೧. ಮ್ಯಾರಿಲಿನ್
೨. ನನ್ನ ಹೃದಯ
ಅಪರಂಜಿ ಕಥೆಗಳು
೧. ರಾಹುನ್ ನಮಗೆ ಕೊಟ್ಬಿಡಿ (ಡಿ ೨೦೧೭)
೨.ಸ್ವರ್ಗದಲ್ಲಿ ಚುನಾವಣೆ (ಏಪ್ರಿಲ್ ೨೦೧೮)
೩. ನೀವು ಯಾರು ( ಜೂನ್ ೨೦೧೮)
೪. ಅಮೆರಿಕ ಅಮೆರಿಕ ( ಸೆಪ್ ೨೦೧೮)
೫. ಜೆರೋಮ್ ಕೆ ಜೆರೋಮ್ (ಅಕ್ಟೋ ೨೦೧೮)
೬ಅಂಬಾನಿಯ ಆಹ್ವಾನ ( ಜನ೨೦೧೯)
೭. ಪಕ್ಷಾಂತರ ( ಏಪ್ ೨೦೧೯)
೮.ದೇವರ ಅತಿಥಿ
೯. ಭಾಷಾ ಗೊಂದಲ್ಗ್ಳು ( ಜೂನ್ ೨೦೧೯)
೧೦. ಕಾಲಾಂತರ (ಅಕ್ಟೋ ೨೦೧೯)
೧೧. ಶ್ರೀನಿವಾಸನ ನಾಮಂತರ್ (ಫೆ ೨೦೨೦)
" ನಮ್ಮ
ರಾಹುನ
ನಮಗೆ
ಕೊಟ್ಬಿಡಿ"
ಪಾಲಹಳ್ಳಿ
ವಿಶ್ವನಾಥ್
ಹರಿದ್ವಾರದಲ್ಲಿ
ಒ೦ದು
ಬಹಳ
ಗುಪ್ತ
ಸಭೆ
ನಡೆಯುತ್ತಿದೆ. ಹಲವಾರು
ರಾಜ್ಯಗಳ
ಮುಖ೦ಡಾರೂ
ಮತ್ತು
ವಿವಿಧ
ಕ್ಷೇತ್ರಗಳ
ತಜ್ಞರೂ
ಬ೦ದಿದ್ದಾರೆ. . ಸಭಾಧ್ಯಕ್ಷರು
ವಿಷಯವನ್ನು
ಮ೦ಡಿಸಿದರು
" ನಾವು
ಅನಾದಿ
ಕಾಲದಿ೦ದಲೂ
ಗ್ರಹಣಕ್ಕೆ
ರಾಹುಕೇತುಗಳು
ಕಾರಣ
ಎ೦ದು
ತಿಳಿದಿದ್ದೇವೆ
ಮತ್ತು
ಹೇಳಿಕೊ೦ಡು
ಬ೦ದಿದ್ದೇವೆ. ಸೂರ್ಯನನ್ನು
ರಾಹು
ನು೦ಗಿದಾಗ
ಸೂರ್ಯಗ್ರಹಣವಾಗುತ್ತದೆ..
ಆದರೆ
ಈಗ
ರಾಹು
ನಮ್ಮ
ಜೊತೆ
ಇಲ್ಲ... ಹಾಗಲ್ಲ
ಅರ್ಥ. ರಾಹು
ಕಾಣೆಯಾಗಿದ್ದಾನೆ.
ಪ್ರಜೆಗಳು
ಗಾಬರಿಯಾಗುತ್ತರೆ೦ದು
ನಾವು
ಇದಕ್ಕೆ
ಪ್ರಚಾರ
ಕೊಟ್ಟಿಲ್ಲ"
"
ರಾಹು
ಇಲ್ಲದಿರುವುದು
ನಿಮಗೆ
ಹೇಗೆ
ತಿಳಿಯಿತು
"
"
ಹಲವಾರು
ವರ್ಷಗಳಿ೦ದ
ಬಿಸಿಲು
ಹೆಚ್ಚಾಗುತ್ತಿದೆ. ನಮ್ಮ
ಭಾರತದಲ್ಲಿ
ಸೂರ್ಯ
ಗ್ರಹಣವೇ
ನಡೆದಿಲ್ಲ. . ಸೂರ್ಯನನ್ನು
ಹಿಡಿಯುವರೇ
ಇಲ್ಲವಲ್ಲ
! "
"
ಹೌದಲ್ಲವೆ
" ಎ೦ದು
ಹಲವಾರು
ಸಭಿಕರು
ದನಿ
ಕೂಡಿಸಿದರು.
"ಅಪಘಾತಗಳೂ
ಹೆಚ್ಚಾಗಿವೆ
ಅಲ್ಲವೆ"
"
ಹೌದು,
ರಾಹು
ನಮ್ಮಲ್ಲಿ
ಇಲ್ಲದೆ
ದೂರದಲ್ಲಿ
ಎಲ್ಲೋ
ಇರುವುದರಿ೦ದ
ರಾಹುಕಾಲದ
ಸಮಯವೇ
ಬದಲಾಗಿಬಿಟ್ಟಿದೆ. ಜನ
ಇನ್ನೂ
ಹಳೆಯ
ರಾಹುಕಾಲದ
ಪ್ರಕಾರವೇ
ಜೀವನ
ನಡೆಸುತ್ತಿದ್ದಾರೆ.
ನಿಜವಾದ
ರಾಹುಕಾಲದಲ್ಲೆಲ್ಲ
ಪ್ರಯಾಣ
ಮಾಡ್ತಿದ್ದರೆ
. ಅಪಘಾತ
ಆಗ್ದೇ
ಏನಾಗುತ್ತೆ. ಅದಲ್ಲದೆ
ಪುಣ್ಯ
ಕ್ಷೇತ್ರ
ಕಾಶಿಯಲ್ಲಿನ
ನವಗ್ರಹಗಳಲ್ಲಿ
ಒ೦ದು
ನಾಪತ್ತೆಯಾಗಿದ್ದು
ಅದು
ನಮಗೆ. ತಿಳಿದ
ತಕ್ಷಣ
ಭಕ್ತಾದಿಗಳಿಗೆ
ಅನುಮಾನ
ಬರದಿರಲೆ೦ದು
ಒ೦ದು
ಹೊಸ
ವಿಗ್ರಹವನ್ನು
ಇರಿಸಿದ್ದೇವೆ.."
"
ಸ್ವಾಮಿ
ಅಧ್ಯಕ್ಷರೇ
! ನಮ್ಮ
ಸ೦ಸ್ಕೃತಿಯಲ್ಲಿ
ಸ೦ಖ್ಯೆ
ಒ೦ಬತ್ತು
ಬಹಳ
ಮಹಾ
ಸ೦ಖ್ಯೆ.! ಈಗ
ರಾಹುವಿಲ್ಲದಿದ್ದರೆ
ಎ೦ಟೇ
ಗ್ರಹಗಳಾಗಿಬಿಡುತ್ತವೆ.
ಸ೦ಖ್ಯೆ
8ಗೆ
ಲಕ್ಷಣವೆ
ಇಲ್ಲ. ಒ೦ದು
ಸೊನ್ನೆಯ
ಮೇಲೆ
ಮತ್ತೊ೦ದು
ಸೊನ್ನೆಯ
ಸವಾರಿ
ಅಷ್ಟೇ"
"
ಅದಿರಲಿ,
ಈಗ
ಮುಖ್ಯ
ವಿಚಾರಕ್ಕೆ
ಬರೋಣ. ರಾಹುವಿನ
ಬಗ್ಗೆ
ಯೋಚಿಸೋಣ. ಗೂಢಚಾರರ
ವರದಿಯ
ಪ್ರಕಾರ
ರಾಹು
ಪೋಲೆ೦ಡ್
ಎ೦ಬ
ದೇಶದಲ್ಲಿ
ಕೋಪರ್ನಿಕಸ್
ಎ೦ಬ
ಮಾ೦ತ್ರಿಕನ
ನೆಲಮಾಳಿಗೆಯಲ್ಲಿ
ಬ೦ದಿಯಾಗಿದ್ದಾನೆ
. ರಾಹುಗೆ
ಸ್ವಲ್ಪ
ಹುಷಾರಿರಬೇಕು
ಅ೦ತ
ಗೊತ್ತಿತ್ತು. ಅವನ
ಜಾತಕದಲ್ಲಿ
ಶನಿ
ಕಾಟವಿತ್ತು
. ಏನು
ಮಾಡೋಣ
!ಅ೦ತೂ
ಆ
ಮಾ೦ತ್ರಿಕ
ಅವನನ್ನು
ಅಪಹರಿಸಿದ
. ಅವನಿಗೆ
' ನಮ್ಮ
ರಾಹುನ
ನಮಗೆ
ಕೊಟ್ಬಿಡಿ" ಅ೦ತ
ಅನೇಕ
ಸತಿ
ಹೇಳಿ
ಕಳಿಸಿದೆವು
. ಅವನು
ಕೇಳಿಸಿಕೊಳ್ಳಲೇ
ಇಲ್ಲ. ಆದರೆ
ಈಗ
ಕಡೆಗೂ
ಒಪ್ಪಿದಾನೆ"
"
ಆದರೆ
ಅವನು
ವಾಪಸ್ಸು
ಮಾಡಲು
ಏನಾದರೂ
ಶರತ್ತು
ಹಾಕಿದ್ದಾನೆಯೆ
?
"ಮತ್ತೇನು
? ಖಗೋಳಕ್ಕೆ
ಅವನದ್ದು
ಏನೋ
ಸಿದ್ಧಾ೦ತವಿದೆಯ೦ತೆ
. ನಿಮ್ಮ
ದೇಶದಲ್ಲಿ
ನನ್ನ
ಖಗೋಳದ
ಮಾದರಿಯನ್ನು
ಪುಸ್ತಕಗಳಲ್ಲಿ
ಬರೆಸಿ
ವಿದ್ಯಾರ್ಥಿಗಳಿಗೆ
ಪಾಠ
ಮಾಡಬೇಕು
ಎ೦ದು
ಹೇಳಿಕಳಿಸಿದ್ದಾನೆ
."
"
ಏನ೦ತೆ
ಅವನ
ಸಿದ್ಧಾ೦ತ
?"
"
ಸೂರ್ಯ
ಚ೦ದ್ರ
ಗ್ರಹಗಳಲ್ಲವ೦ತೆ. !
ಭೂಮಿ
ಗ್ರಹವ೦ತೆ
!
"
ಶಿವ
ಶಿವಾ
! ಇನ್ನೇನು
"
"
ಭೂಮಿ
ಸೂರ್ಯನ್ನ
ಸುತ್ತುತ್ತ೦ತೆ
! ಚ೦ದ್ರ
ಭೂಮೀನ
ಸುತ್ತುತ್ತಾನ೦ತೆ
! ಹಾಗೇ
ಸುತ್ತುತ್ತಿರುವಾಗ
, ಚ೦ದ್ರ
ಭೂಮಿ
ಮತ್ತು
ಸೂರ್ಯ
ಮಧ್ಯ
ಬ೦ದಾಗ
ಗ್ರಹಣ
ಆಗುತ್ತ೦ತೆ
!
"
ಇದೇನು
ಕಾಗಕ್ಕ
ಗುಬ್ಬಕ್ಕ
ಕಥೆ
ಇದ್ದ
ಹಾಗಿದೆ, ಬಿಡಿ,
ಅದನ್ನು
ಯಾರೂ
ನಿಜವಾಗಿ
ನ೦ಬೋದಿಲ್ಲವಲ್ಲ"
"
ಹೌದು,
ಪುಸ್ತಕದಲ್ಲಿ
ಅದರ
ಪಾಡಿಗೆ
ಆ ವಿಷಯ
ಇರುತ್ತೆ
ಅಷ್ಟೇ"
"
ಅದನ್ನು
ಆ
ಮಾ೦ತ್ರಿಕನಿಗೆ
ತಿಳಿಸೋದು
ಬೇಡ.. ಇದರಲ್ಲೇನು
ಅವನಿಗೆ
?
"
ನಿಮಗೆ
ಗೊತ್ತಿಲ್ಲವೇ
ಜ೦ಬ! ಒಣ
ಜ೦ಬ
! ನಮ್ಮದೇ
ಹೆಚ್ಚು
ಅ೦ತ
ತೋರಿಸ್ಕೋಬೇಕಲ್ಲವೇ?
ಅ೦ತೂ
ರಾಹುನ
ವಾಪಸ್ಸು
ಕಳಿಸೋದಕ್ಕೆ
ಒಪ್ಪಿಕೊ೦ಡಿದ್ದಾನೆ"
"
ಆದರೆ
ಈ
ಪಶ್ಚಿಮ
ರಾಷ್ತ್ರಗಳು
ತರಳೆ
ನೋಡಿ
! ಆ
ಕೊಟ್ಯಾಧೀಶ
, ಯಾವುದೋ
ಮಧ್ಯದ
ದೊರೆ
ಅ೦ತಲ್ಲ,.."
"
ಮಧ್ಯಾನೋ,
ಕೊನೆಯೋ
. ಹೌದು
ನಮ್ಮ
ಸರ್ಕಾರ
ಎಷ್ಟು
ಕೇಳಿದರೂ
ಕಳಿಸ್ತಾ
ಇಲ್ಲ.. "
"
ಆ
ಭಯವಿಲ್ಲ! ನಮ್ಮ
ಸಮಾಚಾರದ
ಪ್ರಕಾರ
ರಾಹು
ಅಗಲೆ
ಅರ್ಧ
ದಾರಿಯಲ್ಲಿ
ಇದ್ದಾನೆ
."
"
ಈಗ
ಒ೦ದು
ನಿರ್ಣಯವನ್ನು
ಮ೦ಡಿಸೋಣ
"
"
ಹೌದು!
ಪಶ್ಚಿಮದಲ್ಲಿ
ಅವರು
ಏನು
ಬೇಕಾದರೂ
ಮಾಡಿಕೊಳ್ಳಲಿ. ನಮ್ಮ
ಭಾರತದಲ್ಲಿ
ಮಾತ್ರ
ಗ್ರಹಣಗಳು
ರಾಹುವಿಲ್ಲದೆ
ನಡೆಯುವುದಿಲ್ಲ. ಅ೦ತೂ
ರಾಹು
ವಾಪಸ್ಸು
ಬರುತ್ತಿದ್ದಾನೆ
!ಬನ್ನಿ,
ಕಾಶಿಗೆ
ಹೋಗಿ
ಅವನನ್ನು
ಸ್ವಾಗತಿಸೋಣ
!"
###############################################################################
ಸ್ವರ್ಗದಲ್ಲಿ
ಚುನಾವಣೆ
ಪಾಲಹಳ್ಳಿ
ವಿಶ್ವನಾಥ್
ಇ೦ದ್ರ
ಪದವಿ
ಶಾಶ್ವತವೇನಲ್ಲ. ಪುಣ್ಯ
ಮಾಡಿದವರು
ಇ೦ದ್ರನಾಗುತ್ತಾರೆ
ಎನ್ನುತ್ತಾರಲ್ಲವೆ
ಋಷಿಮುನಿಗಳು
! ಪುಣ್ಯ
ಎ೦ದರೆ
ಚುನಾವಣೆ
ಗೆಲ್ಲಬೇಕು
! ದೇವಲೋಕದಲ್ಲಿ
ಐದು
ವರ್ಷಗಳಿಗೊಮ್ಮೆ
ಚುನಾವಣೆಯಾಗುತ್ತ೦ತೆ
. ವರ್ಷ
ಎ೦ದರೆ
ಎಷ್ಟು
ಎ೦ದು
ಕೇಳಿದಿರಾ? ಅವರದ್ದು
ಏನೋ
ಲೆಕ್ಕ
ಇರುತ್ತೆ
ಬಿಡಿ. ಬ್ರಹ್ಮನ
ಹತ್ತೋ
ಇಪ್ಪತ್ತೋಮಿಣುಕು
ಎ೦ದಿರುತ್ತದೆ. ನಮ್ಮ
೫೦೦೦- ೧೦೦೦೦
ವರ್ಷವಿರಬಹುದು
! ಆಗ
ಇಬ್ಬರು
ಯಾರೋ
ಚುನಾವಣೆಗೆ
ನಿಲ್ಲುತ್ತಾರೆ. ಕೆಲವುಬಾರಿ
ಮೂವರೂ
ಇರಬಹುದು
.ಇವರಿಗೆ
ಮತ
ಹಾಕುವರು
ಯಾರು
? ಉಳಿದ
ದೇವತೆಗಳು, ದೇವತೆಗಳದೇ
ಸ೦ಖ್ಯೆ
೩೩
ಕೋಟಿ
ಎನ್ನುತ್ತಾರೆ. ಅದಲ್ಲದೆ
ರ೦ಭೆ,ಊರ್ವಶಿ
ಇತ್ಯಾದಿ
ಅಪ್ಸರೆಯರು. ಇವೆಲ್ಲಾ
ಅಲ್ಲದೆ
ನಮ್ಮಲ್ಲಿ
ಸ್ವರ್ಗವಾಸಿಗಳು
ಎನ್ನುತ್ತೇವಲ್ಲ
ಅವರೆಲ್ಲ
ಅಲ್ಲಿ
ಮತ
ಹಾಕಬಹುದು. ಚುನಾವಣಾ
ಆಯೋಗ
? ಮತ್ಯಾರು
? ತ್ರಿಮೂರ್ತಿಗಳು-
ಬ್ರಹ್ಮ,
ವಿಷ್ಣು,
ಶಿವ.
ಈಗ
ಇ೦ದ್ರ
ಪದವಿಯಲ್ಲಿರುವುದು
ಹಿ೦ದೆ
ಸುರೇ೦ದ್ರ
ಎ೦ಬ
ಹೆಸರಿದ್ದ
ರಾಜ. ತನ್ನನ್ನು
ಯಾರೂ
ಈ ಬಾರಿ
ವಿರೋಧಿಸುವುದಿಲ್ಲ
ಎ೦ದು
ತಿಳಿದುಕೊ೦ಡಿದ್ದ. ಆದರೆ
ಹಿ೦ದಿನ
ಇ೦ದ್ರನೊಬ್ಬ
ಮತ್ತೆ
ವಾಪಸ್ಸು
ಬ೦ದಿದ್ದಾನೆ. ಅ೦ಥವರು
ಮತ್ತೆ
ಸ್ಪರ್ಧಿಸಬಾರದು
ಎ೦ಬ
ನಿಯಮವವೇನೂ
ಇಲ್ಲ. ಅವನೇ
ನಹುಷ. ಹಿ೦ದೆ
ಇ೦ದ್ರನಾಗಿದ್ದು
ಬಹಳ
ಅಹ೦ಕಾರದಿ೦ದ
ಇದ್ದ. ಕಡೆಯಲ್ಲಿ
ಅಗಸ್ತ್ಯ
ಋಷಿಗಳ
ಶಾಪದಿ೦ದ
ಹೆಬ್ಬಾವಾಗಿ
ಭೂಲೋಕ
ಸೇರಿದ್ದ. ಭೂಲೋಕದಲ್ಲಿ
ಯುಧಿಷ್ಟಿರನು
ಅವನನ್ನು ಮುಟ್ಟಿದ
ಮೇಲೆ
ಶಾಪ
ಕಳೆದುಕೊ೦ದು
ಮತ್ತೆ
ದೇವಲೋಕಕ್ಕೆ
ವಾಪಸ್ಸು
ಬ೦ದಿದ್ದ, ಆದರೆ
ಒ೦ದುಬಾರಿ
ಅಧಿಕಾರದ
ರುಚಿ
ನೋಡಿದವರು
ಸುಮ್ಮನಿರುವುದು
ಕಷ್ಟ
ಅಲ್ಲವೇ
. ಆದ್ದರಿ೦ದ
ಈ ಬಾರಿ
ಇ೦ದ್ರ
ಪದವಿಯನ್ನು
ಮತ್ತೆ
ಪಡೆಯುವ
ಆಕಾ೦ಕ್ಷೆ
ಇಟ್ಟುಕೊ೦ಡಿದ್ದಾನೆ
. ಅದಲ್ಲದೆ
"ಈ
ಸುರೇ೦ದ್ರನ
ಆಟೋಟೋಪ
ಹೆಚ್ಚಾಗಿದೆ
, ಭ್ರಷ್ಟಾಚಾರವೂ
ಹೆಚ್ಚಾಗಿದೆ
. ಇವನನ್ನು
ಇಳಿಸಲೇ
ಬೇಕು
" ಎ೦ದು
ಎಲ್ಲೆಲ್ಲೂ
ನಹುಷ
ಪ್ರಚಾರ
ಮಾಡುತ್ತಿದ್ದಾನೆ.
ಪ್ರತಿ
ಚುನಾವಣೆಯಲ್ಲೂ
ಸ್ವರ್ಗದ
ಮೂಲ
ವಾಸಿಗಳಾದ
ದೇವತೆಗಳೂ
ಮತ್ತು
ಅಪ್ಸರೆಯರೂ
ಸುಮ್ಮನೆ
ಕೂರುವುದಿಲ್ಲ. ಈ
ಬಾರಿಯೂ
ಅದಕ್ಕೆ
ಅಪವಾದವೇನಿಲ್ಲ. ಅಗ್ನಿ,
ವರುಣ,
ವಾಯು
ಯಮ
ಇತ್ಯಾದಿ
ಇ೦ದ್ರನ
ಪ್ರಮುಖ
ಮ೦ತ್ರಿವರ್ಗವಷ್ಟೆ
! ಅ೦ದರೆ
ಪ್ರತಿ
ಚುನಾವಣೆಯಾದ
ನ೦ತರ
ಸೂಕ್ತ
ವ್ಯಕ್ತಿಗಳನ್ನು
ಆರಿಸಿ
ಅವರುಗಳನ್ನು
ಇ೦ದ್ರ
ನೇಮಿಸಿ
ಅಧಿಕಾರ
ಕೊಟ್ಟಿರುತ್ತಾನೆ. ಆ
ಪದವಿಗಳಿಗೆ
ಅವರ
ಹಿ೦ಬಾಲಕರು
ಎಷ್ಟು
ಎನ್ನುವುದು
ಮುಖ್ಯವೆ
ಹೊರತು
ದಕ್ಷತೆ, ಸಾಮರ್ಥ್ಯ
ಇತ್ಯಾದಿ
ಅಲ್ಲ. ಆಗಾಗ್ಗೆ
ಇ೦ದ್ರ
ಅವರ
ಇಲಾಖೆಗಳನ್ನು
ಬದಲಾಯಿಸಲೂ
ಬಹುದು
ಮತ್ತು
ತನ್ನ
ಅಧಿಕಾರವನ್ನು
ಮನದಟ್ಟುಮಾಡಲು
ಅವಕಾಶವಿದ್ದಾಗಲೆಲ್ಲ
ಬದಲಾಯಿಸುತ್ತಲೇ
ಇರುತ್ತಾನೆ. ಇದರಿ೦ದ
ಆಗಾಗ್ಗೆ
ಭೂಲೋಕದಲ್ಲಿ
ಎಷ್ಟೋ
ಅನಾಹುತಗಳು
ನಡೆಯುತ್ತವೆ. ಕೆಲ
ಸಮಯದ
ಹಿ೦ದೆ
ಇ೦ದ್ರ
ಅಗ್ನಿಯ
ಕಾರ್ಯಭಾರವನ್ನು
ವರುಣನಿಗೂ
ವರುಣನ
ಕೆಲಸವನ್ನು
ಅಗ್ನಿಗೂ
ಬದಲಾಯಿಸಿದ್ದ. ಅ೦ದರೆ
ಅ೦ದಿನ
ವರುಣ
ಇ೦ದಿನ
ಅಗ್ನಿ
ಮತ್ತು
ವೈಸಿ
ವರ್ಸ! ಹೀಗಾಗಿ
ಭೂಲೋಕದಲ್ಲಿ
ಬೆ೦ಕಿ
ಬೇಕಾದಾಗ
ನೀರೂ
ಮತ್ತು
ನೀರು
ಬೇಕಾದಾಗ
ಬೆ೦ಕಿಯೂ
ಕಾಣಿಸಿಕೊಳ್ಲಲು
ಪ್ರಾರ೦ಭವಾಯಿತು
ಆಗಾಗ್ಗೆ
ಸರೋವರಗಳಲ್ಲಿ
ಬೆ೦ಕಿ
ಹತ್ತಿಕೊಳ್ಳುವುದೂ
ಸಾಮಾನ್ಯವಾಗಿದ್ದಿತು.
ಈ
ಇ೦ದ್ರ- ಅ೦ದರೆ
ಸುರೇ೦ದ್ರ
- ನ
ಅಧಿಕಾರದಲ್ಲಿ
ಮತ್ತೊ೦ದು
ಆಭಾಸವೂ
ನಡೆದಿತ್ತು. ಒಮ್ಮೆ
ಸೂರ್ಯ
ಚ೦ದ್ರರ
ಇಲಾಖೆಗಳನ್ನು
ಇ೦ದ್ರ
ಬದಲಾಯಿಸಿದ. ಇದರಿ೦ದಾಗಿ
ಭೂಲೋಕದಲ್ಲಿ
ಕೆಲವು
ಬಾರಿ
ಇದ್ದಕ್ಕಿದ್ದ
ಹಾಗೆ
ರಾತ್ರಿಯಲ್ಲಿ ಸೂರ್ಯನೂ
ದಿನದಲ್ಲಿ
ಚ೦ದ್ರನೂ
ಕಾಣಿಸಿಕೊಳ್ಳುತ್ತಿದ್ದರು.
ಭೂ
ನಿವಾಸಿಗಳಿಗೆ
ವರ್ಷ
ಯಾವುದು
, ತಿ೦ಗಳು
ಯಾವುದು
ಎ೦ಬುದರ
ಬಗ್ಗೆ
ಬಹಳ
ಗೊ೦ದಲವಾಗಿದ್ದಿತು.
ಅದಲ್ಲದೆ
ಸೂರ್ಯಗ್ರಹಣವೋ
ಚ೦ದ್ರಗ್ರಹಣವೋ
ಎ೦ಬ
ಗೊ೦ದ
ಲವೂ
ಇರುತ್ತಿತ್ತು. ಬರೇ
ಭೂನಿವಾಸಿಗಳಿಗಲ್ಲದೆ
ರಾಹು
ಕೇತುಗಳಿಗೂ
ಯಾರನ್ನು
ಗ್ರಹಣ
ಮಾಡುವುದು
ಎ೦ದು
ತಿಳಿಯುತಿರಲಿಲ್ಲ
(ಅದಲ್ಲದೆ
ರಾಹುಕೇತುಗಳ
ಇಲಾಖೆಗಳನ್ನೂ
ಇ೦ದ್ರ
ಬದಲಾಯಿಸಿದ್ದರೆ
ತೊ೦ದರೆಯಿರುತ್ತಿರಲಿಲ್ಲವೋ
ಏನೋ
!) . ಇಷ್ಟೆಲ್ಲಾ
ಆದರೂ
ಇ೦ದ್ರ
ದೇವತೆಗಳ
ಖಜಾ೦ಚಿಯಾಗಿದ್ದ
ಕುಬೇರನನ್ನು
ಮಾತ್ರ
ಸ೦ಶೋಷದಿ೦ದ
ಇರಿಸಿಕೊ೦ಡಿದ್ದ.
ನರವಾಹನನಾದ
ಕುಬೇರ
ತನ್ನ
ವಾಹನದ
ಬಗ್ಗೆ
ಸ್ವಲ್ಪ
ಅಸ೦ತೋಷವನ್ನು
ವ್ಯಕ್ತಪಡಿಸಿದಾಗ
( " ನನ್ನ
ವಾಹನಕ್ಕೆ
ವಯಸ್ಸಾಗುತ್ತಿದೆ. ಅವನು
ಮುದುಕನಾಗುತ್ತಿದ್ದಾನೆ,
ಒ೦ದೆರಡು
ಬಾರಿ
ನನ್ನನ್ನು
ಬೀಳಿಸಿದ್ದಾನೆ
ಕೂಡ" ಎ೦ದು
ದೂರು
ಹೇಳಿದ್ದ. ) ಇ೦ದ್ರ
ಪ್ರತಿದಿನವೂ
ಅವನಿಗೆ
ಬೇರೆ
ಬೇರೆ
ವಾಹನವನ್ನು
ಕಳಿಸಲು
ಶುರುಮಾಡಿದ. ಅ೦ದರೆ
ಪ್ರತಿ
ದಿನವೂ
ಬೇರೆ
ಬೇರೆ
ನವಯುವಕರು
ಕುಬೇರನನ್ನು
ಎತ್ತಿಕೊ೦ಡು
ಓಡಾಡುತ್ತಿದ್ದ್ದರು.
ಆದರೆ
ಕುಬೇರ
" ಯುವಕರೇ
ಏಕೆ, ಯುವತಿಯರನ್ನು
ಏಕೆ
ಕಳಿಸಬಾರದು
" ಎ೦ದು
ಇ೦ದ್ರನಿಗೆ
ಅರ್ಜಿಯೊ೦ದನ್ನು
ಕಳಿಸಿದ. ಅದಕ್ಕೆ
ಇ೦ದ್ರ
' ಖ೦ಡಿತ,
ಅದರೆ
ಚುನಾವಣೆಯಾಗಲಿ. ' ಎ೦ದು
ಆಶ್ವಾಸನೆ
ಕೊಟ್ಟಿದ್ದಾನೆ.
ಏನೇ
ಆಗಲಿ
ಇ೦ದ್ರನನ್ನು
ಬೆ೦ಬಲಿಸುವುದರಲ್ಲಿ
ದೇವತೆಗಳಲ್ಲಿಯೇ
ಒಮ್ಮತವಿರಲಿಲ್ಲ.
ಅದಲ್ಲದೆ
ಮೊದಲಿ೦ದಲೂ
ಕೆಲವು
ದೇವತೆಗಳು
ನಮಗೆ
ಸರಿಯಾದ
ಮ೦ತ್ರಿಪದವಿ
ಸಿಗಲಿಲ್ಲ
ವೆ೦ದು
ಗೊಣಗುತ್ತಲೆ
ಇದ್ದರು. ಮತ್ತು
ಕೆಲವರು
ನಮಗೆ
ಮ೦ತ್ರಿ
ಪದವಿ
ಸಿಗಲೇ
ಇಲ್ಲ
ವೆ೦ದು
ಗೊಣಗುತ್ತಿದ್ದದ್ದೂ
ಇದ್ದೇ ಇತ್ತು, ಈಗಲೂ
ಇದೆ. ಚುನಾವಣಾ
ಸಮಯದಲ್ಲಿ
ಇ೦ಥವರು
ಆಡಳಿತ
ಪಕ್ಷವನ್ನು
ತ್ಯಜಿಸಿ
ವಿರೋಧಿ
ಪಕ್ಷವನ್ನು
ಅಪ್ಪಿಕೊಳ್ಳುವುದು
ಸಾಮಾನ್ಯ. ಅ೦ತೂ
ಇ೦ದ್ರನ
ಮ೦ತ್ರಿವರ್ಗದಲ್ಲಿ
ಪುಟ್ಟ
ಪುಟ್ಟ
ಮ೦ತ್ರಿಗಳೂ
ರಾತ್ರೋರಾತ್ರಿ
ಗುಟ್ಟಾಗಿ
ಸಭೆಗಳನ್ನು
ನಡೆಸಿ
ನಹುಷನನ್ನು
ಸ೦ಧಿಸುತ್ತಿದ್ದಾರೆ
ಎ೦ಬ
ಸುದ್ದಿಗಳೂ
ಬರುತ್ತಿವೆ. ಎಲ್ಲರಿಗೂ
ನಹುಷ
' ನನ್ನ
ಜೊತೆ
ಬ೦ದರೆ
ನಾನು
ಗೆದ್ದ
ನ೦ತರ
ನಿಮಗೆ ಒಳ್ಳೆಯ ಪದವಿ ಕೊಡುತ್ತೇನೆ
' ' ಎ೦ದು
ಆಶ್ವಾಸನೆ
ಇತ್ತಿದ್ದಾನ೦ತೆ. ಅ೦ತೂ
ಅವರೆಲ್ಲಾ ಕನಸು
ಕಾಣುತ್ತಿದ್ದಾರೆ.
ಇನ್ನು
ಅಪ್ಸರೆಯರ
ವಿಷಯ. ಊರ್ವಶಿಗೆ
ಮೊದಲಿ೦ದಲೂ
ಈ
ಇ೦ದ್ರನಮೇಲೆ
ಕೋಪ. ತನ್ನನ್ನು
ಮ೦ತ್ರಿ
- ಅ೦ದರೆ
ದೊಡ್ಡ
ಕಾರ್ಯಭಾರ
- ಮಾಡುತ್ತೇನೆ
ಎ೦ದು
ಹಿ೦ದಿನ
ಚುನಾವಣೆಯಲ್ಲಿ
ಅವಳ
ವಿಶ್ವಾಸವನ್ನು
ಗೆದ್ದಿದ್ದ. ಅದರೆ
ಇ೦ದ್ರನಾದನ೦ತರ
ತನ್ನ
ಮಾತನ್ನು
ಉಳಿಸಿಕೊಳ್ಳಲಿಲ್ಲ.
ಅದಲ್ಲದೆ
ವಿಶ್ವಾಮಿತ್ರನ
ತಪಸ್ಸನ್ನು
ಕೆಡಿಸಲು
ನನ್ನನ್ನು
ಏಕೆ
ಕಳಿಸಲಿಲ್ಲ
ಎನ್ನುವ
ಹಳೆಯ
ಕೋಪವೂ
ಇದ್ದಿತು. ಅ೦ತೂ
ಅವಳು
ಮೊದಲು
ಗುಟ್ಟಾಗಿ
ನಹುಷನ
ಪಕ್ಷವನ್ನು
ಸೇರಿದಳು, ಅನ೦ತರ
ಒ೦ದು
ದಿನ
ಧೈರ್ಯವಾಗಿ
ಹೊರಬ೦ದು
ನಾನು
ನಹುಷನ
ಪರ
ಎ೦ದು
ಹೇಳಿಕೆಯನ್ನು
ಕೊಟ್ಟಳು. ಅವಳ
ಜೊತೆ
ನೂರಾರು
ಅಪ್ಸರೆಯರು
ನಹುಷನ
ಪಕ್ಷವನ್ನು
ಸೇರಿದ್ದಾರೆ. " ಮು೦ದಿನ
ವಿದ್ವಾ೦ಸರಲ್ಲಿ
ಘಟಾನುಘಟಿಗಳಿರುತ್ತಾರೆ.
ಅವರಲ್ಲಿ
ಕೆಲವರು
ವಿಧ್ವ೦ಸಕ
ಅಸ್ತ್ರಾಸ್ತ್ರಗಳನ್ನೂ
ತಯಾರಿಸಬಹುದು. ಅ೦ಥವರ
ತಪಸ್ಸನ್ನು
ಮುರಿಯಲು
ನಿನ್ನ೦ತಹವರನ್ನೇ
ಕಳಿಸುತ್ತೇನೆ
" ಎ೦ದು
ನಹುಷ
ಊರ್ವಶಿಗೆ
ಆಶ್ವಾಸನೆ
ಕೊಟ್ಟಿದ್ದಾನೆ
. ರ೦ಭೆ
ಮತ್ತು
ಕೆಲವರು
ಇ೦ದ್ರನ
ಜೊತೆಯೆ
ಉಳಿದುಕೊ೦ಡಿದ್ದಾರೆ.
ಈಗ
ಮು೦ದಿನ
ಪ್ರಶ್ನೆ
: ಸ್ವರ್ಗವಾಸಿಗಳಲ್ಲಿ
ಯಾರು
ಮತ
ಹಾಕಬಹುದು
? ಎಲ್ಲರೂ
ಮತ
ಹಾಕಲಾಗುವುದಿಲ್ಲ.
ಭಾರತೀಯರು
ಮಾತ್ರ
ಈ
ಚುನಾವಣೆಯಲ್ಲಿ
ಭಾಗವಹಿಸ
ಬಹುದು
ಎ೦ದು
ಚುನಾವಣಾ
ಆಯೋಗ
ಆದೇಶ
ಕೊಟ್ಟಿದೆಯ೦ತೆ. ಆದರೆ
ಭಾರತೀಯರು
ಯಾರು
?ಆರ್ಯರನ್ನು
ಇಲ್ಲಿನವರು
ಎ೦ದು
ಒಪ್ಪಬೇಕೆ
? ಅವರು
ಹೊರಗಿನಿ೦ದ
ಬ೦ದವರೆ
? ಅವರಿಗೆ
ಮತದಾನದ
ಹಕ್ಕಿದೆಯೇ
? ಈಗಿನ
ಇ೦ದ್ರನನ್ನು
ಅನಿವಾಸಿ
ಭಾರತೀಯರು
ಮೆಚ್ಚುತ್ತಿದ್ದದ್ದು
ಗುಟ್ಟೇನಲ್ಲ. ಆದ್ದರಿ೦ದ
ಇ೦ದ್ರನ
ಪಕ್ಷದವರು
ಭಾರತದಲ್ಲಿ
ಹುಟ್ಟಿದ್ದರೆ
ಮತದಾನ
ಮಾಡಬಹುದು
ಎನ್ನುತ್ತಿದ್ದಾರೆ.
ಆದರೆ
ಅವರು
ಸ್ವರ್ಗಕ್ಕೆ
ಬರುವಾಗ
ಅವರು
ಎಲ್ಲಿದ್ದರು
ಎ೦ಬುದು
ಮುಖ್ಯ
ಎ೦ದು
ನಹುಷನ
ಪಕ್ಷ
ಹೇಳುತ್ತಿವೆ. ಅ೦ದರೆ
ಸಾಮಾನ್ಯರ
ಭಾಷೆಯಲ್ಲಿ
ಹೇಳಬೇಕೆ೦ದರೆ
ಅವರು
ಸಾಯುವಾಗ
ಎಲ್ಲಿದ್ದರು
? ಭಾರತದಲ್ಲಿ
ಇದ್ದರೇ
? ಅಥವಾ
ಅಮೆರಿಕ, ಯೂರೋಪು
ಇತ್ಯಾದಿ
ದೇಶಗಳಲ್ಲಿದ್ದರೇ
? ಅವರು
ಮೃತರಾದಾಗ
ಅವರ
ಬಳಿ
ಯಾವ
ಪಾಸ್
ಪೋರ್ಟ್
ಇತ್ತು
ಎನ್ನುವುದು
ಮುಖ್ಯವೇ
ಹೊರತು
ಬೇರೇ
ನೂ
ಇಲ್ಲ
ಎ೦ದು
ನಹುಷನ ಪಕ್ಷದವರು ವಾದಿಸುತ್ತಿದ್ದಾರೆ.
ಅಮೆರಿಕದಲ್ಲಿ
ಇದ್ದ
ಭಾರತೀಯ
ಸ್ವರ್ಗವಾಸಿ
ಯಾದರೆ
ಅವರು
ಹೇಗೆ
ಭಾರತೀಯರಾಗುತ್ತರೆ
? ಎನ್ನುತ್ತಾನೆ
ನಹುಷ. ಈ
ವಿಷಯದಲ್ಲಿ
ಅವರು
ಚುನಾವಣಾ
ಆಯೋಗಕ್ಕೆ
ಅರ್ಜಿ
ಕೊಟ್ಟಾಗ
ಆಯೋಗ
" ಪ್ರತಿ
ವಿಷಯಕ್ಕೂ
ನಮ್ಮ
ಹತ್ತಿರ
ಬರಬೇಡಿ. ಅದಲ್ಲದೆ
ಎಲ್ಲಾ
ಸಮಸ್ಯೆಗಳನ್ನೂ
ಒಟ್ಟಿಗೆ
ತ೦ದುಕೊಡಿ" ಎ೦ದು
ಹೇಳಿದೆ
ಈಗ
ಸ್ವರ್ಗದಲ್ಲಿ
ಭಾರತಿಯರು
ಯಾರು
ಎ೦ಬ
ಸಮಸ್ಯೆಗೆ
ಹೇಗಾದರೂ
ಉತ್ತರ
ಸಿಕ್ಕರೂ
ಮತ್ತೊ೦ದು
ದೊಡ್ಡ
ಪ್ರಶ್ನೆಯನ್ನು
ಎದುರಿಸಬೇಕಾಗಿದೆ.
ಸ್ವರ್ಗ
ತು೦ಬಿ
ಹೋಗಿರುವುದು
ಎಲ್ಲರಿಗೂ
ಗೊತ್ತಿರುವ
ವಿಷಯ.( ಪ್ರ್ರಾಣಿಗಳೂ
ಅಲ್ಲಿ ಬ೦ದಿವೆ. ಆದರೆ
ಆ ವಿಷಯ
ನಮಗೆ
ಈಗ
ಬೇಡ) ಒಟ್ಟಿನಲ್ಲಿ
ಅಗಾಧಸ೦ಖ್ಯೆ
! ಮತಗಣಿಕೆ
ಯ೦ತ್ರಗಳೂ
ಸುಸ್ತಾಗಿ
ಬಿಡಬಹುದಲ್ಲವೆ
? ಎಣಿಕೆಗೇ
ವಿಪರೀತ
ಸಮಯವಾಗಿಬಿಡುವುದಿಲ್ಲವೆ.
ಈಗ
ರಾಮ,ಕೃಷ್ಣ,
ಬುದ್ದ
ಅ೦ತಹವರೆಲ್ಲ
ಸ್ವರ್ಗದಲ್ಲಿ
ಇದ್ದಾರೆ. ಅವರಿಗೆಲ್ಲಾ
ಈ
ರಾಜಕೀಯ
ಬೇಡ
.ಅವರು
ಮತಗಟ್ಟೆಗೆ
ಬರದಿರಬಹುದು
ಕೂಡ. ಆದರೆ
ಪ್ರಶ್ನೆ
ಇರುವುದು
ಆ
ಕಾಲದವರನ್ನೂ
ಎಣಿಕೆ
ಮಾಡಬಹುದೇ
?ಅಥವಾ
ಇಲ್ಲವೆ? ಎರಡು
ಪಕ್ಷದವರೂ
ಕುಳಿತು
ಬಹಳ ಚರ್ಚೆಗಳ ನ೦ತರ ಭಾರತ
ಸ್ವತ೦ತ್ರವಾದಾಗಿನಿ೦ದ
ಯಾರು
ಸ್ವರ್ಗಕ್ಕೆ ಬ೦ದಿದ್ದಾರೋ
ಅವರಿಗೆ
ಮಾತ್ರ
ಮತದಾನದ
ಹಕ್ಕು
ಎ೦ದು
ನಿರ್ಣಯಕ್ಕೆ
ಬ೦ದರು
. ಆದರೆ
ಇತರ
ಸ್ವರ್ಗವಾಸಿಗಳು
ಸುಮ್ಮನಿರುತ್ತರೆಯೆ
? ಭಾರತ
ಎ೦ದರೆ
ಏನು? ಯಾರೋ
ಹೊರಗಿನವರು
ಬ೦ದು
ನಕ್ಷೆಯಲ್ಲಿ
ಇಲ್ಲಿ
ಇಲ್ಲಿ
ರೇಖೆಗಳನ್ನು
ಎಳೆದುಬಿಟ್ಟರೆ
ಆಯಿತೇ
. ಈ
ನಿರ್ಣಯ
ಅಸಿ೦ಧು
ಎ೦ದು
ಗಲಾಟೆ
ಮಾಡುತ್ತಿದ್ದಾರೆ. ನಾವೇ
ಚುನಾವಣಾ
ಆಯೋಗಕ್ಕೆ
ಅರ್ಜಿ
ಕೊಡುತ್ತೆವೆ
ಎ೦ದು
ಪ್ರತಿಭಟಿಸುತ್ತಿದ್ದಾರೆ.
ಇ೦ದ್ರನ
ಕೈಲಿ
ಈಗ
ಅಧಿಕಾರವಿದೆ. ಅದನ್ನು
ಅವನು
ಚುನಾವಣೆಯಲ್ಲಿ
ದುರುಪಯೋಗಿಸುತ್ತನೆ
ಎ೦ದು
ನಹುಷ
ನ
ಕಡೆಯವರ
ಆರೋಪ. ಸ್ವರ್ಗವಾಸಿಗಳ
ಆಸೆಯೇನು
ಎ೦ದು
ಇ೦ದ್ರನ
ಪಕ್ಷದವರು
ಗುಟ್ಟಾಗಿ
ವಿಚಾರಿಸಿದಾಗ
ಅನೇಕ
ಸ್ವರ್ಗವಾಸಿಗಳು
' ಭೂಲೋಕದಲ್ಲಿರುವ
ನಮ್ಮವರಿಗೆ
ಮನೆಗಳನ್ನು
ತೆಗೆದುಕೊಡಿ
' ಎ೦ದು
ಕೇಳಿದ್ದರ೦ತೆ. ಅದಕ್ಕೆ
ಇ೦ದ್ರ
ಒ೦ದು
ಯೋಜನೆಯನ್ನು
ಪ್ರಾರ೦ಭಿಸಿ
ಅದಕ್ಕೆ
' ಗೃಹ
ಭಾಗ್ಯ
' ಎ೦ದು
ನಾಮಕರಣ
ಮಾಡಿದ. ಆದರೆ
ಆ ವಿಷಯ
ತಿಳಿದ
ತಕ್ಷಣ
ಭಾಗ್ಯ
ಎ೦ಬ
ಹೆಸರಿದ್ದ
ಮಹಿಳೆಯರಲ್ಲಾ
ಧರಣಿ
ನಡೆಸಿದ್ದರಿ೦ದ
ಆ
ಹೆಸರನ್ನು
ತೆಗೆದು
ಹಾಕಲಾಯಿತು. ನಹುಷನ
ಪಕ್ಷದವರು
ಇದರ
ಬಗ್ಗೆ
ಚುನಾವಣಾ
ಯೋಜನೆಗೆ
ದೂರು
ಕೊಟ್ಟಾಗ
ಭಾಗ್ಯದ
ಜೊತೆಗೆ
ಆ
ಯೋಜನೆಯೂ
ಹೊರಟು
ಹೋಯಿತು.
ಇದಲ್ಲದೆ
ಇ೦ದ್ರ
ಮತ್ತೊ೦ದು
ಹೊಸ
ಯೋಜನೆಯನ್ನೂ
ಮೆಲಕು
ಹಾಕುತ್ತಿದ್ದಾನೆ.
ನರಕವಾಸಿಗಳು
ಸ್ವರ್ಗಕ್ಕೆ
ಆಗಾಗ್ಗೆ
ಹೋಗುವುದು
ಹೊಸದೇನಲ್ಲ. ಕೆಲವರು
ನರಕದಲ್ಲೆ
ಒಳ್ಲೆಯ
ಕೆಲಸ
ಮಾಡುತ್ತಿದ್ದು
ಅವರಿಗೆ
ಬಡ್ತಿ
ಸಿಕ್ಕಿ
ಸ್ವರ್ಗವನ್ನು
ಪ್ರವೇಶಿಸುತ್ತಾರೆ.
ಕೆಲವರು
ನರಕದ
ಜೀವನದಿ೦ದ
ಬೇಸತ್ತು
ಹೇಗೋ
ಸ್ವರ್ಗಕ್ಕೆ
ಬ೦ದುಬಿಡುತ್ತಾರೆ.
ಅ೦ತಹವರೆಲ್ಲ
ತನಗೆ
ಮತ
ಹಾಕುವುದಿಲ್ಲ
ಎ೦ದು
ಇ೦ದ್ರನಿಗೆ
ಗೊತ್ತು. ಆದ್ದರಿ೦ದ
ಅವರನ್ನು
ತಡೆಯಲು
ಸ್ವರ್ಗ
ಮತ್ತು
ನರಕಗಳ
ಮಧ್ಯೆ
ಒ೦ದು
ಬಹು
ಎತ್ತರದ
ಗೋಡೆಯನ್ನು
ಕಟ್ಟುತ್ತೇನೆ
ಎ೦ದು
ಪ್ರಚಾರ
ಮಾಡುತ್ತಿದ್ದಾನೆ.
ಕೆಲವು
ಸ್ವರ್ಗವಾಸಿಗಳು
ಇದನ್ನು
ಸ್ವಾಗತಿಸಿದರೂ
ಈ
ಯೋಜನೆಗೆ
ವಿರೋಧವೂ
ಇದೆ. ಇ೦ದ್ರ
ಮತ್ತು
ನಹುಷ
ಇಬ್ಬರೂ
ತಮ್ಮ
ತಮ್ಮ
ಕಡೆಯವರನ್ನು
ಕಾಪಾಡಿಕೊಳ್ಳಲು
ಭಗೀರಥ
ಪ್ರಯತ್ನ
ಮಾಡುತ್ತಿದ್ದಾರೆ.
ಇದಕ್ಕ್ಕಾಗಿ
ಭೂಲೋಕದಲ್ಲಿ
ಹುಟ್ಟಿಕೊ೦ಡಿರುವ
, ಅಮರಾವತಿಯನ್ನೂ
ಮೀರಿಸುವ
, ಕೆಲವು
ವಿಶ್ರಾಮಧಾಮ
( ರಿಸಾರ್ತ್)
ಗಳನ್ನು
ಬಳಸಿಕೊಳ್ಳುತ್ತಿದ್ದಾರೆ.
ಹೀಗಿರುವಾಗ
ನಹುಷನ
ಪಕ್ಷದವರು
ಚುನಾವಣಾ
ಆಯೋಗದ
ಬಗ್ಗೆಯೇ
ಆಕ್ಷೇಪಣೆಗಳನ್ನು
ತ೦ದರು.
ಇ೦ದ್ರನ
ಪಕ್ಷದಲ್ಲಿ
ಕುಬೇರನ೦ತಹ
ಶ್ರೀಮ೦ತನಿರುವಾಗ
ಲಕ್ಷ್ಮಿ
ಯ೦ತಹ
ಶ್ರೀಮ೦ತ
ಪತ್ನಿಯನ್ನು
ವಿವಾಹವಾಗಿರುವ
ವಿಷ್ಣು
ಅವನನ್ನು
ಬೆ೦ಬಲಿಸದೇ
ವಿಧಿಯಿಲ್ಲ.ಆ
ದ್ದರಿ೦ದ
ವಿಷ್ಣು
ಹೇಗೆ
ಪಕ್ಷಾತೀತ
ನಿರ್ಣಯಗಳನ್ನು
ತೆಗೆದುಕೊಳ್ಳಬಲ್ಲ
ಎ೦ದು
ನಹುಷನ
ಪಕ್ಷದವರು
ಆರೋಪಿಸ
ಚುನಾವಣಾ
ಆಯೋಗವನ್ನು
ವಿಸ್ತರಿಸಬೇಕೆ೦ದು
ಧರಣಿ
ನಡೆಸಿದರು. ಅದಲ್ಲದೆ
ಅಪ್ಸರೆಯರು
ಆಯೋಗದಲ್ಲಿ
ಮಹಿಳೆಯೊಬ್ಬಳಾದರೂ
ಇರಬೇಕು
ಎ೦ದೂ
ಧರಣಿ
ನಡೆಸಿದರು. ಸರಿ,
ಶಿವ
ಪಾರ್ವತಿ
ಆಯೋಗಕ್ಕೆ
ಸೇರಲಿ
ಎ೦ದು
ಪ್ರಸ್ತಾವಿಸಿದ. ಅದಕ್ಕೆ
ವಿಷ್ಣು
' ಪಾರ್ವತಿ
ಬ೦ದರೆ
ಲಕ್ಶ್ಮಿಯೂ
ಬರಲೇಬೇಕು
'ಎ೦ದ.
ಇವೆಲ್ಲವನ್ನೂ
ಸಾವಧಾನದಿ೦ದ
ನೋಡುತ್ತಿದ್ದ
ಬ್ರಹ್ಮ ಸುಮ್ಮನಿದ್ದರೂ
ಸರಸ್ವತಿ
ದೇವಿ
ಸುಮ್ಮನೆ
ಕೂರಲಿಲ್ಲ. 'ಅವರಿಬ್ಬರು
ಮಾತ್ರ
ಏಕೆ
? ನಾನೂ
ಇರಬೇಕು' ಎ೦ದು
ಪ್ರತಿಭಟಿಸಿದಾಗ
ಅವಳನ್ನೂ
ಸೇರಿಸಲಾಯಿತು
. ಅ೦ತೂ
ಈಗ
ಚುನಾವಣೆ
ಆಯೋಗದಲ್ಲಿ
೬
ಸದಸ್ಯರು
: ಬ್ರಹ್ಮ,
ವಿಷ್ಣು,
ಶಿವ,
ಶಾರದೆ,
ಲಕ್ಷ್ಮಿ,
ಮತ್ತು
ಪಾರ್ವತಿ. ಆದರೆ
ಇದು
ಸಮ
ಸ೦ಖ್ಯೆ
ಆಯಿತಲ್ಲವೆ
! ಇದನ್ನು
ಸರಿಪಡಿಸಲು
ಮತ್ತೊಬ್ಬ
ವ್ಯಕ್ತಿ
ಬೇಕಲ್ಲವೆ? ಸ್ವರ್ಗವಾಸಿಗಳಲ್ಲಿಯೇ
ಖ್ಯಾತರಾದ
ವರಲ್ಲಿ
ಒಬ್ಬರನ್ನು
ಆಯ್ಕೆ
ಮಾಡುವ
ಸೂಚನೆ
ಇದೆ
ಈ
ಚುನಾವಣೆ
ಎ೦ದು
? ಇದರ
ಪರಿಣಾಮವೆನು
? ಆತುರ
ಬೇಡ
! ಅಲ್ಲಿಗೆ
ಹೋದಾಗ
ಎಲ್ಲವೂ
ತಿಳಿಯುತ್ತದೆ
. ಮತದಾನದಲ್ಲಿ
ನೀವೂ
ಭಾಗವಹಿಸುವರ೦ತೆ
!
-------------------------------------------------------------------------------------------------
########################################################################
ಅಮೆರಿಕಾ ಅಮೆರಿಕಾ
ಪಾಲಹಳ್ಳಿ ವಿಶ್ವನಾಥ್
ಗ೦ಡ ಹೋದ ಮೇಲೆ ಮಲೆನಾಡಿನ ಅವರ ಜಮೀನನ್ನು ಕಾವೇರಮ್ಮನವರೊಬ್ಬರೇ ನೋಡಿಕೊಳ್ಳುತ್ತಿದ್ದರು. ಇರುವನೊಬ್ಬ ಮಗ. ಶ್ರೀನಿವಾಸ. ಅವನು ಅಲ್ಲೇ ಇದ್ದು ಎಲ್ಲ ನೋಡಿಕೊಳ್ಳುತ್ತಾನೆ ಎ೦ದುಕೊ೦ಡಿದ್ದರು. ಆದರೆ ಮಗ ಕೇಳದೆ ದೂರದ ಬೆ೦ಗಳೂರಿಗೆ ಹೋಗಿ ಇ೦ಜನಿಯರಿ೦ಗ್ ಕಾಲೇಜಿಗೆ ಸೇರಿದ್ದ. ನಾಲ್ಕು ವರ್ಷಗಳನ್ನು ಕೂಡಾ ಮುಗಿಸಿದ್ದ. . ಇನ್ನೇನು ಬ೦ದು ಬಿಡುತ್ತಾನೆ ಎ೦ದು ಕೊ೦ಡು ಅವನಿಗೆ ಹುಡುಗಿಯನ್ನೂ ನೋಡುತ್ತಿದ್ದರು.
ಒ೦ದು ದಿನ ಮಧ್ಯಾಹ್ನದ ಹೊತ್ತು. ಜಗಲಿಯ ಮೆಲೆ ವಿಶ್ರಾ೦ತಿ ತೆಗೆದುಕೊಳ್ಳುತ್ತಿದ್ದಾಗ ಗುಮಾಸ್ತೆ ಸುಬ್ಬಣ್ಣ ಒ೦ದು ಪತ್ರ ತ೦ದುಕೊಟ್ಟರು. . ಕನ್ನಡಕ ಹಾಕಿಕೊ೦ಡು ಮಗನ ಪತ್ರ ಓದುತ್ತಾ ಓದುತ್ತಾ ಕಾವೇರಮ್ಮನವರಿಗೆ ತಲೆಯ ಮೆಲೆ ಆಕಾಶ ಬಿದ್ದ೦ತಾಯಿತು: ' ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಓದಲು ಸ್ಕಾಲರ್ಶಿಪ್ ಸಿಕ್ಕಿದೆ. ಇನ್ನು ಮೂರು ತಿ೦ಗಳಲ್ಲಿ ಹೊರಡಲೇ ಬೇಕು ' ಎ೦ದು ಶ್ರೀನಿವಾಸ ಬರೆದಿದ್ದ. ಶಿವಮೊಗ್ಗ ಜಿಲ್ಲೆಯನ್ನೇ ಬಿಡದಿದ್ದ ಕಾವೇರಮ್ಮ ಮಗನನ್ನು ಬೆ೦ಗಳೂರಿಗೆ ಕಳಿಸಲೇ ಮೀನಮೇಷ ಎಣಿಸಿದ್ದರು. ಈಗ ಅಮೆರಿಕ ಎನ್ನುವ ಪದ ಕೇಳಿ ತಲೆ ಸುತ್ತಿ ಬರುವ೦ತಾಗಿತ್ತು. ಏನು ಮಾಡಬೇಕು ಎ೦ದು ಯೋಚಿಸುತ್ತಿದ್ದಾಗ ಸುಬ್ಬಣ್ಣ ಗುರುಗಳನ್ನು ನೋಡಿಕೊ೦ಡು ಬರೋಣ ಎ೦ದರು. ಮಾರನೆಯ ದಿನ ಬೆಟ್ಟ ಹತ್ತಿ ಗುರುಗಳನ್ನು ಭೇಟಿಮಾಡಿ ವಿಷಯವನ್ನು ತಿಳಿಸಿ ಏನಾದರೂ ಮಾಡಿ ಮಗನನ್ನು ಅಮೆರಿಕದ ಪ್ರಯಾಣದಿ೦ದ ನಿಲ್ಲಿಸಿ ಎ೦ದು ಬೇಡಿಕೊ೦ಡರು. ಅದಕ್ಕೆ
ಗುರುಗಳು ಹೇಳಿದರು " ಹೌದು, ಮಾಡಬಲ್ಲೆ. ಆದರೆ ನೀವು ಶಿವಮೊಗ್ಗಕ್ಕೆ ಹೋಗಿ ಅಲಿನ ಧನ್ವ೦ತರಿ ರಸ್ತೆಯ ಯಾವುದಾದರೂ ಒ೦ದು ಮನೆಯಿ೦ದ ಐದು ಸಾಸುವೆ ಕಾಳು ತೆಗೆದುಕೊ೦ದು ಬರಬೇಕು.. ನಿಲ್ಲಿ ! ಆದರೆ ಒ೦ದು ಷರತ್ತು. ಆದರೆ ಆ ಮನೆಯಿ೦ದ ಯಾರೂ ಅಮೆರಿಕಕ್ಕೆ ಹೋಗಿರಬಾರದು"
ಕಾವೇರಮ್ಮನವರು ಭಾನುವಾರ ಬೆಳಿಗ್ಗೆ ಸುಬ್ಬಣ್ಣನವರ ಜೊತೆ ಬಸ್ ಹತ್ತಿ ಶಿವಮೊಗ್ಗಕ್ಕೆ ಹೋಗಿ ಅಲ್ಲಿಯ ಧನ್ವ೦ತ್ರಿ ರಸ್ತೆ ಗೆ ಹೋದರು . ರಸ್ತೆಯ ಮೊದಲ ಮೂರು ಮನೆಗಳಿಗೂ ಬೀಗ ಬಡಿದಿದ್ದು ನಾಲ್ಕನೆ ಮನೆಯ ಬೆಲ್ ಒತ್ತಿದರು. ಮನೆಯಾಕೆ ಬ೦ದು " ಏನು ಬೇಕು ?" ಎ೦ದು ವಿಚಾರಿಸಿದರು . " ಏನಿಲ್ಲ, ನನಗೆ ಹತ್ತು ಕಾಳು ಸಾಸುವೆ ಬೇಕು ?" ಎ೦ದು ಕೇಳಿದಾಗ " ಏನು ಒಗ್ಗರಣೆ ಹಾಕ್ತಾ ಇದ್ದೀರಾ? ಸಾರಿಗಾ? ಹತ್ತು ಕಾಳಲ್ಲಿ ಏನಾಗುತ್ತೆ. ಇಪ್ಪತ್ತು ಕೊಡ್ತೀನಿ ತೆಗೆದುಕೊ೦ಡುಹೋಗಿ . ನೀವು ಯಾರು?ನಿಮ್ಮನ್ನು ನೋಡಿಲ್ಲವಲ್ಲ ? ಹೊಸಬರಾ? ಯಾವಾಗ ನಮ್ಮ ಬೀದಿಗೆ ಬ೦ದಿರಿ?". ಈ ಪ್ರಶ್ನೆಗಳ ಸಾಲಿಗೆ ಉತ್ತರ ಕೊಡುವ ಮು೦ಚೆಯೇ ಅಕೆ ಅಡಿಗೆ ಮನೆಗೆ ಹೋಗಿ ಒ೦ದು ಪುಟ್ಟ ಬಟ್ಟಲಿನಲ್ಲಿ ಸಾಸುವೆಕಾಳು ತ೦ದರು.ಅದನ್ನು ತೆಗೆದುಕೊಳ್ಳುವ ಮು೦ಚೆ ಕಾವೇರಮ್ಮ ಕೇಳಿದರು.
" ನಿಮ್ಮ ಮನೆಯಲ್ಲಿ ಯಾರೂ ಅಮೆರಿಕಾ ದೇಶಕ್ಕೆ ಹೋಗಿಲ್ಲ ತಾನೆ?"
ಅದನ್ನು ಕೇಳಿದ ತಕ್ಷಣ ಆಕೆ ಬಟ್ಟಲನ್ನು ಕೆಳಗೆ ಇಟ್ಟು ಜೋರಾಗಿ ಅಳಲು ಶುರುಮಾಡಿದರು. ಕಾವೇರಮ್ಮ
" ಏಕಮ್ಮ ? ಎಕೆ?"
" ಆ ಹಾಳು ಅಮೆರಿಕ ! ನನ್ನ ಇಬ್ಬರು ಮಕ್ಕಳನ್ನೂ ಕರೆಸ್ಕೊ೦ಬಿಟ್ಟಿದೆ"
"ಅ೦ದರೆ"
" ಹೌದು, ಇಪ್ಪತ್ತ್ತು ವರ್ಷಗಳ ಹಿ೦ದೆ ಮೊದಲನೆ ಮಗ ಹೋದ, ಅಲ್ಲಿಯೇ ಉತ್ತರದ ಕಡೆಯ ಹೆಣ್ನನ್ನು ಮದುವೆಯಾದ . ಸದ್ಯ ನಮ್ಮ ದೇಶದವಳು ಅ೦ತ ತೃಪ್ತಿ ಪಟ್ಟಿಕೊಳ್ಳಬೆಕು. ಆಮೇಲೆ ಹತ್ತು ವರ್ಷಗಳ ಹಿ೦ದೆ ಎರಡನೆಯವನನ್ನು ಕರೆಸಿಕೊ೦ಡ .. ಮದುವೇನೂ ಇಲ್ಲಿ೦ದ ಮಾಡಿಯೆ ಕಳಿಸಿದೆ. ಆದರೆ ಆಕೆ ಅಲ್ಲಿಯವರಿಗಿ೦ತ ಹೆಚ್ಚಾಗಿ ಆಡ್ತಾಳೆ' . ಆಟೋ ರಿಕ್ಷಾಲೂ ಓಡಾಡೋಲ್ಲ. "
" ಬ೦ದು ನಿಮ್ಮನ್ನು ನೋಡೋಲ್ವೆ ?
" ಬರ್ತಾರೆ , ಒ೦ದೆರಡು ದಿನ ಇದ್ದು ಹೋಗ್ತಾರೆ. ನನ್ನನ್ನು ನೋಡೋಕೆ ಬರ್ತಾರೆ ಅ೦ದುಕೊ೦ಡಿರಾ? ಇಲ್ಲ, ಯಾವುದೋ ಹಣಕಾಸು ವ್ಯವಹಾರ ಇಟ್ಟುಕೊ೦ಡಿದಾರೆ "
ಕಾವೇರಮ್ಮ ಬೀಗ ಹಾಕಿದ ಮನೆಗಳ ಬಗ್ಗೆ ಕೇಳಿದರು. " ನನ್ನ ಗೋಳೆ ಅಲ್ಲೂ ! ಮಕ್ಕಳೆಲ್ಲಾ ಅಮೆರಿಕದಲ್ಲಿ ಇದ್ದಾರೆ, ದೊಡ್ದವರೆಲ್ಲಾ ವೃದ್ಧಾಶ್ರಮಗಳಲ್ಲಿ " ಎನ್ನುವ ಉತ್ತರ ಬ೦ದಿತು.
ಮನೆಯಿ೦ದ ಹೊರಬ೦ದ ಕಾವೇರಮ್ಮ " ಏಕೋ ಹೆದರಿಕ್ ಅಗುತ್ತಲ್ವಾ ಸುಬ್ಬಣ್ಣ " ಎ೦ದು ದುಗುಡದ ಮನಸ್ಸಿನಿ೦ದ ಮು೦ದೆ ನಡೆದರು. . ಮತ್ತೆ ಮು೦ದಿನ ಮೂರು ಮನೆಗಳಿಗೂ ಬೀಗ ಹಾಕಿತ್ತು. ಕಡೆಗೂ ಒ೦ದು ಬೀಗ ಹಾಕದಿದ್ದ ಮನೆ ಸಿಕ್ಕಿತು. ಗೇಟು ತೆಗೆದು ಒಳಗೆ ಹೋದಾಗ ಮನೆಯಿ೦ದ ಯಾರೋ ಹೊರ ಬ೦ದರು: ಒಬ್ಬ ಬಿಳಿಯ ತರುಣಿ ! ನಗುತ್ತಲೇ ' ಒಳಗೆ ಬನ್ನಿ ' ಎ೦ದು ಕನ್ನಡದಲ್ಲೆ ಕಷ್ಟಪಟ್ಟಿಕೊ೦ಡು ಹೇಳಿದಳು. ಒಳಗೆ ಬ೦ದಾಗ ಮನೆಯಾಕೆ ಅವರನ್ನು ಸ್ವಾಗತಿಸಿ " ಏನು " ಎ೦ದು ಕೇಳಿದಾಗ ಕಾವೇರಮ್ಮ ವರದಿ ಒಪ್ಪಿಸಿದರು. " ಸಾರಿ, ನಿಮಗೆ ಸಹಾಯ ಮಾಡೊಕೆ ಆಗೊಲ್ಲ. ನನ್ನಮಗ ಐದು ವರ್ಷದ ಹಿ೦ದೆ ಹೋದ.ಅಲ್ಲೇ ಮದುವೇನೂ ಮಾಡಿಕೊ೦ಡ. ನೋಡಲಿಲ್ಲವೆ ನನ್ನ ಸೊಸೇನ ! ಚಿನ್ನದ೦ತಹ ಹುಡುಗಿ. ಇಲ್ಲಿ ಹುಡುಕಿದ್ದರೂ ಇಷ್ಟು ಒಳ್ಳೆ ಹುಡುಗಿ ಸಿಗುತ್ತಿರಲಿಲ್ಲ " . ಸರಿ, ಏಕೋ ಕೆಲಸವೇ ಅಗ್ತಾ ಇಲ್ಲವಲ್ಲ ಎ೦ದುಕೊ೦ಡು ಕಾವೇರಮ್ಮ ಹೊರಟರು. ಹೊರಡುವ ಮು೦ಚೆ ಬೀಗ ಹಾಕಿದ್ದ ಮನೆಗಳ ವಿಷಯ ಕೇಳಿದರು. ಮಕ್ಕಳೆಲ್ಲಾ ಅಮೆರಿಕದಲ್ಲಿ ಇದ್ದಾರೆ೦ಬ ಉತ್ತ ರ ಬ೦ದಿತು. ದೊಡ್ಡವರು ಎ೦ಬ ಪ್ರಶ್ನೆಗೆ ಅವರೆಲ್ಲಾ ಅ ಮಕ್ಕಳಾ ಜೊತೆಯೇ ಇದ್ದಾರೆ ಎ೦ದು ಗೊತ್ತಾಯಿತು
ಅ೦ತೂ ಸಾಲಿನಲ್ಲಿ ಕಡೆಯ ಮನೆ. ಸರಿ, ಕಡೆಯ ಅವಕಾಶ ಎ೦ದೇ ಕಾವೇರಮ್ಮ ಒಳಗೆ ಹೋದರು.
ಮನೆಯ ಇಬ್ಬರು ಮಕ್ಕಳೂ ಇಲ್ಲೇ ಕೆಲಸ ಮಾಡುತ್ತಿದ್ದಾರೆ ಎ೦ದು ತಿಳಿಯಿತು. ಸದ್ಯ, ಕಡೇಗೂ ಸಾಸುವೆ ಕಾಳು ಸಿಗುತ್ತೆ ಅ೦ತ ಕಾವೇರಮ್ಮನವರಿಗೆ ಹರ್ಷವಾಯಿತು ಆದರೆ ಮನೆಯವರು " " ಅಯ್ಯೋ, ಏನು ಮಾಡೋಣ? ನಾವು ಕಾಶಿಗೆ ಹೋಗಿದ್ದಾಗ ಸಾಸುವೆ ಬಿಟ್ಟು ಬ೦ದೆವಲ್ಲ. ನಾವು ಯಾವುದಕ್ಕೂ ಸಾಸುವೆ ಒಗ್ಗರಣೆ ಹಾಕುವುದಿಲ್ಲ" ಎ೦ದುಬಿಟ್ಟರು.
ಮಾರನೆಯ ದಿನ ಬೆಟ್ಟದ ಮೇಲಿನ ಮಠಕ್ಕೆ ವಾಪಸ್ಸು ಬ೦ದು ಕಾವೇರಮ್ಮ ಗುರುಗಳಿಗೆ ನಮಸ್ಕಾರ ಮಾಡಿದರು." ಏನು ತಾಯಿ, ಸಾಸುವೆ ಕಾಳು ಸಿಗಲಿಲವೇ"ಎ೦ದು ಗುರುಗಳು ಕೇಳಿದ್ದಕ್ಕೆ " ಸ್ವಾಮಿ ನಿಮಗೆ ಗೊತ್ತಿಲ್ಲದ್ದು ಏನಿದೆ ? . ನನ್ನ ಹಣೆ ಬರಹ. ಶ್ರೀನಿವಾಸನ್ನ ಯಾಕೆ ನಿಲ್ಲಿಸಲಿ? ಆದರೆ ಒಬ್ಬನ್ನೇ ಕಳಿಸಸೋಲ್ಲ. ನಾನೂ ಅವನ ಜೊತೆ ಹೋಗುತ್ತೀನಿ..ಆಶೀರ್ವಾದ ಮಾಡಿ"ಎ೦ದು ಕಾವೇರಮ್ಮ ಗುರುಗಳಿಗೆ ನಮಸ್ಕಾರ ಮಾಡಿ ಮನೆಗೆ ವಾಪಸ್ಸು ಹೊರಟರು
###########################################################
###########################################################
ಅಂಬಾನಿಯ ಆಹ್ವಾನ ಪತ್ರಿಕೆ
ಮನೆಗೆ ಹೋಗಿ ಹೆಂಡತಿಯನ್ನು ಕೇಳಿದ
" ಇವತ್ತು ನನಗೆ ಏನಾದರೂ ಕೊರಿಯರ್ ಬಂದಿತ್ತೆ?"
" ನಿಮಗೆ ಯಾವ ಕೊರಿಯರ್ ಬರ್ತಾನೆ?"
" ಸರಿ, ಏನಾದರೂ ಪೋಸ್ಟ್ ಬಂದಿತ್ತೆ ?"
" ಇಲ್ಲ, ಏಕೆ?"
" ಒಂದು ಅಹ್ವಾನ ಪತ್ರಿಕೆ ಬರಬೇಕಿತ್ತು"
" ಯಾವುದಕ್ಕೆ ಆಹ್ವಾನ?"
" ಒಂದು ಮದುವೆಯದ್ದು ?"
" ಯಾರದು ? ನಮ್ಮ ಸಂಬಂಧೀಕರದ್ದು ಯಾವುದೂ ಇಲ್ಲವಲ್ಲ . ನಿಮ್ಮ ಆಫೀಸಿನವರದ್ದಾ?"
" ಇಲ್ಲ ಇಲ್ಲ ! ನಿನಗೆ ಅವರು ಗೊತ್ತಿಲ್ಲ ! ..ಅಂದರೆ ನನಗೆ ಅವರು ಗೊತ್ತು ಅಂತ ನಿನಗೆ ಗೊತ್ತಿಲ್ಲ "
" ಆಂಥವರು ಯಾರು?"
" ಅಂಬಾನಿಯವರು !"
" ಯಾವ ಅಂಬಾರಿ? ಯಾವ ಆನೆ?"
" ಇದು ಅಂಬಾನಿ ! ಅಂಬಾರಿ ಅಲ್ಲ ಅಮ್ ... ಬಾ.. ನಿ ! ಸ ರಿ ಗ ಮ ಪ ದ ನಿ ಸ ಇದೆಯಲ್ಲ ಅದರಲ್ಲಿ ರಿ ಅಲ್ಲ ನಿ "
" ಆಯ್ತು ! ಗೊತ್ತಾಯಿತು ಅಂಬಾ ನಿ ! ಯಾವ ಆಂಬಾನಿ ಅಂತ ಕೇಳಬಹುದೇ? ನಿಮ್ಮ ಆಫೀಸಿನವರಲ್ಲ ಅಂದಿರಿ.. ಅಲ್ಲ ಏನೋ ಗುಮಾನಿ ! ಆ ಆಗರ್ಭ ಶ್ರೀಮಂತ ಅಂಬಾನಿಯವರೋ?"
"ಹೌದು, ಹೌದು !ಅಬ್ಬ! ಕಡೆಗೂ ಗೊತ್ತಾಯಿತು ! ನೀನು ಟ್ಯೂಬು ಲೈಟೇ!"
" ಮುಖೇಶ್ ಅವರೋ ? ಅನಿಲ್ ಅವರೋ? ಸರಿ, ಮುಖೇಶ್ ! ಪೆಡ್ದರ್ ರೋಡಿನಲ್ಲಿ ಎಷ್ಟೋ ಅಂತಸ್ತಿನ ಮನೆ ಉಳ್ಳವರಲ್ಲವೆ . .. ಇರಬೇಕು . ಅವರ ಮನೆಯಲ್ಲಿ ಮದುವೆ ಎಂದು ಓದಿದೆ "
" ಅದೇ ಮದುವೆಯ ಅಹ್ವಾನಪತ್ರಿಕೆಯನ್ನು ನಾನು ನಿರೀಕ್ಷಿಸುತ್ತಿದ್ದೇನೆ!"!
" ಆಯಿತು . ಈಗ ಒಂದು ಪ್ರಶ್ನೆ ಕೇಳಬಹುದೆ?"
" ಏಕೋ ಬಹಳ ಕ್ರಾಸ್ ಎಕ್ಸಾಮಿನೇಷನ್ ಆಗ್ತಾ ಇದೆ ! ಕೇಳು "
" ಆ ಶ್ರೀಮಂತ ಅಂಬಾನಿಯವರಿಗೆ ಸರಕಾರಿ ಕಛೇರಿಯ ಈ ಮಧ್ಯ ದರ್ಜೆಯ ಕಾರಕೂನ ಹೇಗೆ ಪರಿಚಯವಾದರು ? "
" ಹಾಸ್ಯ ಮಾಡ್ತಾ ಇರು ! ಮಧ್ಯ ದರ್ಜೆ ಈವತ್ತು ! ನಾಳೆ ಮೇಲು ದರ್ಜೆ ಅಗ್ತೀನಿ. "
" ಅದು ಸರಿ. ಆಗುತ್ತೆ ಆಗುತ್ತೆ ನಿಮ್ಮ ನಿವೃತ್ತಿಯ ಸಮಯದಲ್ಲೇ ಅಗಬಹುದು ! ಆದರೆ ನನ್ನ ಪ್ರಶ್ನೆ ಗೆ ಉತ್ತರ ಸಿಗಲಿಲ್ಲ. ಆ ಶ್ರೀ ಮಂತರಿಗೆ ನೀವು ಹೇಗೆ ಗೊತ್ತು ?
" ಅವರು ನನ್ನ ಸ್ನೇಹಿತರು"
" ಅದೇ ಕೇಳ್ತಾ ಇರೋದು ! ಅದು ಹೇಗೆ ಆಯಿತು ?"
" ನನಗೆ ಆವರು ವೇವ್ ಮಾಡಿದರು"
" ನಿಮಗೆ ಅವರು ವೇವ್ ಮಾಡಿದರು?"
" ಏನು ನೀನು ಗಿಣೀನಾ? .. ಹೇಳ್ತೀನಿ . ನಾನು ಚೌಪಾತಿಯಲ್ಲಿ ರಸ್ತೆ ದಾಟಲು ಹಿಂತಿದ್ದೆ . ಅಗ ಅವರ ಕಾರು ಆಲ್ಲಿ ಬಂದು ನಿಂತಿತು. ಅದರಲ್ಲಿ ಮುಖೇಶ್ ಕುಳಿತಿದ್ದರು. ನಾನು ಅವರಿಗೆ ವೇವ್ ಮಾಡಿದೆ ಅವರು ಮುಗಳ್ನಕ್ಕು
ವಾಪಸ್ಸು ವೇವ್ ಮಾಡಿದರು ."
" ಅಂದರೆ ಇದು ವೇವ್ ವೇವ್ ಸಂಬಂಧ.. ಹೀಗಾ.? ನೋಡಿ,ನನ್ನ ಕೈ"
" ಹೌದು ! ಆದರೆ ಅವರಿಗೆಲ್ಲ ಇದು ಅಭ್ಯಾಸ ಅಲ್ವಾ ! ನಿನಗಿಂತ ಚೆನ್ನಾ ಗಿಯೇ ವೇವ್ ಮಾಡಿದರು ! ಬರೀ ವೇವ್ ಆಲ್ಲ. ನಕ್ಕರು ಕೂಡ ! ಆಳವಾದ ಸಂಬಂಧಗಳೆಲ್ಲಾ ಹೀಗೆಯೇ ಶುರುವಾಗುತ್ತವೆ ಗೊತ್ತಾ?"
"ಅದು ಮುಖೇಶ್ ಅಂಬಾನಿ ಎಂದು ನಿಮಗೆ ಚೆನ್ನಾಗಿ ಗೊತ್ತೋ?..ಕಾರಿನ ಗಾಜು ಕಪ್ಪಗಿದ್ದಿರಬೇಕಲ್ಲವೆ ?
" ನಾನು ಬಹಳ ಹತ್ತಿರ ಇದ್ದೆ . ಅದಕ್ಕೆ .. ಇಷ್ಟೇ ದೂರ .."
" ನೀವೊಬ್ಬರೇನಾ ಅಲ್ಲಿದ್ದದ್ದು ?"
" ಏನು ಪ್ರಶ್ನೆ ಇದು ! ಚೌಪಾತಿಯಲ್ಲಿ ಜನ ರಸ್ತೆ ದಾಟ್ತಾನೆ ಇರೋಲ್ಲ ?
" ಅಂದರೆ ನಿಮ್ಮ ಜೊತೆ ಬಹಳ ಜನ ಇದ್ದರೂ ..ಅಂಬಾನಿಯವರು ನಿಮಗೆ ಮಾತ್ರ ವೇವ್ ಮಾಡಿದರು. ಅಲ್ಲ್ವೆ?"
" ಹೌದು, ನಕ್ಕರು ಕೂಡ .ಏನಿದು ಕ್ರಾಸ್ ಎಕ್ಸ್ಸಮಿನೇಷನ್ ಮುಗಿಯೋಹಾಗೇ ಕಾಣಲಿಲ್ಲವಲ್ಲ. .. ಸರಿ ಇರಬಹುದು"
" ಅಂಬಾನಿಯವರು ನಿಮಗೆ ಮಾತ್ರ ಅಲ್ಲ, ಅಲ್ಲಿ ನಿಂತಿದ್ದ ಎಲ್ಲರಿಗೂ ವೇವ್ ಮಾಡಿರಬಹುದು ಅಲ್ಲವೇ"
ಅಂದರೆ ನಿಮ್ಮನ್ನು ನೋಡಿರದ ಸಾಧ್ಯತೆಯೂ ಇದೆ ಅಲ್ಲವೇ ಯುವರ್ ಹಾನರ್"
" ಟೀವಿ ನೋಡೋದು ಜಾಸ್ಸ್ಸ್ತಿ ಯಾಗಿದೆ "
" ಬಿಡಿ. ನಿಮಗೇ ವೇವ್ ಮಾಡಿದರು ಅಂದುಕೊಳ್ಳೋಣ.. ನಿಮ್ಮ ಹೆಸರು , ವಿಳಾಸ ಎಲ್ಲ ಅವರಿಗೆ ಹೇಗೆ ತಿಳಿಯುತ್ತೆ?"
"ಅಯ್ಯೋ ಹುಚ್ಚಿ ! ಲೀಲಾಜಾಲ !"
" ನನಗೂ ಬರುತ್ತೆ ಪದಗಳು. ಅಂತರ್ಜಾಲ! ನಾನು ಕೇಳಿದ್ದಕ್ಕೆ ಉತ್ತರ ಕೊಡಿ "
" ಅವರಿಗೆ ಇರುವ ಹಣ ಎಷ್ಟು ? ಈ ದೇಶದ ದೊಡ್ಡವರು ಕೂಡ ಅವರ ಮುಂದೆ ಕೈ ಕಟ್ಟಿಕೊಂಡು ನಿಲ್ತಾರಂತೆ ಗೊತ್ತಾ?... ಅವರ ಪ್ರಭಾವ ಎಷ್ಟು ! . ಏನು ಬೇಕಾದಾರೂ ತಿಳಿದುಕೋತಾರೆ. ಆ ದಿನ, ಆ ಸಮಯದಲ್ಲಿ , ಚೌಪಾತಿಯ ಟ್ರಾಫಿಕ್ ಸ್ಸ್ಸ್ಸಿಗ್ನಲ್ ನಲ್ಲಿದ್ದಾಗ ಅವರು ಡ್ರೈವರ್ ಮಹಾಶಯನಿಗೆ ಹೇಳಿರುತ್ತಾರೆ:: " ಏ ವಾಹನ ಚಾಲಕನೇ ! ನೋಡು ಅಲ್ಲಿ ಹಲ್ಲು ಕಿರಿಯುತ್ತಾ ವೇವ್ ಮಾಡುತ್ತಿರುವ ಆ ವ್ಯಕ್ತಿಯನ್ನು ನೋಡು . ಅವನ ಮುಖವನ್ನು ಕಾರಿನ ಕ್ಯಾಮೆರಾದಲ್ಲಿ ಸೆರೆ ಹಿಡಿ. ಆವನು ಯಾರು, ಹೆಸರೇನು, ವಿಳಾಸವೇನು ಎಂಬುದು ನನಗೆ ತಿಳಿಯಬೇಕು. ನನಗೆ ಈ ಮಾಹಿತಿ ೨೪ ಗಂಟೆಯೊಳಗೆ ಬೇಕು. .. ೨೪ ಏನು ೧೨ ಗಂಟೆಯ ಒಳಗೇ ಅವರಿಗೆ ಈ ಮಾಹಿತಿ ಸಿಕ್ಕಿರುತ್ತೆ !"
" ಅಂತೂ ನಿಮ್ಮ ವಿಷಯ ಎಲ್ಲಾ ಅಂಬಾನೀಯವರಿಗೆ ತಿಳಿದಿದೆ !"
" ಅವತ್ತು ನಮ್ಮಿಬ್ಬರ ಮಧ್ಯೆ ಇನ್ನೊಂದು ಸಂಬಧವೂ ಹುಟ್ಟಿತು. ನಮ್ಮಿಬ್ಬರ ಮಧ್ಯೆ ಒಂದು ತರಹ ವಿದ್ಯುತ್ ಶಕ್ತಿಯ ವಿನಿಮಯ ವಾಯಿತು. "
"ಬ್ಯಾಟರಿ, ಜನರೇಟರ್ ಇಲ್ಲದೆಯೇ ? "
". ನನ್ನ ಹೆಸರಿನ ಕಡೆಯ ಅಕ್ಷರವೂ ಅವರ ಹೆಸರಿನ ಕಡೆಯ ಅಕ್ಷರವೂ ಒಂದೇ !"
" ಓ ! ಇದು ವೇವ್ ವೇವ್ ಅಲ್ಲದೆ ಶ್ ಶ್ ಸಂಬಂಧ !"
" ಹಾಸ್ಯ ಮಾಡ್ತಿರು. ಎಲ್ಲ ದೊಡ್ಡವರು ನಮ್ಮಂತಹ ಅಭಿಮಾನಿಗಳಿಗೆ ೧ % ಆಹ್ವಾನಪತ್ರಿಕೆಗಳನ್ನು ಮೀಸಲಾಗಿಟ್ಟುಕೊಂಡಿರುತ್ತಾರೆ. ಅಂದರೆ ಒಟ್ಟು ಹತ್ತು ಸಾವಿರ ಜನರನ್ನು ಕರೆದರೆ ನಮ್ಮಂತಹವರು ನೂರಾದರೂ ಇರ್ತಾರೆ. .. ನೋಡ್ತಾ ಇರು ! . ಅವರೆ ಬಂದು ನಮ್ಮಿಬ್ಬರನ್ನೂ ಆಹ್ವಾನಿಸಬಹುದು "
" ಹೌದು ಬರಬಹುದು. ಬರಬಹುದು ಕಾಯೋಣ "
.......................................................
ಒಂದು ವಾರದ ಆನಂತರ
" ಏನು, ನಿಮ್ಮ್ಮ್ಮ ಅಂಬಾನಿ ಕಡೆಯವರು ಯಾರೂ ಬರಲೇ ಇಲ್ಲ"
" ಪಾಪ ! ನಾವೂ ಅಂತಹ ದೊಡ್ಡವರ ತೊಂದರೆಗಳನ್ನು ಅರ್ಥಮಾಡಿಕೊಳ್ಳಬೇಕು . ಮುಖೇಶ್ ನಮ್ಮ ಪರ ಮಾತಾಡಿರ್ತಾರೆ. ಅದರೆ ನೀತಾಜಿ ತಮ್ಮ ಐ.ಪಿ.ಎಲ್ ಕ್ರಿಕೆಟ್ ಟೀಮನ್ನು ನೆನಸಿಕೊಂಡು ಹರಭಜನ್ ಮರೆತು ಹೋಯ್ತಲ್ಲ ಅಂತಾರೆ. ಆಗ ನನಗೆ ಬರಬೇಕಾದ ಆಹ್ವಾನ ಅವರಿಗೆ ಹೋಗಿರುತ್ತೆ . ಏನು ಮಾಡೋದು ?"
" ನನ್ಗೇನನ್ನಿಸ್ಸುತ್ತೆ ಗೊತ್ತಾ. ಆಗ ನೀತಾಜಿ ಹೇಳಿರ್ತಾರೆ "ಈ ಸತಿ ಇಲ್ಲದಿದ್ದರೂ ನಮಗೆ ಮೊಮ್ಮಗು ಹುಟ್ಟುತ್ತಲ್ಲ, ಅದರ ನಾಮಕರಣಕ್ಕೆ ಅ ನಿಮ್ಮ ಚೌಪಾತಿಯ ಅಭಿಮಾನಿಯನ್ನು ಕರೆದೇ ಕರೆಯೋಣ.. ಅದಿರಲಿ ಯಾವತ್ತಾ ದರೂ ಚೌಪಾತೀಲಿ ನಿಮಗೆ ದೀಪಿಕಾ ಪದುಕೋಣೆ ಸಿಕ್ಕಿದ್ದರಾ? "
--------------- ಪಾಲಹಳ್ಳಿ ವಿಶ್ವನಾಥ್
########################################################################
ಪಾಲಹಳ್ಳಿ ವಿಶ್ವನಾಥ್
ಬಹಳ ಹಿಂದಿನಿಂದಲೂ ನಮ್ಮ ರಾಜ್ಯವನ್ನು ಎರಡು ರಾಜಕೀಯ ಪಕ್ಷಗಳು ನಡೆಸಿಕೊಂಡು ಬರುತ್ತಿವೆ : ಒಂದು ಸಂಪಿಗೆ ಪಕ್ಷ. ಇನ್ನೊಂದು ಬೇವಿನ ಪಕ್ಷ. ಹೆಸರುಗಳ ಬಗ್ಗೆ ಅಂತಹ ರಹಸ್ಯವೇನಿಲ್ಲ. ಸಂಪಿಗೆ ಪಕ್ಷದ ಪ್ರಧಾನ ಕಛೇರಿ ಸಂಪಿಗೆ ರಸ್ತೆಯಲ್ಲಿ ಮತ್ತು ಉಳಿದದ್ದನ್ನು ನೀವೆ ಊಹಿಸಿಕೊಳ್ಳಬಲ್ಲಿರಿ.
ರಾಜಕಾರಣಿಗಳ ಜೀವನ ಸಾಮಾನ್ಯ ಜನರ ಜೀವನದಂತಲ್ಲ; ಆತನ ( ಆಕೆಯ) ಬಾಲ್ಯ ಮತ್ತು ಯೌವನ ದಿಂದ ಆತ ಅನೇಕ ತ್ಯಾಗಗಳನ್ನು ಮಾಡುತ್ತ ಹೋಗಬೇಕಾಗುತ್ತದೆ. ಪಕ್ಕದ ಮನೆಯ ಹುಡುಗರೆಲ್ಲಾ ಇಂಜನಿಯರೋ, ಡಾಕ್ಟರೋ ಆಗುತ್ತಿದ್ದರೆ ಈತ ಶಾಲೆಗೆ ಹೋಗದೆ (ಅಥವಾ ಸ್ವಲ್ಪ ಹೋಗಿ ಬಂದು) ನೇರ ದೇಶಸೇವೆಗೆ ತಯಾರಿ ತೆಗೆದುಕೊಳ್ಳಬೇಕಾಗುತ್ತದೆ. ಈತ ತನ್ನ ಸುತ್ತಲ ಸಣ್ಣಪುಟ್ಟ ವಿವಾದಗಳನ್ನು ಹೇಗಾದರೂ ಬಗೆಹರಿಸಿ ಬೀದಿಯ ಮತ್ತು ನಿಧಾನವಾಗಿ ಮೊಹಲ್ಲಾದ ನಾಯಕ ನಾಗಬೇಕಾಗುತ್ತದೆ. ಆದರೂ ಅದು ಸಾಲದಾಗುತ್ತದೆ. ಮೇಲೆ ಬರಲು ಯಾರಾದರೂ ಒಬ್ಬ ಪ್ರಮುಖ ನಾಯಕನನ್ನು ಆಲೈಸಲೇ ಬೇಕಾಗುತ್ತದೆ. ಗುರುಕುಲದಲ್ಲಿ ಕಷ್ಟಪಡುವ ಯಾವ ಬಾಲಕನ ಶ್ರಮಕ್ಕೂ ಇದು ಕಡಿಮೆ ಇಲ್ಲ. ನಾಯಕನ ಬೇಕು ಬೇಡಗಳನ್ನೆಲ್ಲ ಚೆನ್ನಾಗಿ ತಿಳಿದುಕೊಂಡು ನಿಧಾನವಾಗಿ ಆ ನಾಯಕನ ಹಲವಾರು ಶಿಷ್ಯರ ಪೈಪೋಟಿಯನ್ನು ಮೀರಿ ಮೇಲೆ ಬರಬೇಕಾಗುತ್ತಾದೆ. ತಾವಾಗಿಯೇ ಮೇಲೆ ಹೋದವರು ಇಲ್ಲ ಎಂದಲ್ಲ; ಆದರೆ ಅವರ ಸಂಖ್ಯೆ ಕಡಿಮೆ. ಇಷ್ಟೆಲ್ಲ ಆದ ನಂತರ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಗೆಲ್ಲದೆ ಇದ್ದರೆ
ಅದು ಅವನ ರಾಜಕೀಯ ಜೀವನದ ಕೊನೆ.
ಇಷ್ಟೆಲ್ಲ ಮಾಡಿ ವಿಧಾನಸಭೆಯ ಸದಸ್ಯನಾದ ವ್ಯಕ್ತಿ ತನ್ನ ಓರಗೆಯವರನ್ನೆಲ್ಲಾ ನೋಡಿದಾಗ ಅವರುಗಳಲ್ಲಿ ಒಬ್ಬ ಲಾಯರಾಗಿಯೋ, ಡಾಕ್ಟರಾಗಿಯೋ ,ಇಂಜನಿಯರಾಗಿಯೋ ಒಳ್ಳೇಯ ಹಣಸಂಪಾದಿಸುತ್ತಿರುತ್ತಾರೆ . ನಮ್ಮ ರಾಜಕಾರಣಿಗೆ ಅಷ್ಟಾದ್ದರೂ ಬೇಡವೇ? ಅಗ ಆತ ತಾನು ಮಾಡಿದ 'ಸೇವೆ' ಗಳಿಗೆಲ್ಲಾ ಪ್ರತಿಫಲವನ್ನು ಅಪೇಕ್ಷಿಸುತ್ತಾನೆ. ನಿಜವಾದ ಪ್ರತಿಫಲವೆಂದರೆ ಮಂತ್ರಿಹುದ್ದೆ; ಅದು ಸಿಕ್ಕಿದರೆ ಮಾತ್ರ ಅವನು ತನ್ನನ್ನು ಆರಿಸಿದ ಜನರಿಗೆ ಸರಿಯಾಗಿ ಸೇವೆಮಾಡಲು ಆಗುವುದು ಎಂದು ತಿಳಿದಿರುತ್ತಾನೆ. ಆ ಮಂತ್ರಿಹುದ್ದೆ ಸಿಗಲು ಪಕ್ಷದಲ್ಲಿ ಅನೇಕ ವರ್ಷಗಳ ದುಡಿಮೆ ಅಥವಾ ಯಾವುದೋ ಅದ್ವಿತೀಯ ಸಾಮರ್ಥ್ಯ ಬೇಕಾಗುತ್ತದೆ . ಆದರೆ ಸಾಮಾನ್ಯ ಸದಸ್ಯರಿಗೆ , ಅದೂ ಹೊಸಬರಿಗೆ, ಇರುವ ಒಂದೆ ಅವಕಾಶವೆಂದರೆ ಪಕ್ಷಾಂತರ ಮಾಡುವುದು ನಮ್ಮ ರಾಜ್ಯದ ವಿಧಾನಸಭೆಯಲ್ಲಂತೂ ಇರುವ ೧ಂಂ ಸ್ಥಾನಗಳೂ ಸಾಮಾನ್ಯವಾಗಿ ಎರಡೂ ಪಕ್ಷಗಳಲ್ಲಿ ಸಮನಾಗಿ ಹಂಚಿಹೋಗುವುದರಿಂದ ಈ ಅವಕಾಶ ಇದ್ದೇ ಇರುತ್ತದೆ. ಪ್ರತಿ ಚುನಾವಣೆಯಲ್ಲಿಯೂ ಒಂದಿಬ್ಬರು ಆ ಕಡೆಗೂ ಒಂದಿಬ್ಬರು ಈಕಡೆಗೂ ಹೋಗುತ್ತಾರೆ , ತಮ್ಮನ್ನು ಬೆಳೆಸಿದ ಪಕ್ಶವನ್ನು ತ್ಯಜಿಸುವುದು ಸುಲಭವೇನಲ್ಲ. ಹಾಗೂ ರಾಜಕಾರಣಿ ಅಂತಿಮ ತ್ಯಾಗ ಮಾಡಿ ತನ್ನವರನ್ನು ಬಿಟ್ಟು ವಿರೋಧಿ ಪಕ್ಷವನ್ನು ಒಪ್ಪಿಕೊಳ್ಳುತ್ತಾನೆ. ಹೀಗೆಯೆ ನಡೆಯುತ್ತ ಬಂದು ಒಬ್ಬ ಸದಸ್ಯನಿಗೆ ಅವನಿಗೇ ತಾನು ಯಾವ ಸಮಯದಲ್ಲಿ ಯಾವ ಪಕ್ಷದಲ್ಲಿದೆ ಎಂದು ಹೇಳುವುದು ಕಷ್ಟವಾಗುತ್ತದೆ
ಈ ಪಕ್ಷಾಂತರಕ್ಕೆ ಇತ್ತೀಚೆಗೆ ನಡೆದ ಚುನಾವಣೆ ಸ್ವಾರಸ್ಯಕರ ಉದಾಹರಣೆ. ಚುನಾವಣೆಯ ಫಲಿತಾಂಶಗಳು ಬಂದ ತಕ್ಷಣವೇ ಒಂದು ರೀತಿಯ ಕಣ್ಣಾ ಮುಚ್ಚಾಲೆ ಆಟ ನಡೆಯುತ್ತದೆ : ಕಣ್ಣಾ ಮುಚ್ಚೆ ಕಾಡೆ ಗೂಡೆ..ನಿಮ್ಮಯ ಹಕ್ಕಿ ಬಚ್ಚಿಟ್ಟ್ ಕೊಳ್ಳಿ .." ಆದ್ದರಿಂದ ಎರಡು ಪಕ್ಷದ ಹಿರಿಯರು ತಮ್ಮತಮ್ಮ ಸದಸ್ಯರನ್ನು ಊರಿನಿಂದ ಮತ್ತು ಮಾಧ್ಯಮಗಳಿಂದ ಯಾವುದಾದರೂ ದೂರದ ವಿಶ್ರಾಮಧಾಮದಲ್ಲಿ ಇರಿಸುವುದು ವಾಡಿಕೆ. ಆದರೆ ಈ ಬಾರಿ ಮನರಂಜನೆಯ ಬದಲು ಪಕ್ಷಗಳು ಭಗವದ್ಗೀತೆ ಮತ್ತು ಇತರ ಉಪನ್ಯಾಸಗಳನ್ನು ನಡೆಸುವ ಯೋಜನೆಯನ್ನಿಟ್ಟುಕೊಂಡವು. ಸೂಕ್ತ ಸ್ಥಳಕ್ಕೆ ಹುಡುಕಿದಾಗ ಸಂಪಿಗೆ ಪಕ್ಶಕ್ಕೆ ದಾಂಡೇಲಿಯಲ್ಲಿ ಕಾಳಿ ನದಿಯ ಎಡ ದಂಡೆಯಲ್ಲಿ ಒಂದು ಮಠವೂ ಮತ್ತು ಕಾಕತಾಳಿಯವಾಗಿ ಬೇವಿನ ಪಕ್ಷಕ್ಕೆ ಬಲ ದಂಡೆಯ ಆಶ್ರಮವೂ ಸಿಕ್ಕಿತು. ಹಲವಾರು ದಿನಗಳು ಸಾತ್ವಿಕ ಆಹಾರದ ಜೊತೆ ಸದಸ್ಯರಿಗೆ ಮಠಗಳಲ್ಲಿ ರಾಮಾಯಣ,ಮಹಾಭಾರತಗಳ ಬಗ್ಗೆ ದೀರ್ಘ ಉಪನ್ಯಾಸಗಳಿದ್ದು ಭೀಷ್ಮ, ಕೃಷ್ಣ ವಿದುರ ರ ಹಿತೋಪದೇಶಗಳನ್ನು ಕೇಳಿ ಸಿಕೊಂಡರು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ವಿಭೀಷಣ ತನ್ನ ಅಣ್ಣನನ್ನೆ ಬಿಟ್ಟು ರಾಮನ ಪಕ್ಶ ಸೇರಿದ್ದರ ಬಗ್ಗೆ ಕೇಳಿ ಸಮಾಜದ ಒಳ್ಳೆಯದಕ್ಕಾಗಿ ಪಕ್ಷಾಂತರದ ಅನಿವಾರ್ಯತೆ ಹೊಸ ಸದಸ್ಯರ ಮೇಲೆ ಬಹಳ ಪ್ರಭಾವ ಬೀರಿತು. ಇದರಿಂದಾಗಿ ರಾತ್ರಿಯ ಸಮಯದಲ್ಲಿ ಎರಡೂ ದಡಗಳ ಮಧ್ಯೆ ದೋಣಿಗಳು ಓಡಾಡಲು ಪ್ರಾರಂಭವಾಯಿತು. ಹೀಗೆ ನಡೆದು ಒಂದು ವಾರದ ನಂತರ ಮಾಧ್ಯಮಗಳಿಗೆ " ಬೇವಿನ ಪಕ್ಷದಿಂದ ಹಲವಾರು ಮಂದಿ ಸಂಪಿಗೆ ಪಕ್ಷವನ್ನು ಸೇರುತ್ತಾರೆ " ಎಂಬ ಸುದ್ದಿ ಹೋಯಿತು. ಆದರೆ ಆ ಸುದ್ದಿ ತಣ್ಣಗಾಗುವ ಮೊದಲೆ " ಸಂಪಿಗೆ ಪಕ್ಷದಿಂದ ಹಲವಾರು ಮಂದಿ ಬೇವಿನ ಪಕ್ಷವನ್ನು ಸೇರುತ್ತಾರೆ" ಎಂದು ಮಾಧ್ಯಮಗಳಲ್ಲಿ ' ಬ್ರೇಕಿಂಗ್ ನ್ಯೂಸ್" ಹೊರಬಂದಿತು. ಹಲವಾರು ಎನ್ನುವುದು ಸ್ವಲ ದೊಡ್ಡ ಸಂಖ್ಯೆಯೇ ಇದ್ದು ನಿನ್ನೆಯ ಬೇವು ಇಂದಿನ ಸಂಪಿಗೆ ಮತ್ತು ನಿನ್ನೆಯ ಸಂಪಿಗೆ ಇಂದಿನ ಬೇವು ಎಂದಾಯಿತು. ಅದರೂ ಸರ್ಕಾರ ರಚಿಸಲು ಆಗಲಿಲ್ಲವಾದ್ದರಿಂದ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿತು
ಬಿಡಿ, ಹಿಂದೆಯೂ ಪಕ್ಷಾಂತರ ನಡೆದಿತ್ತು, ಮುಂದಿನ ವರ್ಷ ಮತ್ತೆ ಚುನಾವಣೆ ನಡೆಯುತ್ತದೆ. ಪ್ರಜಾಪ್ರಭುತ್ವ ಎಂದರೆ ಇದೇ ಅಲ್ಲವೆ ?
#################################################################################
( ಭಾಷಾಗೊಂದಲಗಳು
೨೦ ವರ್ಷಗಳ ಹಿಂದಿನ ಕಥೆ . ನಾನು ಮದ್ರಾಸಿನಲ್ಲಿ ( ಇ೦ದಿನ ಚೆನ್ನೈ) ಒ೦ದು ಹೊಟೇಲಿನಲ್ಲಿ ಇಳಿದುಕೊ೦ಡಿದ್ದೆ. ಬೆಳಿಗ್ಗೆಯ ಸಮಯ. ಮಹಡಿಯ ಮೇಲಿದ್ದ ನನ್ನ ಕೋಣೆಯಿ೦ದ ಕೆಳಗೆ ಬಂದೆ. ಸ್ವಾಗತದ ಮೇಜಿನಲ್ಲಿ ಕುಳಿತಿದ್ದ ಮಾಲೀಕ ಮತ್ತು ಅವನ ಪತ್ನಿ ಹಲೋ ಹೇಳಿ ಅಂದಿನ ದಿನಪತ್ರಿಕೆಯನ್ನು ಕೊಟ್ಟರು. ಅದನ್ನು ತೆಗೆದುಕೊ೦ಡು ದೂರ ಹೋಗಿ ಓದಲು ಕುಳಿತೆ. ಸ್ವಲ್ಪ ಸಮಯದ ನಂತರ ಪ್ರವಾಸಿಯೊಬ್ಬ ತನ್ನ ಸಾಮಾನನ್ನು ತೆಗೆದುಕೊಂಡು ಸ್ವಾಗತದ ಮೇಜಿನ ಬಳಿ ಹೋಗಿ ಏನೋ ಹೇಳಿದ. ಆದರೆ ಅದು ಮಾಲೀಕರಿಗೆ ಅರ್ಥವಾಗಲಿಲ್ಲ, ಅಲ್ಲೇ ಇದ್ದ ಅವರ ಪತ್ನಿಗೂ ಅರ್ಥವಾಗಲಿಲ್ಲ. ಇಬ್ಬರೂ ಇಲ್ಲ ಎನ್ನುವಂತೆ ತಲೆ ಆಲ್ಲಾಡಿಸಿದರು. ಪ್ರವಾಸಿಗೆ ತಬ್ಬಿಬಾಯಿತೋ ಏನೋ ! ಅವನ ಮುಖದಲ್ಲಿ ಪ್ರಶ್ನೆಯ ಕಳೆ ಇತ್ತು. ಮತ್ತೆ ಏನೋ ಹೇಳಿದ. ಮತ್ತೆ ಅವರಿಬ್ಬರೂ ತಲೆ ಅಲ್ಲಾಡಿಸಿದರು. ಅವರಿಬ್ಬರ ತಲೆಗಳೂ ಒ೦ದೇ ರೀತಿ, ಮೊದಲು ಎರಡೂ ಒಂದೇ ದಿಕ್ಕಿಗೆ ಅನ೦ತರ ಒ೦ದೇ ಸಮಯದಲ್ಲಿ ದಿಕ್ಕು ಬದಲಾಯಿಸಿ ಇನ್ನೊಂದು ಕಡೆಗೆ, ತಿರುಗುತ್ತಿದ್ದನ್ನು ನೋಡಿದಾಗ ಭೌತವಿಜ್ಞಾನದ ಅನುರಣನ ವಿದ್ಯಮಾನಕ್ಕೆ ಒಳ್ಳೆಯ ಉದಾಹರಣೆ ಎ೦ದುಕೊ೦ಡೆ. ಪ್ರವಾಸಿಗೆ ಬೇಸತ್ತು ಹೋಗಿತ್ತೋ ಏನೋ ! ಜೋರಾಗಿ” ಏನು ಮಾಡೋದೀಗ “ ಎ೦ದ.ತಕ್ಷಣ ಮಾಲಿಕ “ ಓ ನೀವು ಕನ್ನಡದವರಾ? ‘ ಎ೦ದ; ಅವರ ಪತ್ನಿಯೂ ಬ೦ದು ಅವನನ್ನು ಕನ್ನಡದಲ್ಲಿ ಮಾತನಾಡಿಸಿದಳು. ಇಬ್ಬರ ಕನ್ನಡವೂ ಚೆನ್ನಾಗಿತ್ತು. ಸಕಲಭಾಷಾಪ್ರವೀಣರು ಎ೦ದುಕೊ೦ಡೆ. ವ್ಯಾಪಾರಿಗಳಲ್ಲಿ ಅದು ಅತಿಶಯವೇನಲ್ಲ.
ರಾತ್ರಿ ಭೋಜನಕ್ಕೆ ಆ ಪ್ರವಾಸಿ ನನ್ನ ಪಕ್ಕವೆ ಕುಳಿತರು. ನನಗೆ ಬೆಳಿಗ್ಗೆಯಿಂದಲೇ ಕುತೂಹಲವಿದ್ದು ಅದನ್ನು ವ್ಯಕ್ತಪಡಿಸಿದೆ. “ ನೀವು ಬೆಳಿಗ್ಗೆ ಬ೦ದಾಗ ಹೊಟೇಲ್ ಮಾಲೀಕರನ್ನು ಯಾವ ಭಾಷೆಯಲ್ಲಿ ಮಾತನಾಡಿಸಿದಿರಿ?” ಅವರು “ ತಮಿಳು, ಜಾಗ ಇದೆಯಾ ಎ೦ದು ಕೇಳಿದೆ. ಏಕೆ “‘ ಎ೦ದರು. “ ಹೌದಾ ?” ಎ೦ದೆ.’ ನನ್ನ ಧ್ವನಿಯಲ್ಲಿನ ಅನುಮಾನವನ್ನು ಗುರುತಿಸಿದರೋ ಏನೋ ! “ ಏಕೆ, ನಿಮಗೆ ಅರ್ಥವಾಗಲಿಲ್ಲವೆ?” ಎ೦ದರು. “ ದೂರ ಕೂತಿದ್ದೆ. ಅದೂ ಅಲ್ಲದೆ ಎಲ್ಲೋ ಓಡಾಡಿ ಅರ್ಧಂಬರ್ದ ಕಲಿತಿರ್ತೀವಿ. ಭಾಷೆ ಅಷ್ಟು ಗೊತ್ತಿಲ್ಲ ” ಎಂದೆ. ಅದಕ್ಕೆ ಆ ವ್ಯಕ್ತಿ “ ಆದರೆ ಅವರಿಗಾದರೂ ಅರ್ಥವಾಗಬೇಕಲ್ಲವೇ? . ತಮಿಳು ಅವರದ್ದೇ ಭಾಷೆ ಅಲ್ಲವೆ. ” ಎಂದರು. ಆಗ ನಾನು “ ಅಷ್ಟು ಖಚಿತವಾಗಿ ಹೇಳಲು ಬರದು. ಹಿಂದೆ ಇಲ್ಲಿ ತೆಲಗು ಬಹಳ ಇತ್ತು. ಆದ್ದರಿಂದ ಅವರು ತೆಲಗಿನವರಿರಬಹುದು. ಅವರ ತಮಿಳು ಕಲಬೆರಕೆ ” ಎಂದೆ. ಪ್ರವಾಸಿ ಉದ್ವಿಗ್ನರಾದರು. ” ಸ್ವಾಮೀ ! ನಾನು ಎರಡನೆ ಬಾರಿ ಕೋಣೆ ಕೇಳಿದಾಗ ತೆಲಗಿನಲ್ಲೆ ಮಾತಾಡಿದ್ದೆ. ಅದೂ ಅವರಿಗೆ ಅರ್ಥವಾಗಲಿಲ್ಲವಲ್ಲ “ ಎಂದರು. “ಹೌದಾ? ನಿಜವಾಗಿಯೂ ಆಶ್ಚರ್ಯ” ಎ೦ದೆ. “ ನನಗೂ ಅಷ್ಟೇ ! ನೋಡಿ, ನಾನು ನಿಜವಾಗಿಯೂ ಭಾಷಾತಜ್ಞ ! ನಾನು ಸುಮಾರು ೧೦ ಭಾಷೆಗಳನ್ನು ಬಲ್ಲೆ. ಬರೀ ಬಲ್ಲೆ ಅ ಲ್ಲ, ಚೆನ್ನಾಗಿಯೇ ಬಲ್ಲೆ. ಬೆಂಗಾಲಿ, ಹಿಂದಿ, ಗುಜರಾತಿ, ಮರಾಠಿ,ತಮಿಳು, ಕನ್ನಡ, ತೆಲಗು ಮಲಯಾಳಮ್ ಇತ್ಯಾದಿ. ನಾನು ಭಾಷೆಗಳ ವಿಷಯದಲ್ಲಿ ಪಿ.ಎಚ್ ಡಿ ಕೂಡ ಮಾಡಿದ್ದೀನಿ. ವಿಶೇಷ ಭಾಷಣಗಳಿಗೆ ಎಲ್ಲೆಲ್ಲೂ ಕರೆಯುತ್ತಿರುತ್ತಾರೆ. ಹಲವು ಬಾರಿ ವಿದೇಶಕ್ಕೂ ಹೋಗಿದ್ದೇನೆ. ಆದರೆ ಏನು ಉಪಯೋಗ! . ಇಲ್ಲಿ ಮಾತ್ರವಲ್ಲ.ಬಹಳ ಕಡೆ. ಹೀಗೇ ಅಗಿದೆ. ಏಕಿರಬಹುದು?” ಎಂದು ಬಹಳ ಬೇಸರಮಾಡಿಕೊಂಡರು. ನನಗೆ ಅವರನ್ನು ನೊಡಿ ಕನಿಕರವಾಯಿತು. “ ನೋಡಿ ನೀವು ಬಹಳ ಓದಿರುವವರು. ನನಗೆ ಏನು ಅನ್ನಿಸುತ್ತೆ ಹೇಳಲೆ” ಎಂದು ಮುಂದುವರಿಸಿದೆ “ ನಿಮ್ಮ ಉಚ್ಚಾರಣೆ ಬಹಳ ಶುದ್ಧ. ಅಲ್ಲೇ ತೊ೦ದರೆ ಇರುವುದು. ಅಂತಹ ಒಳ್ಳೆಯ ಭಾಷೆಯೇ ಸಾಮಾನ್ಯ ಜನರನ್ನು ದಿಗ್ಭ್ರಮೆ ಗೊಳಿಸುತ್ತದೆ. ಸ್ವಲ್ಪ ನ್ಯಾಚುರಲ್ ಆಗಿರಲು ಪ್ರಯತ್ನಿಸಿ.ಆಗಾಗ ತಪ್ಪುಗಳನ್ನುಮಾಡಿ. ಬೇಕೆಂತಲೇ ಮಾಡಿ. ತಪುಗಳು ಹೆಚ್ಚಿದ್ದರೆ ಒಳ್ಳೆಯದು. ಜನರಿಗೂ ಇವರೂ ನಮ್ಮ ತರಹವೆ ಅನ್ನಿಸಿ ಅವರ ಕಿವಿಗಳೂ ಸ್ವಲ್ಪ ತೆರೆಯುತ್ತವೆ. .”
ಭಾಷೆ ಅಂದರೆ ಮತ್ತೊಂದು ತಮಾಷೆ ಜ್ಞಾಪಕಕ್ಕೆ ಬರುತ್ತದೆ. ನಾನು ಊಟಿಯಲ್ಲಿ ಕೆಲಸಮಾಡುತ್ತಿದ್ದೆ ಮತ್ತು ನಮ್ಮ ಸ೦ಶೋಧನೆಗಳಲ್ಲಿ ನಮಗೆ ಸರಿಯಾದ ವೇಳೆಯ ಅವಶ್ಯಕತೆ ಬಹಳ ಇದ್ದಿತು. ಆಗೆಲ್ಲಾ ಜಿ.ಪಿ.ಎಸ್ ಇರಲಿಲ್ಲ. ಚೀನಾದಿ೦ದ ಒ೦ದು ಟೈಮ್ ಸಿಗ್ನಲ್ ಸಿಗುತ್ತಿದ್ದು ಅದನ್ನು ಬಳಸುತ್ತಿದ್ದೆವು. ಸಿಗ್ನಲ್ಲೇನೋ ಬರುತ್ತಿತ್ತು, ಆದರೆ ಜೊತೆಯಲ್ಲಿ ಚೀನೀಭಾಷೆಯಲ್ಲಿ ಏನೇನೋ ಕೇಳಿಸುತ್ತಿತ್ತು. ಇದು ಟೈಮ್ ಸಿಗ್ನಲ್ ಗೆ ಸಂಬ೦ಧ ಇರಬಹುದಾದ್ದರಿಂದ ನಮಗೆ ಅವರು ಏನು ಹೇಳುತ್ತಿದ್ದಾರೆ ಎ೦ಬುದರ ಬಗ್ಗೆ ಕುತೂಹಲವಾಯಿತು. ಆದರೆ ಯಾರನ್ನು ಕೇಳುವುದು ? ನಾವೆಲ್ಲಾ ಆಗಾಗ್ಗೆ ಒಂದು ಚೀನೀ ರೆಸ್ಟೊರೆ೦ಟಿಗೆ ಹೋಗುತ್ತಿದ್ದೆವು. ಸರಿ, ಆದರ ಮಾಲೀಕರನ್ನೆ ಕೇಳೋಣ ಎ೦ದು ನಿರ್ಧರಿಸಿದೆವು. ಅವರೂ ಅಲ್ಲಿಯವರ ಚಹರೆಯೇ ಇದ್ದು ನಮಗೆ ಹೆಚ್ಚುಭರವಸೆಯನ್ನು ಮೂಡಿಸಿತು. ಆ ಸಿಗ್ನಲ್ ಮತ್ತು ಮಾತುಗಳನ್ನು ರೆಕಾರ್ಡ್ ಮಾಡಿಕೊಂದು ಚೀನಿ ರೆಸ್ಟೋರೆಂಟಿಗೆ ಹೋದೆವು. ಅವರು ಮೂರು ನಾಲ್ಕು ಬಾರಿ ಕೇಳಿ ‘ ಸಾರಿ ! ನಿಮಗೆ ಗೊತ್ತಿರುವಹಾಗೆ ಚೀನಾದಲ್ಲಿ ಇರುವುದು ಎರಡು ಮುಖ್ಯಭಾಷೆಗಳು. ಕ್ಯಾಂಟನೀಸ್ ಮತ್ತು ಮ್ಯಾ೦ಡರೀನ್. ನಾನು ಕ್ಯಾಂಟನೀಸ್. ಇವರು ಮಾತನಾಡುತ್ತಿರುವುದು ಮ್ಯಾಂಡರೀನ್.ನನಗೆ ಅರ್ಥವಾಗುವುದಿಲ್ಲ ಕ್ಷಮಿಸಿ “ ಎಂದರು . ನಾವು ಧನ್ಯವಾದಗಳನ್ನು ಅರ್ಪಿಸಿ ಮುಂದೆ ಏನು ಮಾಡುವುದೆ೦ದು ಯೋಚಿಸಿದೆವು. ಊಟಿಯಲ್ಲಿ ಇನ್ನೂ ಮೂರು ಚೀನೀ ರೆಸ್ಟೋರೆಂಟುಗಳಿದ್ದವು. ಆದರೆ ಅಲ್ಲಿಯ ಮಾಲೀಕರ ಮುಖ ನೋಡಿದರೆ ಅವರು ಚೀನಾದವರಲ್ಲ ಎ೦ದು ಬಹಳ ಸುಲಭವಾಗಿ ತಿಳಿಯುತ್ತಿತು. ಸರಿ,ನಮ್ಮ ಮೂಲ ಆಫೀಸು ಮು೦ಬಯಿಯಲ್ಲಿ ಇದ್ದಿತು. ನಾವು ಯಾರಾದರೂ ಮು೦ಬಯಿಗೆ ಹೋದಾಗ ಅದನ್ನು ತೆಗೆದುಕೊ೦ಡು ಹೋಗೋಣ. ಅಲ್ಲಿ ಬೇಕಾದಷ್ಟು ಚೀನಿ ರೆಸ್ಟೊರೆಂಟುಗಳಿವೆ. ಆ ಕೆಲಸ ನನ್ನ ಪಾಲಿಗೇ ಬಿದ್ದಿತು. ಗೇಟ್ ವೇ ಅಫ್ ಇ೦ಡಿಯದ ಬಳಿ ಒ೦ದು ದೊಡ್ಡ ಚೀನೀ ರೆಸ್ಟೋರೆಂಟಿತ್ತು. ಅದರ ಮಾಲೀಕರ ಬಳಿ ತೆಗೆದುಕೊ೦ಡು ಹೋದೆವು. ಆವರೂ ಚೀನದವರ ತರಹವೆ ಕಾಣಿಸಿದರು. “ ಪ್ರಯತ್ನಿಸೋಣ ಬನ್ನಿ” ಎ೦ದು ಒಳಗೆ ಕರೆದುಕೊ೦ಡು ಹೋದರು.ಇವರೂ ೩-೪ ಬಾರಿ ಆ ರೆಕಾರ್ಡಿಂಗ್ ಕೇಳಿದ ನ೦ತರ “ ಸಾರಿ! ನಿಮಗೆ ಗೊತ್ತಿರುವ ಹಾಗೆ ಚೀನಾದಲ್ಲಿ ಇರುವುದು ಎರಡು ಮುಖ್ಯ ಭಾಷೆಗಳು. ಕ್ಯಾಂಟನೀಸ್ ಮತ್ತು ಮ್ಯಾ೦ಡರೀನ್. ನಾನು ಮ್ಯಾ೦ಡರೀನ್ ಭಾಷೆಯವ. ಆದರೆ ಇವರು ಮಾತಾಡುತ್ತಿರುವುದು ಕ್ಯಾ೦ಟನೀಸ್ ಭಾಷೆಯಲ್ಲಿ. ನನಗೆ ಅರ್ಥವಾಗುವುದಿಲ್ಲ “ ಎ೦ದು ಹೇಳಿ ನಮ್ಮನ್ನು ಬೀಳ್ಕೊಟ್ಟರು.
ನಾನು ಕೆಲಸ ಮಾಡಲು ಪ್ರಾರ೦ಭಿಸಿದಾಗ ಸುಮಾರು ಒಳ್ಳೆಯ ಇ೦ಗ್ಲಿಷನ್ನೆ ಮಾತನಾಡುತ್ತಿದ್ದೆ. ಆದರೆ ನಮ್ಮ ಸ೦ಸ್ಥೆಗೆ ಒಬ್ಬ ಇ೦ಗ್ಲಿಷಿನವ ಬ೦ದ ನ೦ತರ ತೊಂದರೆಗಳು ಶುರುವಾದವು. ಆತ ಬರ್ನಾರ್ಡ ಶಾರ ‘ ಮೈ ಫೇರ್ ಲೇಡಿ’ ಚಿತ್ರದ ಭಾಷಾ ತಜ್ಞ ಹೆನ್ರಿ ಹಿಗ್ಗಿನ್ಸ್ ನ ಪೀಳಿಗೆಯವನ ರೀತಿ ವರ್ತಿಸುತ್ತಿದ್ದ ! ಅವನ ಜೊತೆ ಮಾತನಾಡುವಾಗ ಕೆಲವು ಪದಗಳನ್ನು ತಿದ್ದಲು ಪ್ರಾರ೦ಭಿಸಿದ. ‘ ಇಲ್ಲ, ನೀನು ಸರಿಯಾಗಿ ಉಚ್ಚರಿಸುತ್ತಿತಲ್ಲ. ಅಲ್ಲಿ ಒತ್ತಿರಬಾರದು.. ಇಲ್ಲಿ ಒತ್ತು ಇರಬೇಕು’ ಅದಲ್ಲದೆ ಕೆಲವು ಬಾರಿ ಅವನು “ ಈ ಧ್ವನಿ ನಿನ್ನ ಬಾಯಿಯಿ೦ದ ಬರುತ್ತಿದೆ. ಅದಲ್ಲ ಅದರ ಮೂಲ ಸ್ಥಾನ. ಒಳಗೆ ಆಳದಿ೦ದ ಬರಬೇಕು “ ಎನ್ನುತ್ತಿದ್ದ. ಆಳ ಎಂದರೆ ಹೊಟ್ಟೆಯಿ೦ದ.? ಹೌದು ? ಹೊಟ್ಟೆಯ ಕೆಲಸವೇ ಬೇರೆ ಎ೦ದು ನಾನು ನಕ್ಕಾಗ ಅವನಿಗೆ ಇಷ್ಟವಾಗಲಿಲ್ಲ. ಒಟ್ಟಿನಲ್ಲಿ ಇದರಿದ ನನಗೆ ಕೀಳರಿಮೆ ಪ್ರಾರ೦ಭವಾಗಿ ಆ ಪದಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದೆ ಹಾಗೇ ನಾನು ಬಳಸುತ್ತಿದ್ದ ಇ೦ಗ್ಲಿಷ್ ಪದಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ ನನ್ನ ಶಬ್ದಕೋಶದಲ್ಲಿ ಕೆಲವೇ ಪದಗಳು ಉಳಿದುಕೊಂಡವು. ಕೆಲವು ವರ್ಷಗಳ ನಂತರ ನನಗೆ ಇ೦ಗ್ಲೆ೦ಡಿಗೆ ಹೋಗುವ ಅವಕಾಶ ಸಿಕ್ಕಿತು.ನನ್ನ ಇಂಗ್ಲಿಷ್ ಸ್ನೇಹಿತ ಅಭಿನವ ಹೆನ್ರಿ ಹಿಗ್ಗಿನ್ಸ್ ಹೇಳಿಕೊಟ್ಟಿದ್ದ ಪದ ಮತ್ತು ವಿಧಾನಗಳೆಲ್ಲಾ ಜ್ಞಾಪಕಕ್ಕೆ ಬಂದವು. ಅಲ್ಲಿಯ ಜನಕ್ಕೆ ನನ್ನ ಭಾಷಾ ಪ್ರೌಢಿಮೆ ತೋರಿಸಬಹುದಲ್ಲ ಎ೦ದು ಖುಷಿಯಾದೆ. ಲ೦ಡನ್ನಿನಲ್ಲಿ ಇಳಿದ ತಕ್ಷಣವೆ ಅವನು ಹೇಳಿಕೊಟ್ಟ ಹಾಗೆಯೇ ಮಾತನಾಡಲು ಪ್ರಾರಂಭಿಸಿದೆ. ಯಾರಿಗೂ ಅರ್ಥವಾದ ಹಾಗೆ ಕಾಣಲಿಲ್ಲ. ತಲೆ ಅಲ್ಲಾಡಿಸುತ್ತಾ ಹೊರಟುಹೋಗುತ್ತಿದ್ದರು. . ಕಡೆಗೆ ನನ್ನ ಹಳೆಯ ಇಂಡಿಯನ್ ಇಂಗ್ಲಿಷಿಗೆ ವಾಪಸ್ಸು ಹೋದೆ. ( ಸ್ವಲ್ಪ ಜೆರೋಮ್ ಕೆ ಜೆರೋಮ್ ರಿಂದ) - ಪಾಲಹಳಿ ವಿಶ್ವನಾಥ್
###################################################################################
1) ಕಾಲವಾದ ಕಾಲ !
ಪಾಲಹಳ್ಳಿ ವಿಶ್ವನಾಥ್
ಮೊಮ್ಮಗ: ಅಜ್ಜ , ಹಿ೦ದೆ ಯಾವಾಗಲೋ ಬೆಳಕೂ ಪೂರ್ತಿ ಇರತಾ ಇರಲಿಲ್ಲ ಎ೦ದು ಕೇಳಿದ್ದೀನಿ. ಅದು ನಿಜವಾ?
ಅಜ್ಜ: ಹೌದು ಕಣೋ !ಬೆಳಕು ಇರದೆ ಇದ್ದರೆ ಅದಕ್ಕೆ ಕತ್ತಲೆ ಎ೦ದು ಕರೆಯುತ್ತಿದ್ದರು.
ಮೊ: ಏನು ಆಯಿತು ಆಗ?
ಅ: ಒಟ್ಟಿಗೆ ಐದು ಸೂರ್ಯರು ಎಲ್ಲಿ೦ದಲೋ ಬ೦ದು ವಕ್ಕರಿಸಿಕೊ೦ಡರು. ನಮ್ಮ ಭೂಮಿಗೆ ಈಗ ೬ ಸೂರ್ಯರು. ಆದ್ದರಿ೦ದ ಸದಾ ಬೆಳಕು
ಮೊ: ಯಾವಾಗ ಆಯಿತು ಅದು?
ಅ: ಯಾವಾಗ ಅ೦ದರೆ ಏನೋ ಅರ್ಥ ? ಅಲ್ಲ ಕಣೋ ! ಆ ಸಮಯದಲ್ಲೇ ಕಾಲ ನಿ೦ತೋಯ್ತಲ್ಲೋ !
ಮೊ: ಅ೦ದರೆ ?
ಅ: ನಿನಗೆ ಆಗ ೧೦ ವರ್ಷ , ನನಗೆ ೬೦ ವರ್ಷ . ಈಗಲೂ ನನಗೆ ೬೦ ವರ್ಷ, ನಿನಗೆ ೧೦ ವರ್ಷ !
ಮೋ: ವರ್ಷ ಅ೦ದರೆ ?
ಅ: ನಿಜವಾದ ಅರ್ಥ ಮಳೆ . ಬಹಳ ಹಿ೦ದೆ ನಮ್ಮ ಪೂರ್ವೀಕರು ಕಾಲವನ್ನು ಅಳೆಯಲು ಋತುಗಳನ್ನು ಬಳಸಿಕೊಳ್ಳುತ್ತಿದ್ದರು .ಆಗ ಹವಾಮಾನ ಬದಲಾಗುತ್ತಿತ್ತು . ಬೇಸಿಗೆ, ಮಳೆ, ಛಳಿಗಾಲ ಎ೦ದೆಲ್ಲ ಹೇಳುತ್ತಿದ್ದೆವು. ಈಗ ಅವೆಲ್ಲಾ ಇಲ್ಲವಲ್ಲ.
ಮೊ: ಮಳೆ ಇದೆಯಲ್ಲ ಅಜ್ಜ !
ಅ: ಹೌದಪ್ಪ ! ಆದರೆ ಆಗ ಮಳೆ ನಿಯತಕಾಲಿಕವಾಗಿ ಬರುತ್ತಾ ಇತ್ತು
ಮೊ: ನಿಯತಕಾಲಿಕ ಅ೦ದರೆ
ಅ: ಅ೦ದರೆ ಎರಡು ಘಟನೆಗಳ ಮಧ್ಯೆ ನಿಖರ ಸಮಯದ ಅ೦ತರ !ಮಳೆ ಈಗಲೂ ಬರುತ್ತೆ . ಆದರೆ ಅದು ಯಾವಾಗ ಬರುತ್ತೆ ಅ೦ತ ಗೊತ್ತಾಗ್ತಾ ಇಲ್ಲವಲ್ಲ. ಕಾಲಾನ ಹೇಗೆ ಅಳೆಯೋದು ಹೇಳು ?
Mo: ಈ ಕಾಲಾನ ಹೇಗೆ ಅಳೆಯುತ್ತಿದ್ದರು ಅ೦ತ ನೀನು ಹೇಳು
ಅ: ಈಗ ನಮ್ಮ ಸೂರ್ಯ ಇದಾನಲ್ಲ .ಅದೇ ಹಳೆಯ ಸೂರ್ಯ , ಈ ಸೂರ್ಯ ಹುಟ್ಟೋನು, ಆ ಸಮಯವನ್ನು ನಾವು ಬೆಳಿಗ್ಗೆ ಅ೦ತಾ ಇದ್ವಿ, ಅಗ ತ೦ಪು ಬೆಳಕು ಇರೋದು ! ಆಮೇಲೆ ಆಕಾಶದಲ್ಲಿ ಸೂರ್ಯ ಮೇಲೆ ಹೋಗೋನು, ಅದಕ್ಕೆ ನಾವು ಮಧ್ಯಾಹ್ನ ಅ೦ತ ಹೇಳ್ತಾ ಇದ್ದೆವು. ವಿಪರೀತ ಬಿಸಿಲು , ಆಮೇಲೆ ಸೂರ್ಯ ಮುಳುಗೋನು ಅದಕ್ಕೆ ಸ೦ಜೆ ಅ೦ತ ಹೇಳ್ತಾ ಇದ್ದೆವು. ಅಯಿತು ಆಮೇಲೆ ಬೆಳಕು ಕಡಿಮೆ ಆಗೋದು. ಆಗ ಕತ್ತಲೆ ಕವಿಯೋದು !
ಮೊ: ಅ೦ದರೆ ಅಜ್ಜ, ಬೆಳಕು ಇಲ್ಲವಾದಾಗ ಕತ್ತಲೆ .. ಹೆದರಿಕೆ ಆಗ್ತಾ ಇರಲಿಲ್ವಾ
ಆ: ಒ೦ದೊ೦ದು ಸತಿ ! ಆಗ ಮತ್ತೊ೦ದು ಬೆಳಕು ಹುಟ್ಟುತ್ತಿತ್ತು . ಅದೂ ಗು೦ಡಗೆ ಕಾಣ್ತಾ ಇತ್ತು, ತ೦ಪಾದ ಬೆಳಕು
ಮೊ: ಸೂರ್ಯನಷ್ಟಾ?
ಅ: ಇಲ್ಲ, ಮಗು ! ಬಹಳ ಕಡಿಮೆ. ಆದರೆ ಸಾಕಾಗ್ತಿತ್ತು.ಬಹಳ ಸು೦ದರ ಅದರ ಹೆಸರೇ ಚ೦ದ್ರ ! ಅದ್ರ ಬೆಳಕೂ ಹೆಚ್ಚು ಕಡಿಮೆ ಆಗೋದು. ಅದರೆ ನಕ್ಷತ್ರಗಳು ಯಾವಾಗಲೂ ಇರ್ತಾ ಇದ್ದವು.
ಮ: ನಕ್ಷತ್ರ ಅ೦ದರೆ ಎನು ?
ಅ: ಬಹಳ ದೂರದ ಬೆಳಕುಗಳು, ಬಹಳ ಬಹಳ ದೂರ . ಅ ಕತ್ತಲೆಯ ಸೊಬಗನ್ನು ನಿನಗೆ ಹೇಗೆ ಬಣ್ಣಿಸಲಿ ? ಆಮೇಲೆ ಹಾಗೆ ಸ್ವಲ್ಪ ಸಮಯ ಕಳೆದ ನ೦ತರ ಸೂರ್ಯ ಮತ್ತೆ ಹುಟ್ಟುಬರುತ್ತಿದ್ದ . ಅಗ ನಾವು ಒ೦ದು ದಿನ ಕಳೆಯಿತು ಅ೦ತಾ ಇದ್ದೆವು.
ಮೊ : ಈಗ ದಿನ ಇಲ್ಲ !
ಅ: ಜೌದು ! ಅದ್ದರಿ೦ದ ವಾರ, ಅ೦ದರೆ ೭ ದಿನಗಳ ಅಳತೆ ಹೋಯಿತು ! ತಿ೦ಗಳು ಅ೦ದರೆ ೩೦ ದಿನಗಳ ಅಳತೆ ಹೋಯಿತು. ೩೬೫ ದಿನಗಳ ಅಳತೆ ವರ್ಷ ಹೋಯಿತು !
ಮೊ: ಸ್ವಲ್ಪ ಅರ್ಥ ಆಗ್ತಾ ಇದೆ.
ಅ: ಹಾಗೇ ಕಾಲವೆ ನಿ೦ತು ಹೋಯಿತು ಕಣೊ ! ಹಿ೦ದೆ ಕಾಲ ನಡಿತಾ ಇದ್ದಿದ್ದರಿ೦ದ ವಯಸ್ಸಾಗೋದು. ಚಿಕ್ಕವರು ದೊಡ್ದವ್ರಾಗೋರು, ಬಹಳ ದೊಡ್ದವರು ಸಾಯುವರು
ಮ: ಸಾವು ಅ೦ದರೆ ?
ಅ: ಇದ್ದವರು ಇಲ್ಲವಾಗುವುದು ! ಸತ್ತವರನ್ನು ಕಾಲವಾದರು ಅನ್ನುತ್ತಿದ್ದೆವು. ಈಗ ಕಾಲವೇ ಕಾಲ ವಾಗಿಬಿಟ್ಟಿದೆ. ಹಾಗೆ ಕತ್ತಲೆಯ ಜೊತೆ ಸಾವೂ ಹೊರಟುಹೋಯಿತು. ಆ ದಿನ , ಆ ಕತ್ತಲೇ ಆಗದ ದಿನ, ಶುರುವಾದಾಗ ನಾವು ಹೇಗಿದ್ದೆವೋ ಹಾಗೆಯೇ ಇದ್ದೇವೆ.. ಮುದುಕರು ಮುದುಕರಾಗಿ ಉಳಿದುಕೊ೦ಡೆದವು. ಪುಟ್ಟವರು ಪುಟ್ಟವರಾಗಿಯೆ ಉಳಿದುಕೊ೦ಡರು..
ಮೊ: ಹಾಗಾದರೆ ನಾನು ಹೀಗೆಯೆ ಇರಬೇಕೇ? ಅಪ್ಪನ ತರಹ, ನಿನ್ನ ತರಹ ಆಗೋಕೆ ಆಗೋದಿಲ್ಲವೇ?
ಅ: ಇಲ್ಲ, ಮಗು ! ನೀನೂ ಹೀಗೇ ಇರ್ತೀಯಾ ! ನಾನೂ ಹೀಗೇ ಇರ್ತೀನಿ. ನಿನ್ನ ಅಪ್ಪ, ಅಮ್ಮ ಎಲ್ಲಾ ಹಾಗೆ ಇರ್ತಾರೆ
ಮೊ: ನಾನು ಚ೦ದ್ರನ್ನ ನೋಡಬೇಕಲ್ಲಾ ಅಜ್ಜ ! ನಾನು ನಕ್ಷತ್ರಗಳನ್ನು ನೋಡಬೇಕು ! ಕತ್ತಲನ್ನು ಅನುಭವಿಸಬೇಕು. ಯಾವಾಗ ಆಗುತ್ತೆ ಅಜ್ಜ ಇದೆಲ್ಲ !
ಅ: ಈ ಸ೦ಪಾದಕ್ರಿಗೆ ಹೇಳಪ್ಪ ! ನನಗೂ ಈ ಜೀವನ ಸಾಕಾಯಿತು. “ ಈ ಹುಚ್ಚು ಸಾಕು ! ಆ ಉಳಿದ ಐದು ಸೂರ್ಯರನ್ನು ವಾಪಸ್ಸು ಬಾಹ್ಯಾಕಾಶಕ್ಕೆ ಕಳಿಸಿ ಬಿಡಿ ! ನಮಗೆ ಕತ್ತಲೆ ಬೇಕು. “ ಅ೦ತ ಬರಿ ಅವರಿಗೆ. ನೋಡು ಇದೆ ವಿಳಾಸ..ಅಥವಾ ಫೋನ್ ನ೦ಬರ್ ಕೊಡಲೆ ? ( ಖ್ಯಾತ ವೈಜ್ಞಾನಿಕ ಕಲ್ಪನಾ ಸಾಹಿತಿ ಐಸಾಕ್ ಅಸಿಮೋವ್ ರ ‘ ನೈಟ್ ಫಾಲ್’ ಎ೦ಬ ಕಥೆಯಲ್ಲಿ ಒ೦ದು ಭೂಮಿ ೬ ಸೂರ್ಯರನ್ನು ಪರಿಭ್ರಮಿಸುತ್ತಿದ್ದು ~೩೦೦೦ವರ್ಷಗಳಿಗೊಮ್ಮೆ ಸ್ವಲ್ಪವೇ ಸಮಯ ಕತ್ತಲೆಯನ್ನು ಅನುಭವಿಸುತ್ತದೆ )
3333333333333333333333333333333333333333333333333333333333333333333333333333333333
ಪಾಲಹಳ್ಳಿ ವಿಶ್ವನಾಥ್
ನ್ಯಾಯಾಧೀಶರ ಕೋಣೆಯ ಹೊರಗೆ ಶ್ರೀನಿವಾಸ ತನ್ನ ವಕೀಲರ ಜೊತೆ ಕುಳಿತಿದ್ದ. ಅವನೇನಾದರೂ ತಪ್ಪು ಮಾಡಿದ್ದಾನೆಯೇ ಎಂದು ನೀವು ಕೇಳಬಹುದು. ಇಲ್ಲ, ಇಲ್ಲ ! ನಮ್ಮ ಶ್ರೀನಿವಾಸ ತಪ್ಪು ಮಾಡುವವನಲ್ಲ .ತನ್ನ ಜೀವನದಲ್ಲಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದನಷ್ಟೆ. ಆ ನಿರ್ಧಾರವನ್ನು ಕಾರ್ಯಗತ ಮಾಡಲು ಕೋರ್ಟಿನ ಹತ್ತಿರ ಹೋದಾಗ ಅಲ್ಲಿಯ ಹಿರಿಯ ವಕೀಲರುಗಳು ಮೊನ್ನೆ ಮೊನ್ನೆ ಲಾ ಕಾಲೇಜಿನಿಂದ ದ ಹೊರಬಂದಿದ್ದ ನವ ಯುವಕನೊಬ್ಬನತ್ತ ಕಳಿಸಿದರು. ಆತ ಒಂದು ಪ್ರಮಾಣಪತ್ರ (ಅಫಿಡವಿಟ್ಟು) ಮಾಡಿಕೊಟ್ಟಿದ್ದು ಇಬ್ಬರೂ ನ್ಯಾಯಾಧೀಶರ ಹತ್ತಿರ ಹೋಗಿ ಕಾಯಬೇಕಾಗಿ ಬಂದಿತ್ತು. ವಕೀಲರ ಮುಖದಲ್ಲಿ ಆತಂಕವಿದ್ದಿತು. ಅದು ಅವರ ಮೊದಲನೆಯ ಕೇಸು. ಸರಿಯಾಗಿರದಿದ್ದರೆ ಎಂಬ ಯೋಚನೆ ಇತ್ತು. ಅದರೆ ಶ್ರೀನಿವಾಸನ ಮುಖದಲ್ಲಿ ಸಂತಸವನ್ನು ಕಾಣಬಹುದಿತ್ತು. ಇನ್ನು ಕೆಲವೆ ಕ್ಷಣಗಳಲ್ಲಿ ಬಿಡುಗಡೆ ಸಿಗುತ್ತದೆ ಎಂಬ ನಿರೀಕ್ಷಣೆ ಇದ್ದಿತು. ಯಾವುದರಿಂದ ಬಿದುಗಡೆ ? ತನ್ನ ಹೆಸರಿನಿಂದ ! ಹಳೆಯದ್ದೆಲ್ಲಾ ನೆನೆಪು ಬಂದಿತು
ಅವನ ತಂದೆ ತಾಯಿ ತಮ್ಮ ಮನೆದೇವರು ಶ್ರೀರಂಗಪಟ್ಟಣದ ಹತ್ತಿರದ ಕರಿಘಟ್ಟದ ಶ್ರೀನಿವಾಸನ ಭಕ್ತರು. ಪ್ರತಿವರ್ಷ ಅಲ್ಲೆ ನಿಂತೂ ನಿಂತೂ ಹರ್ರಿಯುತ್ತಿದ್ದ ಮೊಣಕಾಲಿನ ಆಳದ ಲೋಕಪಾವನಿ ನದಿಯ ನೀರಿನಲ್ಲಿ ಹೇಗೋ ಮಿಂದು ಬೆಟ್ಟದ ಮೆಲೆ ಹೋಗಿ ಸೇವೆ ಮಾಡಿಸುತ್ತಿದ್ದರು. ಆ ದೇವರ ನೆನಪಿನಲ್ಲಿಯೇ ವೃದ್ಧಾಪ್ಯದಲ್ಲಿ ಹುಟ್ಟಿದ ಮಗನಿಗೆ ಶ್ರೀನಿವಾಸ ಎಂಬ ಹೆಸರನ್ನು ಇಟ್ಟಿದ್ದರು. . ಮಗುವಿದ್ದಾಗ ಅವನು ತನ್ನಹೆಸರಿನ ಬಗ್ಗೆ ಏನೂ ಆಕ್ಷೇಪವಣೆಯನ್ನು ಎತ್ತಿರಲಿಲ್ಲ. ಶ್ರೀನಿವಾಸ ಎಂದು ಕೂಗಿದಾಗ ಬಂದೇ ಎಂದು ಹೇಳಲೂ ಯಾವತ್ತೂ ಮರೆಯಲಿಲ್ಲ. ಹೆಸರು ಕೇಳಿದಾಗ ಮುದ್ದಾಗಿ ಸ್ರೀ -ನಿ-ವಾ-ಸ ಎಂದು ಹೇಳುತ್ತಿತ್ತು ಮಗು. ಮೊದಮೊದಲು ಶ ಬರುತ್ತಿರಲಿಲ್ಲ. ಆಮೇಲೆ ಅದು ಸರಿಹೋಯಿತು.
ಶಾಲೆ ಸೆರಿದಾಗ ಅವನ ತೊಂದರೆಗಳು ಪ್ರಾರಂಭವಾಗಿದ್ದವು. ಕೆ.ಶ್ರೀನಿವಾಸ ಎಂದು ಅಧ್ಯಾಪಕರು ಕೂಗಿದಾಗ ಎಸ್ ಸಾರ್ ಎಂದು ಕೂಗಿದ. ಆದರೆ ಅವನ ಧ್ವನಿಯ ಜೊತೆಯೇ ಮತ್ತೊಂದು ಎಳೆಯ ಧ್ವನಿಯೂ ಕೇಳಿಸಿತು. ಹೌದು, ತರಗತಿಯಲ್ಲಿ ಇಬ್ಬರು ಕೆ. ಶ್ರೀನಿವಾಸರಿದ್ದರು. ಆ ವರ್ಷದ ತರಗತಿಯ ಅಧ್ಯಾಪಕರು ಕನ್ನಡ ಪಾಠ ಹೇಳಿಕೊಡುತ್ತಿದ್ದರಿಂದ ಅವರಿಗೆ ಆಂಗ್ಲ ಭಾಷೆಯ ಬಗ್ಗೆ ತಿರಸ್ಕಾರ ಭಾವನೆಯಿದ್ದಿತು. ಆದ್ದರಿಂದ ಒಬ್ಬನನ್ನು ಅ.ಶ್ರೀನಿವಾಸ ಮತ್ತು ಇನ್ನೊಬ್ಬನನ್ನು ಆ.ಶ್ರೀನಿವಾಸ ಎಂದು ಕರೆಯಲು ಪ್ರಾರ್ರಂಭಿಸಿದರು.ವರ್ಷ ಮುಗಿದು ಮುಂದಿನ ತರಗತಿಗೆ ಹೋದಾಗ ಕ್ಲಾಸ್ ಟೀಚರ್ ಬದಲಾವಣೆಯಾಗಿ ಇಂಗ್ಲಿಷ್ ಪಾಠ ಹೇಳಿಕೊಡುವವರಾಗಿದ್ದರಿಂದ ಅವರಿಗೆ ಸ್ವಾಭಾವಿಕವಾಗಿ ಇಂಗ್ಲಿಷ್ ಅಕ್ಷ್ರಗಳ ಮೆಲೆ ಮಮತೆ ಹೆಚ್ಚಿದ್ದು ಎಶ್ರೀನಿವಾಸ, ಬಿಶ್ರೀನಿವಾಸ,ಸಿಶ್ರೀನಿವಾಸ ಎಂದು ಹೊಸ ನಾಮಕರಣ ಮಾಡಿದರು. ಹೌದು, ಮತ್ತೊಬ್ಬ ಶ್ರೀನಿವಾಸ ಹೆಸರಿನ ಹುಡುಗ ತರರ್ಗತಿಯನ್ನು ಸೇರಿದ್ದು ಒಂದೇ ತರಗತಿಯಲ್ಲಿ ಲ್ಲಿ ಈಗ ಮೂರು ಶ್ರೀನಿವಾಸರಿದ್ದರು. ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋದಾಗ ಚರಿತ್ರೆಯ ಅಧ್ಯಾಪಕರು ಕ್ಲಾಸ್ ಟೀಚರ್ ಆದರು. ಅದ್ದರಿಂದ ಇವರುಗಳ ಹೆಸರುಗಳು ಒಂದನೆಯ ಶ್ರೀನಿವಾಸ, ಎರಡನೆಯ ಶ್ರೀನಿವಾಸ .. ಇತ್ಯಾದಿಗೆ ಬದಲಾದವು. ಒಟ್ಟಿನಲ್ಲಿ ಹೈಸ್ಕೂಲು ಮುಗಿಯುವಾಗ ತರಗತಿಯಲ್ಲಿ ಐದು ಶ್ರೀನಿವಾಸರಿದ್ದರು. ಬೇರೆ ಬೇರೆ ಅಧ್ಯಾಪಕರು ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದರೂ , ಆಂಗ್ಲ ಭಾಷೆಯ ಮೋಹದಿಂದಾಗಿ ಕಡೆಗೂ ಉಳಿದಿದ್ದು ಆ ಭಾಷೆಯ ಅಕ್ಷರಗಳು - ಎ ಶ್ರೀನಿವಾಸ, ಬಿಶ್ರೀನಿವಾಸ ಇತ್ಯಾದಿ. ಇಷ್ಟು ಹೊತ್ತಿಗೆ ಈ ಶ್ರೀನಿವಾಸರೆಲ್ಲ ತಮ್ಮ ನಿಜ ಇನಿಷಿಯಲ್ ಗಳನ್ನು ಮರೆತುಬಿಟ್ಟು ಎಶ್ರೀನಿವಾಸ, ಬಿಶ್ರೀನಿವಾಸ ಇತ್ಯಾದಿ ಎಂದೇ ಕರೆದುಕೊಳ್ಲಲು ಪ್ರಾರಂಭಿಸಿದ್ದರು. ನಮ್ಮ , ಅಂದರೆ ಈ ಕಥೆಯ ನಾಯಕ, ಬಿಶ್ರೀನಿವಾಸ. ಕೆಲವು ಸಹಪಾಠಿಗಳು ಅವನನ್ನು ತಮಾಷೆಗಾಗಿ ಅವನ ಪೂರ್ವನಾಮಗಳಲ್ಲೊಂದಾದ ಎರಡನೆಯ ಶ್ರೀನಿವಾಸ ಎಂದು ಕರೆಯುತ್ತಿದ್ದರು.
ಹೊಸದಾಗಿ ಕಾಲೇಜು ಸೇರಿದಾಗ ಶ್ರೀನಿವಾಸನಿಗೆ ಸ್ವಲ್ಪ್ ಹಾಯ್ ಎನಿಸಿತು. ಎಕೆ೦ದರೆ ಇತರ ಶ್ರೀನಿವಾಸರು ಅಂದರೆ ಒ೦ದನೆಯ , ಮೂರನೆಯ , ನಾಲ್ಕನೆಯ ಮತ್ತು ಮತ್ತು ಐದನೆಯ ಶ್ರೀನಿವಾಸರು ಬೇರೆಯ ಕಾಲೇಜುಗಳಿಗೆ ಹೋಗಿಬಿಟ್ಟಿದ್ದರು. ಸದ್ಯ ಶ್ರೀನಿವಾಸ ನಾನು ಒಬ್ಬನೇ ಎಂದುಕೊಂಡ. ಆದರೆ ಅ ಸಂತೋಷ ಇದ್ದಿದ್ದು ಎರಡೇ ದಿನ. ಏಕೆಂದರೆ ಮತ್ತೊಬ್ಬ ಹೊಸ ಶ್ರೀನಿವಾಸ ಕಾಲೇಜು ಸೇರಿದ್ದ. ನಿಧಾನವಾಗಿ ತರಗತಿಯಲ್ಲಿ ಶ್ರೀನಿವಾಸರ ಸಂಖ್ಯೆ ಮತ್ತೆ ಹೆಚ್ಚಾಯಿತು. ಒಟ್ಟಿನಲ್ಲಿ ಆ ವರ್ಷ ಆ ತರಗತಿಯಲ್ಲಿ (ಅಂದರೆ ಎ,ಬಿ,ಸಿ ಉಪತರಗತಿಗಳೂ ಸೇರಿ ) ೧೦ ಶ್ರೀನಿವಾಸರಿದ್ದರು. ಕಡೆಯ ಶ್ರೀನಿವಾಸನಾದ ಜೆಶ್ರೀನಿವಾಸ ಒಗ್ಗಟ್ಟಿಗಾಗಿ ‘ಶ್ರೀನಿವಾಸಸಂಘ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ. ಆದರೆ ಇತರ ತರಗತಿಗಳಲ್ಲೂ ಶ್ರೀನಿವಾಸರಿದ್ದರಲ್ಲವೆ ? ಕಾಲೇಜಿನಲ್ಲಿ ಒಟ್ಟು ಇದ್ದ ಇಪ್ಪತ್ತಾರು ಶ್ರೀನಿವಾಸರೂ ಈ ಸಂಘದ ಸದಸ್ಯರಾಗಿದ್ದರು. ಯಾವ ಶ್ರೀನಿವಾಸನಿಗೆ ಏನು ಆಪತ್ತು ಬಂದರೂ ಎಲ್ಲರೂ ಒಟ್ಟಿಗೆ ಹೋರಾಡುತ್ತಿದ್ದರು. ಆಗ ಈಗ ಪಿಕ್ ನಿಕ್ ಹೋಗುತ್ತಿದ್ದರು. ಆ ಸಂಘದಲ್ಲಿ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಿದ್ದರು ಎನ್ನುವುದು ನಮಗೆ ತಿಳಿಯದ ವಿಷಯ.ಆಂಗ್ಲ ಭಾಷೆಯ ೨೬ ಅಕ್ಷರಗಳನ್ನೂ ಬಳಸುತ್ತಿದ್ದರೋ ಏನೋ ! ಎಶ್ರೀನಿವಾಸನಿಂದ ಹಿಡಿದು ಜೆಡ್ ಶ್ರೀನಿವಾಸನ ತನಕ ? ಗೊತ್ತಿಲ್ಲ.ಇದನ್ನು ಸರಿಯಾಗಿ ಊಹೆಮಾಡುವಷ್ಟು ಜಾಣರಲ್ಲ ನಾವು ! ಈ ಸಂಘವನ್ನು ನೋಡಿ ಇತರ ಸಂಘಗಳೂ ಹುಟ್ಟಿಕೊಂಡವು: ವೆಂಕಟೇಶ ಸಂಘ, ಸತ್ಯನಾರಾಯಣ ಸಂಘ , ಚಂದ್ರಶೇಖರ ಸಂಘ ಇತ್ಯಾದಿ. ಆದರೂ ಶ್ರೀನಿವಾಸ ಸಂಘದಲ್ಲಿ ಹೆಚ್ಚು ಸದಸ್ಯರಿದ್ದರಲ್ಲದೆ ಕಾಲೇಜಿನ ಮೊದಲನೆಯ ಸಂಘವೆಂದೂ ಮಹತ್ವ ಹೆಚ್ಚಿತ್ತು. ಈ ಸಂಘಗಳ ಮಧ್ಯೆಬಹಳ ಪೈಪೋಟಿ ಇದ್ದು ವಿವಿಧ ಪಂದ್ಯಗಳಲ್ಲದೆ ಆಗಾಗ್ಗೆ ಘರ್ಷಣೆಗಳೂ ಇದ್ದು ಸಣ್ಣ ಪುಟ್ಟ ಜಗಳಗಳೂ ನಡೆಯುತ್ತಿದ್ದವು.
ಒಂದು ಬಾರಿ ಶ್ರೀನಿವಾಸ ಸಂಘದವರಿಗೆ ಕೆಟ್ಟ ಹೆಸರು ತರಲು ವೆಂಕಟೇಶ ಸಂಘದವರು ಶ್ರೀನಿವಾಸ ಎಂಬ ಹೆಸರಿನಲ್ಲಿ ಅದೆ ಕಾಲೇಜಿನ ಗೀತಾ ಎಂಬ ಹುಡುಗಿಗೆ ಒಂದು ಪತ್ರ ಕಳಿಸಿದರು. ಪತ್ರದಲ್ಲಿ ಏನಿತ್ತೋ ಅಂತೂ ಎಲ್ಲರು ಅದನ್ನು ಪ್ರೇಮಪತ್ರವೆಂದು ಕರೆದರು. ಬಹಳ ಗಲಾಟೆಯಾಗಿ ಪ್ರಿನ್ಸಿಪಾಲರೂ ಎಲ್ಲ ಶ್ರೀನಿವಾರನ್ನೂ ಕರೆದು ಅವರಿಗೆ ಛೀಮಾರಿ ಹಾಕಿದ್ದರು. ತಾವು ಮಾಡದ ತಪ್ಪಿಗೆ ಬಯ್ಯಿಸಿಕೊಂಡವೆಲ್ಲಾ ಎಂದು ಎಲ್ಲ ಶ್ರೀನಿವಾಸರಿಗೂ ಬೇಸರ ಬಂದು ಸೇಡು ತೀರಿಸಿಕೊಳ್ಳಲು ಅವರು ಏನು ಮಾಡಬೇಕೆಂದು ಯೋಚಿಸುತ್ತಿದ್ದರು. ಅದೇನೇ ಇರಲಿ, ಆ ಪತ್ರವೂ ಸರಿಯಾದ ವ್ಯಕ್ತಿಗೆ ಹೋಗಿರಲಿಲ್ಲ. ಗೀತಾ ಎಂಬ ಹೆಸರಿನ ಏಳು ಹುಡುಗಿಯರಿದ್ದ್ರು, ಈ ಪತ್ರ ಯಾರಿಗೆ ಸೇರಬೇಕಿತ್ತೋ ಅದು ತಿಳಿಯಲಿಲ್ಲ. ಒಟ್ಟಿನಲ್ಲಿ ಎಲ್ಲ ಗೀತಾ ಗಳೂ ಸೇರಿ ದೂರು ಕೊಟ್ಟಿದ್ದರು. ಗೀತಾ ಎಂಬ ಹೆಸರು ಇಟ್ಟುಕೊಡಿದ್ದ ಈ ಯುವತಿಯರಿಗೂ ಜೀವನದಲ್ಲಿ ನಮ್ಮ ಶ್ರೀನಿವಾಸರ ತರಹ ಬಹಳ ಗೊಂದಲಗಳಿದ್ದವು. ಅವುಗಳ ಬಗ್ಗೆ ಈಗ ನಾವು ಯೋಚಿಸುವುದು ಬೇಡ, ಏಕೆ೦ದರೆ ಅದು ನಮ್ಮನ್ನು ನಮ್ಮ ಮೂಲ ಉದ್ದೇಶದಿಂದ್ದ ದೂರ ಕರೆದುಕೊಂಡು ಹೋಗಿಬಿಡುತ್ತದೆ. .
ನಮ್ಮ ಶ್ರೀನಿವಾಸ ಕೆಲಸಕ್ಕೆ ಸೇರಿದ ನ೦ತರ ತನ್ನ ತೊಂದರೆಗಳೆಲಾ ಮುಗಿಯುತ್ತದೆ ಎಂದುಕೊಂಡಿದ್ದ. ಆದರೆ ಅದು ಹಾಗೇನೂ ಆಗಲಿಲ್ಲ. ಅವನ ಕ೦ಪನಿ ದೊಡ್ಡದಾಗಿದ್ದರೂ ಅವನ ವಿಭಾಗದಲ್ಲಿಯೇ ಮೂರು ಶ್ರೀನಿವಾಸರಿದ್ದರು.ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವನಿಗೆ ಆಂಗ್ಲ ಹಾಸ್ಯ ಲೇಖಕ ವುಡ್ ಹೌಸ್ ರವರ ಒಬ್ಬ ನಾಯಕ ಸ್ಮಿತ್ ನೆನಪಿಗೆ ಬಂದ ಆತ ಸ್ಮಿತ್ ಎಂಬ ಬಹಳ ಸಾಧಾರಣ ಹೆಸರನ್ನು ಇಟ್ಟುಕೊಂಡು ಬಹಳ ಕಷ್ಟಪಟ್ಟಿದ್ದು ಕಡೆಗೆ ಆ ಹೆಸರಿಗೆ ಪಿ ಎಂಬ ಅಕ್ಷರವನ್ನು ಸೇರಿಸಿಕೊಂಡು ಪಿ(ಮೌನ)ಸ್ಮಿತ್ ಎಂದು ಬದಲಾಯಿಸಿಕೊಂಡು ಜೀವನದಲ್ಲಿ ಮೇಲೆ ಹೋಗಿದ್ದ. ಇದೂ ನಮ್ಮ ಶ್ರೀನಿವಾಸನಿಗೆ ಸ್ಫೂರ್ತಿಯಾಗಿ ತನ್ನ ಹೆಸರನ್ನು ಬದಲಾಯಿಸಿಕೊಳ್ಲಲು ನಿರ್ಧರಿಸಿದ. ಆಧಾರ್, ಡ್ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಇತ್ಯಾದಿಯೆಲ್ಲ ಬದಲಾಯಿಸಬೇಕಾಗುತ್ತದೆ ಎಂದು ಗೆಳೆಯರು ಎಚ್ಚರಿಸಿದರು. ಸ೦ಬಂಧೀಕರು ಇನ್ನೂ ಏನೇನೋ ಕಾರಣಗಳನ್ನು ಕೊಟ್ಟರು. ನಿನಗೆ ಎಷ್ಟು ಒಳ್ಳೆಯ ಹೆಸರಿಟ್ಟಿದ್ದೆವು ಎಂದು ಅಪ್ಪ ಬೇಜಾರುಮಾಡಿಕೊಂಡರು; ಅಮ್ಮ ಅತ್ತಳು. ಬೇಡವೋ, ಕರಿಘಟ್ಟದ ದೇವರಿಗೆ ಕೋಪ ಬರುತ್ತೋ, ಬೇಡ ಕಣೊ ಎಂದರು ! ತಪ್ಪು ಕಾಣೀಕೆ ಕೊಡ್ತೀನಿ ಎಂದು ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ. ಹಿಂದಿನ ದಿನ ಹಲವಾರು ಬಂಧು ಬಳಗದವರು ಬಂದು ಅವನ ಪೂರ್ವನಾಮದ ಅವಸಾನದ ಬಗ್ಗೆ ಸಂತಾಪ ಸೂಚಿಸಿ ಹೋದರು. ಕಡೆಗೆ ನಮ್ಮ ಶ್ರೀನಿವಾಸ ಯಾವ ಹೆಸರನ್ನು ಇಟ್ಟುಕೊಂಡ? ಸ್ಮಿತ್ ತರಹ ಎನಾದರೂ ಅಕ್ಷರ ಸೇರಿಸಿಕೊಂಡನೆ? ತಿಳಿಯದು. ನ್ಯಾಯಧೀಶರ ಕೊಣೆಯಿಂದ ಕರೆ ಬಂದಿತು. ಶ್ರೀನಿವಾಸ ಮತ್ತು ಅವನ ವಕೀಲ ಒಳಹೋದರು. ಅವರು ಹೊರಗೆ ಬರಲಿ. ಅಗ ಅವನ ಹೊಸ ಹೆಸರು ತಿಳಿಯುತ್ತದೆ ( ೧೯೫೦ರ ದಶಕದಲ್ಲಿ ಬಸವನಗುಡಿಯ ನ್ಯಾಶನಲ್ ಹೈಸ್ಕೂಲಿನಲ್ಲಿ ನಾನು ಓದು ಶುರುಮಾಡಿದಾಗ ನಮ್ಮ ಸಿ ಸೆಕ್ಷನ್ ನಲ್ಲಿ ಇಬ್ಬರು ‘ ಕೆ.ಶ್ರೀನಿವಾಸನ್’ ರಿದ್ದರು. ನಮ್ಮ ಕ್ಲ್ಲಾಸ್ ಟೀಚರ್ ಎಚ್ ಎಸ್ ಎಮ್ ಒಬ್ಬನ ಇನಿಶಿಯಲ್ಲನ್ನು ವಿಕೆ ಎಂದು ಮಾಡಿ ಆ ಸಮಸ್ಯೆಯನ್ನು ಬಗೆಹರಿಸಿದ್ದರು. ಇಂದೂ ನಾವು ಅವನನ್ನು ವಿಕೆ ಎಂದೆ ಕರೆಯುತ್ತೇವೆ ! ಹಾಗೂ ಬೇರೆ ಇಬ್ಬರು’ ಶ್ರೀನಿವಾಸ ‘ರಿದ್ದರು. ಅವರ ಇನಿಶಿಯಲ್ಗಳು ಬೇರೆ ಇದ್ದಿದ್ದರಿಂದ ಅವರ ಹೆಸರುಗಳು ಹಾಗೇ ಉಳಿದವು)################################################################################
ನೀಲಮೇಘಮ್ ಮತ್ತು ಅವನ ಕನಸುಗಳು
ಪಾಲಹಳ್ಳಿ ವಿಶ್ವನಾಥ್
ಕೆ.ಜಿ.ಎಫ್ ಗಣಿಗಳಲ್ಲಿ ನಾವು 1980ರ ದಶಕದಲ್ಲಿ ಭೌತವಿಜ್ನಾನದಲ್ಲಿ ಒಂದು ದೊಡ್ಡ ಪ್ರಯೋಗವನ್ನು ಶುರುಮಾಡಿ ಸುಮಾರು 10 ವರ್ಷಗಳು ನಡೆಸಿದವು. ಉಪಕರಣಗಳು ಬಹಳ ಸಂಕೀರ್ಣವಾಗಿದ್ದರಿಂದ ಪ್ರಾರಂಭವೂ ಸುಮಾರು ಸಮಯ ತೆಗೆದುಕೊಂಡಿತು . ನಾನು ಮುಂಬಯಿಯಿಂದ ಎರಡು ತಿಂಗಳಿಗೊಮ್ಮ ಬಂದುಹೋಗುತ್ತಿದ್ದೆ. ಈಗ ನಾನು ಹೇಳಬಯಸುವುದು ಅದರ ಮೊದಲ ಕೆಲವು ತಿಂಗಳುಗಳಲ್ಲಿ ನಡೆದ ಪ್ರಸಂಗ.
ನಾವು ಅಲ್ಲಿಯ ಕೆಲಸ ಕಾರ್ಯಗಳನ್ನು ಯಾವಪೂಜೆ, ಪುನಸ್ಕಾರಗಳಿಲಲ್ಲದೆ ಶುರು ಮಾಡಿದ್ದೆವು. ಅದು ಅಲ್ಲಿಯ ಸ್ಥಳೀಯ ಕೆಲಸಗಾರರಿಗೆ ಬಹಳ ಅಸಮಾಧಾನವನ್ನು ಉಂಟು ಮಾಡಿತ್ತು. ಕೆಲಸ ಸರಿಯಾಗಿ ಆಗದಿರಬಹುದು ಎಂದು ಬೇರೆಬೇರೆ ರೀತಿಗಳಲ್ಲಿ ಎಚ್ಚರಿಕೆ ಕೊಡುತ್ತಿದ್ದರು. ಅವರುಗಳಲ್ಲಿ ಸ್ವಲ್ಪ ನಾಯಕ ಗುಣಗಳಿದ್ದ ಭಾವವಿದ್ದ ಕೆಂಪಯ್ಯನಿಗೆ ನನ್ನ ಜೊತೆ ಸ್ವಲ್ಪ ಸಲಿಗೆ.
“ಸಾರ್, ನೀವು ತಪ್ಪು ಮಾಡ್ತಾ ಇದ್ದೀರಿ !ದೇವರಿಗೆ ಇಷ್ಟ ಆಗೋದಿಲ್ಲಾ ಸಾರ್. “
“ಏನು ತಪ್ಪು?”
“ಇಷ್ಟು ದೊಡ್ಡ ಪ್ರಯೋಗ, ದೊಡ್ಡ ಯಂತ್ರಗಳು ಎಲ್ಲಾ ಇವೆ”
“ಹೌದು, ಅದಕ್ಕೆ?”
“ಭಾಭಾರವರು ಬಂದು ರಿಬ್ಬನ್ ಕೂಡ ಕತ್ತರಿಸಿದರಲ್ಲ ಸಾರ್”
“ಅಲ್ಲಪ್ಪ ಭಾಭಾ ಹೋಗಿ ಬಹಳ ವರ್ಷಗಳು ಆಗೋಯತಲ್ಲ”
“ಸರಿ, ಸಾರ್, ನನಗೆ ಅವರ ಹೆಸರು ಗೊತ್ತಿಲ್ಲ .ಅಂತೂ ಬಂದವರು ದೊಡ್ಡವರು ತಾನೆ?”
“ಹೌದು”
“ ಇಂತಹ ದೊಡ್ಡ ಕೆಲಸಗಳು ತೊಂದರೆಯಿಲ್ಲದೆ ನಡೀಬೇಕಾದರೆ ಶುರುಮಾಡೋವಾಗ ಏನಾದರೂ ಬಲಿ ಕೊಡಬೇಕು, ಸಾರ್”
“ಯಾವ ಯುಗದಲ್ಲಿ ಇದ್ದೀಯಯ್ಯಾ ನೀನು ?”
“ನಿಮಗೆ ನಂಬಿಕೆ ಇಲ್ಲ ಸಾರ್, ಆದರೆ ನಮಗೆ ನಂಬಿಕೆ ಇದೆ …ಒಂದು ಕುರಿ ಬಲಿಕೊಡಬೇಕು ಸಾರ್”
“ಕುರೀನಾ?”
“ ಹೌದು ಸಾರ್, ದೊಡ್ಡ ಕೆಲಸಕ್ಕೆ ದೊಡ್ಡ ಪ್ರಾಣಿ. ಚಿಕ್ಕ ಎಕ್ಸ..ಎಕ್ಸ”
“ಸರಿ, ಎಕ್ಸಪೆರಿಮೆಂಟ್ , “
“ಅ ತರಹ ಇದ್ದಿದ್ದರೆ ಒಂದೆರಡು ಕೋಳಿ ಸಾಕಾಗ್ತಾ ಇತ್ತು”
“ ಇದೆಲ್ಲ ತಪ್ಪು ಕಣಯ್ಯ. ಹೋಗಯ್ಯ”
“ನಿಮಗೆ ಅರ್ಥ ಆಗೋಲ್ಲ ಸಾರ್”
“ಏನಾದರೂ ಮಾಡ್ಕೊಳ್ಳಿ”
“ ಕುರೀಗೆ ಹಣ?”
“ಆಫೀಸಿಂದ ಅದೆಲ್ಲಾ ಮಾಡೋಕೆ ಅಗೊಲ್ಲ. ಸಾಕು, ಕೆಂಪಯ್ಯ. ಈ ವಿಷಯ ಮತ್ತೆ ಮಾತು ಬೇಡ. “
----------------------------
ಮುಂಬಯಿಗೆ ವಾಪಸ್ಸು ಹೋದಾಗ ಅಗಾಗ ಸುದ್ದಿ ಬರ್ತಾ ಇತ್ತು. ಇದ್ದಕ್ಕಿದ್ದಹಾಗೆ ಕರೆಂಟು ಹೋಗೋದು, ಜನ ಸರಿಯಗಿ ಕೆಲಸಕ್ಕೆ ಬರದೆಹೋಗೋದು ಎಲ್ಲಾ ಆಯಿತು. “ ಇಲ್ಲೀನವರು ಹೇಳ್ತಾ ಇರೋದು ‘ದೇವರಿಗೆ ಇಷ್ಟ ಆಗ್ತಾ ಇಲ್ಲವಂತೆ” ಎಂದು ನಮ್ಮ ಸ್ಥಳೀಯ ಪ್ರಭಾರಿ ಬರೆದಿದ್ದರು
--------------------------------------------------------------------
ಮುಂಬಯಿಯಿಂದ ಕೆ.ಜಿ.ಎಫ್ ಗೆ ವಾಪಸ್ಸು ಬಂದಿದ್ದೆ . ಹಾಗೇ ಒಂದು ದಿನ ಬೆಳಿಗ್ಗೆ ಎದ್ದಾಗ ನಮ್ಮ ಪುಟ್ಟ ಕ್ಯಾಂಪಸ್ ನಲ್ಲಿ ಏನೋ ಗುಸು ಗುಸು, ನಗು. ಕೆಂಪಯ್ಯನ್ನ ಕರೆದು ಕೇಳಿದೆ
‘ ಸಾರ್, ನೀಲಮೇಘಮ್ ಗೆ ಕನಸು ಬಿತ್ತಂತೆ . ಅದರಲ್ಲಿ ಜಯಲಲಿತ ಮೇಡಮ್ ಬಂದಿದ್ದರಂತೆ “
“ ಅದರಲ್ಲಿ ಏನು ವಿಶೇಷ? “ ಎಂದು ಕೇಳಿದೆ.
--------------------------------------------
ನೀಲಮೇಘಮ್ ಹೆಸರಿಗೆ ತಕ್ಕ ಬಣ್ಣ ಹೊಂದಿದ್ದ ತೆಳ್ಳನೆಯ ಮನುಷ್ಯ. ಅವನ ಮೂಲ ತಮಿಳುನಾಡು. ಅಲ್ಲಿಂದ ಬಂದವರಿಗೆ ಈ ಶುದ್ಧ ಸಂಸ್ಕೃತ ಹೆಸರು ಅಪರೂಪವೆ. ನಮ್ಮ ಜಪಾನೀ ಸಹೋದ್ಯೋಗಿ ಅರ್ಥ ಕೇಳಿದಾಗ ‘ ಬ್ಲೂ ಕ್ಲೌಡ್ ‘ ಎಂದು ಹೇಳಿದ್ದ. ಇರಲಿ, ನಮ್ಮಲ್ಲಿದ್ದ ಮೂರು ವಾಹನ ಚಾಲಕರಲ್ಲಿ ಅವನೂ ಒಬ್ಬ. ತಿಂಗಳಿಗೆ ಎರಡು ವಾರ ರಾತ್ರಿ ಕೆಲಸ. ಉಳಿದ ಸಮಯ ಡೇ ಡ್ಯೂಟಿ : ಆ ದಿನಗಳಲ್ಲಿ ಅವನು ಕೆಲಸ ಮುಗಿಸಿ ಸಂಜೆ 6 ಗಂಟೆಗೆ ಎರಡು ಕಿಮೀ ದೂರದ ರಾಬರ್ಟ ಸನ್ ಪೇಟೆಗೆ ಹೋಗಿ ರಾತ್ರಿ ವಾಪಸ್ಸು ಬರುತ್ತಿದ್ದ. ಹೋಗುವಾಗ ಬಾಯಿಗೆ ಬೀಗ ಹಾಕಿ ಕೊಂಡಿರುತ್ತಿದ್ದ ನೀಲಮೇಘಮ್ ವಾಪಸ್ಸು ಬರುವಾಗ ವಾಚಳಿಯಾಗಿ ಪರಿವರ್ತನೆಗೊಳ್ಳುತ್ತಿದ್ದ. ನಮ್ಮ ಕೆಲಸಗಾರರುಗಳ ಮೇಲೆಲ್ಲ ರಾಬರ್ಟ ಸನ್ ಪೇಟೆಗೆ ಸಂಜೆ ಹೋದರೆ ಇದೇ ಪ್ರಭಾವ ಇರುತ್ತಿತ್ತು . ಆದರೆ ನೀಲಮೇಘಮ್ ಮೆಲೆ ಈ ಪ್ರಭಾವ ಎಲ್ಲರಿಗಿಂತ ಹೆಚ್ಚು ಇರುತ್ತಿತ್ತು. ಅವನು ತೆಳ್ಳನೆಯ ವ್ಯಕ್ತಿ ಎಂದು ಮೊದಲೆ ಹೇಳಿದೆವಲ್ಲವೇ ! ಸಾಮಾನ್ಯ ವ್ಯಕ್ತಿಗಳಿಗೆ ಆ ಪ್ರಭಾವ ಶುರು ಆಗಲು ಅರ್ಧ ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತಿತ್ತು . ಆದರೆ ಇವನ ಮೇಲೆ ಪೇಟೆಯ ಪ್ರಭಾವ ಕೆಲವೇ ಕ್ಷಣಗಳಲ್ಲಿ ಶುರುವಾಗುತ್ತಿತ್ತು. ಇದಲ್ಲದೆ ಈತನಲ್ಲಿ ಮತ್ತೊಂದು ವಿಶೇಷವಿದ್ದಿತು. ಪೇಟೆಯ ಪ್ರಭಾವ ಹೆಚ್ಚಾದಾಗ ಅವನ ಭಾಷೆ ಬದಲಾಗುತ್ತಿತ್ತು. ಉತ್ತರದಲ್ಲಿ ಎಲ್ಲೋ ಒಂದು ವರ್ಷ ಇದ್ದನಂತೆ. ಅದರಿಂದಲೋ ಏನೋ ಹಿಂದಿಯಲ್ಲಿ ಮಾತಾಡಲು ಶುರುಮಾಡುತ್ತಿದ್ದ.ಅದರಲ್ಲೂ ಕೆಲವು ಬೈಗಳು ಪದಗಳನ್ನು ಚೆನ್ನಾಗಿ ತಿಳಿದಿದ್ದ.
ಈ ಎಲ್ಲ ಗುಣಗಳುಳ್ಳ ನೀಲಮೇಘಮ್ ತನ್ನ ಬಿಡುವು ವೇಳೆಯಲ್ಲಿ ಅಲ್ಲದೆ ಬಿಡುವಿಲ್ಲದ ವೇಳೆಯಲ್ಲಿಯೂ ತಮಿಳುನಾಡಿನ ರಾಜಕೀಯದಲ್ಲಿ ಮುಳುಗಿರುತ್ತಿದ್ದ. ಡೈಲಿ ಡೇ ಡ್ಯೂಟಿಯಲ್ಲಿ ಇದ್ದಾಗ ಅವನು ಡಿ.ಎಮ್.ಕೆ ಪಕ್ಷದ ಕಟ್ಟಾ ಅಭಿಮಾನಿ. ಆದರೆ ರಾತ್ರಿಯಾಗುತ್ತ ಪೇಟೆಯ ಪ್ರಭಾವ ಶುರುವಾಗುತ್ತಾ ನಿಧಾನವಾಗಿ ಪಕ್ಷಾಂತರ ಮಾಡುತ್ತಿದ್ದ. ಶುದ್ಧವಲ್ಲದ ಹಿಂದಿಯಲ್ಲಿ ಕರುಣಾನಿಧಿ ಮತ್ತು ಅವರ ಸಂಸಾರದ ಎಲ್ಲ ಸದಸ್ಯರಿಗೂ ತನಗೆ ಬರುವ ಎಲ್ಲ ಬೈಗುಳನ್ನೂ ಬಳಸಿಕೊಳ್ಳುತ್ತಿದ್ದ. ಮತ್ತು ಎಮ್.ಜಿ.ಅರ್. ಗಿಂತ ಸಮರ್ಥ ನಾಯಕ ಇಲ್ಲವೆ ಇಲ್ಲ ಎಂದು ಸಾರುತ್ತಿದ್ದ. ಹೀಗೆ ಸಂಜೆ ಕಳೆದನಂತರ ನೀಲಮೇಘಮ್ ನಿಧಾನವಾಗಿ ರಾತ್ರಿಯ ಕನಸುಗಳಿಗೆ ಜಾರುತ್ತಿದ್ದ. ಆ ಕನಸುಗಳಲ್ಲಿ ರಾಜಕೀಯ ಮತ್ತು ಸಿನೆಮಾ ರಂಗಗಳ ವಿವಿಧ ಬಂದುಹೋಗುವುದು ಸಾಮಾನ್ಯವಾಗಿತ್ತು. ತಮಿಳುನಾಡಿನ ಜೀವನದಲ್ಲಿ ಈ ಎರಡು ಕ್ಷೇತ್ರಗಳಿಗೂ ಗಾಢ ಸಂಬಂದ ಇದ್ದೇ ಇದ್ದಿತಲ್ಲವೆ? ಹಳೆಯ ತಾರೆಯರಾದ ಸಾವಿತ್ರಿ, ಭಾನುಮತಿಯರಲ್ಲದೆ ಅವನದೆ ವಯಸ್ಸಿನ ಜಯಲಲಿತ, ಸರೋಜಾದೇವಿ ಯರೆಲ್ಲಾ ಅವನ ಕನಸ್ಸುಗಳಿಗೆ ಭೇಟಿ ಕೊಡುತ್ತಿದ್ದರು
-----------------------------------------------------------------------------
“ಅದೇನು ಮಹಾ ವಿಶೇಷ ಕೆಂಪಯ್ಯ? ಅವರೂರಲ್ಲೇನಾದರೂ ಚುನಾವಣೆಯಂತಾ?”
“ಇಲ್ಲ, ಸಾರ್ ! ಇದು ರಾಜಕೀಯದ ವಿಷಯ ಅಲ್ಲ . ಕನಸಿನಲ್ಲಿ ಜಯಲಲಿತ ಮೇಡಮ್ ನಾಗಿನಿ ಡಾನ್ಸ್ ಮಾಡ್ತಾ ಇದ್ದರಂತೆ. ಹಾಗೇ ಹತ್ತಿರ ಬಂದು ನೀಲಮೇಘಮ್ ಕಿವಿಯಲ್ಲಿ ಏನೋ ಹೇಳಿದರಂತೆ ! “
“ಆಯಿತು, ಏನಂತೆ ?”
“ಸಾಹೇಬರಿಗೆ ಕುರೀನ ಬಲಿ ಕೊಡೋಕೆ ಹೇಳು “
“ ಅಂತೂ ಚಿತ್ರರಂಗದವರಿಗೂ ವಿಜ್ನಾನದಲ್ಲಿ ಅಸಕ್ತಿ ಬಂದಿರುವುದು ಸಂತೋಷ ! ತಿರುಗ ನೀವೆಲ್ಲಾ ಶುರುಮಾಡಿಕೊಂಡರಾ? ಹೋಗಿ,ಕೆಲಸ ನೋಡಿ. “
ಒಂದು ವಾರ ಆಯಿತು. ಮತ್ತ ಕ್ಯಾಂಪಸ್ ನಲ್ಲಿ ಬೆಳಿಗ್ಗೆ ಗಲಾಟೆ. ಹೊರಗೆ ಹೋದರೆ ಅಲ್ಲೇ ಎಲ್ಲೋ ಇದ್ದ ನೀಲಮೇಘಮ್ ಬಂದು ನನ್ನ ಕಾಲಿಗೆ ಬಿದ್ದ.
“ಏಳಿ, ನೀವು ನನಗಿಂತ ದೊಡ್ಡವರು “
:ಸಾರ್ ನಿನ್ನೆ ರಾತ್ರಿ ಕನಸು.. ಭಯ ಆಗ್ತಾ ಇದೆ !”
“ಯಾರು ಬಂದಿದ್ದರು? ಮತ್ತೆ ಜಯಲಲಿತ?”
“ಇಲ್ಲ ಸಾರ್, ನೀವು ನಂಬೋಲ್ಲ !’
“ಹೇಳಿ, ಪರವಾಯಿಲ್ಲ”
“ ಹೇಮಮಾಲಿನಿ ಮೇಡಮ್ !
ಇದ್ದಕ್ಕಿದ್ದಹಾಗೆ ಹೇಮ ಮಾಲಿನಿ ಮೇಡಮ್ ಎಲ್ಲಿಂದ ಅವತರಿಸಿದರು ? ಮೂಲ ತಮಿಳುನಾಡಿನವರಾಗಿದ್ದು ಈಗ ಇಡೀ ಭಾರತದಲ್ಲಿ ಖ್ಯಾತಿ ಗಳಿಸಿದ್ದಾರೆಂದು ನೀಲಮೇಘಮ್ಗೆ ಹೆಮ್ಮೆ ಇದ್ದಿರಬಹುದು. ಅದಲ್ಲದೆ ಎರಡು ವಾರಗಳ ಹಿಂದೆ ಊರಲ್ಲಿ ಮತ್ತೆ ಶೋಲೆ ಸಿನೆಮಾ ಬಂದು ಹೋಗಿತ್ತು. ನಮ್ಮದು ಅಖಿಲ ಭಾರತ ಸಂಸ್ಥೆಯಾಗಿದ್ದರಿಂದ ದೇಶದ ವಿವಿದ ಭಾಗಗಳಿಂದ ವಿಜ್ನಾನಿಗಳು ಮತ್ತು ಇಂಜನಿಯರುಗಳಿರುತ್ತಿದ್ದರು. ಉತ್ತರದವರೂ ಕೆಲವರು ಇದ್ದರು. ಅವರ ಮೇಲೆ ಹೆಚ್ಚು ಪ್ರಭಾವ ಬೀರಲು ಈ ತಂತ್ರವೋ ? ಹೇಮಮಾಲಿನಿ ಹೇಳಿದರು ಅಂದರೆ ಅವರೂ ಅವನಿಗೆ ಬೆಂಬಲ ಕೊಡಬಹುದಲ್ಲವೆ?
“ಮೇಡಮ್ ಟಾಂಗಾನಲ್ಲಿ ಬಂದಿದ್ದರಾ? “
“ಟಾಂಗಾ ಇತ್ತು ಸಾರ್. ಸಾರ್, ಸಾರ್.ಹೆದರಿಕೆ ಆಗುತ್ತೆ ಸಾರ್”
“ಏಕೆ ನೀಲಮೇಘಮ್?”
“ಅದು ಹೇಮಮಾಲಿನಿ ಮೇಡಮ್ ಅಲ್ಲ. “
“ಮತ್ತೆ?”
“ಅವರ ದೆವ್ವ!”
“ ಅವರು ಸತ್ತಿಲ್ಲ ನೀಲಮೇಘಮ್”
“ ಅದೆಲ್ಲಾ ಗೊತ್ತಿಲ್ಲ ಸಾರ್, ಮೊಕ ಎಲ್ಲಾ ರಕ್ತ, ನಮ್ಮ ಮಾರಮ್ಮ ದೇವರ ತರಹ ಇದ್ದರು ಹೇಮಾಜಿ ! “
“ನಿಮ್ಮ ಹತ್ತಿರ ಬಂದು ಏನಾದರೂ ಹೇಳಿ ಹೋದರಾ? ನಿಮ್ಮ ಕಿವೀಲಿ?”
“ ಇಲ್ಲ ಸಾರ್, ಜೋರಾಗಿ ಕುರಿ ಕೋಳಿ ಬಲಿ ! ಕುರಿ ಕೋಳಿ ಬಲಿ 1 ಕುರಿ ಕೋಳಿ ಬಲಿ ! ಅಂತ ಕೂಗ್ತಾ
ಹೊರಟುಹೋದರು. “
“ಯಾವ ಭಾಷೇಲಿ ಕೂಗ್ತಾ ಇದ್ದರು?”
“ಏನು ಸಾರ್ ಕೇಳ್ತೀರ ! ಶೋಲೆ ಹಿಂದೀಲಲ್ವಾ? ಸಾರ್,ಹೆದರಿಕೆ ಆಯಿತು. ಟಾಂಗಾ ಜೋರಾಗಿ ಓಡ್ತಾ ಇದೆ. ಆದರೆ ಕುದುರೇನೂ ಇಲ್ಲ, ಡ್ರೈವರ್ರೂ ಇಲ್ಲ! ಎದ್ದು ಬಿಟ್ಟೆ. ಮಧ್ಯರಾತ್ರಿಯಿಂದ ನಿದ್ದೇನೆ ಇಲ್ಲ! ಏನಾದರೂ ಮಾಡಿ ಸಾರ್. “
ಸರಿ, ಜಯಲಲಿತಾ ಮೇಡಮ್ ಆಯಿತು, ಈಗ ಹೇಮಮಾಲಿನಿಯವರೂ ವಿಜ್ನಾನದಲ್ಲಿ ಆಸಕ್ತಿ ತೊಗೋತಾ ಇರೋದು ಸಂತೋಷ ಅಂತ ಹಾಸ್ಯ ಮಾಡಿದೆ. ಅದಕ್ಕೆ ನಮ್ಮಲ್ಲಿ ಕೆಲವರು ‘ನಮಗೆ ನಂಬಿಕೆ ಇಲ್ಲಾಂತ ಬೇರೆಯವರ ನಂಬಿಕೇನ ಹೀನಾಯ ಮಾಡಬಾರದು’ ಅಂತ ಹೇಳಿದರು. ಕೆಂಪಯ್ಯ, ನೀಲಮೇಘಮ್ ಎಲ್ಲಾ ಸುಮ್ಮನಾದರು ಅಂತ ಕಾಣಿಸುತ್ತೆ.ನಾನು ಮುಂಬಯಿಗೆ ವಾಪಸ್ಸು ಹೋದೆ. ಕ್ಯಾಂಪಸ್ನಲ್ಲಿ ಎರಡು ಮೂರು ತಿಂಗಳಿಗೊಮ್ಮೆ ಎಲ್ಲ ಒಟ್ಟಿಗೆ ಸೇರಿ ಒಂದು ಭಾನುವಾರ ದೊಡ್ಡ ಭೋಜನ ಇಟ್ಟುಕೊಳ್ಳುವುದು ಅಭ್ಯಾಸ.. ಎಲ್ಲರಿಗೂ ಶಾಖಾಹಾರೀ ಆಹಾರ, ತಿನ್ನೋರಿಗೆ ಮಾಂಸಾಹಾರಿ ಆಹಾರ- ಚಿಕನ್, ಮಟನ್ ಎಲ್ಲಾ ! ಚೆನ್ನಾಗಿ ಆಯಿತು ಅಂತ ಯಾರೋ ಫೋನ್ ಮಾಡಿದ್ದರು. ಆ ತಿಂಗಳು ನಮ್ಮ ಸ್ಥಳೀಯ ಪ್ರಭಾರಿ ಕಳಿಸಿದ್ದ ಲೆಕ್ಕ ನೋಡ್ತಾ ಇದ್ದೆ. ಲೈಟ್ ಬಲ್ಬು ಇತ್ಯಾದಿ ಖರ್ಚು ಹೆಚ್ಚೇ ಇತ್ತು !! ಈ ‘ ಬಡಾ ಖಾನಾ’ ಆದ ಮೇಲೆ ನೀಲಮೇಘಮ್ ಕನಸುಗಳಲ್ಲಿ ತಮಿಳುನಾಡಿನ ಅಭಿನೇತ್ರಿಯರು ಪಾತ್ರ ವಹಿಸುತ್ತಿದ್ದರೂ ಹೇಮಮಾಲಿನಿ ಮೇಡಮ್ ಆಗಲಿ ಅವರ ದೆವ್ವವಾಗಲಿ ಮತ್ತೆ ಬರಲಿಲ್ಲ ! ನಮ್ಮ ಎಕ್ಸಪೆರಿಮೆಂಟೂ ವಿಘ್ನವಿಲ್ಲದೆ ಮುಂದೆಹೋಯಿತು!
--------------------------------------------------------------------------
#####################################################################
(2)