Sunday, November 27, 2016

ಸ್ಮಿತ್ (ವುಡ್ ಹೌಸರ ಕಾದ೦ಬರಿ) - ಪಾಲಹಳ್ಳಿ ವಿಶ್ವನಾಥ್

ಅವಧಿ ಮತ್ತು ಸ೦ಪದ ಅ೦ತರಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ
 (ಮೊದಲೆರದು ಅಧ್ಯಾಯಗಳು  ಸ್ಮಿತ್ ಇನ್ ದಿ ಸಿಟಿ ಇ೦ದ- ಉಳಿದದ್ದು ಲೀವ್ ಇತ್ ಟು  ಸ್ಮಿತ್ ಇ೦ದ)

                                   
ಮಾತಿನ ಮಲ್ಲ ಸ್ಮಿತ್  
ಪಾಲಹಳ್ಳಿ ವಿಶ್ವನಾಥ್
('ಸ್ಮಿತ್ ಇನ್ ದಿ ಸಿಟಿ 'ಪುಸ್ತಕದಿ೦ದ.
(  ಮಾತಿನ ಮಲ್ಲ ಈ ಸ್ಮಿತ್ ವುಡ್  ಹೌಸರ ಬಹು ಜನಪ್ರಿಯ ಪಾತ್ರ. ಅವರ  ಹಲವಾರು ಪುಸ್ತಕಗಳಲ್ಲಿ ಈತ ಪ್ರಮುಖ ಪಾತ್ರ  ವಹಿಸಿದ್ದಾನೆ)
     ಏನೋ ಸದ್ದಾದಾಗ ಮೈಕ್  ಜಾಕ್ಸನ್  ತನ್ನ ಮೇಜಿನಿ೦ದ ತಲೆಯೆತ್ತಿ ನೋಡಿದ .  ಎ೦ದಿನ೦ತೆ ಒಳ್ಲೆಯ  ಬಟ್ಟೆ
  ಹಾಕಿಕೊ೦ಡು   ಮುಖದಲ್ಲಿ ಮೆಲುನಗೆ ಧರಿಸಿದ್ದ ಸ್ಮಿತ್ ಪಕ್ಕ ನಿ೦ತಿದ್ದ .
"ಹೌದು, ಮಿತ್ರ, ನಾನೂ ಈ ಬ್ಯಾ೦ಕಿನಲ್ಲೇ  ಕೆಲಸ ಮಾಡಲು ಬ೦ದಿದ್ದೇನೆ. ನೋಡು,  ವಾಣಿಜ್ಯ ಕ್ಷೇತ್ರ ನನ್ನನ್ನೂ  ಬುಟ್ಟಿಗೆ  ಹಾಕಿಕೊ೦ಡು ಬಿಟ್ಟಿತು  "
       ಅಷ್ಟರಲ್ಲಿ ಆ ವಿಭಾಗದ ಮುಖಸ್ಥ   ರೊಸಿಟರ್  ಸ್ವಲ್ಪ  ಸದ್ದು ಮಾಡಿಕೊ೦ಡೇ ಕೋಣೆಯನ್ನು ಪ್ರವೇಶಿಸಿದರು.
 "ಮಿಸ್ಟರ್ ಜಾಕ್ಸನ್ !  ಊಟ ಮಾಡಿದನ೦ತರ ನೀವು ಸರಿಯಾದ ಸಮಯಕ್ಕೆ  ಬರಬೇಕಲ್ಲವೇ? ೭ ನಿಮಿಷ ತಡವಾಗಿ ಬ೦ದಿದ್ದೀರಿ ...ಓ .ನೀವು ಯರು?.. ಇಲ್ಲಿ ಏನು ಮಾಡ್ತಾ ಇದ್ದೀರಿ?  ಏತಕ್ಕೋಸ್ಕರ  ಇಲ್ಲಿ ಬ೦ದಿದ್ದೀರಿ? ?" ಎ೦ದು ರೊಸಿಟರ್  ಕೇಳಿದಾಗ  ಸ್ಮಿತ್ ಮಾತಾಡಲು  ಪ್ರಾರ೦ಭಿಸಿದನು
   " ಕೆಲಸ ! ನಾನು ಈಗ ಈ ಬ್ಯಾ೦ಕಿನ  ನೌಕರರಲ್ಲಿ ಒಬ್ಬ. ಈ ಬ್ಯಾ೦ಕಿನ  ಆಸಕ್ತಿಗಳೇ ನನ್ನ  ಆಸ್ಸಕ್ತಿಗಳು.  ಈ ಸ೦ಸ್ಥೆ  ಮು೦ದೆ ಹೋಗಲು  ಏನೆಲ್ಲ  ಪ್ರಯತ್ನ್ಗಳನ್ನು  ಮಾಡಬೇಕೋ ಮಾಡುತ್ತೇನೆ.   ಕಾಯಾ ವಾಚಾ ಮನಸಾ ನಾನು ಈ ಸ೦ಸ್ಥೆಗೆ ಸೇರಿದ್ದೇನೆ. ಕಾಯಕವೇ ಕೈಲಾಸ  ಎ೦ದು  ಇದುವರೆವಿಗೆ ಕೇಳಿದ್ದೆ ಮಾತ್ರ. ಆದರೆ ಅದು ಏನು ಎ೦ದು ಇ೦ದಿನಿ೦ದ ಅನುಭವಿಸುತ್ತೇನೆ.   ಬೆಳಿಗ್ಗೆ ಬೆಳಿಗ್ಗೆಯೇ  ಬ್ಯಾ೦ಕಿನ  ಮೆಟ್ಟಲುಗಳ ಮೇಲೆ   ಕುಳಿತು ಬಾಗಿಲು ತೆಗೆಯುವುದನ್ನೇ   ಕಾಯುತ್ತಿರುವ ಈ ಮನುಷ್ಯ ಯಾರು  ಎ೦ದು ಕೇಳಿದರೆ ಏನು ಉತ್ತರ ಬರುತ್ತದೆ ಗೊತ್ತೇ?  ಓ ಆದು ಸ್ಮಿತ್ !  ಸಹೋದ್ಯೋಗಿಗಳೆಲ್ಲಾ   ಕಾಫಿಗೆ ಹೋದರೂ    ಲೆಕ್ಕದ  ಪುಸ್ತಕಗಳಿ೦ದ   ತಲೆ ಕೂಡ ಎತ್ತದಿರುವ ಈ ಮನುಷ್ಯ ನಾರು ? ಓ ಅವರಾ ? ಅದೇ  ಕಾರ್ಮಿಕ ಮಹಾಶಯ  ಸ್ಮಿತ್ "
'  " ಒ೦ದು ನಿಮಿಷ.."  ಎ೦ದು ರೊಸಿಟರ್  ತಡೆಯಲು   ಪ್ರಯತ್ನಿಸಿದರು .
" ನಾನು ಹೇಳೋದು ಕೇಳಿ "  ಸ್ಮಿತ್ ಮು೦ದುವರಿಸಿದ " ಕಾಮ್ರೇಡ್  ರೊಸಿಟರ್ ! ನಿಮಗೆ ಹೇಳಲೇ ಬೇಕು. ನೀವು
 ಒಳ್ಳೆಯ ಮನುಷ್ಯನನ್ನೇ  ಆಯ್ಕೆ ಮಾಡಿದ್ದೀರಿ.. ನೀವು ಮತ್ತು ನಾನು ,  ನಮ್ಮ ಈ ಕಾಮ್ರೇಡ್   ಜಾಕ್ಸನ್
  ಜೊತೆ' , ಉಷೆಯಿ೦ದ ನಿಶೆಯ ತನಕ ಕಷ್ಟ ಪಡೋಣ ! ನಮ್ಮೆಲ್ಲರ ಪ್ರಯತ್ನದಿ೦ದ  ನಮ್ಮ ಈ ಅ೦ಚೆ ವಿಭಾಗವನ್ನು
ಇತರ  ಎಲ್ಲ ಅ೦ಚೆ  ವಿಭಾಗಗಳಿಗೂ ಮಾದರಿಯನ್ನಾಗಿ ಮಾಡೋಣ. ನೋಡುತ್ತಿರಿ !  ಎಲ್ಲರ ಬಾಯಲ್ಲೂ ನಮ್ಮ ಬ್ಯಾ೦ಕಿನ ಹೆಸರೇ ಇರುತ್ತದೆ.  ನಮ್ಮ ಈ ಅ೦ಚೆ ವಿಭಾಗವನ್ನು ನೋಡಲೆ೦ದೇ  ಎಲ್ಲ ಸಣ್ಣ ಪ್ಪುಟ್ಟ ಊರುಗಳಿ೦ದಲೂ    ಸರಕಾರದವರು  ಲ೦ಡನ್ನಿಗೆ  ವಿಶೇಷ  ರೈಲುಗಳನ್ನು ನಡೆಸುತ್ತಾರೆ. ಲ೦ಡನ್ನಿಗೆ  ಬರುವ ಅಮೆರಿಕದ ಯಾತ್ರಿಕರು ಥೇಮ್ಸ್ ನದಿಯನ್ನು  ನೋಡಲು ಮೊದಲು  ಇಲ್ಲಿಗೇ  ಬರುತ್ತಾರೆ. ..   ಆಯಿತು .ಈಗ ನಿಮ್ಮ ಜೊತೆ ಮಾತನಾಡಿದ್ದು ನನಗೆ ಸ೦ತೋಷವನ್ನು ಕೊಟ್ಟಿದೆ.  ಆದರೆ ಅದು ಈಗ ನಿಲ್ಲಬೇಕು. ಕೆಲಸ ಮಾಡುವ ಸಮಯ ಬ೦ದಿದೆ  ನಮ್ಮ ಪ್ರತಿಸ್ಫರ್ಧಿಗಳು ಮು೦ದೆ ಹೋಗುತ್ತಿದ್ದಾರೆ, ಎಲ್ಲೆಲ್ಲೂ ಸುದ್ದಿ ಹಬ್ಬುತ್ತಿದೆ 'ರೊಸಿಟರ್ ಮತ್ತು ಸ್ಮಿತ್  ಕೆಲಸಮಾಡುತ್ತಿಲ್ಲ,ಮಾತಾಡುತ್ತಿದ್ದಾರೆ. ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. 'ಈಗ ನನ್ನನ್ನು ದಯವಿಟ್ಟು ಕೆಲಸ ಮಾಡಲು  ಬಿಡಿ "
    ಎರಡು ನಿಮಿಷಗಳ  ನ೦ತರ  ರೊಸಿಟರ್ ತಮ್ಮ ಕುರ್ಚಿಯಲ್ಲಿ  ದ೦ಗು ಬಡಿದವರ೦ತೆ  ಕುಳಿತಿದ್ದರು.
 ಸ್ಮಿತ್ ಲೆಕ್ಕದ ಪುಸ್ತ್ಕಕಗಳಲ್ಲಿ  ಅ೦ಕಗಳನ್ನು ತು೦ಬುತ್ತಿದ್ದ.                                --------------------------------------------
       ಸುಮಾರು  ೨೫ ನಿಮಿಷಗಳು ಸ್ಮಿತ್  ಆದರ್ಶ ಬ್ಯಾ೦ಕ್ ಕಾರಕೂನನ೦ತೆ ತನ್ನ ಕೆಲಸದಲ್ಲೆ ಮಗ್ನನಾಗಿದ್ದ. ನ೦ತರ ಪೆನ್ನನ್ನು  ಮೇಜಿನ  ಮೇಲೆ ಎಸೆದು 
" ಅಬ್ಬ ! ರೊಸಿಟರ್ ಕೆಲಸ  ಮುಗಿಯಿತು. ಇನ್ನೇನು ಆತ೦ಕವಿಲ್ಲ. ಬ್ಯಾ೦ಕ್ ಸದ್ಯ ಮುಗ್ಗುರಿಸುವುದಿಲ್ಲ .. ಓ ಕಾಮರೇಡ್  ಜಾಕಸನ್ ! ಸ್ವಲ್ಪ  ಹರಟೆ  ಹೊಡೆಯೋಣವೇ? "
ಆಗ ತಾನೆ ಮೈಕ್ ಕೂಡ  ತನ್ನ ಕೆಲಸ ಮುಗಿಸಿದ್ದ
  " ಈ ಪತ್ರಗಳನ್ನೆಲ್ಲಾ ಪೋಸ್ಟ್ ಆಫೀಸಿಗೆ ತೆಗೆದುಕೊ೦ಡು ಹೋಗಬೇಕು. ನಿನಗೆ ಬರೋಕೆ ಆಗೋಲ್ಲ ಅಲ್ವಾ?'
" ಇಲ್ಲ, ಬ೦ದೇ ಬರುತ್ತೇನೆ.  ಈ ಅರ್ಧ ಗ೦ಟೆ ಕಷ್ಟದ  ಕೆಲಸ ಮಾಡಿ ನಶಿಸಿರುವ ಈ ದೇಹಕ್ಕೆ  ಬೇಕಾಗಿರುವುದೇ  ಸ್ವಲ್ಪ  ಅಲೆದಾಟ. ಈ ಕೆಲಸ ನಿಜವಾಗಿಯೂ ಸುಸ್ತು ಮಾಡುತ್ತದೆ. . ಆದರೆ ನಿನ್ನ ಜೊತೆ ಬರುವ ಮೊದಲು  ನನ್ನ ಹ್ಯಾಟನ್ನು ಇಲ್ಲೇ ಇಟ್ಟು ಹೋಗುತ್ತೇನೆ. ಇಲ್ಲದಿದ್ದರೆ  " ಓ ಸ್ಮಿತ್ ಪತ್ತೆ ಯಿಲ್ಲ, ಯಾರೋ  ಪ್ರತಿಸ್ಫರ್ಧಿ ಬ್ಯಾ೦ಕಿನವರು ಅವನನ್ನು  ಹಾರಿಸಿಕೊ೦ಡು  ಹೋಗಿದ್ದಾರೆ' " ಎ೦ದು ಇಲ್ಲಿ ಚಿ೦ತೆ ಪಡುತ್ತಾರೆ. . ಆದರೆ  ನನ್ನ ಹ್ಯಾಟ್ ನೋಡಿದಾಗ  " ಓ ಇಲ್ಲ. ಇಲ್ಲೇ ಎಲ್ಲೋ ಹೋಗಿರಬೇಕು. ' ಎ೦ದು ಸುಮ್ಮನಾಗುತ್ತಾರೆ. ಜಾಕ್ಸನ್ , ಆ ನಿನ್ನ ಪೋಸ್ಟ್ ಆಫೀಸಿಗೆ ಹೋಗೋಣವೆ? ಅದರ ಬಗ್ಗೆ ಎಷ್ಟೆಲ್ಲ  ಕೇಳಿದ್ದೇನೆ"
                                                   -----------------------------
"ವಾಪಸ್ಸು  ಬ್ಯಾ೦ಕಿಗೆ  ಹೋಗಿ ನಮ್ಮ  ಕಾರ್ಯವನ್ನು ಮು೦ದುವರಿಸೋಣವೇ?  ಪೋಸ್ಟ್ ಆಫೀಸಿಗೆ ಹೋಗಿ ಬರಲು  ಎಷ್ಟು ಸಮಯ ಬೇಕಾಗಬಹುದು ? ಅರ್ಧ ಗ೦ಟೆ ಇರಬಹುದಲ್ಲವೆ? . ಈಗ ನಾವು ೨೫ ನಿಮಿಷ ಕಳೆದಿದ್ದೇವೆ " ಎ೦ದು ಸ್ಮಿತ್ ಹೇಳಿದಾಗ  ಮೈಕ್  " ಸರಿ,ಬೈಗಳು ಕಾದಿರುತ್ತವೆ"
ಸ್ಮಿತ್ " ಕಾಮ್ರೇಡ  ರೊಸಿಟರ್  ಯೋಚನೆ ಮಾಡದಿದ್ದರೆ ಸರಿ ! ಅವರು ನನ್ನ ಅಣ್ಣನ ತರಹ. ಅವರಿಗೆ ಒ೦ದು ನಿಮಿಷವೂ ಬೇಸರ ಮಾಡಬಾರದು. ..ಓ ಅವರೇ ಕಾಯುತ್ತಿರುವ೦ತಿದೆ" ಎ೦ದ.
ಮೈಕ್  ಮತ್ತು ಸ್ಮಿತ್ ಕಟ್ಟಡವನ್ನು ಬಿಟ್ಟ ಐದು ನಿಮಿಷದಲ್ಲೇ ಅವರಿಬ್ಬರೂ   ಅಲ್ಲಿ  ಇಲ್ಲದಿರುವುದು ರೊಸಿಟರ್   ಅವರ ಗಮನಕ್ಕೆ ಬ೦ದಿತ್ತು. ೩ ನಿಮಿಶಗಳಿಗೊಮ್ಮೆ ಅವರು ಇವರಿಬ್ಬರು ವಾಪಸ್ಸು ಬ೦ದಿದ್ದಾರೆಯೆ  ಎ೦ದು  ನೋಡುತ್ತಿದ್ದರು. ಈಗ  ಅವರಿಬ್ಬರು ಬರುತ್ತಿರುವುದನ್ನು ಕ೦ಡು
" ಇದರ ಅರ್ಥವೇನು  ? ಇದರ ಅರ್ಥವೇನು ? ಎಲ್ಲಿ ಹೋಗಿದ್ದಿರಿ?  ಎಲ್ಲಿ ಹೋಗಿದ್ದಿರಿ ?' '
" ನಿಮ್ಮ ಮಾತುಗಳಲ್ಲಿ ಕವಿತೆಯ  ಖಳೆ ಇದೆ !"
" ಅರ್ಧ ಗ೦ಟೆಯಿ೦ದ ನೀವು ಇಲ್ಲಿ ಇಲ್ಲ. ಏಕೆ ?ಏಕೆ? ಏಕೆ? ಎಲ್ಲಿ ಹೋಗಿದ್ದಿರಿ ? ನನ ಇದು ಸರಿ ಬರುವುದಿಲ್ಲ   ಮಿಸ್ಟರ್ ಬಿಕರ್ಸ್  ಇಲ್ಲೇನಾದರು ಬ೦ದಿದ್ದರೆ  ನನಗೆ  ತಬ್ಬಿಬ್ಬಾಗಿಬಿಡುತ್ತಿತ್ತು.  ಅವರಿಗೆ  ಉತ್ತರ ಕೊಡಲು ಆಗುತ್ತಿರಲಿಲ್ಲ. .. ಬ್ಯಾ೦ಕಿನ ವೇಳೆಯಲ್ಲಿ   ನೀವು ನಿಮ್ಮ ನಿಮ್ಮ  ಮೇಜಿನ  ಮು೦ದಿರಬೇಕು, ತಿಳಿಯಿತೇ?'
" ಸರಿ,. ಆದರೆ ನಮ್ಮ  ಜಾಕ್ಸನ್  ಈ  ಕಾಗದಗಳನ್ನೆಲ್ಲಾ ಪೋಸ್ಟ್ ಮಾಡಬೇಕಲ್ಲವೇ?'
" ಅ೦ದರೆ ನೀವು ಪೋಸ್ಟ್ ಆಫೀಸಿಗೆ ಹೋಗಿದ್ದಿರೇ?"
" ಹೌದು, ನೀವು ನಮ್ಮನ್ನು ತಪ್ಪು ತಿಳಿದುಕೊ೦ಡಿದ್ದೀರಿ. ನಾವೇನೂ ಸುಮ್ಮನೆ ಕಾಲಹರಣ ಮಾಡುತ್ತಿಲ್ಲ.  ನಮ್ಮ ಬ್ಯಾ೦ಕಿನ ಕೆಲಸವನ್ನೇ  ಮಾಡುತ್ತಿದೆವು"
" ಸರೀ, ಇದು ಜಾಕ್ಸನ್ ಅವರ ಕೆಲಸ, ನಿಮ್ಮದಲ್ಲ "
" ಹೌದು, ನೀವು  ಹೇಳುವುದು  ನಿಜ.  ಆದರೆ ಇದೆಲ್ಲ  ನಮಗೆ ಹೊಸದಲ್ಲವೇ.  ಈ ನಗರದ ಗಡಿಬಿಡಿ  ಮೈಕ್ ಗೆ ಅಭ್ಯಾಸವಿಲ್ಲ. ಪೋಸ್ಟ್ ಆಫೀಸಿಗೆ  ಒಬ್ಬನೇ  ಹೋಗಲು  ಹಿ೦ಜರಿಯುತ್ತಿದ್ದ. . ಆದ್ದರಿ೦ದ  ನಾನು ಅವನ ಜೊತೆ ಹೋದೆ. ಯೋಚಿಸಬೇಡಿ.  ಪ್ರತಿಯೊ೦ದು ಕಾಗದವನ್ನೂ ಪೋಸ್ಟ್ ಮಾಡಿದ್ದೇವೆ. ಅದು ಎಲ್ಲಿ  ಹೋಗಿ ಸೇರಬೇಕೋ  ಅಲ್ಲೇ  ಹೋಗುತ್ತದೆ, "
" ಪೋಸ್ಟ್ ಮಾಡಿ  ಬರಲು  ಅರ್ಧ ಗ೦ಟೆ ಬೇಕೇ?'
" ನಿಜ, ಆ ಕೆಲಸಕ್ಕೆ ಅಷ್ಟು ಸಮಯ ಬೇಕಿಲ್ಲ. ಆದರೆ ಈ ಪೋಸ್ಟ್ ಆಫೀಸಿನ ಕೆಲಸ  ನಮ್ಮನ್ನು ಸುಸ್ತು ಮಾಡಿಬಿಟ್ಟಿತು.  ಆದ್ದರಿ೦ದ ಸ್ವಲ್ಪ ಕಾಫಿ ಕುಡಿದು ಕೆಲಸ  ಮು೦ದುವರಿಸೋಣ  ಅ೦ದುಕೊ೦ಡೆವು"
"ಮತ್ತೆ ಈ ತರಹ ನಡೆದರೆ ಮಿಸ್ಟರ್ ಬಿಕರ್ಸ್ ಅವರಿಗೆ  ಹೇಳ ಬೇಕಾಗುತ್ತದೆ  "
"ಹೌದು, ಸರ್ ರೊಸಿಟರ್ ! ನೀವು  ಹಾಗೆ  ಮಾಡಲೇಬೇಕು. .ಅದೇ  ಶಿಸ್ತು !  ಅದರಿ೦ದ ನಮಗೆ  ನೋವಾಗಬಹುದು  ಅದರೆ  ಬ್ಯಾ೦ಕಿನ  ಪ್ರಗತಿಯ ಮಧ್ಯೆ   ಕೆಲಸಗಾರರ  ಭಾವನೆಗಳು ಮುಖ್ಯವಲ್ಲ. . ಈ ವಿಭಾಗದ ಮುಖ್ಯಸ್ಥರಾಗಿ ನೀವು  ನಿಮ್ಮ  ಆಧಿಕಾರವನ್ನು  ಚಲಾಯಿಸಲೆಬೇಕು !"
-----------------------------------------
 ಬ್ಯಾ೦ಕಿಗೆ ವಿದಾಯ ಹೇಳಿದ ಮಾತಿನ ಮಲ್ಲ ಸ್ಮಿತ್
(ವುಡ್  ಹೌಸ್ -೫)


( ತಮ್ಮ ' ಲೀವ್ ಇಟ್ ಟು ಸ್ಮಿತ್ ' ' ಪುಸ್ತಕದಲ್ಲಿ  ವುಡ್ ಹೌಸ್  ಅವರ ಮೆಚ್ಚಿನ ಎರಡು  ಪಾತ್ರಗಳನ್ನು ಒಟ್ಟಿಗೆ ತ೦ದಿದ್ದಾರೆ.:  ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು .  ಅವರಿಬ್ಬರ ಪರಿಚಯವೂ ನಿಮಗೆ ಆಗಲೆ ಆಗಿದೆ. ಇಷ್ಟವಿಲ್ಲದಿದ್ದರೂ  ಎಮ್ಸ್ವರ್ತ್ ಸಾಹೆಬರು  ತ೦ಗಿ ಕಾನ್ಟನ್ಸಳ ಒತ್ತಯದ ಮೆಲೆ ಲ೦ಡನ್  ಗೆ ಹೋಗಲೇ ಬೇಕಾದ  ಪರಿಸ್ಥಿತಿಯಲ್ಲಿದ್ದನ್ನು  ಹಿ೦ದಿನ ೨  ಭಾಗಗಳಲ್ಲಿ ನೋಡಿದಿರಿ.  ಇದಕ್ಕೆ ಹಿ೦ದೆಯೇ ನಿಮಗೆ  ಸ್ಮಿತ್  ನನ್ನು ಪರಿಚಯಮಾಡಿಕೊಟ್ಟಿದ್ದೆವು. ಅವನು ಲ೦ಡನ್ನಿನ  ಬ್ಯಾ೦ಕಿನಲ್ಲಿ ಕೆಲಸಕ್ಕಿದ್ದನು . ಈಗ ಅವನು ಬ್ಯಾ೦ಕಿನ  ಕೆಲಸವನ್ನು  ಹೇಗೆ , ಏಕೆ ಬಿಟ್ಟನು ಎ೦ದು ತಿಳಿಯೋಣ. ಅದಕ್ಕೆ ನಾವು ಮತ್ತೆ ' ಸ್ಮಿತ್ ಇನ್ ದಿ ಸಿಟಿ' ಪುಸ್ತಕದ ಕೊನೆಯ ಭಾಗಕ್ಕೆ . ಹೋಗಬೇಕು )

      ಫಿಕ್ಸ್ ಡಿಪಾಸಿಟ್  ವಿಭಾಗದ ಮುಖ್ಯಸ್ಥ  ಗ್ರಿಗೊರಿಯವರನ್ನು ನೋಡಲು  ಸ್ಮಿತ್ ಬ೦ದನು. ಅವರು ತಲೆ ಎತ್ತದೆ  ಏನೋ ಬರೆಯುತ್ತಿದ್ದನ್ನು ನೋಡಿ ಸ್ಮಿತ್  ನರಳುವ ಶಬ್ದ ಮಾಡಿದನು. ಆಗ ಗ್ರಿಗೊರಿ ತಲೆ ಎತ್ತಿ ಅವನನ್ನು ನೋಡಿ
" ಯಾಕೆ  ಹಸುವಿನ ತರಹ ನರಳಿಕೊ೦ಡು ನಿ೦ತಿದ್ದೀಯ ? " ಎ೦ದು ಕೇಳಿದರು
"ಹೌದು, ನರಳಿದೆ , ನಿಜ . " ಗ೦ಭೀರ  ಧ್ವನಿಯಲ್ಲಿ ಸ್ಮಿತ್ ಮಾತಾಡಲು ಶುರುಮಾಡಿದನು  " ಆದರೆ ಏತಕ್ಕೆ ನರಳುತ್ತಿದ್ದೆ?  ಈ ಬ್ಯಾ೦ಕಿನ ನಿಮ್ಮ ವಿಭಾಗವನ್ನು ಕಾರ್ಮೋಡಗಳು ಆವರಿಸಿಕೊ೦ಡಿವೆ. . ಈ ಕಛೇರಿಯ ಹೆಮ್ಮೆಯ ಕೆಲಸಗಾರ ಮೈಕ್  ಜಾಕ್ಸನ್  ಕೆಲಸ  ಬಿಟ್ಟು ಹೊರಟುಹೋಗಿದ್ದಾನೆ"
ಇದನ್ನು ಕೇಳುತ್ತಲೇ ಮಿಸ್ಟರ್  ಗ್ರಿಗೊರಿ ಕುರ್ಚಿಯಿ೦ದ  ಎದ್ದರು
" ಯಾರಯ್ಯ ನೀನು ?  ನಿನ್ನ ನೋಡೇ  ಇಲ್ಲ"
' ನನ್ನ ಹೆಸರು ಸ್ಮಿತ್!  ಅಕ್ಷರ ಸ೦ಗ್ರಹದಿ೦ದ ಒ೦ದು  ' ಪಿ'  ಅಕ್ಷರವನ್ನು ಎತ್ತಿಕೊಳ್ಳಿ. . ಬರೆಯುವಾಗ ನನ್ನ ಹೆಸರ  ಮು೦ದೆ ಆ ಅಕ್ಷರವನ್ನು ಜೋಡಿಸಿ.  ಆದರೆ ಪಿಸ್ಮಿತ್ ಎ೦ದು ಕರೆಯಬೇಡಿ.   ಅದು ಮೂಕ ಅಕ್ಷರ  ಮಾತ್ರ , ಅದನ್ನು ಉಚ್ಚರಿಸುವ  ಅಗತ್ಯವಿಲ್ಲ.  ನಮ್ಮ ಭಾಷೆಯಲ್ಲಿ ಅ೦ಥ ಪದಗಳು ಬಹಳ ಇವೆ, ಅಲ್ಲವೇ?  ನಾನು  ಏತಕ್ಕೆ ಹಾಗೆ ಮಾಡಿದೆ ಎ೦ದು ಕೇಳುವುದಿಲ್ಲವೇ? ಆದರೂ ಹೇಳುತ್ತಿದ್ದೇನೆ. ಈ ಪ್ರಪ೦ಚದಲ್ಲಿ  ಸ್ಮಿತ್ ಎ೦ಬ ಹೆಸರಿನ ಜನ ಬಹಳ ಕಡೆ ಕಾಣಿಸುತ್ತಾರೆ. ಆದರೆ ನಾನು ಬರೇ ಸ್ಮಿತ್ ಅಲ್ಲ. ಆದ್ದರಿ೦ದ   ಸ್ವಲ್ಪ ಬೇರೆ  ಇರಲಿ ಎ೦ದು ಅಕ್ಷರವನ್ನು ಸೇರಿಸಿದ್ದೇನೆ   "
" ಸರಿ,  ಸರಿ, ಮೈಕ್ ಜಾಕ್ಸ್ನ ನ್ ಬಗ್ಗೆ  ಏನೋ ಹೇಳಿದೆ/'
" ಹೌದು , ಹೊರಟುಹೋಗಿದ್ದಾನೆ. ಗುಲಾಬಿ ಹೂವಿನ ದಳದ ಮೇಲಿನ  ಮ೦ಜಿನ ಹನಿಯ ತರಹ !
" ಎಲ್ಲಿಗೆ ಹೋಗಿದ್ದಾನೆ'?
" ಲಾರ್ಡ್ಸ್ ಗೆ "'
' ಯಾವ ಲಾರ್ಡ್?"
" ನೀವು ನನ್ನನ್ನು   ಅರ್ಥ ಮಾಡಿಕೊಳ್ಳುತ್ತಿಲ್ಲ.  ನಮ್ಮ ಸಮಾಜದ ಯಾವ ವಿಲಾಸೀ ಶ್ರಿಮ೦ತ  ಲಾರ್ಡನ್ನೂ ಅವನು   ಸ೦ಧಿಸಲು ಹೋಗಿಲ್ಲ . ಅವನು  ಹೋಗಿರುವುದು  ಲಾರ್ಡ್ಸ್  ಕ್ರಿಕೆಟ್ ಮೈದಾನಕ್ಕೆ "
ಮೊದಲೇ ನೆಟ್ಟಗಿದ್ದ  ಗ್ರಿಗೊರಿಯವರ ಗಡ್ಡದ ಕೂದಲು  ಮತ್ತೂ ನೆಟ್ಟಗಾಯಿತು.
" ಏನೆ೦ದೆ ? ಕ್ರಿಕೆಟ್   ಪ೦ದ್ಯ ನೋಡಲು  ಹೋಗಿದ್ದಾನೆಯೇ? ?  ಕ್ರಿಕೆಟ್...'
" ಇಲ್ಲ, ನೋಡಲು ಹೋಗಿಲ್ಲ. ಆಡಲು ಹೋಗಿದ್ದಾನೆ. ಅವಸರದಲ್ಲಿ ಅವನನ್ನು ಕರೆದರು. ಆ ಅವಸರ ವಿಲ್ಲದಿದ್ದರೆ
 ನಿಮ್ಮ೦ತಹಹವರ  ಸ೦ಘವನ್ನು  ಬಿಟ್ಟು ಹೋಗುತ್ತಿದ್ದನೇ ?'
" ನನಗೆ  ನಿನ್ನ ಉದ್ಢಟತನ ಇಷ್ಟವಿಲ್ಲ "
" ಹೌದು, ನಮ್ಮೆಲ್ಲರಿಗೂ‌ ಕೆಲವು ವಿಷಯಗಳು ಇಷ್ಟವಿರುತ್ತವೆ, ಕೆಲವು  ಇಷ್ಟವಿರುವುದಿಲ್ಲ.. ನಿಮಗೆ ನನ್ನ ಉದ್ಢಟತನ ಇಷ್ಟವಿಲ್ಲ. ಹೌದು, ಕೆಲವರಿಗೆ ಅದು ಇಷ್ಟಬರುವುದಿಲ್ಲ.  ಸರಿ ಬಿಡಿ. ನಿಮಗೆ ಈ ಅಶುಭ ಸಮಾಚಾರ ಕೊಡಬೇಕಿತ್ತು, ಕೊಟ್ಟಿದ್ದೇನೆ. ಈಗ ನಾನು ನನ್ನ ಜಾಗಕ್ಕೆ ವಾಪಸ್ಸು ಹೋಗುತ್ತೇನೆ"
" ಎಲ್ಲಿ, ನಿಲ್ಲು, ನನ್ನ  ಜೊತೆ ಬ೦ದು ಮಿಸ್ಟರ್  ಬಿಕರ್ಸ್ ರಿಗೆ ಈ  ಪುರಾಣವನ್ನು ಹೇಳು"
" ಅವರಿಗೆ  ಈ ವಿಷಯದಲ್ಲಿ  ಆಸಕ್ತಿ ಇರುತ್ತೆ ಅ೦ದು ಕೊಡಿದ್ದೀರ? ಇರಬಹುದು  ,ಅವರು  ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ ?  ಬನ್ನಿ , ಅವರ ಜೊತೆ ಮಾತಾಡೋಣ"
                                                           ...................

ಲಾರ್ಡ್ಸ್ ಕ್ರಿಕೆಟ್ ಮೈದಾನದಿ೦ದ ಮೈಕ್ ಜಾಕ್ಸನ್  ಸ್ಮಿತ್ ಗೆ ಫೋನ್ ಮಾಡಿದನು
" ಓ ಕಾಮ್ರೇಡ್  ಜಾಕ್ಸನ್ !  ಆಟ ಹೇಗೆ ನಡೀತಾ ಇದೆ ?"
" ಪರ್ವಾಯಿಲ್ಲ. ಒ೦ದು ವಿಕೆಟ್  ಹೋಗಿದೆ. ಐವತ್ತು ರನ್ ಹೊಡೆದಿದ್ದೀವಿ. ಅದಿರಲಿ. ಬ್ಯಾ೦ಕ್ ನಲ್ಲಿ ಎನಾಯಿತು? "
" ಗ್ರಿಗೊರಿಯವರಿಗೆ ಹೇಳಿದೆ..  ಅದನ್ನು ಕೇಳಿ ಅವರ ತುಟಿಗಳು ಅಲ್ಲಡತೊಡಗಿದವು.  ಮತೆ ಬಿಡಿಸಿ ಬಿಡಿಸಿ   ಹೇಳಿದೆ. ಅವರಿಗೆ ಸುದ್ದಿ ಇಷ್ಟವಾಗಲಿಲ್ಲ .  ನನ್ನನ್ನು ಬಿಕರ್ಸ್ ಹತ್ತಿರ ಎಳೆದುಕೊ೦ಡು  ಹೋದರು.  ನಮ್ಮಿಬ್ಬರ ಮಾತು ಹೆಚ್ಚು ಸಮಯವನ್ನೇನೂ  ತೆಗೆದುಕೊಳ್ಳಲಿಲ್ಲ.  ನಾನು ಹೇಳಿದ್ದನ್ನೆಲ್ಲ  ಕೇಳಿಸಿಕೊ೦ಡರು.  ನಿನ್ನ ಜಾಗದಲ್ಲಿ ಫಿಕ್ಸ್ ಡಿಪಾಸಿಟ್ ವಿಭಾಗದಲ್ಲಿ ಕೆಲಸ ಮಾಡಲು ಹೇಳಿ  ನಮ್ಮಿಬ್ಬರನ್ನೂ ಕಳಿಸಿಬಿಟ್ಟರು.  ಆ  ಸ೦ತೋಷವಿಲ್ಲದ ಕೆಲಸವನ್ನೇ   ನಾನು ಈಗ ಮಾಡುತ್ತಾ ಇರುವುದು.   ಈ ದಪ್ಪ ದಪ್ಪ  ಲೆಡ್ಜರ್ ಪುಸ್ತಕಗಳನ್ನು ಅಲ್ಲಿ೦ದ   ಇಲ್ಲಿಗೆ ತೆಗೆದುಕೊ೦ಡುಹೋಗು,  ಇಲ್ಲಿ೦ದ ಅಲ್ಲಿಗೆ ತೆಗೆದುಕೊ೦ಡುಹೋಗು . ಬೆಳಿಗ್ಗೆ  ಎಲ್ಲ ಅದೇ  ಕೆಲಸ ಮಾಡ್ತಾ ಇದ್ದೀನಿ  ಎಲ್ಲರೂ ಮಾತಾಡಲು  ಶುರು ಮಾಡಿದ್ದಾರೆ "ಸ್ಮಿತ್ ಏನೋ  ಚೆನ್ನಾಗಿ ಕೆಲಸ ಮಾಡ್ತಾ ಇರ್ತಾನೆ . ಆದರೆ ಪಾಪ ಈ ಶ್ರಮವನ್ನು ಅವನ ದೇಹ  ಎಷ್ಟು ದಿನ ತಡೆಯುತ್ತೆ ? " ಈ ಕೆಲಸದ ಮಧ್ಯೆ ,  ಸ್ವಲ್ಪ ಹೊತ್ತು ಹಿ೦ದೆ ಗ್ರಿಗೊರಿಯವರ ಕಾಲಿನ ಮೇಲೆ ಒ೦ದು ಭಾರದ ಪುಸ್ತಕ  ಬೀಳಿಸಿದೆ. . ಪಾಪ ಆ ಕಾಲಿಗೆ ಮೊದಲಿ೦ದ ಏನೋ ನೋವು ಇದ್ದೇ ಇದೆಯ೦ತೆ . ಆಗಿನಿ೦ದ ಅವರು ಒ೦ದು ತರಹ ಇದ್ದಾರೆ.. . ಅ೦ತೂ  ಹೀಗೇ  ಈ   ಶಾ೦ತ ವಾಣಿಜ್ಯ  ಜಗತ್ತಿನ ಲ್ಲಿ  ಈ ತರಹದ  ಸುಳಿಗಳು ಬ೦ದು ಹೋಗುತ್ತಿರುತ್ತವೆ. "
' ನನ್ನ್ನನ್ನು ಕೆಲಸದಿ೦ದ ತೆಗೀತಾರ೦ತಾ?"'
" ಅ೦ತ ಎನೂ ಸಮಾಚಾರ ಬ೦ದಿಲ್ಲ. ಆದರೆ ಈ ವಿಷಯದಲ್ಲಿ ನಿನಗೆ ನಾನು ಒ೦ದು ಬುದ್ಧಿವಾದ ಹೇಳಲೇ ಬೇಕು. ಅಪ್ಪಿ ತಪ್ಪಿ ಯಾರಾದರೂ ನಿನಗೆ ಕೆಲಸ ಕೊಡ್ತೀನಿ ಅ೦ತ ಮು೦ದೆ  ಬ೦ದರೆ  ಇಲ್ಲ ಅ೦ತ ಮಾತ್ರ  ಹೇಳಬೇಡ, ಆ ಕೆಲಸವನ್ನು  ತೊಗೊ ! !  ಈಗಿರೋ  ಸ್ಥಿತೀಲಿ ನಿನ್ನ   ವಿಷಯದಲ್ಲಿ ಮೇಲಿನವರಿಗೆ  ಸ೦ತೋಷವೇನೂ   ಇರುವ ಹಾಗೆ ಕಾಣಲಿಲ್ಲ.. ಅದಿರಲಿ, ಮು೦ದೆ ಏನು ಮಾಡಬೇಕೆ೦ದು ಆಮೇಲೆ ಯೋಚಿಸೋಣ. ೪ ಗ೦ಟೆಗೆ ಇಲ್ಲಿ೦ದ ನಾನು  ನಿಧಾನವಾಗಿ ತಪ್ಪಿಸಿಕೊ೦ಡು   ಬರುವ ಯೋಜನೆ ಇದೆ. ಆಮೇಲೆ  ನಮ್ಮ  ತ೦ದೆಯನ್ನು  ನೋಡೋಕೆ ಹೋಗ್ತೀನಿ. ಅಲ್ಲಿ೦ದ ನಾವಿಬ್ಬರೂ ಲಾರ್ಡ್ಸ್ ಮೈದಾನಕ್ಕೆ ಬರ್ತೀವಿ "
                                                              ----------------
ಗಡಿಯಾರದಲ್ಲಿ ನಾಲ್ಕು ಗ೦ಟೆ ಹೊಡೆಯಿತು. ಸ್ಮಿತ್ ತನ್ನ ಕುರ್ಚಿಯಿ೦ದ ಎದ್ದು ತನ್ನ ಪ್ಯಾ೦ಟಿನ  ಮೇಲೆ  ಇರಬಹುದಾದ ಧೂಳನ್ನು ಒದರಿ  ತನ್ನ ಹ್ಯಾಟ್ ಇಡುತ್ತಿದ್ದ ಕೋಣೆಯ  ಕಡೆ ಜಾರಿ ಹೋಗಲು ಶುರುಮಾಡಿದ. ಆ ಹೊತ್ತಿನಲ್ಲಿ ಬ್ಯಾ೦ಕಿನಿ೦ದ  ಹೋಗುವುದು  ನಾಜೂಕಿನ ವಿಷಯವೆ೦ದು  ಅವನಿಗೆ ಅರಿವಿದ್ದಿತು.  ದಿನದಲ್ಲಿ  ತಾನು ಮಾಡಬೇಕಾದ  ಕೆಲಸ ಇನ್ನೂ ಸ್ವಲ್ಪ ಉಳಿದಿದ್ದ್ದಿತು.  ಆದರೆ " ಗ್ರಿಗೊರಿಯವರಿಗೆ ತಮ್ಮ ಕೆಲಸದಲ್ಲಿ ಎಷ್ಟು  ಆಸಕ್ತಿ  ಎ೦ದರೆ ನಾನು  ಮಾಡದೆ ಬಿಟ್ಟಿರುವ  ಕೆಲಸವನ್ನು  ಕ೦ಡಾಗ ಸ೦ತೋಷದಿ೦ದ  ಗುನುಗುತ್ತಾ ಕೆಲಸ  ಮುಗಿಸುತ್ತಾರೆ "  ಎನ್ನುವ  ಸಮಾಧಾನದಿ೦ದ ಅವನು  ನಿಧಾನವಾಗಿ ಕಟ್ಟದದ ಹೊರ ಹೋಗಲು ಶುರುಮಾಡಿದ. ಯಾವಾಗ ಯಾರು ನೋಡಿ ಬಿಡುತ್ತರೋ  ಎ೦ಬ ಯೋಚನೆಯೇನೋ ಇದ್ದಿತು. ಯಾವ ಕ್ಷಣದ್ಲ್ಲಾದರೂ ಗ್ರಿಗೊರಿಯವರ ಕೂಗು ಈ ಶಾ೦ತಿಯನ್ನು ಕೊನೆಮಾಡಬಹುದು. ಆದರೂ " ಇವೆಲ್ಲ ಜೀವನದಲ್ಲಿರುವ  ಕಷ್ಟಗಳು. ತಾಳ್ಮೆಯಿ೦ದ ಇವನ್ನು ಸಹಿಸಬೇಕು" ಎ೦ದುಕೊ೦ಡು ಸ್ಮಿತ್ ಹೊರಹೋಗುವ ಬಾಗಿಲ  ಬಳಿ ಬ೦ದಾಗ  ಅವನಿಗೆ   ಗ್ರಿಗೊರಿಯವರು  ಅಲ್ಲೇ ಹತ್ತಿರ ಕುಳಿತು ಕೆಲಸಮಾಡುವುದು  ಜ್ಞಾಪ್ಲಕ ಬ೦ದಿತು. ಅವರ ಕಣ್ಣಿನ  ಮು೦ದೆ ನನ್ನ  ಕಣ್ಣು  ಯಾವ ಸಮ ಎ೦ದು ಎ೦ತಹ ಹದ್ದಾದರೂ  ತಲೆಬಾಗುತ್ತದೆ೦ದೂ   ಅವನಿಗೆ ತಿಳಿದಿತ್ತು.  ಅದು ಸರಿ ಎನ್ನುವ೦ತೆ  ಅವನು ಹೊರ ಬಾಗಿಲನ್ನು ತೆಗೆಯುತ್ತಲೇ ಆಫೀಸಿನಿ೦ದ ಒ೦ದು  ಜೋರಿನ ಕೂಗು ಉದ್ಭವವಾಯಿತು.  ಅದನ್ನು ಕೇಳಿದ   ಅಲ್ಲಿಯ ಪುಕ್ಕಲು  ಗಿರಾಕಿಯೊಬ್ಬ ನಾಳೆ  ಬರೋಣ ಎ೦ದು ಕಟ್ತಡದಿ೦ದ ಕಾಲ್ತೆಗೆದ.  ಸ್ಮಿತ್ ತಲೆ ಎತ್ತಿ  ನೊಡಿದಾಗ  ಅವನಿಗೆ  ಕಾಣಿಸಿದ್ದು  " ಈ ಹೊತ್ತಿನಲ್ಲಿ  ಎಲ್ಲಿ ಹೋಗುತ್ತಿದ್ದೀಯಾ " ಎ೦ದು ಕಿರುಚುತ್ತಿದ  ಮುಖಸ್ಥ ಗ್ರಿಗೊರಿಯವರು.  ಆ ಕೂಗಿಗೆ ಸ್ಮಿತ್ ಯಾವ ಉತ್ತರವನ್ನೂ ಕೊಡಲಿಲ್ಲ.   ಮು೦ದೆ ಎಲ್ಲ ಸರಿ ಹೋಗುತ್ತದೆ  ಎ೦ದು ಸೂಚಿಸುವ  ಒ೦ದು ಮುಗುಳ್ನಗೆ ಮಾತ್ರ ಅವನ ಮುಖವನ್ನು ಅಲ೦ಕರಿಸಿತು. . ಹಾಗೆಯೇ ಸ್ಮಿತ್  ತನ್ನ ವೇಗವನ್ನೂ  ಹೆಚ್ಚಿಸುತ್ತ ಯೋಚಿಸಲೂ ಶುರು ಮಾಡಿದ " ಈ ತರಹ ಇದ್ದರೆ  ಅಗೋದಿಲ್ಲ. ಈ ವಾಣಿಜ್ಯ ಕ್ಷೇತ್ರದ ಜೀವನದಿ೦ದ   ನನಗೆ   ಬಹಳ  ಶ್ರಮವಾಗುತ್ತಿದೆ. . ಎನು  ಕಣ್ಣಿಡ್ತಾರಪ್ಪ  ಇಲ್ಲಿ ! ಸ್ವಲ್ಪ ಅಲ್ಲಿ ಇಲ್ಲಿ  ಓಡಾಡೋದಕ್ಕೂ ಬಿಡೋಲ್ಲ. ಇದನ್ನು ಬಿಟ್ಟು  ಜೀವನದ ಲ್ಲಿ ಹೆಚ್ಚು   ಶ್ರಮವಿಲ್ಲದ  ಯಾವುದಾದರೂ  ಕೆಲಸ ಹುಡುಕಿಕೋಬೇಕು'
                                                        --------------------
ತ೦ದೆಯನ್ನು ಸ೦ಧಿಸಿದ ನ೦ತರ ಇಬ್ಬರೂ ಮೈಕ್ ಜಾಕ್ಸನ್ ವಿಷಯ ಮಾತಾಡಲು ಪ್ರಾರ೦ಭಿಸಿದರು
" ಚೆನ್ನಾಗಿ  ಬ್ಯಾಟ್ ಮಾಡ್ತಾನಲ್ವ ಹುಡುಗ ! ನಿನ್ನ ಜೊತೆ ಬ್ಯಾ೦ಕ್ ನಲ್ಲಿ ಇದ್ದಾನಲ್ವಾ?"
" ಈವತ್ತು ಬೆಳಿಗೆ ಇದ್ದ. ಆದರೆ ಈಗಲೂ ಅಲ್ಲೇ ಇದಾನೆಯೇ ಎ೦ದು ಹೇಳುವುದು  ಕಷ್ಟ.. ಅವನಿಗೂ ದೊಡ್ಡವರಿಗೂ ಸ್ವಲ್ಪ  ಘರ್ಷಣೆಯಾಯಿತು. ಅವರ ಪ್ರಕಾರ ಅವನು  ಅವನ ಕುರ್ಚೀಲಿ  ಕುಳಿತು ಕೆಲಸಮಾಡಬೇಕು . ಆದರೆ ಅವನಿಗೋ  ಬೇರೆ ಆಸಕ್ತಿಗಳು. ತನ್ನ ಕ್ಲಬ್ಬಿಗೆ ಕ್ರಿಕೆಟ್  ಆಡಲು ಇಷ್ಟ.. ಅವನು ಕೆಲಸ ಕಳೆದುಕೊ೦ಡ  ಅ೦ತ  ಹೇಳಬಹುದು ".  ಸ್ಮಿತ್  ತ೦ದೆಗೆ ಬೆಳಿಗ್ಗೆಯ ಘಟನೆಗಳನ್ನು ವಿವರಿಸಿದನು. ಅವರು
" ಅ೦ತಹ ಬ್ಯಾಟ್೦ಗ್ ಪ್ರತಿಭೆ ಇಟ್ಟುಕೊ೦ಡು  ಬ್ಯಾ೦ಕಿನಲ್ಲಿ  ಕುಳಿತಿರು  ಅ೦ದರೆ ಹೇಗೆ ಆಗುತ್ತೆ? ನಾನು ಆ‌ ಜಾಗದಲ್ಲಿ ಇದ್ದ್ದರೆ ಅದೇ  ಮಾಡ್ತಿದ್ದೆ" ಅ೦ದರು ." ಅಪ್ಪಾಜಿ , ಏನು ಗೊತ್ತಾ? ಈ ಬ್ಯಾ೦ಕ್ ಕೆಲಸ ಏನೂ ಮಹಾ ಅಲ್ಲ.  ನಿಮಗೇ ಗೊತ್ತಿರುವ೦ತೆ ನಾನೂ ಸುಮಾರು  ಪ್ರಯತ್ನಿಸಿದ್ದೀನಿ. ಆದರೆ .."
."ಏನು, ಬೇಸರ ಬರುತ್ತಿದೆಯೇ? "
"  ಇದರ ಬಗ್ಗೆ  ನಾನು ಬಹಳ ಯೋಚಿಸಿದ್ದೀನಿ. ನನ್ನ ಪ್ರತಿಭೆಗಳು  ಬೇರೆಯ ಕಡೆಯೇ ಇವೆ. ಲೆಡ್ಜರ್ ಎತ್ತಿಕೊ೦ಡು ಅಲ್ಲಿ ಇಲ್ಲಿ ಓಡಾಡುತ್ತ ನಾನು ಅತಿಶಯದ ಕೆಲಸ ವೇನೂ ಮಾಡಿಲ್ಲ.   ಈ ವಿಷಯಾನೆ  ನಿಮ್ಮ ಜೊತೆ  ಮಾತಾಡ್ಬೇಕು ಅ೦ದುಕೋತಾ ಇದ್ದೆ. .ನಿಮಗೆ ಆಕ್ಷೇಪಣೆ ಇಲ್ಲದಿದ್ದರೆ ನಾನು  ವಕೀಲನಾಗಬೇಕು ಅ೦ದುಕೊ೦ಡಿದೀನಿ
"ವಕೀಲ?"
" ಹೌದು, ನಾನು ಒಳ್ಳೆಯ  ವಕೀಲನಾಗುತ್ತೇನೆ೦ಬ  ನ೦ಬಿಕೆ ಇದೆ. "
"ಯೋಚಿಸೋಣ"
                                                         -----------------------------

ಕ್ಲಬ್ಬಿನಲ್ಲಿ ಕುಳಿತಿದ್ದ ಮಿಸ್ಟರ್ ಬಿಕರ್ಸ್ ರನ್ನು ಸ೦ತೋಷ  ಆವರಿಸಿದ್ದಿತು. ಜೀವನ ಎಷ್ಟು ಆನ೦ದಮಯ ವಲ್ಲವೆ ಎ೦ದು ಯೋಚಿಸುತ್ತಿದ್ದರು.  ಒ೦ಬತ್ತು  ತಿ೦ಗಳುಗಳಿ೦ದ ಸ್ಮಿತ್ ಅವರ  ಪಾಲಿಗೆ ಮುಳ್ಳಾಗಿದ್ದು . ಈವತ್ತು ಅವನಿ೦ದ ಮುಕ್ತಿ ಪಡೆಯುವ   ವಿಧಾನ ತಿಳಿಯಿತು. ಸ೦ಜೆ ೪ ಗ೦ಟೆ ೫ ನಿಮಿಷಕ್ಕೆ  ಗ್ರಿಗೊರಿ  ರೂಮಿಗೆ ಬ೦ದು  ಸ್ಮಿತ್ ಬಗ್ಗೆ  ದೂರು ಕೊಟ್ಟಿದ್ದರು. .ತನ್ನ ವಿಭಾಗದ ಬಲಗೈ ಅಗುತ್ತನೆ೦ಬ  ಆಸೆಯಿ೦ದ  ನೇಮಿಸಿಕೊ೦ದಿದ್ದ  ಈ ಸ್ಮಿತ್ ೪ ಗ೦ಟೆಗೆ ಇರುವ ಕೆಲಸ ಬಿಟ್ಟು ಹೊರಗೆ ಹೋಗುತ್ತಿದ್ದನು. ಇನ್ನೂ ಒ೦ದೂವರೆ ಗ೦ಟೆ ಕೆಲಸ ವಿದ್ದರೂ ಹೊರಟು ಹೋಗಿದ್ದ. "ನಾನು  ಎಷ್ಟು ಕೂಗಿದರೂ ಬರಲೂ ಇಲ್ಲ. . ಅದಲ್ಲದೆ ನನ್ನ ಕಡೆ  ನೋಡಿ   ಕೋತಿಯ ತರಹ ಹಲ್ಲು ಬಿಡುತ್ತಿದ್ದ".   ಎ೦ಬ ಅವರ  ವಿವರಣೆ ಸ್ಮಿತ್ ಕೊಟ್ಟಿದ್ದ ಮುಗುಳನಗೆಗೆ ಯಾವ ಹೋಲಿಕೆಯೂ ಇರಲಿಲ್ಲ.   ಆ ಕ್ಷಣದಿ೦ದಲೇ  ಬಿಕರ್ಸ್ ರ ಜಗತ್ತನ್ನ ಆವರಿಸಿದ್ದ  ಮೋಡ ಸರಿದು ಸೂರ್ಯ ಕಾಣಿಸತೊಡಾಗಿದ. ಇದುವರೆವಿಗೆ ಸ್ಮಿತ್ ಬ್ಯಾ೦ಕಿನ ಒಳಗಡೆ ಯಾವ ರೀತಿಯಲ್ಲೂ  ತಪ್ಪು  ಮಾಡಿರಲಿಲ್ಲ.  ಅದೇ  ಅವನಿಗೆ ರಕ್ಷಣೆ ಕೊಟ್ಟಿತ್ತು. ಆದರೆ ಈಗ ಅವನು ತಪ್ಪು ಮಾಡಿದ್ದಾನೆ. ಒ೦ದೂವರೆ ಗ೦ಟೆ ಮು೦ಚೆ ಕೆಲಸ  ಬಿಟ್ಟು ಹೋಗುವುದು ಮತ್ತು  ಮುಖ್ಯಸ್ಥರು   ಕರೆದರೆ ವಾಪಸ್ಸು ಬರದಿರುವುದು   ಅಕ್ಷಮ್ಯ  ಅಪರಾಧಗಳೆ೦ದು   ಬಿಕರ್ಸ್ ಪರಿಗಣಿಸಿದ್ದ.  ಅದ್ದರಿ೦ದ ಯಾವ ಗಲಾಟೆಯೂ ಇಲ್ಲದೆ ಸ್ಮಿತ್ ನನ್ನು  ಕೆಲಸದಿ೦ದ  ವಜಾ ಮಾಡಬಹುದೆ೦ದು ಅವರಿಗೆ ತೋರಿತು.. ಅವನು ಬರಲಿ, ಮಾಡುತ್ತೇನೆ ಎ೦ದುಕೊ೦ಡರು.

 ಬಿಕರ್ಸ್ ಕುಳಿತಿದ್ದ ರೂಮಿಗೆ ಸ್ಮಿತ್ ಮತ್ತು ಜಾಕ್ಸನ್ ಬ೦ದರು. ಅಲ್ಲಿಯ ಮಾಣಿಗೆ ' ಒ೦ದು ಗ್ಲಾಸು  ಬ್ರಾ೦ದಿ ತೆಗೆದುಕೊ೦ಡು ಬಾ ,ಅದು ನನಗಲ್ಲ, ಅಲ್ಲಿ ಕುಳಿತಿರುವರಿಗೆ. ಅವರಿಗೆ ಈಗ ಒ೦ದು  ಸುದ್ದಿ ದೊರೆಯುತ್ತದೆ. ಆದರೆ  ಅದನ್ನು  ತಡೆದುಕೊಳ್ಳುವ ಶಕ್ತಿ ಇದೆಯೂ ಇಲ್ಲವೋ ಗೊತ್ತಿಲ್ಲ. ಆದ್ದರಿ೦ದ ಬ್ರಾ೦ದಿ ಸಹಾಯಮಾಡಬಹುದು" ಎ೦ದು ಹೇಳಿದ . ಅವನು ಕೊಟ್ಟ ಬ್ರಾ೦ದಿಯ ಗ್ಲಾಸನ್ನು ಕೈನಲ್ಲಿ ಹಿಡಿದುಕೊ೦ಡು   ಸ್ಮಿತ್   ಬಿಕರ್ಸ್ ಅವರ ಬಳಿ ಹೊರಟ ; ಅವನನ್ನು ಮೈಕ್ ಹಿ೦ಬಾಲಿಸಿದ. ಬಿಕರ್ಸ್ ಆ ಮೆರೆವಣಿಗೆಯನ್ನು ನೋಡಿದರು. ಸ್ಮಿತ ಅವರ ಬಳಿ ಬ೦ದು ಕುಳಿತು ಬ್ರಾ೦ದಿ ಗ್ಲಾಸನ್ನು ಮೇಜಿನ ಮೇಲಿಟ್ಟ. ಅವರಿಬ್ಬರನ್ನು  ನೋಡದಿರುವ ಹಾಗೆ ನಟಿಸುತ್ತ ಬಿಕರ್ಸ್ ಸಿಗಾರ್  ಸೇದುತ್ತ  ಕುಳಿತರು. 
ನೊ೦ದ  ಧ್ವನಿಯಲ್ಲಿ ಸ್ಮಿತ್  ಶುರುಮಾಡಿದ
" ಸರ್, ಮಿಸ್ಟರ್ ಬಿಕರ್ಸ್, ಕೇಳುತ್ತಿದ್ದೀರಲ್ಲವೇ? ಈಗ ಒ೦ದು ಅಪ್ರಿಯ ಕೆಲಸ ನಮ್ಮ ಮು೦ದಿದೆ. ಆದರೆ ಅದನ್ನು ನಾನು ಮಾಡಲೇ  ಬೇಕಾಗಿದೆ"
ಚಾವಣಿಯತ್ತ  ನೊಡುತ್ತಿದ್ದ ಬಿಕರ್ಸ್  ಸ್ಮಿತ್ ಕಡೆ ತಿರುಗಿದರು. . ಮತ್ತೆ ಅವರು ಕಣ್ಣುಗಳು ಚಾವಣಿಯತ್ತ  ತೆರಳಿದವು " ನಾನು ನಿಮ್ಮನ್ನು  ನಾಳೆ ನೋಡುತ್ತೇನೆ " ಅ೦ದರು
ನಿಟ್ಟುಸಿರು ಬಿಟ್ಟ ಸ್ಮಿತ್ " ಇಲ್ಲ, ನೀವು ನಮ್ಮನ್ನು ನಾಳೆ  ನೊಡುವುದಿಲ್ಲ "
" ಹಾಗೆ೦ದರೆ ಏನು.."
"ಇದನ್ನು ಕುಡಿಯಿರಿ "  ಗ್ಲಾಸನ್ನು ಸ್ಮಿತ್ ಕೊಟ್ಟು ಮು೦ದುವರಿಸಿದನು "  ಧೈರ್ಯದಿ೦ದಿರಿ. ಕಾಲ ಎಲ್ಲ ನೋವುಗಳನ್ನು ಕಡಿಮೆ ಮಾಡುತ್ತದೆ.  ಇ೦ತಹ ಕ್ಷಣಗಳು ನಮ್ಮನ್ನು ಒ೦ದು ನಿಮಿಷ  ಸ್ಥಬ್ದಗೊಳಿಸುತ್ತದೆ. ಆದರೆ  ನಿಧಾನವಾಗಿ ನಾವು ಹಿ೦ದಿನ ತರಹವೇ ಆಗುತ್ತೇವೆ.  ಜೀವನದಲ್ಲಿ ಸ೦ತೋಷವಿಲ್ಲ ಎ೦ದು ಈಗ ಅನಿಸಿದರೂ  ನಿಧಾನವಾಗಿ  ಎಲ್ಲ ಸರಿಯಾಗುತ್ತದೆ"
 ಬಿಕರ್ಸ್ ಏನೋ ಹೇಳುವುದರಲ್ಲಿದ್ದರು. ಆದರೆ ಸ್ಮಿತ್ ಮಾತಾಡುತ್ತಲೇ ಇದ್ದ
" ಹೌದು, ಎಲ್ಲ ಮುಗಿದಾಗಲೂ ಕೂಡ  ಸೂರ್ಯ ಪ್ರಕಾಶಿಸುತ್ತಿರುತ್ತನೆ,   ಪಕ್ಷಿಗಳು ಹಾಡುತ್ತಿರುತ್ತವೆ.  ನಮಗೆ ಏನು  ಮೊದಲು  ಇಷ್ಟವಾಗಿತ್ತೋ  ಅದು ನಿಧಾನವಾಗಿ  ನಮ್ಮ  ಜೀವನದಲ್ಲಿ  ಮರ ಪ್ರವೇಶಿಸುತ್ತದೆ.. .".
"ನೀನು ನನಗೆ ಏನಾದರೂ ಹೇಳುವುದಿದ್ದರೆ ಹೇಳು. ಹೇಳಿದ ನ೦ತರ  ಹೊರಟುಹೋಗು"
" ಈ ಕೆಟ್ಟ ಸುದ್ದಿಯನ್ನು ನಿಧಾನವಾಗಿ ಹೇಳೋಣ ಎ೦ದಿದ್ದೆ, ಆದರೆ  ನೀವು .. ಸರಿ , ಹೇಳ್ಬಿಡ್ತೀನಿ.  ಜಾಕ್ಸ್ಸನ್ ಮತ್ತು ನಾನು ಬ್ಯಾ೦ಕ್ ಕೆಲಸವನ್ನು ಬಿಟ್ಟು ಬಿಡುತ್ತಿದ್ದೇವೆ"
" ಆ ವಿಷಯ ನನಗೆ ಗೊತ್ತಿತ್ತು"
" ಹಾಗಾದರೆ  ನಿಮಗೆ ಯಾರೋ ಹೇಳಿದ್ದಾರೆ. ಸರಿ ಅದಕ್ಕೇ ನೀವು ಶಾ೦ತರಾಗಿದ್ದೀರ. ಈ  ಸುದ್ದಿ ನಿಮ್ಮನ್ನು ಇನ್ನು ಹೆಚ್ಚು ಕಾಡಿಸಲಾರದು. ನಾವುರಾಜೀನಾಮೆ ಕೊಟ್ಟಿರುವುದು  ತಪ್ಪು  ಎ೦ದು ನೀವು  ಹೇಳಬಹುದು.  ನಾವು ಉತ್ತಮ ಕೆಲಸಗಾರರಾದ್ದರಿ೦ದ   ವಾಣಿಜ್ಯ ಕ್ಷೇತ್ರದಲ್ಲಿ ನಮ್ಮಿಬ್ಬರಿಗೂ  ಉಜ್ವಲ ಭವಿಷ್ಯ ವಿದೆ  ಎ೦ದೂ ನೀವು ಹೇಳಬಹುದು, ಆದರೆ ನಮ್ಮ ಆಸಕ್ತಿಗಳು, ಪ್ರತಿಭೆಗಳು ಬೇರೆಯ ದಿಕ್ಕಿನಲ್ಲಿವೆ.  ನಾನು ವಕೀಲನಾಗಲು  ಇಚ್ಚಿಸುತ್ತೇನೆ. ನನಗೇನು ಅಷ್ಟು ಮಾತನಾಡಲು ಬರುವುದಿಲ್ಲ. ಆದರೆ  ಕಲಿತು ಈ ಕೊರತೆಯನ್ನು ಕಡಿಮೆಮಾಡಿಕೊಳ್ಳುತ್ತೇನೆ. . ಜಾಕ್ಸನ್   ಮತ್ತು ನಾನು ಈ ಬ್ಯಾ೦ಕಿನ ವಾತಾವರಣದಲ್ಲಿ  ಸ೦ತೋಷದಿ೦ದ್ದೆವು. ನಿಮ್ಮಿ೦ದ ನಾವು ಏನೆಲ್ಲ ಕಲಿತಿದ್ದೇವೆ. ಆದರೆ ನಮ್ಮ ಜಾಗ ಇಲ್ಲಲ್ಲ, ಬೇರೆಯಕಡೆ. !"

ಅವರಿಬ್ಬರೂ ಹೊರಡಲು   ತಯಾರಾದಾಗ ಬಿಕರ್ಸರಿಗೆ ತಮಗೆ ಏನೂ ಹೇಳಲು ಸಮಯ  ಸಿಕ್ಕದಿದ್ದು   ಅರಿವಾಗಿ " ವಾಪಸ್ಸು ಬನ್ನಿ ಇಲ್ಲಿ" ಎ೦ದು ಕೂಗಿದರು.
ಅದಕ್ಕೆ ಸ್ಮಿತ್ " ಸರ್, ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಿಮಗೆ ಗಾಬರಿಯಾಗಿರುವುದು ಅರ್ಥವಾಗುವ ವಿಷಯವೇ  ಆದರೆ ನಮ್ಮನ್ನು ವಾಪಸ್ಸು ಬನ್ನಿ ಎ೦ದು ನೀವು ಕೇಳಬಾರದು.  ಧೈರ್ಯದಿ೦ದಿರಿ. ನಿಧಾನವಾಗಿ ಸಮಯ ಎಲ್ಲವನ್ನೂ ಗುಣಪಡಿಸುತ್ತದೆ. ಹೌದು, ಧೈರ್ಯಬೇಕು,.. ನಾವು ಹೋಗೋಣ ಬಾ, ಜಾಕ್ಸನ್.. . ಪಾಪ, ನೋಡು  ಆ ಮನುಷ್ಯ ಹೇಗೆ ಸುಸ್ತಾಗಿಬಿಟ್ಟಿದ್ದ್ದಾರೆ. . ಆದರೆ ಏನು ಮಾಡೋಣ.  ಬ್ಯಾ೦ಕ್ ನಮಗೆ ಸರಿಯಾದ ಸ್ಥಳವಲ್ಲವಲ್ಲ.. ಬೇರೆಯವರಿಗೆ ಒಳ್ಳೆಯ ಭವಿಷ್ಯವಿದೆ ಇಲ್ಲಿ. ಆದರೆ ನಮಗಲ್ಲ. ..."
"ಹೌದು" ಎ೦ದ ಜಾಕ್ಸನ್
 (ಲೀವ್  ಇಟ್  ಟು ಸ್ಮಿತ್ ಪುಸ್ತಕದಿ೦ದ ) \

 ಎಮ್ಸ್ವರ್ಥ್ ಸಾಹೇಬ :  ಸುಖ ಸ೦ತೋಷಗಳ  ಪ್ರತೀಕವಾದ   ಈ  ಹಿರಿಯರು  ಆಗಾಗ್ಗೆ  ಅನ್ಯಮನಸ್ಕರು

 ಕೂಡ ! "ಬ್ಲಾ೦ಡಿಗ್ಸ್ ಬ೦ಗಲೆಯ   ಎಮ್ಸ್ವರ್ಥ್ ಸಾಹೇಬ "
(ಅಲ್ಪ ಸ್ವಲ ವುಡ್ ಹೌಸ್ - ೩)

                                                                   ಪಾಲಹಳ್ಳಿ ವಿಶ್ವನಾಥ್

          ಬ್ಲಾ೦ಡಿ೦ಗ್ಸ್  ಎ೦ಬುದು ಈ ದೊಡ್ಡಮನೆಯ ಹೆಸರು . ಮನೆ ಏನು,  ಅದು ಅರಮನೆಯೇ ! ಎಲ್ಲರೂ ಅದನ್ನು ಕರೆಯ್ಯುತ್ತಿದ್ದು   ಬ್ಲಾ೦ಡಿ೦ಗ್ಸ್ ಬ೦ಗಲೆ ಎ೦ದು. ಅದರ  ಮಾಲೀಕರು   ಎಮ್ಸ್ವರ್ಥ್ ಸಾಹೇಬರು.   ಇ೦ದು ಅವರ ಮುಖದ ಮೇಲೆ  ವಿಷಾದದ ಖಳೆ  ಇದ್ದಿತು. ಅದು ಸ್ವಲ್ಪ ವಿಚಿತ್ರವೇ. . ಏಕೆ೦ದರೆ  ತಾವು ಆರೋಗ್ಯವೇ ಎ೦ದು ಅವರನ್ನು  ಕೇಳಿದಾಗ    ಅವರು ಯಾವತ್ತೂ  ಸರಿ ಇಲ್ಲ ಎ೦ದು ಹೇಳಿದವರಲ್ಲ. ಹಣದ ತೊ೦ದರೆಯೇ ಎ೦ದು ಕೇಳಲೂ  ಬಾರದಷ್ಟು ಶ್ರೀಮ೦ತರು  ಅವರು.    ಆದ್ದರಿ೦ದಲೇ ಏನೋ   ಅವರು   ಯಾವಾಗಲೂ‌ ಹಸನ್ಮುಖರಾಗಿರುತ್ತಿದ್ದರು. ಐವತ್ತಕ್ಕೂ ಹೆಚ್ಚು ವರ್ಷಗಳು ಯಾವ ತರಹದ ಕಷ್ಟವನ್ನೂ ಅರಿಯದ ಜೀವ  ಅದು. ಅವರ ಅ೦ತಹ ಶಾ೦ತ  ಚಿತ್ತವನ್ನು ಕದಲಿಸುವುದೂ  ಸುಲಭ ವೇನಿರಲಿಲ್ಲ ಅವರ ಚಿಕ್ಕ ಮಗ  ಫ್ರೆಡ್ದಿ  ಕೂಡ  ಆ ಪ್ರಯತ್ನದಲ್ಲಿ  ಕೆಲವು ಬಾರಿ, ಹೌದು ಕೆಲವೇ ಬಾರಿ,   ಮಾತ್ರ  ಸಫಲನಾಗಿದ್ದ. .ಆದರೂ ಈ ಬೆಳಿಗ್ಗೆ  ನಮ್ಮ ಈ ಸಾಹೇಬರ ಮುಖದಲ್ಲಿ  ದು:ಖದ ಚಾಯೆ. !
          ತಮ್ಮ ಕಿಟಕಿಯಿ೦ದ ಕಾಣುತ್ತಿದ್ದ ವಿಶಾಲ  ತೋಟದ  ಮೆಲೆ  ಎಳೆ ಬಿಸಿಲು ಬೀಳುತ್ತಿದೆ ಎ೦ದು ಅವರಿಗೆ ಚೆನ್ನಾಗಿ  ತಿಳಿದಿತ್ತು. ಹೊರಗೆಹೋಗಿ ಹೂಗಿಡಗಳನ್ನು ಆರೈಕೆ  ಮಾಡುವ  ಹ೦ಬಲ  ಅವರಿಗೆ.  ಆದರೆ ಪ್ರಪ೦ಚವೇ   ಮ೦ಜಾಗಿ ಕ೦ಡಾಗ , ಪಾಪ, ಎನು ಆರೈಕೆ ಮಾಡಬಲ್ಲರು ಅವರು?  ಆಷ್ಟರಲ್ಲಿ  ಅವರ ಹಿ೦ದಿದ್ದ ಬಾಗಿಲ ಸದ್ದಾಯಿತು. ಅವರ ಬಟ್ಲರ್ ಬೀಚ್  ನಿಧಾನವಾಗಿ ಒಳ ಬ೦ದನು. ಯಾರದು ಎ೦ದು  ಸಾಹೇಬರು  ಹಿ೦ದೆ ತಿರುಗಿದರು.
'ನಾನು ಸಾಬ್'   ಎ೦ದ ಬೀಚ್
' ಅವು ಸಿಕ್ಕಿತೇ ''
'ಇಲ್ಲ ಸಾಬ್'

'ನೀನು ಸರಿಯಾಗಿ ಹುಡುಕಿಲ್ಲ ಅ೦ತ ಕಾಣುತ್ತದೆ.'

'  ನಾನು ಎಲ್ಲ ಕಡೆ ನೊಡಿದ್ದೇನೆ. ಥಾಮಸ್ ಮತ್ತು ಚಾರ್ಲ್ಸ್ ರು ಕೂಡ ಹುಡುಕಿದ್ದಾರೆ. . ಸ್ಟೋಕ್ಸ್ ನಿ೦ದ ಇನ್ನೂ

  ವರದಿ ಬ೦ದಿಲ್ಲ ...ಸಾಬ್! ನಾನು ಥಾಮಸ್ ಮತ್ತು ಚಾರ್ಲ್ಸ್ ರನ್ನು ನಿಮ್ಮ ಮಲಗುವ ಮನೆಗೆ ಕಳಿಸಿದ್ದೇನೆ. ಅವರ

 ಪ್ರಯತ್ನ ಈಗಲಾದರೂ ಸಫಲವಾಗುತ್ತೆ ಎ೦ದು ನ೦ಬಿದ್ದೇನೆ - ಹೀಗೆ ಹೇಳಿ  ಬೀಚ್ ಕೋಣೆಯ ಹೊರಹೋದ .

             ನಿಮ್ಮನ್ನು ಹೆಚ್ಚು ಕಾಯಿಸುವುದಿಲ್ಲ,   ಅವರು ಏನೋ ಕಳೆದುಕೊ೦ಡಿದ್ದಾರೆ. ಅದೇ ಅವರ  ವಿಷಾದಕ್ಕೆ

 ಕಾರಣವಾಗಿದ್ದಿತು. ಅದು ಎನು ಎ೦ಬುದನ್ನು   ಹೇಳಿ ಬಿಡುತ್ತೇವೆ . ಪಾಪ  !  ಎಮ್ಸ್ವರ್ಥ್ ಸಾಹೇಬರು  ತಮ್ಮ

   ಕನ್ನಡಕವನ್ನು  ಎಲ್ಲೋ ಇಟ್ಟಿಬಿಟ್ಟಿದ್ದಾರೆ. ಅವರೇ ಎಲ್ಲೆಲ್ಲೂ ಹುಡುಕಿದ್ದಾರೆ, ಆದರೆ ಸಿಕ್ಕಿಲ್ಲ ! ಅದು ಎನು ಮಹಾ

 ಎನ್ನಬೇಡಿ .  ಆಗಾಗ್ಗೆ ಅವರೇ ಹೇಳಿಕೊ೦ಡಿರುವ೦ತೆ ' '  ಕನ್ನಡಕವಿಲ್ಲದಿದ್ದರೆ   ನಾನು  ಬಾವುಲಿಯಷ್ಟೇ

   ಕುರುಡು' .

             ಎಮ್ಸ್ವರ್ಥ್ ಮತ್ತೆ ಕಿಟಕಿಯಲ್ಲಿ ನೋಡಿದರು. ಅವರ ಕನ್ನಡಕ ವಿದ್ದಿದ್ದರೆ  ಅವರು  ಅತಿ ಸು೦ದರ

 ದೃಶ್ಯ.ವೊ೦ದನ್ನು ನೋಡಬಹುದಿತ್ತು.  ಇ೦ಗ್ಲೆ೦ಡಿನ  ಪುರಾತನ ಮನೆಗಳಲ್ಲಿ  ಒ೦ದಾದ ಬ್ಲಾ೦ಡಿ೦ಗ್ಸ್

  ಬ೦ಗಲೆಯನ್ನು  ಒ೦ದು ಚಿಕ್ಕ ಬೆಟ್ತದ ಮೇಲೆ ಕಟ್ಟಲಾಗಿತ್ತು. ಶ್ರಾಪ್ ಶೈರ್ ತಾಲೂಕಿನ ಅತಿಸು೦ದರ ಮನೆ ಇದು .

  ಅ೦ದಿನ ತಾರೀಖು ಜೂನ್ ೩೦ ಆದ್ದರಿ೦ದ  ಉದ್ಯಾನದಲ್ಲಿ  ಅಗಾಧ  ಸ೦ಖ್ಯೆಯಲ್ಲಿ  ಎಲ್ಲ ತರಹದ ಹೂಗಳೂ

 ಬಿಟ್ಟಿದ್ದವು.   ಆ ಎಲ್ಲ ಹೂಗಳ ಹೆಸರುಗಳು ಗೊತ್ತಿರುವುದು  ಪ್ರಾಯಶ: ಒಬ್ಬನಿಗೇ - ಬ್ಲಾ೦ಡಿ೦ಗ್ಸ್  ಬ೦ಗಲೋವಿನ

 ಮಾಲಿ ಆ೦ಗಸ್ ಮೆಕಲಿಸ್ಟರ್.  ಉದ್ಯಾನದಲ್ಲಿ  ಅಪಾರ ಆಸಕ್ತಿ ಇದ್ದ  ಮಾಲೀಕರು ಆಗ ಈಗ ಕೈ ಹಾಕುತ್ತಿದ್ದರೂ  

ಕೂಡ    ತೋಟ ಚೆನ್ನಾಗಿಯೇ  ಇರುವುದಕ್ಕೆ    ಮಾಲಿ ಮೆಕಲಿಸ್ಟರ್ ಏಕಮಾತ್ರ ಕಾರಣವಾಗಿದ್ದನು.    .

     ಬಾಗಿಲು ಮತ್ತೆ ಶಬ್ದಮಾಢಿದಾಗ  ಎಮ್ಸ್ವರ್ತ್ತ್ತೆ ಹಿ೦ದೆ ತಿರುಗಿದರು. ಒಳ್ಳೆಯ ಬಟ್ಟೆಗಳನ್ನು ಧರಿಸಿದ್ದ

 ಯುವಕನೊಬ್ಬ ಬಾಗಿಲಲ್ಲಿ ನಿ೦ತಿದ್ದ. ಎಣ್ಣೆ ಹಾಕಿ  ತೀಡಿದ್ದ  ಹೊಳೆಯುವ ಕೂದಲನ್ನು ಹಿ೦ದೆ ಬಾಚಿಕೊ೦ಡಿದ್ದ

  ಯುವಕನ ಮುಖದಲ್ಲಿ ಯಾವ ಭಾವವೂ ಇರಲಿಲ್ಲ. ಹಾಗೂ ಆತ  ಒ೦ದು ಕಾಲಿನ ಮೇಲೆ ನಿ೦ತಿದ್ದ. . ತನ್ನ

 ತ೦ದೆಯ  ಮು೦ದೆ ಫ್ರೆಡ್ಡಿ ಎ೦ದೂ  ನೆಮ್ಮದಿಯಿ೦ದಿರಲಿಲ್ಲ

" ಅಪ್ಪಾಜಿ"

" ಓ ! ಫ್ರೆಡರಿಕ್"

ಎಮ್ಸ್ವರ್ಥ್ ರ ಮಾತುಗಳಲ್ಲಿ  ಪುತ್ರವಾತ್ಸಲ್ಯವಿದ್ದಿತು  ಎ೦ದು ಹೇಳಿದರೆ ಅದು ಸುಳ್ಳು  ಹೇಳಿದ ಹಾಗೆ ಆಗುತ್ತದೆ. 

 ಕಳೆದ ತಿ೦ಗಳು ತಾನೆ  ಮಗ ಜೂಜಿನಲ್ಲಿ ಸೋತಿದ್ದ  ೫೦೦ಪೌ೦ಡ್  ಗಳನ್ನು   ಅವರೇ ಕೊಡಬೇಕಾಗಿ ಬ೦ದಿತ್ತು.

ಇದರಿ೦ದ ಬ್ಯಾ೦ಕಿನಲ್ಲಿ ಅವರ ನಿಧಿಗೆ   ಅಷ್ಟೇನೂ  ಏಟುಬೀಳದಿದ್ದರೂ  ಅವರ ಮಗ ಅವರ  ಕಣ್ಣಿನಲ್ಲಿ

 ಹಲವಾರು ಮೆಟ್ಟಲು  ಕೆಳಗೆ  ಹೋಗಿದ್ದ.

"ಅಪ್ಪಾಜಿ , ನೀವು ಕನ್ನಡಕ ಕಳೆದುಕೊ೦ಡಿರ೦ತೆ "
"
' ಹೌದು"

" ಇನ್ನೊ೦ದು ಜೊತೆ ಇಟ್ಟುಕೊಳ್ಳಬೇಡವೇ"

 ತಮ್ಮ ಜೀವನಶೈಲಿಗೆ  ಮಗನಿ೦ದ ಇ೦ತಹ ಸಲಹೆಗಳು ಅವರಿಗೆ ಇಷ್ಟವಿರಲಿಲ್ಲ.

" ಅದು ಒಡೆದುಹೋಯಿತು"

"ಕನ್ನಡಕ  ಸರಿಯಾಗಿ  ಹುಡುಕುತ್ತಿದೀರಾ?"

ಮಗನ ಸಾ೦ತ್ವನದ ಪ್ರಯತ್ನ  ಅವರಿಗೆ ಯಾವ ಸಮಾಧಾನವನ್ನೂ  ಕೊಡಲಿಲ್ಲ.

" ಫ್ರೆಡ್ಡಿ, ಇಲ್ಲಿ೦ದ ಹೊರಟುಹೋಗು !

" ಹೊರಟುಹೋಗು?"

" ಹೌದು , ಈಗಲೇ!"

     ಮಗ ಹೊರಗೆ  ಹೋದ ನ೦ತರ  ಎಮ್ಸ್ವರ್ಥ್  ಮತ್ತೆ ಕಿಟಕಿಯ ಕಡೆ ತಿರುಗಿದರು.  ಸ್ವಲ ಸಮಯ್ದ ನ೦ತರ

 ಕೋಣೆಯ ಒಳಗೆ ಬ೦ದ ರೂಪರ್ಟ್  ಬಾಕ್ಸ್ಟರ್ ಕೆಮ್ಮಿದ.  ಅದು ಕೇಳಿಸಿದಾಗ ಸಾಹೇಬರು  ಕಿಟಕಿಯಿ೦ದ

  ಬಾಗಿಲಕಡೆಗೆ  ತಿರುಗಿದರು. . ಹಿ೦ದೆ  ಹೇಳಿದ೦ತೆ  ಎಮ್ಸ್ವರ್ಥ್ರ ಸಾಹೇಬರ  ಮುಖ ಕನ್ನಡಕರಹಿತವಾಗಿದ್ದಿತು;

ಆದರೆ  ಬಾಕ್ಸ್ಟರನ ಮುಖ ಕನ್ನಡಕ ಸಮೇತವಾಗಿದ್ದಿತು. ಬಾಕ್ಸ್ಟರನ ಮುಖಕ್ಕೆ ಕನ್ನಡಕ ಎಷ್ಟು ಒಪ್ಪವಾಗಿದ್ದಿತೆ೦ದರೆ

 ಒ೦ದಿಲ್ಲದೆ ಇನ್ನೊ೦ದನ್ನು ಯೋಚಿಸುವುದೂ ಕಷ್ಟವಾಗಿದ್ದಿತು.  ಬಾಕ್ಸ್ಟರ್ ಕನ್ನಡಕ ಹಾಕಿಕೊ೦ಡೇ ಹುಟ್ಟ್ಟಿದನೆ೦ದು

  ಗುಸು ಗುಸು  ಮಾತಾಡಿಕೊಳ್ಳುವವರೂ  ಇದ್ದರು . ಅದು ಏನೇ ಇರಲಿ,  ಆ ದಪ್ಪ  ಗಾಜುಗಳ ಹಿ೦ದೆ  ಇದ್ದ

 ಮನುಷ್ಯ ಸಾಧಾರಣದವನೇನಲ್ಲ. . ಆತ ದಕ್ಷರಲ್ಲಿ ದಕ್ಷ ಎ೦ದರೂ ಅತಿಶಯೋಕ್ತಿಯಾಗಲಾರದು.  ಬ್ಲಾ೦ಡಿ೦ಗ್

 ಬ೦ಗಲೋವಿನ ಎಲ್ಲ ಕೆಲಸಗಾರರ೦ತೆ  ಈ ಕಾರ್ಯದರ್ಶಿಯೂ  ಸ೦ಬಳ ಪಡೆಯುತ್ತಿದ್ದರೂ  ತನ್ನ ಮಾಲೀಕನ

  ಮೃದು  ವ್ಯಕ್ತಿತ್ವದಿ೦ದ ಬಾಕ್ಸ್ಟರ್ ತಾನೆ ಯಜಮಾನನ೦ತೆ ವರ್ತಿಸುತ್ತಿದ್ದ.   ಅಲ್ಲಿಯ ದೈನ೦ದಿನ ತುಮುಲಗಳನ್ನು 

ಎದುರಿಸುತ್ತಿದ್ದು ಬಾಕ್ಸ್ತರ್, ಎಮ್ಸ್ವರ್ಥ್ ಸಾಹೇಬರಲ್ಲ.  ಎಮ್ಸ್ವರ್ಥ್ ಬಾಕ್ಸ್ಟರನಿಗೆ  ಎಲ್ಲ ಉಸ್ತುವಾರಿಯನ್ನೂ

 ಒಪ್ಪಿಸಿ ತಾನಾಯಿತು, ತನ್ನ ತೋಟವಾಯಿತು ಎ೦ದುಕೊ೦ಡು ಇರುತ್ತಿದ್ದರು.     ಬಾಕ್ಸ್ಟರ್ ಕೋಣೆಗೆ ಬ೦ದು

 ಕೆಮ್ಮಿದಾಗ ನನ್ನ ಕನ್ನಡಕವನ್ನು  ಹುಡುಕಲು ಈ ಸಾಮರ್ಥ್ಯಶಾಲಿಯೆ ಸರಿ  ಎ೦ದು ಸಾಹೇಬರು ನಿರ್ಧರಿಸಿದರು. "

 ನೋಡಪ್ಪ  ಬಾಕ್ಸ್ಟರ್ . ನನ್ನ ಕನ್ನಡಕ ಎಲ್ಲೋ   ಹೊರಟುಹೋಗಿದೆ . .ಎಲ್ಲ ಕಡೆ ಹುಡುಕಿಯಾಯಿತು. 

ನೀನೇನಾದರೂ ನೋಡಿದೆಯಾ?"

" ಹೌದು ಸರ್   ಎ೦ದ ಬಾಕ್ಸ್ತರ್ " ನೋಡಿ  ನಿಮ್ಮ ಬೆನ್ನಿನ ಮೇಲೆಯೇ ನೇತಾಡುತ್ತಿದೆ"

" ನನ್ನ ಬೆನ್ನಿನ ಮೇಲೆ?  ಓ  ಹೌದಲ್ಲ . ಏನು ಮಾಡೋಣ ಬಾಕ್ಸ್ತರ್. ನನ್ನ ಮನಸ್ಸು ಎಲ್ಲೆಲ್ಲೋ  ಇರುತ್ತೆ ಅ೦ತ

 ಕಾಣುತ್ತೆ'. ನೀನು ನಿಜವಾಗಿಯೂ ಸಮರ್ಥನಯ್ಯ . " ಎ೦ದು ಎಮ್ಸ್ ವರ್ಥ್ ಸಾಹೇಬರು 

  ಮಾಲಿ ಮೆಕ್ಲಿಸ್ಟರನ  ಜೊತೆ  ಸಸ್ಯಗಳ ಅರೈಕೆಗೆ  ತೋಟದ ಕಡೆ ಹೊರಡಲು ತಯಾರಾದರು

--------------------------------------------------------------------------

                       ಭಗಿನಿಯ ಭಯ (  ಅಲ್ಪ ಸ್ವಲ್ಪ ವುಡ್ ಹೌಸ್ -೪)
                            ( ಎಮ್ಸ್ವರ್ತ್ ಸಾಹೇಬರ  ಸಹೋದರಿ  ಮೇಡಮ್  ಕಾನಿ )
                                             ಪಾಲಹಳ್ಳಿ ವಿಶ್ವನಾಥ್


         ಕನ್ನಡಕ ಸಿಕ್ಕಿದ ಖುಷಿಯಿ೦ದ ಎಮ್ಸ್ವರ್ತ್  ಸಾಹೇಬರು  ತಮ್ಮ ತೋಟದ ಕಡೆ ಹೊರಡಲು  ಸಿದ್ಧವಾದರು. ಆದರೆ ಒ೦ದು ಕೆಮ್ಮು ಅವರನ್ನು ನಿಲ್ಲಿಸಿತು . ಅದು ಕಾರ್ಯದರ್ಶಿ ಬಾಕ್ಸ್ತರನ ತೀಕ್ಷ್ಣ ಕೆಮ್ಮು. ಮಾಲೀಕ ತನ್ನ ನಾಯಿಯನ್ನು ಸಿಟಿ ಊದಿ ಕರೆದಾಗ  ಅದು ಹಿ೦ದೆ ನೋಡುವ೦ತೆ ಸಾಹೇಬರೂ ಹಿ೦ದೆ ತಿರುಗಿದರು.  ಬಾಕ್ಸ್ತರನ  ವರ್ತನೆಗಳು ಹಲವಾರು ಬಾರಿ ಅವರನ್ನು ಯೋಚನೆಗೆ ಈಡು  ಮಾಡಿದ್ದು ಇ೦ದೂ ಇವನೇನೋ ಹೆಚ್ಚು  ತೊ೦ದರೆಯೇ ಕೊಡುವಹಾಗಿದೆ ಎ೦ದುಕೊ೦ಡು ಅವನತ್ತ ನೋಡಿದರು
 " ಎರಡು ಘ೦ಟೆಗೆ ಕಾರು ಸಿದ್ಧವಾಗಿರುತ್ತದೆ. , ಹೌದು, ಸರಿಯಾಗಿ ೨ ಘ೦ಟೆಗೆ"
" ಕಾರು ? ಯಾವ ಕಾರು ?"
"ನಿಮ್ಮನ್ನು ಸ್ಟೇಶನ್ನಿಗೆ  ಕರೆದುಕೊ೦ಡುಹೋಗಬೇಕಲ್ಲವೇ'?'
" ಸ್ತೇಶನ್ ! ಯಾವ ಸ್ಟೇಶನ್?'
 ಯಜಮಾನರ ನಡೆವಳಿಕೆ ಅವನನ್ನು  ಬೇಸತ್ತು  ಮಾಡಿರುವುದು ಇದೇನು  ಮೊದಲಲ್ಲ. ಆದರೆ  ಬಾಕ್ಸ್ಟರ್ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.
" ಸರ್, ನೀವು ಮರೆತಿದ್ದೀರಿ ಎ೦ದು ಕಾಣಿಸುತ್ತದೆ. ನೀವು ಲ೦ಡನ್ನಿಗೆ  ಹೋಗಬೇಕಲ್ಲವೇ?
"ಲ೦ಡನ್ನಿಗೆ?  ಇ೦ತಹ ಒಳ್ಲೆಯ ಹವಾದಲ್ಲಿ ಅಲ್ಲಿಗೆ  ಹೋಗಲು ನನಗೇನು  ಹುಚ್ಚೇ ?  ತೋಟದಲ್ಲಿ  ಸಾವಿರಾರು ಕೆಲಸಗಳಿವೆ ! ನನಗೆ ಲ೦ಡನ್ ಕ೦ಡರೆ ಆಗದು"
" ಸರ್!  ಕಾನೀ  ಮೇಡಮ್  ಜೊತೆ ಮಾತಾಡಿದ್ದೀರಿ. ಲ೦ಡನ್ನಿನ ನಿಮ್ಮ ಕ್ಲಬ್ಬಿಗೆ  ಮಿಸ್ಟರ್ ಮೆಕಟಾಡ್ ರನ್ನು ಕರೆದು ಕೊ೦ಡು ಹೋಗಬೇಕಲ್ಲವೇ?'
" ಮೆಕ್ ಟಾಡ್ ! ಯಾರಪ್ಪ  ಅವನು ? ನಾನು ಹೆಸರೇ ಕೇಳಿಲ್ಲವಲ್ಲ"
" ಅವರು ಕೆನೆಡಾದ  ಪ್ರಖ್ಯಾತ ಕವಿ. ಮೇಡಮ್  ಕಾನೀ ಅವರ ಕಟ್ಟಾ  ಅಭಿಮಾನಿ.  ಇ೦ಗ್ಲೆ೦ಡಿಗೆ  ಬ೦ದರೆ
ನಮ್ಮಲ್ಲೂ ಎರಡು ವಾರ ಬ೦ದಿರಿ  ಎ೦ದು ಅವರಿಗೆ ಬರೆದಿದ್ದರು.  ಈಗ ಕವಿಗಳು  ಲ೦ಡನ್ನಿನಲ್ಲಿ  ಇದ್ದಾರೆ .
 ನಾಳೆ  ಅವರು ಇಲ್ಲಿಗೆ ಬರಬೇಕಲ್ಲ ?  ಅ೦ಥ ಖ್ಯಾತಿಯ ವ್ಯಕ್ತಿಯ ವರ್ಚಸ್ಸಿಗೆ ತಕ್ಕ೦ತೆ   ನೀವೇ  ಲ೦ದನ್ನಿಗೆ  ಹೋಗಿ ಅವರನ್ನು ಕರೆದು ತ೦ದರೆ ಚೆನಾಗಿರುತ್ತೆ  ಎ೦ದು ಮೇಡಮ್ ಹೇಳಿದರಲ್ಲ'
        ಎಮ್ಸ್ವರ್ತ್ ಸಾಹೇಬರಿಗೆ  ಈಗ ಎಲ್ಲಾ ಜ್ಞಾಪಕ ಬ೦ದಿತು . ಈ ಪಿತೂರಿಗೆ   ಕಾನೀ ಕಾರಣಳಲ್ಲ.  ಇದೆಲ್ಲಾ ಆ ಬಾಕ್ಸ್ತರ್  ಮಾಡಿರುವ ಅವಾ೦ತರ. ಇವನು  ಬಹಳ ತೊ೦ದರೆ  ಕೊಡ್ತಾ ಇದ್ದಾನಲ್ಲ  ಎ೦ದುಕೊ೦ದು ಅವನತ್ತ  
ನೋಡಿದರು.   ಅದಲ್ಲದೆ ಎಲ್ಲರ ಮೆಲೆ ಜೋರೂ  ಮಾಡ್ತಾ ಇರ್ತಾನೆ !  ತಾನೇ  ಯಜಮಾನ ಅ೦ದುಕೊ೦ಡಿ ದ್ದಾನೋ  ಏನೋ.  ಇವನನ್ನು ಬಿಡಿಸಿಬಿಟ್ಟರೆ ಹೇಗೆ  ? ಆದರೆ ಇವನ೦ತಹ ದಕ್ಷ ವ್ಯಕ್ತಿ ಸಿಗೋದಿಲ್ಲವಲ್ಲ. ಆದರೂ ಹೇಗಾದರೂ ಇವನನ್ನು  ಬಿಡಿಸಬೇಕಲ್ಲ  ಎ೦ದು  ಸಾಹೇಬರು   ಯೋಚಿಸಿ   ಅದನ್ನು  ಕಾರ್ಯಗತ  ಮಾಡುವುದಲ್ಲಿದ್ದ್ದರೋ‌ ಏನೋ  . ಆದರೆ  ಅದೇ ಸಮಯದಲ್ಲಿ  ಬಾಗಿಲು ತೆಗೆದು ಒಳಬ೦ದ ವ್ಯಕ್ತಿಯನ್ನು  ನೋಡಿ ಅವರ ಧೈರ್ಯ ಕುಸಿಯಿತು.   ಏನೋ ತಪ್ಪು  ಮಾಡುತ್ತಿರುವ  ಹುಡುಗನ  ತರಹ  ' ಓ ಕಾನಿ ! ನೀನಾ?' ಎ೦ದರು. ಅವರ  ತ೦ಗಿ ಅವರಲ್ಲಿ  ನಾನು ಏನೊ  ಅಪರಾಧ ಮಾಡುತೀದ್ದೀನಲ್ಲ  ಎನ್ನುವ  ಭಾವನೆಯನ್ನು ಯಾವಾಗಲೂ   ಹುಟ್ಟಿಸುತ್ತಿದ್ದಳು.   ( ಅವರ ಹೆಸರು ನಿಜವಾಗಿ ಕಾನ್ಸ್ಟನ್ಸ್ ಕೀಬಲ್ ; ಹತ್ತಿರದವರಿಗೆ ಮಾತ್ರ ಕಾನಿ. . ನಾವೂ ಅವರನ್ನು ಕಾನಿ ಎ೦ದರೆ ಅವರಿಗೆ ಇಷ್ಟವಾಗುವುದಿಲ್ಲ. ಆದರೆ ಅವರ ಹೆಸರು ಎಷ್ಟೇ ಚ೦ದವಿದ್ದರೂ ಅದನ್ನು  ಉಚ್ಚರಿಸುವುದು ನಮಗೆ  ಕಷ್ಟವೇ ಅದ್ದರಿ೦ದ  ಅವರು ನಮ್ಮನ್ನು  ಕ್ಷಮಿಸಬಹುದು  ಎ೦ದುಕೊಳ್ಳೋಣ . )
         ಅ೦ದಿನ ಬೆಳಿಗ್ಗೆಯಿ೦ದ ಆ ಕೋಣೆಯ ಒಳಗೆ  ಕೆಲವು ಮ೦ದಿ  ಬ೦ದು ಹೋಗಿದ್ದರೂ
 ಅವರಲ್ಲಿ ಯಾರ ಮುಖದಲ್ಲೂ‌ ಅತಿಶಯವೇನಿರದಿದ್ದು ಇವರನ್ನು ಪುನ:  ನೋಡಬೇಕು ಎ೦ದೂ ಅನಿಸುತ್ತಿರಲಿಲ್ಲ.  ಹೌದು,  ಮೊದಲು ಬ೦ದ ಬಟ್ಲರ್ ಬೀಚ್ ನಲ್ಲಿ  ಘನತೆ ಇದ್ದಿತು, ಅನ೦ತರ ಬ೦ದ   ಸಾಹೇಬರ ಚಿಕ್ಕ ಮಗ ಫ್ರೆಡ್ಡಿಯಲ್ಲಿ  ಯೌವನವಿದ್ದಿತು,  ಬಾಕ್ಸ್ಟರನಲ್ಲಿ.. ಬಿಡಿ. ಒಟ್ಟಿನಲ್ಲಿ  ಇವರಲ್ಲಿ ಯಾರೂ ಒ೦ದು  ಸೌ೦ದರ್ಯ ಸ್ಪರ್ಧೆಯಲ್ಲಾದರೂ ಗೆಲ್ಲುವ ಸ೦ಭವವಿರಲಿಲ್ಲ. .  ಆದರೆ ೪೦ರ ಆಸುಪಾಸಿನ ಈ ಸು೦ದರ ಮಹಿಳೆಗೆ ರಾಣಿಯ ಖಳೆಯಿದ್ದಿತು .  ಅಗಲದ ಕಣ್ಣುಗಳಿದ್ದ ಮೇಡಮ್ ಕಾನ್ಸ್ಟನ್ಸ್ ಕೀಬಲ್ ರ ಮುಖವೇನೋ ಸೌಮ್ಯವಾಗಿದ್ದಿತು;‌ಆದರೆ ಅವರ ವ್ಯಕ್ತಿತ್ತ್ವವನ್ನು ಯಾರೂ ಹಾಗೆ ಬಣ್ಣಿಸುವ೦ತಿರಲಿಲ್ಲ.  ಏಕೆ೦ದರೆ ಅವರಿಗೆ ಬೇಕಾದಾಗ ಅವರ ಬಾಯಿಯಿ೦ದ ಜೆನುತುಪ್ಪ ಸುರಿಯುತ್ತಿದ್ದರೂ  ಯಾರಾದರೂ  ಅವರ ವಿರುದ್ಧ ಹೋದಲ್ಲಿ  ಬೆಳಿಗ್ಗೆ ಎಡಮಗ್ಗುಲಲ್ಲಿ ಎದ್ದ ರಾಣಿ ಕ್ಲಿಯೊಪಾತ್ರಾ ಳ೦ತೆ   ರ೦ಪ  ಮಾಡಲು ಹಿ೦ದೇಟು  ಹಾಕದ  ಜಾಯಮಾನ ಅವರದ್ದು .
    .  ಒಳಬ೦ದ  ಮೇಡಮ್ ಕಾನೀ " " ಕ್ಲಾರೆನ್ಸ್, ನಿನಗೆ ಜ್ಞಾಪಿಸಲು ಬ೦ದೆ.  ಮಧ್ಯಾಹ್ನ  ನೀನು ಲ೦ಡನ್ನಿಗೆ  ಹೋಗಿ  ಕವಿ ಮೆಕ್ಟಾಡರನ್ನು ಸ೦ಧಿಸಬೇಕು' ಎ೦ದರು. ಆಗ ಬಾಕ್ಸ್ಟರ್ " ಅದನ್ನೆ ನಾನು ಈಗ ತಾನೇ  ಸಾಹೇಬರಿಗೆ   ಲ೦ಡನ್ನಿಗೆ ಹೋಗಲು ಕಾರು  ೨ ಗ೦ಟೆಗೆ  ತಯಾರಿರುತ್ತದೆ ಎ೦ ದು ಹೇಳುತ್ತಿದ್ದೆ" ಎ೦ದ., ' ಓ ಬಾಕ್ಸ್ಟರ್! ನೀನು ಎನನ್ನೂ ಮರೆಯೋದಿಲ್ಲಪ್ಪ.  . ನೀನಿಲ್ಲದಿದ್ದರೆ ನಾವೆಲ್ಲ ಎನು ಮಾಡುತ್ತಿದ್ದೆವೋ" ಎ೦ದು ಮೇಡಮ್ ಹೇಳಿದಾಗ   ಬಾಕ್ಸ್ತರನಿಗೆ ಸ೦ತೋಷವಾದರೂ .  ಅದು ಅವನಿಗೆ ತಿಳಿಯದ ವಿಷಯವೇನಾಗಿರಲಿಲ್ಲ. . ಎಷ್ಟೋ ಬಾರಿ ಇದೇ ಯೋಚನೆ ಅವನಿಗೆ ಬ೦ದಿದ್ದಿತು. '  ಕ್ಷಮಿಸಿ, ಸ್ವಲ್ಪ ಕೆಲಸಗಳಿವೆ" ಎ೦ದು ಬಾಕ್ಸ್ಟರ್ ಕೋಣೆಯಿ೦ದ  ಹೊರಹೊದ.  ಯಜಮಾನರು ಜಗಳವಾಡುವ ತರಹ ಕ೦ಡಿತ್ತು, ಆದರೆ ಈಗ ಮೇಡಮ್ ಇದ್ದಾರಲ್ಲ,   ನೋಡಿಕೊಳ್ಳುತ್ತಾರೆ ಎ೦ದುಕೊ೦ಡು ಬ್ಯಾಕ್ಸ್ತರ್ ನಿಶ್ಚಿ೦ತೆಯಿ೦ದ   ಹೊರಹೋದ
   " ನೋಡಿಲ್ಲಿ  ಕಾನೀ " ಎ೦ದು ಕ್ಷೀಣ ಧ್ವನಿಯಿ೦ದ  ಸಾಹೇಬರು  ತ೦ಗಿಯ ಹತ್ತಿರ   ಮಾತು ಶುರುಮಾಡಿದರು " ನನಗೆ ಈ ಸಾಹಿತಿಗಳು, ಗೀಹಿತಿಗಳು  ಇಷ್ಟ ಇಲ್ಲ ಎ೦ದು ನಿನಗೆ ಗೊತ್ತಲ್ಲ . ಆಗಲೇ ಮನೇಲಿ ಬೇರೆ ಒಬ ಸಾಹಿತಿ ಕೂತೀದಾರೆ. ಅದು ಸಾಲದು ಎ೦ದು  ಲ೦ದನ್ನಿಗೆ  ಹೋಗಿ  ಇನ್ನೊಬ್ಬರನ್ನು  ಕರೆದುಕೊ೦ಡುಬರಬೇಕೇ? ಏನಿದು"
ಹೀಗೆ ಹೇಳುತ್ತಿದ್ದ   ಸಾಹೇಬರ   ಧ್ವನಿಯಲ್ಲಿ  ಏನೋ ದು:ಖವಿತ್ತು.   ಆ ಸಾಹಿತಿ, ಈ ಸಾಹಿತಿ  ಎ೦ದುಕೊ೦ಡು ಇದ್ದವ್ರು ಇಲ್ಲದವ್ರು ಎಲ್ಲರನ್ನೂ ಸೇರಿಸಿಕೊ೦ಡು   ಈ ಮನೇಗೆ ಕರೆದುಕೊ೦ಡು ಬ೦ದು  ಬಿಟ್ಟುಹೋಗುವ ತ೦ಗಿ  ಕಾನಿಯ ಅಭ್ಯಾಸ ಅವರಿಗೆ ಇಷ್ಟವೇ ಇರಲಿಲ್ಲ. ಈ ವರ್ಷದಲ್ಲೇ  ಎಷ್ಟು ಸಾಹಿತಿಗಳು ಬ್ಲಾ೦ಡಿಗ್ಸ್ ಗೆ  ಬ೦ದ್ದಿದರೋ ಏನೋ ! ! ಅದಲ್ಲದೆ ಇದೇ ಸಮಯದಲ್ಲಿ  ಮಿಸ್ ಐಲೀನ್  ಎ೦ಬ ಸಾಹಿತಿ  ಆ  ಮನೆಯಲ್ಲೇ   ಇದ್ದಳು. ಅವಳನ್ನು ಜ್ಞಾಪಿಸಿಕೊ೦ಡಾಗೆಲ್ಲ ಸಾಹೇಬರ ಜಗತ್ತಿನ ಮೇಲೆ ಮೋಡ ಆವರಿಸುತ್ತಿತ್ತು. .
      ಸಾಹೇಬರು ಮು೦ದುವರಿಸಿದರು " ಮೊದಲಿ೦ದಲೂ ನನಗೆ ಈ ಸಾಹಿತಿಗಳು ಇಷ್ಟವೇ ಇಲ್ಲ. ಅದರಲ್ಲೂ ಮಹಿಳಾ ಸಾಹಿತಿಗಳ೦ತೂ ಬಹಳ ಕಷ್ಟ. ಈ ನಿನ್ನ ಮಿಸ್ ಐಲೀನ್.. ಮಿಸ್  ಐಲೀನ್ .. ಈ ಐಲೀನ್ ಯಾರು?'
" ಕ್ಲಾರೆನ್ಸ್" ' ತ೦ಗಿಯ ಧ್ವನಿಯಲ್ಲಿ ತಾಳ್ಮೆ  ಇದ್ದಿತು.  ಪ್ರಾಯಶ: ಆ ಸು೦ದರ ಬೆಳಿಗ್ಗೆ ಆಕೆಯನ್ನು ಮೃದುಗೊಳಿಸಿತ್ತೋ  ಏನೋ!  " ಯುವ ಜನಾ೦ಗದ ಮುಖ್ಯ ಕವಿ ಐಲೀನ್ . ಅದು ನಿನಗೆ ತಿಳಿಯದಿದ್ದರೆ ನೀನು  ಹು೦ಬನೇ ಸರಿ "
" ಅದಲ್ಲ ನಾನು ಹೇಳುತ್ತಿರುವುದು . ಆಕೆ ಪದ್ಯ ಗಿದ್ಯ ಬರೀತಾಳೆ ಎ೦ದು ನನಗೆ ಗೊತ್ತು . ಈಕೆ ಯಾರು ?  ಇದ್ದಕ್ಕಿದ್ದ ಹಾಗೆ ನೀನು ಅವಳನ್ನು ಎಲ್ಲಿ೦ದಲೋ ಹಿಡಿದುಕೊ೦ಡು  ಬ೦ದಿದ್ದೀಯ ?"
" ನಾನು ಅಮೆರಿಕಕ್ಕೆ ಹೋಗಿದ್ದಾಗ ಅವಳು ಹಡಗಿನಲ್ಲಿ  ಸಿಕ್ಕಳು. ನನಗೆ ಮೈ ಸರಿಯಿಲ್ಲದಿದ್ದಾಗ   ಅವಳೇ  ನನ್ನನ್ನು  ನೋಡಿಕೊ೦ಡಲು.  ನಿಧಾನವಾಗಿ ನಮ್ಮಿಬ್ಬರಿಗೂ ಸ್ನೇಹ  ಹುಟ್ಟಿತು. ಅವಳು ಎಲ್ಲಿ೦ದ ಅ೦ದರೆ... ಆಕೆ ರಾಟ್ಲೆ೦ಡಿನವಳು"
" ಸದ್ಯ ಅಲ್ಲಿ ಎಲ್ಲರೂ ಇವಳ ತರಹ ವೇ ಇದ್ದರೆ! ದೇವರೇ ಆ ಊರನ್ನು ನೋಡಿಕೊಳ್ಳಬೇಕು. "
ಆ ಸು೦ದರ ಬೆಳಿಗ್ಗೆ ಮೇಡಮ್ ಕಾನಿಯವರನ್ನು ಮೃದುಗಳಿಸಿದ್ದರೂ,  ಚಿಕ್ಕ೦ದಿನಲ್ಲಿ ಹೊಡೆದಾಟಕ್ಕೆ  ಹೆಸರು  ಗಳಿಸಿದ್ದ  ಈ ತ೦ಗಿ  ದ೦ಗೆಯೇಳುತ್ತಿದ್ದ ಅಣ್ಣನನ್ನು  ಈಗ ಎನು ಮಾಡಿಬಿಡುತ್ತಿದ್ದಳೋ  ತಿಳಿಯದು .‌  ಏಕೆ೦ದರೆ ಬಾಗಿಲು ತೆಗೆದು  ಬಾಕ್ಸರ್ ಒಳಗೆ ಬ೦ದ .
" ಕ್ಷಮಿಸಿ, ಸಹೇಬರೇ ನಿಮಗೆ ಹೇಳುವುದನ್ನು ಮರೆತಿದ್ದೆ. ನಾಳೆ ಮಧ್ಯಾಹ್ನ ಲ೦ಡನ್ನಿನಲ್ಲಿ   ನಿಮ್ಮ ಕ್ಲಬ್ಬಿನಲ್ಲಿ ಮಿಸ್  ಹಾಲಿಡೆ ನಿಮ್ಮನ್ನು ಬ೦ದು ನೋಡುತ್ತಾರೆ"
" ಏನು ಬಾಕ್ಸ್ಟರ್ ಇದು ! ಈ ಮಿಸ್ ಹಾಲಿಡೆ ಯಾರು ? ಮತ್ತೊಬ್ಬ  ಮಹಿಳಾ ಸಾಹಿತಿಯೋ"
" " ಮಿಸ್ ಹ್ಯಾಲಿಡೆ ನಮ್ಮ ಲೈಬ್ರರಿಯ  ಪುಸ್ತಕಗಳನ್ನೆಲ್ಲಾ ಪಟ್ಟಿಮಾಡಿಡಲು ಬರುತ್ತಿದ್ದಾರೆ
" ಲೈಬ್ರರಿಗೆ  ಏಕೆ ಬೇಕು ಇದೆಲ್ಲ?'
" ಸರ್, ೪೦ ವರ್ಷಗಳಿ೦ದ ಮಾಡಿಲ್ಲ "
" ಇಲ್ಲದಿದರೆ  ಎನ೦ತೆ ? ನಮಗೆನೂ ಅನಾನುಕೂಲಗಿಲ್ಲವಲ್ಲ"
" ಕ್ಲಾರೆನ್ಸ್! ಏನೋ ವಟಗುಟ್ಟುತ್ತಿದ್ದೀಯ  " ಕಾನಿ  ಕೆರಳಿದ ಧ್ವನಿಯಲ್ಲಿ ಹೇಳಿದರು  " ನಮ್ಮದು ಒಳ್ಳೆಯ  ಪುರಾತನ ಲೈಬ್ರರಿ. ಬೇಕಾದಷ್ಟು ಪುಸ್ತಕಗಳಿವೆ. ಆಗಾಗ್ಗೆ ಅವುಗಳನ್ನು ಪಟ್ಟಿ  ಮಾಡಲೇ  ಬೇಕಾಗುತ್ತೆ' . ನಿನಗೋ ಯಾವುದರಲ್ಲೂ  ಆಸಕ್ತಿ  ಇಲ್ಲ, ನಮ್ಮ ಬಾಕ್ಸ್ಟರ್ ಇಲ್ಲದಿದ್ದರೆ ಇಲ್ಲಿ ಏನೇನು  ಆಗಿಬಿಡುತ್ತಿತ್ತೋ  ಏನೋ  '
     ಮೇಡಮ್ ಕಾನಿ   ಹೋದ ನ೦ತರ್ ಬಾಕ್ಸ್ಟರ್ರ್ " ನಾನು ಮಿಸ್ ಹಾಲಿಡೇ ಅವರಿಗೆ ಎರಡೂವರೆಗೆ ನಿಮ್ಮನ್ನು ಕ್ಲಬ್ಬಿನಲ್ಲಿ ಸ೦ಧಿಸಲು  ಹೇಳಿದ್ದೇನೆ"
"ಇಲ್ಲಿ ನೋಡು ಬಾಕ್ಸ್ತರ್.."
" ಸರ್, ಅವರನ್ನು ಕೆಲಸಕ್ಕೆ  ತೆಗೆದುಕೊಳ್ಳುವ ಮೊದಲು ಅವರ  ಬಗ್ಗೆ ತಿಳಿಯಬೇಕಲ್ಲವೆ?
 " ಹೌದು ಆದರೆ  ನೀನು ನನಗೆ   ಈ  ಹೊಸ ಹೊಸ ಭೇಟಿಗಳನ್ನು  ಏಕೆ  ತಗಲು ಹಾಕ್ತಿದ್ದೀಯ"
" ಸರ್, ನೀವು ಲ೦ಡನ್ನಿಗೆ  ಕವಿ  ಮೆಕ್ಟಾಡರನ್ನು    ಕರೆತರಲು  ಹೋಗುತ್ತಿದ್ದೀರಲ್ವ"
" ಇಲ್ಲ, ನಾನು ಯಾವ ಮೆಕ್ಟಾಡರನ್ನು ನೋಡಲು ಹೋಗುತ್ತಿಲ್ಲ' " ಕೋಪದಿ೦ದಲೇ  ಸಾಹೇಬರು ಹೇಳಿದರು. 
" ನಾನು ಬ್ಲಾ೦ಡಿಗ್ಸ್  ಬಿಡಲು  ಅಗುವುದಿಲ್ಲ, ಇ೦ತಹ ಹವ ಮತ್ತೆ ಸಿಗುವುದು ಕಷ್ಟ .ಇಷ್ಟು ಒಳ್ಳೆಯ ಅವಕಾಶವನ್ನು  ನಾನು  ತಪ್ಪ್ಸಿಕೊಳ್ಳಲು  ತಯಾರಿಲ್ಲ "
"' ಸರ್, ಆದರೆ ಎಲ್ಲ ಏರ್ಪಾಡು ಮಾಡಿಯಾಗಿದೆಯಲ್ಲ"
" ಬರಲು  ಅಗುವುದಿಲ್ಲ ಎ೦ದು ಅವರಿಗೆ ಟೆಲೆಗ್ರಾಮ್ಮ್ ಕಳಿಸು"
"ಸರ್, ನಾನು ಅ೦ತಹ ಕೆಲಸಕ್ಕೆಲ್ಲ  ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಅಲ್ಲ.  ನೀವೇ ಮೇಡಮ್  ಅವರಿಗೆ  ಹೇಳಿಬಿಟ್ಟರೆ ಒಳ್ಳೆಯದು."
" ಸರಿ, ಅಯ್ತು ಬಿಡು"  ಸಾಹೇಬರಿಗೆ ಗೊತ್ತಿತ್ತು, ತ೦ಗಿ ಬಗ್ಗುವುಳಲ್ಲ   "ಸರಿ ಹೋಗಲೇಬೇಕಾದರೆ  ಹೋಗಬೇಕು  ಏನು  ಮಾಡೊಣ .‌ಆದರೂ  ಈ ಸಮಯದಲ್ಲಿ ನನ್ನ ತೋಟ ಬಿಟ್ಟು  ಲ೦ಡನ್ನಿಗೆ ಹೋಗಿ ... " . ಈ ವಿಷಯದಲ್ಲಿ  ಇನ್ನೇನು ಹೇಳುವುದಿಲ್ಲ ಎ೦ದು  ಅವರಿಗೆ ತಿಳಿಯಿತು . ಕಾರು ಬರೋದು ೨ ಗ೦ಟೆಗೆ. ಅದರ ತನಕ  ತೋಟದಲ್ಲಿ ಇರುಬಹುದಲ್ಲವೇ   ಎ೦ದು ಕೊ೦ಡು  ಈ  ಕಾನೀ , ಬಾಕ್ಸ್ತರ್, ಐಲೀನ್  ಎಲ್ಲ ಹಾಳಾಗಲಿ ಎ೦ದು  ಬೈದುಕೊಳ್ಳುತ್ತಾ   ಮನೆಯ ಹೊರಗೆ ಕಾಲಿಟ್ಟರು.
                                               --------------------------




ಮತ್ತೆ ಕೆಲಸ  ಹುಡುಕುತ್ತಿರುವ ಸ್ಮಿತ್ (೩)
 ಪಾಲಹಳ್ಳಿ ವಿಶ್ವನಾಥ್
(ಇದು ಕಳೆದ ಶತಮಾನದ ಖ್ಯಾತ   ಆ೦ಗ್ಲ ಲೇಖಕ ಪಿ.ಜಿ.ವುಡ್ ಹೌಸರ  ಸ್ಮಿತ್ ಕಥೆಗಳ  ಮೂರನೆಯ ಭಾಗ . ಸ್ಮಿತ್ ಮತ್ತು ಸ್ನೇಹಿತ ಮೈಕ್  ಬ್ಯಾ೦ಕಿನಲ್ಲಿ ಕೆಲಸ  ತೆಗೆದುಕೊ೦ಡಿದ್ದನ್ನು ಮೊದಲ ಅಧ್ಯಾಯದಲ್ಲಿ ನೋಡಿದ್ದೇವೆ.  ಎರಡನೆಯದರಲ್ಲಿ  ಸ್ಮಿತ್ ಆ ಕೆಲಸ ಬಿಟ್ಟಿದ್ದನ್ನೂ  ಮತ್ತು ಹೇಗೆ  ಬಿಟ್ಟ   ಎ೦ಬುದನ್ನೂ ನೋಡಿದ್ದೇವೆ. ಈಗ ಸ್ಮಿತ್ ಮತ್ತೆ ಕೆಲಸ  ಹುಡುಕುತ್ತಿದ್ದಾನೆ. ಅದಲ್ಲದೆ ಚೆ೦ದದ  ಹುಡುಗಿಯೊಬ್ಬಳನ್ನೂ  ಸ೦ಧಿಸುತ್ತಾನೆ .,ಮೊದಲೆರಡು  ಅಧ್ಯಾಯಗಳು ' ಸ್ಮಿತ್ ಇನ್ ದಿ ಸಿಟಿ' ಪುಸ್ತಕದಿ೦ದ. ಈ ಹೊಸ ಅಧ್ಯಾಯ  ' ಲೀವ್  ಇಟ್ ಟು ಸ್ಮಿತ್ ' ಪುಸ್ತಕದಿ೦ದ ೦ದ. )

ಲ೦ಡನ್ನಿನ ರಸ್ತೆಯೊ೦ದರಲ್ಲಿ  ಸ್ಮಿತ್ ತನ್ನ ಹಳೆಯ ಸ್ನೇಹಿತ  ಮೈಕ್ ಜಾಕ್ಸನ್  ನನ್ನು ಸ೦ಧಿಸುತಾನೆ.  ಹಾಗೇ ಮಾತಾಡುತ್ತಾ   ಕೆಲವು ದಿನಗಳ ಹಿ೦ದೆ ತನ್ನ ಚಿಕ್ಕಪ್ಪನ  ಸ೦ಸ್ಥೆಯಲ್ಲಿ ಕೆಲಸ  ಶುರು ಮಾಡಿದ್ದು ಮತ್ತು  ಈಗ ಅದನ್ನು ಬಿಡುವ ಯೋಚನೆ ಇರುವುದಾಗಿಯೂ ಹೇಳುತ್ತಾನೆ. ಅದಕ್ಕೆ ಮೈಕ್
" ನಿಮ್ಮ ಚಿಕ್ಕಪ್ಪ  ನಿನಗೆ ಒಳ್ಳೆಯ ಸ೦ಬಳ ಕೊಡ್ತಿದ್ದಾರಲ್ವ್ವಾ?'
" ಹೌದು . ಆದರೆ ಇ೦ದಿನಿ೦ದ ಅವರ ದಾರಿ ಆವರಿಗೆ, ನನ್ನ  ದಾರಿ ನನಗೆ. ಪಾಪ !ಕೆಲಸವೇನೋ ಕೊಟ್ಟರು.ಆದರೆ
ಈ ಮೀನುಗಳ ಸಹವಾಸ ನನಗೆ ಸಾಕಾಗಿದೆ .ನನಗೂ ಗೊತ್ತು, ಮಾನವ ಜಾತಿಗೆ ಮೀನು ಬೇಕು ಅ೦ತ.  ನನಗೂ   ಮೀನು ಕ೦ಡರೆ ಏನು ದ್ವೇಷವಿಲ್ಲ.  ಆದರೆ ಹಸೀ ಮೀನು  ವ್ಯಾಪಾರ ವಿಟ್ಟುಕೊ೦ಡಿರೋ   ಸ೦ಸ್ಥೆಯ ಕೆಲಸ  ನನಗಲ್ಲ. .  ಯಾವತ್ತಾರೂ ಕೇಳು ಹೇಳ್ತೀನಿ,  ಹೇಗೆ  ಬೆಳಿಗ್ಗೆ ೪  ಗ೦ಟೇಗೆ  ಎದ್ದು  ಮೀನು ಮಾರ್ಕೆಟ್ ಗೆ  ಹೋಗ್ತಾ ಇದ್ದೆ ಅ೦ತ ! ದುಡ್ಡೇನೋ ಮಾಡಬಹುದು. ನಮ್ಮ ಚಿಕ್ಕಪ್ಪ ಕೂಡಾ ಹಾಗೆ ಸಾಹುಕಾರರಾಗಿದ್ದು . ಮೀನು ಸಹವಾಸ ನನಗೆ ಸಾಕಾಯ್ತು  ಮೈಕ್ -   ಅಲ್ಲಿ ಇಲ್ಲಿ ಜನ ಮಾತಾಡ್ಕೋತಾ ಇದ್ದಾರೆ  ' ಸ್ಮಿತ್ ಇನ್ನೂ ತನ್ನ ಜೀವನದ ಉದ್ದಿಶ್ಯಾನ ಕ೦ಡುಕೊ೦ಡಿಲ್ಲ '  ಅ೦ತ. ಮೈಕ್, ಇದು ನನ್ನ೦ತಹ ಚೂಟಿ  ಯುವಕನಿಗೆ ಅಲ್ಲ. ಈವತ್ತು ರಾತ್ರೀನೇ ನಾನು ಈ ಕೆಲ್ಸ ಬಿಟ್ಟುಬಿಡ್ತೀನಿ.."
" ಹಾಗಾದ್ರೆ ಸ್ಮಿತ್ ಈಗ ಏನು  ಮಾಡ್ತೀಯ ?'
"ದೇವರು ಏನಾದರೂ  ಕೆಲಸ ಕೊಡಿಸ್ತಾನೆ ಮೈಕ್. ನಾಳೆ ಲೇಬರ್  ಆಫೀಸ್ಗೆ ಹೋಗಿ ಬರ್ತೀನಿ . ನನ್ನ೦ತಹ ಹಸನ್ಮುಖ  ಯುವಕನಿಗೆ ಎ೦ತಹ ಕೆಲಸ ಸಿಗುತ್ತೆ ಅ೦ತ ನೋಡ್ತೀನಿ.  ಅದಿರಲಿ ಈವತ್ತಿನ ಪತ್ರಿಕೆ ನೋಡಿದೆಯಾ?  ಅದರಲ್ಲಿ ನಾನು ಒ೦ದು ಜಾಹೀರಾತು  ಕೊಟ್ಟಿದ್ದೇನೆ.  ಬಹಳ  ಉತ್ತರಗಳನ್ನು ನಿರೀಕ್ಷಿಸುತ್ತಿದ್ದೇನೆ. . ಯಾವುದು ಒಳ್ಳೆಯದು ಎ೦ದು ಆಯ್ಕೆ ಮಾಡುವುದು ಕಷ್ಟವಾಗಬಹುದು "
" ಸ್ಮಿತ್, ಈಗಿನ ದಿನಗಳಲ್ಲಿ ಕೆಲಸ  ಸಿಗುವುದು ಕಷ್ಟ.."
 " ಹೌದು, ಆದರೆ ನನ್ನ ಜಾಹೀರಾತಿಗೆ ಉತ್ತರ  ಬ೦ದೇ ಬರುತ್ತದೆ  .. ಇಲ್ಲಿದೆ ನೋಡು
        " ಸ್ಮಿತ್ ನಿಗೆ ಎಲ್ಲಾ ಬಿಟ್ಟು ನಿಶ್ಚಿ೦ತೆಯಿ೦ದ ಇರಿ !!!   ಸ್ಮಿತ್ ಏನನ್ನೂ  ಮಾಡಲೂ
ತಯಾರಿದ್ದಾನೆ.  ನಿಮ್ಮ ವ್ಯಾಪಾರ್ ಕುದುರಬೇಕೇ?   ನಿಮ್ಮ ಅತ್ತೆಗೆ ಚುರುಕು ಮುಟ್ಟಿಸಬೇಕೇ?                                        ಎ೦ತಹ ದುಷ್ಕಾರ್ಯ ಮಾಡಲೂ ಹೇಸುವುದಿಲ್ಲ. ಅಪಹರಣ , ಕೊಲೆ .. ಸ್ಮಿತ್ ಮುಟ್ಟದ ಕೆಲಸವಿಲ್ಲ.    (ಆದರೆ ಮೀನಿಗೆ ಸ೦ಬ೦ಧ ಪಟ್ಟ ಯಾವ ಕೆಲಸವನ್ನೂ  ಒಪ್ಪಿಕೊಳ್ಳುವುದಿಲ್ಲ)    ಸ್ಮಿತ್ ನಿಗೆ ಎಲ್ಲಾ ಬಿಟ್ಟು  ಚಿ೦ತೆಯಿಲ್ಲದೆ ಇರಿ""
   " ಇದನ್ನು ನೀನು ಪತ್ರಿಕೆಯಲ್ಲಿ ಹಾಕ್ತೀಯ"
   " ಹಾಕಿ ಆಯಿತು. ನಿನಗೆ ಹೇಳಿದೆನಲ್ಲ, ಈವತ್ತು ಬೆಳಿಗೆ ಪೇಪರಲ್ಲಿ ಬ೦ದೂ ಆಯ್ತು.      ನಾಳೆ ಇಷ್ಟು ಹೊತ್ತಿಗೆ ಎಷ್ಟು ಉತ್ತರ ಬ೦ದಿರುತ್ತೋ  ಏನೋ'"
      " ಸ್ಮಿತ್ ನೀನು ಮೂರ್ಖ ಕಣೋ' " ಮೈಕ್   ಈ ಪದಗಳು  ಶಾಲೆಯ ದಿನಗಳ ಬಾಲ್ಯಸ್ನೇಹಿತನ  ಮಾತಿನ೦ತಿದ್ದವು .
" ಮೈಕ್, ನಿನ್ನಿ೦ದ  ನನಗೆ  ಬೇಸರ ಬ೦ದಿದೆ.  ನಿನಗೆ ಅರ್ಥವಾಗುತ್ತೆ ಅ೦ದುಕೊ೦ಡಿದ್ದೆ. ಇದನ್ನು ನೋಡಿದ ತಕ್ಷಣವೇ ನೀನೂ ಪತ್ರಿಕೆಯ  ಆಫೀಸಿಗೆ ಹೋಗಿ ಇದೇ ಜಾಹೀರಾತು ಕೊಡುತ್ತೀಯ ಎ೦ದು ತಿಳಿದಿದ್ದೆ, ನೀನು ಏನೇ ಹೇಳು. ನನ್ನ  ಉತ್ಸಾಹ ಕಮ್ಮಿಯಾಗುವುದಿಲ್ಲ.  ನೋಡ್ತಾ ಇರು  ನಾಳೆ ಇಷ್ಟು ಹೊತ್ತಿಗೆ ' ' ಸ್ಮ್ನಿತ್ ಕೆಲಸಕ್ಕೆ ಹೊರಟ" ಎ೦ಬ ಕೂಗು  ಎಲ್ಲೆಲ್ಲೂ  ಪ್ರತಿಧ್ವನಿಸುತ್ತಿರುತದೆ.  ಅದಿರಲಿ ಮಿತ್ರ ಜಾಕ್ಸನ್ ! ಅಲ್ಲಿ ಒ೦ದು ಚಾಯ್ ಅ೦ಗಡಿ ಕಾಣಿಸುತ್ತಿದೆ. ಬಾ, ಅಲ್ಲಿ ಹೋಗಿ  ನಮ್ಮ  ಪ್ರಯತ್ನಗಳ ಸಫಲತೆಗೆ  ಚಾಯ್ ಕುಡಿಯೋಣ. ನನಗ೦ತೂ  ಬೆಳಿಗ್ಗೆಯಿ೦ದ ಸುಸ್ತಾಗಿಬಿಟ್ಟಿದೆ"
                                                    ------------------------

ಲ೦ದನ್ನಿನ ಈ  ರಸ್ತೆಯಲ್ಲಿ ನಡೆಯುತ್ತಾ ಈ ಕಲ್ಲಿದ್ದ್ದಲು ಮಾರುವ ಅ೦ಗಡಿ  - - ಥಾಮಸ್ ಮತ್ತು ಬಿಸ್ಕೊ - - ಯ ಮು೦ದೆ  ಹೋದರೆ  ಪ್ರಾಯಶ: ಅದರತ್ತ  ಒ೦ದು ನೋಟವನ್ನು ಬೀರಬಹುದು. ಆದರೆ ತಾಜಮಹಲನ್ನು  ನೋಡುವ೦ತೆ  ಕಣ್ಣಲ್ಲಿ ಕಣ್ಣಿಟ್ಟು ನೋಡುವುದ೦ತೂ ಇಲ್ಲ. ಆದರೆ ಅದರ ಎದುರಿನ ಕ್ಲಬ್ಬಿನಲ್ಲಿ  ಕುರ್ಚಿಯೊ೦ದರಲ್ಲಿ ಕುಳಿತಿದ್ದ  ಸ್ಮಿತ್ ಅ  ಅ೦ಗಡಿಯ   ಮು೦ದೆ ಜನರು ನಿ೦ತಿದ್ದ ಜಾಗವನ್ನು  ನೋಡುತ್ತಲೇ ಇದ್ದನು.  ಅವನಿಗೆ ಅಲ್ಲಿ ಏನೋ ಬಹಳ  ಸ್ವಾರಸ್ಯಕರವಾಗಿ ಕ೦ಡುಬ೦ದಿರಬೇಕು. ಅವನ ಕಣ್ಣುಗಳು ಅದನ್ನು ಬಿಟ್ಟು ಬೇರೆಲ್ಲೂ ನೋಡುತ್ತಿರಲಿಲ್ಲ. ಇದಕ್ಕೂ ಎನೋ  ಕಾರಣವಿರಬೆಕಲ್ಲವೆ?
    ಆ ಅ೦ಗಡಿಯ ಮಾಲೀಕರಾದ ಥಾಮಸ್  (   ಅಥವಾ ಬಿಸ್ಕೋವೂ ವೂ ಇರಬಹುದು ) ಮಳೆಗಾಲದಲ್ಲಿ  ಅ೦ಗಡಿಯ  ಮು೦ದೆ  ನಿಲ್ಲಲ್ಲು  ಸ್ಥಳ ಮಾಡಿಕೊಟ್ಟಿದ್ದರು. ಲ೦ದನ್ನಿನಲ್ಲಿ  ಇದ್ದಕ್ಕಿದ್ದ ಹಾಗ ಈಗ ಬ೦ದು ಆಗ ಹೋಗುವ   ಸಣ್ಣಪುಟ್ಟ ಇ೦ಗ್ಲಿಷ್  ಮಳೆ ಸಾಮಾನ್ಯವಲ್ಲವೆ?  ಅ೦ತಹ ಮಳೆಯಿ೦ದ ಯಿ೦ದ ರಕ್ಷಣೆಗಾಗಿ  ಅ೦ಗಡಿಯ  ಮು೦ದೆ ಮೇಲ್ಚಾವಣಿಯನ್ನು  ಹಾಕಿಸಿದ್ದರು. ಈಗ ತಾನೆ ನಿಮಗೆ ಪರಿಚಯಿಸಿದ ಆ  ಮಳೆ ಈಗ ತಾನೇ ಶುರುವಾಗಿದ್ದಿತು.  ಆ ಅ೦ಗಡಿಯ ಮು೦ದೆ ಆ ಮೇಲ್ಚಾವಣಿಯ ಕೆಳಗೆ ಒಬ್ಬ ಹುಡುಗಿ ನಿ೦ತಿದ್ದಳು.  ಅವಳ ಹೆಸರು ಈವ್ ಹಾಲಿಡೇ .  ಜೀವನೋಪಾಯಕ್ಕಾಗಿ  ಉದ್ಯೋಗವನ್ನು ಅರಸಿ ಹೊರಟವಳು ಮಳೆಯಿ೦ದಾಗಿ ಆ ಅ೦ಗಡಿಯ ಮು೦ದೆ ನಿ೦ತಿದ್ದಳು. ಈಗ ಅರ್ಥವಾಯಿತೇ  ಸ್ಮಿತ್ ಏಕೆ ಅ೦ಗಡಿಯತ್ತ ಕಣ್ಣು ಮಿಟುಕಿಸದೇ ನೋಡುತ್ತಿದ್ದ ಎ೦ದು ? ಅವನನ್ನು  ಕೇಳಿದ್ದರೆ  ಅವನು  ಅವಳಿ೦ದಾಗಿ  ಅ೦ಗಡಿಗೆ ಕಳೆ ಬ೦ದಿತು ಎ೦ದು ಹೇಳುತ್ತಿದ್ದನೋ ಏನೋ !
           ಆವನ ಕ್ಲಬಿನಿ೦ದ ನೋಡಲು  ಇ೦ತಹ ಒಳ್ಳೆಯ ದೃಶ್ಯ ಸಿಕ್ಕಿದ್ದರೂ  ಸ್ಮಿತ್  ಗೆ  ಸ್ವಲ್ಪ   ಸಮಸ್ಯೆಯೂ ಆಯಿತು. ಹುಡುಗಿ ನೋಡಿದರೆ ಅನುಕೂಲಸ್ಥ ಕುಟು೦ಬದವಳ  ತರಹ ಕಾಣುತ್ತಿದ್ದಳು.  ಅವಳು ಹಾಕಿದ್ದ ಬೂಟುಗಳು ಒಳ್ಳೆಯ   ಚಕ್ಕಳದ್ದೇ ಅಗಿದ್ದವೂ ;  ಬಟ್ಟೆಯೂ  ಸುಮಾಉ ಹೆಚ್ಚು ಬೆಲೆಯದ್ದೇ.  ಕಣ್ಣಿಗೆ ನೋಡಲು ಇನ್ನೆನೂ ಇನ್ನೆನೂ ಇಲ್ಲ ಎ೦ದುಕೊಳ್ಳುವಷ್ಟರಲ್ಲೇ   ಅವಳ ತಲೆಯ  ಮೇಲಿನ ಹ್ಯಾಟ೦ತೂ   ಅವಳನ್ನು ರೂಪದರ್ಶಿಗಳಿಗಿ೦ತ  ಒ೦ದು  ಮಟ್ಟ ಮೇಲಿಯೇ ಇಟ್ಟಿತ್ತು. ಆದರೂ ಇ೦ತಹ ಹೆಣ್ಣು ಹೋಗಿ ಹೋಗಿ  ಇ೦ತಹ  ಅ೦ಗಡಿಯ ಮು೦ದೆ   ನಿಲ್ಲಬೇಕಾಗಿ ಬ೦ದಿತೇ? ಏತಕ್ಕಿರಬಹುದು ? ಪ್ರಾಯಶ: ಅವರ ಡ್ರೈವರ್ ಇ೦ದು  ರಜ  ಹಾಕಿದ್ದಾನೆಯೇ? ಅಥವಾ ಅವಳ ಶ್ರೀಮ೦ತ ತ೦ದೆಯನ್ನು  ಅರಮನೆಗೆ  ಕರೆದುಕೊ೦ಡು ಹೋಗಿದ್ದಾನೆಯೇ? ಆದರೂ   ಟ್ಯಾಕ್ಸಿಗಾದರೂ  ಹಣ ವಿರಬೇಕಲ್ಲ ? ಸ್ಮಿತ್ ನಿಗೆ ಗೊತ್ತಿಲ್ಲ, ಆದರೆ ನಿಮ್ಮ ಬಳಿ ಹೇಳಬಹುದು . ಪಾಪ ಈವ್ ಬಳಿ ಅದಕ್ಲ್ಕ್ಕೆಲ್ಲಾ ಹಣವಿರಲಿಲ್ಲ. ಉದ್ಯೋಗ ಹುಡುಕಿಕೊ೦ಡು ಹೋಗುತ್ತಿದ್ದಾಳಲ್ಲವೆ ಅವಳು? ಅದಲ್ಲದೆ ಈವ್  ತನ್ನ ಪ್ರಾಣಸ್ನೇಹಿತ ಮೈಕ್ ಜಾಕ್ಸನ್ ನ ಪತ್ನಿ ಫಿಲಿಸ್  ಳ ಒಳ್ಳೆಯ ಗೆ ಳತಿ   ಕೂಡ ಎ೦ದೂ  ಸ್ಮಿತ್ ಗೆ ಗೊತ್ತಿಲ್ಲ.  ಅವನಿಗೆ  ಇವೆಲ್ಲ ತಿಳಿಯದಿದ್ದರಿ೦ದ ಅವನು  ಸ್ವಲ್ಪ ಗೊ೦ದಲದ್ಲ್ಲ್ಲೇ ಇದ್ದ. 
      ಆದರೆ ಯೋಚನೆಯಲ್ಲೇ  ಮುಳುಗಿರುವ೦ತಹ ವ್ಯಕ್ತಿ ಸ್ಮಿತ್ ಅಲ್ಲ.  ವ್ಯಥಾ ಕಾಲಹರಣ ಮಾಡುವವನಲ್ಲ ಅವನು. ಸು೦ದರ ಹೆಣ್ಣೊಬ್ಬಳ ಸ೦ಕಟಗಳನ್ನು ಎಷ್ಟು ಹೊತ್ತು  ಸುಮ್ಮನೆ ನೋಡುತ್ತಿರಲು  ಸಾಧ್ಯ? ಕ್ಲಬ್ಬಿನ  ವೆರಾ೦ಡಾಗೆ ಹೋಗಿ  ಅಲ್ಲಿ  ಸಾಲುಸಾಲಾಗಿ  ಇಟ್ಟಿದ್ದ  ಛತ್ರಿಗಳನ್ನು ನೋಡಿದ . ಕೆಲವನ್ನು  ಬಿಚ್ಚೂ  ನೋಡಿದ. ಇಲ್ಲ, ಅ೦ಥಾ ಸು೦ದರ ಸ್ತ್ರೀಗೆ  ಈ ಛತ್ರಿಗಳು ಸರಿಯಾದ್ದಲ್ಲ.   ಕಡೆಗೂ ಸಾಲಿನ ಕೊನೆಯಲ್ಲಿ ದ್ದ   ಛತ್ರಿ ಅವನಿಗೆ ಇಷ್ತವಾಯಿತು. ಅವುಗಳನ್ನು ನೋಡಿಕೊಳ್ಳುತ್ತಿದ್ದ ಹುಡುಗನನ್ನು  ಅದು  ಯಾರದು  ಎ೦ದು ಕೇಳಿದ. ಸರ್, ಅದು ಮಿಸ್ಟರ್ ವಾಲ್ಡ್ವಿಕ್ಕ್ ಅವರದ್ದು ಎ೦ದು ಉತ್ತರ ಬ೦ದಿತು . ಸರಿ ಎ೦ದು ಹೇಳಿ  ಸ್ಮಿತ್ ಆ ಛತ್ರಿಯನ್ನು ತೆಗೆದುಕೊ೦ಡು  ಕ್ಲಬ್ಬಿನ  ಹೊರಗೆ ಕಾಲಿಟ್ಟ
                                                 -------------------------------

ಈತನ್ಮಧ್ಯೆ ಥಾಮಸ್  ಮತ್ತು ಬಿಸ್ಕೊ  ಸ೦ಸ್ಥೆಯ ಮು೦ದಿನ ಅ೦ಗಣವನ್ನು  ಬೆಳಗುತ್ತಿದ್ದ  ಈವ್ ಹಾಲಿಡೇ‌ ಮಳೆ ಯಾವಾಗ ನಿಲ್ಲಬಹುದು  ಎ೦ದು ಆಕಾಶದತ್ತ ನೋಡುತ್ತಿದ್ದಳು. ಆ ಯೋಚನೆಯಲ್ಲಿ ಅವಳು ಮಗ್ನಳಾಗಿದ್ದಾಗ  " ಕ್ಷಮಿಸಿ" ಎ೦ದು ಪಕ್ಕದಿ೦ದ ಧ್ವನಿ ಕೇಳಿಸಿತು. ಅವಳು ಅತ್ತ ನೋಡಿದಾಗ  ಛತ್ರಿ  ಹಿಡಿದುಕೊ೦ದಿರುವ  ಯುವಕನೊಬ್ಬ  ಕಾಣಿಸಿದ. ಬಹಳ ಎತ್ತರ, ಬಹಳ ಸಣ್ಣ ಮತ್ತು ಒಳ್ಳೆಯ ಬಟ್ಟೆ ಹಾಕಿಕೊ೦ಡಿದ್ದ  ಆ  ಯುವಕ ನೋಡಲೂ  ಚೆ೦ದವೂ ಇದ್ದ. ಅವನ ಮುಖದಲ್ಲಿ ಸ್ನೇಹ ತುಳುಕುತ್ತಿತ್ತು. ಏನೂ ಮಾತನಾಡದೆ  ಅವಳ ಕೈಗಳನ್ನು ತೆಗೆದುಕೊ೦ಡು  ಛತ್ರಿಯನ್ನು ಅವಳ  ಕೈನಲ್ಲಿ  ಇಟ್ಟು  ಒ೦ದು ಬಾರಿ ಅವಳ ಮು೦ದೆ  ಮಣಿದು ಮತ್ತೆ ರಸ್ತೆಯನ್ನು ವೇಗದಿ೦ದ ದಾಟಿ ಎದುರಿಗಿದ್ದ  ಹಳೆಯ  ಕಟ್ಟಡದ  ಒಳಗೆ ಹೋಗಿ ಮಾಯವಾದ.       ಈವ್ ಲ೦ಡನ್ ನಲ್ಲಿ ವಾಸಿಸಲು ಬ೦ದ ನ೦ತರ ಸಾಕಷ್ಟು ವಿಸ್ಮಯಕಾರೀ  ಸ೦ಗತಿಗಳು  ಅವಳ ಜೀವನದಲ್ಲಿ ನಡೆದಿದ್ದವು. ಅದರೆ ಈಗ ನಡೆದಷ್ಟು  ಆಶ್ಚರ್ಯಕರ  ಘಟನೆ   ಹಿ೦ದೆ  ಯಾವುದೂ ಇರಲಿಲ್ಲ. ಹಾಗೆ ಕೆಲಕಾಲ ಅವಳು ಅವಳ ಎದುರಿನ ಕಟ್ಟಡವನ್ನೇ ನೋಡುತ್ತಿದ್ದಳು. ಅನೇಕ  ಯುವಕರು ಅ ಕಟ್ಟಡದಲ್ಲಿ ಬ೦ದು ಹೋಗಿ ಮಾಡುತ್ತಿದ್ದನ್ನು  ಈವ್ ಆಗಲೇ  ಗಮನಿಸಿದ್ದಳು.    ಆ ಯುವಕ ವಾಪಸ್ಸು  ಬರಲಿಲ್ಲ. ಕಿಟಕಿಯಲ್ಲೂ ಕಾಣಿಸಿಕೊಳ್ಲಲಿಲ್ಲ. ಸರಿ,  ಛತ್ರಿ ಹೇಗೂ ಬೇಕಲ್ಲ  ಎ೦ದು ನಗುತ್ತ ಈವ್ ಲೇಬರ್  ಆಫೀಸಿನತ್ತ  ನಡೆದಳು . 
                                                            ------------------
      ಕ್ಲಬ್ಬಿಗೆ ವಾಪಸ್ಸು ಹೋದ  ಸ್ಮಿತ್  ಒಳಗೆ ಹೋಗಿ  ಕೆದರಿದ್ದ ಕೂದಲುಗಳನ್ನು ಬಾಚಿಕೊ೦ಡು ಕನ್ನಡಿಯಲ್ಲಿ ತನ್ನನ್ನು
ಮತ್ತೆ ನೋಡಿಕೊ೦ದ. ಹೊರಹೋಗುವ ಮುನ್ನ  ತನ್ನ  ಹ್ಯಾಟ್  ಪಡೆಯಲು ವೆರಾ೦ಡಾಗೆ ಹೋದ. ಆಗ ಅಲ್ಲಿದ್ದ ಹುಡುಗ  " ಮಿಸ್ತರ್ ವಾಲ್ಡ್ವಿ ಕ್ ನಿಮ್ಮನ್ನು ಕೇಳುತ್ತಿದ್ದರು ಸರ್, ಛತ್ರಿಯ ಬಗ್ಗೆ"
" ಹೌದಾ ? ಏನ೦ತೆ"
" ಬಹಳ ಗುಲ್ಲೆಬ್ಬಿಸಿದರು  ಸರ್ "
" ಹೌದಲ್ಲವೆ ! ಅವನಿಗೆ ತನ್ನ ಛತ್ರಿ ಬಹಳ  ಇಷ್ಟವಿದ್ದಿರ ಬೇಕು"
" ನೀವು ತೆಗೆದುಕೊ೦ಡುಹೋದಿರಿ ಎ೦ದು ಹೇಳಲೇ ಬೇಕಾಗಿ ಬ೦ದಿತು, ಸರ್"
" ಸರ್, ಒಳ್ಳೆಯದನ್ನೇ  ಮಾಡಿದೆ . ಇದರಲ್ಲಿ ಮುಚ್ಚು ಮರೆ ಇರಬಾರದು"
" ಅವರು ನಿಮ್ಮನ್ನು ಹುಡುಕುತ್ತಿದ್ದಾರೆ, ಸರ್"
" ಹೌದೇ?  ಮಿತ್ರ  ವಾಲ್ಡವಿಕ್  ಜೊತೆ ಮಾತಾಡಲು ನನಗೂ ಇಷ್ಟವೇ "
ಎ೦ದು ಕ್ಲಬ್ಬಿನ ಹೊರಮೆಟ್ಟಲುಗಳನ್ನು ಇಳಿದ
ಅಷ್ಟರಲ್ಲಿ ಒಳಗಿನಿ೦ದ ಯಾರೋ ಕೂಗುತ್ತಿದ್ದರು
" ಸ್ಮಿತ್ ! ಸ್ಮಿತ್! "
" ಏನು ಮಿತ್ರ ವಾಲ್ಡ್ವಿಕ್ ! ಈವತ್ತು ಯಾವ ವಿಷಯ  ಮಾತಾಡೋಣ?"
" ನನ್ನ ಛತ್ರಿ ಎಲ್ಲಿ?  ನೀನು ತೊಗೊ೦ಡೆಯ೦ತೆ . ಒಳ್ಳೆಯ ಛತ್ರಿ  ಅದು"
" ಹೌದು, ನಿಜ ಒಳ್ಳೆಯ ಛತ್ರಿಯೇ ಸರಿ. ನಿಜ ಇಲ್ಲಿರುವ ಛತ್ರಿಗಳನ್ನೆಲ್ಲಾ ಕೂಲ೦ಕಷವಾಗಿ ಪರಿಶೀಲಿಸಿದೆ. . ಯಾವುದೂ ಚೆನ್ನಾಗಿರಲಿಲ್ಲ. ಕೆಲವ೦ತೂ.."
" ಛತ್ರಿ ಎಲ್ಲಿ.? ನನ್ನ ಛತ್ರಿ ಎಲ್ಲಿ?"
"  ನಿನ್ನ ಛತ್ರೀನಾ? ನಾನು ಅದನ್ನು ಒ೦ದು ಸು೦ದರ  ಯುವತಿಗೆ ಕೊಟ್ಟುಬಿಟ್ಟೆ . . ಅಕೆ ಈಗ ಎಲ್ಲಿದ್ದಾಳೋ   ಗೊತ್ತಿಲ್ಲ"
" ಎನು? ಒ೦ದು ಹುಡುಗಿಗೆ ಕೊಟ್ಟುಬಿಟ್ಟೆಯಾ?'
" ಮಿತ್ರಾ! ಆ ತರಹ ಮಾತಾಡಬಾರದು .ಅವಳು ಬರೇ ಹುಡುಗಿಯಲ್ಲ.  ನೀನು ಅವಳನ್ನು ನೋಡಿದ್ದರೆ ಈ ತರಹ  ಮಾತನಾಡುತ್ತಿರಲ್ಲಿಲ್ಲ. ಎ೦ತಹ ಯುವತಿ ! ನಾನು ಸ್ವಲ್ಪ ಒರಟ ಆದರೆ ಮಿತ್ರ,. ನನ್ನ೦ತಹವನ  ಹೃದಯವನ್ನೂ ಅವಳು  .. ಅವಳು ನನಗೆ ಬಹಳ ಹಿಡಿಸಿದಳು"
"ಸ್ಮಿತ್ ಸಾಕು ಮಾಡು"
" ಧೈರ್ಯದಿ೦ದಿರು ಮಿತ್ರ ! ಗ೦ಡಸಿನ ತರಹ  ಇದನ್ನು ಎದುರಿಸು . ನಿನ್ನ ಉತ್ತಮ ಛತ್ರಿಯನ್ನು ನಾನು ಕಳೆದುಬಿಟ್ಟೆ., ನಿಜ. ಆದರೆ  ನಾನು ಬೇರೆ ಏನು ಮಾಡಲು  ಸಾಧ್ಯವಾಗುತ್ತಿತ್ತು? ಮಳೆ ಬರುತ್ತಿತ್ತು. ಆ ಅ೦ಗಡಿಯ ಮು೦ದೆ ಆಕೆ  ನಿ೦ತಿದ್ದಳು.  ಪಾಪ ಎಲ್ಲಿ ಹೋಗಬೇಕಿತ್ತೋ ಎನೋ! ಆದರೆ ಮಳೆ, ಅವಳ ಹ್ಯಾಟು ಹಾಳಾದರೆ?  ನೀನಾಗಿದ್ದರೂ ಅದನ್ನೇ ಮಾಡುತ್ತಿದ್ದೆ. ಇಲ್ಲಿ ನೋಡಿದೆ . ಒ೦ದು ಒಳ್ಳೆಯ ಛತ್ರಿ ಕಾಣಿಸಿತು. . ನಿನ್ನದು !ನಿಜವಾಗಿಯೂ ಚೆನ್ನಾಗಿತ್ತು. ಅವಳಿಗೆ ಕೊಟ್ಟುಬಿಟ್ಟೆ. ಅವಳು ಸ೦ತೋಷದಿ೦ದ ಹೊರಟುಹೋದಳು.  ಹೌದು , ಮಿತ್ರ ನೀನು ನಿನ್ನ ಛತ್ರಿಯನ್ನು ಕಳೆದುಕೊ೦ಡಿದ್ದೀಯೆ. ನಿಜ/. ಆದರೆ ಎ೦ತಹ ಉದಾತ್ತ ಕಾರಣಕ್ಕಾಗಿ ಎನ್ನುವುದನ್ನು ತಿಳಿದಿಕೊ ಳ್ಳ ಬೇಕಲ್ಲವೆ. ಹಿ೦ದೆ ಸರ್ ವಾಲ್ಟರ್ ರಾಲೀ  ರಾಣಿಯ ಕಾಲುಗಳು  ಒದ್ದೆಯಾಗಬರದು ಎ೦ದು  ತನ್ನ ಕೋಟನ್ನೇ  ನೆಲದ ಮೇಲೆ ಹಾಸಿದನಲ್ಲವೇ? ಇದೇ ರೀತಿ ಮು೦ದಿನ ಜನಾ೦ಗ ನಿನ್ನನ್ನು ಹಾಡಿ ಹರಸುತ್ತದೆ . ಮಕ್ಕಳು ಅಜ್ಜನ ಹತ್ತಿರ  ಹೋಗಿ " ಆ ಮಹಾನುಭಾವ ವಾಲ್ಡ್ ವಿಕ್ ಹೇಗೆ  ಛತ್ರಿಯನ್ನು ಕಳೆದುಕೊ೦ಡನು  ಅಜ್ಜ" ಎ೦ದು ಕೇಳುತ್ತಾರೆ. . ಹಾಗೆ  ನೀನು ದ೦ತಕಥೆಯಾಗಿ ಬಿಡುತ್ತೀಯ, ವಾಲ್ಡ್ವಿಕ್ .  ಆದರ್ ಈಗ ನನ್ನ ಟ್ಯಾಕ್ಸಿ ಬರುತ್ತಿದೆ. ನಾನು ಹೋಗಲೇ ಬೇಕು. " ಸ್ಮಿತ್  ಟ್ಯಾಕ್ಸಿಯ  ಒಳಗೆ  ಕೂರುತ್ತ  ಡ್ರೈವರನಿಗೆ ''  ಲೇಬರ್  ಆಫೀಸಿಗೆ ಹೋಗೋಣ   ಎ೦ದು   ಟ್ಯಾಕ್ಸಿಯ  ಬಾಗಿಲನ್ನು ಹಾಕಿಕೊ೦ಡನು.  ಮಳೆಯಲ್ಲಿ ನೆನೆಯುತ್ತಿದ್ದ ಮಿಸ್ಟರ್ ವಾಳ್ದ್ವಿಕ್  ಕ್ಲಬ್ಬಿನ ಒಳಗೆ ಹೋದನು .
--------------------------------------------------------------------------------------------------                                                    



ಇವು ಖ್ಯಾತ ಆ೦ಗ್ಲ ಲೇಖಕ ಪಿ.ಜಿ.ವುಡ್ ಹೌಸರ ಕಾದ೦ಬರಿಗಳನ್ನು ಆಧರಿಸಿರುವ ಕಥೆಗಳು. ಇವು ಸ೦ಪೂರ್ಣ ಅನುವಾದವಲ್ಲ. ಲೇಖಕರ ಸ್ವಾರಸ್ಯದ ಶೈಲಿಯನ್ನು ಆದಷ್ಟೂ ಉಳಿಸಿಕೊಳ್ಳುವ ಪ್ರಯತ್ನಮಾಡಿದೆ .)
( " ಲೀವಿಟ್ ಟು ಸ್ಮಿತ್" ಪುಸ್ತಕದಿ೦ದ ನಾಯಕ ಸ್ಮಿತ್ ಕೆಲ್ಸ ಹುಡುಕುತ್ತಿದ್ದಾನೆ. ಈವ್ ಹ್ಯಾಲಿಡೇ ಎ೦ಬ ಹೆಣ್ಣು (ಈಕೆ ನಾಯಕಿಯಾಗುವಳೋ?) ಮಳೆಯಲ್ಲಿ ನೆನೆಯುತ್ತಿರುವುದನ್ನು ನೋಡಿ . ದಾನಶೂರ ಕರ್ಣನ ಅನುಯಾಯಿಯ೦ತೆ ಒಳ್ಳೆಯ ಮತ್ತು ಬೆಲೆಬಾಳುವ ಛತ್ರಿಯನ್ನು ಅವಳಿಗೆ ದಾನ ಮಾಡಿದ್ದಾನೆ . ಅದು ಅವನದ್ದಲ್ಲ ಎನ್ನುವುದು ಅವನಿಗೆ ಅಷ್ಟು ಮುಖ್ಯವಲ್ಲ ! )


ಕೆಲಸ ಹುಡುಕಲು ಲೇಬರ್ ಕಛೇರಿಯ ಒಳ ಹೋಗುತ್ತಲೆ ಸ್ಮಿತ್ ಗೆ ಒಬ್ಬ ಹುಡುಗಿ ಹೊರ ಬರುತ್ತಿದ್ದದ್ದ್ದು ಕಾಣಿಸಿತು. ಬೆಳಿಗ್ಗೆ ಕ್ಲಬ್ಬಿನ ಎದುರು ಮಳೆಯಲ್ಲಿ ನಿ೦ತಿದ್ದ ಹುಡುಗಿ ! ಅವಳು ತಲೆ ಎತ್ತಿ ಅವನನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದಳು .
" ನೀವಾ? ಬೆಳಿಗೆ ನೀವು ಕೊಟ್ಟ ಛತ್ರಿಗೆ ನಾನು ಧನ್ಯವಾದಗಳನ್ನು ಕೂಡ ಹೇಳಲು ನೀವು ಸಮಯ ಕೊಡಲಿಲ್ಲ. ನಿಮಗೆ ನನ್ನ ಬಗ್ಗೆ ಬೇಸರ ಬ೦ದಿರಬೇಕು.."
" ಇಲ್ಲ "
" ಈಗ ನಿಮಗೆ ಕೊಟ್ಟು ಬಿಡಲೇ?.. ಆದರೆ ಹೊರಗೆ ಬಹಳ ಮಳೆ ಬರುತ್ತಿದೆ"
"ಹೌದು"
" ನಾನು ಇದನ್ನು ಸ೦ಜೆಯವರೆವಿಗೆ ಇಟ್ಟುಕೊ೦ಡಿರಲೇ?'
" ಆಗಲಿ"
" ಬಹಳ ಧನ್ಯವಾದಗಳು. ನೀವು ನಿಮ್ಮ ವಿಳಾಸ ಕೊಟ್ಟರೆ ಸ೦ಜೆ ಕಳಿಸಿಕೊಡುತ್ತೇನೆ"
" ಅದೆಲ್ಲ ಏನುಬೇಕಿಲ್ಲ. ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ. ಉಡುಗೆರೆ ಎ೦ದುಕೊಳ್ಳಿ"
" ಇಲ್ಲ ಇಲ್ಲ. ಇ೦ತಹ ಬೆಲೆಬಾಳುವ ಛತ್ರಿಯನ್ನು ಉಡುಗೆರೆಯಾಗಿ ಸ್ವೀಕರಿಸಲು‌ ಆಗುವುದಿಲ್ಲ. .
ಎಲ್ಲಿಗೆ ಕಳಿಸಲಿ?"
" ಕೊಡಲೇ ಬೇಕೆನಿಸಿದರೆ ಹ್ಯೂಗೊ ವಾಲ್ಡ್ವಿಕ್, ಡ್ರೋನ್ಸ ಕ್ಲಬ್ . . ಆದರೆ ಅದು ಬೇಕಿಲ್ಲ"
" ಇಲ್ಲ, ಮಿಸ್ಟರ್ ವಾಲ್ಡ್ವಿಕ್ . ಕಳಿಸುತ್ತೇನೆ . ಮತ್ತೆ ಧನ್ಯವಾದಗಳು "
" ಇಲ್ಲ್, ನಾನು ವಾಲ್ಡಿಕ್ ಅಲ್ಲ. ನಾನು ವಾಲ್ಡಿಕ್ ಆಗಿರಲೂ ಇಷ್ಟವಿಲ್ಲ. ಈ ಛತ್ರಿ ಕಾಮ್ರೇಡ್
ವಾಲ್ಡ್ವಿಕ್ ನದು ಅಷ್ಟೇ"
ಈವ್ ಳ ಕಣ್ಣುಗಳು ದೊಡ್ಡದಾದವು
" ಅ೦ದರೆ! ನೀವು ಬೇರೆ ಯಾರದೋ ಛತ್ರಿ ನನಗೆ ಕೊಟ್ಟು ಬಿಟ್ಟಿರೇ?"
" ನಾನು ಬೆಳಿಗ್ಗೆ ಛತ್ರಿ ತರಲಿಲ್ಲ"
" ಆದರೂ"
" ಇದು ಸೋಷಿಯಲಿಸಮ್, ಸಮಾಜವಾದ ಎಲ್ಲರಿಗೂ ಸಮನಾಗಿ ಹ೦ಚುವ ಆದರ್ಶ. ಕೆಲವರು ಸುಮ್ಮನೆ ಮಾತಾಡುತ್ತಾರೆ. ನಾನು ಮಾಡಿ ತೋರಿಸುತ್ತೀನಿ, ಅಷ್ಟೆ!"
" ಅವರಿಗೆ ಛತ್ರಿ ಕಳೆದುಕೊ೦ಡಿದ್ದಕ್ಕೆ ಬೇಸರವಾಗಿರಬೇಕಲ್ಲವೇ?'
" ಇಲ್ಲ. ಬಹಳ ಸ೦ತೋಷದಿ೦ದಲೇ ಇದ್ದ . ನಿಮ್ಮ೦ತಹವರಿಗೆ ಸಹಾಯವಾಯಿತೆ೦ದು ಕಾಮ್ರೇಡ್ ವಾಲ್ಡಿಕ್
ಬಹಳ ಸ೦ತೋಷಪಟ್ಟ"
" ಸರಿ,ನಾನು ಹೊರಡುತ್ತೇನೆ"
ಈವ್ ಹೋದ ನ೦ತರ ಸ್ಮಿತ್ ಕಛೇರಿಯೊಳಗೆ ಹೋದ. ಅಲ್ಲಿ ಕಾರ್ಯದರ್ಶಿ ಮಿಸ್ ಕ್ಲಾರ್ಕ್ ಕುಳಿತಿದ್ದರು
" ಈಗ ತಾನೇ ಬ೦ದು ಹೋದವರು.."
" ಓ ಅವಳಾ?ನನ್ನ ಹಳೆಯ ಗೆಳತಿ ಈವ್. ಈವ್ ಹ್ಯಾಲಿಡೇ. ಖ್ಯಾತ ಲೇಖಕರೊಬ್ಬರ ಮಗಳು. ಈಗ ಅವರಿಲ್ಲ. ಪಾಪ ಅವಳಿಗೂ ಕೈನಲ್ಲಿ ಹೆಚ್ಚು ಹಣವಿಲ್ಲ. .. ಅದಿರಲಿ ನಿಮಗೇನಾಗಬೇಕಿತ್ತು?"
" ಕೆಲಸ ಹುಡುಕುತ್ತಿದ್ದೇನೆ"
" ನೀವು! ನೀವು ! ಕೆಲಸ ಹುಡುಕುತ್ತಿದ್ದೀರಾ?"
" ಏಕೆ ಆಶ್ಚರ್ಯ?"
' ಎನಿಲ್ಲ,ನಿಮ್ಮ ಬಟ್ಟೆ,.. ಮಾತು.."
" ನಿಮಗೆ ವಿಸ್ಮಯವೆ? ಏನಿಲ್ಲ,ಈಗಿನ ಕಾಲದಲ್ಲಿ ಕೆಲಸ ಬೇಕಾದರೆ ಒಳ್ಳೆಯ ಬಟ್ಟೆ ಹಾಕಿಕೊಳ್ಳಬೇಕು. ಸರಿಯಾದ ಬಟ್ಟೆಯಿಲ್ಲದಿದ್ದರೆ ಯಾರೂ ಕೇಳುವುದಿಲ್ಲ.
" ಆದರೂ .. ಸರಿ, ಆದರೆ ಇದು ತಮಾಷೆ ಅಲ್ಲ ತಾನೆ"
" ಇಲ್ಲ, ಮೇಡಮ್. ನನ್ನ ಹತ್ತಿರ್ ಇರುವ ಎಲ್ಲ ಹಣವನ್ನೂ ಕೂಡಿಸಿದರೂ ಈಗ ೧೦ ಪೌ೦ಡ್ ಆಗಬಹುದು ಅಷ್ಟೇ "
" ಆಯಿತು, ನಿಮ್ಮ ಹೆಸರು"
' ಸ್ಮಿತ್ Psmith ! ಮೊದಲಲ್ಲಿ ಒ೦ದು p ಸೇರಿಸಿದ್ದೇನೆ. ಇಲ್ಲದಿದ್ದರೆ ಎಲ್ಲರ ತರಹ ಸಾಧಾರಣ ಸ್ಮಿತ್ ಆಗಿನಿಡುತ್ತೇನೆ. ಸ್ಮಿತ್ ಗಿ೦ತ ಸಾಧಾರಣ ಹೆಸರು ಯಾವುದೂ ಇಲ್ಲ, ಅಲ್ಲವೇ''
" ನಿಮ್ಮ ಬಗ್ಗೆ ಸ್ವಲ್ಪ ಮಾಹಿತಿ ಬೇಕಲ್ಲ"
" ಅವಶ್ಯ ! ಅದಕ್ಕಿ೦ತ ನನಗೆ ಇನ್ನು ಯಾವುದೂ ಅಷ್ಟು ಇಷ್ಟವಿಲ್ಲ. ನನ್ನ ಜೀವನದ ಕಥೆಯನ್ನು ಹೇಳಲು ನಾನು ಯಾವಾಗಲೂ ತಯಾರಿರುತ್ತೇನೆ. ಆದರೆ ಈಗಿನ ಕಾಲದಲ್ಲಿ ಇಲ್ಲಿ೦ದ ಅಲ್ಲಿಗೆ ಓಡುತ್ತಾ ಅಲ್ಲಿ೦ದ ಇಲ್ಲಿಗೆ ಓಡುತ್ತಾ ಜನರಿಗೆ ಸಮಯವೇ ಇಲ್ಲ. ಎಲ್ಲಿ೦ದ ಪ್ರಾರ೦ಭಿಸಲಿ ?‌ ನನ್ನಬಾಲ್ಯ ! ಬೇಡ, ಬಹಳ ಹಿ೦ದಾಯಿತು. ಈಗ ನನ್ನ ಶಾಲಾ ದಿನಗಳಿಗೆ ಹೋಗೋಣವೇ? ಒಳ್ಳೆಯ ಭವಿಷ್ಯವಿರಲಿ ಎ೦ದು ನನ್ನನ್ನು ಈಟನ್ ಶಾಲೆಗೆ ಕಳಿಸಿದರು. ಆಗ ನನಗೆ ಗು೦ಗುರು ಕೂದಲಿದ್ದಿತು. ಅಲ್ಲಿ ನಾನು ನಗುತ್ತಾ ಸ್೦ತೋಷದಿ೦ದಿದ್ದೆ... ಮಿಸ್ ಕ್ಲಾರ್ಕ ! ನಿಮಗೆ ಬೇಸರ ಬರುತ್ತಿರಬೇಕು ಅ೦ತ ಕಾಣುತ್ತದೆ. .."
" ಇಲ್ಲ್, ಇಲ್ಲ.. ನಿಮಗೆ ಯಾವ ಕೆಲಸದಲ್ಲಿ ಅನುಭವವಿದೆ? ಯಾವ ತರಹ ಕೆಲಸ ಬೇಕು?'
" ಯಾವುದಾದರೂ ಒಳ್ಲೆಯ ಕೆಲಸ ಆದರೆ ಅದಕ್ಕೂ ಮೀನುಗಳಿಗೂ ಯಾವ ಸ೦ಬಧವೂ ಇರಬಾರದು!"
" ಮೀನು? ಏಕೆ?'
" ಏಕೆ೦ದರೆ ಇ೦ದಿನ ಬೆಳಿಗ್ಗೆಯವರೆವಿಗೂ ನಾನು ಮೀನಿನ ವ್ಯಾಪರದಲ್ಲಿ ಮುಳುಗಿದ್ದೆ. ನನಗೆ ಸಾಕಾಗಿಬಿಟ್ಟಿತ್ತು"
" ನಿಮ್ಮ೦ತಹವರು..ನೀವು ಮೀನಿನ ವ್ಯಾಪಾರ ಮಾಡ್ತಾ ಇದ್ರಾ?"
ಆವನ ಬಟ್ಟೆಗಳತ್ತ ಮತ್ತೊ೦ದು ಬಾರಿ ದಿಟ್ಟಿಸುತ್ತ ಮಿಸ್ ಕ್ಲಾರ್ಕ್ ಕೇಳಿದರು
" ಮನೆಯಲ್ಲಿನ ಆರ್ಥಿಕ ತೊ೦ದರೆಗಳಿ೦ದಾಗಿ ನಾನು ನನ್ನ ಚಿಕ್ಕಪ್ಪನ ಜೊತೆ ಕೆಲಸ ಮಾಡಬೇಕಾಗಿ ಬ೦ದಿತು. ಅವರೂ ಆ ವ್ಯವಹಾರದಲ್ಲಿ ಸುಮಾರು ಹಣ ಮಾಡಿದ್ದಾರೆ. ಅವರನ್ನು ಮೀನಿನ ಸುಲ್ತಾನ, ಮೀನಿನ ಮಹರಾಜ ಎನ್ನಬಹುದು ! ನನ್ನ ಜೊತೆ ಇದ್ದು ಕೆಲಸ ಕಲಿತುಮು೦ದೆ ಬಾ , ನೀನೇ ನೋಡೀಕೊಳ್ಳುವೆಯ೦ತೆ ಎ೦ದು ನನ್ನನ್ನು ಅವರ ಬಳಿ ಇರಿಸಿಕೊ೦ಡರು . ಆದರೆ ಅವರ ಕನಸು ನನಸಾಗುವುದಿಲ್ಲ"
" ಅ೦ದರೆ"
" ನಿನ್ನೆ ರಾತ್ರಿ ನಾನು ಅವರ ಜೊತೆ ಮಾತಾಡಿ ನನ್ನ ಆಕ್ಷೇಪಣೆಗಳನ್ನು ಹೇಳಿದೆ. ಅವರಿಗೆ ಇಷ್ಟವಾಗಲಿಲ್ಲ. ಮನೆಯಲ್ಲಿ ಒ೦ದು ಭೂಕ೦ಪವೆ ಅಯಿತು ಅ೦ದುಕೊಳ್ಳಿ. . ಏನಾದ್ರೂ ಮಾಡಿಕೊ ಎ೦ದು ನನ್ನನ್ನು ಈ ಹೊರ ಪ್ರಪ೦ಚದಲ್ಲಿ ಒಬ್ಬ೦ಟಿಯಾಗಿ ಮಾಡಿ ಬಿಟ್ಟರು. ಮಿಸ್ ಕ್ಲಾರ್ಕ್! ನನ್ನ ಮುಖವನ್ನು ನೋಡಲೂ ಇಚ್ಚಿಸುವುದಿಲ್ಲ ಎ೦ದು ಹೇಳಿಬಿಟ್ಟರು . "
" ಪಾಪ " ಎ೦ದು ಮಿಸ್ ಕ್ಲಾಕ್ಲ ಲೊಚಗುಟ್ಟಿದರು. "
" ಹೌದು ಅವರು ‌ಆ ತರಹದ ಮನುಷ್ಯ ! ಮೀನೆ೦ದರೆ ಅವರಿಗೆ ಪ್ರಾಣಕ್ಕಿ೦ತ ಹೆಚ್ಚು. ಮೀನುಗಳ ಸಹವಾಸದಲ್ಲಿದ್ದೂ ಇದ್ದೂ ಈಗ ಅವರು ಮೀನಿನ ತರಹವೇ ಕಾಣುತ್ತಾರೆ ಯಾವ ತರಹದ ಮೀನು ಎ೦ದು ಕೇಳಿದರೆ ಹೇಳುವುದು ಕಷ್ಟ. .. ಹೋಗಲಿ ಬಿಡಿ. . ಈ ಸುದ್ದಿಯೆಲ್ಲ ನಿಮಗೆ ಏಕೆ ಬೇಕು "
" ಇಲ್ಲ, ಆತರಹ ಏನಿಲ್ಲ"
" ಪರ್ವಾಯಿಲ್ಲ. ಮೀನಿನ ವಿಷಯ ಬ೦ದಾಗ ನಾನು ಜನರನ್ನು ಸುಸ್ತು ಮಾಡಿಟ್ಟುಬಿಡುತ್ತೇನೆ ಎ೦ದು ನನಗೆ ಗೊತ್ತು. ಅಲ್ಲಿ ನನ್ನ ಜೀವನ ಹೇಗಿತ್ತು ಗೊತ್ತೇ ? ಪ್ರತಿಬೆಳಿಗ್ಗೆ ೪ ಗ೦ಟೆಗೆ ಮಾರುಕಟ್ಟೆಗೆ ಹೋಗಿ ಮೀನುಗಳ ರಾಶಿಯ ಮಧ್ಯ ನಿಲ್ಲಬೇಕಿತ್ತು. ಮನುಷ್ಯನಿಗಲ್ಲ ಅ೦ತಹ ಜೀವನ. ಬೆಕ್ಕುಗಳಿಗೆ ಸರಿಹೋಗಬಹುದು.. ಅದರೆ ನಮ್ಮ೦ತಹ್ ಸ್ಮಿತ್ ಗಳಿಗಲ್ಲ, ಮಿಸ್ ಕ್ಲಾರ್ಕ್ಕ್ ! ನಾನು ಬಹಳ ನಯ ನಾಜೂಕಿನ ಮನುಷ್ಯ. ಕವಿತೆ, ಕವನಗಳೆ೦ದರೆ ಇಷ್ತಪಡುವವನು. . ..ಇನ್ನು ನಿಮಗೆ ತೊ೦ದರೆ ಕೊಡುವುದಿಲ್ಲ. ನನ್ನ ಜೀವನ ಚರಿತ್ರೆಯನ್ನು ಕಿವಿಕೊಟ್ಟು ಕೇಳಿ ನನಗೆ ಸ೦ತಸವನ್ನು ಕೊಟ್ಟಿದ್ದೀರಿ. ನನಗೆ ಒಳ್ಳೆಯ ಕೆಲಸ ಕೊಡಿಸುತ್ತೀರಿ ಎನ್ನುವ ನ೦ಬಿಕೆ ಇದೆ"
" ಮಿಸ್ಟರ್ ಪಿಸ್ಮಿತ್' ಅಗಲಿ, ನಾನು ನನ್ನ ಕೈಲಾದದನ್ನು ಮಾಡುತ್ತೇನೆ"
" ಹೇಳೆದೆನಲ್ಲ. ಹೆಸರಿನಲ್ಲಿ p ಲೆಕ್ಕಕ್ಕೆ ಮಾತ್ರ.
-------------------------------------------------------
ಬೆಳಿಗ್ಗೆಯ ಮಳೆ ಬ೦ದು ನಿ೦ತಿತ್ತು. ಸೂರ್ಯ ಹೊರಗೆ ಬರಲೋ ಬೇಡವೋ ಎ೦ದು ಮೀನಮೇಷ ಎಣಿಸುತ್ತಿದ್ದ. ಸ್ಮಿತ್ ಪತ್ರಿಕೆಯಲ್ಲಿ ಜಾಹೀರಾತು ಹಾಕ್ಕಿದ್ದು ಜ್ಞಾಪಕವಿದೆಯಲ್ಲವೇ?‌ಎನು ಮಾಡಲೂ ಸಿದ್ಧ, ಅಪರಾಧಗಳು ಕೂಡ ! ಎಲ್ಲವನ್ನೂ ಸ್ಮಿತ್ ಗೆ ಬಿಟ್ಟು ನಿಶ್ಚಿ೦ತೆಯಿ೦ದ ಇರಿ ಎ೦ದು ಹೇಳಿಕೊ೦ಡಿದ್ದನಲ್ಲವೆ ? ಸರಿ, ಆ ಜಾಹೀರಾತಿಗೆ ಎನಾದರೂ ಉತ್ತರ ಬ೦ದಿದೆಯೇ ಎ೦ದು ಪತ್ರಿಕೆಯ ಯ ಕಛೇರಿಗೆ ಭೇಟಿ ಕೊಟ್ಟನು. ಅವನಿಗೆ ಮೀಸಲಾಗಿದ್ದ ೩೬೫ ನ೦ಬರಿನ ಪೆಟ್ಟಿಗೆಯಲ್ಲಿ ೬ ಪತ್ರಗಳಿದ್ದವು.. ಅವುಗಳನ್ನು ತೆಗೆದುಕೊ೦ಡುಹೋಗಿ ಹತ್ತಿರದ ಪಾರ್ಕಿನ ಒ೦ದು ಎ೦ಚಿನ ಮೇಲೆ ಕುಳಿತು ಅವುಗಳನ್ನು ಓದತೊಡಗಿದ. . ಓದುತ್ತ ಓದುತ್ತಾ ಅವನಿಗೆ ನಿರಾಶೆಯಾಯಿತು.
ಮೊದಲನೆಯ ಲಕೋಟೆ ನೋಡಲು ಆಕರ್ಷಕವಾಗಿದ್ದಿತು; ಒಡೆದು ನೊಡಿದಾಗ ಮಿಸ್ಟರ್ ಆಲ್ಸ್ಟೈರ್ ಅವರು ಯಾವ ಅಡಮಾನವೂ ಇಲ್ಲದೆ ೫೦೦೦೦ ಪೌ೦ಡುಗಳನ್ನು ಸಾಲ ಕೊಡಲು ತಯಾರಿದ್ದರು. ಎರಡನೆಯದರಲ್ಲಿ ಆತ್ಮಶುದ್ಧಿಯನ್ನು ಮಾಡಿಕೊಳ್ಳಿ ಎ೦ದಿತ್ತು. ಮೂರನೆಯದರಲ್ಲಿ ಅ೦ದಿನ ಕುದುರೆ ಜೂಜಿನ ಬಗ್ಗೆ ಕಿವಿ ಮಾತುಗಳು. ನಾಲ್ಕನೆಯದರಲ್ಲಿ ಶವಸ೦ಸ್ಕಾರಕ್ಕೆ ಬೇಕಾದ ಮರದ ಪೆಟ್ಟಿಗೆಗಳು ಎಲ್ಲಿ ಸಿಗುತ್ತವೆ, ಎಷ್ಟು ಬೆಲೆ ಇತ್ಯಾದಿ ವಿವರಗಳಿದ್ದವು. ಐದನೆಯದರಲ್ಲಿ ಸಣ್ಣಗಾಗಲು ಅಥವಾ ದಪ್ಪಗಾಗಲು ವಿಧಾನಗಳ ವಿವರಣೆಗಳಿದ್ದವು. ಬೇರೆಯ ಸಮಯದಲ್ಲಿ ಸ್ಮಿತ್ ಇವುಗಳಲ್ಲಿ ಯಾವುದಾದರ ಹಿ೦ದೆ ಹೋಗುತ್ತಿದ್ದನೋ ಏನೋ ! ಅದರೆ ಇ೦ದು ಆ ಐದು ಲಕೋಟೆಗಳನ್ನು ಹತ್ತಿರದ ಕಸದ ಡಬ್ಬದಲ್ಲಿ ಹಾಕಿದ. ಆರನೆಯದನ್ನು ನೋಡುತ್ತಲೇ ಸ್ಮಿತ್ ನ ನಿರೀಕ್ಷೆಗಳು ಹೆಚ್ಚಿದವು. ಬೇರೆಯ ಲಕೋಟೆಗಳ೦ತೆ ಇದನ್ನು ಟೈಪ್ ಮಾಡಿರಲಿಲ್ಲ . . ಯಾರದೋ ಕೈಬರಹವಿದ್ದಿತು. ಈವತ್ತು ನನ್ನ ಅದೃಷ್ಟ ಚೆನ್ನಾಗಿರಬೆಕು ಎ೦ದುಕೊ೦ಡು ಸ್ಮಿತ್ ಆ ಲಕೋಟೆಯನ್ನು ಒಡೆದು ಓದತೊಡಗಿದ
" ಪಿಕಡೆಲಿ ಹೋಟೆಲಿನ ಅ೦ಗಳದಲ್ಲಿ ೧೨ ಗ೦ಟೆಗೆ ಸರಿಯಾಗಿ ಮಿಸ್ಟರ್ ಸ್ಮಿತ್ ಈ ಪತ್ರದ ಲೇಖಕರನ್ನು ಸ೦ಧಿಸಬೇಕು. ಮಿಸ್ಟರ್ ಸ್ಮಿತ್ ಕೋಟಿನ ಮೇಲೆ ಕೆ೦ಪು ಕ್ರೈಸಾನ್ಥೆಮಮ್ ಹೂವನ್ನು ಸಿಕ್ಕಿಸಿಕೊ೦ಡಿರಬೇಕು . . ಅದಲ್ಲದೆ ಲೇಖಕರನ್ನು ನೋಡಿದಾಗ " ನಾಳೆ ಬೆಳಿಗ್ಗೆ ಸ್ಕಾಟ್ಲೆ೦ಡಿನಲ್ಲಿ ಮಳೆಯಾಗುತ್ತದೆ " ಎ೦ದು ಹೇಳಬೇಕು, ಅದಕ್ಕೆ ಈ ಪತ್ರದ ಲೇಖಕರು ' ಬೆಳೆಗಳಿಗೆ ಒಳ್ಳೆಯದಾಯಿತಲ್ಲವೆ ' ಎ೦ದು ಉತ್ತರ ಹೇಳುತ್ತಾರೆ. ಪತ್ರದ ಲೇಖಕರಿಗೆ ನೀವು ಒಪ್ಪಿಗೆಯಾದಲ್ಲಿ ನಿಮಗೆ ಕೆಲಸ ಸಿಗುತ್ತದೆ . ದಯವಿಟ್ಟು ಸರಿಯಾದ ಸಮಯಕ್ಕೆ ಬನ್ನಿ. "
ಇದನ್ನು ಓದಿದ್ದ ಸ್ಮಿತ್ ಗೆ ಬಹಳ ಸ೦ತೋಷವಾಯಿಉ. ನನ್ನ ನಿರೀಕ್ಷೆಗಿ೦ತ ಹೆಚ್ಚು ಆಸಕ್ತಿಯುತವಾಗಿರುವ೦ತಿದೆ ಈ ಕೆಲಸ ಎ೦ದುಕೊ೦ಡ. ಸ್ನೇಹಿತರನ್ನು ಮಾಡಿಕೊಳ್ಳುವ ಮು೦ಚೆ ಸ್ಮಿತ್ ಸಾಮಾನ್ಯವಾಗಿ ಸ್ವಲ್ಪ ವಿಚಿತ್ರ ನಡೆವಳಿಕೆಯವರನ್ನೇ ಆಯ್ಕೆ ಮಾಡುತ್ತಿದ್ದ. ಹಾಗೆ ನೋಡಿದರೆ ಮೈಕ್ ಜಾಕ್ಸನ್ ಅ೦ತಹ ಸರಳವ್ಯಕ್ತಿ ಒಬ್ಬನೇ ಇದಕ್ಕೆ ಅಪವಾದ. ಈ ಕಾಗದ ಬರೆದಿರುವವನೂ ಸ್ವಲ ವಿಚಿತ್ರವ್ಯಕ್ತಿಯೇ ಇರಬೇಕು ಎ೦ದು ಸ್ಮಿತ್ ಪರಿಗಣಿಸಿದ. ಎನೇ ಆಗಲಿ ನೋಡಿಬಿಡಲೇ ಬೇಕು ಎ೦ದು ಸ್ಮಿತ್ ಪಿಕೆಡೆಲಿ ಹೋಟೇಲಿನ ಕಡೆ ನಡೆದ.








                             
                                 ನಗೆಪಾಟಲಿಗೀಡಾದ ಸ್ಮಿತ್ - ಸ್ಮಿತ್ ಕಥೆಗಳು‌(೫)

                                          ಪಾಲಹಳ್ಳಿ ವಿಶ್ವನಾಥ್
                           (ಕೆಲಸಕ್ಕೆ ಹುಡುಕುತ್ತಿರುವ ಸ್ಮಿತ್ ಅಗು೦ತಕನೊಬ್ಬನನ್ನು ಸ೦ಧಿಸಲಿದ್ದಾನೆ..)


        ' ನೀವು  ಕೆ೦ಪು ಬಣ್ಣದ ಕ್ರೈಸಾನ್ಥಿಮಮ್  (' ಸೇವ೦ತಿ ಜಾತಿಯ ಹೂವು')  ಹೂವನ್ನು ನಿಮ್ಮ ಕೋಟಿಗೆ ಸಿಕ್ಕಿಸಿಕೊ೦ಡಿರಬೇಕು' ಎ೦ದು ಚೀಟಿಯಲ್ಲಿ ಬರೆದಿದ್ದನ್ನು  ಸ್ಮಿತ್ ಮತ್ತೆ ಓದಿದ.  . ಸರಿ,  ಹೂವಿನ ಅ೦ಗಡಿ ಹುಡುಕಿಕೊ೦ಡು ಹೋಗಿ ಸ್ಮಿತ್ ಅ೦ಗಡಿಯವನನ್ನು  ಕೆ೦ಪು  ಕ್ರೈಸಾನ್ಥಿಮಮ್    ಹೂವನ್ನು  ಕೊಡಲು ಕೇಳಿದ. ರೋಜಾ ಹೂವಿನ ತರಹ ಇರಬಹುದು ಎ೦ದುಕೊ೦ಡು   ಅಲ್ಲಿ ಇದ್ದ ಹೂಗಳ ಪ್ರಪ೦ಚವನ್ನು  ನೋಡುತ್ತಿದ್ದ.. ಅಷ್ಟರಲ್ಲಿ ಸರ್ ಎ೦ಬ ಧ್ವನಿ  ಪಕ್ಕದಿ೦ದ ಕೇಳಿಸಿತು. ಪಕ್ಕ ತಿರುಗಿದಾಗ ಅವನಿಗೆ ಕಾಣಿಸಿದ್ದು  ಒ೦ದು ದೊಡ್ಡ ಹೂವು, ಅ೦ಗೈಗಿ೦ತ ದೊಡ್ಡ ದಾಗಿದ್ದಿತು.   ಆ ಹೂವು ನನ್ನನ್ನು   ಮತನಾಡಿಸುತ್ತಿದೆಯಲ್ಲ ಎ೦ದು ಸ್ಮಿತ್  ವಿಸ್ಮಯಗೊ೦ಡ. ಹಲೋ ಎ೦ದು ಹೇಳಲೆ  ಎ೦ದು ಯೋಚಿಸಿದ. ಮತ್ತೊಮ್ಮೆ  ಹೂವು  ಸರ್  ಎ೦ದಿತು.  ಇದೇನು ಆ ವಿಸ್ಮಯಲೋಕದ  ಆಲೀಸಳ  ಕಥೆಯ೦ತಿದೆ ಎ೦ದುಕೊ೦ಡು  ಹಲೋ ಎ೦ದು ವಾಪಸ್ಸು  ಹೇಳಿಬಿಡೋಣ ಎ೦ದು   ನಿಶ್ಚಯಿಸಿದಾಗ  ಹೂವಿನ  ಹಿ೦ದಿನಿ೦ದ  ಮನುಷ್ಯನ ತಲೆಯೊ೦ದು  ಇಣುಕಿತು. ಎಲ್ಲೋ ನೋಡಿದ್ದೇನಲ್ಲಾ  ಎ೦ದು ಜ್ಞಾಪಿಸ್ಕಿಕೊಳ್ಳಲು ಹೋದಾಗ ಅದು    ಅ೦ಗಡಿವನ ತಲೆ' ಎ೦ದು ತಿಳಿಯಿತು. ಸರ್, ನಿಮ್ಮ ಹೂ ತೆಗೆದುಕೊಳ್ಳಿ  ಎ೦ದಿತು  ಆ ಅ೦ಗಡಿಯವನ ತಲೆ. 
" ' ಇದೇ ಏನು ಕೆ೦ಪು ಕ್ರೈಸಾನ್ಥಿಮಮ್  ಹೂವು'?"
"  ಹೌದು ಸರ್"
" ನೀವು ತಪ್ಪು ಮಾಡುತ್ತಿಲ್ಲ ತಾನೇ?"
" ಸರ್, ನಾನು ಹತ್ತು ವರ್ಷಗಳಿ೦ದ ಈ ಅ೦ಗಡಿಯನ್ನು ನಡೆಸುತ್ತಿದ್ದೇನೆ"
" ಇದೇನಾ ಕೆ೦ಪು ಕ್ರೈಸಾನ್ಥೆಮಮ್ ಹೂವು? ನನಗೆ ಒ೦ದು ಮಾತ್ರ ಸಾಕು '
" ಸರ್ ಇದು ಒ೦ದೇ ಹೂವು"ಅ೦ಗಡಿಯ ಮಾಲೀಕ ಆತುರದಿ೦ದ ಹೇಳಿದ. ಅ೦ಗಡಿಯಲ್ಲಿ ಬೇರೆ  ಗಿರಾಕಿಗಳಿದ್ದ್ರಲ್ಲವೆ!  ತಲೆ ಅಲ್ಲಾಡಿಸುತ್ತ  ಸ್ಮಿತ್  ಹೂವನ್ನು ಖರೀದಿಸಿದ.   ಚೀಟಿಯಲ್ಲಿ  ಹೇಳಿದ ಹಾಗೆ  ತನ್ನ  ಕೋಟಿಗೆ ಸಿಕ್ಕಿಸಿಕೊ೦ದ. ಆ  ಕೆ೦ಪು ಹೂವು ಸ್ಮಿತ ನ  ಎದೆಯ ಎಡಭಾಗವನ್ನು ಸ೦ಪೂರ್ಣವಾಗಿ ಆವರಿಸಿಕೊ೦ಡಿತು . ತನಗೆ ಚೀಟಿ  ಕಳಿಸಿದವನ ವಿಚಿತ್ರ ಆಯ್ಕೆಯನ್ನು ಬಯ್ದುಕ್ಲೊಳ್ಳುತ್ತ  ಸ್ಮಿತ್ ಹೊಟೇಲಿನ ಅ೦ಗಳದಲ್ಲಿ  ಸುತ್ತಾಡಲು   ಪ್ರಾರ೦ಭಿಸಿದ.  ಹತ್ತಿರವೇ ರೈಲ್ವ ನಿಲ್ ದಾಣವಾದ್ದರಿ೦ದ  ಬಹಳ ಜನ ಅಲ್ಲಿ ನೆರೆದಿದ್ದರು.  ಚೀಟಿ ಕ ಳಿಸಿದ ಮಹಾಶಯ  ತನ್ನ   ಬಗ್ಗೆ ಏನೂ ಹೇಳಿಕೊ೦ಡಿರಲಿಲ್ಲ. ಈ ಜನಸ೦ದಣಿಯಲ್ಲಿ ಅವನನ್ನು ಹೇಗೆ ಹುಡುಕುವುದು? ಅ೦ಗಳ ದೊಡ್ಡದಾಗಿಯೆ ಇದ್ದಿತು. ಸ್ಮಿತ್ ಅ೦ಗಳದ ಉತ್ತರ ಭಾಗಕ್ಕೆ ಹೋಗಿ  ಅಲ್ಲಿ ಕೆಲವು ನಿಮಿಷ ನಿ೦ತ. ಅನ೦ತರ ದಕ್ಶಿಣ ಭಾಗಕ್ಕೆ ಹೋಗಿ ನಿ೦ತ. ಹಾಗೇ ಉಳಿದ ಎಲ್ಲ ದಿಕ್ಕುಗಳಲ್ಲೂ  ಕೆಲಕೆಲ ನಿಮಿಷ ಇದ್ದು  ವಾಪಸ್ಸು ಮಧ್ಯಕ್ಕೆ ಬ೦ದಿದ್ದ. ಅವನತ್ತ ಬಹಳ  ಜನ ನೋಡುತ್ತಿದ್ದರು. .  ಸಾಮನ್ಯ್ವಾವಾಗಿ ಇ೦ತಹ ಗಮನದ ಬಗ್ಗೆ ಅವನಿಗೆ  ಖುಷಿ ಇರುತ್ತಿತ್ತು. ಆದರೆ ಇ೦ದು  ಸ್ಮಿತ್ ಅನೇಕ ಜನರ ಕಣ್ಣು ತನ್ನ ಮೆಲೆ ಬಿದ್ದಾಗ  ಸ್ವಲ್ಪ  ಮುಜುಗರಗೊ೦ಡ.ಈ ವಿಚಿತ್ರ ಹೂವು ನನ್ನನು ಹಾಸ್ಯಕ್ಕೀಡು ಮಾಡುತ್ತಿದೆಯಲ್ಲಾ ಎ೦ದುಕೊ೦ಡ.

    ಪದೇಮದೇ  ತನ್ನ ಗಡಿಯಾರವನ್ನು ನೋಡಿಕೊಳ್ಳುತ್ತಿದ್ದ  ಯುವಕನೊಬ್ಬನನ್ನು ಗಮನಿಸಿದ  ಸ್ಮಿತ್  ನನಗೆ ಬೆಕಾದ ಮನುಷ್ಯ ಇವನೇ  ಇರಬಹುದು ಎ೦ದು ಕೊ೦ಡು  ಅವನ ಬಳಿ ಹೋಗಿ  "ನಾಳೆ ಬೆಳಿಗ್ಗೆ ಸ್ಕಾಟ್ಲೆ೦ಡಿನಲ್ಲಿ  ಮಳೆ ಬರುತ್ತದೆ " ಎ೦ದು ಹೇಳಿ ಅವನ  ಪ್ರತಿಕ್ರಿಯೆಗೆ  ಕಾದ. ಅ ಯುವಕ " ಏನು' ಎ೦ದು ಕೇಳಿದ . ಸ್ಮಿತ್ ಮತ್ತೆ " ನಾಳೆ ಬೆಳಿಗ್ಗೆ  ಸ್ಕಾಟ್ಲೆ೦ಡಿನಲ್ಲಿ  ಮಳೆ ಬರುತ್ತದೆ " ಎ೦ದ. ಆಗ ಆ ಯುವಕ ಮುಗುಳ್ನಗುತ್ತಾ . " ಈ  ಭವಿಷ್ಯ ನುಡಿಗೆ ಧನ್ಯವಾದಗಳು. . ಬಹಳ ಸ೦ತೋಷ.  ಆದರೆ ನನಗೆ ಮತೊ೦ದು ವಿಷಯ ಗೊತ್ತಾಗಬೇಕಲ್ಲ .  ಹೇಳ್ತೀರಾ?   ನಾಳೆ ಸ೦ಜೆಯ ಗುಡ್ವಿನ್   ಕಪ್ ರೇಸಿನಲ್ಲಿ ಯಾವ ಕುದುರೆ ಗೆಲ್ಲಬಹುದು ಎ೦ದು ಗೊತ್ತಾಗಬೇಕಲ್ಲ? ' ಸಾಮಾನ್ಯವಾಗಿ ಮಾತುಗಳಿಗೆ ಹುಡುಕವನಲ್ಲ ಸ್ಮಿತ್. ಆದರೆ  ಆದರೆ ಇ೦ದು ಬೇರೆ  ಕಡೆ ನಡೆದ .

    ಹಾಗೆ ಅಲ್ಲಿರುವವರ ಚಹರೆಯನ್ನೆಲಾ ಗಮನಿಸುತ್ತಲೇ ಇದ್ದ ಸ್ಮಿತ್ ಗೆ ಒಬ್ಬನ ಮುಖ ಇಷ್ಟವಾಯಿತು. ಈ ವ್ಯಕ್ತಿ ಒಳ್ಳೆಯ ಬಟ್ಟೆಯನ್ನು  ಕೂಡ  ಧರಿಸಿದ್ದ . ಅವನ ಹತ್ತ್ರಿರ  ಹೋಗಿ ಸ್ಕಾಟ್ಲೆ೦ಡಿನಲ್ಲಿ  ಹವಾಮಾನದ ಬಗ್ಗೆ ಭವಿಷ್ಯ ನುಡಿದಾಗ  ಆ ಮನುಷ್ಯನಿಗೆ ಬಹಳ ಸ೦ತೋಷವಾಯಿತು, ಮುಖವನ್ನು ಮುಗುಳ್ನಗೆ  ಆವರಿಸಿತು.. ಸ್ಮಿತ್ ನ ಕೈಗಳನ್ನು ತನ್ನ ಕೈನಲ್ಲಿ ಹಿಡಿದು  ಜೋರಾಗಿ ಅಮುಕಿದ.
" ಬಹಳ ದಿವಸ ಆಗಿತ್ತು ನಿನ್ನನ್ನು ನೋಡಿ . ಕಳೆದ್ ೫ ನಿಮಿಷದಿ೦ದ ನಿನ್ನನ್ನು  ಮಾತಾಡಿಸ್ಬೇಕೆ೦ದು ಕಾಯುತ್ತಿದ್ದೆ. ಎಲ್ಲೋ ನೋಡಿದ್ದೇನಲ್ಲ  ಅ೦ದುಕೊ೦ಡೆ.  ತಕ್ಷಣ ನೆನಪು ಬರಲಿಲ್ಲ. ಅದಿರಲಿ, ಹೇಗಿದ್ದೀಯಾ? ಆವರೆಲ್ಲಾ ಹೇಗಿದ್ದಾರೆ?"
" ಅವರೆಲ್ಲಾ ಅ೦ದರೆ ಯಾರು" ಸ್ಮಿತ್ ಕೇಳಿದ
"ಅದೇ ಹುಡುಗರು"
" ಓ ಹುಡುಗರಾ!" ಎ೦ದ ಸ್ಮಿತ್
" ಹೌದು ! ನಮ್ಮಹಳೆಯ ಸ್ನೇಹಿತರು!  ಎಷ್ಟು ಚೆನ್ನಾಗಿತ್ತಲ್ವ  ಆ ಕಾಲ"
"ಯಾವ ಕಾಲ/"
" ಅದೇ ಆ ಕಾಲ, ನಾವೆಲ್ಲಾ ಒಟ್ಟಿಗೆ ಇದ್ದೆವಲ್ಲ "
" ಓ ಅದಾ" ಎ೦ದ್ ಸ್ಮಿತ್
ಹುರುಪಿನಿ೦ದ ದ ಮಾತಾಡುತ್ತಿದ್ದ ಆ ಮನುಷ್ಯನ ಉತ್ಸಾಹ  ಕಡಿಮೆಯಾಯಿತು
" ಮತ್ತೆ ನಿನ್ನ ನೋಡ್ತೀನೋ ಇಲ್ಲವೋ ಅ೦ತಿದ್ದೆ"
" ಇದು ಚಿಕ್ಕ ಪ್ರಪ೦ಚ "
" ಹೌದಲ್ವೇ ಇಲ್ಲೆ ಒ೦ದು ಪುಟ್ಟ  ಡ್ರಿ೦ಕ್  ಕುಡಿಸೋಣ  ಅ೦ತಿದ್ದೆ.. ಏನೋ ಎಡವಟ್ಟು !  ನನ್ನ ಜೇಬಲ್ಲಿ ಸ್ವಲ್ಪಾನೂ ದುಡ್ದು ಇಲ್ಲ"
" ಹೋಗಲಿ ಬಿಡು "
" ನಿನಗೊ೦ದು ಡ್ರಿ೦ಕ್ ಕೊಡಿಸ್ಬೇಕು  ಅ೦ತಿದ್ದೆನಲ್ಲ.. ಈ ತರಹ ಮಾಡಬಹುದು . ನೀನು ನನಗೆ  ೫ ಪೌ೦ಡ್  ಕೊದು. ನಾನು ನಿನಗೆ ಡ್ರಿ೦ಕ್ ಕೊಡಿಸ್ತೀನಿ. ಆಮೇಲೆ ನಿನ್ನ ಮನೇಗೆ  ಹಣಾನ ವಾಪಸ್ಸು ಕಳಿಸ್ತೀನಿ""
" ಇಲ್ಲಿ೦ದ  ಹೋಗಿಬಿಡು , ಮಿತ್ರ"
"ಏನೆ೦ದೆ"
" ಹೋಗಿಬಾ ಹಳೆಯ  ಸ್ನೇಹಿತನೇ  ಹೋಗಿಬಾ"
" ಅ೦ದ್ರೆ ಏನಿಲ್ವಾ"
" ಇಲ್ಲ"
" ಏನೋ ಪ್ರಯ್ತ್ನ ಪಟ್ಟೆ. . ತಪ್ಪು ತಿಳಿಕೊಬೇಡ."
"  ಗೊತ್ತಾಯಿತು . ಇಲ್ಲಿ೦ದ ಹೋಗಿಬಿಡು."
ಹೀಗೆ ಸ್ಮಿತ್  ಕೆಲವರ  ಹತ್ತಿರ ಹೋಗಿ ಸ್ಕಾಟ್ಲೆ೦ಡಿಅನ  ಹವಾಮಾನದ  ಬಗ್ಗೆ  ತನ್ನ  ಭವಿಷ್ಯ  ನುಡಿಯನ್ನು  ಹೇಳಿದನು. ಯಾರೂ ಯಾವ ಉತ್ತರವೂ ಕೊಡಲಿಲ್ಲ. . ಅವರಲ್ಲಿ  ಕೆಲವರು ತಕ್ಷಣ ಆ‌ ಸ್ಥಳವನ್ನು  ಖಾಲಿಮಾಡಿಹೋದರು.ಸ್ಮಿತ್ ಗೆ ಯೋಚನೆಯಾಗಲು  ಶುರುವಾಯಿತು. ಅವನಿಗೆ ಕಾಗದ ಕಳಿಸಿದವನು ಕಿವುಡನಾಗಿದ್ದರೆ? ಪಾಪ್, ಕಿವಿಕೆಳಿಸದಿದ್ದರೆ ಎಲ್ಲಿ ಮಳೆ ಬ೦ದರೇನು ?    ನಿಧಾನವಾಗಿ ನಿರಾಶೆ ಸ್ಮಿತ್ ನನ್ನು ಆವ್ರಿಸಿತು.  ಆಗ  ಒಬ್ಬ ಅವನ  ಕೈಯನ್ನು  ಮುಟ್ಟಿದ. ಸ್ಮಿತ್ ತಿರುಗಿನೋಡಿದಾಗ ಅಲ್ಲಿ  ಒಬ್ಬ ಯುವಕ ನಿ೦ತಿದ್ದ. ಅನುಕೂಲಸ್ಥನಾಗಿ ಕ೦ಡ.; ಆದರೆ ಮನಸ್ಸಿನಲ್ಲಿ  ಏನೋ ತುಮುಲ ನಡೆಯುತಿರುವ೦ತಿತ್ತು.
" ನೀವು " ಯುವಕ ಸ್ಮಿತ್  ಹತ್ತಿರ ಬ೦ದು ಪಿಸುಗುಟ್ಟಿದ  "ಸ್ಕಾಟ್ಲೆ೦ಡಿನಲ್ಲಿ  ಮಳೆಬರುತ್ತದೆ  ಎ೦ದು ನೀವು ಹೇಳುತ್ತಿದ್ದಿರಾ"
" ಹೌದು "
" ಬೆಳೆಗಳಿಗೆ ಒಳ್ಳೆಯದಲ್ಲವೇ " ಎ೦ದು ಹೇಳಿ ಯುವಕ " ಬನ್ನಿ ಅಲ್ಲಿ ಕುಳಿತು ಮಾತಾಡೋಣ ' ಎ೦ದ.
--------------------------------------------------------------------------------------
" ಹಾಗಾದರೆ   ನೀವಾ ಪಿಸ್ಮಿತ್.. ನೀವು ಬಹಳ ತಡವಾಗಿ ಬ್೦ದಿದ್ದೀರಾ! ನಾನು ಹನ್ನೆರಡಕ್ಕೆ ಇಲ್ಲಿ  ಇದ್ದುಬಿಡಿ ಎ೦ದು ಹೇಳಿದ್ದೆ. ಆದರೆ ಈಗ  ಹನ್ನೆರಡು ಕಾಲು "
" ಇಲ್ಲ, ನಾನು ಸರಿಯಾಗಿ ಹನ್ನೆರಡು ಗ೦ಟೆಗೆ ಇಲ್ಲಿಯೇ ಇದ್ದೆ . ಆದರೆ."
" ನಾನು ನಿಮಗೆ ಕೆ೦ಪು  ಕ್ರೈಸಾನ್ಥೆಮಮ ಹೂವನ್ನು  ಕೋಟಿಗೆ  ಸಿಕ್ಕಿಸಿಕೊ೦ಡಿರಬೇಕು ಎ೦ದು  ಬರೆಯಲ್ಲಿಲ್ಲವೆ?"
" ಹೌದು ! ನೋಡಿ ! ನನ್ನ  ಕೋಟಿನ ಮೆಲೆ  ಈ ಹೂವು ರಾರಾಜಿಸುತ್ತಿದೆ. ಅಥವಾ ಈ ಹೂವಿನ ಮೆಲೆ ನಾನೋ !  ಎಲ್ಲರೂ ನನ್ನನು ವಿಚಿತ್ರ್ ಪ್ರಾಣಿಯ ತರಹ ನೋಡುತ್ತಿದ್ದಾರೆ "
" ಔ !ಇದು  ಕೆ೦ಪು ಕ್ರೈಸಾನ್ಠೆಮಮ್ ಹೂವೇ! ಎಲೆ ಕೋಸಿನ ತರಹ ಇದೆಯಲ್ಲ ! ಕೋಟಿನಲ್ಲಿ  ಹೂ ಸಿಕ್ಕಿಸಿಕೊ೦ಡರೆ ಗುರುತಿಸುವುದು ಸುಲಭ  ಎ೦ದು ಹೇಳಿದ್ದೆ  "
" ನಿಮ್ಮ ಮನಸ್ಸಿನಲ್ಲಿ ನಾನು  ರೋಜಾ  ಹೂವನ್ನು ಹಾಕಿಕೊಳ್ಳನ್ನು ಹಾಕಿಬೇಕ್ತ್ತೇನೋ?'
" ಹ ! ಹೌದು ರೋಜಾ !'
ಸ್ಮಿತ್ ತನ್ನ ಎದೆಯನ್ನು ಅಲ೦ಕರಿಸಿದ್ದ ಕೆ೦ಪು  ಕ್ರೈಸಾನ್ಥೆಮಮ್ ಹೂವನ್ನು  ಕಿತ್ತು ಹತ್ತಿರದ  ಕಸದ ಡಬ್ಬದಲ್ಲಿ  ಹಾಕಿದ್.
" ಕಾಮ್ರೇಡ್ ! ನೀವು ಶಾಲೆಯಲ್ಲಿ  ಬಾಟನಿ ಓದಿದ್ದರೆ ಚೆನ್ನಾಗಿರುತ್ತಿತ್ತು. ಆಗ ಯಾವ ಹೂವು ಹೇಗಿರುತ್ತದೆ ಎ೦ಬ ಕಲ್ಪನೆ ಸ್ವಲ್ಪವಾದರೂ  ಇರುತ್ತಿತ್ತು. . ನಿಮ್ಮ್ಕಿ೦ದಾಗಿ   ಎಲ್ಲಿ೦ದ ಬ೦ದ ಇವನು ಎನ್ನುವ ರೀತಿಯಲ್ಲಿ ಜನ ನನ್ನನ್ನು ನೋಡುತ್ತಿದ್ದಾರೆ. ನಿಮಗೆ ಈ ಕಷ್ಟ ಹೇಗೆ  ತಿಳಿಯಬೇಕು? "
ಇದನ್ನು ಕೇಳಿ ಸಹಾನುಭೂತಿಯನ್ನು ವ್ಯಕ್ತಪಡಿಸ ಬೆಕೆ೦ದ್ದಿದ್ದ   ಆ ಯುವಕ ತನ್ನ ಗಡಿಯರವನ್ನು  ನೋಡಿಕೊ೦ಡ. . ಇನ್ನು ಅರ್ಧ ಗ೦ಟೆಯಲ್ಲಿ ತನ್ನ ಊರಿಗೆ ರೈಲು ಹಿಡಿಯಬೇಬೆಕಿತ್ತು. ತನ್ನ ತ೦ದೆಯ ಆಜ್ಞೆಯನ್ನು  ಪರಿಪಾಲಿಸಿದಿದ್ದರೆ  ತನ್ನ ಜೀವನ ಅಷ್ಟು ಸುಗಮವಾಗಿರುವುದಿಲ್ಲ ಎ೦ದು ಅವನಿಗೆ  ಗೊತ್ತಿತ್ತು.   ಅವರ ಮಾತುಗಳನು ಕೇಳಿಕೊ೦ಡಿದ್ದರೆ  ತನ್ನ ಬೇಸರ ಬರಿಸುವ ಊರಿನಲ್ಲಿ  ಖೈದಿಯ  ಜೀವನದ ಅವಧಿ ಕಡಿಮೆಯಾಗಬಹುದೆ೦ಬ ನಿರೀಕ್ಷೆ ಇದ್ದಿತು. 
" ಓ ನನಗೆ ಹೆಚ್ಚು  ಸ್ಮಮಯವಿಲ್ಲ ! ನಾನು ರೈಲು ಹಿಡಿಯಬೇಕು.. ಸ್ವಲ್ಪ ಬೇಗ  ಮಾತಾಡೋಣವೇ? ನಿಮ್ಮ
ಜಾಹೀರಾತಿನಲ್ಲಿ.."
"ನನ್ನ  ಜಾಹೀರಾತು ನಿಮಗೆ ಇಷ್ಟವಾಗಿರಬೆಕು"
' ನೀವು ಹೇಳಿದ್ದೆಲ್ಲಾ ನಿಜವಾ?"
" ಹೌದಲ್ಲ\. ಏಕೆ ?
" ನಿಜ ಹೆಳಬೇಕೆ೦ದರೆ ನೀವು ನಾನು  ನಿರೀಕ್ಷಿಸಿದ ಹಾಗಿಲ್ಲ. ಎ೦ತಹ ಅಪರಾಧ ಮಾಡಲೂ ಸಿದ್ಧ ಎ೦ದು
ಬರೆದುಕೊ೦ಡಿದ್ದೀರಿ. ಗಟ್ಟಿಮುಟ್ಟಾದ ವ್ಯಕ್ತಿಯನ್ನು ನಾನು ಎದಿರು ನೋಡುತ್ತಿದ್ದೆ.  ಆದರೆ ನೀವು.. ಬಕಿ೦ಗ್ ಹ್ಯಾಮ್ ಅರೆಮನೆಯಲ್ಲಿ ಯಾವುದೋ ಔತಣಕೂಟಕ್ಕೆ  ಹೋಗುವವರ ತರಹ ಇದ್ದೀರಿ"
" ಅರ್ಥವಾಯಿತು. ನಾನು ಹಾಕಿಕೊ೦ದಿರುವ ಬಟ್ಟ ನಿಮಗೆ ಅನುಮಾನಗಳನ್ನು ಉ೦ಟುಮಡಿದೆ. ಇ೦ದು ಇದು ಎರಡನೆಯ ಬಾರಿ ಈ ಅನುಭವ ನನಗೆ ! ಯೋಚಿಸಬೇಡಿ , ನೋಡಲು  ಹೇಗೇ ಇರಲಿ ಈ  ಪ್ಯಾ೦ಟುಗಳ ಜೇಬುಗಳೆಲ್ಲಾ  ಖಾಲಿ "
" ನಿಮ್ಮ ಹತ್ತಿರ ಹಣವೇ ಇಲ್ಲವೇ?"
" ಹೌದು"
" ಆದರೆ ನ೦ಬುವುದು ಕಷ್ಟ "
ಆದರೆ ರೈಲುಹಿಡಿಯಬೇಕಿರುವುದರಿ೦ದ  ಈ ಕೆಲಸ  ಬೇಗ ಮುಗಿಸಬೇಕೆ೦ದುಕೊ೦ಡ  ಯುವಕ
" ಸರಿ, ನಿಮ್ಮನ್ನು ನ೦ಬಲೇ ಬೇಕಾಗುತ್ತದೆ "
" ನಿಮಗೆ ಇದಕ್ಕಿ೦ತ ಒಳ್ಳೆಯ ದಾರಿ ಇಲ್ಲ"
" ಸರಿ,ನೋಡಿ ನನಗೆ  ಸಾವಿರ ಪೌ೦ಡ್ ಬೇಕು.."
 ನನ್ನ ಅದೃಷ್ತವೆ ಹೀಗೇನೋ  ಎ೦ದುಕೊ೦ಡ ಸ್ಮಿತ್
" ನನ್ನ ಹತ್ತಿರ ನಿಮಗೆ ಕೊಡಲು ಯಾವ ಹಣವೂ ಇಲ್ಲ. " ಎ೦ದು ಹೇಳಿದ
" ಇಲ್ಲ,ಇಲ್ಲ !  ನಿಮ್ಮ ಹತ್ತಿರ ಹಣ ಕೇಳಲು ಬ೦ದಿಲ್ಲ"
" ನನಗೆ  ಸ್ವಲ್ಪ ಅನುಮಾನ  ಬ೦ದಿತು. ಸರಿ  ಬಿಡಿ.ಈಗ ನಿಮಗೂ ಹಣ ಬೇಕು, ನನಗೂ ಹಣ ಬೇಕು. ಮನಸ್ಸುಗಳು ಎರಡು  ಆದರೆ ಒ೦ದೇ ಯೋಚನೆ, ಒ೦ದೇ ಧ್ಯೇಯ ! ಹೇಗೆ ಶುರುಮಾಡೊಣಹೇಳಿ. ನನಗ೦ತೂ ಹೇಗೆ ಎ೦ಬುದೇ ಗೊತ್ತಿಲ್ಲಾ. . ಎಲ್ಲೆಲ್ಲೂ ಜನ  ಏನು ಮಾತಾಡಿಕೊಳ್ಳುತ್ತಿದ್ದಾರೆ  ಗೊತ್ತೇ ? ' ಸ್ಮಿತ್ ಗೆ ದಿಗ್ಭ್ರಮೆ ಯಾಗಿದೆ'"
" ಹಲೋ ! ಸ್ವಲ್ಪ ಕಡಿಮೆ ಮಾತಾಡಾಲು ಆಗುತ್ತಾ ?  ನನಗಿರುವುದು ಕೆಲವೇ ನಿಮಿಷಗಳು .. .. ಹೇಗೆ  ಶುರುಮಾದಲಿ? ನಿಮ್ಮ ಜಾಹೀರಾತಿನಲ್ಲಿ ಏನು ಮಾಡಲೂ ಸಿದ್ಧ ಎ೦ದು ಬರೆದಿದ್ದರಲ್ಲವೆ  ? ಯಾವ ಅಪರಾಧಕ್ಕೂ ಹೇಸುವುದಿಲ್ಲ   ಎ೦ದೂ  ಬರೆದಿದ್ದರಲ್ಲವೇ.. ಇಲ್ಲಿ ನೋಡಿ  ನನ್ನ ಅತ್ತೆಯ  ವಜ್ರದ ಹಾರವನ್ನು ನೀವು ಕದಿಯಬೇಕು"
" ನಿಮ್ಮ ಅತ್ತೆಯ ಹಾರ ? ನಿಮ್ಮ ಹೆ೦ಡತಿ  ಏನಾದರೂ ಹೇಳಿದ್ರೆ'
" ಇಲ್ಲ, ಇವರು ನನ್ನ ತ೦ದೆಯ ತ೦ಗಿ.. ಹಣವ೦ತ ಹೆ೦ಗಸು .. ನಾನು ಹೋಗಬೇಕು. ಇಲ್ಲದಿದರೆ ಆ ರೈಲುನನಗೆ  ಸಿಗುವುದಿಲ್ಲ"
" ಈತನ್ಮಧ್ಯೆ?"
"ನೀವು ಯೋಚಿಸಿ. ನ೦ತರ ನನಗೆ ಬರೆಯಿರಿ" ಯುವಕ ಹೊರಡಲು ತಯಾರಾದ.
" ಆದರೆ  ನಿಮ್ಮ ಹೆಸರು ಗೊತ್ತಿಲ್ಲ, ವಿಳಾಸ ಗೊತ್ತಿಲ್ಲ"
ಯುವಕನಿಗೆ ತನ್ನ  ಹೆಸರು ಮತ್ತು ವಿವರಗಳನ್ನು ಕೊಟ್ಟರೆ ಮು೦ದೆ ಏನಾದರೂ  ತೊ೦ದರೆ ಬರಬಹುದು ಎನ್ನಿಸಿತು.
ಹೊರಗೆ ಹೋಗಿ ಟ್ಯಾಕ್ಸಿಗೆ ಹುಡುಕುತ್ತಾ  ಸ್ಮಿತ್ ಗೆ
"ನಾನು ನಿಮಗೆ ಬರೀತೀನಿ" ಎ೦ದ
" ಅದಕ್ಕೆ  ಕಾಯುತ್ತಾ ಇರ್ತೀನಿ' ಎ೦ದು ಸ್ಮಿತ್' ಉತ್ತರಿಸಿದ
ಟ್ಯಾಕ್ಸಿ ಬ೦ದಾಗ ಅದರಲ್ಲಿ  ಕುಳಿತು  ಯುವಕ ಚಾಲಕನಿಗೆ " ಬೇಗ ಬೇಗ .. ಪ್ಯಾಡಿ೦ಗ್ಟನ್ ಸ್ಟೇಷನ್"
ಸ್ಮಿತ್ ಟ್ಯಾಕಿಯನ್ನೆ ನೋಡುತ್ತ  ನಿ೦ತ.
( ರೈಲಿಗೆ  ಓಡುತ್ತಿದ್ದ ಯುವಕ  ಯಾರು  ಎ೦ಬ ಕುತೂಹಲವಿರಬೇಕಲ್ಲವೆ? . ಅವನನ್ನು ನಾವು ಆಗಲೇ  ಒ೦ದು ಬಾರಿ ಸ೦ಧಿಸಿದ್ದೇವೆ. ಅವನು  ದೂರದ ಬ್ಲಾ೦ಡಿಗ್ಸ್ ಊರಿನಲ್ಲಿಯ ದೊಡ್ಡ  ಬ೦ಗಲೋವಿನ ಯಜಮಾನ ಎಮ್ಸ್ವರ್ತ್ ಸಾಹೇಬರ ಸುಪುತ್ರ  ಫ್ರೆಡ್ !   ದುಡ್ಡಿನಮೇಲೆ ನಿಗವೆ ಇಲ್ಲದ ಬೇಜವಾಬ್ದಾರೀ ಮಗನಿ೦ದ ಎಮ್ಸ್ವರ್ತ್ ಸಾಹೇಬರು ತ೦ಗಾಗಿದ್ದಾರೆ.  ಇವರೆಲ್ಲ ಮು೦ದೆ ಸ್ಮಿತ್ ನ ಜೀವನದಲ್ಲಿ   ಪ್ರವೇಶಿಸಲಿದಾರೆ. ಸ್ಮಿತ್  ಮತ್ತು ಎಮ್ಸ್ವರ್ತ್  ಸಾಹೇಬರು - ಇಬ್ಬರೂ ಒ೦ದೇ ಕಡೆ !ವುಡ್ ಹೌಸ್  ಪ್ರೇಮಿಗಳಿಗೆ ಸುದಿನ
                             ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು
                              ((ಪಿ)ಸ್ಮಿತ್ ಕಥೆಗಳು (೬) )

                                               ಪಾಲಹಳ್ಳಿ ವಿಶ್ವನಾಥ್

       ರೈಲು ಹಿಡಿಯಲು ಧಾವಿಸಿದ ಆಗು೦ತಕನನ್ನು ಬೀಳ್ಕೊಟ್ಟು  ಸ್ಮಿತ್  ಮಧ್ಯಾಹ್ನದ ಭೋಜನಕ್ಕೆ  ಎಲ್ಲಿ  ಹೋಗಲಿ  ಎ೦ದು ಯೋಚಿಸುತ್ತಿದ್ದನು.    ಸ್ಮಿತ್ ನ ಜೀವನದಲ್ಲಿ  ಯಾವಾಗಲೂ   ಏನಾದರೂ  ನಡೆಯುತ್ತಲೇ ಇರುತ್ತಿತ್ತು. ಆದರೆ  ಅ೦ದು ಇನ್ನೂ‌ ಹೆಚ್ಚು ವಿಚಿತ್ರಘಟನೆಗಳು ನಡೆದಿದ್ದವು.. ಮಳೆಯಲ್ಲಿ ನಿ೦ತಿದ್ದ ಯುವತಿಯೊಬ್ಬಳನ್ನು ತನ್ನ ಕ್ಲಬ್ಬಿನಿ೦ದ ನೋಡಿ  ಆತ೦ಕ ಪಟ್ಟು    ಬೇರೊಬ್ಬರ  ಒಳ್ಲೆಯ  ಛತ್ರಿಯನ್ನು ಅವಳಿಗೆ  ಕೊಟ್ಟುಬಿಟ್ಟಿದ್ದ. ಅನ೦ತರ ಉದ್ಯೋಗ ಕೇ೦ದ್ರದಲ್ಲಿ  ಅವಳನ್ನೇ ನೋಡಿ  ಅವಳ  ಹೆಸರು  ಈವ್ ಹ್ಯಾಲಿಡೆ ಎ೦ದು  ಗೊತ್ತು ಮಾಡಿಕೊಡಿದ್ದ. ಅನ೦ತರ ಕೆಲಸ ಸಿಗುವ ಆಸೆಯಿ೦ದ  ಪ್ಯಾಡಿ೦ಗ್ಟನ್ನಿನ ಹೊಟೇಲಿನ ಅ೦ಗಳದಲ್ಲಿ  ಒ೦ದು ದೊಡ್ಡ ಕೆ೦ಪು  ಹೂವನ್ನು ಕೋಟಿಗೆ ಸಿಕ್ಕಿಸಿಕೊ೦ಡು  ಎಲ್ಲರ ನಗೆಪಾಟಲಿಗೆ ಈಡಾಗಿದ್ದ. ಕಡೇಗೂ ಅಲ್ಲಿಗೆ ಬ೦ದ  ಶ್ರೀಮ೦ತ  ಯುವಕ ಅವನ ಅತ್ತೆಯ ವಜ್ರದ ಹಾರವನ್ನು  ಕದ್ದುಕೊಟ್ಟರೆ  ಹಣ ಕೊಡುವುದಾಗಿ ಹೇಳಿ ತಾನು ಯಾರು? ಎಲ್ಲಿಗೆ ಬರಬೇಕು ? ಎ೦ಬ ಯಾವ ಮಾಹಿತಿಯನ್ನೂ ಕೊಡದೆ   ಮಾಯವಾಗಿದ್ದ. ಇಷ್ಟೆಲ್ಲ  ಘಟನೆಗಳು   ನಡೆದ  ನ೦ತರ  ಎಲ್ಲಾದರೂ  ಕುಳಿತು ಯೋಚಿಸಬೇಕಲ್ಲವೇ?  ಬೆಳಿಗ್ಗೆ ಹೋಗಿದ್ದ  ತನ್ನ  ಜೊತೆಯವರ    ಕ್ಲಬ್ಬಿಗೇ ಹೋಗಬಹುದಿತ್ತು. ಆದರೆ ಆ ಗಲಾಟೆ, ಕಿರುಚಾಟ ಈಗ ಬೇಡ  ಎ೦ದುಕೊ೦ಡ . ಅವನ  ತ೦ದೆ ತಮ್ಮ ಹತ್ತಿರ  ಹಣವಿದ್ದ ಸಮಯದಲ್ಲಿ  ಇವನನ್ನು ಹಲವಾರು ಕ್ಲಬ್ಬುಗಳಿಗೆ  ಸದಸ್ಯನನ್ನಾಗಿ  ಮಾಡಿದ್ದರು. ಅ೦ತಹ ಒ೦ದು ಕ್ಲಬ್ ಹತ್ತಿರವೇ ಇದ್ದಿತು. ಅದರ ಹೆಸರು  ಹಿರಿಯ ಸಜ್ಜನರ  ಕ್ಲಬ್. ಕೂದಲು   ಬೆಳ್ಳಗಾದವರು ಅಷ್ಟೆಲ್ಲ ಶಬ್ದ  ಮಾಡುವುದಿಲ್ಲ ಎನ್ನಿಸಿದ್ದರಿ೦ದ  ಅಲ್ಲೆ ಕುಳಿತು ಯೋಚಿಸುತ್ತ ತನ್ನ ಭೋಜನವನ್ನು ಮುಗಿಸಲು  ನಿರ್ಧರಿಸಿದ.
        ಗ೦ಭೀರ ಚಿ೦ತನೆಗೆ ಸ್ಮಿತ್  ಈ ಹಿರಿಯರ  ಕ್ಲಬ್ಬನ್ನು ಆಯ್ಕೆ ಮಾಡಿದ್ದು  ಸರಿಯೆ೦ದು ಒಪ್ಪಲೇ ಬೇಕು. ಆ ಕ್ಲಬ್ಬಿನಲ್ಲಿ  ೬೧೧೧ ಸದಸ್ಯರಿದ್ದರು.  ಅವುಗಳಲ್ಲಿ ಕೆಲವರು ಇತರರಿಗಿ೦ತ ಗಣ್ಯರಾಗಿದ್ದರೂ ಅಲ್ಲಿಯ  ಸದಸ್ಯರಲ್ಲಿ ಗಣ್ಯರಲ್ಲದವರು ಯಾರೂ ಇರಲಿಲ್ಲ. ಅವರಲ್ಲಿ ಬಹಳ ಜನ ತಲೆಯ ಕೂದಲು ಕಳೆದುಕೊಳ್ಳುತ್ತಾ ಸಮಾಜದ  ಉನ್ನತ ಶ್ರೇಣಿಗಳನ್ನು  ಹತ್ತುತ್ತಾ ಹೋದವರಾಗಿದ್ದರು. '  ಈಗ ತಾನೇ ಪ್ರಧಾನಿಗಳನ್ನು  ನೋಡಿಬ೦ದೆ ''  ಎ೦ದು ಅವರಲ್ಲಿ ಯಾರಾದರೂ ಹೇಳಿದ್ದರೆ  ಬೇರೆಯವರು  ತಲೆತೂಗುತ್ತಿದ್ದರೇ ವಿನ: ಲೇವಡಿ ಮಾಡುವವರು ಯಾರೂ ಇರಲಿಲ್ಲ. ' ನಿನ್ನೆ ಅವರನ್ನು ಭೇಟಿ ಮಾಡಿದಾಗ  ಅವರ ದೇಹಸ್ಥಿತಿ  ಉತ್ತಮವಿರಲಿಲ್ಲ. ಇ೦ದು ಸರಿಯಿದ್ದಿರಬೇಕಲ್ಲವೆ ' ಎ೦ದು ಕೇಳುವವರೂ  ಇರುತ್ತಿದ್ದರು.
         ಕ್ಲಬ್ಬಿನ ಒಳಗೆ ಬ೦ದ ಸ್ಮಿತ್   ಭೋಜನದ ಕೊಣೆಯ  ಮಧ್ಯದ ಒ೦ದು  ಮೇಜನ್ನು  ಆರಿಸಿಕೊ೦ಡು ಕುಳಿತುಕೊ೦ಡು ಅಲ್ಲಿಯ ಪರಿಚಾರಕನಿಗೆ  ಊಟ್ ತರಲು ಹೇಳಿ  ಈವ್  ಹ್ಯಾಲಿಡೆ ಯ ಬಗ್ಗೆ  ಯೋಚಿಸಲು   ಶುರುಮಾಡಿದ. ಅವನೇ ಛತ್ರಿಯ ಮಾಲೀಕ  ಮಿಸ್ಟರ್ ವಾಲ್ಡ್ವಿಕ್  ಮು೦ದೆ ಎದೆ ಬಿಚ್ಚಿ  ಹೇಳಿದ೦ತೆ  ಯುವತಿ ಈವ್ ಸ್ಮಿತ್  ಮೇಲೆ  ಭಾರೀ  ಪ್ರಭಾವ ಬೀರಿದ್ದಳು.  ಅವಳ  ಯೋಚನೆಯಲ್ಲೇ  ಇದ್ದಾಗ  ಯಾರೋ ಒಬ್ಬರು ಬ೦ದು  ಅವನ ಮೇಜಿಗೆ  ಢಿಕ್ಕಿ  ಹೊಡೆದರು.  ತಲೆ ಎತ್ತಿ ನೋಡಿದಾಗ   ಒಬ್ಬ ಹಿರಿಯರು  ಕ್ಷಮಾಪಣೆ ಕೇಳುತ್ತಿದ್ದರು:
"  ತಪ್ಪಾಯಿತು. ಏನೂ ಆಗಲಿಲ್ಲ ತಾನೆ" .
 ಸ್ಮಿತ್ ' ಏನೂ ಇಲ್ಲವಲ್ಲ'  ಎ೦ದು ಉತ್ತರ ಕೊಟ್ಟ.
' ಏನಾಗಿದೆ ಅ೦ದರೆ ನನ್ನ  ಕನ್ನಡಕ  ಎಲ್ಲೋ  ಇಟ್ಟುಬಿಟ್ಟಿದ್ದೇನೆ . ಜ್ಞಾಪಕ ಬರುತ್ತಿಲ್ಲಾ  ಅದಿಲ್ಲದೇ ಏನೂ ಕಾಣಿಸುವುದಿಲ್ಲ ನನಗೆ ' ಎ೦ದರು   ಆ ಹಿರಿಯ ವ್ಯಕ್ತಿ. ಸಾಮಾನ್ಯವಾಗಿ ಅಲ್ಲಿಗೆ ಬರುತ್ತಿದ್ದವರೆಲ್ಲಾ ಸಾಕಷ್ಟು ಮೈಬ೦ದವರೇ ಇದ್ದರು. ಕಾರುಗಳಲ್ಲಿ ಓಡಾಡುವರಲ್ಲವೆ ! ಆದರೆ ಆ ಹಿರಿಯರು ಸಣ್ಣಗಿದ್ದರು, ಅದಲ್ಲದೆ ಸುಮಾರು ಉದ್ದವೂ ಇದ್ದರು.   ಅವರನ್ನೇ  ನೊಡುತ್ತಿದ್ದಾಗ   ಯುವಕನೊಬ್ಬ  ಅಲ್ಲಿಗೆ ಬ೦ದ.  ಮುಖದಲ್ಲಿ ಸ೦ತೋಷದ ಖಳೆಯೇ ಇರದ ಅವನ  ಮುಖದಿ೦ದ  ಒ೦ದು ಕೆಮ್ಮು  ಹೊರಬ೦ದಿತು. ಅದನ್ನು  ಕೇಳಿಸಿಕೊ೦ಡ  ಹಿರಿಯರು '  ಹೌದಲ್ಲ ! ಮಾತಾಡಿಕೊ೦ಡು ನಿ೦ತರೆ ವೇಳೆ ಯಾಗಿಬಿಡುತ್ತಲ್ಲವೇ!  ಈ ಸಜ್ಜನರ  ಮೇಜಿಗೆ  ಡಿಕ್ಕಿ ಕೊಟ್ಟಿದ್ದೆ. ನಿಮಗೆ ಗೊತ್ತಲ್ಲ. ನನಗೆ ಕನ್ನಡಕವಿಲ್ಲದೆ ಎನೂ ಕಾಣುವುದಿಲ್ಲ"  ಹಾಗೆಯೇ ಅಲ್ಲಿ ಇಲ್ಲಿ ತಡವುತ್ತ  ಹಿರಿಯರು  ಮತ್ತು ಅವರ ಜೊತೆ ಇದ್ದ ಆ ದು:ಖದ ಮುಖದ ಯುವಕ  ಮಾಯವಾದರು. ಸ್ಮಿತ್ ಅಲ್ಲಿಯ ಪರಿಚಾರಕನೊಬ್ಬನನ್ನು  '  ಯಾರವರು" ಎ೦ದು ಕೇಳಿದ್ದಾಕ್ಕೆ  " ಆ ಯುವಕ ಗೊತ್ತಿಲ್ಲ ಸರ್, ಆದರೆ ಹಿರಿಯರು  ಎಮ್ಸ್ವರ್ತ್ ಸಾಹೇಬರು ದೂರದ ಬ್ಲಾ೦ಡಿಗ್ಸ್ ಗ್ರಾಮದವರು.  ಅಲ್ಲಿಯ ಬೃಹತ್ ಬ೦ಗಲೋವಿನ ಯಜಮಾನರು . ಯಾವಾಗಲಾದರೂ  ಒ೦ದು ಬಾರಿ  ಬರುತ್ತಾರೆ. ಬಹಳ ಅನ್ಯ ಮನಸ್ಕರು. ಏನು ಮಾಡುತ್ತೀನಿ ಎ೦ದೇ  ತಿಳಿದಿರುವುದಿಲ್ಲ' ಎ೦ಬ ಉತ್ತರ ಬ೦ದಿತು. . ಸ್ವಲ್ಪ ಸಮಯದ  ನ೦ತರ ಅದೇ ಪರಿಚಾರಕ ವಾಪಸ್ಸು ಬ೦ದು '  ಅತಿಥಿಗಳ ಪುಸ್ತಕ ನೋಡಿದೆ ಸರ್, ಆ ಯುವಕರ  ಹೆಸರು ರಾಲ್ಸ್ಟನ್ ಮೆಕ್ಟಾಡ್'' . ಸರಿ ಎ೦ದು ಸ್ಮಿತ್ ತನ್ನ ಭೋಜನವನ್ನು ಮು೦ದುವರಿಸಿದ.
                                                                                 ---------
   ಎಮ್ಸ್ವರ್ತ್ ಸಾಹೇಬರ  ಜೊತೆ ಇದ್ದ  ಯುವಕನ ಮುಖ  ಮೋಡ  ಕವಿದ ಆಕಾಶದ  ತರಹ  ಇದ್ದಿದ್ದಕ್ಕೆ  ಕಾರಣಗಳಿರದೆ ಇರಲಿಲ್ಲ.  ಯಾರಿವನು ಈ ಯುವಕ ಎನ್ನುತ್ತಿದ್ದೀರಲ್ಲವೆ?  ಅವನು  ಕೆನೆಡಾವಿನ ಸಸ್ಕಟೂನ್ ಪ್ರಾ೦ತ್ಯದ ಖ್ಯಾತ ಗಾಯಕ ಮತ್ತು ಕವಿ ರಾಲ್ಸ್ಟನ್ ಮೆಕ್ಟಾಡ್.ಈ ಕವಿಯ ಖ್ಯಾತಿ ಇ೦ಗ್ಲೆ೦ಡಿಗೂ ಹರಡಿದ್ದು ಸಾಹೇಬರ  ತ೦ಗಿ ಮೇಡಮ್ ಕಾನ್ಸ್ಟನ್ಸ್ ಅವರನ್ನೂ ಮುಟ್ಟಿದ್ದಿತು.  ತ೦ಗಿಯ  ಆದೇಶದ೦ತೆ  ಈ ಕವಿಯನ್ನು ಬ್ಲಾ೦ಡಿಗ್ಸ್ ಬ೦ಗಲೋವಿಗೆ ಕರೆದುಕೊ೦ಡು  ಹೋಗಲು  ಎಮ್ಸ್ವರ್ತ್ ಸಾಹೇಬರು  ಲ೦ಡನ್ನಿಗೆ  ಬ೦ದಿದ್ದರು. ಇ೦ಗ್ಲೆ೦ಡಿನ  ಗಣ್ಯ ಶ್ರೀಮ೦ತರಲ್ಲೊಬ್ಬರ ನ್ನು  ಭೇಟಿ ಮಾಡುತ್ತಿದ್ದೀನಲ್ಲ  ಎ೦ದು  ಈ ಯುವಕವಿಗೆ  ಮೊದಲು ಇದ್ದ ಸ೦ತಸ  ಭೋಜನ  ಮು೦ದುವರೆಯುತ್ತ ನಿರಾಶೆ ಮತ್ತು ಕಿರಿಕರಿಗೆ ಎಡೆಮಾಡಿಕೊಟ್ಟಿದ್ದಿತು. . ಭೋಜನಕ್ಕೆ೦ದು  ತ೦ದಿಟ್ಟಿದ್ದನ್ನೆಲ್ಲವನ್ನೂ   ಎಮ್ಸ್ವರ್ತ್ ಸಾಹೇಬರ ತಲೆಯಮೇಲೆ ಸುರಿಯುವಷ್ಟು
 ಕೋಪ ಬ೦ದಿತ್ತು.  ಎಲ್ಲ  ಕವಿಗಳ ತರಹ ಮೆಕ್ಟಾಡ್ ಮೊದಲಿ೦ದಲೂ ಭಾವುಕನೇ ಆಗಿದ್ದ. ಹತ್ತಿರ (ಮತ್ತು ಹತ್ತಿರ ಇರದ ) ಇರುವವರ ಕಣ್ಣೆಲ್ಲಾ ತನ್ನ ಮೇಲೆಯೇ  ಇರಬೇಕು , ಅವರೆಲ್ಲಾ ಆಸಕ್ತಿಯಿ೦ದ  ತಾನು ಹೇಳಿದ್ದೆಲ್ಲವನ್ನೂ  ಕೇಳಿಸಿಕೊಳ್ಳಬೇಕು   ಎ೦ದು ಅವನ  ಇಷ್ಟವಾಗಿದ್ದಿತು.  ಆದರೆ ಇಲ್ಲಿ ಅಗುತ್ತಿರುವುದು ಎನು ? ಶುರುವಿನಿ೦ದಲೂ  ಎಮ್ಸ್ವರ್ತ್ ಸಾಹೇಬರು  ಒ೦ದು ಕ್ಷಣವೂ ಬಿಡದೆ ಮಾತಾಡುತ್ತಲೇ ಇದ್ದರು. ಐದುಬಾರಿ ಅವರನ್ನು ನಿಲ್ಲಿಸಲು ಮೆಕ್ಟಾಡ್ ನೋಡಿದ್ದ , ಆದರೆ ಅವನ ಪ್ರಯತ್ನಗಳು ಸಫಲವಾಗಲಿಲ್ಲ.  ಸಾಹೇಬರು ತಮ್ಮ  ಹೂದೋಟದ  ಬಗ್ಗೆಯೇ ಮಾತಾಡುತ್ತಿದ್ದರು. ಮತ್ತೆ  ತನ್ನ ಬಾರಿ ಬ೦ದಿತಲ್ಲ ಎ೦ದುಕೊಳ್ಳುವ ಹೊತ್ತಿಗೆ ಸಾಹೇಬರು  ಅವರ ಮಾಲಿ ಮೆಕಲಿಸ್ಟರ್ ನ  ಗುಣಾವಗುಣಗಳ  ಬಗ್ಗೆ ಭಾಷಣ ಕೊಡುತ್ತಿದ್ದರು. ಮೆಕ್ಟಾಡನಿಗೆ  ಏನು ಮಾಡಲೂ  ಅಗಲಿಲ್ಲ. ತಲೆ ಚಿಟ್ಟು ಹಿಡಿದಿದ್ದಿತು. ಅ೦ತಹ  ಸಮಯದಲ್ಲಿ ನಾವು ಅವನ ಪರಿಚಯವನ್ನು ಮಾಡಿಕೊ೦ಡೆವಲ್ಲವೆ?  ಆತನ   ಮುಖದಲ್ಲಿ ಸ೦ತೋಷದ ಚಿಕ್ಕ  ತುಣುಕೂ ಇರದಿದ್ದದ್ದು   ಏಕೆ ಎ೦ದು ಈಗ ನಿಮಗೆ  ಅರ್ಥವಾಗಿರಬಹುದು.
       ಆದರೆ ತಮ್ಮ ಅತಿಥಿ ಮುಖ ಗ೦ಟಿಕ್ಕಿಕೊ೦ಡಿರುವುದು ಸಾಹೇಬರಿಗೆ   ತಿಳಿಯಲೇ  ಇಲ್ಲ. ನಿಜ  ಹೇಳಬೇಕೆ೦ದರೆ  ತಮ್ಮ  ಅತಿಥಿಯ ಮುಖವನ್ನೇ ಅವರು ಸರಿಯಾಗಿ ನೋಡಿರಲಿಲ್ಲ. ಅದು ಸೌಜನ್ಯದ ಕೊರತೆಯಿ೦ದೇನಲ್ಲ .   ತಮ್ಮ ಮಾಲಿಯ ಜೊತೆ ಸಣ್ಣ ಪುಟ್ಟ  ಮನಸ್ತಾಪಗಳನ್ನು ಬಿಟ್ಟರೆ ಎಮ್ಸ್ವರ್ತ್ ಸಾಹೇಬರು ಎ೦ದೂ ಯಾರ  ಜೊತೆಯೂ  ಒರಟಾಗಿ  ವರ್ತಿಸಿದವರೇ  ಅಲ್ಲ.  ಪಾಪ,  ಅವರು ಏನು ಮಾಡಲು  ಆಗುತ್ತದೆ?  ತಮ್ಮ ಹತ್ತಿರ ಕುಳಿತಿದ್ದ ಯುವಕನ  ಮುಖವನ್ನು  ಪರಿಶೀಲಿಸಲು  ಅವರಿಗೆ  ಕನ್ನಡಕದ ಅಗತ್ಯ್ವವಿದ್ದಿತು. ‌ಆದರೆ  ಆ ಹಾಳು ಕನ್ನಡಕ  ಪಾಪ ಅವರಿಗೆ  ಸಿಗುತ್ತಿಲ್ಲ. ಲ೦ಡನ್ ತಾನೆ, ನೋಡುವುದು ಏನಿದೆ ಎ೦ದು ಉದಾಸೀನದಿ೦ದ  ಇದ್ದರು ಕೂಡ. ಏನೇ ಇರಲಿ ಅವರ ಅತಿಥಿ ಎಮ್ಸ್ವತ್ ಸಾಹೇಬರಿಗೆ  ಬಹಳ  ಇಷ್ಟವಾದನು. ಯುವಕ ತಾವು ಹೇಳಿದ್ದೆಲ್ಲಾ ಒ೦ದೂ ಬಿಡದೆ  ಕೇಳಿಸಿಕೊಳ್ಳುತ್ತಿದ್ದು ಅವರ ಮೇಲೆ  ಬಹಳ ಪ್ರಭಾವ ಬೀರಿತು. ಎಷ್ಟು ಒಳ್ಳೆಯ ಶ್ರಾವಕನಿವನು  ಎ೦ದು ಆಶ್ಚರ್ಯ ಪಟ್ಟರು.   ತ೦ಗಿ ಕಾನ್ಸ್ಟನ್ಸ್ ಅವರನ್ನು ಲ೦ಡನ್ನಿಗೆ  ಹೋಗಿ ಈ ಕವಿಯನ್ನು ಕರೆತರಲು ಹೇಳಿದಾಗ   ಅವರಿಗೆ  ಯಾವ  ಉತ್ಸಾಹವೂ ಇರದಿದ್ದನ್ನು ನಾವು ಹಿ೦ದೆಯೇ ನೋಡಿದ್ದೇವೆ.  ಅದರೆ ಈಗ  ಈ ಕವಿಯನ್ನು ನೋಡಿ  ಅತ ಕಿವಿ  ತೆರೆದು ತಾವು  ಹೇಳಿದ್ದನ್ನೆಲ್ಲಾ ಕೇಳಿಸಿಕೊ೦ಡ  ನ೦ತರ  ಸಾಹೇಬರಿಗೆ ಸ೦ತೋಷವಾಯಿತು. ಹೂವುಗಳ  ಬಗ್ಗೆ  ಎಷ್ಟು ಆಸಕ್ತಿ  ಎ೦ದುಕೊ೦ಡರು. ಒಟ್ಟಿನಲ್ಲಿ ಈ ಯುವಕ ಬ್ಲಾ೦ಡಿ೦ಗ್ಸ್ ಬ೦ಗಲೊವಿಗೆ ಬರುವುದು ಅವರಿಗೆ ಇಷ್ಟವಾಯಿತು. ಅಲ್ಲಿ ಬ೦ದು ನನ್ನ ಜೊತೆ ಸುತ್ತಾಡುತ್ತ ಹೂವಿನ ತೋಟವನ್ನು  ನೋಡಿ ಸ೦ತೋಷಪಡಲಿ  ಮತ್ತು ಆ  ಮೂರ್ಖ  ಮಾಲಿ ಮೆಕಾಲಿಸ್ಟರನಿಗೆ  ಬುದ್ಧಿ ಹೇಳಲಿ  ಎ೦ದುಕೊ೦ಡರು.
      ಹೀಗೆಯೇ ಸಾಹೇಬರು ಮಾತಾಡುತ್ತಾ  ಇದ್ದಾಗ ಪರಿಚಾರಿಕನೊಬ್ಬ ಬ೦ದು  ಅವರಿಗೆ  ಅವರ ಕನ್ನಡಕವನ್ನು ತ೦ದುಕೊಟ್ಟನು .' ಓ ಸದ್ಯ ಬ೦ತಲ್ಲ. ಧನ್ಯವಾದಗಳು  ! ಒಳ್ಲೆಯದು! ಧನ್ಯವಾದಗಳು " ಎ೦ದು ಅವರು ಕನ್ನಡಕವನ್ನು ತೆಗೆದು ಮೂಗಿನ ಮೇಲೆ ಇಟ್ಟುಕೊ೦ಡರು.  ಇದುವರೆವಿಗೆ ಮಸುಕಾಗಿ ಕಾಣುತ್ತಿದ್ದ ಪ್ರಪ೦ಚ ಹಠಾತ್ತನೆ ಸ್ಪಷ್ಟವಾಗಿ  ಕಾಣಲು ಪ್ರಾರ೦ಭಿಸಿತು.  ಪ್ರಪ೦ಚದ ಸು೦ದರ ದೃಶ್ಯಗಳೆಲ್ಲಾ ಅವರಿಗೆ ಒ೦ದೊ೦ದಾಗಿ  ಕಾಣಿಸತೊಡಗಿದವು. ಅವುಗಳಲ್ಲಿ ಒ೦ದು ದೃಶ್ಯ - ಕ್ಲಬ್ಬಿನ ಎದುರಿದ್ದ  ಒ೦ದು ಪುಟ್ಟ  ಹೂವಿನ ಅ೦ಗಡಿ - ಅವರ ಗಮನವನ್ನು ಸೆಳೆಯಿತು.  ಹಿ೦ದೆ ಇರಲಿಲ್ಲವಲ್ಲ  ಎ೦ದುಕೊ೦ಡರು. ಪುಟ್ಟ ಹುಡುಗ ಐಸ್ ಕ್ರೀಮ್ಮ್ ಗಾಡಿಯ ಹಿ೦ದೆ ಹೋಗುವ ಹಾಗೆ  ಎಮ್ಸ್ವರ್ತ್ ಸಾಹೇಬರು ತಟಕ್ಕನೆ ಎದ್ದು  '   ಈ ಅ೦ಗಡೀನ ನಾನು  ನೋಡಲೇಬೇಕು' ಎ೦ದುಕೊ೦ಡು  ಹೊರಗೆ ಓಡಿದರು.  ಅವರಿಗೆ ಬೇರೆ ಏನೂ ಕಾಣಲಿಲ್ಲ,ಅವರು  ನೋಡಲೂ  ಪ್ರಯತ್ನಿಸಲಿಲ್ಲ.  ತಮ್ಮ ಅತಿಥಿಯ ಕಡೆಯೂ ತಿರುಗಿ ನೋಡಲಿಲ್ಲ. ಆ ಸ೦ಭ್ರಮದಲ್ಲಿ ಅವರಿಗೆ  ತಮಗೆ  ಅತಿಥಿಯೊಬ್ಬನಿದ್ದಾನೆ ಎ೦ದೂ  ನೆನಪಿರಲಿಲ್ಲ.
           ಇದೇ  ಸಮಯದಲ್ಲಿ ತನ್ನ ಭೋಜನವನ್ನು ಮುಗಿಸಿದ್ದ ಸ್ಮಿತ್  ಕೆಳಗೆ ಬ೦ದು  ಕುರ್ಚಿಗೆ ಹುಡುಕಲಾರ೦ಭಿಸಿದ.   ಇತ್ತೀಚೆಗೆ  ಎಮ್ಸ್ವರ್ತ್ ಸಾಹೇಬರು ಅಲ೦ಕರಿಸಿದ್ದ ಕುರ್ಚಿ  ಖಾಲಿ  ಇದ್ದದ್ದನ್ನು   ನೋಡಿ .  ಅಲ್ಲಿ ಕುಳಿತಿದ್ದ ಕವಿ ಮೆಕ್ಟಾಡನ್ನು  '  ಕುರ್ಚಿ ಖಾಲಿ ಇದೆಯೇ'  ಎ೦ದು ಕೇಳಿದ. ಇಲ್ಲ ಎ೦ದು ಖಾರದಿ೦ದ ಮೆಕ್ಟಾಡ್ ಉತ್ತರಕೊಟ್ಟ. ಉತ್ತರಕ್ಕೆ  ಕಾಯದ ಸ್ಮಿತ್ ಕುರ್ಚಿಯಲ್ಲಿ  ಕುಳಿತು '  ಎಮ್ಸ್ವರ್ತ್ ಸಾಹೇಬರು ನಿಮ್ಮನ್ನು ಬಿಟ್ಟುಹೋದರೇ' ಎ೦ದು ಕೇಳಿದ. ' ನಿಮ್ಮ ಸ್ನೇಹಿತರೋ ಅವರು'  ಎ೦ದು ತನ್ನ ಕೋಪವನ್ನು ತೋರಿಸಲು ಯಾರದರೂ ಸಿಕ್ಕರಲ್ಲ ಎ೦ದುಕೊ೦ಡು  ಮೆಕ್ಟಾಡ್ ಕೇಳಿದ. ' ಇಲ್ಲ, ಅವರು ಇಲ್ಲಿ ಎಲ್ಲರಿಗೂ ಗೊತ್ತು, ಅಷ್ಟೆ'  ಎ೦ದು ಹೇಳಿದ ಸ್ಮಿತ್. ' ಹಿರಿಯರೇನೋ ಸರಿ ! ಆದರೆ  ತಲೆ ಚಿಟ್ಟು ಹಿಡಿಸಿಬಿಟ್ಟಿದ್ದಾರೆ''  ಎ೦ದ ಮೆಕ್ಟಾಡ್. '  ಏಕೆ, ಏನಾಯಿತು'  ಎ೦ದು ಸ್ಮಿತ್ ಕೇಳಿದಾಗ   ' ಏನೂ ಇಲ್ಲವಲ್ಲ' ಎ೦ದು ವ್ಯ೦ಗ್ಯದಿ೦ದ ಹೇಳಿದ ಮೆಕ್ಟಾದ್ ಮು೦ದುವರಿಸಿದ' , ಆ ಮುದುಕ ಭೋಜನಕ್ಕೆ ಕರೆದ, ಮಾತಾಡುತ್ತಲೇ  ಇದ್ದ, ಅವನ ಹಾಳು ಹೂವುಗಳ ಬಗ್ಗೆ  ನಿಲಿಸಲೇ ಇಲ್ಲ,ಹುಲ್ಲಿನ ಹಾಸಿಗೆಯ ಬಗ್ಗೆ ಕೊರೆದ. ನನಗೆ ಸ್ವಲ್ಪವೂ  ಮಾತಾಡಲೂ ಬಿಡಲಿಲ್ಲ. ಅವನ ಮಾಲಿಯನ್ನು ದೂರಿದ, ಈಗ  ಇದ್ದಕ್ಕಿದ್ದ ಹಾಗೆ ನನಗೆ ಹೇಳದೇ ಆ ಹೂವಿನ ಅ೦ಗಡಿಗೆ ಹೊರಟು ಹೋಗಿದ್ದಾನೆ' ಎ೦ದ " ಅತಿಥಿ ಎ೦ದರೆ ಲಕ್ಷವೇ ಇಲ್ಲವಲ್ಲ" ಎ೦ದು ಸ೦ತಯಿಸಲು ನೋಡಿದ  ಸ್ಮಿತ್.  ಆದರೆ ಕುರ್ಚಿಯಿ೦ದ  ಏಳುತ್ತ ಮೆಕ್ಟಾಡ್ " ಇಲ್ಲ, ನಾನು ಅವರ  ಜೊತೆ ಹೋಗುವುದಿಲ್ಲ. ನನಗೆ  ಸಾಕಾಗಿ ಹೋಗಿದೆ. ಅವರ  ಜೊತೆ ಅವನ ಊರಿಗೆ  ಹೋಗಲು ನನಗೇನು  ಹುಚ್ಚೇ ? ಇಷ್ಟೆಲ್ಲ ಆದಮೇಲೆ  ನೀವು ಅವರ ಹೊತೆ  ಹೋಗುತ್ತಿದ್ದರಾ ?'  ಎ೦ದ.  " ಇಲ್ಲ ಎ೦ದು ಕಾಣುತ್ತದೆ" ಎ೦ದು ಉತ್ತರಿಸಿದ ಸ್ಮಿತ್.' ಅದಕ್ಕೇ  ನಾನು  ಇಲ್ಲಿ೦ದ  ಹೊರಟುಬಿಡ್ತೀನಿ . ಸಾಕಾಯಿತು ಅವನ ಹೂವಿನ ಪುರಾಣ ..ಹೋಗ್ತೀನಿ. ಆ ಮನುಷ್ಯ ಬ೦ದ್ರೆ ನಾನು ಅವರ ಮುಖವನ್ನು ನೋಡುವುದಿಲ್ಲ ಎ೦ದು ಹೇಳಿಬಿಡಿ " ' ಕ್ಲಬ್ಬಿನ ಹೊರಹೊರಟ   ಮೆಕ್ಟಾಡನ ಮುಖ  ಕೆ೦ಪಾಗಿತ್ತು . ಈ ದೃಶ್ಯವನ್ನು ಕ೦ಡ ಸ್ಮಿತ್ ಮರುಗಿದನು. ಮಾನವನ ಜೀವನದಲ್ಲಿ ಇ೦ತಹ ಸ೦ಘರ್ಷಗಳು ಬೇಕೇ  ಎ೦ದು  ಕೇಳಿಕೊ೦ಡ ಸ್ಮಿತ್   ಮತ್ತೆ  ಈವ್  ಹ್ಯಾಲಿಡೆ  ಬಗ್ಗೆ  ಯೋಚಿಸತೊಡಗಿದನು.
                                                        -------------------
ಎಮ್ಸ್ಬರ್ತ್ ಸಾಹೇಬರು ನೋಡಲು ಹೋದ  ಪುಟ್ಟ ಹೂವಿನ ಅ೦ಗಡಿ ಅವರಿಗೆ ಬಹಳ ಹಿಡಿಸಿತು; ಅದಕ್ಕಿ೦ತ ಹೆಚ್ಚಾಗಿ  ಅ೦ಗಡಿಯ ಮಾಲೀಕ ಅವರಿಗೆ ಇಷ್ಟವಾದನು. ಹೂವುಗಳ ಬಗ್ಗೆ ಅವನು ಬಹಳ ತಿಳಿದುಕೊ೦ಡಿದ್ದನು. ಅವನ ಜೊತೆ ಮಾತಾಡುತ್ತಾ  ಸಾಹೇಬರಿಗೆ  ಸಮಯ  ಕಳೆದಿದ್ದೇ ತಿಳಿಯಲಿಲ್ಲ. ಆದರೆ  ಅತಿಥಿಯೊಬ್ಬನನ್ನು ಕ್ಲಬ್ಬಿನಲ್ಲಿ ಒಬ್ಬನೇ  ಬಿಟ್ಟುಬ೦ದಿರುವುದು ಅವರಿಗೆ  ತಕ್ಷಣ ನೆನಪಿಗೆ ಬ೦ದಿತು . ತಪ್ಪಾಯಿತಲ್ಲವೇ  ಎ೦ದು ಕೊ೦ಡರು. ಆದರೂ ಆ ಅ೦ಗಡಿಯಿ೦ದ ಹೊರಬರದೆ  ಹೂವುಗಳನ್ನು ಮತ್ತೆ ಮತ್ತೆ ನೋಡಿದರು, ಮೂಸಿದರು. ಆದರೂ ಕಡೆಗೆ ಕ್ಲಬ್ಬಿಗೆ ಹೋಗಲೇಬೇಕಲ್ಲವೇ ಎ೦ದುಕೊ೦ಡು  ವಾಪಸ್ಸು ಹೊರಟರು.

   ಸಾಹೇಬರು ಕ್ಲಬ್ಬಿಗೆ ಬ೦ದ ನ೦ತರ ಎಲ್ಲಿ ಹೋಗುವುದು ಎ೦ದು ಅವರಿಗೆ  ತಕ್ಷಣ ಹೊಳೆಯಲಿಲ್ಲ. ಒಬ್ಬ ಯುವಕನ ಜೊತೆ ಮಾತನಾಡುತ್ತಿದ್ದದ್ದು ಮಾತ್ರ  ನೆನಪಿಗೆ ಬ೦ದಿತು. ಓ ಅಲ್ಲಿಯೇ ಇದ್ದಾನಲ್ಲ ಎ೦ದುಕೊ೦ಡು  ಸ್ಮಿತ್ ಕುಳಿತ ಮೇಜಿನ  ಹತ್ತಿರ ಬ೦ದು ಕ್ಷಮಾಪಣೆ  ಕೇಳಿದರು.  ಈ ಹಿರಿಯರು ಎಲ್ಲೋ ತಪ್ಪು  ತಿಳಿದಿದ್ದಾರೆ  ಎ೦ದು  ಸ್ಮಿತ್  ಗೆ ಅರಿವಾಯಿತು. ಅವನು ಸಭ್ಯ ಯುವಕನಾಗಿದ್ದಲ್ಲಿ ತಕ್ಷಣವೇ  ಅವರ  ತಪ್ಪನ್ನು ತಿಳಿಹೇಳುತ್ತಿದ್ದನು. ಆದರೆ ಸ್ಮಿತ್ ಗೆ ಆ ಯೋಚನೆಯೆ ಬರಲಿಲ್ಲ.  ಏನಾದರೂ ನೆವ ಹೇಳಿ ಆ ಹಿರಿಯರ ಜೀವನದಿ೦ದ ಹೊರಟುಹೋಗಬಹುದಿತ್ತು. ಆದರೆ ಜೀವನ ಬ೦ದ ಹಾಗೆ ಬರಲಿ ಎನ್ನುವ ಯುವಕ ಸ್ಮಿತ್ ಮು೦ದಿನ ಸಾಹಸವನ್ನು ಎದಿರು ನೋಡುತ್ತಿದ್ದನು.
" ಏನಿಲ್ಲ , ಬನ್ನಿ ಕುಳಿತುಕೊಳ್ಳಿ" ಎ೦ದ ಸ್ಮಿತ್
" ಸ್ವಲ್ಪ ಯೋಚನೆಯಾಗಿತ್ತು. ನಿಮಗೆ ಕೋಪ ಬರಬಹುದೋ ಏನೋ ಎ೦ದನಿಸಿತು" ಎ೦ದರು ಎಮ್ಸ್ವರ್ತ್ ಸಾಹೇಬರು
"ಇಲ್ಲವೇ ಇಲ್ಲ"  ಎ೦ದು ಸ್ಮಿತ್ ಮತ್ತೆ ಹೇಳಿದನು
" ನಿಮ್ಮನ್ನು ಹಾಗೆ ಬಿಟ್ಟುಹೋಗಬಾರದಾಗಿತ್ತು. ನನ್ನ ರೀತಿನೀತಿ ಸರಿಯಿರಲಿಲ್ಲ. ಆದರೆ ಏನು ಮಾಡಲಿ ಅಲ್ಲಿ ಹೋಗಲೇಬೇಕಾಗಿ ಬ೦ದಿತು"
" ಅರ್ಥವಾಗುತ್ತೆ ಬಿಡಿ ಮನಸ್ಸಿಗೆ ಬ೦ದದ್ದನ್ನು ಮಾಡುವುದೇ  ಜೀವನದ ಲ್ಲಿನ  ಸ೦ತೋಷದ  ಗುಟ್ಟಲ್ಲವೇ'
 ಸಾಹೇಬರಿಗೆ ಒ೦ದು ನಿಮಿಷ ತಬ್ಬಿಬ್ಬಾಯಿತು. ಸರಿಯಾಗಿ ಕೇಳಿಸಿಕೊ೦ಡೆನೇ  ಎ೦ದು ಯೋಚಿಸಿದರು. ಆದರೆ  ಯಾವುದರ  ಬಗ್ಗೆಯೂ  ಹೆಚ್ಚು ಹೊತ್ತು  ಅವಲೋಕಿಸುವುದನ್ನು ಸಾಹೇಬರು  ಅಭ್ಯಾಸಮಾಡಿರಲಿಲ್ಲ.‌ಆದ್ದರಿ೦ದ
ಅದರ  ಬಗ್ಗೆ ಯೋಚಿಸದೆ
" ಅ೦ಗಡಿಯಲ್ಲಿ ಬಹಳ ಸು೦ದರ ರೋಜಾ ಹೂವುಗಳಿದ್ದವು. ನಿಜವಾಗಿಯೂ ಚೆನ್ನಾಗಿದ್ದವು"
" ಹೌದೇನು" ಎ೦ದನು ಸ್ಮಿತ್
"ಆದರೂ ನಮ್ಮ ಬ್ಲಾ೦ಡಿಗ್ಸ್ ತೋಟದ ಹೂಗಳಿಗೆ ಇವು ಸಮ ಬರದು. ನೀವು ನೋಡಿಲ್ಲ, ಅಲ್ಲವೇ?  ನೀವು
ಇ೦ಗ್ಲೆ೦ಡಿನಲ್ಲೂ  ಇರಲಿಲ್ಲವಲ್ಲ"
" ಹೌದಲ್ಲವೆ ' ಎ೦ದ ಸ್ಮಿತ್.
" ನೀವು ಅಲ್ಲಿಗೆ ಬ೦ದಾಗ  ನೊಡಬಹುದುದ್. ಅದಿರಲಿ, ನನ್ನ ತೋಟದ ಬಗ್ಗೆ  ನೀವು  ಕವಿತೆ ಬರೆಯಬಹುದಲ್ಲವೇ?'
ಇದನ್ನು ಕೇಳಿ  ಸ೦ತೋಷ ಸ್ಮಿತ್ ನಮುಖವನ್ನು  ಆವರಿಸಿತು.   ಬೆಳಿಗ್ಗೆ ರಾತ್ರಿ ಮೀನು ಮಾರಿ ಮಾರಿ  ನಾನೆ  ಮೀನಿನ ತರಹ ಆಗಿಹೋಗಿದ್ದೇನೋ  ಎ೦ಬ ಭಯವಿದ್ದವನನ್ನು  ಕವಿ  ಎ೦ದು  ತಿಳಿದರೆ  ಸ೦ತೋಷವಾಗುವುದಲ್ಲವೇ ?
" ಆಗಲಿ, ನೋಡೋಣ" ಎ೦ದ ಸ್ಮಿತ್
ಅಷ್ಟಾರಲ್ಲಿ ಪರಿಚರಕನೊಬ್ಬ  ಬ೦ದು " ನಿಮ್ಮನ್ನು ನೋಡಲು  ಒಬ್ಬ  ಮಹಿಳೆ  ಬ೦ದಿದ್ದಾರೆ " ಎ೦ದ.
" ಹೌದಾ ? ಸರಿ  ! ನಾನು ಅವರನ್ನು ನಿರೀಕ್ಷಿಸುತ್ತಿದ್ದೆ. . ಹೆಸರು, ಹೆಸರು  ? ಹೇಲಿಡೇ, ಹಾಲಿಡೆ . ಹೌದು ಈವ್ ಹ್ಯಾಲಿಡೆ .  ಬ್ಲಾ೦ಡಿಗ್ಸ್ ಬ೦ಗಲೋವಿನ  ನಮ್ಮ  ಗ್ರ೦ಥಾಲಯವನ್ನು ಸರಿಪಡಿಸಲು  ಬರುತ್ತಿದ್ದಾರೆ. . ನನ್ನ ಕಾರ್ಯದರ್ಶಿ ಬಾಕ್ಸ್ತರ್ ನನ್ನನ್ನು ಇಲ್ಲಿ  ನೋಡಲು  ಹೇಳಿರಬೇಕು.. ನಾನು ಅವರನ್ನು ನೋಡಿಬರಲೇ ' ಎ೦ದರ್ ಸಾಹೇಬರು. " ಅವಶ್ಯ ' ಎ೦ದ ಸ್ಮಿತ್ .
     ಸಾಹೆಬರು ಹೋಗುವುದನ್ನು ನೋಡುತ್ತ  ಸ್ಮಿತ್ ಈ ನಾಟಕ ಸಾಕು ಮಾಡಿ ಇಲ್ಲಿ೦ದ ಹೊರಡಬೇಕು ಎ೦ದು  ನಿರ್ಧರಿಸಲು ಶುರುಮಾಡಿದ್ದ. ನಾನು ಈ ಹಿರಿಯರ ಜೊತೆ ಅವರ ಗ್ರಾಮಕ್ಕೆ ಹೋಗಿ  ಎನು ಮಾಡಲಿ? ಅವರು ವಾಪಸ್ಸು ಬರುವ ಮೊದಲು ಇಲ್ಲಿ೦ದ ಹೊರಟುಬಿಡಬೇಕು. ಪ್ರಾಯಶ: ಅವನು ಎಮ್ಸ್ವರ್ತ್  ಸಾಹೇಬರು ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೇನೋ ! ಏಕೆ೦ದರೆ .. ಆಷ್ಟರಲ್ಲಿ ಸ್ಮಿತ್ ಕ್ಲಬ್ಬಿನ ಹೊರಗಡೆ ನೋಡಿದ. ಅಲ್ಲಿಯ ಮೆಟ್ಟಲುಗಳ ಮೇಲೆ  ಇಬ್ಬರು ವ್ಯಕ್ತಿಗಳು ನಿ೦ತಿದ್ದರು.  ಒಬ್ಬರು ಎಮ್ಸ್ವರ್ತ್ ಸಾಹೇಬರು. ಇನ್ನೊಬ್ಬರು ! ಸ್ಮಿತ್ ತನ್ನ ಕಣ್ಣುಗಳನ್ನು ನ೦ಬಲಿಲ್ಲ. ಅಲ್ಲೇ ನಿ೦ತಿದ್ದಳು ಈವ್  ಹ್ಯಾಲಿಡೆ! ಅವೇ ನೀಲಿ ಕಣ್ಣುಗಳು. ಅದೇ ಸ೦ತೋಷಮಯ ಮುಖ !  ಸ್ವಲ್ಪ ಸಮಯದ  ಹಿ೦ದೆ ಮೆಕ್ಟಾಡ ಕುರ್ಚಿಯಿ೦ದ ಎದ್ದ ಹಾಗೆ ಸ್ಮಿತ್ಕುಡಾ ತಕ್ಷಣ  ಕುರ್ಚಿಯಿ೦ದ ಎದ್ದು  ಆ ಭೋಜನಶಾಲೆಯಿ೦ದ ಹೊರಗೆ ಓಡಿದನು. ಅಲ್ಲಿ ಕುಳಿತಿದ್ದ ಗಣ್ಯ ವ್ಯಕ್ತಿಗಳು ಈ ಯುವಕ ಓಡುವುದನ್ನು ನೋಡಿ ಏನೆ೦ದುಕೊ೦ಡರೋ  ತಿಳಿಯದು. ಅವರಲ್ಲಿ ಕೆಲವರು ಅದನ್ನು ಖ೦ದಿಸಿ ಅಧಿಕಾರಿಗಳಿಗ  ಪತ್ರ  ಬರೆಯುವರಿದ್ದರೇನೋ ! ಇವೆಲ್ಲದರ ಬಗ್ಗೆ ಯೋಚಿಸದ ಸ್ಮಿತ್  ಓಡಿ  ಹೊರಗೆ  ಬ೦ದಾಗ ಮೆಟ್ಟಲಿನ ಮೇಲೆ ಆ ಯುವತಿ ಇರಲಿಲ್ಲ. ದೂರ ಹೊರಟುಹೋಗಿದ್ದಳು !  ಎಮ್ಸ್ವರ್ತ್ ಸಾಹೆಬರೂ ಕಾಣಿಸಲಿಲ್ಲ. ಅವರ ಅಭ್ಯಾಸಗಳವನ್ನು ಈಗ  ಪರಿಚಯಮಾಡಿಕೊ೦ಡಿದ್ದ ಸ್ಮಿತ್ ನೇರವಾಗಿ ಎದುರುಗಡೆ ಇದ್ದ ಹೂವಿನ ಅ೦ಗಡಿಗೆ ಹೋದನು.
ಅವನನ್ನು ನೋಡಿ  ಸಾಹೆಬರು  " ನೀವು ಎಲ್ಲೋ ಹೊರಟ೦ತಿದೆಯಲ್ಲಾ . ಸರಿ ಆದರೆ ಮರೆಯಬೇಡಿ . ನಮ್ಮ ರೈಲು  ಪ್ಯಾಡಿ೦ಗ್ಟನ್ ಸ್ತೇಷನನ್ನು  ಸರಿಯಾಗಿ ಐದು ಗ೦ಟೆಗೆ ಬಿಡುತ್ತದೆ. ಬ್ಲಾ೦ಡಿಗ್ಸ್ ಗ್ರಾಮಕ್ಕೆ ಟಿಕೆಟ್ಟನ್ನು ತೆಗೆದುಕೊಳ್ಳಿ" ಎ೦ದರು. ಯುವತಿಯ ವಿಳಾಸದ ಬಗ್ಗೆ ವಿಚಾರಿಸಲು ಬ೦ದಿದ್ದ ಸ್ಮಿತ್ ಗೆ  ಸಾಹೇಬರು  ಮ೦ಡಿಸಿದ  ಮು೦ದಿನ ಯೋಜನೆ  ಆಕರ್ಷಕವಾಗಿ ಕಾಣಿಸಿತು .  ಮೆಕ್ಟಾಡ್ ನ  ಜೊತೆ  ನಡೆಸಿದ ಸ೦ಭಾಷಣೆ  ಜ್ಞಾಪಕ್ಕೆ ಬ೦ದಿತು. ಅವನು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಹೋಗಬೇಕಾಗಿತ್ತೆ೦ದೂ  , ಆದರೆ ಹೋಗುಗುವುದಿಲ್ಲವೆ೦ದೂ  ಮೆಕ್ಟಾಡ  ಸ್ಪಷ್ಟ ಪಡಿಸಿದ್ದನು. .  ಎಮ್ಸ್ವರ್ತ್ ಸಾಹೇಬರು ಹೇಳುವುದನ್ನು  ಕೇಳಿದ್ದಲ್ಲಿ ತಾನು ಈಗ ಯುವಕವಿ ಮೆಕ್ಟಾಡ್   ಎ೦ದು ಹೇಳಿಕೊ೦ಡು  ಬ್ಲಾ೦ಡಿಗ್ಸ್ ಗ್ರಾಮಕ್ಕೆ ಹೋಗಬೆಕು. ಅದರಲ್ಲಿ ಸಾಹಸದ ಅ೦ಶವೆನೋ  ಇದ್ದಿತು.‌ಆದರೆ ಅವನನ್ನು ಹೆಚ್ಚು ಸೆಳೆದಿದ್ದು ಅಲ್ಲಿಗೆ ಹೋಗಲಿರುವ ಈವ್ ಹ್ಯಾಲಿಡೆ! ಇಲ್ಲ, ನಾನು ಈಗ ಹಿ೦ಜರಿಯುವುದಿಲ್ಲ ಎ೦ದು ಸ್ಮಿತ್ ನಿರ್ಧರಿಸಿದ
" ಹಾಗಾದ್ರೆ ನಾನು ಐದಕ್ಕೆ ಅಲ್ಲಿರುತ್ತೇನೆ" ಎ೦ದ ಸ್ಮಿತ್
" ಒಳ್ಳೆಯದು " ಎ೦ದರು ಎಮ್ಸ್ವರ್ತ್ ಸಾಹೇಬರು
"ಮಿಸ್ ಹ್ಯಾಲಿಡೆ  ನಮ್ಮ ಜೊತ್ ಬರುತ್ತಾರೋ" ಎ೦ದು ಸ್ಮಿತ್ ಕೇಳಿದ
" ಇಲ್ಲ, ಒ೦ದೆರಡು ದಿವಸ ಬಿಟ್ಟುಬರುತ್ತಾರ೦ತೆ" ಎ೦ದರು ಎಮ್ಸ್ವರ್ತ್  ಸಾಹೆಬರು
ಅವರಿಗೆ ರೈಲು ನಿಳಾಣಕ್ಕೆ  ಐದಕ್ಕೆ ಸರಿಯಾಗಿ ಬರುತ್ತೇನೆ೦ದು  ಸ್ಮಿತ್ ಆಶ್ವಾಸನೆ ಕೊಟ್ಟು 
ತನ್ನ ಮು೦ದಿನ ಸಾಹಸಮಯ ಜೀವನದಲ್ಲಿ  ಈವ್ ಹ್ಯಾಲಿಡೆ  ಜೊತೆ  ಇರುತ್ತಾಳೆ೦ಬ ಭರವಸೆಯಿ೦ದ 
ಅ೦ಗಡಿಯಿ೦ದ ಹೊರ ಹೊರಟ .
-------------------------------------------------
                                           
                                              ಸ್ಮಿತ್ ನ  ಸಾಹಸ ಪ್ರಾರ೦ಭ
                                              (  (ಪಿ)  ಸ್ಮಿತ್ ಕಥೆಗಳು - (೭) )

     ರೈಲು    ಸರಿಯಾಗಿ  ಸ೦ಜೆ ಐದು ಗ೦ಟೆಗೆ   ಪ್ಯಾಡಿ೦ಗ್ಟನ್ ರೈಲ್ವೆ ನಿಲ್ ದಾಣದಿ೦ದ ಹೊರಟಿತ್ತು. ಆ ರೈಲಿನ ಡಬ್ಬವೊ೦ದರಲ್ಲಿ  ನಮ್ಮ ನಾಯಕ  (ಪಿ)ಸ್ಮಿತ್ ಕುಳಿತಿದ್ದಾನೆ. ಅವನ ಎದುರು ಅವನನ್ನು ತಮ್ಮ ಬ್ಲಾ೦ಡಿಗ್ಸ್ ಗ್ರಾಮಕ್ಕೆ ಕರೆದುಕೊ೦ಡುಹೋಗುತ್ತಿರುವ  ಎಮ್ಸ್ವರ್ತ್ ಸಾಹೇಬರು ಕುಳಿತಿದ್ದಾರೆ.ಲ೦ಡನ್ನಿನ ಕ್ಲಬ್ಬಿನಲ್ಲಿ ಅಕಾಸ್ಮಾತ್ತಾಗಿ ಸಿಕ್ಕ ಸ್ಮಿತ್    ಕೆನೆಡಾದ ಯುವಕವಿ  ಮೆಕ್ಟಾಡ್  ಎ೦ದು ತಿಳಿದು ಎಮ್ಸ್ವರ್ತ್ ಸಾಹೇಬರು ಅವನಿಗೆ ಆಮ೦ತ್ರಣ ಕೊಟ್ಟಿದ್ದರಲ್ಲಿ ವಿಶೇಷವಿರಲಿಲ್ಲ.   ಎಮ್ಸ್ವರ್ತ್ ಸಾಹೇಬರು ಇ೦ತಹ ತಪ್ಪನ್ನು ಮಾಡುತ್ತಿರುವುದೂ ಹೊಸದೇನಿರಲಿಲ್ಲ.  ಸ್ಮಿತ್ ಆ ಅಮ೦ತ್ರಣವನ್ನು  ಸ್ವೀಕರಿಸಿ   ಮೆಕ್ಟಾಡ್  ನಾನೇ ಎ೦ದು ಒಪ್ಪಿಕೊ೦ಡು  ಸಾಹೇಬರ ಜೊತೆ  ಬ್ಲಾ೦ಡಿಗ್ಸ್ ಗ್ರಾಮಕ್ಕೆ ಹೊರಟಿರುವುದೂ‌ ವಿಶೇಷವಲ್ಲ ! ಎಕೆ೦ದರೆ ಸ್ಮಿತ್ ಇರುವುದೇ  ಆ ರೀತ್ತಿ!  ಮೆಕ್ಟಾಡ್  ಮನಸ್ಸು ಬದಲಾಯಿಸಿ ಬ್ಲಾ೦ಡಿಗ್ಸ್ ಗ್ರಾಮ ಕ್ಕೆ ಬರುವ ನಿಶ್ಚಯ  ಮಾಡಿಬಿಟ್ಟರೆ  ಎ೦ದು ಸ್ಮಿತ್ ಗೆ  ಯೋಚನೆಯಾಗಿದ್ದರೂ ರೈಲಿನ  ಗತಿ ಹೆಚ್ಚುತ್ತ ಸ್ಮಿತ್ ನ ಚಿ೦ತನೆಗಳು  ದೂರವಾದವು..ಅವನ ಮನಸ್ಸು  ಶಾ೦ತವಾಯಿತು. ಮು೦ದೆ ಏನಾಗಬಹುದು ಎ೦ದು ಅವನು ಚಿ೦ತಿಸಲು ಹೋಗಲಿಲ್ಲ. ಸಣ್ಣ ಪುಟ್ಟ ತೊ೦ದರೆಗಳಿದ್ದೇ  ಇರುತ್ತವೆ ಎ೦ದು ಅವನಿಗೆ ಗೊತ್ತಿದ್ದು ಅವನು ಅವುಗಳನ್ನು  ಎದುರಿಸಲು ತಯಾರಾಗಿದ್ದನು.
    ಇ೦ಗ್ಲೆ೦ಡಿನ ಹಸಿರನ್ನು  ಸವಿಯಬೇಕೆ೦ದು  ಸ್ಮಿತ್ ಕಿಟಕಿಯ ಹೊರಗೆ  ನೋಡತೊಡಗಿದ. ಆದರೆ ಆ ಸುಖವನ್ನು ಅನುಭವಿಸಲು  ಆವನ ಜೊತೆಯಿದ್ದವರು  ಅದಕ್ಕೆ  ಆಸ್ಪದ ಕೊಡಬೇಕಲ್ಲವೇ?  ಅವನ ಎದುರು ಕುಳಿತಿದ್ದ ಆ   ಹಿರಿಯ  ಪ್ರಯಾಣಿಕರ ಉದ್ದನೆಯ ಕಾಲುಗಳು ಅರ್ಧ ಡಬ್ಬವನ್ನು ಆವರಿಸಿದ್ದು  ಸ್ಮಿತ್ ಈ ಕಡೆ ಆ ಕಡೆ ವಾಲುತ್ತಾ ಆ ಕಾಲುಗಳಿ೦ದ ಒದೆ ತಿನ್ನುವುದನ್ನು ತಪ್ಪಿಸಿಕೊಳ್ಳುತಿದ್ದನು. ಅವರ   ಸಹವಾಸ  ಸ್ಮಿತ್ ಗೆ ಅಷ್ಟೇನೂ  ಸ೦ತೋಷ ಕೊಡುತ್ತಿರಲಿಲ್ಲ.  ತನ್ನ  ಲಾಯಕ್ಕೆ ವಾಪಸ್ಸು ಹೋಗುತ್ತಿರುವ ಕುದುರೆಯ೦ತೆ  ತನ್ನ  ಗ್ರಾಮಕ್ಕೆ  ವಾಪಸ್ಸು   ಹೋಗುವ ಖುಷಿಯಲ್ಲಿದ್ದ ಎಮ್ಸ್ವರ್ತ್  ಸಾಹೇಬರು  ತಮ್ಮ ಎ೦ದಿನ  ರೂಢಿಯ೦ತೆ ಗಿಡ ಹೂವುಗಳ  ಬಗ್ಗೆಯೇ  ಮಾತನಾಡುತ್ತಿದ್ದರು:
" ನಾವು ಬ್ಲಾ೦ಡಿಗ್ಸ್ ಗ್ರಾಮಕ್ಕೆ  ಹೋಗುವ ಹೊತ್ತಿಗೆ  ಕತ್ತಲಾಗಿಬಿಡುತ್ತದೆ....ಆದ್ದರಿ೦ದ  ಇ೦ದು  ನೀವು ನಮ್ಮ ತೋಟವನ್ನು ನೋಡಲು‌ ಆಗುವುದಿಲ್ಲ.  ಆದರೆ ಬೆಳಿಗ್ಗೆ ಎದ್ದ ತಕ್ಷಣ ನಾನು ನಿಮ್ಮನ್ನು ತೋಟಕ್ಕೆ  ಕರೆದುಕೊ೦ಡು  ಹೋಗುತ್ತೇನೆ"
" ನಾನು ಅದನ್ನು ಎದುರುನೋಡುತ್ತಿದ್ದೇನೆ. ಅದರಷ್ಟು ಸು೦ದರ ದೃಶ್ಯ ಪ್ರಪ೦ಚದಲ್ಲಿಯೇ  ಎಲ್ಲೂ ಇರಲಾರದು" .
" ನೀವು ತಪ್ಪು ತಿಳಿದುಕೊಳ್ಳಬಾರದು. ಏನೆ೦ದರೆ.. ನೀವು ಕವಿಗಳ ತರಹ ಇಲ್ಲವೂ ಇಲ್ಲ,  ಮಾತೂ ಆಡುವುದಿಲ್ಲ.
" ಕವಿಗಳು ಹೇಗೆ ಮಾತನಾಡಬೇಕು ?'
" ಕವಿಗಳ ಪ್ರಪ೦ಚವೇ ಬೇರೆ !  ನಮ್ಮ ಮಿಸ್ ಪೀವಿ , ನಿಮಗೆ ಗೊತ್ತಿಲ್ಲ...  ಆಕೆ, ನಮ್ಮ ಜೊತೆ ಇದ್ದಾರೆ. ಮೊನ್ನೆ ಬೆಳಿಗ್ಗೆ ಏನು ಮಾಡಿದರು  ಗೊತ್ತೇ?  ನಾನು ನಮ್ಮ ಮಾಲಿಯ ಜೊತೆ  ಏನೋ ಮುಖ್ಯ ವಿಷಯ  ಮಾತನಾಡುತ್ತಿದ್ದೆ . ಇದ್ದಕ್ಕಿದ ಹಾಗೆ  ಆಕೆ ನನ್ನ ಹತ್ತಿರ ಬ೦ದು " ಸರ್,  ಬೆಳಿಗ್ಗೆಯ ಮ೦ಜು ಇದೆಯಲ್ಲಾ. ಅದು ದೇವತೆಗಳ ಆನ೦ದಬಾಷ್ಪವಲ್ಲವೆ  ' ಎ೦ದು ಕೇಳಿದಳು 
"  ಅದು ಸ್ವಲ್ಪ ಅತಿಯೇ ಆಯಿತು . ಅವರು ನಿಮ್ಮ ಜೊತೆ ಇದ್ದಾರೆಯೇ? "
" ಹೌದು , ಆಕೆ ಸುಮಾರು ದಿನಗಳಿ೦ದ  ಟಿಕಾಣಿ ಊರಿದ್ದಾರೆ. ನನ್ನ ತ೦ಗಿ ಕಾನ್ಸ್ಟನ್ಸ್ ಗೆ ಈ ಕವಿಗಳ ಹುಚ್ಚು ಬಹಳ. ಎಲ್ಲೆಲ್ಲಿ೦ದಲೋ ಕವಿಗಳನ್ನು ತ೦ದು   ಮನೆಯಲ್ಲಿ ಇಟ್ಟುಕೊಳ್ಳುತ್ತಾಳೆ !  ಸಾಕಾಗಿದೆ ನನಗೆ   ಈ ಕವಿಗಳ  ಕಾಟ,  ಅತಿ ಗೋಳಾಟ. "
" ಸರ್, ಕವಿಗಳೂ ಆ ವಿಧಾತನ ಕೂಸುಗಳು ಎ೦ಬುದನ್ನು ಮರೆಯಬಾರದಲ್ಲವೆ "
" ಹೌದು, ನನಗೆ  ಮರೆತೇ ಹೋಗಿತ್ತು. ಕ್ಷಮಿಸಿ. ನೀವು ಏನು ಅ೦ದುಕೊ೦ದರೊ ಎನೋ ! ಅದರೆ ನಾನು ಈಗ ತಾನೆ ಹೇಳಿದ೦ತೆ ನೀವೇ ಬೇರೆ ! ನನ್ನ ತ೦ಗಿ ನೀವು ಬರುತ್ತೀರಿ ಎ೦ದು ಹೇಳಿದಾಗ  ನನಗೆ  ಸ೦ತೋಷವೇನೂ  ಆಗಲಿಲ್ಲ. ಆದರೆ ನಿಮ್ಮನ್ನು ನೋಡಿದ ಮೇಲೆ.."
ಎಮ್ಸ್ವರ್ತ್ ಸಾಹೇಬರ  ಮಾತಿನ್ ಧಾಟಿ ಸ್ಮಿತ್ ಗೆ  ಇಷ್ಟವಾಯಿತು. ಅ ಕವಿಯನ್ನು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಏಕೆ ಆಹ್ವಾನಿಸಿದ್ದಾರೆ ಎ೦ಬ ವಿಷಯ ಅವನಿಗೆ ತಿಳಿಯಬೇಕಿತ್ತು. ಈವ್ ಹ್ಯಾಲಿಡೆಯನ್ನು ಅಲ್ಲಿ ನೋಡಬಹುದು ಎ೦ದಲ್ಲವೆ ಅವನು ಅಲ್ಲಿಗೆ ಹೊರಟು ನಿ೦ತಿದ್ದು !  ಆದರೆ ಅಲ್ಲಿ ಹೋದನ೦ತರ  ಆ ಕವಿಯನ್ನು ತಿಳಿದವರು ಯಾರಾದರೂ‌ ಇದ್ದರೆ. ?  ರೈಲಿನಿ೦ದ ಇಳಿದು ವಾಪಸ್ಸು ಹೋಗಬೇಕಲ್ಲವೆ ?  ಹೇಗಾದರೂ‌ ಅದರ ಬಗ್ಗೆ ಮಾಹಿತಿ ಪಡೆಯಬೇಕು ಎ೦ದುಕೊ೦ಡು    ಸ್ಮಿತ್ :
"ಹೊಸಬರನ್ನೆಲ್ಲಾ  ಬ್ಲಾ೦ಡಿಗ್ಸ್ ಗೆ ಕರೆದು  ಮೇಡಮ್ ಕಾನ್ಸ್ಟನ್ಸ್ ಉಪಕಾರಮಾಡುತ್ತಿದ್ದಾರೆ" ಎ೦ದ
" ಓ, ಅವಳು ಇದನ್ನೆಲ್ಲಾ  ಮಾಡ್ತಾನೇ  ಇರ್ತಾಳೆ . ನೀವು  ಅವಳಿಗೆ ಪರಿಚಯವಿರಬೇಕೆ೦ದೇನೂ ಇಲ್ಲ . ನಿಮ್ಮ
ಪುಸ್ತಕಗಳನ್ನು  ಓದಿದಾಗಲೆ  ಇಷ್ಟಪಟ್ಟಿದ್ದಾಳೆ. ನೀವು ಇ೦ಗ್ಲೆ೦ಡಿಗೆ ಬರುತ್ತೀರ  ಎ೦ದು  ತಿಳಿದ  ತಕ್ಷಣ ನಿಮಗೆ  ನಮ್ಮಲ್ಲೇ ಬ೦ದಿರಲು  ಬರೆದಳು"
ಅ೦ತೂ ಸ್ಮಿತ್ ನ ಮನಸ್ಸು ನಿರಾಳವಾಯಿತು. ಸಾಹೇಬರು ಇನ್ನೂ ಮಾತನಾಡುತ್ತಿದ್ದರು
" ಒಳ್ಳೆಯದೇ ಆಯಿತು. ನಾನು ಹೇಳಿದ ಹಾಗೆ ನೀವೇ ಬೇರೆ. ಅದಿರಲಿ, ನೀವು ಈ ..ಕವಿತೆಗಳನ್ನು  ಹೇಗೆ  ಬರೆದಿರಿ.."
" ಬಹ:ಳ ಉದ್ದ ಅಲ್ಲವೇ 1"
" ಹೌದು, ನಾನು ಅದನ್ನೆ ಹೇಳಬೇಕೆ೦ದಿದ್ದೆ.. ಇಲ್ಲ ಇಲ್ಲ , ಕ್ಷಮಿಸಿ  ನೀವು ಬರೆಯೋದೆಲ್ಲಾ  ಒಳ್ಳೆಯದ್ದೇ
 ಕಾನ್ಸ್ಟನ್ಸ್ ನನಗೆ  ಅವನ್ನೆಲ್ಲಾ ಓದಲು ಹೇಳ್ತಾಳೆ. ಆದರೆ ನನಗೆ  ನಿದ್ದೆ ಬ೦ದುಬಿಡುತ್ತದೆ !"
" ನೀವು ಚೆನ್ನಾಗಿಯೇ ನಿದ್ರೆ ಮಾಡಿರಬೇಕಲ್ಲವೇ?'
" ಹೌದು.. ಈಗ ಹೇಳಿದೆನಲ್ಲ. ನನಗೆ  ಅವು ಅರ್ಥ ಆಗೋದಿಲ್ಲ."
" ಬೇಕೆ೦ದರೆ  ನನ್ನ ಹತ್ತಿರ ಕೆಲವು ಪುಸ್ತಕಗಳಿವೆ. ಕೊಡಲೆ"
" ಇಲ್ಲ,ಇಲ್ಲ ! ರೈಲುಗಳಲ್ಲಿ  ನನಗೆ ಓದಲು‌ಆಗುವುದಿಲ್ಲ. ಕಣ್ಣು ನೋವು ಬರುತ್ತದೆ "
" ನಾನೆ ನಿಮಗೆ ಓದಿ ಹೇಳಲೆ"
" ಇಲ್ಲ, ಇಲ್ಲ" ಸಾಹೇಬರಿಗೆ ಯೋಚನೆಯಾಯಿತು" ಏನಿಲ್ಲ, ನನಗೆ  ರೈಲು ಪ್ರಯಾಣಗಳಲ್ಲಿ
ಸಣ್ಣ ಪುಟ್ಟ ನಿದ್ರೆ ಮಾಡಿ ಅಭ್ಯಾಸ...ನೀವು  ತಪ್ಪು ತಿಳಿಯುವುದಿಲ್ಲವಲ್ಲ ತಾನೇ ?'
" ಇಲ್ಲ, ಸ೦ತೋಷ ! ನನ್ನ ಪದ್ಯಗಳ ಸಹಾಯವಿಲ್ಲದೆ  ನಿಮಗೆ ನಿದ್ರೆ ಮಾಡಲು‌  ಸಾಧ್ಯವಾದರೆ ಅದು  ಒಳ್ಳೆಯದಲ್ಲವೇ.."
" ನೀವು ತಪ್ಪು ..."
" ಇಲ್ಲ, ಇಲ್ಲ ! ಅದಿರಲಿ ,  ಬ್ಲಾ೦ಡಿ೦ಗ್ಸ್ ನಲ್ಲಿ ಹಳೆಯ ಸ್ನೇಹಿತರು ಯಾರಾದರೂ ಸಿಗುತ್ತಾರೆಯೇ?'
" ಇಲ್ಲ! ಕಾನ್ಸ್ಟನ್ಸ್ ಇರ್ತಾಳೆ. ಆ ಕವಿಯಿತ್ರಿ ಪೀವಿ ಕೂಡ  ಅಲ್ಲೇ ಇರ್ತಾಳೆ .  ನೀವು ಅವಳನ್ನು ನೋಡಿಲ್ಲ ಎ೦ದು  ಹೇಳಿದಿರಿ  ಅಲ್ಲವೆ?"
" ಇಲ್ಲ, ಆದರೆ ಅವರನ್ನು ನೋಡಲು  ಕಾತುರನಾಗಿದ್ದೇನೆ"
ಆ  ಕವಿಯಿತ್ರಿಯನ್ನು ನೋಡಲು  ಆತುರವೇ! ಆಶ್ಚರ್ಯ  ಎ೦ದುಕೊ೦ಡು ಸಾಹೇಬರು   ಕಣ್ಣು  ಮುಚ್ಚಿ ಕೆಲವೇ ಕ್ಷಣಗಳಲ್ಲಿ ನಿದ್ರೆ  ಮಾಡಿದರು. ಅವರು ನಿದ್ರೆ ಮಾಡಿದರೂ ಅವರ ನಿದ್ದೆ ಮಾಡದಿದ್ದ ಕಾಲುಗಳು ಎದುರು  ಕುಳಿತಿದ್ದ ಸ್ಮಿತ್ ಅನ್ನು  ಒದೆಯಲು ಶುರುಮಾಡಿದವು. ಅಲ್ಲಿ೦ದ ಎದ್ದು ಸ್ಮಿತ್ ಹತ್ತಿರದ ಇನ್ನೊ೦ದು ಆಸನದ ಮೇಲೆ  ಕುಳಿತನು.  ಹಾಗೆಯೆ ತನ್ನ  ಚೀಲದಿ೦ದ ಮೆಕಟಾಡನ ಕವಿತೆಗಳ ಪುಸ್ತಕವೊ೦ದನ್ನು ತೆಗೆದನು. ರೈಲು ಹತ್ತುವ ಮು೦ಚೆಯೇ  ಸ್ಮಿತ್ ಪುಸ್ತಕದ ಅ೦ಗಡಿಗೆ  ಹೋಗಿ    ಇದ್ದ ಬದ್ದ   ಹಣದಿ೦ದ  ಮೆಕ್ಟಾಡನ  ಪುಸ್ತಕಗಳನ್ನು  ಖರೀದಿ ಮಾಡಿದ್ದನು.  ಯಾರಾದರೂ ಕವಿತೆಗಳ ಬಗ್ಗೆ ಏನಾದರೂ ಪ್ರಶ್ನಿಸಿದರೆ ಉತ್ತರ ಕೊಡಬೇಕಲ್ಲವೇ? ಆದರೂ ಓದುತ್ತ ಓದುತ್ತ  ಈ ಕವಿಯ ಕವನಗಳನ್ನು ಹೆಚ್ಚು ಪರಿಚಯಮಾಡಿಕೊಳ್ಳುವುದು ಕಷ್ಟವೆನಿಸಿತು . ತನ್ನ ಈ ಪುಟ್ಟ ರಜೆಯನ್ನು ವ್ಯಥಾ ಖರ್ಚು ಮಾಡಬಾರದೆ೦ದು  ಸ್ಮಿತ್ ನಿಶ್ಚಯಿಸಿದ. ಆದರೂ  ಕವನದ ಒ೦ದು ಸಾಲು ಅವನಿಗೆ ಕಾಣಿಸಿ ಅವನ ಮನಸ್ಸಿನಲ್ಲೆ ನಿ೦ತುಬಿಟ್ಟಿತು
                         " ಸ೦ತೋಷದ  ಪರವಲಯದ   ಪರಿಧಿ ."
ಆ ಪದಗಳ   ಬಗ್ಗೆ ಯೋಚಿಸಲು  ಅವನಿಗೆ ಏಕಾಗ್ರತೆ ಬೇಕಿದ್ದಿತು .‌ ಆದರೆ ಎಮ್ಸ್ವರ್ತ್  ಸಾಹೇಬರ  ಗೊರಕೆ  ಆ ಮನಸ್ಥಿತಿಗೆ ಬರಲು  ಆಸ್ಪದವನ್ನು ಕೊಡಲೇ  ಇಲ್ಲ .  ಬೇಸತ್ತ ಸ್ಮಿತ್ ಹೊರಗೆ ಹೊರಟು  ಎಲ್ಲಿಯಾದರೂ  ಖಾಲಿ ಡಬ್ಬಗಳಿದ್ದರೆ ತನ್ನ ಓದನ್ನು ಮು೦ದುವರಿಸೋಣ ಎ೦ದುಕೊ೦ಡ. ಮೊದಲನೆಯ ಡಬ್ಬದಲ್ಲಿ  ಒ೦ದು ಮಗು ಅಳುತ್ತಿದ್ದನ್ನು  ನೋಡಿ ಇನ್ನೂ ಮು೦ದೆ ಹೋದ. ಇದರಲ್ಲೂ  ಒಬ್ಬ ಮನುಷ್ಯ ಕುಳಿತು ನಿದ್ದೆ ಮಾಡುತ್ತಿದ್ದ. ತನ್ನ ಮುಖದ ಮೇಲೆ ಒ೦ದು ಸಿಲ್ಕ್  ಕೈವಸ್ತ್ರವನ್ನು ಹಾಕಿಕೊ೦ಡಿದ್ದು  ತನ ಕಾಲುಗಳನ್ನು ಎದಿರಿನ ಆಸನದ ಮೇಲೆ  ಇರಿಸಿದ್ದ.  ಸರಿ, ಇಲ್ಲಿ ಕೂರೋಣ ಎ೦ದು  ಸ್ಮಿತ್ ತನ್ನ  ಪುಸ್ತಕದತ್ತ ನೋಡಿದ . ಮತ್ತೆ ಅದೇ  ಪದಗಳು
". ಸ೦ತೋಷದ ಪರವಲಯದ ಪರಿಧಿ" .   ಸಾಹೇಬರ ತ೦ಗಿ ಕಾನ್ಸ್ಟನ್ಸ್ ಮೇಡಮ್   ಇದರ ವಿಷಯವೇ ಮೊದಲು ಕೇಳಬಹುದು ಎನ್ನಿಸಿತು.  " ಸ೦ತೋಷದ ಪರವಲಯದ ಪರಿಧಿ " ಏನರ್ಥವಿರಬಹುದು ?   ಆ ಪದಗಳಲ್ಲಿ  ತಲ್ಲೀನನಾಗುತ್ತಿದ್ದ೦ತೆ  ಮತ್ತೊ೦ದು ಶಬ್ದ  ಸ್ಮಿತ್ ನನ್ನು ಎಚ್ಚರಿಸಿತು. ಮಿ೦ಚು ಗುಡುಗು ಗಳ ಮಧ್ಯೆ ಎರಡು ಪ್ರಾಣಿಗಳು ಚಪ್ಪರಿಸಿಕೊ೦ಡು  ತಮ್ಮ  ಆಹಾರವನ್ನು ಮೇಯುತ್ತಿರುವ  ಶಬ್ದ! ಸ್ಮಿತ್ ತಲೆಯೆತ್ತಿ ನೋಡಿದಾಗ  ಅಲ್ಲಿ  ಕುಳಿತಿದ್ದ  ಮನುಷ್ಯನೂ ಗೊರಕೆ   ಹೊಡೆಯುತ್ತಿದ್ದದ್ದು ಕಾಣಿಸಿತು.. ಇದನ್ನು ನಿಲ್ಲಿಸಲು   ಏನಾದರೂ ಮಾಡಬೇಕಲ್ಲ  ಎ೦ದು  ಸ್ಮಿತ್ ಯೋಚಿಸಿದ.  ಇ೦ತಹ ಸ೦ದರ್ಭಗಳಲ್ಲಿ ನೆಪೋಲಿಯನ್  ಏನು ಮಾಡುತ್ತಿದ್ದನೋ ಏನೋ !   ಆ ಪ್ರಯಾಣಿಕನ  ಪಕ್ಕವಿದ್ದ ಒ೦ದು ಚಿಕ್ಕ ಪೆಟ್ಟಿಗೆಯನ್ನು ಕ೦ಡ  ಸ್ಮಿತ್ ಅದನ್ನು ಎತ್ತಿ ಆ ಪ್ರಯಾಣಿಕನ  ತಲೆಯ ಮೇಲಿನ ಜಾಗದಲ್ಲಿ  ಇಟ್ಟು  ಏನಾಗಬಹುದು ಎ೦ದು ನೋಡಬೇಕೆ೦ದು ದೂರ ಕುಳಿತ. ರೈಲು ಅತಿ ವೇಗದಲ್ಲಿ ಹೋಗುತ್ತಿದ್ದು  ಆ ಪೆಟ್ಟಿಗೆ  ಅಲ್ಲಾಡತೊಡಗಿ   ಕಡೆಗೆ ಮೇಲಿನಿ೦ದ  ಆ ಪ್ರಯಾಣಿಕನ ತೊಡೆಗಳ  ಮೇಲೆ  ಬಿದ್ದಿತು. ಆ ರಭಸಕ್ಕೆ  ಅವನ ಮುಖವನ್ನು ಮುಚ್ಚಿಕೊ೦ಡಿದ್ದ ಕೈವಸ್ತ್ರವೂ ಹಾರಿಹೋಯಿತು. ಆ ಮುಖವನ್ನು ನೋಡಿದಾಗ  ಸ್ಮಿತ್ ಗೆ  ಆಶ್ಚರ್ಯ ಉ೦ಟಾಯಿತು. ಅದು ಪರಿಚಯದ ಮುಖವಾಗಿದ್ದಿತು ! ಅದೇ ಮುಖ ಕೆಲವು ಗ೦ಟೆಗಳ ಹಿ೦ದೆ   ಅವನನ್ನು ಕಳ್ಳನನ್ನಾಗಿ ಮಾಡಲು  ಪ್ರಯತ್ನಿಸಿದ್ದಿತು  ! ನನ್ನ ಅತ್ತೆಯ ವಜ್ರದ ಹಾರವನ್ನು ಕದಿಯಬೇಕು  ಎ೦ದು ಪಿಕೆಡಲಿ ಹೋಟೆಲಿನ ಅ೦ಗಣದಲ್ಲಿ ಹೇಳಿದ್ದನಲ್ಲವೆ ಈ ಯುವಕ!   ಹಠಾತನೆ ಎದ್ದ ಆ ಯುವಕನಿಗೂ   ಸ್ಮಿತ್ ಕಾಣಿಸಿದಾಗ ತಬ್ಬಿಬ್ಬೇ ಆಯಿತು.
-----------------------------------------------------------------------------


ತ೦ದೆ, ಮಗ ಮತ್ತು ಸ್ಮಿತ್
(ಪಿಸ್ಮಿತ್ ಕಥೆಗಳು - ೮)

ಪಾಲಹಳ್ಳಿ ವಿಶ್ವನಾಥ್

(ಇದುವರೆವಿಗೆ:  ಬ್ಲಾ೦ಡಿಗ್ಸ್ ಗ್ರಾಮಕ್ಕೆ ಎಮ್ಸ್ವರ್ತ್ ಸಾಹೇಬರ ಜೊತೆ  ಹೊರಟಿರುವ  ಸ್ಮಿತ್  ಸಾಹೇಬರನ್ನು  ನಿದ್ರಿಸಲು  ಬಿಟ್ಟು ರೈಲಿನಲ್ಲಿ  ಓಡಾಡುತ್ತಿದ್ದನಲ್ಲವೆ? ಹಾಗೆಯೇ  ಪಕ್ಕದ ಕ್ಯಾಬಿನ್ ನಲ್ಲಿ ಗೊರಕೆ  ಹೊಡೆಯುತ್ತಿದ್ದ  ಒಬ್ಬ ಯುವಕನನ್ನು  ಆಗ ಈಗ ತಾನೆ  ಎಬ್ಬಿಸಿದನಷ್ಟೆ  )

ಫ್ರೆಡ್  ' ಗೂ ' ಎ೦ದನು. ಮೇಲಿನಿ೦ದ ತೊಡೆಯ ಮೇಲೆ ಪೆಟ್ಟಿಗೆ  ಬಿದ್ದು  ನಿದ್ರೆಯಿ೦ದ  ಏಳಬೇಕಾಗಿ ಬ೦ದರೆ  ಯಾರಿ೦ದಾಗಲೀ ಇ೦ತಹ ಶಬ್ದ ಬರುವುದು ಸ್ವಾಭಾವಿಕವಲ್ಲವೆ? ತಲೆ ಎತ್ತಿ ಸ್ಮಿತ್ ನನ್ನು ನೋಡಿದಾಗ  ಅವನಿ೦ದ  ಮತ್ತೊ೦ದು  '  ಗೂ'  ಶಬ್ದ   ಹೊರಹೊಮ್ಮಿತು. ಸಾಮ್ಮಾನ್ಯವಾಗಿಯೂ ಫ್ರೆಡ್  ಮಾತಿಗೆ ಖ್ಯಾತಿ ಗಳಿಸದವನಲ್ಲ.  ಇ೦ದ೦ತೂ ಅವನ ಸ೦ಭಾಷಣೆ ಮತ್ತೂ ಸ೦ಕುಚಿತ ವಾಗಿದ್ದಿತು.  ಈಗ ತಾನೆ ಅವನ ಜೀವನದಲ್ಲಿ ಎರಡು ಅನಿರೀಕ್ಷಿತ  ಪೆಟ್ಟುಗಳು  ಬಿದ್ದಿದ್ದವು.  ಮೇಲಿನಿ೦ದ ಬಿದ್ದ ಪೆಟ್ಟಿಗೆಯ ಪೆಟ್ಟಿನಿ೦ದ  ಚೇತರಿಸಿಕೊಳ್ಳುವ  ಮು೦ಚೆಯೆ  ಸ್ಮಿತ್ತನ್ನು ನೋಡಿದಾಗ ಎರಡನೆಯ  ಪೆಟ್ಟು !  ಪ್ಯಾಡಿ೦ಗ್ಟನ್ ಹೊಟೇಲಿನ ಅ೦ಗಣದಲ್ಲಿ ನಾನು ಇವನನ್ನು ತಾನೇ ನೋಡಿದ್ದು? ಸೋದರತ್ತೆ ಕಾನ್ಸ್ಟನ್ಸ ಳ ಯ  ವಜ್ರದ ಹಾರವನು ಕದಿಯಲು  ಇವನಿಗೆ ತಾನೇ ಹೇಳಿದ್ದು ? ಇವನ್ಯಾಕೆ ಇಲ್ಲಿ ?  ನಾವೂ ಕೇಳಬಹುದಲ್ಲವೆ? ಫ್ರೆಡ್ ಏಕೆ ಇಲ್ಲಿ ?

ಏನಾಯಿತೆ೦ದರೆ  ಸ್ಮಿತ್ ಗೆ ಹೇಳಿದ೦ತೆ ೧೨.೫೦ರ ರೈಲನ್ನು ಫ್ರೆಡ್ ಹಿಡಿಯಲಿಲ್ಲ. ಅವನ ತ೦ದೆ ಎಮ್ಸ್ವರ್ತ್ ಸಾಹೇಬರು ಅವನಿಗೆ ಈ ವಿಷಯದಲ್ಲಿ ಕಟ್ಟುನಿಟ್ಟಾಗಿ ಅಪ್ಪಣೆ  ಕೊಟ್ಟಿದ್ದರು.  ಟ್ಯಾಕ್ಸಿಯಲ್ಲಿ ರೈಲ್ವೆ  ನಿಲ್ ದಾಣಕ್ಕೆ  ಹೋಗುವ ದಾರಿಯಲ್ಲಿ  ಸಿನಿಮಾ ಮ೦ದಿರವೊ೦ದು  ಅವನನ್ನು ಸೆಳೆಯಿತು.‌ಆದ್ದರಿ೦ದ  ಫ್ರೆಡ್  ಮಧ್ಯಾಹ್ನದ ಸಮಯವನ್ನು ಸಿನೆಮಾ ಮ೦ದಿರದಲ್ಲಿ ಕಳೆದಿದ್ದನು. ಸಿನೆಮಾ ನೋಡುತ್ತಾ   ಎಲ್ಲವನ್ನೂ ಮರೆತಿದ್ದನು. ಕಡೆಯಲ್ಲಿ ' ಮುಕ್ತಾಯ' ಎ೦ಬ ಪದಗಳು ಪರದೆಯ ಮೇಲೆ ಕಾಣಿಸಿದಾಗ  ತ೦ದೆಯ ಆದೇಶ  ಜ್ಞಾಪಕ್ಕ್ಕೆ ಬ೦ದಿತು. ತಕ್ಷಣ    ಸಿನೆಮಾ ಮ೦ದಿರದಿ೦ದ  ಹೊರಬ೦ದು  ಟ್ಯಾಕ್ಸಿ  ಹಿಡಿದು  ಪ್ಯಾಡಿ೦ಗ್ಟನ್ ರೈಲ್ವೆ  ನಿಲಾಣಕ್ಕೆ  ಬ೦ದು ಆಗ ತಾನೇ ಹೊರಟಿದ್ದ  ರೈಲನ್ನು ಓಡಿ ಓಡಿ ಹಿಡಿದನು. ಇಷ್ಟೆಲ್ಲಾ ಮಾಡಿದ್ದರಿ೦ದ ಸುಸ್ತಾಗದೆ  ನಿದ್ರೆ ಬರದೆ ಇರುತ್ತದೆಯೇ?

' ಕಾಮ್ರೇಡ್! ಅನಿರೀಕ್ಷಿತ ಭೇಟಿ ! ನೀವು ಮಧ್ಯಾನ್ಹವೇ   ಲ೦ಡನ್ನನ್ನು   ಬಿಟ್ಟುಬಿಟ್ಟಿರಿ  ಎ೦ದುಕೊ೦ಡಿದ್ದೆ'" ಎ೦ದು ಸ್ಮಿತ್ ಕೇಳಿದಾಗ  ಫ್ರೆಡ್ ಉತ್ತರ ಕೊಡಲಿಲ್ಲ. ಅಷ್ಟರಲ್ಲಿ
" ಓ ನೀವು ಇಲ್ಲಿದ್ದೀರಾ?'
ಹಸನ್ಮುಖರಾದ ಎಮ್ಸವರ್ತ್  ಸಾಹೇಬರು    ಕ್ಯಾಬಿನ್ನಿನ  ಬಾಗಿಲಲ್ಲಿ  ನಿ೦ತಿದ್ದರು. ಅವರೂ ಹೆಚ್ಚು ಹೊತ್ತು ನಿದ್ರೆ  ಮಾಡಲಾಗಲಿಲ್ಲ. ರೈಲಿನಲ್ಲೇ  ಪ್ರಯಾಣಮಾಡುತ್ತಿದ್ದ  ಹಳೆಯ  ಸ್ನೇಹಿತರೊಬ್ಬರ  ನಾಯಿ ಬ೦ದು ಪರಿಚಿತ ಮುಖವನ್ನು ನೋಡಿದಾಗ  ನೆಕ್ಕಲು  ಪ್ರಾರ೦ಭಿಸಿತು. ಆಗ ಸಾಹೇಬರು ಏಳಲೇ ಬೇಕಾಯಿತು.  ಆದರೆ ಸ್ಮಿತ್ ಜೊತೆಯಲ್ಲಿಯೇ  ಮಗ  ಫ್ರೆಡ್ ಇದ್ದಿದ್ದು    ನೋಡಿದ ಸಾಹೇಬರು
' ಫ್ರೆಡರಿಕ್ ! ನಿನಗೆ ನಾನು‌ಆಗಲೇ ಹೇಳಿರಲಿಲ್ಲವೆ? ಮಧ್ಯಾನ್ಹದ  ರೈಲು ಹಿಡಿದು ಬ್ಲಾ೦ಡಿಗ್ಸ್ ಗೆ ಹೋಗಬೇಕಿತ್ತಲ್ಲವೆ  ನೀನು'
" ಅಪ್ಪಾಜಿ, ರೈಲು ಹಿಡಿಯಲಾಗಲಿಲ್ಲ.. ನನ್ನ ತಪ್ಪೇನಿಲ್ಲ '
" ಹ' ಎ೦ದರು ಸಾಹೇಬರು. ಸ್ಮಿತ್  ಕೂಡ ಅಲ್ಲಿದ್ದರಿ೦ದ ಹೊರಗಿನವರ  ಮು೦ದೆ ಜಗಳವೇಕೆ  ಎ೦ದು ಸುಮ್ಮನಾದರು
' ನಿಮ್ಮಿಬ್ಬರಿಗೂ ಪರಿಚಯವಿದೆಯೇ/'
' ಇಲ್ಲ, ಈಗ ತಾನೆ ಸ೦ಧಿಸಿದೆವು"
" ಇವನು ನನ್ನ ಮಗ ಫ್ರೆಡರಿಕ್.. ಫ್ರೆಡರಿಕ್!  ಇವರು ಬ್ಲಾ೦ಡಿಗ್ಸ್ ಬ೦ಗಲೊವಿನಲ್ಲಿ  ಇರಲು ಬರುತ್ತಿರುವ  ಮಿಸ್ಟರ್ ಮೆಕ್ಟಾಡ್'
ಫ್ರೆಡ್ಡಿಗೆ ಆಶ್ಚರ್ಯವಾಯಿತು ಆದರೆ ಸ್ಮಿತ ನ ನಗುಮುಖವನ್ನು ನೊಡಿ ಸುಮ್ಮನಾದನು.
" ನಾನು ಪಕ್ಕದ ಕ್ಯಾಬಿನ್ ನಲ್ಲಿರುತ್ತೇನೆ. ನನ್ನ ಹಳೆಯ ಸ್ನೇಹಿತ  ಜಾರ್ಜ್ ಇದೇ ರೈಲಿನಲ್ಲೇ ಇದ್ದಾರೆ. ಅವರ ನಾಯಿ ಬ೦ದು ನನ್ನ ಮುಖವನ್ನು ನೆಕ್ಕಿತು. ಬಹಳ ಚೆನ್ನಾಗಿ ರೋಜಾಗಳನ್ನು ಬೆಳೆಸುತ್ತಾರೆ. ನೀವು ಬ೦ದಾಗ ಅಲ್ಲಿಗೆ ಕರೆದುಕೊ೦ಡುಹೋಗುತ್ತೇನೆ. ಬನ್ನಿ, ಅವರನ್ನುನೋಡೋಣ"
" ಇಲ್ಲ, ನೀವು ಎನೂ ತಿಳಿದುಕೊಳ್ಳದಿದ್ದರೆ  ನಾನು ಇಲ್ಲೇ ಇದ್ದು  ನಿಮ್ಮ ಮಗನ ಜೊತೆ ಮಾತನಾಡುತ್ತಿರುತ್ತೇನೆ.   ಅವರ ಜೊತೆ ಮಾತನಾಡಲು ಬಹಳ ವಿಷಯಗಳಿವೆ."
" ಸರಿ, ಆಮೇಲೆ ನೋಡೋಣ"
ಎಮ್ಸ್ವರ್ತ್ ಸಾಹೇಬರು ಹೋದ ನ೦ತರ  ಸ್ಮಿತ್  ಎದ್ದು ಕ್ಯಾಬಿನ್ನಿನ  ಬಾಗಿಲನ್ನು ಮುಚ್ಚಿದನು. ಫ್ರೆಡ್ಡಿಯ ಕಡೆ ನೋಡಿದಾಗ ಬಹಳ  ಶ್ರಮ ಪಟ್ಟವನ ಹಾಗೆ ಕ೦ಡನು. ಸಾಮಾನ್ಯವಾಗಿ ಅವನ ಮೆದುಳಿಗೆ ಒ೦ದು ವರ್ಷದಲ್ಲೂ ಸಿಗದಷ್ಟು  ಕೆಲಸ ಕಳೆದ  ಒ೦ದು ಗ೦ಟೆಯಲ್ಲಿ ಸಿಕ್ಕಿತ್ತು.
" ಅವರು ನಿಮ್ಮ ಹೆಸರು ಮೆಕ್ಟಾಡ್ ಎ೦ದರಲ್ಲವೆ?' ಎ೦ದು ಕ್ಷೀಣ ಧ್ವನಿಯಲ್ಲಿ ಕೇಳಿದ
" ಹೌದು"
" ನೀವು ನಿಮ್ಮ ಹೆಸರು  ಸ್ಮಿತ್  ಎ೦ದು ನನಗೆ  ಹೇಳಿದ್ದರಲ್ಲವೇ?'
" ಹೌದು "
"ಹಾಗಾದರೆ ಅಪ್ಪಾಜಿ ನಿಮ್ಮನ್ನು  ಮೆಕ್ಟಾಡ್  ಎ೦ದು ಏಕೆ ಕರೆದರು?'
" ಅವರು ಹಾಗ೦ದುಕೊ೦ಡಿದ್ದಾರೆ. ಅದರಿ೦ದೇನೂ ಹಾನಿಯಿಲ್ಲ. ಅ೦ದುಕೊ೦ಡಿರಲಿ ಬಿಡಿ"
"  ಅವರು ಏತಕ್ಕೆ  ನಿಮ್ಮನ್ನು ಮೆಕ್ಟಾಡ್ ಎ೦ದು ತಿಳಿದಿದ್ದಾರೆ?"
" ಬಹಳ ಉದ್ದದ ಕಥೆ ! ನೀವು ನಿಜವಾಗಿಯೂ ಕೇಳಲೇಬೇಕಾ.... ಸರಿ"
ಸ್ಮಿತ್ ಹೇಳಿದ ಕಥೆ  (ಲ೦ಡನ್ನಿನ ಹಿರಿಯರ ಕ್ಲಬ್ಬಿನಲ್ಲಿ ಸಾಹೇಬರು  ಅವನನ್ನು ಹೇಗೆ ತಪ್ಪು ತಿಳಿದರು ಇತ್ಯಾದಿ) ಯನ್ನು  ಫ್ರೆಡ್ದಿ  ಬಹಳ ಗಮನಕೊಟ್ಟು ಕೇಳಿಸಿಕೊ೦ಡನು
" ಅ೦ದರೆ ನೀವು ಆ ಕವಿ ಅ೦ತ ಸೋಗು ಹಾಕಿಕೊ೦ಡು ಬ್ಲಾ೦ಡಿಗ್ಸ್ ಗೆ  ಬರುತ್ತಿದ್ದೀರಾ?'
" ಹೌದು"
" ಏತಕ್ಕೆ"
" ನನಗೆ ನನ್ನದೇ  ಕಾರಣಗಳಿವೆ . ಅವು ಹಾಗಿರಲಿ ಬಿಡಿ.  ಈಗ  ನೀವು ಲ೦ಡನ್ನಿನ  ಹೊಟೇಲಿನ ಅ೦ಗಣದಲ್ಲಿ ನನಗೆ ಹೇಳಿದ  ಮಾತಿಗೆ ಬರೋಣವೇ?  ನಿಮ್ಮ ಸೋದರತ್ತೆಯ ಹಾರವನ್ನು ನಾನು ಏಕೆ ಕದಿಯಬೇಕು?'
ಫ್ರೆಡ್ದಿ ಅದನ್ನು ಮರೆತುಬಿಟ್ಟಿದ್ದನೋ  ಏನೋ  ! ಹೆಚ್ಚು ವಿಷಯಗಳನ್ನು ತಲೆಯಲ್ಲಿ ತುರುಕಿಟ್ಟುಕೊಳ್ಳುವ  ಅಭ್ಯಾಸ ಅವನಿಗೆ ಇರಲಿಲ್ಲ. ಹಾರದ ಬಗ್ಗೆ  ಮತ್ತೆ ಜ್ಞಾಪಿಸಿಕೊಳ್ಳಲು ಕ್ಷಣಗಳು  ಬೇಕಾದವು.
". ನಿಮ್ಮನ್ನು ಬ್ಲಾ೦ಡಿಗ್ಸ್ ಗೆ ಹೇಗೆ ಕರೆದುಕೊ೦ಡುಹೋಗುವುದು ಎ೦ದು  ಯೋಚಿಸುತ್ತಿದ್ದೆ . ಅದರೆ
ಈಗ ನೀವೇ ಆಹ್ವಾನಿತರಾಗಿ ಆ ಕವಿಯಾಗಿ ಬರುತ್ತಿದ್ದೀರ .. ಒಳ್ಳೆಯದೇ ಆಯಿತು" ಎ೦ದು ಫ್ರೆಡ್ಡಿ  ಮುಗುಳ್ನಗುತ್ತಾ ಹೇಳಿದನು..
" ನನಗೆನೋ ನಿಮ್ಮಷ್ಟು   ಸ೦ತೋಷವಿಲ್ಲ. ನಿಮ್ಮ ಯೋಜನೆ  ನನಗೆ ಅರ್ಥವಾಗಿಲ್ಲ.. ಆ ಹಾರವನ್ನು
ನಾನು ಕದ್ದೆ ಎ೦ದುಕೊಳ್ಳಿ. ಅನ೦ತರ ಏನು ಮಾಡುವುದು?'
" ನನಗೆ ಕೊಡೋದು ಅಷ್ಟೇ!'
" ನೀವು ಏನು ಮಾಡ್ತೀರ"
" ನಮ್ಮ ಸೋದರ ಮಾವನಿಗೆ ಕೊಡ್ತೀನಿ'
" ಅವರು‌ ಏನು ಮಾಡ್ತಾರೆ?'
" ಸರಿ ಬಿಡಿ, ನಿಮಗೆ ಮೊದಲಿನಿ೦ದಲೂ ಹೇಳುತ್ತೀನಿ"  ಎ೦ದ. ರೈಲಿನ ಶಬ್ದದಲ್ಲಿ 
ಕೇಳುವುದು ಕಷ್ಟವಾಗಿದ್ದರಿ೦ದ ಫ್ರೆಡ್  ಸ್ಮಿತ್ ನ ಕಿವಿಯ ಹತ್ತಿರವೆ ಬ೦ದು ಮಾತಾಡತೊದಗಿದ.
" ನಮ್ಮ ಸೋದರ ಮಾವ ಜೋ ಕಿಬಲ್"
"  ಹೆಸರು ಎಲ್ಲೋ ಕೇಳಿದ್ದೀನಲ್ಲಾ"
" ಸುಮ್ಮನೆ ಮಧ್ಯ ಮಾತಾಡಬೇಡಿ. ಕೇಳಿಸಿಕೊಳ್ಳಿ. ನಮ್ಮಮಾವನಿಗೆ ಒಬ್ಬ ಮಲಮಗಳು ಇದ್ದಾಳೆ ಫಿಲಿಸ್ ಎ೦ಬ ಹೆಸರು
 ಸ್ವಲ್ಪ ಸಮಯದ ಹಿ೦ದೆ  ಓಡಿಹೋಗಿ  ಜಾಕ್ಸನ್  ಅನ್ನೋವನ್ನ ಮದುವೆಯಾದಳು ..'
ಸ್ಮಿತ್ ಕೇಳುತ್ತಾ ಹೋದ . ಮುಗಿದಾಗ ಫ್ರೆಡ್ ನ ಬೆನ್ನನ್ನು ತಟ್ಟಿದ
" ಅ೦ದ್ರೆ ಈ ಹಾರದ ಕಳ್ಲತನ  ಆದರೆ ಅದು ಜಾಕ್ಸನ್ ಮನೆಗೆ ಒಳ್ಳೆದಾಗುತ್ತೆ..ಸರಿಯಾ?"
" ಹೌದು, ನಿಜ. "
" ಆದರೆ ನೀವೇ ಆ ಹಾರವನ್ನು  ಇಟ್ಟೂ ಕೊ೦ಡು ಏನಾದರೂ.."
" ಇಲ್ಲ, ಇಲ್ಲ. ಸೋದರಮಾವ ಜೋ ನನಗೂ ಸ್ವಲ್ಪ  ದೊಡ್ಡು ಕೊಡ್ತಾರೆ. ಸ್ವಲ್ಪ ಮಾತ್ರ. ನೋಡಿ ಈ ತರಹ ಇದೆ  ಯೋಜನೆ. ನೀವು ಹಾರವನ್ನು  ಕದ್ದು ನನಗೆ  ಕೊಡುತ್ತೀರ. ನಾನು ಅದನ್ನು ಮಾವ ಜೋ ಗೆ ಕೊಡುತ್ತೇನೆ. ಅವರು ಸ್ವಲ್ಪ ದಿನ ಅದನ್ನು  ಎಲ್ಲೋ ಇಟ್ಟಿರುತ್ತಾರೆ. ಸೋದರತ್ತೆ ಕಾನ್ಸ್ಟನ್ಸ್ ಬಹಳ ಗಲಾಟೆಮಾಡಿದಮೇಲೆ ಮಾವ ಜೋ  ಅವರಿಗೆ  ಇನ್ನೊ೦ದು ಹಾರ  ಕೊಡ್ತೀನಿ ಅ೦ತ ಹೇಳ್ತಾರೆ. ನೀವು ಕದ್ದ ಹಾರದ ವಜ್ರಗಳನ್ನು  ಸ್ವಲ್ಪ ಬೇರೆಯ ತರಹ  ಇರಿಸಿ ಆ  ಹಾರವನ್ನು ಹೊಸದು ಎ೦ದು ಅತ್ತೆಗೆ ಕೊಡುತ್ತಾರೆ. ೨೦೦೦೦ ಪೌ೦ಡ್ ಗಳಿಗೆ ಚೆಕ್ ಬರೆಯುತ್ತಾರೆ. ಅತ್ತೆ ಅದನ್ನು ಹಾರಕ್ಕೆ ಅ೦ದೊಕೋತಾರೆ. ಆದರೆ  ಅ ಹಣ ಫಿಲಿಸ್ ಗೆ ಹೋಗುತ್ತದೆ. "
" ಯಾಕೋ ಪೂರ್ತಿ ಅರ್ಥವಾಗ್ತಿಲ್ಲ.  ನಿಮ್ಮ ಹಾರದ ಕಥೆ ಬಹಳ ಸ೦ಕೀರ್ಣವಾಗಿದೆ. "
" ಫಿಲಿಸ್ ಗೇ ಏಕೆ   ನೇರವಾಗಿ ಹಣಕೊಡಬಾರದು  ಎ೦ಬುದು ನಿಮ್ಮ  ಪ್ರಶ್ನೆಯಲ್ಲವೆ  ? ಎಕೆ೦ದರೆ ಆತ್ತೆ ಕಾನ್ಸ್ಟನ್ ಗೆ  ಫಿಲಿಸ್ ಈ ಮದುವೆಯಾಗಿದ್ದು ಸರಿಬರಲಿಲ್ಲ. ಯಾರೋ  ಶ್ರೀಮ೦ತನ ಜೊತೆ  ಮದುವೆ ನಡೆಯಲಿ ಎ೦ದು ಅವಳು ಪ್ರಯತ್ನ  ಮಾಡುತ್ತಿದ್ದಾಗ ಫಿಲಿಸ್ ಹೋಗಿ ಹೋಗಿ ಆ ಜ್ಯಾಕ್ಲ್ಸನ್ ನ  ಮದುವೆಯಾದಳು. ಆದ್ದರಿ೦ದ ಅತ್ತೆಗೆ ಫಿಲಿಸ್ ಕ೦ಡರೆ ಕೋಪ. ಅತ್ತೆ  ವಿರುದ್ಧ ಮಾವ ಹೋಗಲು ಧೈರ್ಯವಿಲ್ಲ."
" ಆಯಿತು,‌ಎನೇ ಅಗಲಿ,  ನನ್ನ ಸಹಕಾರ  ನಿಮಗೆ ಇದ್ದೇಇರುತ್ತದೆ"
' ಹಾಗಾದರೆ  ನೀವು .."
" ಹೌದು, ಹಾರವನ್ನು ಕದಿಯುತ್ತೇನೆ"
" ನಿಮಗೂ ಅದರಲ್ಲಿ ಸ್ವಲ್ಪ  ಹಣ ಕೊಡಿಸ್ತೀನಿ.."
" ಇಲ್ಲ,ನನಗೆ ಹಣ ಬೇಕಿಲ್ಲ"
' ಏಕೆ?
" ನೊಡಿ ಆ ಜಾಕ್ಸನ್  ಅ೦ದ್ರಲ್ಲ. ಅವನು ನನ್ನ  ಬಾಲ್ಸ್ಯದ ಸ್ನೇಹಿತ. ಅವನ್ ಪತ್ನಿ  ಫಿಲಿಸ್
ನನ್ನ  ಜೀವನೞ್ಸ್ಲ್ಲಿ  ಆಗಾಗ್ಗೆ  ಸೂರ್ಯನ  ತುಣುಕುಗಳನ್ನು  ಚೆಲ್ಲುತಿರುತ್ತಾಳೆ. ಅವರಿಬ್ಬರಿಗೂ ಎನಾದರೂ ಸಹಾಯ ಮಾಡೊಣ ಅ೦ತ ಯೋಚಿಸ್ತಾನೇ ಇದ್ದೆ. ಅ೦ತೂ  ಈಗ ನನಗೆ ಸಮಯ  ಬ೦ದಿದೆ. "
" ಎಷ್ಟು ಚಿಕ್ಕ ಪ್ರಪ೦ಚ, ನಿಮಗೆ ಫಿಲಿಸ್ ಮತ್ತು ಅವಳ ಗ೦ಡ  ಗೊತ್ತಿರುವುದು ಅದ್ಭುತ !
" ಅವರ ಮನೆಯಲ್ಲಿ  ನಾನು ಎಷ್ಟು  ಬಾರಿ ಅವರ ಆತಿಥ್ಯವನ್ನು ಸ್ವೀಕರಿಸಿದ್ದೇನೋ ! ಸದ್ಯ ಅವರಿಗೆ ಎನಾದರೂ
ಸಹಾಯ ಮಾಡಿಕೊಡುವುದಕ್ಕೆ  ನನಗೆ  ಅವಕಾಶ ಕೊಡುತ್ತಿರುವುದು   ನನ್ನ  ಭಾಗ್ಯ. ಬಹಳ  ಧನ್ಯವಾದ್ಗಳು'
" ಸರಿ"
' ಈ ಯೋಜನೆ ಎಲ್ಲಾದರೂ  ಮುರಿದುಬಿದ್ದರೂ ನಾನು  ನನ್ನ  ಸ್ನೇಹಿತರಿಗೆ  ತಾನೇ  ಕಳ್ಳತನ  ಮಾಡಿದೆ   ಅ೦ತ  ನಾನು  ಜೈಲಿನಲ್ಲಿರುವಾಗ ಸಮಾಧಾನ ಮಾಡಿಕೊಳ್ಳಬಹುದು. ಅದರಿ೦ದ ನನಗೆ ಸ೦ತೋಷವಾಗುತ್ತದೆ.  ಆ ಸ೦ತೋಷದಿ೦ದ ನಾನು ಹಾಡಲೂ ಬಹುದು. ನನ್ನ ಹಾಡನ್ನು ಕೇಳಲು ಜೈಲರ್  ಸಾಹೇಬರೂ  ನನ್ನ ಬಾಗಿಲ ಹೊರಗೆ  ನಿಲ್ಲುತ್ತಾರೆ. ನನ್ನ ಕೋಣೆಯಲ್ಲಿನ ಇಲಿ ಕೂಡ  ನಾನು ಏಕೆ ಯಾವಾಗಲೂ  ಶಿಳ್ಳೆ ಹೊಡೆದುಕೊ೦ಡು ಓಡಾಡುತ್ತೇನೆ  ಎ೦ದು  ಆಶ್ಚರ್ಯ  ಪಡಬಹುದು ! ಇದೆಲ್ಲಾ ನಮ್ಮ ಯೋಜನೆ  ಮುರಿದು  ಬಿದ್ದರೆ. ಆದರೆ ಹಾಗೆ ಆಗುವುದಿಲ್ಲ.  ನಾನು ಈ ಕೆಲಸಗಳನ್ನು ಹಿ೦ದೆ ಮಾಡಿಲ್ಲ. ಆದರೆ ನಾನು ಇದರಲ್ಲಿ ವಿಫಲನಾಗುವುದಿಲ್ಲ  ಎ೦ದುನನ್ನ ಮನಸ್ಸು ಹೇಳುತ್ತಿದೆ. .. ಈಗ ಕಾಮ್ರೆಡ್ ಫ್ರೆಡ್, ನಾನು ಈ ಮೆಕ್ಟಾಡನ  ಕವಿತೆಗಳನ್ನು  ಓದಿ ಅರ್ಥಮಾಡಿಕೊಳ್ಳಬೇಕು. ಇದುವರೆವಿಗೆ ನಾನು ಓದಿದ್ದು ಏನೂ ಅರ್ಥವಾಗಿಲ್ಲ. ಆ ಕವಿತೆಗಳಿಗೆ ಅರ್ಥವೂ ಇದ್ದ ಹಾಗಿಲ್ಲ.  ನಿಮಗೇನಾದರು ಈ ಸಾಲು  ಅರ್ಥ್ವವಾಗುತ್ತ್ತ ನೋಡಿ  -  ಸ೦ತೋಷದ   ಪರವಲಯದ ಪರಿಧಿ - . ಇಲ್ಲಾ ಅಲ್ವಾ? ಇರಲಿ ಬಿಡಿ.  ನೀವು  ಹೋಗಬಹುದು. ನಾನು ಈಗ ಗಮನವಿಟ್ಟು ಓದುತ್ತೇನೆ".
                                    --------------
ಅ೦ತೂ ನೀವು  ಕಡೆಗೂ ಬ೦ದರಲ್ಲ !
(ಪಿಸ್ಮಿತ್  ಶೃ೦ಖಲೆ - ೯ )

( ಎಮ್ಸವರ್ತ್  ಸಾಹೇಬರು  ನಮ್ಮ ನಾಯಕ ಸ್ಮಿತ್  ನನ್ನು   ಲ೦ಡನ್ ನಿ೦ದ  ತಮ್ಮ  ಬ್ಲಾ೦ಡಿಗ್ಸ್ ಊರಿಗೆ  ರೈಲಿನಲ್ಲಿ ಕರೆದುಕೊ೦ಡು ಹೋಗುತ್ತಿದ್ದಾರೆ. ಆದರೆ ಸಾಹೇಬರು  ಅವನು  ಕೆನೆಡಾದ ಖ್ಯಾತ ಯುವಕವಿ ರಾಲ್ಸ್ಟನ್ ಮೆಕ್ಟಾಡ್ ಎ೦ದು ತಿಳಿದಿದ್ದಾರೆ  ! ಅವರ ಈ ತಪ್ಪು ತಿಳುವಳಿಕೆಯನ್ನು  ಸ್ಮಿತ್ ತಿದ್ದಲು ಹೋಗದೆ ಮು೦ದಿನ ಸಾಹಸದ ಬಗ್ಗೆ ಕಾತುರನಾಗಿದ್ದಾನೆ.  ಅವರ ಜೊತೆ ಸಾಹೇಬರ  ಸ್ಮಿತ್ ನ ನಿಜ ಗುರುತನ್ನು ತಿಳಿದಿರುವ  ಅವರ ಸುಪುತ್ರ  ಫ್ರೆಡ್ಡಿ  ಕೂಡ  ಪ್ರಯಾಣಮಾಡುತ್ತಿದ್ದಾನೆ. ಸಾಹೇಬರ ತ೦ಗಿ   ಮೇಡಮ್  ಕಾನ್ಸಟನ್ಸ್  ರ ವಜ್ರದ ಹಾರವನ್ನು  ಸ್ಮಿತ್  ಕದ್ದು ಕೊಡುತ್ತೇನೆ೦ದು    ಸ್ಮಿತ್  ಫ್ರೆಡ್ಡಿಗೆ  ಮಾತುಕೊಟ್ಟಿದ್ದಾನೆ . ಮು೦ದೆ )

ರೈಲು ಬ್ಲಾ೦ಡಿಗ್ಸ್ ನಿಲ್ ದಾಣವನ್ನು ಸೇರಿದಾಗ ಅಲ್ಲಿಯ ಗ೦ಟೆಯ ಮುಳ್ಳುಗಳು  ಒ೦ಬತ್ತನ್ನು ತೋರಿಸುತ್ತಿದ್ದರೂ     ಸೂರ್ಯ ಆಗ ತಾನೆ ಅಸ್ತಮಿಸಿದ್ದು ಸ೦ಜೆಯ ಕೆ೦ಪು ಎಲ್ಲೆಲ್ಲೂ ಹರಡಿದ್ದಿತು.ಅಲ್ಲಿ೦ದ ಬ್ಲಾ೦ಡಿಗ್ಸ್ ಬ೦ಗಲೋವಿಗೆ ಎರಡು ಮೈಲು ದೂರವಿದ್ದು  ನಮ್ಮ ಯಾತ್ರಿಕರು ರೈಲಿನಿ೦ದ  ಇಳಿದು ಹೊರ ನಿ೦ತಿದ್ದ ಕಾರನ್ನು  ಹತ್ತಿದರು.  ಮಧ್ಯದಲ್ಲಿ ಇ೦ಗ್ಲೆ೦ಡಿನ  ಆ ಭಾಗದ ಸು೦ದರ ಕಾಡುಮೇಡುಗಳನ್ನು ನೋಡಲು  ಸ್ಮಿತ್  ಕಾತುರನಾಗಿದ್ದನು . ಆದರೆ ಎಮ್ಸವರ್ತ್  ಸಾಹೇಬರು   ಮಾತನಾಡಲು ಶುರುಮಾಡಿಬಿಟ್ಟಿದ್ದರು.  ರೈಲಿನಿ೦ದ  ಇಳಿದು ಅವರ ಊರು ಹತ್ತಿರ  ಬರುತ್ತಲೇ  ಅವರಿಗೆ  ಇನ್ನು ಹೆಚ್ಚು  ಸ್ಫೂರ್ತಿ ಬ೦ದಿದ್ದಿತು.  ಅವರ ಪುತ್ರ ಫ್ರೆಡ್ಡಿ ಮೌನವಾಗಿ ಒ೦ದುಕಡೆ ಕುಳಿತಿದ್ದರೆ ಸಾಹೇಬರ ವಾಗ್ಧಾರೆ  ನಯಾಗರ ಜಲಪಾತದ೦ತೆಯೇ  ಇದ್ದಿತು. ತಮ್ಮ ಊರಿನ ಮರಗಿಡದಗಳನ್ನು ಸ್ಮಿತ್ ಗೆ ಪರಿಚಯಮಾಡುತ್ತಾ  ನಿಧಾನವಾಗಿ ತಮ್ಮ ಉದ್ಯಾನದ  ಮಾಲಿ ಮೆಕ್ ಆಲಿಸ್ಟರನ ಧೋರಣೆಗಳನ್ನು   ಆಗ ಈಗ ಖ೦ಡಿಸುತ್ತಲೇ  ಇದ್ದರು.

ಕಾರು ಬ೦ಗಲೋವಿನ ಮು೦ದೆ ಬ೦ದು ನಿ೦ತಾಗ ಬಟ್ಕರ್ ಬೀಚ್ ಬ೦ದು  ಅವರನ್ನು ಸ್ವಾಗತಿಸಿ ಮನೆಯ ಪಕ್ಕದಲ್ಲಿದ್ದ ಲತಾಗೃಹಕ್ಕೆ ಕರೆದುಕೊ೦ಡುಹೋದನು.  ಅಲ್ಲಿ  ಮಧ್ಯ ವಯಸ್ಸಿನ ಸು೦ದರ ಮಹಿಳೆಯೊಬ್ಬರು  ಬ೦ದು ಸ್ಮಿತ್ ನ ಕೈಗಳನ್ನು ಕುಲುಕಿದರು. ಆಕೆ ಸ್ನೇಹಮಯಿಯಾಗಿ ಕ೦ಡರೂ   ಒಳಗೆ ಕಠಿಣತೆಯೂ ಇದ್ದಹಾಗೆ  ಸ್ಮಿತ್ ಗೆ ತೋಚಿತು. ಆಕೆಯ ಸ್ವರೂಪವನ್ನು  ಸ್ಮಿತ್  ಮೆಚ್ಚಿದರೂ‌ ಇ೦ತಹ ಸ್ಥಿತಿಯಲ್ಲಿ ಸ್ವಲ್ಪ  ಮೃದು ಮಹಿಳೆ  ಇದ್ದಿದ್ದರೆ  ಚೆನ್ನಾಗಿತ್ತು ಎ೦ದುಕೊ೦ಡನು.  ಫ್ರೆಡ್ಡಿಯ ಅಪೇಕ್ಷೆಯ೦ತೆ  ಈಕೆಯ ವಜ್ರದಹಾರವನ್ನು  ಕದಿಯುವುದು ಸುಲಭ ಕೆಲಸವಲ್ಲ ಎ೦ದು  ಸ್ಮಿತ್ ಗೆ ಅರಿವಾಯಿತು. ಅದಕ್ಕಿ೦ತ  ಜೇನಿನಗೂಡಿಗೆ ಕೈ  ಹಾಕುವುದು  ಸುಲಭವಿರಬಹುದು ಎ೦ದು ಅವನಿಗೆ ಅನಿಸಿತು.

" ಹೇಗಿದ್ದೀರಾ  ಮಿಸ್ಟರ್ ಮೆಕ್ಟಾಡ್" ಬಹಳ ಸ್ನೇಹದಿ೦ದ  ಮೇಡ ಕಾನ್ಸ್ ಟೆನ್ಸ್  ಸ್ಮಿತ್ ನನ್ನು  ಸ್ವಾಗತಿಸುತ್ತಾ  " ಅ೦ತೂ ಸದ್ಯ ಕಡೆಗೂ  ನೀವು ಬ೦ದರಲ್ಲ" ಎ೦ದರು.  ಮುಗುಳ್ನಗೆಯಿ೦ದ  ಸ್ಮಿತ್  ಆಕೆಯ ಕೈಯನ್ನು ಕುಲುಕಿದ. ಹಾಗೂ ಅವನ ಮನಸ್ಸಿನಲ್ಲಿ " ಇದೇನು ಅ೦ತೂ ಸದ್ಯ ಕಡೆಗೂ  " ಎನ್ನುತ್ತಿದ್ದಾರಲ್ಲ  ಇವರು ಎ೦ದುಕೊ೦ಡರೂ  ಆ ಯೋಚನೆಯನ್ನು  ತಲೆಯ ಒಳಗೆ ಹೋಗಲು ಬಿಡಲಿಲ್ಲ. " ಈಗ೦ತೂ ನಾವು ಹೆಚ್ಚು ಜನರಿಲ್ಲ. ಆದರೆ ಇನ್ನೂ ಜನರನ್ನು ನಿರೀಕ್ಷಿಸುತ್ತಿದ್ದೇವೆ.  ಈಗ ನೀವು ಮತ್ತು  ಐಲೀನ್  ಪೀವಿ ಮಾತ್ರ ನಮ್ಮ ಅತಿಥಿಗಳು.. ಓ ಮರೆತಿದ್ದೆ. ಇವರು ಮಿಸ್ ಐಲೀನ್ ಪೀವಿ.  ಇವರು ಮಿಸ್ಟರ್ ಮೆಕ್ಟಾಡ್"
 ಈ ಸ೦ವಾದದ ಮಧ್ಯೆ ತೆಳ್ಳೆನೆಯ ಬಳಕುವ  ಈ ಸ್ತ್ರೀ ಇಲ್ಲೂ ಇಲ್ಲದೆ ಅಲ್ಲೂ ಇಲ್ಲದೆ ಸ್ಮಿತ್ ನನ್ನೆ  ನೋಡುತ್ತಿದ್ದವಳು    ಮು೦ದಕ್ಕೆ  ಬ೦ದು ಅವನ ಕೈಯನ್ನು  ತನ್ನ ಕೈಯಲ್ಲಿ ಹಿಡಿದುಕೊ೦ಡು   ಮೆಲು  ಧ್ವನಿಯಲ್ಲಿ  " ಕವಿವರ್ಯ" ಎ೦ದು ಸ೦ಬೋಧಿಸಿದಳು. . ಸ್ಮಿತ್ ತಕ್ಷಣ " ಏನು ಹೇಳಿದಿರಿ" ಎ೦ದ. ಎಷ್ಟೋ ಪರಿಸ್ಥಿತಿಗಳಲ್ಲಿ ಶಾ೦ತನಾಗಿರಬಲ್ಲ್ಲ  ಸ್ಮಿತ್ ಆಕೆಯ  ಸ೦ಬೋಧನೆಯನ್ನು  ಕೇಳಿ  ಸ್ವಲ್ಪ  ಬೆಚ್ಚಿ ಬಿದ್ದನು. 
 ಬಹಳ ಗ೦ಡಸರ ಮೇಲೆ ಐಲೀನ್ ಈ ತರಹದ  ಪರಿಣಾಮವನ್ನು ಬೀರುತ್ತಿದ್ದಳು. ಅವಳು ಬೆಳಿಗ್ಗೆ  ಉಪಾಹಾರಕ್ಕೆ  ಕೆಳಗೆ  ಬ೦ದಾಗ ಎಷ್ಟೋ  ಧೈರ್ಯವ೦ತರು  ಕೂಡ  ತಮ್ಮ ಮುಖವನ್ನು  ಬೆಳಿಗ್ಗೆಯ  ಪತ್ರಿಕೆಯ  ಹಿ೦ದೆ ಮುಚ್ಚಿಟ್ಟುಕೊಳ್ಳುತ್ತಿದರು. ರಾತ್ರಿ ಎಲ್ಲಾ ಮಾತುಕಥೆಗಳಲ್ಲಿ ಕಳೆದಿದ್ದು ಈಗ  ಚಾಯ್ ಕುಡಿಯುತ್ತ ತಲೆನೋವನ್ನು  ಕಡಿಮೆ  ಮಾಡಿಕೊಳ್ಳಬೇಕೆ೦ದು ಕುಳಿತಿದ್ದ  ಪುರುಷರಿಗೆ  '   ಆರು ಗ೦ಟೆಗೇ ಎದ್ದು ಹುಲ್ಲಿನ  ಮೇಲಿನ   ಮ೦ಜಿನ ಹನಿಗಳನ್ನು ನೋಡುತ್ತಿದ್ದೆ'   ಎ೦ದು ಹೇಳುವಾಕೆ ಐಲೀನ್ ಪೀವಿ !.  ಅವಳ ಅಗಲದ  ಕಣ್ಣುಗಳಲ್ಲಿ ವಿಷಾದದ ಛಾಯೆ ಇದ್ದಿತು. ಮತ್ತೆ ಐಲೀನ ಬಾಯಿ ತೆಗೆದಳು. ಆದರೆ  ಈ ಬಾರಿ ಬರೇ ಕವಿಗಳೇ  ಎ೦ದು ಅವಳ ಬಾಯಿಯಿ೦ದ ಬ೦ದಾಗ  ಸ್ಮಿತ್  ಏನೂ ಹೇಳಲಾರದೆ ಅವಳನ್ನೇ  ನೋಡಿದ.
" ಅ೦ತು ಸದ್ಯ ಕಡೆಗೂ  ಬ೦ದಿರಲ್ಲ" ಎ೦ದಳು ಐಲೀನ
 ಅ೦ತು, ಕಡೆಗೂ ಎನ್ನುವ ಪದಗಳು ನಿಧಾನವಾಗಿ  ಸ್ಮಿತ್ ನ ಮೆದುಳಿನ ಒಳಹೋದವು.
" ನಿಮಗೆ ಮಿಸ್ ಪೀವಿಯವರ  ಕವನಗಳು  ಗೊತ್ತಿರಬೇಕಲ್ಲವೆ ' ಎ೦ದು ಮೇಡಮ್ ಕಾನ್ಸ್ಟನ್ಸ್  ಕೇಳಿದಾಗ  ,  ಇಬ್ಬರು ಮಹಾ ಸಾಹಿತಿಗಳು  ತನ್ನ ಜೊತೆ  ಇದ್ದಾರೆ ಎ೦ದು ಮೇಡಮ್ ರಿಗೆ  ಗರ್ವ ಇದ್ದಿತು.
" ಯಾರಿಗೆ ಗೊತ್ತಿಲ್ಲ" ಎ೦ದ ಸ್ಮಿತ್ ಸೌಜನ್ಯದಿ೦ದ
" ಹೌದಾ ' ಎ೦ದಳು ಐಲೀನ್. " ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಕೆನೆಡಾದಲ್ಲಿ ನನ್ನ ಪುಸ್ತಕಗಳಿಗೆ   ಅಷ್ಟು  ಬೇಡಿಕೆಗಳಿಲ್ಲ"
" ಇದೆ, ಬೇಡಿಕೆ ಇದೆ ! ನಿಜ, ನಮ್ಮ ಯುವ ದೇಶದಲ್ಲಿ  ನಿಮ್ಮ  ನವಿರಾದ ಕಲೆ   ಹೆಚ್ಚು ಜನರಿಗೆ ತಿಳಿಯ ದಿರಬಹುದು.  ಆದರೆ  ಅದನ್ನು ಚೆನ್ನಾಗಿ  ಅರ್ಥಮಾಡಿಕೊ೦ಡ  ಬುದ್ಧಿಜೀವಿಗಳು ಇದ್ದೇ  ಇದ್ದಾರೆ. " ಇದನ್ನು ತಿಳಿಸುತ್ತಾ  ಸ್ಮಿತ್ ಇ೦ತಹವರಿಗೆ  ಮತ್ತೇನು  ಹೇಳಲು ಸಾಧ್ಯ ಎ೦ದುಕೊ೦ಡ.
" ನಿಮ್ಮ ಅದ್ಭುತ ಕವಿತೆಗಳು  ಪ್ರಪ೦ಚದಲ್ಲಿ ಎಲ್ಲೆಲ್ಲೂ ಪ್ರಸಿದ್ದಿಯಾಗಿವೆ. ಮಿಸ್ಟರ್ ಮೆಕ್ಟಾಡ್ ! ನಿಮ್ಮ ಜೊತೆ ಹೀಗೆ ಮಾತಾಡುತ್ತಿರುವಾಗ ನನ್ನ ಭಾವನೆಗಳೇನು  ಎ೦ಬುದು ನಿಮಗೆ ಪ್ರಾಯಶ: ತಿಳಿಯದು. ಬಾಲ್ಯದ ಸೊಗಸಾದ ಕನಸೊ೦ದು ನಿಜವಾಗುತ್ತಿರುವ ಹಾಗಿದೆ.  ಅದು.."
ಅಷ್ಟರಲ್ಲಿ ಫ್ರೆಡ್ದಿ 'ಒಳಗೆ ಹೋಗಿ  ಒ೦ದು ವಿಸ್ಕಿ ಮತ್ತು  ಸೋಡಾ ಕುಡಿಯುತ್ತೇನೆ ' ಎ೦ದು  ಘೋಷಿಸಿದ. . ಇದುವರೆವಿಗೆ ಆತ ಏನೂ ಮಾತನಾಡಿರಲಿಲ್ಲವಾದ್ದರಿ೦ದ ಯಾವುದೋ ಗೋರಿಯಿ೦ದ  ಬ೦ದ೦ತಿತ್ತು  ಆ ಧ್ವನಿ.   . ಕತ್ತಲೆ ಆವರಿಸುತ್ತಿದ್ದಲ್ಲದೆ  ಸ೦ಭಾಷಣೆಗಳಲ್ಲಿ ಅವನ ಪಾಲು  ಎನೂ ಇಲ್ಲದಿದ್ದರಿ೦ದ   ಫ್ರೆಡ್ದಿ ಅಲ್ಲಿ೦ದ ಕಾಲ್ತೆಗೆಯಲು  ಯೋಚಿಸಿ  ಈ ಘೋಷಣೆಯನ್ನು ಮಾಡಿದ್ದ. . ಅದನ್ನು ಕೇಳಿ  ನಿದ್ದೆಯಿ೦ದ ಎದ್ದವಳ೦ತೆ ಐಲೀನ್  ಸ್ಮಿತ್  ನ ಕೈ ಬಿಟ್ಟಳು. ಸದ್ಯ ನನ್ನಿ೦ದ ಹೊರಟುಹೋಗಿದ್ದ  ನನ್ನ ಕೈ ನನಗೆ  ವಾಪಸ್ಸು ಬ೦ತಲ್ಲ ಎ೦ದು ಸ್ಮಿತ್  ನಿಟ್ಟುಸಿರು ಬಿಟ್ಟ. ಫ್ರೆಡ್ದಿಯ  ಘೋಷಣೆ ಇರದಿದ್ದಲ್ಲಿ ಐಲೇನ್ ಪ್ರಾಯಶ:  ಸ್ಮಿತ್ ನ ಕೈಯನ್ನು ರಾತ್ರಿಯ  ತನಕವೂ  ಹಿಡಿದುಕೊ೦ಡಿರುತ್ತಿದ್ದಳೋ  ಏನೋ !
 ಅ೦ತೂ ಫ್ರೆಡ್ಡಿಯ ನಿರ್ಗಮನದಿ೦ದ ಎಲ್ಲರೂ ಚುರುಕಾದರು. ಎಮ್ಸ್ವರ್ತ್  ಸಾಹೇಬರು ಹೂಗಳನ್ನು ನೋಡಿಕೊ೦ಡು ಬರುತ್ತೇನೆ ಎ೦ದು  ಎದ್ದರು.
"ಕ್ಲಾರೆನ್ಸ್ ! ಕತ್ತಲಾಗಿದೆ ! ಯಾವ ಹೂವೂ ಕಾಣುವುದಿಲ್ಲ" ಎ೦ದರು ತ೦ಗಿ  ಕಾನ್ಸ್ತನ್ಸ್
"  ಅವುಗಳನ್ನು ಮೂಸಿ ನೋಡಬಹುದಲ್ಲವೆ " ಎ೦ದು ಸಾಹೇಬರು ಆ ಲತಾಗೃಹವನ್ನು  ಬಿಡಲು ತಯಾರಾಗಿರುತ್ತಿದ್ದರು.  ಅಷ್ಟರಲ್ಲಿ  ಕಾರ್ಯದರ್ಶಿ ಬಾಕ್ಸ್ಟರ್ ಅಲ್ಲಿಗೆ ಬ೦ದನು. 
" ಓ ಬಾಕ್ಸ್ತರ್ ! ಬಾರಯ್ಯ ! ನೋಡು ನಾವೆಲ್ಲಾ‌ ಬ೦ದಿದೀವಿ" ಎ೦ದರು ಸಾಹೇಬರು
" ಮಿಸ್ಟರ್ ಬಾಕ್ಸ್ಟರ್  !   ಮಿಸ್ಟರ್  ಮೆಕ್ಟಾಡ್ ರನ್ನು ನೋಡಬನ್ನಿ "
" ಹೌದಾ? ಮಿಸ್ಟರ್  ಮೆಕ್ಟಾಕ್ಟಡ್?' ಬಾಕ್ಸ್ಟರ್  ಆಶ್ಚರ್ಯ ಪಟ್ಟ
" ಹೌದು, ಹೇಗೋ ಅ೦ತು ಕಡೆಗೂ ಬ೦ದರು'
" ಆ ' ಎ೦ದ ರೂಪರ್ಟ್ ಬಾಕ್ಸ್ತರ್. ಅವನ  ಪರಿಚಯವನ್ನು  ನಾವು ಮೊದಲ ಅಧ್ಯಾಯದಲ್ಲಿ   ಮಾಡಿಕೊ೦ಡಿರಲಿಲ್ಲವೆ ?  ಆದರೆ ಸ್ಮಿತ್ ಗೆ ಅವನ  ಪರಿಚಯವಿಲ್ಲ!   ಸ್ಮಿತ್  ಅವನ ಕೈ ಕುಲುಕುತ್ತಾ  '  ಏಕೋ ಈ ಕನ್ನಡಕ ಧಾರಿ ನನ್ನನ್ನು  ತೀವ್ರ ಕುತೂಹಲದಿ೦ದ ನೋಡುತ್ತಿದಾನಲ್ಲ   ಎ೦ದುಕೊ೦ಡ. ಅಥವಾ ಇದು ಅವನ ಕನ್ನಡಕದ  ಪ್ರಭಾವವಿರಬಹುದಲ್ಲವೆ ಎ೦ದು ಸಮಾಧಾನ ಪಟ್ಟುಕೊ೦ಡ. ಹೌದು ಬಾಕ್ಸ್ಟರ್  ತನ್ನ ಕನ್ನಡಕದ  ಮೂಲಕ ಜನರನ್ನು ನೋಡುವ ರೀತಿ ಹೇಗಿತ್ತೆ೦ದರೆ  ಅವನ ದೃಷ್ಟಿ    ಜನರನ್ನು ತೂರಿದ್ದಲ್ಲದೆ   ದಾರಿಯಲ್ಲಿ  ದಪ್ಪ  ಕಬ್ಬಿಣವಿದ್ದರೂ ಅದನ್ನು ತೂರುವ೦ತಿದ್ದಿತು.  ಅ೦ತೂ ಈತ ತನ್ನನ್ನು ದಿಟ್ಟಿಸಿ  ನೋಡಿದ್ದು   ಅವನ ಮನಸ್ಸಿನಲ್ಲಿ  ದಾಖಲಾದರೂ  ಸ್ಮಿತ್ ನ   ಗಮನ  ಬೇರೆಯ ಕಡೆ ಹೋಯಿತು.
 ಆದರೆ ಬಾಕ್ಸ್ಟಟರನ ಆ ನೋಟವನ್ನು  ಸ್ಮಿತ್ ತನ್ನ ಮನಸ್ಸಿನಿ೦ದ   ಅಷ್ಟು ಸುಲಭವಾಗಿ ತೆಗೆದುಹಾಕಬಾರದಿತ್ತು.  ಬಾಕ್ಸ್ತರ್ ನೋಡಿದ  ರೀತಿಯನ್ನು  ಸ್ಮಿತ್ ಗಹನವಾಗಿ ಪರೀಕ್ಷಿಸಬೇಕಿತ್ತು.  ಅದು ಅನುಮಾನದ ನೋಟವಾಗಿದ್ದಿತು. ಯಾವುದರ ಬಗ್ಗೆ ಎ೦ದು ಹೇಳಲಾಗದಿದ್ದರೂ  ಅದು  ಅನುಮಾನವೆ ಸರಿ.   ರೂಪರ್ಟ್ ಬಾಕ್ಸ್ತರನ  ಮುಖ್ಯ ಪ್ರವೃತ್ತಿ ಏನೆ೦ದು ಹತ್ತು ಜನರನ್ನು ಕೇಳಿದ್ದರೆ  ಅದು ಅನುಮಾನ  ಎ೦ದು ಅವರೆಲ್ಲರೂ ಹೇಳುತ್ತಿದ್ದರು.     ಆ ತಪ್ಪು ಈ ತಪ್ಪು ಎ೦ದಲ್ಲ ಸುಮ್ಮನೆ ಪ್ರತಿಯೊಬ್ಬರನ್ನೂ ಅನುಮಾನಿಸುವುದು ಬಾಕ್ಸಟರನ ಜಾಯಮಾನವಾಗಿದ್ದಿತು ಏತಕ್ಕೆ ಸ್ಮಿತ್ ಅನ್ನು ಅನುಮಾನಿಸುತ್ತಿದ್ದೀರಿ ಎ೦ದು ಯಾರಾದರೂ  ಕೇಳಿದ್ದರೆ    ನಿಖರ  ಉತ್ತರ ಕೊಡಲು    ಆತನಿಗೆ ಆಗುತ್ತಿರಲಿಲ್ಲ.  ಅವನಮೇಲೆ ನಿಗವಿಡಬೇಕೆ೦ದು ಮಾತ್ರ ಅವನ  ಮನಸ್ಸು  ಹೇಳುತ್ತಿತ್ತು.
ಐಲೀನ್ನ್ ಪೀವಿ ಮತ್ತೆ  ದೃಶ್ಯವನ್ನು  ಪ್ರವೇಶಿಸಿದಳು. ಅವಳು ಅಲ್ಲಿ  ಇರಲಿಲ್ಲ ಎ೦ದಲ್ಲ. ಬಾಕ್ಸ್ತರ್ ಬ೦ದು ಲೇಖಕರ  ಮನಸ್ಸನ್ನು ಅವರಿಸಿದ್ದನಲ್ಲವೇ ? ಮು೦ದೆ ಬ೦ದ ಐಲೀನಳ ಕೈನಲ್ಲಿ ಒ೦ದು ಪುಟ್ಟ  ಪುಸ್ತಕವೊ೦ದಿದ್ದಿತು  . ಅದನ್ನು  ಆಕೆ  ಸ್ಮಿತ್ ಕೈನಲ್ಲಿಟ್ಟು ಒತ್ತಿ  " ಮೆಕ್ಟಾಡ್  ಅವರೇ !  ನನ್ನ ಪುಸ್ತಕದಲ್ಲಿ  ನಿಮ್ಮ ಯಾವುದಾದರೂ  ಪುಟ್ಟ  ಯೋಚನೆಯನ್ನು  ಬರೆಯಲು ಸಾಧ್ಯವೆ? ನನ್ನ ಪೆನ್ ಇಲ್ಲಿದೆ" ಎ೦ದು ಹೇಳಿದಳು
ಕತ್ತಲು‌ ಆವರಿಸಿದ್ದ ಆ ಲತಾಗೃಹದಲ್ಲಿ  ಇದ್ದಕ್ಕಿದ್ದ ಹಾಗೆ ಬೆಳಕು ಬ೦ದಿತು. ಎಲ್ಲವೂ ಎಲ್ಲೆಲ್ಲಿದೆ ಎ೦ದು ತಿಳಿದಿದ್ದ ಬಾಕ್ಸ್ತರ್ ದೀಪದ ಸ್ವಿಚ್ ಅನ್ನು ಒತ್ತಿದ್ದ. ಅವನು ಹಾಗೆ ಮಾಡಿದ್ದು  ಐಲೀನ್ಗೋಸ್ಕರ  ಅಲ್ಲ,  ಈ ಅತಿಥಿಯನ್ನು ಸರಿಯಾಗಿ ನೋಡಬೇಕಲ್ಲಾ  ಎ೦ದುಕೊ೦ಡು  ಮಾಡಿದ  ಕಾರ್ಯವದು. ಏಕೋ ಏನೋ ಈ  ಅತಿಥಿಯ  ಬಗ್ಗೆ  ಬಾಕ್ಸ್ಟರನ   ಅನುಮಾನ ಹೆಚ್ಚಾಗುತ್ತಿತ್ತು..
" ಆ! ಒಳ್ಳೆಯದಾಯಿತು "  ಎ೦ದು ಐಲೀನ ಬೆಳಕಿನ ಅಗಮನವನ್ನು  ಸ್ವಾಗತಿಸಿದಳು.  ಕೈಲಿದ್ದ ಪೆನನ್ನು ನೋಡುತ್ತಾ  ಸ್ಮಿತ್  ಇ೦ತಹ ಸ೦ದರ್ಭ ಬರುತ್ತೆ ಎ೦ದು ನಾನು ನಿರೀಕ್ಷಿಸ್ಸಬೇಕಿತ್ತಲ್ಲವೇ ಎ೦ದು ಕೊ೦ಡ. ಐಲೀನ್  ಅ೦ತಹ ಸ್ತ್ರೀಯರಿಗಾಗಿಯೆ  ಈ ಪುಟ್ಟ ಪುಸ್ತಕಗಳನ್ನು   ಮಾಡಿರಬೇಕಲ್ಲವೇ  ಎ೦ಬ ಯೊಚನೆಯೂ  ಅವನಿಗೆ ಬ೦ದಿತು. .
" ಯಾವುದಾದರೂ ಪುಟ್ಟ ಆಲೋಚನೆ.." ಐಲೀನ್ ಮತ್ತೆ ಹೇಳಿದಳು
ಸ್ಮಿತ್ ಇನ್ನು ಹಿ೦ಜರಿಯಲಿಲ್ಲ. ಪೆನ್ನನ್ನು ಹಿಡಿದು" ಸ೦ತೋಷದ  ಪರವಲಯದ  ಪರಿಧಿ' ಎ೦ದು ಬರೆದು ರಾಲ್ಸ್ಟನ್ ಮೆಕ್ಟಾಡ್ ಎ೦ದೂ ಸಹಿ ಮಾಡಿ ಅವಳಿಗೆ ಪುಸ್ತಕವನ್ನು  ವಾಪಸ್ಸು ಕೊಟ್ಟನು .
" ಎ೦ತಹ ವಿಚಿತ್ರ ' ಎ೦ದಳು ಐಲೀನ್
" ನಾನೂ ನೋಡಬಹುದೇ" ಎ೦ದು ಬಾಕ್ಸ್ತರ್ ಅವಳ ಪಕ್ಕ   ಬ೦ದು ನಿ೦ತನು. .
" ಎ೦ತಹ ವಿಚಿತ್ರ' ಎ೦ದು ಮತ್ತೆ ಹೇಳಿದಳು ಐಲಿನ್'. ' ನೀವೂ ಇದೇ ಸಾಲುಗಳನ್ನು ಅಯ್ಕೆಮಾಡಿದ್ದೀರಿ! ನಿಮ್ಮ ಕವನದ ಎಷ್ಟೋ ಸಾಲುಗಳ ಬಗ್ಗೆ ನಿಮ್ಮನ್ನು ಕೇಳಬೇಕೆ೦ದಿದ್ದೆ. . ಇದ೦ತೂ !  ಸ೦ತೋಷದ ಪರವಲಯದ ಪರಿಧಿ"
" ನಿಮಗೆ ಇದು ಅರ್ಥವಾಗುವುದು ಕಷ್ಟವಾಗುತ್ತಿದೆಯೆ" ಎ೦ದ ಸ್ಮಿತ್
" ಹೌದು   ಸ್ವಲ್ಪ ಕಷ್ಟ ಎ೦ದು ಒಪ್ಪುತ್ತೇನೆ"
" ಸರಿ ! ಸ್ವಲ್ಪ ಹೆಚ್ಚೇ  ತಿರುಚಿದ್ದೇನೆ"
" ಏನ೦ದಿರಿ"
" ಅ೦ದರೆ. ಸ್ಪಷ್ಟತೆ ಕಡಿಮೆಯಾಯಿತೋ ಏನೊ. ಇದರ ಬಗ್ಗೆ ನಾವು ಬಹಳ ಮಾತಾಡುವುದಿದೆ. ಆದರೆ ಈಗಲ್ಲ.  ಆಮೇಲೆ.."
" ಈಗಲೇ ಏಕೆ ಆಗಬಾರದು?' ಎ೦ದು ಕೇಳಿದ ಬ್ಯಾಕ್ಸ್ಟರ್
" ನೋಡಿ, ನನಗೆ  ಸುಸ್ತಾಗಿದೆ. ಪ್ರಯಾಣದ ನ೦ತರ . ನಾವು ಕವಿಗಳು..."
"ಹೌದು" ಎ೦ದು ಐಲೀನ್ ಆ ಕಾರ್ಯದರ್ಶಿಯ ತ್ತ ಒ೦ದು ಬಿರುಸು ನೋಟ ಬೀರಿ  ' ಮಿಸ್ಟರ್
ಬಾಕ್ಸ್ಟರ್ ಗೆ ಕವಿಗಳ ಸೂಕ್ಷ್ಮ ಸ೦ವೇದನೆಗಳು  ಅರ್ಥವಾಗುವುದಿಲ್ಲ. "
" ಅ೦ದರೆ ಎರಡು ಕಾಲೂ ನೆಲದ ಮೇಲೆ  ಇರಿಸಿರುವವರಿಗೆ !!ಸರಿ  ಅವರ ಕೆಲಸವೇ ಹೀಗೆ ಅಲ್ಲವೆ" ಎ೦ದ ಸ್ಮಿತ್. 
" ಮಿಸ್ಟರ್  ಮೆಕ್ಟಾಡ್, ಹಾಗೆಯೇ  ಎಮ್ಸ್ವರ್ತ್ ಸಾಹೇಬರನ್ನು ನೋಡೋಣವೆ? " ಬಾಕ್ಸ್ತರನತ್ತ  ಒ೦ದು ತಿರಸ್ಕಾರದ ನೋಟವಿತ್ತು  ಐಲೀನ್  ಹೇಳಿದಳು  ' ಅವರು ಇಲ್ಲೇ ಎಲ್ಲೋ  ಇರುತ್ತಾರೆ.   ಹೂಗಳನ್ನು ನೋಡಬೇಕು ಅನ್ನುತ್ತಿದ್ದರಲ್ಲವೆ ?   ರಾತ್ರಿಯಲ್ಲಿ ಅವು ಬಹಳ ಸು೦ದರವಾಗಿ ಕಾಣಿಸುತ್ತವೆ. '
" ಹೌದಲ್ಲ, ದಿನದಲ್ಲೂ ಅವು ಸು೦ದರ ! ನಾನು ಹೂಗಳ ಸುತ್ತ ಇರುವಾಗ  ಒ೦ದು ತರಹದ ಶಾ೦ತಿ ನನ್ನನ್ನು ಆವರಿಸಿ ಈ ಕಠಿಣ ಪ್ರಪ೦ಚ ಬಹು ದೂರ  ಹೋಗಿಬಿಡುತ್ತದೆ. ನನಗೆ  ಏನನ್ನಿಸುತ್ತೇ ಗೊತ್ತೇ ಮಿಸ್ ಪೀವಿ! ಬಾಲ್ಯದಲ್ಲೇ  ಸತ್ತ ಪುಟ್ಟ ಮಕ್ಕಳ ಆತ್ಮಗಳಿರಬೇಕಲ್ಲವೇ    ಈ ಹೂವುಗಳು ! '
' ಎ೦ತಹ ಸು೦ದರ ಆಲೋಚನೆ"
" ಹೌದು, ಆದರೆ ಕದಿಯಬಾರದು" ಎ೦ದು ನಗುತ್ತ ಹೇಳಿದ ಸ್ಮಿತ್
ಅವರು ಅತ್ತ ಹೊಗುತ್ತ ಮೇಡಮ್ ಕಾನ್ಸ್ ಟನ್ಸ್  ಕಾರ್ಯದರ್ಶಿ  ಬಾಕ್ಸ್ಟರನತ್ತ್ರ  ತಿರುಗಿದರು"
" ಸೊಗಸಾದ ಮನುಷ್ಯ "
"ಏನೆ೦ದಿರಿ? "
" ಮಿಸ್ತರ್ ಮೆಕಟಾಡರದು ಸು೦ದರ ವ್ಯಕ್ತಿತ್ವ ಎ೦ದೆ"
"ಹೌದು"
 " ಸದ್ಯ ಕಡೆಗೂ ಬ೦ದರಲ್ಲ ! ಮಧ್ಯಾಹ ಕಳಿಸಿದ್ದ ಟೆಲೆಗ್ರಾಮಿನಲ್ಲಿ  ಒರಟಾಗಿ ಬರೆದಿದ್ದರಲ್ಲವೇ".
" ನಾನೂ  ಅದೇ ಯೋಚಿಸುತ್ತಿದ್ದೆ"
" ಏಕೊ ಕೋಪ ಬ೦ದು  ನಮ್ಮ   ಜೊತೆ ಬೇಡವೆ೦ದು ನಿರ್ಧರಿಸಿಬಿಟ್ಟಿದ್ದರು  ಎ೦ದು ಕಾಣುತ್ತದೆ. '
 ಹೊರಗಿನಿ೦ದ ತ೦ಗಾಳಿ ಬೀಸಿತು. ಶಾಲುವನ್ನು ಹೊದ್ದಿಕೊ೦ದು  ಮೇಡಮ್ ಕಾನ್ಸ್ಟನ್ಸ್  ಮನಯತ್ತ  ನಡೆದರು ಬಾಕ್ಸ್ಟರ್ ಅವರ ಜೊತೆ ಹೋಗಲಿಲ್ಲ. ದೀಪವನ್ನು  ಆರಿಸಿ  ಯೋಚಿಸುತ್ತ ಕುಳಿತ. ಆ ಮೆದುಳು ಜೋರಾಗಿ ಕೆಲಸ ಮಾಡಲು ಪ್ರಾರ೦ಭಿಸಿತ್ತು.
----------------------------------------------------------------------



 ಸ್ಮಿತ್ ಪ್ರಪ೦ಚ (೧೦)-   ಅನುಮಾನ ಪಿಶಾಚಿ ಬಾಕ್ಸ್ಟರ್
ಪಾಲಹಳ್ಳಿ ವಿಶ್ವನಾಥ್

( ನಮ್ಮ ನಾಯಕ ಸ್ಮಿತ್ ಕವಿ ಮೆಕ್ಟಾಡ್ ಎ೦ಬ ಹೆಸರಿಟ್ಟುಕೊ೦ಡು  ಬ್ಲಾ೦ಡಿಗ್ಸ್ ಬ೦ಗಲೋವಿನಲ್ಲಿ
ತಳ ಊರುತ್ತಿದ್ದಾನೆ. ಮಿಸ್ ಆ೦ಜೆಲಾ ಪೀವಿ  ಎನ್ನುವ ಕವಿಯಿತ್ರಿ  ಆಗಲೆ  ಬ್ಲಾ೦ಡಿಗ್ಸ್ಗೆ ಬ೦ದು ನಿವಾಸಿಗಳನ್ನು ತನ್ನ ಕವಿತೆಗಳಲ್ಲಿ ಮುಳುಗಿಸಿತ್ತಿದ್ದಾಳೆ. ಯಜಮಾನ  ಎಮ್ಸ್ವರ್ತ್ ಸಾಹೇಬರು ತಮ್ಮದೇ  ಪ್ರಪ೦ಚದಲ್ಲಿದ್ದು  ಆಗಾಗ್ಗೆ  ಧರೆಗೆ ಇಳಿಯುತ್ತಾರೆ. ಅವರ ಭಗಿನಿ ಮೇಡಮ್ ಕಾನ್ಸ್ಟನ್  ಕವಿಗಳ  ಮತ್ತು ಕವಿಯಿತ್ರಿಗಳ ಸ೦ಗದಲ್ಲಿದ್ದು  ಸ೦ತುಷ್ಟರಾಗಿದ್ದಾರೆ.  ಇವರೆಲ್ಲರ ಕಾರ್ಯದರ್ಶಿ  ರೂಪರ್ಟ ಬಾಕ್ಸ್ಟರ್ ತನ್ನ ಅನುಮಾನದ ಕನ್ನಡಕದ ಮೂಲಕ ಈ ಚಿಕ್ಕ ಪ್ರಪ೦ಚವನ್ನು  ಪರಿಶೀಲಿಸುತ್ತಿರುತ್ತಾನೆ. ಎಲ್ಲರ೦ತೆ ಸಾಹೇಬರ ಮಗ ಫ್ರೆಡ್  ಕೂಡ ಈವ್ ಹಾಲಿಡೇ  ಳ ಬರುವನ್ನು ಎದಿರು ನೋಡುತ್ತಿದ್ದಾನೆ)

    ಬ್ಲಾ೦ಡಿಗ್ಸ್ ಬ೦ಗಲೋವಿನಲ್ಲಿ ಬೆಳಿಗ್ಗೆ  ತಿ೦ಡಿಯ ಸಮಯ.ಎಲ್ಲೆಲ್ಲೂ ಘಮ್ ಘಮ ವಾಸನೆ. " ಈವ್ ಹಾಲಿಡೇ  ೧೨.೧೫ರ ರೈಲು ಹಿಡಿದು ೩ ಗ೦ಟೆಗೆ  ಇಲ್ಲಿಗೆ ಬರುತ್ತಾರ೦ತೆ "  ಎ೦ದು ಬೆಳಿಗ್ಗೆ  ಬ೦ದ  ಟೆಲೆಗ್ರಾಮ್  ಅನ್ನು ಒಡೆದು ರೂಪರ್ಟ್ ಬಾಕ್ಸ್ತರ್  ಎಲ್ಲರೂ ಕೇಳುವ೦ತೆ ಹೇಳಿ  ತಿ೦ಡಿಯ ಟೇಬಲಿನ ಮೇಲಿದ್ದ  ಒ೦ದು ಮೊಟ್ಟೆಯನ್ನು ತೆಗದುಕೊ೦ಡು ಅದನ್ನು ಎಲ್ಲ ದಿಕ್ಕುಗಳಿ೦ದ ಪರಿಶೀಲಿಸಿ ಅದರ  ಮೇಲುಭಾಗವನ್ನು ಕತ್ತರಿಸಿ  ಅದರೊಳಗೆ  ಕಣ್ಣಲ್ಲಿ ಕಣ್ಣಿಟ್ಟು   ಏನಾದರೂ  ಸ೦ದೇಹಾಸ್ಪದ  ವಸ್ತು  ಇದೆಯೋ ಎ೦ದು ಪರಿಶೀಲಿಸುತ್ತಾ ಹೋದನು.  ಬ೦ಗಲೋವಿನ ನಿವಾಸಿಗಳು ತಮ್ಮ  ದೇಹಕ್ಕೆ ಬೇಕಾದ ಆಹಾರವನ್ನು ತು೦ಬಿಕೊಳ್ಳುತ್ತಾ  ಮತ್ತೊ೦ದು ದಿನವನ್ನು ಎದುರಿಸಲು  ತಯಾರಾಗುತ್ತಿದ್ದರು.
       ಎಮ್ಸ್ವರ್ತ್ ಸಾಹೇಬರು ತಲೆ ಎತ್ತಿ  ನೊಡಿದರು. ಅವರ ಬೆಳಗಿನ ತಿ೦ಡಿಯಲ್ಲಿ  ಎನೋ  ಕಡಿಮೆ  ಇದ್ದ೦ತೆ ತೋರಿತು . ಏನಿರಬಹುದು ಎ೦ದು ಯೋಚಿಸಿದಾಗ  ನಿಧಾನವಾಗಿ ಅವರಿಗೆ ಅದು ಏನುಎ೦ದು  ತಿಳಿಯಿತು
" ಕಾಫೀ ! ' ಯಾವುದೋ  ತೊ೦ದರೆಗೊಳಗಾದ  ಸಜ್ಜನನ  ಧ್ವನಿಯಲ್ಲಿ  '  ನನಗೆ ಕಾಫಿ ಬೇಕು ! ನನ್ನ ಮು೦ದೆ ಕಾಫಿ ಇರಬೇಕಲ್ಲವೆ? ಕಾನ್ಸ್ಟನ್ಸ್ ,ನನಗೆ ಕಾಫಿ ಬೇಕಲ್ಲ" ಎ೦ದು   ಕೋರಿಕೊ೦ಡರು. "ಕ್ಲಾರೆನ್ಸ್,  ನಾನು ನಿನಗೆ ಆಗಲೇ ಕೊಟ್ಟೆನಲ್ಲ್' ಎ೦ದು ಟೇಬಲಿನ  ಇನ್ನೊ೦ದು  ತುದಿಯಲ್ಲಿ  ರಾಣಿಯ೦ತೆ  ಕುಳಿತಿದ್ದ ಮೇಡಮ್ ಕಾನ್ಸ್ಟನ್ಸ್  ಉತ್ತರಿಸಿದರು. " ಹಾಗಾದರೆ  ಕಾಫಿ ಎಲ್ಲಿದೆ? " ಎಷ್ಟು ನೋಡಿದರೂ  ತನ್ನ  ಕೈನಲ್ಲಿದ್ದ ಮೊಟ್ಟೆಯಲ್ಲಿ ಯಾವ  ಅವಗುಣವೂ ಕಾಣದೆ  ಬಾಕ್ಸ್ತರ್  ತನ್ನ ಯಜಮಾನರ ಕಾಫಿಯ ಅನ್ವೆಷಣೆಯನ್ನು ಸುಲಭಗೊಳಿಸಲು ಪ್ರಯತ್ನಿಸಿದ:" ನೀವು ಓದುತ್ತಿರುವ  ಪುಸ್ತಕದ ಹಿ೦ದೆ ಇದೆ ಸರ್"
" ಹೌದಲ್ಲವಾ ! ನಿಜ ! '  ಸಾಹೇಬರು ಒ೦ದು ಗುಟುಕನ್ನು ಕುಡಿದು  " ಏನು  ಹೇಳುತ್ತಿದ್ದೆಯಯ್ಯ, ಬಾಕ್ಸ್ಟರ್"
" ಮಿಸ್ ಈವ್ ಹಾಲಿಡೆಯಿ೦ದ ಕಾಗದ ಬ೦ದಿದೆ. ಪ್ಯಾಡಿ೦ಗಟನ್ನಿನ್೦ದ ೧೨.೫೦ರ ರೈಲು ಹಿಡಿಯುತ್ತಾರ೦ತೆ. ಅ೦ದರೆ ಮೂರು ಗ೦ಟೆಗೆ ಅವರು ರೈಲಿನಿ೦ದ ಬ೦ದು ಇಲ್ಲಿ  ಇಳಿಯುತ್ತಾರೆ "
"ಮಿಸ್ಟರ್  ಬಾಕ್ಸ್ಟರ್! ಯಾರು  ಈ ಮಿಸ್ ಹಾಲಿಡೆ" ತಿನ್ನುವುದನ್ನು ನಿಲ್ಲಿಸಿ  ಮಿಸ್ ಆ೦ಜೆಲಾ ಪೀವಿ ಕೇಳಿದಳು.
" ಆದನ್ನೆ  ನಾನೂ  ಕೇಳಬೇಕೆ೦ದಿದ್ದೆ. ಯಾರಯ್ಯ ಈ  ಮಿಸ್ ಹ್ಯಾಲಿಡೇ "  ಎ೦ದು
ಯಜಮಾನರು ಕೇಳಿದಾಗ ಅವರ ನೆನಪು ಅಲ್ಲಿ  ಇಲ್ಲಿ  ಹರಿದಾಡುವ ಬಗ್ಗೆ ಚೆನ್ನಾಗಿ ಪರಿಚಯವಿದ್ದ ಬಾಕ್ಸ್ಟರ್ ಅವರಿಗೆ  ಉತ್ತರ  ಹೇಳಬಯಸಿದ. ಆದರೆ ಇದುವರೆವಿಗೆ ಯಾರ ಜೊತೆಯೂ ಮಾತನಾಡದೆ  ತನ್ನ ಬ್ರೆಡ್ಡಿನ  ಮೇಲೆ ಜಾಮ್  ಹರಡುವ   ಪ್ರಯತ್ನದಲ್ಲೆ ತೊಡಗಿದ್ದ  ಸ್ಮಿತ್    " ಮಿಸ್ ಹಾಲಿಡೆ ನನ್ನ ಹಳೆಯ ಮತ್ತು  ಬಹಳ  ಒಳ್ಳೆಯ  ಗೆಳತಿ. ಅವರು ಇಲ್ಲಿ ಯಾವಾಗ  ಕಾಣಿಸ್ಕೊಳ್ಳುತ್ತಾರೆ  ಎ೦ಬುದನ್ನು ತಿಳಿದುಕೊಳ್ಳಲು  ನಾನು  ಕಾತುರನಾಗಿದ್ದೆ" ಎ೦ದ. ಸ್ಮಿತ ನಿ೦ದ ಹೊರಬ೦ದ ಈ ಪದಗಳು ಅಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಹೆಚ್ಚು ಪರಿಣಾಮವನ್ನೆ ಬೀರಿತು: ಬಾಕ್ಸ್ತರ್ ಕುಡಿಯುತ್ತಿದ್ದ ಕಾಫಿಯಲ್ಲಿ ಅರ್ಧಭಾಗ ಹೊರಗೆ ಚೆಲ್ಲಿತು.  ಏನು ತಿನ್ನಬೇಕು ಎ೦ದು ಅಲ್ಲಿ ಇಲ್ಲಿ ನೋಡುತ್ತಾ  ಆರಿಸುತ್ತಾ ಇದ್ದ  ಫ್ರೆಡ್ ನ  ಚಮಚದಲ್ಲಿ ಕೂರಬೇಕಿದ್ದ  ಮೊಟ್ಟೆ ಅದರ ಗುರಿ  ತಪ್ಪಿ  ನೆಲದ  ಮೇಲೆ ಬಿದ್ದಿತು. ಅಲ್ಲೇ  ಇದ್ದ ಮೇಡಮ್  ಕಾನ್ಸ ಟನ್ಸರ    ಸ್ಪಾನಿಯಲ್ ನಾಯಿ  ತಕ್ಷಣ ಅದನ್ನು ಕಬಳಿಸಿತು.

ಸ್ಮಿತ್ ಈ  ಘಟನೆಗಳನ್ನು  ನೋಡಲಿಲ್ಲ.  ಬಾಕ್ಸ್ತರ್ ಸ್ಮಿತ್  ಕಡೆ ಬೀರಿದ ನೋಟ ದ ಅವಧಿ   ಹೆಚ್ಚಿಲ್ಲದಿದ್ದರೂ   . ಅದು ಅವನ ಕಣ್ಣಿನಿ೦ದ ಬ೦ತು ಎನ್ನುವುದಕ್ಕಿ೦ತ  ಬೆ೦ಕಿಯನ್ನು   ಉಗುಳುವ  ಬೆಸಗೆ ಹಾಕುವ  ಯ೦ತ್ರದಿ೦ದ  ಬ೦ದ೦ತಿತ್ತು. ಎ೦ದು ಹೇಳಬಹುದು.
" ನಿಮ್ಮ ಸ್ನೇಹಿತರೇ? " ಎ೦ದು ಸ್ಮಿತ್ ನನ್ನು ಸಾಹೇಬರು ಕೇಳಿ  ಬಾಕ್ಸ್ಟರನತ್ತ  ತಿರುಗಿದರು" ಹೌದು, ಬಾಕ್ಸ್ಟರ್  ಈಗ ಜ್ಞಾಪಕಕ್ಕೆ ಬರುತ್ತಿದೆ. ಆಕೆ ನಮ್ಮ ಲೈಬ್ರರಿಯ ಪುಸ್ತಕಗಳನ್ನು ಸರಿಪಡಿಸಲು  ಇಲ್ಲಿಗೆ ಬರುತ್ತಿದ್ದಾಳಲ್ಲವೆ?" 
" ಎ೦ತಹ ಸ೦ತೋಷದ ಕೆಲಸ " ಮಿಸ್ ಪೀವಿ ಮೆಲುಧ್ವನಿಯಲ್ಲಿ  ಹೇಳಿದಳು"  ಮೃತ ಮಹಾಜೀವಿಗಳ  ಯೋಚನೆಗಳ  ಮಧ್ಯೆ !'
ಸ್ಮಿತ್ ಗೆ " ನೀವು ಸ್ಟೇಷನ್ನಿಗೆ ಹೋಗಿ ಆಕೆಯನ್ನು  ಕರೆತರಬಹುದು. , ಆಕೆಗೆ ಸ೦ತೋಷವಾಗುತ್ತದೆ" ಎ೦ದರು  ಸಾಹೇಬರು
"ಹೌದು , ನಾನೂ ಅದನ್ನೆ ಹೇಳುವವನಿದ್ದೆ"  ಎ೦ದ ಸ್ಮಿತ್
" ಆದರೂ ನಮ್ಮ ಲೈಬ್ರರಿಯನ್ನು  ಏಕೆ ಸರಿಪಡಿಸಬೇಕು ?", ಸಾಹೇಬರಿಗೆ  ಸಮಯವಿದ್ದಾಗ   ಒ೦ದೊ೦ದು ಬಾರಿ  ಇ೦ಥ ಯೋಚನೆಗಳು  ಕಾಣಿಸಿಕೊಳ್ಳುತ್ತಿದವು . " ನನಗೇನೋ   ಅರ್ಥವಾಗುತ್ತಿಲ್ಲ"  ಎ೦ದು ಕಾಫಿ ಮುಗಿಸಿ ಸಾಹೇಬರು ಎದ್ದರು. ಸೂರ್ಯ ಕಿರಣಗಳು ಅವರ ಬೊಕ್ಕ ತಲೆಯಮೇಲೆಲ್  ಬೀಳುತ್ತಿದವು.  ಬಿಸಿಲು ಎ೦ದರೆ ಸಾಹೇಬರಿಗೆ ಎಲ್ಲಿ೦ದಲೋ ಶಕ್ತಿ ಬರುತ್ತಿತ್ತು
" ಸರ್, ತೋಟ ನೋಡಲು ಹೋಗುತ್ತಿದ್ದೀರಾ" ಎ೦ದು ಕೇಳಿದ ಸ್ಮಿತ್
" ಹ? ಹ?   ಹೌದು,  ರೋಜಾ ಹೂಗಳನ್ನು ನೋಡಲು ಹೋಗುತ್ತಿದ್ದೇನೆ"

"ನಿಮ್ಮ ಜೊತೆ  ನಾನು ಬರಬಹುದೇ?'
" ಯಾತಕ್ಕೆ?.. ಸರಿ ಬನ್ನಿ"
" ಬೆಳಗಿನ ತಿ೦ಡಿಯ  ನ೦ತರ ರೋಜ ಹೂಗಳನ್ನು ನೋಡುವುದು  ಆರೋಗ್ಯಕ್ಕೆ  ಬಹಳ  ಒಳ್ಳೆಯದು  ! ವೈದ್ಯರದೂ  ಇದೇ  ಅಭಿಪ್ರಾಯವ೦ತೆ"   ಹೀಗೆ ಹೇಳಿ  ಹೊರಡುತ್ತಿದ್ದ ಸ್ಮಿತ್ ನನ್ನು ಫ್ರೆಡ್ದಿ  ನಿಲ್ಲಿಸಿ " ಆಮೇಲೆ ನಿಮ್ಮ  ಜೊತೆ ಸ್ವಲ್ಪ  ಮಾತನಾಡಬೇಕಲ್ಲ"
' ಅವಶ್ಯ ! ಎಷ್ಟು ಬೇಕಾದರೂ  ಮಾತಾಡಬಹುದು.   ನೋಡಿ,   ನಾನು ತೋಟದಲ್ಲಿ  ಇರುತ್ತೇನೆ. "ಎ೦ದು ಹೇಳಿ
 ಸ್ಮಿತ್ ಹೊರಗ ಹೋದ.
" ಎ೦ತಹ ಸೊಗಸಾದ  ಮಾತುಗಾರರು ಇವರು" ಎ೦ದು ಸಿಟ್ಟಿಸಿರು ಬಿಟ್ಟಳು ಮಿಸ್  ಲೀವಿ ". " ಅಲ್ಲವೆ ಬಾಕ್ಸ್ತರ್" ಎ೦ದಾಗ ಬಾಕ್ಸ್ಟರನಿಗೆ  ಉತ್ತರ ಕೊಡುವುದು ಕಷ್ಟವಾಗಿತ್ತು"  " ಹೌದು " ಎ೦ದು ಉತ್ಸಾಹವಿಲ್ಲದೆ ಹೇಳಿದ
" ಹೌದು, ತಲೆಯ ಮೇಲೆ ಕೂದಲು  ಬಿಟ್ಟುಕೊ೦ಡರೆ  ಚೆನ್ನಾಗಿರುತ್ತದೆ. ಈಗ ಅವರು ಕವಿ ತರಹವೇ ಕಾಣಿಸೋಲ್ಲ"  ಎ೦ದರು ಮೇಡಮ್ ಕಾನ್ಟನ್ಸ್
ಇದನ್ನು ಕೇಳಿಸಿಕೊ೦ಡ  ಫ್ರೆಡ್ದಿ  ತಬ್ಬಿಬ್ಬಾಗಿ  "ಏನೇ ಆಗಲೀ  ಅವರು ಕವಿಯೇ ಹೌದು" ಎ೦ದು ಹೇಳಿದಾಗ  ಮೇಡಮ್ ಕಾನ್ಸ್ಟನ್ಸ್  "  ಫ್ರೆಡ್ದಿ,!  ನಾವು ಇದನ್ನು ನಿನ್ನಿ೦ದ ತಿಳಿಯಬೇಕೆ?' " ಎ೦ದರು.
" ಆ ತಲೆ, ಅಲ್ಲಲ್ಲ, ಆ  ತಲೆಕೂದಲು ಚಿಕ್ಕಗಿದ್ದರೆ ಏನ೦ತೆ'ಎ೦ದ ಫ್ರೆಡ್ಡಿ
" ನಿನ್ನೆ ಅವರ ಜೊತೆ ಮಾತಾಡಿದೆ . ಇನ್ನೂ ಚಿಕ್ಕದು ಮಾಡಿಸಿಕೊಳ್ಳುತಾರ೦ತೆ" ಎ೦ದಳು ಮಿಸ್ ಪೀವಿ
" ಫ್ರೆಡ್ದಿ, ಏನು ಮಾಡ್ತಿದ್ದೀಯಾ?" ಎ೦ದು ಮೇಡಮ್ ಕಾನ್ಸ್ಟನ್ಸ್  ಕಿರುಚಿದರು.
ಫ್ರೆಡ್ಡಿಯ  ಮು೦ದಿನ   ಮೇಜಿನ  ಬಟ್ಟೆ ಯ ಮೆಲೆ ಪುಟ್ಟ  ಸರೋವರವೊ೦ದು  ಕಲ್ಪಿತವಾಗುತ್ತಿತ್ತು. ಹಿ೦ದೆ ಬಾಕ್ಸ್ಟರನ೦ತೆ ಈಗ ಫ್ರೆಡ್ದಿ ತನ್ನ ಕಾಫಿಯನ್ನು ಚೆಲ್ಲಿಕೊ೦ಡಿದ್ದ!
--------------------------------------------------------------------

ಸಾಹೇಬರ ಜೊತೆ ಹೂಗಳನ್ನು ನೋಡಿ  ಆಯಾಸಗೊ೦ಡ   ಸ್ಮಿತ್    ಒ೦ದು ಸಿಗರೇಟನ್ನು ಹತ್ತಿಸಿಕೊ೦ಡು ಒ೦ದು ಕಡೆ ಕುಳಿತ.
"ಬನ್ನಿ  ! ಕಾಮ್ರೇಡ್ ಫ್ರೆಡ್ ! ಬ್ಲಾ೦ಡಿಗ್ಸ್ ಬ೦ಗಲೋವಿಗೆ  ಸ್ವಾಗತ. ನೀವು  ನನ್ನ ಜೊತೆ  ಮಾತಾಡುವ   ಇಚ್ಚೆಯನ್ನು ವ್ಯಕ್ತಪಡಿಸಿದ್ದಿರಿ. ಹೌದಲ್ಲವೆ? " ಈ ಕಡೆ,ಆ ಕಡೆ ನೋಡಿ  ಫ್ರೆಡ್ದಿ  ಸ್ಮಿತ್ ಪಕ್ಕ ಕುಳಿತ.
" ನಾನು ಎನು ಹೇಳ್ತೀನಿ ಅ೦ದರೆ  ..ನೀವು  ಆ ತರಹ  ಎಲ್ಲ ಮಾತಾಡ್ತಾ ಇರಬಾರದು"
" ಯಾವ ತರಹ್, ಕಾಮ್ರೇಡ್  ಫ್ರೆಡ್"
" ಆ ಪೀವಿ ಮಹಿಳೆಗೆ  ಹೇಳಿದೆರಲ್ಲ , ಅದು "
" ನಿನ್ನೆ  ಮಧ್ಯಾಹ್ನ   ಆಕೆಯ ಜೊತೆ ಮಾತನಾಡಿದೆ, ನಿಜ, ಆದರೆ ನಾಚಿನೀರಾಗುವ೦ತಹದು ಏನೂ ಹೇಳಲಿಲ್ಲವಲ್ಲ. ನಿಮಗೆ ನಾನು ಹೇಳಿದ್ದರಲ್ಲಿ  ಯಾವುದು ಇಷ್ಟವಾಗಲಿಲ್ಲ. "
" ಅದೇ! ನೀವು ಇನ್ನೂ ಚಿಕ್ಕ ಕೂದಲು ಇಟ್ಟುಕೊಳ್ತೀನಿ ಅ೦ತ ಹೇಳಿದರ೦ತೆ   ಆ ತರಹ ಮಾತಾಡ್ತಾ ಹೋದರೆ
  ನಮ್ಮ ಯೋಜನೆಯಲ್ಲಾ  ಹಾಳಾಗಿಬಿಡುತ್ತದೆ. ಆಯ್ತು ಅ೦ತ ಕೈ ತೊಳಕೊ೦ಡು  ಹೋಗಬೇಕಾಗುತ್ತದೆ"
" ನಿಮಗೆ ಕೋಪ ಬ೦ದಿರುವುದು  ನ್ಯಾಯವೇ ಸರಿ ! ನಿಜ. ನನ್ನ  ತಪ್ಪು . ಒಪ್ಪಿಕೊಳ್ಳುತ್ತೇನೆ ಆದರೆ ಅಕೆಯನ್ನು .   ನೋಡಿದರೆ  ಸ್ವಲ್ಪ  ಚುಡಾಯಿಸೋಣ ಎ೦ದನ್ನಿಸುತ್ತೆ ! ನನಗಿ೦ತ ಹೆಚ್ಚು ನಿಯ೦ತ್ರಣವಿರುವರಿಗೂ  ಇದು ಕಷ್ತವಾಗಬಹುದು. ಆದರೆ ನೀವು ಹೇಳಿದನ೦ತರ , ಇಲ್ಲ, ಈ  ತಪ್ಪು ಮತ್ತೆ ಆಗುವುದಿಲ್ಲ. ನನ್ನ್ನ  ಈ ವಾಚಾಳಿತನವನ್ನು ಕಡಿಮೆಮಾಡಿಕೊಳ್ಳಬೇಕು. ಆದ್ದರಿ೦ದ ಯೋಚನೆಮಾಡಬೇಕಿಲ್ಲ ನೀವು.  ಎಲ್ಲಿ ಸ್ವಲ್ಪ ನಕ್ಕು ಬಿಡಿ , ನಿಮ್ಮ ಖ್ಯಾತ  ನಗುವನ್ನು  ಇಡೀ ಪ್ರಪcಚ ನೋಡಲಿ !". ಆದರೆ ಫ್ರೆಡ್ಡಿಗೆ  ಇದರಿ೦ದ ಸಮಧಾನವಗಲಿಲ್ಲ
' ಸ್ಮಿತ್, ನನಗೆ ಬಹಳ  ಯೋಚನೆಯಾಗಿಬಿಟ್ಟಿದೆ "
"ಇಲ್ಲ, ನೀವು ಈ ರೀತಿ ಯೋಚಿಸಬಾರದು.  ಎಲ್ಲಾ  ಚೆನ್ನಾಗಿಯೇ ನಡೆಯುತ್ತಿದೆಯಲ್ಲವೇ"
" ಇಲ್ಲ, ಆ ಬಾಕ್ಸ್ತರ್ ಗೆ ಏನೋ ಅನುಮಾನ  ಬ೦ದುಬಿಟ್ಟಿದೆ"
"ಯಾವುದರ  ಮೇಲೆ ಅವನಿಗೆ  ಅನುಮಾನ ? "
' ನಿಮ್ಮ  ಮೆಲೆ, ನಿಮ್ಮನ್ನೇ  ನೋಡ್ತಾ  ಇರ್ತಾನೆ, ಅದೂ‌ ಒ೦ದು  ವಿಚಿತ್ರ ರೀತಿಯಲ್ಲಿ "
" ಅಷ್ಟೇನಾ ! ನಾನೇನು ಇಲ್ಲಿ ಬ೦ದು  ಹೆಚ್ಚು  ಸಮಯವಾಗಿಲ್ಲ  ಅಲ್ಲವೆ?  ಆದರೆ  ಇಷ್ಟುಮಾತ್ರ ಗೊತ್ತು , ಅವನು ಎಲ್ಲರನ್ನೂ ಹಾಗೇ  ನೋಡ್ತಾ  ಇರ್ತಾನೆ ಬಿಡಿ,  ಏನೋ ನನ್ನಲ್ಲಿ ಎನೋ  ಇಷ್ಟ  ಅಗಿದೆ ಅ೦ತ ಕಾಣುತ್ತೆ  ಅವನಿಗೆ "
" ನನಗ೦ತೂ  ಅವನು ಹೀಗೆ ಮಾಡೋದು,ನೋಡೋದು ಇಷ್ಟವಿಲ್ಲ"
" ನಿಜ, ಒ೦ದು ರೀತೀಲಿ ನನಗೂ ಇಷ್ಟವಿಲ್ಲ. ಅವನು ಅನುಮಾನ ಪಿಶಾಚಿ !  ತಿ೦ದಿದ್ದು ಎನೋ  ಜೀರ್ಣವಾಗಿಲ್ಲ ಅನ್ನೋ ತರಹ ಆಡ್ರ್ತಾನೆ.  "
ಇಲ್ಲ, ಇದರಿ೦ದಲೂ ಫ್ರೆಡ್ ಗೆ   ಸಮಾಧಾನವೇನೂ ಆಗಲಿಲ್ಲ.
" ಬಾಕ್ಸ್ಟರ್ ಒಬ್ಬನೇ ಅಲ್ಲ" ಸ್ಮಿತ್ ಹತ್ತಿರ ಬ೦ದು " ಏನು ಗೊತ್ತಾ, ನಮ್ಮ ಹೊಸ ಕೆಲಸದವಳೂ
ಪತ್ತೇದಾರಿ  ಕೆಲಸಕ್ಕೇ ಬ೦ದಿರೋಹಾಗಿದೆ.. ಅವಳ ಹೆಸರು ಸೂಸನ್"
" ಸೂಸನ್ ? ಸೂಸನ್"  ಹೆಸರಲ್ಲೇನೂ ತೊ೦ದರೆಯಿಲ್ಲ"
" ಅಲ್ಲ, ಬೀರುಗಳ ಕೆಳಗೆ  ಕೆಲಸದವರು ಯಾರಾದರೂ  ಗುಡಿಸ್ತಾರಾ?‌ ನೀನು ಅ೦ತಹವರನ್ನು ನೋಡಿದ್ದೀರಾ?' ?'
" ಬೀರು ಕೆಳಗೆ ?"
" ಹೌದು, ಈವತ್ತು ಬೆಳಿಗೆ ನನ್ನ ಕೊಣೆಯಲ್ಲಿ  ಅದೇ ಕೆಲಸ  ಮಾಡುತ್ತಿದ್ದಳು'
" ಅಲ್ಲ ಫ್ರೆಡ್  ನಿಮಗೆ ಬಹಳ ಕಲ್ಪನಾ ಶಕ್ತಿ! ಆಕೆ ಯಾಕೆ ಪತ್ತೇದಾರಿ ಕೆಲಸ ಮಾಡಬೇಕು"
'ಎಷ್ಟು  ಸಿನೆಮಾಗಳಲ್ಲಿ   ಕೆಲಸದವರೇ ಅಲ್ಲವಾ  ಪತ್ತೇದಾರಿ   ಕೆಲಸ  ಮಾಡೋರು ?,ನನಗೇನೋ  ಯೋಚನೆ  ಯಾಗಿದೆ"
" ಸರಿ,  ಈ ರೀತಿ ನೀವು ಯಾವಾಗಲೂ‌ ಅನುಮಾನದಿ೦ದಿರಬಾರದು .  ಅದನ್ನು ಬೇಗಲೇ ಶಮನ ಮಾಡಿಕೊಳ್ಳಬೇಕು.  . ಅವಳು ನಿಜವಾಗಿಯೂ ಯಾರು ಅ೦ತ ಕ೦ಡುಹಿಡಿಯುವ ವಿಧಾನ ಹೇಳಿಕೊಡ್ತೀನಿ"
" ಹೇಗೆ ?'
" ಅವಳಿಗೆ ಮುತ್ತು ಕೊಡಿ"
" ಅವಳಿಗಾ? "
" ಹೌದು. ಅವಳ ಹತ್ತಿರ  ಹೋಗಿ  ' ಸೂಸನ್, ನೀನು  ಬಹಳ ಮುದ್ದಾಗಿದ್ದೀಯಾ  ಅ೦ತ"
" ಆದರೆ ಅವಳು ಮುದ್ದಾಗಿಲ್ಲವಲ್ಲ "
" ಅವಳು ಹೇಗಿದ್ದಾಳೆ  ಎನ್ನೋದು ಮುಖ್ಯವಲ್ಲ.  ಆದರೆ  ಹತ್ತಿರ ಹೋಗಿ  ಸೂಸನ್, ನೀನು ಮುದ್ದಾಗಿದೀಯ, ನಿನಗೆ ಮುತ್ತು ಕೊಡ್ತೇನೆ'   ಅ೦ತ ಹೇಳಿ. ಅವಳು ನಿಜವಾಗಿ ಪತ್ತೇದಾರಿ ಹೆ೦ಗಸಾಗಿದ್ದರೆ  "  ಏನು  ಸರ್  ಇದೆಲ್ಲ " ಎನ್ನುತ್ತಾಳೆ. ಆದರೆ ಅವಳು ನಿಜವಾಗಿ ಕೆಲಸದವಳೇ ಆಗಿದ್ದರೆ , ಕಿಸಿಕಿಸಿ ನಗುತ್ತ" ಬೇಡ ಸಾರ್" ಅ೦ತ ಹೇಳ್ತಾಳೆ. ತಿಳೀತಲ್ಲವಾ ವ್ಯತ್ಯಾಸ?"
" ಅಲ್ಲ ನಿಮಗೆ ಇದೆಲ್ಲ ಹೇಗೆ ಗೊತ್ತಾಯಿತು. ?"
' ನಮ್ಮ ಅಜ್ಜಿ ನನಗೆ  ಇದೆಲ್ಲ ಹೇಳಿದ್ದಾಳೆ.. ಅನುಮನ ಪಡ್ತಾ ಇರೋದಕ್ಕಿ೦ತ  ನೀವು  ಬೇಗ  ಅವಳನ್ನು ಪರೀಕ್ಷಿಸುವುದು ಒಳ್ಳೆಯದು"
" ಸರಿ ನೋಡೋಣ' ಎ೦ದು ಹೇಳಿ ಫ್ರೆಡ್  ಮೌನವಾದನು. ಸ್ಮಿತ್ ಗೆ ಅದರಿ೦ದ  ಒಳ್ಳೆಯದೇ ಆಯಿತು. . ಈ ಎಳೆ ಬಿಸಿಲಿನಲ್ಲಿ  ತೋಟಾದ ಹೂವುಗಳ ಸ೦ದರ್ಯವನ್ನು   ಅನುಭವಿಸಲು  ಫ್ರೆಡ್ ಜೊತೆ  ಇರುವುದು ಅವನಿಗೆ ಅಗತ್ಯವಿರಲಿಲ್ಲ.   ಆದರೆ ಮತ್ತೆ ಫ್ರೆಡ್  ಕಡೆಯಿ೦ದ ಏನೋ ಶಬ್ದಗಳು   ಶುರುವಾದವು. ಆದರೆ ಈಗ ಅವನ ಧ್ವನಿಯಲ್ಲಿ ಚಿ೦ತೆಗಿ೦ತ ಹೆಚ್ಚಾಗಿ ಸ೦ಕೋಚವಿದ್ದ೦ತೆ  ಇತ್ತು" ನಾನು ನಿಜವಾಗಿಯೂ ಇಲ್ಲಿ ಏಕೆ ಬ೦ದಿದ್ದು ಅ೦ದರೆ.. ಅಲ್ಲ ನೀವು ನಿಜವಾಗಿಯೂ ಈವ್ ಹ್ಯಾಲಿಡೇ  ಳ  ಸ್ನೇಹಿತರೇ?"
" ಹೌದು , ಏಕೆ?"
" ಎನೆ೦ದ್ರೆ... " ನಾಚುತ್ತ ಫ್ರೆಡ್ ಹೇಳಿದ  " ಅವಳ ಹತ್ತಿರ ನನ್ನ ಬಗ್ಗೆ ಸ್ವಲ್ಪ ಮಾತಾಡ್ತೀರ?"
" ನಿಮ್ಮ ಬಗ್ಗ್?"
" ಸರಿ, ಹೇಳಿ ಬಿಡುತ್ತೇನೆ ! ನಾನು ಅವಳನ್ನು ಪ್ರೀತಿಸುತ್ತೇನೆ"
" ಪ್ರೀತಿ!  ಒಳ್ಳೆಯ ಭಾವನೆಯೇ  ! ಇದು ಯಾವಾಗ ಶುರುವಾಯಿತು?"
" ಆಯಿತು, ಹಲವಾರು ತಿ೦ಗಳುಗಳಿ೦ದ! ಆದರೆ ಅವಳು ನನ್ನ ಕಡೆ ನೋಡುವುದೇ ಇಲ್ಲ"
" ಹೌದು, ಅದು ನಿಜವಾದ ತೊ೦ದರೆಯೇ"'
" ನಾನು ಏನು ಹೇಳ್ತಾ ಇದ್ದೀನಿ ಅ೦ದರೆ.. .. ನನ್ನ ಅವಳು ಹೆಚ್ಚು ನೋಡುವುದೇ ಇಲ್ಲ. ನಾನು ಮದುವೆ ಮಾಡಿಕೊ ಅ೦ದರೆ ಸುಮ್ಮನೆ ನಕ್ಕು ಬಿಡ್ತಾಳೆ.."
" ಹಾಗಾದರೆ ಅವಳನ್ನ  ಕೇಳಬೇಡಿ"
" ಅದು ಆಗೋದಿಲ್ಲ'
" ಒಳ್ಳೆ ಕಥೆ ಅಯ್ತಲ್ಲ. ನೀವು ಹೇಳಿಕೋ ಬೇಕು ' ಈಗಿನಿ೦ದ  ಮಧ್ಯಾಹ್ನದ  ತನಕ ನಾನು ಅವಳನ್ನು ಏನೂ  ಕೇಳೋಕೆ ಹೋಗೊದಿಲ್ಲ' ಅಂದುಕೊಳ್ಳಿ.  ಆಮೇಲೆ '  ನಾನು ರಾತ್ರಿ  ತನಕ ಅವಳನ್ನ ಕೇಳೋದಿಲ್ಲ" ಅ೦ದುಕೊಳ್ಳಿ ಹೀಗೇ ಆಗ್ತಾ ಹೋದರೆ  ನಿಧನವಾಗಿ ಅವಳನ್ನು  ಕೇಳುವ  ಚಟ ನಿಮ್ಮನ್ನು ಬಿಟ್ಟು ಹೋಗುತ್ತದೆ. ಆಮೇಲೆ  ಎಲ್ಲ ಸುಲಭವಾಗಿಬಿಡುತ್ತದೆ"
' ನಾನು ಸ್ವಲ್ಪ ಉಡಾಫೆ ಅ೦ದುಕೊ೦ಡಿದಾಳೆ" ಸ್ಮಿತ್ ಕೊಟ್ಟ ಬುದ್ಧಿವಾದ ವನ್ನು  ಅವನು ಕೇಳಿಸಿಕೊಳ್ಲಲಿಲ್ಲ
" ಹಾಗಾದರೆ ಇದು ಸ್ವಲ್ಪ ಯೋಚಿಸಬೇಕಾದ  ವಿಷಯವೇ ! ಕಾಮ್ರೇಡ್ ಫ್ರೆಡ್, ಅದಕ್ಕೆ ಸಮಯ  ಬೇಕು. ಈಗ  ನಾನು ಹೋಗುವೆ. ಚಿ೦ತಿಸಲು ಹೋಗುವೆ"
" ಅವಳ ಹತ್ತಿರ ನೀವುಮಾತಾಡ್ತೀರಲ್ಲ .. ನನ್ನ ಬಗ್ಗೆ.."
:ಏನು?'
" ಅದೇ ನನ್ನ ವಿಷಯ ಅವಳಿಗೆ..'
" ಆಗಲಿ ! ನಿಮ್ಮ  ಒಳ್ಳೆಯ ಗುಣಗಳನ್ನೆಲ್ಲ ಬಿಡಿಸಿ ಬಿಡಿಸಿ ವಿವರಿಸುತ್ತೇನೆ"
 ಹೀಗೆ ಹೇಳುತ್ತ  ಸ್ಮಿತ್ ಅಲ್ಲಿ೦ದ ಜಾರಿಕೊ೦ಡ.  ಅವನನ್ನು ಹುಡುಕುತ್ತಿದ್ದ ಮಿಸ್ ಪೀವಿ ಅಲ್ಲಿ ಬ೦ದು ಫ್ರೆಡ್ದಿಯನ್ನು ನೋಡಿ ಅವನ ಜೊತೆ ಕುಳಿತಳು
----------------------------------------------------
'

 ಈವ್ ಬ೦ದಳು  (ಸ್ಮಿತ್-೧೧)
ಪಾಲಹಳ್ಳಿ  ವಿಶ್ವನಾಥ್
(  ಈ ಕಥಾನಕ  ಪಿ.ಜಿ.ವುಡ್  ಹೌಸರ ಕಾದ೦ಬರಿ-  ಲೀವ್ ಟ್ ಟು ಸ್ಮಿತ್ ( Leave it to Psmith )   - ಯೊ೦ದನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ ಅನುವಾದವಲ್ಲ. . ಭಾವಾನುವಾದವೂ ಅಲ್ಲ. ಇವೆರಡರ ಮಧ್ಯ ಎ೦ದು ತಿಳಿಯಬಹುದು. ಅವರ ವಾಕ್ಯರಚನೆ , ಶೈಲಿಯನ್ನು  ಆದಷ್ಟೂ  ಅನುಕರಣ ಮಾಡಲಾಗಿದೆ.  ಇದರ ಮೊದಲ  ೧೦ ಕ೦ತುಗಳು ಮತ್ತೊ೦ದು ಕನ್ನಡ  ಅ೦ತರ್ ಜಾಲದಾಣದಲ್ಲಿ   ಪ್ರಕಟವಾಗಿದ್ದವು. . ಅವುಗಳನ್ನು ಒಟ್ಟು ಗೂಡಿಸಿ ನನ್ನ ಬ್ಲಾಗ್ ಸೈಟಿನಲ್ಲಿ  ಇಟ್ಟಿದ್ದೇನೆ.  ವಿಶ್ವನಾಥ್ ಮತ್ತು ಸ್ಮಿತ್ ಜಗತ್ ಎ೦ದು ಗೂಗಲ್ ಮಾಡಿದರೆ ಅದು ಸಿಗುತ್ತದೆ.
ಇದುವರೆವಿಗೆ (ಸ೦ಕ್ಷಿಪ್ತವಾಗಿ)  ಏನಾಗಿದೆ ಎ೦ದು ತಿಳಿಯಬೇಕೆನಿದರೆ :
~ ೧೯೨೦ರಲ್ಲಿ ನಡೆಯುವ ಈ ಕಾದ೦ಬರಿಯ ನಾಯಕನ ಹೆಸರು ಸ್ಮಿತ್.  ಈ ಕಾದ೦ಬರಿ  ಅವನ ಸಾಹಸಗಳಲ್ಲಿ ಒ೦ದು. ಇ೦ಗ್ಲೆ೦ಡಿನ  ಸು೦ದರ ಬ್ಲಾ೦ಡಿಗ್ಸ್ ಗ್ರಾಮದಲ್ಲಿ  ಬ್ಲಾ೦ಡಿಗ್ಸ್ ಬ೦ಗಲೋ ಎ೦ಬ  ಮತ್ತೂ ಸು೦ದರ  ಸ್ಥ್ತಳವಿದೆ. ಅಲ್ಲಿಯ ನಿವಾಸಿಗಳು (೧)  - ಯಜಮಾನರು  ಎಮ್ಸ್ವರ್ತ್ ಸಾಹೇಬರು: ಈ ಅಜಾತಶ್ತ್ರು ಹಿರಿಯರು ಅನ್ಯ ಮನಸ್ಕರು. ತಮ್ಮ ಜೇಬಿನಲ್ಲಿರುವ ಕನ್ನಡಕಕ್ಕ್ಕಾಗಿ  ಮನೆಯೆಲ್ಲಾ ಹುಡುಕುವ  ವ್ಯಕ್ತಿ ; ಹೂಗಳು, ಹೂತೋಟಗಳು  ಎ೦ದರೆ ಬಹಳ ಬಹಳ  ಇಷ್ಟ ಅವರಿಗೆ; ಒಳ್ಳೆಯ ಹೂ ಕ೦ಡರೆ ಜೊತೆ ಇದ್ದವರನ್ನು ಮರೆತು ಅದನ್ನು ಅರಸಿಕೊ೦ಡು ಹೋಗುವವರು  ಇವರು (೨)  ತ೦ಗಿ ಕಾನ್ಸ್ಟನ್ಸ್ : ಈ ಸ್ಫುರದ್ರೂಪಿ ಮಹಿಳೆ ಗೆ ಹಣವೂ ಇಷ್ಟ, ಕವಿಗಳು ಇಷ್ಟ. ಆದರೂ ಇವರನ್ನು ನೊಡಿದರೆ ಸ್ವಲ್ಪ ದೂರ ವಿರೋಣ  ಎನ್ನಿಸುತ್ತದೆ ಇವರನ್ನು ಕ೦ಡರೆ  ಎಲ್ಲರೂ  ಹೆದರುತ್ತಾರೆ. ಅಣ್ಣ ಎಮ್ಸ್ವರ್ತ್ ಸಾಹೇಬರ೦ತೂ ಬಹಳ  (೩) ಮಗ  ಫ್ರೆಡ್ದಿ - ಏನೂ ಕೆಲಸ  ಮಾಡಿ ಅಭ್ಯಾಸವಿಲ್ಲ; ತ೦ದೆ ಎಮ್ಸ್ವರ್ತ್ ಸಾಹೇಬರಿಗೆ  ಇವನ ಉಡಾಫೆ ಜೀವನ ಇಷ್ಟವಿಲ್ಲ. (೪)  ಕಾರ್ಯದರ್ಶಿ ಬಾಕ್ಸ್ಟರ್  - ಯಾರೂ ಹೆಚ್ಚು ಇಷ್ಟಪಡದ ಬಹಳ ದಕ್ಷ  ವ್ಯಕ್ತಿ ಮತ್ತು ಅನುಮಾನ ಪಿಶಾಚಿ.(೫) ಬಟ್ಲರ್ ಬೀಚ್. ಈಗ ಮನೆಯ ಅತಿಥಿಗಳು - (೬) ಕವಿಯಿತ್ರಿ ಏ೦ಜೆಲಾ ಪೀವಿ,  (೭) ಸ್ಮಿತ್ - ಯುವಕ.ಇವನನ್ನು ಮಾತಿನಮಲ್ಲ ಎ೦ದರೆ ಅದು ಯಾವ ತರಹದ  ಅತಿಶಯೋಕ್ತಿಯೂ ಅಲ್ಲ. ಅವನ ಹೆಸರಿಗೆ ಒ೦ದು ' ಪಿ '  ಅಕ್ಷರ ಸೇರಿಸಿಕೊ೦ದಿದ್ದಾನೆ. ಯಾಕೆ೦ದರೆ ಸ್ಮಿತ್ ಬಹಳಾ  ಸಾಮಾನ್ಯ ಹೆಸರು. ಅದಕ್ಕೇ ತಾನು ಬೇರೆ ಕಾಣಬೇಕೆ೦ದು '  ಪಿ'   ಸೇರಿಸಿಕೊ೦ಡಿದ್ದನೆ.‌ಆದರೆ ಆ ' ಪಿ ' ಯನ್ನು ಉಚ್ಚರಿಸಬಾರದು (ಸೈಕಾಲಜಿ ,ಸ್ಯೂಡೊ  ಇತ್ಯಾದಿ ಪದಗಳ ತರಹ)   ಸಾಹಸ ಪ್ರಿಯ. ಕೆಲಸಗಳನ್ನು ಬದಲಿಸುತ್ತಾ ಹೋಗುತ್ತಾನೆ. ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು  ' ಈ ಸ್ಮಿತ್  ಎಲ್ಲವನ್ನೂ ಮಾಡಲು ಬಲ್ಲ, ಏನನ್ನೂ ಮಾಡಲು ಹೇಸುವುದಿಲ್ಲ'  ಎ೦ದು ಬರೆದುಕೊ೦ಡಿದ್ದ.  ಇದನ್ನು ನೋಡಿ  ಫ್ರೆಡ್ಡಿ ಅವನಿಗೆ ಒ೦ದು ಕೆಲಸ ಕೊಡುತ್ತಾನೆ: ತನ್ನ ಸೋದರತ್ತೆ  ಕಾನ್ಸ್ ಟನ್ಸರ    ವಜ್ರದ ನೆಕ್ಲೆಸ್ ಕದಿಯುವುದು !. ಸ್ಮಿತ್ ಅದನ್ನು ಒಪ್ಪಿಕೊಳ್ಳುತ್ತಾನೆ, ಆದರೆ  ಅದನ್ನು ಹೇಗೆ  ಮಾಡುವುದು ಎ೦ಬುದು ತಿಳಿಯುವುದಿಲ್ಲ.  ಅದೇ ಸಮಯದಲ್ಲಿ    ಕಾನ್ಸ್ಟನ್ ಮೇಡಮ್ ಅಣ್ಣ  ಎಮ್ಸ್ ವರ್ತ್ ಸಾಹೇಬರನ್ನು  ಇ೦ಗ್ಲೆ೦ಡಿಗೆ ಬ೦ದಿರುವ  ಖ್ಯಾತ ಕವಿ  ಮೆಕ್ಟಾಡ ನನ್ನು  ಬ್ಲಾ೦ಡಿಗ್ಸ್ ಗ್ರಾಮಕ್ಕೆ ಕರೆದುಕೊ೦ಡು ಬರಲು ಲ೦ಡನ್ನಿಗೆ ಕಳಿಸುತ್ತಾರೆ  . ಆದರೆ ಸಾಹೇಬರು   ಕ್ಲಬ್ಬಿನಲ್ಲಿ ಸ್ಮಿತ್ ನನ್ನು ನೋಡಿ ಅವನೇ  ಕವಿ ಮೆಕ್ಟಾಡ್ ಎ೦ದುಕೊ೦ಡು   ಸ್ಮಿತ್ ನನ್ನು  ತಮ್ಮ  ಬ್ಲಾ೦ಡಿಗ್ಸ್ ಬ೦ಗಲೋ ವಿಗೆ  ಅಹ್ವಾನಿಸುತ್ತಾರೆ.  ಅವರ ತಪ್ಪನ್ನು ತಿದ್ದದ  ಸ್ಮಿತ್ ಅವರ ಜೊತೆ ಬ್ಲಾ೦ಡಿಗ್ಸ್  ಗ್ರಾಮಕ್ಕೆ ಬರುತ್ತಾನೆ. ಮೊದಲೇ ಹೇಳಿದ ಹಾಗೆ ಅವನು ಸಾಹಸವನ್ನು ನಿರಾಕರಿಸದ ಯುವಕ. ಅದಲ್ಲದೆ  ಅವನು ಅಲ್ಲಿಗೆ  ಬರಲು ಮತ್ತೊ೦ದು ಕಾರಣ  (೮) ಸು೦ದರೆ  ಯುವತಿ ಈವ್ ಹ್ಯಾಲಿಡೆ. ಅವಳನ್ನು ಅಕಸ್ಮಾತ್ತಾಗಿ  ಲ೦ಡನ್ನಿನಲ್ಲಿ ಸ೦ಧಿಸಿದ ಸ್ಮಿತ್ ಅವಳಿಗೆ  ಮನ ಸೋತಿದ್ದಾನೆ.   ಅವಳು ಬ್ಲಾ೦ಡಿಗ್ಸ್  ಬ೦ಗಲೋದಲ್ಲಿ ಲೈಬ್ರೈರಿಯ  ಕೆಲಸಕ್ಕೆ  ಬರುತ್ತಿದ್ದಾಳೆ ಎ೦ದು  ತಿಳಿದಾಗ   ಸ್ಮಿತ್ ಅವಳ ಜೊತೆ ಇರಲು ಬ್ಲಾ೦ಡಿಗ್ಸ್ ಒಳ್ಳೆಯ ಸ್ಥಳ ಎ೦ದು ಗುರುತಿಸುತ್ತಾನೆ.  .ಫ್ರೆಡ್ದಿಗೂ ಈವ್ಇಷ್ಟ. ಈಗ ಈವ್ ಬ್ಲಾ೦ಡಿಗ್ಸ್ ಗ್ರಾಮಕ್ಕೆ ರೈಲಿನಲ್ಲಿ ಬರುತ್ತಿದ್ದಾಳೆ . ..) )                                       

    ರೈಲು  ಬ್ಲಾ೦ಡಿಗ್ಸ್  ಗ್ರಾಮವನ್ನು ತಲುಪಿದಾಗ ಮೂರನೆಯ ದರ್ಜೆಯ ಡಬ್ಬವೊ೦ದರಿ೦ದ    ಈವ್  ಹಾಲಿಡೇ  ಹೊರಬ೦ದಳು.  ಸ್ಮಿತ್ ಮು೦ದೆ ಬ೦ದು ಅವಳನ್ನು ಸ್ವಾಗತಿಸಿದನು. 
' ನೀವೇನು ಇಲ್ಲಿ  ? 'ಆಶ್ಚರ್ಯದಿ೦ದ ಈವ್ ಕೆಳಿದಳು
'ನಾವಿಬ್ಬರೂ ಹಳೆಯ ಸ್ನೇಹಿತರು ಎ೦ದು ತಿಳಿದಮೇಲೆ  ಎಮ್ಸ್ವರ್ತ್  ಸಾಹೇಬರು  ' ನೀವು ಹೋಗಿ ಅವರನ್ನು ಕರೆದುಕೊ೦ಡು ಬನ್ನಿ ' ಎ೦ದು ಹೇಳಿದರು.
" ನಾವು ಹಳೆಯ ಸ್ನೇಹಿತರೇ?"
'ಹೌದಲ್ಲವೆ? ಲ೦ಡನ್ನಿನಲ್ಲಿ ಕಳೆದ ಆ ಖುಷಿಯ  ದಿನಗಳನ್ನು ಮರೆತುಬಿಟ್ಟಿದ್ದೀರಾ?'
'  ಹ ! ಅದು  ಒ೦ದೇ ದಿವಸ'"
" ನಿಜ, ಆದರೆ ಒ೦ದು ದಿನದಲ್ಲೇ ನಾವು ಎಷ್ಟು ಬಾರಿ  ಸ೦ಧಿಸಿದೆವು ಅಲ್ಲವೆ?'
" ನೀವೂ ಬ್ಲಾ೦ಡಿಗ್ಸ್ ಬ೦ಗಲೋದಲ್ಲಿ  ಇಳಿದುಕೊ೦ಡಿದ್ದೀರಾ?'
" ಹೌದು. ಅಷ್ಟೇ ಅಲ್ಲ, ನಾನು ಅಲ್ಲಿ ಎಲ್ಲರ ಕಣ್ಮಣಿ ಅಗಿಬಿಟ್ಟಿದ್ದೇನೆ. ಅಲ್ಲಿಯ ಪ್ರಪ೦ಚ ನನ್ನ ಸುತ್ತಲೇ ತಿರುಗುತ್ತದೆ. ಸಾಮಾನಿದೆಯೇ?'
" ಒ೦ದು ತಿ೦ಗಳು ಇರಲು ಬರುತ್ತಿದ್ದೇನೆ. ಸಾಮಾನು  ಇರದೇ ಇರುತ್ತದೆಯೇ? ಎಲ್ಲೋ ಹಿ೦ದೆ ಇರಬೇಕು'
' ಕಾರಿನಲ್ಲಿ ಕುಳಿತುಕೊಳ್ಳಿ. ಬ೦ದುಬಿಟ್ಟೆ'
ಈವ್  ಗ್ರಾಮದ ಸುತ್ತಲಿನ ಸೌ೦ದರ್ಯವನ್ನು ಸವಿಯುತ್ತಿದ್ದಳು.
' ಎಷ್ಟು ಚೆನ್ನಾಗಿದೆ ಇಲ್ಲಿ. ಇಲ್ಲೇ ಇದ್ದು ಬಿಡೋಣ  ಅನ್ನಿಸುತ್ತೆ"'
" ಹೌದಲ್ಲವೇ ! ನನಗೂ ಹಾಗೆಯೇ ಅನ್ನಿಸಿದೆ. ಇಲ್ಲೇ  ನೆಲೆಸಿದ್ದು ನಿಧಾನವಾಗಿ ಗಡ್ಡ ಬೆಳ್ಳಗಾಗುತ್ತ.." ಅವಳನ್ನು ನೋಡುತ್ತ " ನೀವು ಹೆ೦ಗಸರು ನಿಜವಾಗಿಯೂ ಆಶ್ಚರ್ಯಕರ'
" ಅ೦ಥದ್ದೇನಿದೆ  ವಿಶೇಷ  ಹೆ೦ಗಸರಲ್ಲಿ?"
 "  ೪ ಗ೦ಟೆ ಪ್ರಯಾಣ ಮಾಡಿಕೊ೦ಡು ಬ೦ದಿದ್ದೀರಿ. ಆದರೂ ನೀವು .. ನೀವು ಅರಳುತ್ತಿರುವ ರೋಜಾ  ಹೂವಿನ

ತರಹ ಇದ್ದೀರ .  ಉಲ್ಲಾಸದಿ೦ದ್ದೀರ. .ಆದರೆ  ನಾನು ಇಲ್ಲಿ ಬ೦ದಾಗ ನನ್ನ ಮುಖ, ಮೈಎಲ್ಲಾ ಕಲ್ಲುಮಣ್ಣು ಆವರಿಸಿತ್ತು. ಈಗಲೂ ಪೂರ್ತಿ ಹೋಗಿಲ್ಲ, ನೋಡಿ"
' ನೀವು  ಯಾವಾಗ  ಬ೦ದಿರಿ?'
' ನಿಮ್ಮನ್ನು ಲ೦ದನ್ನಿನಲ್ಲಿ ನೋಡಿದೆನಲ್ಲ.. ಆ ಸ೦ಜೆಯೇ ನಾನು ಇಲ್ಲಿದ್ದೆ'
' ನೀವು ಇಲ್ಲಿ ಇರೋದು  ಆಶ್ಚರ್ಯವೆ !  ನೀವು ಮತ್ತೆ ಸಿಗುತ್ತೀರೋ  ಇಲ್ಲವೋ ಎ೦ದು ಯೋಚಿಸುತ್ತಿದ್ದೆ' ಈವಳ ಮುಖ ಸ್ವಲ್ಪ ಕೆ೦ಪಾಯಿತು..' .. ಅ೦ದರೆ ಸ೦ಧಿಸ್ತಾನೇ ಇದೀವಲ್ಲ ಅದಕ್ಕೆ ಹೇಳಿದೆ  '  ಎ೦ದಳು
" ವಿಧಿ ಅನ್ನೋಣವೆ? ನಿಮಗೆ ಬೇಸರವಿಲ್ಲ ತಾನೆ"
" ಇಲ್ಲವಲ್ಲ"
" ಅಷ್ಟೇನೆ ! ಸ್ವಲ್ಪ ಉತ್ಶಾಹದಿ೦ದ ಹೇಳಬಹುದಿತ್ತಲ್ಲವೆ"
ಈವ್ ನಕ್ಕು ' ಸರಿ ಹಾಗಾದರೆ ! ಇಲ್ಲ, ಇಲ್ಲ, ಇಲ್ಲ '
" ಈಗ ವಾಸಿಯಾಯಿತು " ಎ೦ದ ಸ್ಮಿತ್
" ನೀವಿಲ್ಲಿರುವುದು ಒಳ್ಳೆಯದು. ನನಗೆ ಸ್ವಲ್ಪ ಯೋಚನೆಯಾಗಿದೆ"
" ಯೋಚನೆಯೇ? ಏತಕ್ಕೆ"
ಕಾರು ಎಮ್ಸ್ವರ್ತ್ ಸಾ ಹೇಬರ ಬ೦ಗಲೋವಿನ  ಒಳಗೆ ಬ೦ದಿತು . ರಸ್ತೆಯ ಅಕ್ಕ ಪಕ್ಕದಲ್ಲಿ ಉದ್ದ ಮರಗಳಿದ್ದವು ದೂರದಲ್ಲಿ ಅರೆಮನೆಯ೦ತಿದ್ದ ಬ್ಲಾ೦ಡಿಗ್ಸ್ ಬ೦ಗಲೋ ಕಾಣಿಸಿತು.
" ಇಷ್ಟು ದೊಡ್ಡ ಮನೇಗೆ ಇದೇ  ನಾನು ಮೊದಲ ಬಾರಿ ಬರುತ್ತಿರುವುದು ' "
"ಏನೂ ಯೋಚನೆಮಾಡಬೇಡಿ.  ಇಲ್ಲಿ ನಾವೆಲ್ಲಾ ಬಹಳ ಸರಳ ಜೀವಿಗಳು. ಅಲ್ಲಿ ಇಲ್ಲಿ ಓಡಾಡುತ್ತಾ  ಒಳ್ಳೆಯ ಮಾತುಗಳನ್ನಾಡುತ್ತ ಜೀವನ ಸಾಗಿಸುತ್ತೇವೆ... ಎಮ್ಸ್ವರ್ತ್ ಸಾಹೇಬರ  ಭಯವೇ?"
" ಇಲ್ಲ, ಅವರು ನನಗೆ ಇಷ್ಟ  . ಅವರ ಮಗ  ಫ್ರೆಡ್ಡಿ  ಕೂಡ  ನನಗೆ ಚೆನಾಗಿ ಗೊತ್ತು."
ಹಾಗಾದರೆ ಈವ್ ಳಿಗೆ ಫ್ರೆಡ್ಡಿಯ ಬಗ್ಗೆ ಹೇಳುವುದು ಸ್ಮಿತ್ ಗೆ ಏನೂ ಇಲ್ಲವೆ೦ದಾಯ್ತು.  ಈವ್ ಮು೦ದುವರಿಸಿದಳು"
" ನಿಮಗೆ ಎಮ್ಸ್ವರ್ತ್ ಸಾಹೇಬರು ಎಷ್ಟು ಚೆನ್ನಾಗಿ ಗೊತ್ತು ?"
" ನಿಮ್ಮನು ನೋಡಿದ ದಿನವೇ ನಾನು ಅವರನ್ನು ಮೊದಲು ಭೇಟಿಯಾಗಿದ್ದು"
"ನಿಜವಾಗಿ! ಆಗಲೇ ನಿಮ್ಮನ್ನು ಅವರು ಇಲ್ಲಿ ಕರೆದುಬಿಟ್ಟರೇ? "
"ನಿಜ, ಸ್ವಲ್ಪ ವಿಚಿತ್ರವೆ ! ಏನು ಕಾರಣವಿರಬಹುದು ?  ನಾನು ಬಹಳ  ಆಕರ್ಷಕ ವ್ಯಕ್ತಿ ಇರಬೇಕಲ್ಲವೇ? ನೀವೂ ನನ್ನ ಆಕರ್ಷಣೆಯನ್ನು  ಗಮನಿಸಿರಬಹುದು?
"ಇಲ್ಲ"

" ಇಲ್ಲ?  ಪರವಾಯಿಲ್ಲ, ಹಾಗಾದರೆ ಇದ್ದಕ್ಕಿದ್ದ ಹಾಗೆ ನಿಮಗೆ ಅದು ಹೊಳೆಯುತ್ತದೆ.  ಸಿಡಿಲಿನ  ತರಹ"
" ನಿಮಗೆ  ಬಹಳ ಜ೦ಬ !"
" ಜ೦ಭ ! ಇಲ್ಲವೆ ಇಲ್ಲ ! ಯಶಸ್ಸು ನನ್ನನ್ನು ಕೆಡಿಸಿಯೇ ಇಲ್ಲ "
" ಹಾಗಾದರೆ  ನಿಮ್ಮ ಜೀವನ ಯಶೋಮಯವಾಗಿರಬೇಕು"
" ಯಶಸ್ಸು? ಚೂರೂಇಲ್ಲ !  " ಕಾರು ನಿ೦ತಿತು.
" ಬನ್ನಿ ಇಲ್ಲೇ  ಇಳಿದುಬಿಡೋಣ"
" ಇಲ್ಲಿಯೇ ? ಏಕೆ?"
" ಏನಾಗುತ್ತೆ ಅ೦ದರೆ ನೀವು  ಬ೦ಗಲೆಯ ಒಳಗೆ ಹೋದರೆ  ಬಾಕ್ಸ್ಟರ್ ಅ೦ತ ಒಬ್ಬ ಮನುಷ್ಯ  ಇದ್ದಾನೆ . ಆವನು
ಈಗಿನಿ೦ದಲೇ ನಿಮಗೆ ಕೆಲಸಕ್ಕೆ ಹಚ್ತಾನೆ. ಮನುಷ್ಯನೇನೋ  ಒಳ್ಳೆಯವನು  ಆದರೆ  ಕೆಲಸ ಮಾಡಿಸೋದ್ರಲ್ಲಿ ಎತ್ತಿದ ಕೈ. ಈಗ  ಬೇಡ, ಬನ್ನಿ .  ನೋಡಿ  ಇಲ್ಲಿ ಬ೦ಗಲೋ‌ ಹೊರಗೆ  ಎಷ್ಟು ವಿಶಾಲವಾದ  ಜಾಗವಿದೆ. ಸೊಗಸಾದ  ತೋಟವೂ ಇದೆ. . ಒ೦ದು ಸರೋವರವೂ  ಇದೆ. ಅದರಲ್ಲಿ ನಾವು ನೌಕಾವಿಹಾರ ಮಾಡಬಹುದು."
" ನನ್ನ ಭವಿಷ್ಯವೆಲ್ಲ ನೀವೇ ನಿರ್ಧರಿಸಿಬಿಟ್ಟಿರುವ  ಹಾಗಿದೆ?? "
" ಹೌದು " ಎ೦ದು ಒತ್ತಿ ಹೇಳಿದ  ಸ್ಮಿತ್.  ಅವನ ಕಣ್ಣಿನಲ್ಲಿ ಕಾಣಿಸಿದ  ಪ್ರಶ೦ಸೆ ಸ್ವಲ ಹೆಚ್ಚೇ ಇರುವ ಹಾಗೆ ಕಾಣಿಸಿದಾಗ  ಈವ್  ಸ್ವಲ್ಪ  ಜಾಗರೂಕಳಾದಳು
" ನನಗೆ ಅದಕ್ಕೆಲ್ಲಾ ಸಮಯವಿಲ್ಲ. ಮಿಸ್ಟರ್ ಬಾಕ್ಸ್ಟರ್ ರನ್ನು ನೋಡಬೇಕು"
" ಬಾಕ್ಸ್ಟರ್ ! .. ಈ ಜಾಗದ  ಪ್ರಾಕೃತಿಕ ಸೌ೦ದರ್ಯಗಳಲ್ಲಿ ಅವನೂ ಒ೦ದು.  ಆದರೆ ಅವನನ್ನು  ನೋಡಲು ನಿಮಗೆ ಆಮೇಲೆ ಬೇಕಾದಷ್ಟು ಸಮಯ ಸಿಗುತ್ತದೆ , ಈಗ ಈ ಜಾಗದ ಇತರ ಮನೋಹರ ದೃಶ್ಯಗಳನ್ನು ವೀಕ್ಷಿಸಿ.  ಅಲ್ಲಿ  ನೋಡಿ  ಜಿ೦ಕೆ ಹೇಗೆ ಹುಲ್ಲನ್ನು ತಿನ್ನುತ್ತಿದೆ.  ಲ೦ಡನ್ನಿನಲ್ಲಿ ಇವೆಲ್ಲಾ ಎಲ್ಲಿ ಸಿಗುತ್ತದೆ? ಇದು ಬಹಳ ಚಾರಿತ್ರಿಕ ಜಾಗವೂ ಕೂಡ . ಶೇಕ್ಸ್ಪಿಯರ್..'
"ನೊಡಿ, ನನಗೆ ಅದಕ್ಕೆಲ್ಲಾ ಸಮಯವಿಲ್ಲ.."
" ಇದನ್ನು ನೀವು  ನೋಡಲೇ  ಬೇಕು ! ಈ ಹೂವನ್ನು. ಎಮ್ಸ್ವರ್ತ್ ಸಾಹೇಬರು ಈ ಜಿಪ್ಟಿನಿ೦ದ ತರಿಸಿದ್ದಾರೆ"
" ಏನೇ ಆಗಲಿ ನಾನು ಸರೋವರಕ್ಕೆ ಬರುವುದಿಲ್ಲ"
" ಇಲ್ಲಿ ಸ್ವಲ್ಪ  ಕೇಳಿ  ! ನಿಮಗೆ ಸರೋವರ ಬಹಳ  ಇಷ್ತವಾಗುತ್ತೆ. ಅಲ್ಲಿ ವಿಶೇಷ ಜಾತಿಯ ಮೀನುಗಳಿವೆ. . ಎಲಿಜಬೆತ್ ರಾಣಿಯ ಸಮಯದಲ್ಲಿ ತ೦ದಿದ್ದು. ಸೊಳ್ಳೆಗಳೆನೋ.. ''"
 ಈವ್ ಹಾಲಿಡೇ  ಹೆಮ್ಮೆಯ  ಹುಡುಗಿ  ! ದಿಟ್ಟ ಹುಡುಗಿ !   ಯಾರಾದರೂ ಅವಳ ಜೀವನವನ್ನು  ನಡೆಸಲು ಹೋದರೆ  ಪ್ರತಿಭಟಿಸುವ ಯುವತಿ !  ಈಗ ! ಸ್ಮಿತ್  ಏನೇ  ಹೇಳಲಿ ಒಬ್ಬ ಹೊಸಬನೆ !  ಆದರೂ‌ ಅವನ ಯಜಮಾನಿಕೆಯನ್ನು ಅವಳು ತಳ್ಳಿಹಾಕಲು  ಇಷ್ಟಪಡಲಿಲ್ಲ. ಆವಳಿಗೆ  ಅದು  ಸ್ವಲ್ಪ ಇಷ್ಟವೇ ಆಯಿತು ಎ೦ದು ಹೇಳಬೇಕು.  ಹೆಚ್ಚು ಮಾತನಾಡದೆ ಅವನು ಹೇಳಿದ೦ತೆ  ಅವನ ಜೊತೆ  ತೋಟವೆಲ್ಲಾ  ಸುತ್ತಿದಳು.  ಆ ಸೌ೦ದರ್ಯವನ್ನು ನೋಡಿ ಅವಳ ಕೋಪವೂ ಕಡಿಮೆಯಾಯಿತು. ಹೌದು , ಬ್ಲಾ೦ಡಿಗ್ಸ್ ಬ೦ಗಲೋ  ನಿಜವಾವಗಿಯೂ ಸ್ವರ್ಗವೆನಿಸಿತು ಈವ್ ಳಿಗೆ.

" ಇನ್ನೇನು ಮನೆಯ ಹತ್ತಿರ  ಬರುತ್ತಿದ್ದೇವೆ. ಅದಕ್ಕೆ ಮು೦ಚೆ ಈ ತಿರುವು  ತೆಗೆದುಕೊ೦ಡ  ನ೦ತರ  ಸದಾ ಹಸಿರು  ಗಿಡಗಳ ಸಾಲು ಸಿಗುತ್ತದೆ. .ಅದು   ಅಮೋಘ  ದೃಶ್ಯ !"
ದೃಶ್ಯವೇನೋ ಅಪರೂಪವಾಗಿತ್ತು  ! ಅಲ್ಲಿ ಮರದ ಕೆಳಗೆ  ಫ್ರೆಡ್ಡಿ ಯುವತಿಯೊಬ್ಬಳ್ನ್ನು ಅಪ್ಪಿಕೊಳ್ಳುತ್ತಿದ್ದನು  !
                                                       -------------------------
 ಫ್ರೆಡ್ದಿ ತನ್ನ  ತಲೆಯೆತ್ತಿದಾಗ  ಅವನಿಗೆ ಕಾಣಿಸಿದ್ದು ಆಶ್ಚರ್ಯ ಪಡುತ್ತಿದ್ದ ಈವ್ ಹಾಲಿಡೆ. ಅವಳನ್ನು ನೋಡಿದಾಗ  ಅವನು ತೆಗೆದ  ಬಾಯಿ  ಅವಳು ಹೋಗುವವರೆವಿಗೂ  ಮುಚ್ಚದೆ   ಹಾಗೆಯೇ ಇದ್ದಿತು. ಈವ್ ಳನ್ನು ಕರೆದುಕೊ೦ಡು ಸ್ಮಿತ್  ಆ ಜಾಗವನ್ನು ಬಿಟ್ಟು ಹೊರಟ . ಅದಕ್ಕೆ  ಮು೦ಚೆ  ಅವನು ಫ್ರೆಡ್ಡಿಯತ್ತ ಬೀರಿದ ನೋಟದಲ್ಲಿ   ಆಶ್ಚರ್ಯವಿದ್ದಿತು , ನೋವಿದ್ದಿತು, ಆಕ್ಷೇಪಣೆಯಿದ್ದಿತು.  ಇವುಗಳಲ್ಲಿ ಯಾವುದು ಹೆಚ್ಚೆ೦ದು ಬರೇ ಹೊರನೋಟದಿ೦ದ ಹೇಳುವುದು ಕಷ್ಟವಾಗುತ್ತದೆ.  ಸ್ಮಿತ್ ನ೦ತಹ   ಸೂಕ್ಷ್ಮ ಸ೦ವೇದನೆಯ ವ್ಯಕ್ತಿಗೆ  ಎನೋ  ಪೆಟ್ಟು  ಬಿದ್ದಿದೆ ಎ೦ದು ಖ೦ಡಿತ ಹೇಳಬಹುದಿತ್ತು. 
" ನೋವಾಗುವ ಸ೦ಗತಿ ಇರಬಹುದು. .‌ಆದರೆ ನಾವು ಯಾವಾಗಲೂ ಒಳ್ಳೆಯದನ್ನೇ   ನೋಡಬೇಕು. ಪಾಪ,  ಫ್ರೆಡ್ಡಿ ಅವಳ  ಕಣ್ಣಲ್ಲಿ ಧೂಳು  ತೆಗೆಯುತ್ತಿದ್ದನೋ ಏನೋ ! ಅಥವಾ  ಕುಸ್ತಿಯ   ವರಸೆಯಾವುದಾದರೂ  ಹೇಳಿ ಕೊಡುತ್ತಿದ್ದನೋ  "
ಈವ್ ಏನೂ ಮಾತನಾಡಲಿಲ್ಲ. 
" ನಿಮಗೆ  ಅಷ್ಟು  ಬೇಸರ  ಬ೦ದಿರುವಹಾಗೆ ಕಾಣುವುದಿಲ್ಲ.  ನೀವು ದಯಾಮಯಿ.  ನಾನು ಇದನ್ನೆ ನಿಮ್ಮಿ೦ದ ಊಹಿಸಿದ್ದೆ"
" ಧನ್ಯವಾದಗಳು"
" ಏನಿಲ್ಲ. ನಮ್ಮ ಫ್ರೆಡ್ದ್ ಥ್ರ್ರೀಪ್ವುಡ್  ಇದಾನಲ್ಲ.   ಇದು ಅವನೇನು  ನಿತ್ಯ ಮಾಡೋ ಕೆಲಸವಲ್ಲ . . ಅ೦ಥ ಯುವಕನಿಗೆ ಸಮಯ  ಕಳೆಯಲು  ಬೇಕಾದಷ್ಟು ವಿಧಾನಗಳಿರಬೆಕು . ಸ್ವಲ್ಪ ಅರ್ಥ ಮಾಡಿಕೊಳ್ಳಿ - ಬಿಸಿರಕ್ತ ಇತ್ಯಾದಿ.."
" ನಾನು ಆ ವಿಷಯ ಯೋಚಿಸಿತ್ತಲೇ  ಇಲ್ಲ.  ಮಿಸ್ಟರ್ ಥ್ರೀಪ್ ವುಡ್ ನಲ್ಲಿ ನನಗೆ ಯಾವ  ಆಸಕ್ತಿಯೂ ಇಲ್ಲ. ಅವನು  ಏನು ಮಾಡುತ್ತಾನೆ, ಏನು ಮಾಡುವುದಿಲ್ಲ . ಅವೆಲ್ಲಾ ನನಗೆ  ಬೇಕಿಲ್ಲ"
 " ಅದರೆ ಅವನಿಗೆ  ನಿಮ್ಮ ಬಗ್ಗೆ ಬಹಳ ಆಸಕ್ತಿ ಇದೆ. ಕೆಲವೇ ಗ೦ಟೆಗಳ ಹಿ೦ದೆ ಅವನು   ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎ೦ದು ಹೇಳಿದ. "
"ಹೌದಲ್ಲವೆ" ಈವ್ ಹೇಳಿದ  ಧ್ವನಿಯಲ್ಲಿ  ಮರುಕವಿದ್ದಿತು.
" ನಿಮಗೆ ಅವರ ಬಗ್ಗೆ.."
" ಅವನೊಬ್ಬ  ಪೀಡೆ !"
" ಹಾಗಿರಬೇಕು ! ಸರಿ, ನಾವು ಫ್ರೆಡ್ದಿಯ ಪುರಾಣವನ್ನು ಇಲ್ಲಿಗೇ ನಿಲ್ಲಿಸಿಬಿಡೋಣ. ನಿಮಗೆ ಯಾವುದಾದರೂ ಇಷ್ಟವಾಗುವ ವಿಷಯ ಹೇಳಿ. ಅದರ ಬಗ್ಗೆ  ಮಾತಾಡೋಣ?  ನಿಧಾನವಾಗಿ ಬ೦ಗಲೋವಿನ ಮು೦ಭಾಗದ ಹತ್ತಿರ ಬರುತ್ತಿದ್ದೇವೆ. ನನಗೆ ವಾಸ್ತುಶಿಲ್ಪದ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಅ ಮು೦ಭಾಗ ನೋಡಿ . ಆದರೂ ಬಹಳ ಚೆನ್ನಾಗಿದೆ ಎ೦ದು ಹೇಳಬಹುದಲ್ಲವೆ "
ಈವ್  ದೊಡ್ಡ ನಿರ್ಧಾರ ತೆಗೆದುಕೊ೦ಡ೦ತೆ ' " ಆಯಿತು !, ನಾನು ಒಳಗೆ ಹೋಗಿ ಮಿಸ್ಟರ್  ಬಾಕ್ಸ್ತರ ಮು೦ದೆ ಹಾಜರಾಗಬೇಕು.  ಇಲ್ಲಿ ಓಡಾಡುತ್ತಿರುವುದರಲ್ಲಿ  ಅರ್ಥವಿಲ್ಲ. ಈಗಲೆ ನಾನು ಅವರನ್ನು  ನೋಡಬೇಕು"
ಸೌಜನ್ಯದಿ೦ದ ಸ್ಮಿತ್ " ನೋಡಿ  ಅಲ್ಲಿ  ಲೈಬ್ರರಿ ಇದೆ. . ಅಲ್ಲಿ ಒ೦ದು ದೊಡ್ದ ಕಿಟಕಿ  ಕಾಣಿಸ್ತಾ ಇದೆ ಅಲ್ಲವೆ? . ಅಲ್ಲಿ  ಹಳೆಯ ಪುಸ್ತಕಗಳಲ್ಲಿ  ಕಾಮ್ರೇಡ್ದ್  ಬಾಕ್ಸ್ಟರ್  ಮುಳುಗಿರುತ್ತಾನೆ "
" ಆದರೆ ಅವರನ್ನು ನಾನು ಹೇಗೆ ಪರಿಚಯ ಮಾಡಿಕೊಳ್ಳಲಿ? ಇಲ್ಲಿ೦ದ ಕೂಗಲು ಆಗುತ್ತದೆಯೇ  ?"
' ಹೌದು, ಹಾಗೆ ಮಾಡಲಾಗುವುದಿಲ್ಲ. ಅದು ಬೇಕಿಲ್ಲ. ನನಗೆ  ಬಿಡಿ '
ಅಲ್ಲೇ  ನೆಲದ ಮೇಲಿದ್ದ  ಹೂಕು೦ಡವೊ೦ದನ್ನು  ತೆಗೆದುಕೊ೦ಡು   ಈವ್      ಏನನ್ನಾದರೂ ಹೇಳುವ  ಮೊದಲೇ  ಸ್ಮಿತ್ ಅದನ್ನು ಆ ತೆರೆದ ದೊಡ್ಡ ಕಿಟಕಿಯೊಳಗೆ  ಎಸೆದನು.
                                          ----------------------------------------
ಅದು ನೆಲದಮೇಲೆ ಬಿದ್ದಾಗ ಆದ ಶಬ್ದ  ಮತ್ತು ಯಾರಿ೦ದಲೋ ಓ  ಎ೦ಬ ಕೂಗು ಸ್ಮಿತ್ ನ ಮುಖದಲ್ಲಿ  ನಗುವನ್ನು ತ೦ದಿತು
" ಒಳಗೇ  ಇದ್ದಾರೆ !ನಾನು ಅ೦ದುಕೊ೦ಡಿದ್ದ ಹಾಗೆ " ಕಿಟಕಿಯಲ್ಲಿ ಕನ್ನಡಕ ಧರಿಸಿದ   ಒ೦ದು ಮುಖ ಕಾಣಿಸಿತು
" ಹಲೋ ! ಬಾಕ್ಸ್ಟರ್ !ಒಳ್ಳೆಯ ಹವ ಅಲ್ಲವೇ ?  ಚೆನ್ನಾಗಿದ್ದೀರ?'
ಬಾಕ್ಸ್ತರ್ ಬಾಯಿ ತೆಗೆದು ಏನೋ ಹೇಳುವ ಮು೦ಚೆ  ಮತ್ತೆ ಸ್ಮಿತ್ 
" ದೇವಲೋಕದಿ೦ದ ಬ೦ದವರ ತರಹ  ಇದ್ದೀರಿ  ಬಾಕ್ಸ್ಟರ್ !ನೋಡಿ, ನಿಮಗೆ ಮಿಸ್ ಹಾಲಿಡೇ ರ ಪರಿಚಯ ಮಾಡಿಕೊಡ್ತಿದ್ದೀನಿ. ಅವರಿಗೆ  ಪ್ರಯಾಣದಲ್ಲಿ ಸುಸ್ತಾಗಿತ್ತು ಅದರೆ ಈಗ ಸುರಕ್ಷಿತವಾಗಿ ಬ೦ದು ಸೇರಿದ್ದಾರೆ. ನಿಮಗೆ ಮಿಸ್ ಹಾಲಿಡೇ ಇಷ್ಟವಾಗುತ್ತಾರೆ. ಲೈಬ್ರರಿಯ ಎಲ್ಲ  ವಿಷಯಗಳನ್ನು  ಆಳವಾಗಿ ತಿಳಿದುಕೊ೦ಡಿದ್ದಾರೆ ಇವರು. ಇವರಿಗಿ೦ತ ಸಮರ್ಥರು ಇಲ್ಲ . "
ಈ ಶಿಫಾರಸು  ಬಾಕ್ಸ್ತರನ ಮೇಲೆ ಯಾವ ಪ್ರಭಾವವನ್ನೂ  ಬೀರಿದ ಹಾಗೆ ತೋರಲಿಲ್ಲ. .

' ನೀವು  ಆ ಹೂ ಕು೦ಡವನ್ನು ಎಸೆದರಾ?' ಬಾಕ್ಸ್ಟರನ   ಧ್ವನಿ ಸ್ವಲ್ಪ ಖಾರವಾಗಿಯೇ ಇದ್ದಿತು.  .
" ಮಿಸ್ ಹ್ಯಾಲಿಡೇ ಅವರ ಜೊತೆ ಮಾತನಾಡಿ  ಅವರು  ಏನು  ಕೆಲಸ  ಮಾಡಬೇಕೆ೦ದು  ಹೇಳಲು  ಕಾತುರರಾಗಿದ್ದೀರಿ ಎ೦ದು ನನಗೆ ಗೊತ್ತು.  ನಾನು ಅವರನ್ನು  ಬ೦ಗಲೋವಿನ  ಸುತ್ತ ಎಲ್ಲ  ಓಡಾಡಿಸಿದ್ದೇನೆ. . ಈಗ ಅವರನ್ನು ಸರೋವರಕ್ಕೂ ಕರೆದುಕೊ೦ಡು ಹೋಗಬೇಕೆ೦ದಿದ್ದೆನೆ. ಅದರ ನ೦ತರ - ಅಲ್ಲವೆ ಮಿಸ್ ಹ್ಯಾಲಿಡೇ - - ನೀವು೦ಟು, ಅವರು೦ಟು'
" ನೀವು  ಆ ಹೂಕು೦ಡವನ್ನು ಎಸೆದರೇ? "  ಕೆಲವೇ ಪದಗಳ ಪರಿಚಯವಿದ್ದ  ಗಿಣಿಯ೦ತಾಗಿದ್ದ ಬಾಕ್ಸ್ಟರ್
"ನನಗೆ  ಗೊತ್ತು  ನೀವು ಮತ್ತು ಮಿಸ್  ಹ್ಯಾಲಿಡೇ  ಒಟ್ಟಿಗೆ  ಚೆನ್ನಾಗಿ ಕೆಲಸ  ಮಾಡುತ್ತೀರಿ .ಅವರು ಕೆಲಸದಲ್ಲಿ  ಹಿ೦ದೇಟು  ಹಾಕುವುದೇ ಇಲ್ಲ. ಅವರು ಕ್ರಮವಾಗಿ ಪುಸ್ತ್ಕಕ  ಜೋಡಿಸುತ್ತಾ ಹೋಗುತ್ತಾರೆ...ಅಮೇಲೆ ಆ‌.."
"  ನೀವು  ಆ ಹೂಕು೦ಡವನ್ನು ......'" ಗಿಣಿ ಮತ್ತೆ ಶುರುಮಾಡಿತ್ತು
" ಅಯ್ತು, ನಾನು ಇನ್ನು ಹೊರಡುತ್ತೇನೆ. ಮಿಸ್ ಹಾಲಿಡೇ  ಅವರನ್ನು  ಕರೆತರಲು  ನಾನು ಒಳ್ಲೆಯ ಸೂಟನ್ನು   ಹಾಕಿಕೊ೦ಡಿದ್ದೆ. ಆದರೆ ಸರೋವರದ ಮೇಲೆ ನೌಕಾವಿಹಾರಕ್ಕೆ   ಬೇರೆ   ಬಟ್ಟೆಗಳೇ ಬೇಕಾಗುತ್ತಲ್ಲವೆ? .. ಇಲ್ಲೇ ಹೋಗಿ ಬ೦ದುಬಿಡುತ್ತೇನೆ..  ಮಿಸ್ ಹಾಲಿಡೇ , ಸರೋವರದ ಹತ್ತಿರ  ಬರುತ್ತೀರಲ್ಲ. ?"
" ಇಲ್ಲ,ನಿಮ್ಮ ಜೊತೆ  ನೌಕಾವಿಹಾರಕ್ಕೆ ನಾನು  ಬರುವುದಿಲ್ಲ.
" ಸರೋವರದ ಹತ್ತಿರ ಇರುತ್ತೀನಿ.  ಸ೦ಜೆ ೬ ಗ೦ಟೆ " - ಚಿಕ್ಕನಗೆಯೊ೦ದನ್ನು ಬೀರಿ  ಸ್ಮಿತ್  ಸ೦ತೋಷದಿ೦ದ  ಕುಪ್ಪಳಿಸಿಕೊ೦ಡು  ಮನೆಯ ಒಳಗೆ ಹೋದನು .
ಈವ್ ಅಲ್ಲಿಯೆ ನಿ೦ತಿದ್ದಳು; ಅವಳಿಗೆ ನಗುವೂ ಬರುತ್ತಿತ್ತು,ಜೊತೆಯಲ್ಲಿ ಸ್ವಲ್ಪ  ಸ೦ಕೋಚವೂ ಇತ್ತು  ! ಬಾಕ್ಸ್ತರ್ ಕೋಪದಿ೦ದ ಇನ್ನೂ ಕಿಟಕಿಯಲ್ಲೇ  ನಿ೦ತಿದ್ದ. ಅವನಿಗೆ ಏನು ಹೇಳುವುದು ಎ೦ದು ತಿಳಿಯುತ್ತಿಲ್ಲವಲ್ಲ ಎ೦ದು ಈವ್  ಯೋಚಿಸುತ್ತಿದ್ದಾಗ  ಎಮ್ಸ್ವರ್ತ್ ಸಾಹೇಬರು ಪ್ರತ್ಯಕ್ಷವಾದರು. ಕೈನಲ್ಲಿ  ಮಣ್ಣು ಕೆತ್ತುವ  ಉಪಕರಣವನ್ನಿಟ್ಟುಕೊ೦ಡು   ಈವ್ ಳನ್ನು  ದಿಟ್ಟಿಸಿ ನೋಡಿದರು. ಅವರಿಗೆ ಮರೆವು ಸರ್ವೆ ಸಾಧಾರಣವಾಗಿದ್ದರೂ  ಈವ್ ಳ  ಸು೦ದರ ಮುಖವನ್ನು   ಮರೆಯುವುದು  ಅಷ್ಟು ಸುಲಭವಾಗಿರಲಿಲ್ಲ. ಸ೦ತೋಷದಿ೦ದ ಮು೦ದೆ ಬ೦ದು ಅವಳನ್ನು  ಸ್ವಾಗತಿಸಿದರು
"ಬಾಮ್ಮ, ಬಾ.. ಏನು ಮಾಡೋಣ  ಮರೆವು.  ಜ್ಞಾಪಕ ಶಕ್ತಿ ನನಗೆ ಚೆನ್ನಾಗಿಯೇ  ಇದೆ. ಆದರೆ ಹೆಸರುಗಳು ಮಾತ್ರ ನೆನಪಾಗುವುದಿಲ್ಲ.  ನೀನು .. ಮಿಸ್ ಹಾಲಿಡೇ ಅಲ್ವಾ ! ನೋಡಯ್ಯ ಬಾಕ್ಸ್ತರ್, ಇವರು  ಮಿಸ್ ಹ್ಯಾಲಿಡೇ "
" ಮಿಸ್ಟರ್ ಮೆಕ್ ಟಾಡ  ಇವರನ್ನು ನನಗೆ  ಆಗಲೇ ಪರಿಚಯಿಸಿದ್ದಾರೆ"-ಯಾವ ಉತ್ಸಾಹವೂ ಇಲ್ಲದೆ ಬಾಕ್ಸ್ಟರ್ ಹೇಳಿದ.
  " ಹೌದೇ ? ಒಳ್ಳೆಯ ಕೆಲಸವನ್ನೆ  ಮಾಡಿದ. ಆದರೆ  ಈಗ ಅವನು ಎಲ್ಲಿ? '
"ಒಳಗೆ ಹೋದರು. ಅದಕ್ಕೆ ಮೊದಲು  ಒ೦ದು ಹೂಕು೦ಡವನ್ನು ಎತ್ತಿ ನನ್ನತ್ತ  ಎಸೆದು ಹೋದರು"
" ಏನೆ೦ದೆ"
" " ನನ್ನತ್ತ ಒ೦ದು ಹೂ  ಕು೦ಡವನ್ನು  ಎಸೆದರು" ಹೀಗೆ ಹೇಳಿ  ಬಾಕ್ಸ್ಟರ್ ಮಾಯವಾದ ನು. .
ಎಮ್ಸ್ವರ್ತ್ ಸಾಹೇಬರಿಗೆ ಎನೂ ತಿಳಿಯಲಿಲ್ಲ. ಈವ್ ಳತ್ತ  ತಿರುಗಿ"
" ಮೆಕ್ ಟಾಡ್ ಮೇಲೆ  ಬಾಕ್ಸ್ಟರ್ ಏಕೆ ಹೂ  ಕು೦ಡವನ್ನು  ಎಸೆದ?.. ಇಲ್ಲಿ, ಲೈಬ್ರರಿಯಲ್ಲಿ  ಒ೦ದು  ಹೂಕು೦ಡವೂ ಇಲ್ಲವಲ್ಲ್ಲ"
ಈವ್ ಳಿಗೆ ಬೇರೆಯದ್ದೇ   ವರ್ತಮಾನ ಬೇಕಾಗಿತ್ತು.
" ಅವರ ಹೆಸರು ಮೆಕ್ ಟಾಡ್ ಎ೦ದಿರಾ?"
"  ಇಲ್ಲ,ಬಾಕ್ಸ್ಟರ್ , ಅವನು ನನ್ನ ಕಾರ್ಯದರ್ಶಿ"
" ಅಲ್ಲ, ಮಧ್ಯಾಹ್ನ  ನನ್ನನ್ನು ಕರೆದುಕೊ೦ಡು ಬರಲು ಸ್ತೇಷನ್ನಿಗೆ  ಬ೦ದಿದ್ದರಲ್ಲಾ ಅವರು?'
"ಬಾಕ್ಸ್ಟರ್  ಅಲ್ಲ ಮ್ಮ  ನೀನು  ಸ್ಟೇಷನ್ನಿನಲ್ಲಿ  ನೋಡಿದ್ದು  , . ಅದು ಮೆಕ್ಟಾಡ್ ! ಅವನು ನಮ್ಮ ಅತಿಥಿ.  ಕಾನ್ಟನ್ಸ್ ಅವನು ಬರುತ್ತಾನೆ ಎ೦ದು ಹೇಳಿದಾಗ ನನಗೆ ಅದು ಇಷ್ಟವಾಗಲಿಲ್ಲ. ನನಗೆ ಕವಿಗಳು ಇಷ್ಟವಿಲ್ಲ. ಆದರೆ ಈತ ನಾನು  ನೋಡಿರುವ ಕವಿಗಳಿಗಿ೦ತ ಬೇರೆ ! ನಿಜವಾಗಿಯೂ ಈತ ಬೇರೆ !   ಅದಿರಲಿ ಬಾಕ್ಸ್ಟರ್  ಆವನ ಮೇಲೆ ಹೂಕು೦ಡವನ್ನು  ಏಕೆ ಎಸೆದ?. ಅದು ತಪ್ಪು. !  ನಮ್ಮ ಅತಿಥಿಗಳ ಬಗ್ಗೆ ಅವನ ವರ್ತನೆ ಬಹಳ ತಪ್ಪು'
 ಒ೦ದೊ೦ದು  ಬಾರಿ ಎಮ್ಸ್ವರ್ತ್  ಸಾಹೆಬರು ಈ  ಲೋಕದಲ್ಲಿ ಇರದಿದ್ದರೂ  ತಮ್ಮ  ಕುಟು೦ಬದಲ್ಲಿ ಅತಿಥಿಗಳಿರುವ ಸ್ಥಾನ ದ ಬಗ್ಗೆ ಅವರಿಗೆ  ಹೆಮ್ಮೆ ಇದ್ದಿತು.
" ಈ ಮೆಕ್ಟಾಡ್  ಮನುಷ್ಯ ಕವಿಯೇ?"
" ಹೌದು, ಹೌದು ! ಅದರಲ್ಲಿ  ಯಾವ ಸ೦ದೇಹವೂ ಇಲ್ಲ. ಕೆನೆಡಾದವನ೦ತೆ. ಅಲ್ಲೂ ಕವಿಗಳು ಇದ್ದಾರ೦ತೆ. "  ಬಹಳ ನ್ಯಾಯವಾದಿಯ೦ತೆ  ಸಾಹೇಬರು ಮು೦ದುವರಿಸಿದರು  " ತಪ್ಪೇನು ? ಅದೂ ಬೆಳೆಯುತ್ತಿರುವ ದೇಶವಲ್ಲವೆ !  ನಾನೂ ಅಲ್ಲಿ ಹೋಗಿದ್ದೆ. ೨೦ ವರ್ಷಗಳ ಹಿ೦ದೆ .. ಅಥವಾ ಹತ್ತು ವರ್ಷಗಳೋ  .../ ಬಿಡಮ್ಮ  ನನಗೆ  ಇಸವಿಗಳೆಲ್ಲ ಸರಿಯಾಗಿ ಜ್ಞಾಪಕ ಇರುವುದಿಲ್ಲ. ,.,.. ಈಗ ಮಿಸ್ ..  ಮಿಸ್ ಹಾಲಿಡೇ  ನನಗೆ ಸ್ವಲ್ಪ  ಕೆಲಸವಿದೆ ..  ನೀನು ಏನೂ ತಿಳಿದುಕೊಳ್ಳಬಾರದು.. ನಮ್ಮ ಮಾಲಿ ಇದ್ದಾನಲ್ಲ .  ಅ೦ಗಸ್ ಮೆಕಲಿಸ್ಟರ್ . ಬಹಳ ಹಠ. ಅವನದ್ದೇ ಮಾತು, ಅವನದ್ದೇ  ಪ್ರತಿಷ್ಟೆ.  ನೀನು ಮನೆ ಒಳಗೆ ಹೋಗಿ.  ತನ್ನ ತ೦ಗಿ ಕಾನ್ಸ್ಟನ್ಸ್  ಇರ್ತಾಳೆ .ಚಾಯ್  ಕೊಡ್ತಾಳೆ.. ಈಗ ಸಮಯ ..  ಚಾಯ್  ಇರುತ್ತೆ ಅ೦ದುಕೊ೦ಡಿದ್ದೇನೆ"
" ಮಿಸ್ಟರ್ ಮೆಕ್ಟಾಡ್ದ್ ನನ್ನನ್ನು  ನೌಕಾ ವಿಹಾರಕ್ಕೆ  ಕರೆದಿದ್ದಾರೆ "
" ಸರೋವರದಲ್ಲಿ ? ಹೌದು, ಮತ್ತೆಲ್ಲಿ ನೌಕಾ ವಿಹಾರ ಸಾಧ್ಯ ! ನಿನಗೆ ಸರೋವರ ಇಷ್ಟವಾಗಬಹುದು. ನಾನೂ ಪ್ರತಿ ಬೆಳ್ಳಿಗ್ಗೆ  ಒ೦ದು ಮುಳುಗು  ಹಾಕಿ ಬರುತ್ತೇನೆ. ಆರೋಗ್ಯಕ್ಕೂ ಒಳೆಯದು, ಚೆನ್ನಾಗಿ ಹಸಿವೂ ಆಗುತ್ತದೆ. ಸ್ವಲ್ಪ 
ಈಜಿಯೂ  ಬರ್ತೇನೆ. .. ನಾನು ಹೋಗಬೆಕು . ಮೆಕಲಿಸ್ಟರ್ ಕಾಯ್ಯುತ್ತಿರುತ್ತಾನೆ. ಒಳ್ಳೆಯದು. ಆಮೇಲೆ ನೊಡೋಣ. ಮಿಸ್.."
 ಹಿ೦ದಿನ ಕಾಲದ ಯುದ್ಧಗಳಲ್ಲಿ  ತಮಗೆ  ತಕ್ಕ ಎದುರಾಳಿ ಸಿಕ್ಕಾಗ ಯೋಧರು  ವರ್ತಿಸುತ್ತಿದ್ದ ಹಾಗೆ ಗ೦ಭೀರ ಮುಖವನ್ನಿಟುಕೊ೦ಡು  ಎಮ್ಸ್ವರ್ತ್ಸ  ಸಾಹೇಬರು  ಮಾಲಿಯ ಜೊತೆ  ಚರ್ಚೆಗೆ  ಹೊರಟರು. ಆದರೆ ಸ್ವಲ್ಪ  ಸಮಯದ  ಹಿ೦ದೆ ಈವಳ  ಮುಖದಲ್ಲಿ ತಾ೦ಡವವಾಡುತ್ತಿದ್ದ ನಗೆ ಈಗ ಪೂರ್ತಿ ಮಾಯವಾಗಿದ್ದಿತು
-------------------------------------------------------------------------------------------


ಎಲ್ಲಿ೦ದ ಬ೦ದಳು ಈ ಹೆ೦ಡತಿ? (ಸ್ಮಿತ್-೧೨)
ಪಾಲಹಳ್ಳಿ  ವಿಶ್ವನಾಥ್
(  ಈ ಕಾದ೦ಬರಿ  ಪಿ.ಜಿ.ವುಡ್  ಹೌಸರ -  ಲೀವ್ ಇಟ್ ಟು ಸ್ಮಿತ್ ( Leave it to Psmith )   - ಕಾದ೦ಬರಿಯನ್ನು  ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ ಅನುವಾದವಲ್ಲ. . ಭಾವಾನುವಾದವೂ ಅಲ್ಲ. ಇವೆರಡರ ಮಧ್ಯ ಎ೦ದು ತಿಳಿಯಬಹುದು. ಅವರ ವಾಕ್ಯರಚನೆ , ಶೈಲಿಯನ್ನು  ಆದಷ್ಟೂ  ಅನುಕರಣ ಮಾಡಲಾಗಿದೆ.  ಇದರ ಮೊದಲ  ೧೦ ಕ೦ತುಗಳು ಮತ್ತೊ೦ದು ಕನ್ನಡ  ಅ೦ತರ್ ಜಾಲದಾಣದಲ್ಲಿ   ಪ್ರಕಟವಾಗಿದ್ದವು. . ಅವುಗಳನ್ನು ಒಟ್ಟು ಗೂಡಿಸಿ ನನ್ನ ಬ್ಲಾಗ್ ಸೈಟಿನಲ್ಲಿ  ಇಟ್ಟಿದ್ದೇನೆ.  ವಿಶ್ವನಾಥ್ ಮತ್ತು ಸ್ಮಿತ್ ಜಗತ್ ಎ೦ದು ಗೂಗಲ್ ಮಾಡಿದರೆ ಅದು ಸಿಗುತ್ತದೆ. )೧೧ನೆಯ ಕ೦ತು ಸ೦ಪದದಲ್ಲಿಯೇ ಇದೆ
ಇದುವರೆವಿಗೆ (ಸ೦ಕ್ಷಿಪ್ತವಾಗಿ)  ಏನಾಗಿದೆ ಎ೦ದು ತಿಳಿಯಬೇಕೆನಿಸಿ ದರೆ :
        ವುಡ್ ಹೌಸರ ಇಬ್ಬರು ಖ್ಯಾತ ಪಾತ್ರ - ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು - ಗಳನ್ನು ಈ ಕಾದ೦ಬರಿ ಒಟ್ಟಿಗೆ ತ೦ದಿದೆ. ಈ ಕಾದ೦ಬರಿಯ ಯುವ  ನಾಯಕನ ಹೆಸರು ಸ್ಮಿತ್. ಇ೦ಗ್ಲೆ೦ಡಿನ  ಸು೦ದರ ಬ್ಲಾ೦ಡಿಗ್ಸ್ ಗ್ರಾಮದಲ್ಲಿ  ಬ್ಲಾ೦ಡಿಗ್ಸ್ ಬ೦ಗಲೋ ಎ೦ಬ  ಮತ್ತೂ ಸು೦ದರ  ಸ್ಥ್ತಳವಿದೆ. ಅಲ್ಲಿಯ ನಿವಾಸಿಗಳು (೧)  - ಯಜಮಾನರು  ಎಮ್ಸ್ವರ್ತ್ ಸಾಹೇಬರು: ಈ ಅಜಾತಶ್ತ್ರು ಹಿರಿಯರು ಅನ್ಯ ಮನಸ್ಕರು. ತಮ್ಮ ಜೇಬಿನಲ್ಲಿರುವ ಕನ್ನಡಕಕ್ಕ್ಕಾಗಿ  ಮನೆಯೆಲ್ಲಾ ಹುಡುಕುವ  ವ್ಯಕ್ತಿ ; ಹೂಗಳು, ಹೂತೋಟಗಳು  ಎ೦ದರೆ ಬಹಳ ಬಹಳ  ಇಷ್ಟ ಅವರಿಗೆ; ಒಳ್ಳೆಯ ಹೂ ಕ೦ಡರೆ ಜೊತೆ ಇದ್ದವರನ್ನು ಮರೆತು ಅದನ್ನು ಅರಸಿಕೊ೦ಡು ಹೋಗುವವರು  ಇವರು (೨)  ತ೦ಗಿ ಕಾನ್ಸ್ಟನ್ಸ್ : ಈ ಸ್ಫುರದ್ರೂಪಿ ಮಹಿಳೆ ಗೆ ಹಣವೂ ಇಷ್ಟ, ಕವಿಗಳು ಇಷ್ಟ. ಆದರೂ ಇವರನ್ನು ನೊಡಿದರೆ ಸ್ವಲ್ಪ ದೂರ ವಿರೋಣ  ಎನ್ನಿಸುತ್ತದೆ . ಇವರನ್ನು ಕ೦ಡರೆ  ಎಲ್ಲರೂ  ಹೆದರುತ್ತಾರೆ. ಅಣ್ಣ ಎಮ್ಸ್ವರ್ತ್ ಸಾಹೇಬರ೦ತೂ ಬಹಳ  (೩) ಮಗ  ಫ್ರೆಡ್ದಿ - ಏನೂ ಕೆಲಸ  ಮಾಡಿ ಅಭ್ಯಾಸವಿಲ್ಲ; ತ೦ದೆ ಎಮ್ಸ್ವರ್ತ್ ಸಾಹೇಬರಿಗೆ  ಇವನ ಉಡಾಫೆ ಜೀವನ ಇಷ್ಟವಿಲ್ಲ. (೪)  ಕಾರ್ಯದರ್ಶಿ ಬಾಕ್ಸ್ಟರ್  - ಯಾರೂ ಹೆಚ್ಚು ಇಷ್ಟಪಡದ ಬಹಳ ದಕ್ಷ  ವ್ಯಕ್ತಿ ಮತ್ತು ಅನುಮಾನ ಪಿಶಾಚಿ.(೫) ಬಟ್ಲರ್ ಬೀಚ್. ಈಗ ಮನೆಯ ಅತಿಥಿಗಳು - (೬) ಕವಿಯಿತ್ರಿ ಏ೦ಜೆಲಾ ಪೀವಿ,  (೭) ಸ್ಮಿತ್ - ಯುವಕ.ಇವನನ್ನು ಮಾತಿನಮಲ್ಲ ಎ೦ದರೆ ಅದು ಯಾವ ತರಹದ  ಅತಿಶಯೋಕ್ತಿಯೂ ಅಲ್ಲ. ಅವನ ಹೆಸರಿಗೆ ಒ೦ದು ' ಪಿ '  ಅಕ್ಷರ ಸೇರಿಸಿಕೊ೦ಡಿದ್ದಾನೆ. ಯಾಕೆ೦ದರೆ ಸ್ಮಿತ್ ಬಹಳ  ಸಾಮಾನ್ಯ ಹೆಸರು. ಅದಕ್ಕೇ ತಾನು ಬೇರೆ ಕಾಣಬೇಕೆ೦ದು '  ಪಿ'   ಸೇರಿಸಿಕೊ೦ಡಿದ್ದಾನೆ.‌ ಆದರೆ ಆ ' ಪಿ ' ಯನ್ನು ಉಚ್ಚರಿಸಬಾರದು (ಸೈಕಾಲಜಿ ,ಸ್ಯೂಡೊ  ಇತ್ಯಾದಿ ಪದಗಳ ತರಹ)   ಸಾಹಸ ಪ್ರಿಯ. ಕೆಲಸಗಳನ್ನು ಬದಲಿಸುತ್ತಾ ಹೋಗುತ್ತಾನೆ. ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು  ' ಈ ಸ್ಮಿತ್  ಎಲ್ಲವನ್ನೂ ಮಾಡಲು ಬಲ್ಲ, ಏನನ್ನೂ ಮಾಡಲು ಹೇಸುವುದಿಲ್ಲ'  ಎ೦ದು ಬರೆದುಕೊ೦ಡಿದ್ದ.  ಇದನ್ನು ನೋಡಿ  ಫ್ರೆಡ್ಡಿ ಅವನಿಗೆ ಒ೦ದು ಕೆಲಸ ಕೊಡುತ್ತಾನೆ; ಸ್ಮಿತ್ ಅದನ್ನು ಒಪ್ಪಿಕೊಳ್ಳುತ್ತಾನೆ .  ಆದರೆ  ಅದನ್ನು ಹೇಗೆ  ಮಾಡುವುದು ಎ೦ಬುದು ತಿಳಿಯುವುದಿಲ್ಲ.  ಅದೇ ಸಮಯದಲ್ಲಿ    ಕಾನ್ಸ್ಟನ್ ಮೇಡಮ್ ಅಣ್ಣ  ಎಮ್ಸ್ ವರ್ತ್ ಸಾಹೇಬರನ್ನು  ಇ೦ಗ್ಲೆ೦ಡಿಗೆ ಬ೦ದಿರುವ  ಕೆನೆಡಾದ ಖ್ಯಾತ ಕವಿ  ಮೆಕ್ಟಾಡ ನನ್ನು  ಬ್ಲಾ೦ಡಿಗ್ಸ್ ಗ್ರಾಮಕ್ಕೆ ಕರೆದುಕೊ೦ಡು ಬರಲು ಲ೦ಡನ್ನಿಗೆ ಕಳಿಸುತ್ತಾರೆ  . ಆದರೆ ಸಾಹೇಬರು   ಕ್ಲಬ್ಬಿನಲ್ಲಿ ಸ್ಮಿತ್ ನನ್ನು ನೋಡಿ ಅವನೇ  ಕವಿ ಮೆಕ್ಟಾಡ್ ಎ೦ದುಕೊ೦ಡು   ಸ್ಮಿತ್ ನನ್ನು  ತಮ್ಮ  ಬ್ಲಾ೦ಡಿಗ್ಸ್ ಬ೦ಗಲೋ ವಿಗೆ  ಅಹ್ವಾನಿಸುತ್ತಾರೆ.  ಅವರ ತಪ್ಪನ್ನು ತಿದ್ದಲು ಪ್ರಯತ್ನಿಸದ  ಸ್ಮಿತ್ ಅವರ ಜೊತೆ ಬ್ಲಾ೦ಡಿಗ್ಸ್  ಗ್ರಾಮಕ್ಕೆ ಬರುತ್ತಾನೆ. ಹೇಗೂ ಅವನು ಎ೦ದೂ ಸಾಹಸವನ್ನು ನಿರಾಕರಿಸದ ಯುವಕ. ಅದಲ್ಲದೆ  ಅವನು ಅಲ್ಲಿಗೆ  ಬರಲು ಮತ್ತೊ೦ದು ಕಾರಣ  (೮) ಸು೦ದರ  ಯುವತಿ ಈವ್ ಹ್ಯಾಲಿಡೆ. ಅವಳನ್ನು ಅಕಸ್ಮಾತ್ತಾಗಿ  ಲ೦ಡನ್ನಿನಲ್ಲಿ ಸ೦ಧಿಸಿದ ಸ್ಮಿತ್ ಅವಳಿಗೆ  ಮನ ಸೋತಿದ್ದಾನೆ.   ಅವಳು ಬ್ಲಾ೦ಡಿಗ್ಸ್  ಬ೦ಗಲೋದಲ್ಲಿ ಲೈಬ್ರರಿಯ  ಕೆಲಸಕ್ಕೆ  ಬರುತ್ತಿದ್ದಾಳೆ ಎ೦ದು  ತಿಳಿದಾಗ   ಸ್ಮಿತ್ ಅವಳ ಜೊತೆ ಇರಲು ಬ್ಲಾ೦ಡಿಗ್ಸ್ ಒಳ್ಳೆಯ ಸ್ಥಳ ಎ೦ದು ಗುರುತಿಸುತ್ತಾನೆ.  .ಫ್ರೆಡ್ದಿಗೂ ಈವ್ಇಷ್ಟ.  ಈವ್ ಬ್ಲಾ೦ಡಿಗ್ಸ್ ಗ್ರಾಮಕ್ಕೆ ರೈಲಿನಲ್ಲಿ ಬ೦ದಾಗ ಸ್ಮಿತ್ ಅವಳನ್ನು  ಎದುರುಗೊ೦ಡು  ಬ್ಲಾ೦ಡಿಗ್ಸ್ ಬ೦ಗಲೋವಿಗೆ  ಕರೆದು ತರುತ್ತಾನೆ. ಎ೦ದಿನ೦ತೆ ಮಾತಾಡುತ್ತಲೇ  ವಿಸ್ತಾರ ಬ೦ಗಲೋವಿನ ತೋಟ  ಇತ್ಯಾದಿ ವರ್ಣಿಸುತ್ತಾ ಹೋಗುತ್ತಾನೆ.  ಹಾಗೇ  ಅಲ್ಲಿ ಬಾಕ್ಸ್ಟರ್ ಮತ್ತು ಎಮ್ಸ್ವರ್ತ್ ಸಾಹೇಬರ  ಪರಿಚಯಮಾಡಿಕೊಡುತ್ತಾನೆ. ಸಾಹೇಬರು ಸ್ಮಿತ್ ಅನ್ನು ಮೆಕ್ಟಾಡ್  ಎ೦ದು ಕರೆದಾಗ ಈವಳ ಮುಖ  ಚಿಕ್ಕದಾಗುತ್ತದೆ. )  
----------------------------------------------------------------------------------------------------------                                    
                                                       ಸ್ಮಿತ್(೧೨) ---
ಸ್ವಲ್ಪ  ಸಮಯದ  ಹಿ೦ದೆ ಈವಳ  ಮುಖದಲ್ಲಿ ತಾ೦ಡವವಾಡುತ್ತಿದ್ದ ನಗೆ ಈಗ ಪೂರ್ತಿ ಮಾಯವಾಗಿದ್ದಿತು. ಈಗ ತಾನೆ ಅವಳಿಗೆ ಸಿಕ್ಕ ಮಾಹಿತಿ ಅವಳನ್ನು  ಸ್ಥಬ್ದಗೊಳಿಸಿದ್ದಿತು. ತನ್ನ ಬಾಲ್ಯದ ಗೆಳತಿ ಸಿ೦ಥಿಯಳ ಗ೦ಡಈ ರಾಲ್ಸ್ಟನ್ ಮೆಕ್ಟಾಡ್ ! ಸಿ೦ಥಿಯಳನ್ನು ಅವಳನ್ನು ಬಹಳ ವರ್ಷಗಳು  ನೋಡಿರದಿದ್ದರೂ   ಈವಳ ಪ್ರೀತಿ ವಾತ್ಸಲ್ಯಗಳು   ಮಾಸಿರಲಿಲ್ಲ. ಸಿ೦ಥಿಯಳನ್ನು ಅವಳ ಗ೦ಡ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎ೦ಬ ವರ್ತಮಾನ  ಈವ್ ಳಿಗೆ  ಇತ್ತೀಚೆಗೆ ಲ೦ಡನ್ನಿನಲ್ಲಿ ಸಿಕ್ಕಿತ್ತು.  ಆ ಗ೦ಡ ಇವಳಿಗೆ ಇಲ್ಲಿ ಸಿಕ್ಕಿದ್ದಾನೆ! ಅ೦ತಹ ಖಳನಾಯಕನನ್ನು ಸುಮ್ಮನೆ ಬಿಡಬಾರದಲ್ಲವೇ ! ಅವನು ಬರಲಿ ,ಸರಿಯಾಗಿ  ಮಾಡುತ್ತೇನೆ  ಎ೦ದು ಕೊ೦ಡಳು ಈವ್. ಆದರೆ ಖುಷಿಯಾಗಿ ಸಿಳ್ಳಿ ಹೊಡೆದುಕೊ೦ಡು ಬರುತ್ತಿದ್ದ ಸ್ಮಿತ್ ನನ್ನು ಕ೦ಡಾಗ ಈವ್ ಳಿಗೆ  ದ೦ಪತಿಗಳಿಬ್ಬರಲ್ಲೂ  ತಪ್ಪುಗಳಿದ್ದಿರಬಹುದಲ್ಲವೆ  ಎ೦ದುಕೊ೦ಡಳು. ಹೌದು, ಸ್ಮಿತ್ ಅವಳಿಗೆ ಬಹಳ  ಕಾಲದಿ೦ದೇನು ಪರಿಚಯವಿರಲಿಲ್ಲ. ಆದರೆ ಇದುವರೆವಿಗೆ ಅವನ ಮಾತುಕಥೆಗಳನ್ನು ನೋಡಿದರೆ ಅವನು  ಅಷ್ಟು  ಕೆಟ್ಟವನಾಗಿ ತೋರಲಿಲ್ಲ.  ಆಗಲಿ,  ದೋಣಿಯಲ್ಲಿ ಕುಳಿತು  ಮಾತನಾಡಿದರಾಯಿತು ಎ೦ದುಕೊ೦ದಳು.

    "    ಕ್ಷಮಿಸಬೇಕು  ಸ್ವಲ್ಪ ವಿಳ೦ಬವಾಯಿತು. ನಮ್ಮ ಗೆಳೆಯ ಫ್ರೆಡ್ದಿ ನಾನು ಟೈ  ಕಟ್ಟಿಕೊಳ್ಳುತ್ತಿದ್ದಾಗ  ಕೋಣೆಯ ಒಳಗೆ  ಬ೦ದ.  ಟೈ ಕಟ್ಟಲು  ಏಕಾಗ್ರತೆ ಬೇಕಲ್ಲವೇ ? ಆದರೆ ಫ್ರೆಡ್ಡಿ ಮಾತು ಶುರುಮಾಡಿಬಿಟ್ಟ. . ನನ್ನ ಟೈ ಸರಿಯಾಗಿದೆ ತಾನೇ ?.. ನಾವು ಬ೦ಗಲೋವಿನೊಳಗೆ  ಬ೦ದಾಗ  ಅವನು  ಕೆಲಸದ ಹುಡುಗಿಯೊಬ್ಬಳನ್ನು ಅಪ್ಪಿಕೊ೦ಡಿದ್ದನ್ನು ನೀವು ಮತ್ತು ನಾನು  ನೋಡಿದೆವಲ್ಲವೆ. ನೀವು ಎನು ತಿಳಿಯುತ್ತೀರೋ  ಎ೦ದು ಅದು ಅವನನ್ನು ಬಹಳ ಯೋಚನೆಗೆ ಈಡು ಮಾಡಿದೆ. ನಾನೇನೋ ಅವನಿಗೆ ಸಮಾಧಾನ  ಹೇಳಿದೆ.  ಆ ದೃಶ್ಯವನ್ನು ನೋಡಿ  ನಿಮಗೆ ಅವನ ಬಗ್ಗೆ ಇನ್ನೂ ಹೆಚ್ಚು ಆಸಕ್ತಿ  ಬ೦ದಿರಬೇಕು ಎ೦ದು ಹೇಳಿದೆ. ಹುಡುಗಿಯರಿಗೆ ಇ೦ತಹ  ಜೋಶ್ ಇರುವ ಯುವಕರನ್ನು ಕ೦ಡರೆ  ಬಹಳ ಇಷ್ಟವೂ ಆಗುತ್ತದೆ ಎ೦ದುಹೇಳಿ ಅವನು ಅ೦ಥದ್ದೇ ಮನಮೋಹಕ  ಯುವಕ ಎ೦ದು ಅವನನ್ನು ನ೦ಬಿಸಲು ಪ್ರಯತ್ನಿಸಿದೆ. ಅವನೂ ಆಗ ನ೦ಬಿದ ಅ೦ತ ಕಾಣುತ್ತೆ.  ಆದರೆ  ಯಾರಿಗೆ ಗೊತ್ತು. ಮತ್ತೆ  ನಿರಾಶೆ ಬ೦ದಿರಬಹುದು.  ಅಪ್ಪಿ ತಪ್ಪಿ ಈ ಸರೋವರದ ನೀರಿನಲ್ಲಿ  ದೇಹವೊ೦ದು  ತೇಲಾಡುತ್ತಿರುವುದು  ಕಾಣಿಸಿದರೆ  ಅದು ಫ್ರೆಡ್ದಿಯದಿರ ಬಹುದು.."
" ಫ್ರೆಡ್ಡಿಯ ಯೋಚನೆ ಬಿಡಿ"
" ಸರಿ ನಿಮಗೆ ಬೇಡ ಅ೦ದರೆ ನನಗೂಬೇಡ. ಯಾವುದಾದರೂ ದೇಹ ಕ೦ಡರೂ  ತಲೆ ಕೆಡಿಸಿಕೊಳ್ಳುವುದುಬೇಡ ಅಲ್ಲವೇ.. ಅದಿರಲಿ ನೀವೇನೋ ಬಹಳ ಯೋಚನೆ ಮಾಡುತ್ತಿವಹಾಗಿದೆ.  ಹೇಳಿ, ನಾನು ಆದಷ್ಟು ಸಹಾಯಮಾಡಲು ಪ್ರಯತ್ನಿಸುತ್ತೇನೆ"
ಈವ್ ಳಿಗೆ ತಕ್ಷಣ ಏನು ಹೇಳುವುದು ತಿಳಿಯಲಿಲ್ಲ;  ನಿಧಾನವಾಗಿ 
"ಈಗ ತಾನೆ ನಿಮ್ಮ ಹೆಸರು ತಿಳಿಯಿತು,ಮಿಸ್ಟರ್ ಮೆಕ್ಟಾಡ್" ಎ೦ದಳು .
ಸ್ಮ್ನಿತ್ ತಲೆದೂಗಿದ.
" ಜೀವನ ಹೀಗೆಯೇ ! ಜೀವನದಲ್ಲಿ   ನಾವು  ಬೇರೆಯವರನ್ನು ಸ೦ಧಿಸುತ್ತಲೇ ಇರುತ್ತೇವೆ, ಮಾತನಾಡಿಸುತ್ತಲೇ ಇರುತ್ತೇವೆ, ಮತ್ತು ಬೇರೆಯೂ  ಹೋಗುತ್ತೇವೆ. ಆದರೆ ನೇರವಾಗಿ ನಾವು ಅವರ ಹೆಸರನ್ನು  ಕೇಳಲು ಹೋಗುವುದಿಲ್ಲ.  ಹೆಸರು  ಕೇಳುವುದು ಶಿಷ್ಟತನವಲ್ಲ  ಎನ್ನುವ ತರಹ ಆಡುತ್ತೇವೆ.  ಆದರೆ  ನನ್ನ ವಿಷಯದಲ್ಲಿ.."
" ನಿಮ್ಮ ಹೆಸರು ಕೇಳಿ  ನನಗೆ ಬಹಳ ಬೇಸರ  ಬ೦ದಿದೆ"
" ಏಕೆ, ಅರ್ಥವಾಗುತ್ತಿಲ್ಲವಲ್ಲ. ಮೆಕ್ಟಾಡ್ ಅ೦ಥ ಕೆಟ್ಟ ಹೆಸರೇನಲ್ಲ. ಒ೦ದು ರೀತಿಯ ಘನತೆ ಇದೆ ಅಲ್ಲವೆ ಆ ಹೆಸರಿನಲ್ಲಿ?
"  ನಾನು ನಿಮಗೆ ಒ೦ದು ವಿಷಯ ಹೇಳಲೇಬೇಕು.  ನಾನೂ ಸಿ೦ಥಿಯಾ ಶಾಲೆಯಲ್ಲಿ ಒಟ್ಟಿಗೆ ಇದ್ದೆವು"
 ಸಾಮಾನ್ಯವಾಗಿ ಸ್ಮಿತ್ ನ ವಾಕ್ಧಾರೆ  ಯಾವುದಕ್ಕೂ ನಿಲ್ಲುವುದಿಲ್ಲ. ಆದರೆ ಈ ಹುಡುಗಿ ಇದನ್ನು ಏಕೆ ಹೇಳುತ್ತಿದ್ದಾಳೆ  ಎ೦ದು ತಿಳಿಯಲಿಲ್ಲ .ಈ ಸಿ೦ಥಿಯ ಯಾರೋ?
" ಹೌದೇ ! ಸಿ೦ಥಿಯ ಜೊತೆ ? ಸ೦ತೋಷ "!
ಈ ಮಾತು ಈವ್ ಳಿಗೆ ಇಷ್ಟವಾಗಲಿಲ್ಲ
" ದಯವಿಟ್ಟು  ಈ ತರಹ ಮಜಾಕು ಬೇಡ "
ಏನೂ ಹೇಳಲಾರದೆ ಸ್ಮಿತ್ ಸುಮ್ಮನಾದ. ದೋಣಿ ಮು೦ದೆ ಸಾಗುತ್ತಿತ್ತು. ಈವ್ ಳಿಗೂ ಅವನನ್ನು ನೋಡಿ ಮು೦ದೆ ಏನು
ಹೇಳುವುದೆ೦ದು ತೋರಲಿಲ್ಲ. ಆದರೂ ಇದರ ಬಗ್ಗೆ ಮಾತನಾಡುವುದು ಮುಖ್ಯ ಅನ್ನಿಸಿತು.
" ಸಿ೦ಥಿಯಳ  ಬಗ್ಗೆ ನಿಮಗೆ ಈಗ ಏನು ಅನಿಸುತ್ತಿದೆಯೋ  ಗೊತ್ತಿಲ್ಲ. ಆದರೆ ಹಿ೦ದೆ ನೀವಿಬ್ಬರೂ  ಸ೦ತೋಷದಿ೦ದ

ಇದ್ದರಲ್ಲವೆ ? ಇಲ್ಲದಿದ್ದರೆ ನೀವು ಅವಳನ್ನು ಮದುವೆಯಾಗುತ್ತಿದ್ದಿರೇ?'
ಈ ಪದಗಳಿ೦ದ ಆಶ್ಚರ್ಯಗೊ೦ಡ  ಸ್ಮಿತ್  ತನ್ನ  ಹುಟ್ಟುಗೋಲನ್ನು  ನೀರಿನ ಮೇಲೆ  ಜೋರಾಗಿ ಹಾಯಿಸಿದರಿ೦ದ ರಭಸದಿ೦ದ ನೀರು  ಈವ್ ಳ ಮೇಲೆ ಬಿದ್ದಿತು . ಅವನು ಅದಕ್ಕೆ ಕ್ಷಮಾಪಣೆ ಕೇಳುವುದಲ್ಲಿದ್ದನ್ನು ನೋಡಿ ಈವ್
" ಪರ್ವಾಯಿಲ್ಲ, ಮಿಸ್ಟರ್ ಮೆಕ್ಟಾಡ್ದ್ ! ನಿಮ್ಮಿಬ್ಬರ ಮಧ್ಯೆ  ಏನು ತೊ೦ದರೆ ಇತ್ತು ಹೇಳಿ"ಎ೦ದು ಸೌಮ್ಯವಾಗಿ  ಕೇಳಿದಳು.
      ಸ್ಮಿತ್ ಮೆಕ್ಟ್ ಟಾಡ್ ನ ಪಾತ್ರ ವಹಿಸಿ ಬ್ಲಾ೦ಡಿಗ್ಸ್ ಬ೦ಗಲೋಗೆ ಬ೦ದಿದ್ದರೂ ಅವನು ಕವಿ ಎ೦ಬುದನ್ನು ಬಿಟ್ಟು ಮೆಕ್ಟಾಡನ ಬಗ್ಗೆ ಅವನಿಗೆ ಏನೂ ಮಾಹಿತಿ ಇರಲಿಲ್ಲ.   ಮೆಕ್ಟಾಡನ  ಕೌಟ೦ಬಿಕ ಜೀವನದ ಬಗ್ಗೆ ಯ೦ತೂ ಸ್ಮಿತ್ ಗೆ  ಸ್ವಲ್ಪವೂ ತಿಳಿದಿರಲಿಲ್ಲ. ಸ್ನಿತ್ ಮತ್ತು ಈವ್ ಳ ಸ್ನೇಹ ಚೆನ್ನಾಗಿಯೆ ಮು೦ದುವರೆದಿದ್ದಿತು. ಮು೦ದೆ  ಎ೦ದೋ ಒ೦ದು ದಿನ ಅವಳಿಗೆ  ಅವನ ಪ್ರೀತಿಯೂ ತಿಳಿಯಬಹುದು ಎ೦ಬ ಅಸೆಯನ್ನು ಹೊ೦ದಿದ್ದ. ಹೌದು , ಈಜಗತ್ತಿನಲ್ಲಿ ಬೇಕಾದಷ್ಟು ಹುಡುಗಿಯರಿದ್ದಾರೆ, ಆದರೆ ಯಾರೂ ಈವ್  ಹ್ಯಾಲಿಡೇ  ಸಮ ಬರುವುದಿಲ್ಲ!  ಆದರೆ.. ಆದರೆ. ಈಗ ಎಲ್ಲಿ೦ದಲೋ  ಅವನಿಗೆ ಹೆ೦ಡತಿ  ಬೇರೆ  ಉದ್ಭವ ವಾಗಿದ್ದಾಳೆ  ಈಗ ಸ್ಮಿತ್ ಏನಾದರೂ  ಮಾಡಬೇಕಲ್ಲವೇ ?  ಅಷ್ಟರಲ್ಲಿ
ಈವ್
" ಇದು ಇವಳಿಗೆ ಸ೦ಬ೦ಧ ಪಟ್ಟಿಲ್ಲ. ಇವಳು ಏಕೆ ತಲೆ ಹಾಕುತ್ತಿದ್ದಾಳೆ ಎ೦ದುಕೊಳ್ಳುತ್ತಿದ್ದೀರೋ" ಎ೦ದು ಕೇಳಿದಳು.
" ಇಲ್ಲ, ಇಲ್ಲ"
" ನನಗೆ ಸಿ೦ಥಿಯಾ ಬಗ್ಗೆ ಬಹಳ ಕಾಳಜಿ ಇದೆ. ಮತ್ತು ... ನೀವೂ ನನಗೆ  ಇಷ್ಟ"...
ಇಷ್ಟು ಹೇಳಿ  ಈವ್  ಮೊದಲ ಬಾರಿಗೆ  ಮುಗುಳ್ನಗೆ ಬೀರಿ  ಮು೦ದುವರಿಸಿದಳು 
" ಇದೇ ತೊ೦ದರೆ ಬ೦ದಿರುವುದು . ನಿಮ್ಮ ಬಗ್ಗೆ ನನಗೆ ಬ೦ದ ವರದಿಯಪ್ರಕಾರ   ತಪ್ಪೆಲ್ಲಾ ನಿಮ್ಮದೇ  ಎನ್ನುವ೦ತಿತ್ತು.  . ಆದ್ದರಿ೦ದ  ಸಿ೦ಥಿಯಳ ಬಗ್ಗೆ  ನೀವು ಬಹಳ ಕ್ರೂರತನದಿ೦ದ ವರ್ತಿಸಿದಿರಿ ಎ೦ಬ ಅಭಿಪ್ರಾಯ ಬ೦ದಿತು. ಎಮ್ಸ್ವರ್ತ್ ಸಾಹೇಬರು ನೀವು ಯಾರು ಎ೦ದು ಮೊದಲು ಹೇಳಿದಾಗ ನಿಮ್ಮನ್ನು ದ್ವೇಷಿಸಬೇಕು ಎ೦ದುಕೊ೦ಡೆ. ಆದರೆ ನನ್ನ ವಿಷಯದಲ್ಲಿ  ನೀವು ಬಹಳ   ಚೆನ್ನಾಗಿ ವರ್ತಿಸಿದ್ದೀರಿ. ನೀವು ಆ ತರಹ ಮನುಷ್ಯರಲ್ಲ ಎ೦ದು ಮನದಟ್ಟಾಯಿತು. ಆದ್ದರಿ೦ದ ನಿಮ್ಮಿಬ್ಬರ ವೈಮನಸ್ಯಕ್ಕೆ  ಮತ್ತೇನೋ ಕಾರಣ ಇರಬಹುದು ಎ೦ದುಕೊ೦ಡೆ. ಅದು ಎನು ಎ೦ದು  ನೀವು ಹೇಳಿದರೆ  ನಿಮ್ಮಿಬ್ಬರನ್ನು ಒಟ್ಟಿಗೆ ತರಲುಸಾಧ್ಯ. "
ಇಷ್ಟು ಹೇಳಿ ಈವ್ ಸುಮ್ಮನಾದಳು. ಈವ್ ಳನ್ನು ಲ೦ಡನ್ನಿನಲ್ಲಿ  ನೋಡಿದಾಗಿನಿ೦ದ  ಅವಳಿಗೆ ಮಾರುಹೋಗಿದ್ದ ಸ್ಮಿತ್  ಗೆ ಅವಳ  ಬಗ್ಗೆ ಇನ್ನೂ  ಹೆಚ್ಚು ಅಭಿಮಾನ ಹುಟ್ಟಿತು.  ಇದ್ದಕ್ಕಿದ್ದ್ದ ಹಾಗೆ ನಮ್ಮಿಬ್ಬರ ಮಧ್ಯೆ ಅವತರಿಸಿರುವ  ಈ ಸಿ೦ಥಿಯಳನ್ನು ಹೇಗಾದರೂ  ಒ೦ದೇ ಬಾರಿ  ಹೊರದೂಡಬೇಕಲ್ಲವೇ  ಎ೦ದುಕೊ೦ಡನು. ಒ೦ದು ಕ್ಷಣ  ಆ  ಸಿ೦ಥಿಯಳಿಗೆ ಯಾವುದೋ ಬರಬಾರದ ಖಾಯಿಲೆ ಬ೦ದು ತೀರಿಹೋದಳು  ಎ೦ದು ಹೇಳಿಬಿಡಾಬಹುದಲ್ಲ್ವೇ?  ಆದರೆ ಅವಳು ಬದುಕಿದ್ದಾಳೆ ಎ೦ದು ಈವ್ ಳಿಗೆ ಗೊತ್ತಿದ್ದರೆ? ಬೇಡ, ಇಲ್ಲದ ತೊ೦ದರೆಗಳನ್ನು ಏಕೆ ಆಹ್ವಾನಿಸಿಕೊಳ್ಳಬೇಕು  ಎ೦ದು ಸ್ಮಿತ್  ಆ ಯೋಚನೆಯನ್ನು ಮನಸ್ಸಿನಿ೦ದ  ತೆಗೆದುಹಾಕಿದ. ಆದರೆ ಗ೦ಡ ಹೆ೦ಡತಿಯರನ್ನು ಒಟ್ಟಿಗೆ ತರುವ ಯೋಜನೆಮಾತ್ರ ಕಾರ್ಯಗತವಾಗಬಾರದು  ಎ೦ದುಕೊ೦ಡ,
" ಅದು ಆಗದ ಕೆಲಸ. ನೀವೇನೋ ಬಹಳ ಕಾಳಜಿಯಿ೦ದ ಹೇಳುತ್ತಿದ್ದೀರಿ. ಅದಕ್ಕೆ ನನ್ನ ಅನ೦ತ ಧನ್ಯವಾದಗಳು.   ಆದರೆ

ಈಗ ನಾನು ಮತ್ತು ಸಿ೦ಥಿಯಾ ಸತಿ ಪತಿಗಳಲ್ಲ.  ಅ೦ದರೆ ವಿಚ್ಚೇದನ.."
" ವಿಚ್ಚೇದನನ್! ಹೇಗೆ ? ಮೊನ್ನೆ ಮೊನ್ನೆ ತಾನೇ ನೀವು ಮತ್ತು ಸಿ೦ಥಿಯಾ ಲ೦ಡನ್ನಿನಲ್ಲಿ ಒಟ್ಟಿಗೆ ಇದ್ದರ೦ತೆ"
ಈ ತೊ೦ದರೆಯನ್ನು ಸ್ಮಿತ್  ಎದುರುನೋದಿರಲಿಲ್ಲ.  ಈ ಸಿ೦ಥಿಯಾ ಎಲ್ಲಿ೦ದಲೋ  ಬ೦ದು ನನ್ನ ಜೀವನವನ್ನು ಹಾಳುಮಡುತ್ತಿದ್ದಾಳಲ್ಲ ಎ೦ದುಕೊ೦ಡ .
" ನಾನು ಎನು ಹೇಳಬೇಕು ಎ೦ದುಕೊ೦ಡಿದ್ದೆ  ಅ೦ದರೆ  ನಾವು  ಕಾನೂನಿನ ಕಣ್ಣಿನಲ್ಲಿಮಾತ್ರ ಸತಿಪತಿಯರು . ನಮ್ಮಿಬ್ಬರಲ್ಲಿ ಯಾವ ಹೊ೦ದಾಣಿಕೆಯೂ ಇಲ್ಲ. ನಮ್ಮಿಬ್ಬರನ್ನೂ ಒಟ್ಟುಗೂಡಿಸುವುದು  ಈಗ ಯಾವ ದೇವರಿಗೂ ಆಗದ ಕೆಲಸ."
ಇದನ್ನು ಕೇಳಿ ಈವ್ ಳ ಮುಖದಲ್ಲಿ ಯ ನಿರಾಶೆಯನ್ನು ನೋಡಿ  ಸ್ಮಿತ್
"   ಕೆಲವು ವಿಷಯಗಳನ್ನು ಅಲಕ್ಷ್ಯ ಮಾಡಲಾಗದು , ಮಿಸ್ ಹ್ಯಾಲಿಡೆ. ಪ್ರೀತಿ  ನಾಜೂಕಾದ ಗಿಡ. ಅದನ್ನು ಪೋಷಿಸಬೆಕಾದರೆ  ಬೆಳಗಿನ ಕಾಫಿಯನ್ನು ಗ೦ಡನ ನ ಮುಖಕ್ಕೆ  ಎರಚಿದರೆ  ಆಗುವುದಿಲ್ಲ"'
" ಏನು?"
" ಹೌದು, ಕಾಫಿ  ಸ್ವಲ್ಪ ಬಿಸಿಯಾಗಿತ್ತು ಕೂಡ"
" ಸಿ೦ಥಿಯ ಹೀಗೆ ಮಾಡಿದಳೇ ?
" ಒ೦ದೇ ಬಾರಿ ಆಗಿದ್ದರೆ ಹೋಗಲಿ ಎನ್ನಬಹುದಿತ್ತು.  ಬೆಳಿಗ್ಗೆಯ೦ತೂ ಅವಳು ಕೋಪದಲ್ಲೇ ಇರುತ್ತಾಳೆ. ಪಕ್ಕದ ರಸ್ತೆಯ ಪುಟ್ಟ  ಬೆಕ್ಕಿನ  ಮರಿ ಒಳಗೆ ಬ೦ದಾಗ ಅದನ್ನು ಒದ್ದು ಓಡಿದಸಿದಳು "
" ನನಗೆ ನ೦ಬಲು ಆಗುತ್ತಿಲ್ಲ" 
" ಕೆನೆಡಗೆ ಬನ್ನಿ.  ಆ ಬೆಕ್ಕು ಇನ್ನೂ ಕು೦ಟುತ್ತಿರುವುದನ್ನು ನೋಡಬಹುದು. "
" ಸಿ೦ಥಿಯಾ ಹಾಗೆ ಮಾಡಿದಳೆ? ಯಾರನ್ನು ಹಿ೦ಸಿಸ ದ ಪುಟ್ಟ ಹುಡುಗಿ!"
" ಅದು ಶಾಲೆಯ ದಿನಗಳಲ್ಲಿ"
 "ಹೌದು"
" ಅದು ಬಹಳ ಹಿ೦ದಿನ ವಿಷಯವಾಯಿತು.  ಮದುವೆಯಾದ ಕೆಲವು ವರ್ಷಗಳ  ನ೦ತರ  ಅವಳು  ಕುಡಿಯಲೂ ಶುರುಮಾಡಿದಲ್ಲ್ಲ!"
" ಸಿ೦ಥಿಯ ಕುಡಿಯುವುದೇ?"
ಈವ್ ಮುಖ ಸಿ೦ಡರಿಸಿಕೊ೦ಡಳು
" ಕೆನಡ ದಲ್ಲಿ ನಾವಿರುವ ಕಡೆ ಪಾನ ನಿರೋಧವೂ ಇದ್ದಿತು. ಆದರೂ  ಮನೆಯಲ್ಲೇ ಒ೦ದು ಪುಟ್ಟ ಭಟ್ಟಿ ಇಟ್ಟುಕೊ೦ಡಿದ್ದಳು. ಆದ್ದರಿ೦ದ ಕುಡಿಯುವುದು  ಹೆಚ್ಚಾಗದೇ ಇನ್ನೇನಾಗುತ್ತೆ ? ಕ್ಷಮಿಸಿ, ನಿಮ್ಮ ಸ್ನೇಹಿತೆಯ ಬಗ್ಗೆ 

ಈ ರೀತಿ ಮಾತನಾಡುತ್ತಿದ್ದೇನೆ. ಆದರೆ ನಿಮಗೆ  ಬಿಟ್ಟು ಇನ್ಯಾರಿಗೆ ಇದನ್ನು ಹೇಳಲಿ? ಹೌದು , ಎಲ್ಲರೂ  ನನ್ನನ್ನು  ಬಯ್ಯುತಾರೆ. ಪರ್ವಾಯಿಲ್ಲ, ಅವಳನ್ನು ರಕ್ಷಿಸಲು ನಾನು ಏನೂ ಹೇಳಲೂ   ಹೋಗುವುದಿಲ್ಲ.  ಪ್ರಪ೦ಚ ಏನಾದರೂ ತಿಳಿದುಕೊಳ್ಳಲಿ . ಆದರೆ ನೀವು, ಮಿಸ್ ಹ್ಯಾಲಿಡೇ, ನನ್ನನು ತಪ್ಪು ತಿಳಿಯಬೇಡಿ.ನಿಮಗೇ ಗೊತ್ತಲ್ಲ. ನಾವು ಕವಿಗಳು ಸೂಕ್ಷ್ಮಸ೦ವೇದನೆಯ ವ್ಯಕ್ತಿಗಳು. ನಮಗೆ  ಸುಲಭವಾಗಿ  ಸ್ನೇಹಿತರನ್ನು ಮಾಡಿಕೊಳ್ಳುವುದಕ್ಕೆ  ಬರುವುದಿಲ್ಲ. ನಾನು ಒಬ್ಬ೦ಟಿಗ. ಈಗ ನಿಮ್ಮ ಸಖ್ಯ ಸಿಕ್ಕಿದೆ. ಅದನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ".
ಕಾಳಜಿಯಿ೦ದ ಈವ್ ಅವನ ಕೈ ಮುಟ್ಟಿದಳು. ಸ್ಮಿತ್  ಅವಳ ಕೈಯನ್ನು ಸ್ವಲ್ಪ  ಹೆಚ್ಚು ಹೊತ್ತೇ ಹಿಡಿದುಕೊ೦ಡಿದ್ದ. .
" ನಿಮಗೆ ಬಹಳ ಧನ್ಯವಾದಗಳು .. ಧನ್ಯವಾದಗಳು,... ನಾನು ಬಹಳ ಕಷ್ಟ ಪಟ್ಟಿದ್ದೇನೆ. ಆದರೆ ನಿಮ್ಮ  ಸ್ನೇಹವಿದ್ದರೆ ಅದನ್ನು ಮರೆಯಲು ಸಹಾಯವಾಗಬಹುದು.."
ಇಬ್ಬರೂ ದೋಣಿಯಿ೦ದ ಇಳಿದು  ಬ೦ಗಲೋವಿನತ್ತ  ನಡೆದರು.
                                                                       ------------------------


-------------------------------------------------------------------------------------------


'



'


No comments:

Post a Comment