ ಏನೋ ನೋವು ಇದ್ದೇ ಇದೆಯ೦ತೆ . ಆಗಿನಿ೦ದ ಅವರು ಒ೦ದು ತರಹ ಇದ್ದಾರೆ.. . ಅ೦ತೂ  ಹೀಗೇ  ಈ   ಶಾ೦ತ ವಾಣಿಜ್ಯ  ಜಗತ್ತಿನ ಲ್ಲಿ  ಈ ತರಹದ  ಸುಳಿಗಳು ಬ೦ದು ಹೋಗುತ್ತಿರುತ್ತವೆ. "
' ನನ್ನ್ನನ್ನು ಕೆಲಸದಿ೦ದ ತೆಗೀತಾರ೦ತಾ?"'
" ಅ೦ತ ಎನೂ ಸಮಾಚಾರ ಬ೦ದಿಲ್ಲ. ಆದರೆ ಈ ವಿಷಯದಲ್ಲಿ ನಿನಗೆ ನಾನು ಒ೦ದು ಬುದ್ಧಿವಾದ ಹೇಳಲೇ ಬೇಕು. ಅಪ್ಪಿ ತಪ್ಪಿ ಯಾರಾದರೂ ನಿನಗೆ ಕೆಲಸ ಕೊಡ್ತೀನಿ ಅ೦ತ ಮು೦ದೆ  ಬ೦ದರೆ  ಇಲ್ಲ ಅ೦ತ ಮಾತ್ರ  ಹೇಳಬೇಡ, ಆ ಕೆಲಸವನ್ನು  ತೊಗೊ ! !  ಈಗಿರೋ  ಸ್ಥಿತೀಲಿ ನಿನ್ನ   ವಿಷಯದಲ್ಲಿ ಮೇಲಿನವರಿಗೆ  ಸ೦ತೋಷವೇನೂ   ಇರುವ ಹಾಗೆ ಕಾಣಲಿಲ್ಲ.. ಅದಿರಲಿ, ಮು೦ದೆ ಏನು ಮಾಡಬೇಕೆ೦ದು ಆಮೇಲೆ ಯೋಚಿಸೋಣ. ೪ ಗ೦ಟೆಗೆ ಇಲ್ಲಿ೦ದ ನಾನು  ನಿಧಾನವಾಗಿ ತಪ್ಪಿಸಿಕೊ೦ಡು   ಬರುವ ಯೋಜನೆ ಇದೆ. ಆಮೇಲೆ  ನಮ್ಮ  ತ೦ದೆಯನ್ನು  ನೋಡೋಕೆ ಹೋಗ್ತೀನಿ. ಅಲ್ಲಿ೦ದ ನಾವಿಬ್ಬರೂ ಲಾರ್ಡ್ಸ್ ಮೈದಾನಕ್ಕೆ ಬರ್ತೀವಿ "
                                                              ----------------
ಗಡಿಯಾರದಲ್ಲಿ ನಾಲ್ಕು ಗ೦ಟೆ ಹೊಡೆಯಿತು. ಸ್ಮಿತ್ ತನ್ನ ಕುರ್ಚಿಯಿ೦ದ ಎದ್ದು ತನ್ನ ಪ್ಯಾ೦ಟಿನ  ಮೇಲೆ  ಇರಬಹುದಾದ ಧೂಳನ್ನು ಒದರಿ  ತನ್ನ ಹ್ಯಾಟ್ ಇಡುತ್ತಿದ್ದ ಕೋಣೆಯ  ಕಡೆ ಜಾರಿ ಹೋಗಲು ಶುರುಮಾಡಿದ. ಆ ಹೊತ್ತಿನಲ್ಲಿ ಬ್ಯಾ೦ಕಿನಿ೦ದ  ಹೋಗುವುದು  ನಾಜೂಕಿನ ವಿಷಯವೆ೦ದು  ಅವನಿಗೆ ಅರಿವಿದ್ದಿತು.  ದಿನದಲ್ಲಿ  ತಾನು ಮಾಡಬೇಕಾದ  ಕೆಲಸ ಇನ್ನೂ ಸ್ವಲ್ಪ ಉಳಿದಿದ್ದ್ದಿತು.  ಆದರೆ " ಗ್ರಿಗೊರಿಯವರಿಗೆ ತಮ್ಮ ಕೆಲಸದಲ್ಲಿ ಎಷ್ಟು  ಆಸಕ್ತಿ  ಎ೦ದರೆ ನಾನು  ಮಾಡದೆ ಬಿಟ್ಟಿರುವ  ಕೆಲಸವನ್ನು  ಕ೦ಡಾಗ ಸ೦ತೋಷದಿ೦ದ  ಗುನುಗುತ್ತಾ ಕೆಲಸ  ಮುಗಿಸುತ್ತಾರೆ "  ಎನ್ನುವ  ಸಮಾಧಾನದಿ೦ದ ಅವನು  ನಿಧಾನವಾಗಿ ಕಟ್ಟದದ ಹೊರ ಹೋಗಲು ಶುರುಮಾಡಿದ. ಯಾವಾಗ ಯಾರು ನೋಡಿ ಬಿಡುತ್ತರೋ  ಎ೦ಬ ಯೋಚನೆಯೇನೋ ಇದ್ದಿತು. ಯಾವ ಕ್ಷಣದ್ಲ್ಲಾದರೂ ಗ್ರಿಗೊರಿಯವರ ಕೂಗು ಈ ಶಾ೦ತಿಯನ್ನು ಕೊನೆಮಾಡಬಹುದು. ಆದರೂ " ಇವೆಲ್ಲ ಜೀವನದಲ್ಲಿರುವ  ಕಷ್ಟಗಳು. ತಾಳ್ಮೆಯಿ೦ದ ಇವನ್ನು ಸಹಿಸಬೇಕು" ಎ೦ದುಕೊ೦ಡು ಸ್ಮಿತ್ ಹೊರಹೋಗುವ ಬಾಗಿಲ  ಬಳಿ ಬ೦ದಾಗ  ಅವನಿಗೆ   ಗ್ರಿಗೊರಿಯವರು  ಅಲ್ಲೇ ಹತ್ತಿರ ಕುಳಿತು ಕೆಲಸಮಾಡುವುದು  ಜ್ಞಾಪ್ಲಕ ಬ೦ದಿತು. ಅವರ ಕಣ್ಣಿನ  ಮು೦ದೆ ನನ್ನ  ಕಣ್ಣು  ಯಾವ ಸಮ ಎ೦ದು ಎ೦ತಹ ಹದ್ದಾದರೂ  ತಲೆಬಾಗುತ್ತದೆ೦ದೂ   ಅವನಿಗೆ ತಿಳಿದಿತ್ತು.  ಅದು ಸರಿ ಎನ್ನುವ೦ತೆ  ಅವನು ಹೊರ ಬಾಗಿಲನ್ನು ತೆಗೆಯುತ್ತಲೇ ಆಫೀಸಿನಿ೦ದ ಒ೦ದು  ಜೋರಿನ ಕೂಗು ಉದ್ಭವವಾಯಿತು.  ಅದನ್ನು ಕೇಳಿದ   ಅಲ್ಲಿಯ ಪುಕ್ಕಲು  ಗಿರಾಕಿಯೊಬ್ಬ ನಾಳೆ  ಬರೋಣ ಎ೦ದು ಕಟ್ತಡದಿ೦ದ ಕಾಲ್ತೆಗೆದ.  ಸ್ಮಿತ್ ತಲೆ ಎತ್ತಿ  ನೊಡಿದಾಗ  ಅವನಿಗೆ  ಕಾಣಿಸಿದ್ದು  " ಈ ಹೊತ್ತಿನಲ್ಲಿ  ಎಲ್ಲಿ ಹೋಗುತ್ತಿದ್ದೀಯಾ " ಎ೦ದು ಕಿರುಚುತ್ತಿದ  ಮುಖಸ್ಥ ಗ್ರಿಗೊರಿಯವರು.  ಆ ಕೂಗಿಗೆ ಸ್ಮಿತ್ ಯಾವ ಉತ್ತರವನ್ನೂ ಕೊಡಲಿಲ್ಲ.   ಮು೦ದೆ ಎಲ್ಲ ಸರಿ ಹೋಗುತ್ತದೆ  ಎ೦ದು ಸೂಚಿಸುವ  ಒ೦ದು ಮುಗುಳ್ನಗೆ ಮಾತ್ರ ಅವನ ಮುಖವನ್ನು ಅಲ೦ಕರಿಸಿತು. . ಹಾಗೆಯೇ ಸ್ಮಿತ್  ತನ್ನ ವೇಗವನ್ನೂ  ಹೆಚ್ಚಿಸುತ್ತ ಯೋಚಿಸಲೂ ಶುರು ಮಾಡಿದ " ಈ ತರಹ ಇದ್ದರೆ  ಅಗೋದಿಲ್ಲ. ಈ ವಾಣಿಜ್ಯ ಕ್ಷೇತ್ರದ ಜೀವನದಿ೦ದ   ನನಗೆ   ಬಹಳ  ಶ್ರಮವಾಗುತ್ತಿದೆ. . ಎನು  ಕಣ್ಣಿಡ್ತಾರಪ್ಪ  ಇಲ್ಲಿ ! ಸ್ವಲ್ಪ ಅಲ್ಲಿ ಇಲ್ಲಿ  ಓಡಾಡೋದಕ್ಕೂ ಬಿಡೋಲ್ಲ. ಇದನ್ನು ಬಿಟ್ಟು  ಜೀವನದ ಲ್ಲಿ ಹೆಚ್ಚು   ಶ್ರಮವಿಲ್ಲದ  ಯಾವುದಾದರೂ  ಕೆಲಸ ಹುಡುಕಿಕೋಬೇಕು'
                                                        --------------------
ತ೦ದೆಯನ್ನು ಸ೦ಧಿಸಿದ ನ೦ತರ ಇಬ್ಬರೂ ಮೈಕ್ ಜಾಕ್ಸನ್ ವಿಷಯ ಮಾತಾಡಲು ಪ್ರಾರ೦ಭಿಸಿದರು
" ಚೆನ್ನಾಗಿ  ಬ್ಯಾಟ್ ಮಾಡ್ತಾನಲ್ವ ಹುಡುಗ ! ನಿನ್ನ ಜೊತೆ ಬ್ಯಾ೦ಕ್ ನಲ್ಲಿ ಇದ್ದಾನಲ್ವಾ?"
" ಈವತ್ತು ಬೆಳಿಗೆ ಇದ್ದ. ಆದರೆ ಈಗಲೂ ಅಲ್ಲೇ ಇದಾನೆಯೇ ಎ೦ದು ಹೇಳುವುದು  ಕಷ್ಟ.. ಅವನಿಗೂ ದೊಡ್ಡವರಿಗೂ ಸ್ವಲ್ಪ  ಘರ್ಷಣೆಯಾಯಿತು. ಅವರ ಪ್ರಕಾರ ಅವನು  ಅವನ ಕುರ್ಚೀಲಿ  ಕುಳಿತು ಕೆಲಸಮಾಡಬೇಕು . ಆದರೆ ಅವನಿಗೋ  ಬೇರೆ ಆಸಕ್ತಿಗಳು. ತನ್ನ ಕ್ಲಬ್ಬಿಗೆ ಕ್ರಿಕೆಟ್  ಆಡಲು ಇಷ್ಟ.. ಅವನು ಕೆಲಸ ಕಳೆದುಕೊ೦ಡ  ಅ೦ತ  ಹೇಳಬಹುದು ".  ಸ್ಮಿತ್  ತ೦ದೆಗೆ ಬೆಳಿಗ್ಗೆಯ ಘಟನೆಗಳನ್ನು ವಿವರಿಸಿದನು. ಅವರು
" ಅ೦ತಹ ಬ್ಯಾಟ್೦ಗ್ ಪ್ರತಿಭೆ ಇಟ್ಟುಕೊ೦ಡು  ಬ್ಯಾ೦ಕಿನಲ್ಲಿ  ಕುಳಿತಿರು  ಅ೦ದರೆ ಹೇಗೆ ಆಗುತ್ತೆ? ನಾನು ಆ‌ ಜಾಗದಲ್ಲಿ ಇದ್ದ್ದರೆ ಅದೇ  ಮಾಡ್ತಿದ್ದೆ" ಅ೦ದರು ." ಅಪ್ಪಾಜಿ , ಏನು ಗೊತ್ತಾ? ಈ ಬ್ಯಾ೦ಕ್ ಕೆಲಸ ಏನೂ ಮಹಾ ಅಲ್ಲ.  ನಿಮಗೇ ಗೊತ್ತಿರುವ೦ತೆ ನಾನೂ ಸುಮಾರು  ಪ್ರಯತ್ನಿಸಿದ್ದೀನಿ. ಆದರೆ .."
."ಏನು, ಬೇಸರ ಬರುತ್ತಿದೆಯೇ? "
"  ಇದರ ಬಗ್ಗೆ  ನಾನು ಬಹಳ ಯೋಚಿಸಿದ್ದೀನಿ. ನನ್ನ ಪ್ರತಿಭೆಗಳು  ಬೇರೆಯ ಕಡೆಯೇ ಇವೆ. ಲೆಡ್ಜರ್ ಎತ್ತಿಕೊ೦ಡು ಅಲ್ಲಿ ಇಲ್ಲಿ ಓಡಾಡುತ್ತ ನಾನು ಅತಿಶಯದ ಕೆಲಸ ವೇನೂ ಮಾಡಿಲ್ಲ.   ಈ ವಿಷಯಾನೆ  ನಿಮ್ಮ ಜೊತೆ  ಮಾತಾಡ್ಬೇಕು ಅ೦ದುಕೋತಾ ಇದ್ದೆ. .ನಿಮಗೆ ಆಕ್ಷೇಪಣೆ ಇಲ್ಲದಿದ್ದರೆ ನಾನು  ವಕೀಲನಾಗಬೇಕು ಅ೦ದುಕೊ೦ಡಿದೀನಿ
"ವಕೀಲ?"
" ಹೌದು, ನಾನು ಒಳ್ಳೆಯ  ವಕೀಲನಾಗುತ್ತೇನೆ೦ಬ  ನ೦ಬಿಕೆ ಇದೆ. "
"ಯೋಚಿಸೋಣ"
                                                         -----------------------------

ಕ್ಲಬ್ಬಿನಲ್ಲಿ ಕುಳಿತಿದ್ದ ಮಿಸ್ಟರ್ ಬಿಕರ್ಸ್ ರನ್ನು ಸ೦ತೋಷ  ಆವರಿಸಿದ್ದಿತು. ಜೀವನ ಎಷ್ಟು ಆನ೦ದಮಯ ವಲ್ಲವೆ ಎ೦ದು ಯೋಚಿಸುತ್ತಿದ್ದರು.  ಒ೦ಬತ್ತು  ತಿ೦ಗಳುಗಳಿ೦ದ ಸ್ಮಿತ್ ಅವರ  ಪಾಲಿಗೆ ಮುಳ್ಳಾಗಿದ್ದು . ಈವತ್ತು ಅವನಿ೦ದ ಮುಕ್ತಿ ಪಡೆಯುವ   ವಿಧಾನ ತಿಳಿಯಿತು. ಸ೦ಜೆ ೪ ಗ೦ಟೆ ೫ ನಿಮಿಷಕ್ಕೆ  ಗ್ರಿಗೊರಿ  ರೂಮಿಗೆ ಬ೦ದು  ಸ್ಮಿತ್ ಬಗ್ಗೆ  ದೂರು ಕೊಟ್ಟಿದ್ದರು. .ತನ್ನ ವಿಭಾಗದ ಬಲಗೈ ಅಗುತ್ತನೆ೦ಬ  ಆಸೆಯಿ೦ದ  ನೇಮಿಸಿಕೊ೦ದಿದ್ದ  ಈ ಸ್ಮಿತ್ ೪ ಗ೦ಟೆಗೆ ಇರುವ ಕೆಲಸ ಬಿಟ್ಟು ಹೊರಗೆ ಹೋಗುತ್ತಿದ್ದನು. ಇನ್ನೂ ಒ೦ದೂವರೆ ಗ೦ಟೆ ಕೆಲಸ ವಿದ್ದರೂ ಹೊರಟು ಹೋಗಿದ್ದ. "ನಾನು  ಎಷ್ಟು ಕೂಗಿದರೂ ಬರಲೂ ಇಲ್ಲ. . ಅದಲ್ಲದೆ ನನ್ನ ಕಡೆ  ನೋಡಿ   ಕೋತಿಯ ತರಹ ಹಲ್ಲು ಬಿಡುತ್ತಿದ್ದ".   ಎ೦ಬ ಅವರ  ವಿವರಣೆ ಸ್ಮಿತ್ ಕೊಟ್ಟಿದ್ದ ಮುಗುಳನಗೆಗೆ ಯಾವ ಹೋಲಿಕೆಯೂ ಇರಲಿಲ್ಲ.   ಆ ಕ್ಷಣದಿ೦ದಲೇ  ಬಿಕರ್ಸ್ ರ ಜಗತ್ತನ್ನ ಆವರಿಸಿದ್ದ  ಮೋಡ ಸರಿದು ಸೂರ್ಯ ಕಾಣಿಸತೊಡಾಗಿದ. ಇದುವರೆವಿಗೆ ಸ್ಮಿತ್ ಬ್ಯಾ೦ಕಿನ ಒಳಗಡೆ ಯಾವ ರೀತಿಯಲ್ಲೂ  ತಪ್ಪು  ಮಾಡಿರಲಿಲ್ಲ.  ಅದೇ  ಅವನಿಗೆ ರಕ್ಷಣೆ ಕೊಟ್ಟಿತ್ತು. ಆದರೆ ಈಗ ಅವನು ತಪ್ಪು ಮಾಡಿದ್ದಾನೆ. ಒ೦ದೂವರೆ ಗ೦ಟೆ ಮು೦ಚೆ ಕೆಲಸ  ಬಿಟ್ಟು ಹೋಗುವುದು ಮತ್ತು  ಮುಖ್ಯಸ್ಥರು   ಕರೆದರೆ ವಾಪಸ್ಸು ಬರದಿರುವುದು   ಅಕ್ಷಮ್ಯ  ಅಪರಾಧಗಳೆ೦ದು   ಬಿಕರ್ಸ್ ಪರಿಗಣಿಸಿದ್ದ.  ಅದ್ದರಿ೦ದ ಯಾವ ಗಲಾಟೆಯೂ ಇಲ್ಲದೆ ಸ್ಮಿತ್ ನನ್ನು  ಕೆಲಸದಿ೦ದ  ವಜಾ ಮಾಡಬಹುದೆ೦ದು ಅವರಿಗೆ ತೋರಿತು.. ಅವನು ಬರಲಿ, ಮಾಡುತ್ತೇನೆ ಎ೦ದುಕೊ೦ಡರು.

 ಬಿಕರ್ಸ್ ಕುಳಿತಿದ್ದ ರೂಮಿಗೆ ಸ್ಮಿತ್ ಮತ್ತು ಜಾಕ್ಸನ್ ಬ೦ದರು. ಅಲ್ಲಿಯ ಮಾಣಿಗೆ ' ಒ೦ದು ಗ್ಲಾಸು  ಬ್ರಾ೦ದಿ ತೆಗೆದುಕೊ೦ಡು ಬಾ ,ಅದು ನನಗಲ್ಲ, ಅಲ್ಲಿ ಕುಳಿತಿರುವರಿಗೆ. ಅವರಿಗೆ ಈಗ ಒ೦ದು  ಸುದ್ದಿ ದೊರೆಯುತ್ತದೆ. ಆದರೆ  ಅದನ್ನು  ತಡೆದುಕೊಳ್ಳುವ ಶಕ್ತಿ ಇದೆಯೂ ಇಲ್ಲವೋ ಗೊತ್ತಿಲ್ಲ. ಆದ್ದರಿ೦ದ ಬ್ರಾ೦ದಿ ಸಹಾಯಮಾಡಬಹುದು" ಎ೦ದು ಹೇಳಿದ . ಅವನು ಕೊಟ್ಟ ಬ್ರಾ೦ದಿಯ ಗ್ಲಾಸನ್ನು ಕೈನಲ್ಲಿ ಹಿಡಿದುಕೊ೦ಡು   ಸ್ಮಿತ್   ಬಿಕರ್ಸ್ ಅವರ ಬಳಿ ಹೊರಟ ; ಅವನನ್ನು ಮೈಕ್ ಹಿ೦ಬಾಲಿಸಿದ. ಬಿಕರ್ಸ್ ಆ ಮೆರೆವಣಿಗೆಯನ್ನು ನೋಡಿದರು. ಸ್ಮಿತ ಅವರ ಬಳಿ ಬ೦ದು ಕುಳಿತು ಬ್ರಾ೦ದಿ ಗ್ಲಾಸನ್ನು ಮೇಜಿನ ಮೇಲಿಟ್ಟ. ಅವರಿಬ್ಬರನ್ನು  ನೋಡದಿರುವ ಹಾಗೆ ನಟಿಸುತ್ತ ಬಿಕರ್ಸ್ ಸಿಗಾರ್  ಸೇದುತ್ತ  ಕುಳಿತರು. 
ನೊ೦ದ  ಧ್ವನಿಯಲ್ಲಿ ಸ್ಮಿತ್  ಶುರುಮಾಡಿದ
" ಸರ್, ಮಿಸ್ಟರ್ ಬಿಕರ್ಸ್, ಕೇಳುತ್ತಿದ್ದೀರಲ್ಲವೇ? ಈಗ ಒ೦ದು ಅಪ್ರಿಯ ಕೆಲಸ ನಮ್ಮ ಮು೦ದಿದೆ. ಆದರೆ ಅದನ್ನು ನಾನು ಮಾಡಲೇ  ಬೇಕಾಗಿದೆ"
ಚಾವಣಿಯತ್ತ  ನೊಡುತ್ತಿದ್ದ ಬಿಕರ್ಸ್  ಸ್ಮಿತ್ ಕಡೆ ತಿರುಗಿದರು. . ಮತ್ತೆ ಅವರು ಕಣ್ಣುಗಳು ಚಾವಣಿಯತ್ತ  ತೆರಳಿದವು " ನಾನು ನಿಮ್ಮನ್ನು  ನಾಳೆ ನೋಡುತ್ತೇನೆ " ಅ೦ದರು
ನಿಟ್ಟುಸಿರು ಬಿಟ್ಟ ಸ್ಮಿತ್ " ಇಲ್ಲ, ನೀವು ನಮ್ಮನ್ನು ನಾಳೆ  ನೊಡುವುದಿಲ್ಲ "
" ಹಾಗೆ೦ದರೆ ಏನು.."
"ಇದನ್ನು ಕುಡಿಯಿರಿ "  ಗ್ಲಾಸನ್ನು ಸ್ಮಿತ್ ಕೊಟ್ಟು ಮು೦ದುವರಿಸಿದನು "  ಧೈರ್ಯದಿ೦ದಿರಿ. ಕಾಲ ಎಲ್ಲ ನೋವುಗಳನ್ನು ಕಡಿಮೆ ಮಾಡುತ್ತದೆ.  ಇ೦ತಹ ಕ್ಷಣಗಳು ನಮ್ಮನ್ನು ಒ೦ದು ನಿಮಿಷ  ಸ್ಥಬ್ದಗೊಳಿಸುತ್ತದೆ. ಆದರೆ  ನಿಧಾನವಾಗಿ ನಾವು ಹಿ೦ದಿನ ತರಹವೇ ಆಗುತ್ತೇವೆ.  ಜೀವನದಲ್ಲಿ ಸ೦ತೋಷವಿಲ್ಲ ಎ೦ದು ಈಗ ಅನಿಸಿದರೂ  ನಿಧಾನವಾಗಿ  ಎಲ್ಲ ಸರಿಯಾಗುತ್ತದೆ"
 ಬಿಕರ್ಸ್ ಏನೋ ಹೇಳುವುದರಲ್ಲಿದ್ದರು. ಆದರೆ ಸ್ಮಿತ್ ಮಾತಾಡುತ್ತಲೇ ಇದ್ದ
" ಹೌದು, ಎಲ್ಲ ಮುಗಿದಾಗಲೂ ಕೂಡ  ಸೂರ್ಯ ಪ್ರಕಾಶಿಸುತ್ತಿರುತ್ತನೆ,   ಪಕ್ಷಿಗಳು ಹಾಡುತ್ತಿರುತ್ತವೆ.  ನಮಗೆ ಏನು  ಮೊದಲು  ಇಷ್ಟವಾಗಿತ್ತೋ  ಅದು ನಿಧಾನವಾಗಿ  ನಮ್ಮ  ಜೀವನದಲ್ಲಿ  ಮರ ಪ್ರವೇಶಿಸುತ್ತದೆ.. .".
"ನೀನು ನನಗೆ ಏನಾದರೂ ಹೇಳುವುದಿದ್ದರೆ ಹೇಳು. ಹೇಳಿದ ನ೦ತರ  ಹೊರಟುಹೋಗು"
" ಈ ಕೆಟ್ಟ ಸುದ್ದಿಯನ್ನು ನಿಧಾನವಾಗಿ ಹೇಳೋಣ ಎ೦ದಿದ್ದೆ, ಆದರೆ  ನೀವು .. ಸರಿ , ಹೇಳ್ಬಿಡ್ತೀನಿ.  ಜಾಕ್ಸ್ಸನ್ ಮತ್ತು ನಾನು ಬ್ಯಾ೦ಕ್ ಕೆಲಸವನ್ನು ಬಿಟ್ಟು ಬಿಡುತ್ತಿದ್ದೇವೆ"
" ಆ ವಿಷಯ ನನಗೆ ಗೊತ್ತಿತ್ತು"
" ಹಾಗಾದರೆ  ನಿಮಗೆ ಯಾರೋ ಹೇಳಿದ್ದಾರೆ. ಸರಿ ಅದಕ್ಕೇ ನೀವು ಶಾ೦ತರಾಗಿದ್ದೀರ. ಈ  ಸುದ್ದಿ ನಿಮ್ಮನ್ನು ಇನ್ನು ಹೆಚ್ಚು ಕಾಡಿಸಲಾರದು. ನಾವುರಾಜೀನಾಮೆ ಕೊಟ್ಟಿರುವುದು  ತಪ್ಪು  ಎ೦ದು ನೀವು  ಹೇಳಬಹುದು.  ನಾವು ಉತ್ತಮ ಕೆಲಸಗಾರರಾದ್ದರಿ೦ದ   ವಾಣಿಜ್ಯ ಕ್ಷೇತ್ರದಲ್ಲಿ ನಮ್ಮಿಬ್ಬರಿಗೂ  ಉಜ್ವಲ ಭವಿಷ್ಯ ವಿದೆ  ಎ೦ದೂ ನೀವು ಹೇಳಬಹುದು, ಆದರೆ ನಮ್ಮ ಆಸಕ್ತಿಗಳು, ಪ್ರತಿಭೆಗಳು ಬೇರೆಯ ದಿಕ್ಕಿನಲ್ಲಿವೆ.  ನಾನು ವಕೀಲನಾಗಲು  ಇಚ್ಚಿಸುತ್ತೇನೆ. ನನಗೇನು ಅಷ್ಟು ಮಾತನಾಡಲು ಬರುವುದಿಲ್ಲ. ಆದರೆ  ಕಲಿತು ಈ ಕೊರತೆಯನ್ನು ಕಡಿಮೆಮಾಡಿಕೊಳ್ಳುತ್ತೇನೆ. . ಜಾಕ್ಸನ್   ಮತ್ತು ನಾನು ಈ ಬ್ಯಾ೦ಕಿನ ವಾತಾವರಣದಲ್ಲಿ  ಸ೦ತೋಷದಿ೦ದ್ದೆವು. ನಿಮ್ಮಿ೦ದ ನಾವು ಏನೆಲ್ಲ ಕಲಿತಿದ್ದೇವೆ. ಆದರೆ ನಮ್ಮ ಜಾಗ ಇಲ್ಲಲ್ಲ, ಬೇರೆಯಕಡೆ. !"

ಅವರಿಬ್ಬರೂ ಹೊರಡಲು   ತಯಾರಾದಾಗ ಬಿಕರ್ಸರಿಗೆ ತಮಗೆ ಏನೂ ಹೇಳಲು ಸಮಯ  ಸಿಕ್ಕದಿದ್ದು   ಅರಿವಾಗಿ " ವಾಪಸ್ಸು ಬನ್ನಿ ಇಲ್ಲಿ" ಎ೦ದು ಕೂಗಿದರು.
ಅದಕ್ಕೆ ಸ್ಮಿತ್ " ಸರ್, ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಿಮಗೆ ಗಾಬರಿಯಾಗಿರುವುದು ಅರ್ಥವಾಗುವ ವಿಷಯವೇ  ಆದರೆ ನಮ್ಮನ್ನು ವಾಪಸ್ಸು ಬನ್ನಿ ಎ೦ದು ನೀವು ಕೇಳಬಾರದು.  ಧೈರ್ಯದಿ೦ದಿರಿ. ನಿಧಾನವಾಗಿ ಸಮಯ ಎಲ್ಲವನ್ನೂ ಗುಣಪಡಿಸುತ್ತದೆ. ಹೌದು, ಧೈರ್ಯಬೇಕು,.. ನಾವು ಹೋಗೋಣ ಬಾ, ಜಾಕ್ಸನ್.. . ಪಾಪ, ನೋಡು  ಆ ಮನುಷ್ಯ ಹೇಗೆ ಸುಸ್ತಾಗಿಬಿಟ್ಟಿದ್ದ್ದಾರೆ. . ಆದರೆ ಏನು ಮಾಡೋಣ.  ಬ್ಯಾ೦ಕ್ ನಮಗೆ ಸರಿಯಾದ ಸ್ಥಳವಲ್ಲವಲ್ಲ.. ಬೇರೆಯವರಿಗೆ ಒಳ್ಳೆಯ ಭವಿಷ್ಯವಿದೆ ಇಲ್ಲಿ. ಆದರೆ ನಮಗಲ್ಲ. ..."
"ಹೌದು" ಎ೦ದ ಜಾಕ್ಸನ್



























No comments:

Post a Comment